Tag: Starship

  • ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

    ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

    ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾಗಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ (Starship) ವಾರಗಳ ಹಿಂದೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿತ್ತು. ಇದೀಗ ದೈತ್ಯ ರಾಕೆಟ್ ಅನ್ನು ಕಂಪನಿ ಮತ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಕೇವಲ 6-8 ವಾರಗಳಲ್ಲಿ ಇದು ಸಿದ್ಧಗೊಳ್ಳಲಿದೆ ಎಂದು ಸ್ಪೇಸ್‌ಎಕ್ಸ್‌ನ (SpaceX) ಸಿಇಒ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಇತ್ತೀಚೆಗೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿದ್ದ ಸ್ಟಾರ್‌ಶಿಪ್ ರಾಕೆಟ್‌ನ (Rocket) ಹಾನಿ ಸಣ್ಣಮಟ್ಟಾಗಿದೆ ಎಂಬುದನ್ನು ತಿಳಿಸಲು ಸಂತಸಪಡುತ್ತೇನೆ. ಇದರ ಮತ್ತೆ ಉಡಾವಣೆಗೆ ಅಗತ್ಯವಾದ ಮೂಲಸೌಕರ್ಯವನ್ನು ಪಡೆಯಲು 6 ರಿಂದ 8 ವಾರಗಳು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಏಪ್ರಿಲ್ 17ರಂದು ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಸ್ಟಾರ್‌ಶಿಪ್ ಅನ್ನು ಉಡಾವಣೆ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದ ದೈತ್ಯ ರಾಕೆಟ್‌ನ ಪರೀಕ್ಷಾರ್ಥ ಉಡಾವಣೆಯನ್ನು ನಿಗದಿಪಡಿಸಲಾಗಿದ್ದ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಿ 3 ದಿನಗಳ ಕಾಲ ಮುಂದೂಡಲಾಯಿತು. ಇದನ್ನೂ ಓದಿ: ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ಬಳಿಕ ಏಪ್ರಿಲ್ 20ರಂದು ಸ್ಟಾರ್‌ಶಿಪ್ ಅನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿದಾಗ ಅದು ಸ್ಫೋಟಗೊಂಡಿತ್ತು. ರಾಕೆಟ್ 3 ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‌ಎಕ್ಸ್ ತಿಳಿಸಿತ್ತು.

    ಇದೀಗ ಮಸ್ಕ್ ತಿಳಿಸಿದಂತೆ ಸ್ಟಾರ್‌ಶಿಪ್ ಅನ್ನು 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧಪಡಿಸಿದರೂ ಅಮೆರಿಕ ಸರ್ಕಾರದ ಫೆಡರಲ್ ಏವಿಯೇಷನ್ ಅಥಾರಿಟಿ (FAA) ಸ್ಟಾರ್‌ಶಿಪ್ ಸ್ಫೋಟದ ಬಗ್ಗೆ ತನಿಖೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಎಂಬುದು ಗಮನಾರ್ಹ ವಿಚಾರ. ಆ ತನಿಖೆ ಮುಗಿಯುವವರೆಗೂ ಸ್ಪೇಸ್‌ಎಕ್ಸ್‌ಗೆ ಮತ್ತೊಂದು ಸ್ಟಾರ್‌ಶಿಪ್‌ನ ಉಡಾವಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

  • ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಟೆಕ್ಸಾಸ್‌:  ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಎಲೋನ್‌ ಮಸ್ಕ್‌ ಸ್ಪೇಸ್‍ಎಕ್ಸ್ (Space X) ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್(Rocket) ಸ್ಟಾರ್‌ಶಿಪ್‌ನ (Starship) ಪರೀಕ್ಷಾರ್ಥ ಹಾರಾಟದ ವೇಳೆ ಗುರುವಾರ ಸ್ಫೋಟಗೊಂಡಿದೆ.

    ಟೆಕ್ಸಾಸ್‍ನ (Texas) ಬೊಕಾ ಚಿಕಾದಲ್ಲಿರುವ (Boca Chica) ಸ್ಪೇಸ್‍ಎಕ್ಸ್ ಬಾಹ್ಯಾಕಾಶ ಕೇಂದ್ರದಿಂದ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾರ್ಥ ಹಾರಾಟ ಬೆಳಗ್ಗೆ 8:33ಕ್ಕೆ ನಡೆಯಿತು. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ರಾಕೆಟ್ ಮೂರು ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್‌ ಬಾಹ್ಯಾಕಾಶ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‍ಎಕ್ಸ್ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಸ್ಟಾರ್‌ಶಿಪ್‌ನ್ನು ಚಂದ್ರ ಹಾಗೂ ಮಂಗಳನಲ್ಲಿಗೆ (Mars) ಕಳುಹಿಸುವ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: 8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ

  • ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ಹಾಗೂ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್‌ನ (Starship) ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ (SpaceX) ಸೋಮವಾರ ಮುಂದೂಡಿದೆ.

    ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದಾಗಿ ಸ್ಟಾರ್‌ಶಿಪ್ ರಾಕೆಟ್‌ನ (Rocket) ಲಿಫ್ಟ್ಆಫ್ ಅನ್ನು ಉಡಾವಣೆಗೆ ನಿಗದಿಪಡಿಸಲಾಗಿದ್ದ ಸಮಯಕ್ಕಿಂತ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಲಾಯಿತು ಎಂದು ಸ್ಪೇಸ್‌ಎಕ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

    ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8:20ರ ವೇಳೆಗೆ ಸ್ಟಾರ್‌ಶಿಪ್ ಹಾರಾಟವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ತಾತ್ಕಾಲಿಕವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕನಿಷ್ಠ 48 ಗಂಟೆ ವಿಳಂಬವಾಗಲಿದೆ ಎಂದು ಸ್ಪೇಸ್‌ಎಕ್ಸ್ ತಿಳಿಸಿದೆ.

    ಸ್ಟಾರ್‌ಶಿಪ್ ವಿಶೇಷತೆಗಳೇನು?
    ಸ್ಟಾರ್‌ಶಿಪ್ ಗಗನಯಾತ್ರಿಗಳು ಹಾಗೂ ಸರಕುಗಳನ್ನು ಸಾಗಿಸುವ ಮರುಬಳಕೆ ಮಾಡಬಹುದಾದ ಕ್ಯಾಪ್ಸುಲ್ ಮತ್ತು ಮೊದಲ ಹಂತದ ಸೂಪರ್ ಹೆವಿ ಬೂಸ್ಟರ್ ರಾಕೆಟ್ ಅನ್ನು ಒಳಗೊಂಡಿದೆ. ಸುಮಾರು 164 ಅಡಿ ಎತ್ತರದ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ 230 ಅಡಿ ಎತ್ತರದ ಭಾರೀ ತೂಕದ ರಾಕೆಟ್‌ನ ಮೇಲೆ ನೆಲೆನಿಂತಿದೆ. ಇದನ್ನೂ ಓದಿ: ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2025ರ ಅಂತ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಸಾಗಿಸಲು ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಆರಿಸಿದೆ. ಕಳೆದ ಫೆಬ್ರವರಿಯಲ್ಲಿ ಸ್ಟಾರ್‌ಶಿಪ್‌ನ ಮೊದಲ ಹಂತದ ಬೂಸ್ಟರ್‌ನಲ್ಲಿ ಸ್ಪೇಸ್‌ಎಕ್ಸ್ 33 ರಾಪ್ಟರ್ ಎಂಜಿನ್‌ಗಳ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಿತ್ತು. ಇದೀಗ ಮೊದಲ ಪರೀಕ್ಷಾರ್ಥ ಉಡಾವಣೆ ಸೋಮವಾರ ನಡೆಯಬೇಕಿತ್ತು. ಆದರೆ ಇದೀಗ ಸೂಪರ್ ಹೆವಿ ಬೂಸ್ಟರ್‌ನ ಒತ್ತಡದ ಸಮಸ್ಯೆಯಿಂದಾಗಿ ಹಾರಾಟವನ್ನು ಮುಂದೂಡಲಾಗಿದೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

  • ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ವಾಷಿಂಗ್ಟನ್: ಸ್ಪೇಸ್‍ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.

    ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು. ಈ ವಿಚಾರ ಹೊಸದೇನಲ್ಲ. ಕಳೆದ 2 ದಶಕಗಳಿಂದಲೂ ಇದರ ಬಗ್ಗೆ ಹಲವು ಅನ್ವೆಷಣೆಗಳೂ, ತಂತ್ರಜ್ಞಾನದ ಪರೀಕ್ಷೆಗಳೂ ನಡೆದಿವೆ. ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಸ್ಪೇಸ್‍ಎಕ್ಸ್‍ನ ಸ್ಟಾರ್‍ಶಿಪ್ ರಾಕೆಟ್‍ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಸ್ಕ್‍ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಸ್ಪೇಸ್‍ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಮಸ್ಕ್ ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಮಂಗಳ ಗ್ರಹದ ಮೇಲೆ ಮನುಷ್ಯರು ಇಳಿಯುವ ಬಗ್ಗೆ ಎಲೋನ್ ಮಸ್ಕ್ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಈ ತಿಂಗಳಿನ ಪ್ರಾರಂಭದಲ್ಲಿಯೂ ಸಂದರ್ಶನವೊಂದರಲ್ಲಿ ನಾವು 5 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯದಿದ್ದರೆ ನನಗೇ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿಕೆ ನೀಡಿದ್ದರು.