Tag: State Assembly

  • 50ರಲ್ಲಿ ಒಬ್ಬ ಶಾಸಕ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುವೆ: ಏಕನಾಥ್ ಶಿಂಧೆ

    50ರಲ್ಲಿ ಒಬ್ಬ ಶಾಸಕ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುವೆ: ಏಕನಾಥ್ ಶಿಂಧೆ

    ಮುಂಬೈ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ 50 ಶಾಸಕರಲ್ಲಿ ಒಬ್ಬರು ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

    ಶುಕ್ರವಾರ ಬೆಂಬಲಿತ ರೆಬೆಲ್ ಶಾಸಕರು ಶಿಂಧೆ ಅವರನ್ನು ಅಭಿನಂದಿಸಿದರು. ಈ ವೇಳೆ ಮಾತನಾಡಿದ ನೂತನ ಮುಖ್ಯಮಂತ್ರಿ, ಈ ಎಲ್ಲ ಶಾಸಕರ ಆಗು-ಹೋಗುಗಳ ಬಗ್ಗೆ ಗಮನ ಹರಿಸುವುದು ತಮ್ಮ ಕರ್ತವ್ಯ, ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ಸಮಯ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪುರುಷನೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

    ಶಿವಸೇನೆಯ ಹಿಂದಿನ ಇತಿಹಾಸದ ಪ್ರಕಾರ ಉದ್ಧವ್ ಠಾಕ್ರೆ ವಿರುದ್ಧ ಹೋದ ಎಲ್ಲ 50 ಶಾಸಕರು ಈಗ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಒಬ್ಬ ಶಾಸಕ ಚುನಾವಣೆಯಲ್ಲಿ ಸೋತರೂ, ನಾನು ಶಾಶ್ವತವಾಗಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಶಿಂಧೆ ಹೇಳಿದ್ದಾರೆ.

    ಆರಂಭದಲ್ಲಿ ಕೆಲವೇ ಶಾಸಕರು ನಮ್ಮೊಂದಿಗಿದ್ದರು, ನಂತರ 50 ಮಂದಿ ಬಂದರು. ನಮ್ಮ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರೂ ಯಾರೊಬ್ಬರೂ `ಡರ್ಟಿ ಗೇಮ್’ಗೆ ಬೆಂಬಲ ಕೊಡಲಿಲ್ಲ. ಆದರೆ ಜನ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ತಲೆ ಕೆಡಿಸಿ, ಡಿವೋರ್ಸ್ ಕೊಡಿಸಿ ಮೋಸ ಮಾಡಿದ್ದಾನೆ- ಚಿಕ್ಕಬಳ್ಳಾಪುರದಲ್ಲಿ `ಪವಿತ್ರಾ ಮ್ಯಾರೇಜ್ ಸ್ಟೋರಿ’

    ಸೂರತ್ ಮತ್ತು ಗುವಾಹಟಿಯಲ್ಲಿ ಇಷ್ಟು ದಿನ ನಿದ್ದೆ ಬರಲಿಲ್ಲ. ನಾನು 1 ಗಂಟೆಗೆ ಮಲಗುತ್ತಿದ್ದೆ ಮತ್ತು ಬೆಳಗ್ಗೆ 3 ಗಂಟೆಗೆ ಎದ್ದೇಳುತ್ತಿದ್ದೆ. ಇದು ನನ್ನ ಜೀವನದಲ್ಲಿ ಒಂದು ಅತಿ ನಿರ್ಣಾಯಕ ಕ್ಷಣವಾಗಿತ್ತು. ನಾನು ನನ್ನ ಭವಿಷ್ಯದ ಬಗ್ಗೆ ಚಿಂತಿಸಲಿಲ್ಲ ಆದರೆ ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ನನ್ನೊಂದಿಗೆ ಬಂದಿದ್ದ 50 ಶಾಸಕರ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇತ್ತು. ಅವರು ನನ್ನ ನಾಯಕತ್ವದಲ್ಲಿ ವಿಶ್ವಾಸ ತೋರಿಸಿದರು ಎಂದು ಶಿಂಧೆ ಹೇಳಿದ್ದಾರೆ.

    ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸೇನಾ ಶಾಸಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಎನ್‌ಸಿಪಿ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ನಾನು ಸದ್ಯ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು ಯಾರೊಬ್ಬರಿಗೂ ಸಮಸ್ಯೆ ಆಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲ್ಲಿಕಾರ್ಜುನ್ ಖರ್ಗೆಗೆ ಟಿಕೆಟ್ ಘೋಷಿಸಿದ ಹೈಕಮಾಂಡ್

    ಮಲ್ಲಿಕಾರ್ಜುನ್ ಖರ್ಗೆಗೆ ಟಿಕೆಟ್ ಘೋಷಿಸಿದ ಹೈಕಮಾಂಡ್

    ನವದೆಹಲಿ: ಜೂನ್ 19ರಂದು ನಡೆಯಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

    ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿತ್ತು. ಕಾಂಗ್ರೆಸ್ ನಾಯಕರಾದ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್ ಗೌಡ ಅವರಿಂದ ಎರಡು ಸ್ಥಾನಗಳು ತೆರವಾಗಿತ್ತು. ಈ ಬಾರಿ ಸಂಖ್ಯೆಗಳ ಕೊರತೆಯಿಂದ ಒಂದು ಸ್ಥಾನವನ್ನು ಮಾತ್ರ ಸುಲಭವಾಗಿ ಗೆಲ್ಲಬಹುದಾಗಿದೆ.

    ಈ ಒಂದು ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್‍ಗೌಡ ಮರು ಆಯ್ಕೆ ಬಯಸಿದ್ದರು. ಲೋಕಸಭಾ ಟಿಕೆಟ್ ವಂಚಿತ ಮಾಜಿ ಸಂಸದ ಮುದ್ದಹನುಮೇಗೌಡರು ಕೂಡಾ ಟಿಕೆಟ್‍ಗಾಗಿ ಪ್ರಯತ್ನ ಮಾಡಿದ್ದರು.

    ಲೋಕಸಭೆ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗುವ ಇಂಗಿತವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರು ನಿರಂತರ ಪ್ರಯತ್ನ ಕೂಡ ಮಾಡುತ್ತಿದ್ದರು. ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯ ಅವಶ್ಯಕತೆ ಹಿನ್ನೆಲೆ ಎಐಸಿಸಿ ರಾಜ್ಯದ ವರದಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಗೆಲುವು ಬಹುತೇಕ ಖಚಿತವಾಗಿದೆ.

    ಬಿಜೆಪಿಗೆ ಎರಡು ಸ್ಥಾನ ದೊರೆಯಲಿದ್ದು ಬಾಕಿ ಉಳಿದ ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇಂದು ಬೆಂಗಳೂರಿನಲ್ಲಿ ಜೆಡಿಎಲ್‍ಪಿ ಸಭೆ ನಡೆದಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುನ್ನು ಕಂಡಿದ್ದ ಹೆಚ್‍ಡಿಡಿ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಪ್ರತಿಪಕ್ಷ ಸ್ಥಾನ ಪಡೆಯಲು ಬೇಕಾದಷ್ಟು ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿರಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

  • ಆರ್ಥಿಕ ಸಮೀಕ್ಷೆ 2018-19 – ಜಿಡಿಪಿ ಶೇ.7ರ ನಿರೀಕ್ಷೆ

    ಆರ್ಥಿಕ ಸಮೀಕ್ಷೆ 2018-19 – ಜಿಡಿಪಿ ಶೇ.7ರ ನಿರೀಕ್ಷೆ

    ನವದೆಹಲಿ: ವಾರ್ಷಿಕ ಶೇ.8ರ ದರದಲ್ಲಿ ಜಿಡಿಪಿ ಬೆಳವಣಿಗೆಯಾದರೆ 2025ರ ವೇಳೆಗೆ ಭಾರತ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

    ಬಜೆಟ್ ಮಂಡನೆಯ ಮುನ್ನ ದಿನವಾದ ಗುರುವಾರ ಲೋಕಸಭೆಯಲ್ಲಿ ಪ್ರತಿ ಬಾರಿಯಂತೆ ಆರ್ಥಿಕ ಸಮೀಕ್ಷೆ ಮಂಡನೆಯಾಗಿದೆ. ಆರ್ಥಿಕ ಮುನ್ನೋಟದ ಸಮಗ್ರ ವಿವರ, ಪ್ರಮುಖ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ, ದೇಶದ ಬೆಳವಣಿಗೆಯನ್ನು ವಿವರಿಸುವ ಆರ್ಥಿಕ ಸಮೀಕ್ಷೆಯನ್ನು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ನೇತೃತ್ವದ ತಂಡ ತಯಾರಿಸಿದ್ದು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

    ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
    * ವಾರ್ಷಿಕವಾಗಿ ಶೇ.8 ಜಿಡಿಪಿ ಬೆಳವಣಿಗೆ ಸಾಧಿಸಿದರೆ 2025ರ ಹಣಕಾಸು ವರ್ಷದಲ್ಲಿ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಿ ಭಾರತ ಹೊರಹೊಮ್ಮಬಹುದು.
    * 2019-20ರಲ್ಲಿ ಜಿಡಿಪಿ ಶೇ.7ರಷ್ಟು ಇರುವ ನಿರೀಕ್ಷೆ
    * 2018-19 ಸಾಲಿನಲ್ಲಿ 283.7 ಮಿಲಿಯನ್ ಟನ್ ಆಹಾರ ಉತ್ಪಾದನೆ
    * ಶೇ.5.8 ರಷ್ಟು ವಿತ್ತೀಯ ಕೊರತೆ
    * ಸ್ವಚ್ಛ ಭಾರತ ಅಭಿಯಾನ ಆರಂಭದ ಬಳಿಕ ದೇಶದಲ್ಲಿ 9.5 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣ, 5.5 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ.

    * ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಅಭಿವೃದ್ಧಿ ದರ ಈ ರೀತಿಯಾಗಿದೆ. 2016-17ರಲ್ಲಿ ಶೇ.6.3, 2017-18ರಲ್ಲಿ ಶೇ.5.0 ಮತ್ತು 2018-19ರಲ್ಲಿ ಶೇ.2.9
    * 2017-18 ಸಾಲಿನಲ್ಲಿ ರಫ್ತು ಪ್ರಮಾಣ ಹೆಚ್ಚಾಗಿದ್ದು, ಆಮದು ಕಡಿಮೆಯಾಗಿದೆ. 2017-18ರಲ್ಲಿ ಶೇ.17.6ರಷ್ಟು ಆಮದು, ಶೇ.4.7ರಷ್ಟು ರಫ್ತು ಇತ್ತು. 2018-19ರಲ್ಲಿ ಆಮದು ಶೇ.15.4 ಮತ್ತು ರಫ್ತು ಶೇ.12.5ರಷ್ಟಿದೆ.
    * 2017-18 ಸಾಲಿಗಿಂತ 2018-19ರಲ್ಲಿ ವಿದೇಶಿ ಹಣ ಸಂಗ್ರಹಣ ಕಡಿಮೆಯಾಗಿದೆ. 424.5 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 412.9 ಬಿಲಿಯನ್ ಅಮೆರಿಕನ್ ಡಾಲರ್ ಗೆ ಇಳಿಕೆಯಾಗಿದೆ.

    * ಕೇಂದ್ರದಲ್ಲಿ ಬಹುಮತ ಪಡೆದ ಸರ್ಕಾರ ರಚನೆಯಾಗಿದ್ದು, ಭವಿಷ್ಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
    * 2019-20ರ ಹಣಕಾಸಿನ ವರ್ಷದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

    * ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ.13.4ರಷ್ಟು ಹೆಚ್ಚಳವಾಗೋದರ ಜೊತೆಗೆ ಕಾರ್ಪೋರೇಟ್ ಟ್ಯಾಕ್ಸ್ ನಲ್ಲಿಯೂ ಏರಿಕೆ ಕಂಡಿದೆ. ಇನ್ನು ಪರೋಕ್ಷ ತೆರಿಗೆ ಸಂಗ್ರಹ ಶೇ.16ರಷ್ಟು ಇಳಿಕೆಯಾಗಿದೆ. ಜಿಎಸ್‍ಟಿ ಆದಾಯ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

     

    * ಆರ್ಥಿಕ ವರ್ಷದಲ್ಲಿ 97 ಲಕ್ಷ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಲಿದೆ. 2030ರೊಳಗೆ ಕಾರ್ಮಿಕ ವಲಯದಲ್ಲಿ ಪ್ರತಿ ವರ್ಷ 42 ಲಕ್ಷ ಶ್ರಮಿಕರ ಸಂಖ್ಯೆ ಏರಿಕೆಯಾಗಲಿದೆ.

    * ಆರ್ಥಿಕ ಸಮೀಕ್ಷೆಯು ಜಲಕ್ಷಾಮದ ಮುನ್ಸೂಚನೆಯನ್ನೂ ಗಂಭೀರವಾಗಿ ಪರಿಗಣಿಸಿದೆ. 2050ರಷ್ಟರಲ್ಲಿ ಭಾರತದಲ್ಲಿ ಜಲ ಸಂಗ್ರಹಣೆಯೂ ಕಷ್ಟಕರವಾಗಲಿದೆ ಎಂದು ಸರ್ವೆಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. ಹೀಗಾಗಿ ಈ ವರ್ಷದಿಂದಲೇ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಿ ಕೃಷಿ ಉತ್ಪಾದನೆಯತ್ತ ಹೆಚ್ಚು ಮಾಡಲು ಗಮನ ಹರಿಸಬೇಕಿದೆ.