Tag: Star war

  • ರಜನಿಕಾಂತ್ ವಿರುದ್ಧ ತಿರುಗಿ ಬಿದ್ದ ವಿಜಯ್ ಫ್ಯಾನ್ಸ್

    ರಜನಿಕಾಂತ್ ವಿರುದ್ಧ ತಿರುಗಿ ಬಿದ್ದ ವಿಜಯ್ ಫ್ಯಾನ್ಸ್

    ಸೂಪರ್ ಸ್ಟಾರ್ (Super Star) ಟೈಟಲ್ ವಿಚಾರದಲ್ಲಿ ಮೊದಲಿನಿಂದಲೂ ತಮಿಳು ಚಿತ್ರೋದ್ಯಮದಲ್ಲಿ ತಿಕ್ಕಾಟ ಇದ್ದೇ ಇದೆ. ರಜನಿಕಾಂತ್ (Rajinikanth) ಮತ್ತು ವಿಜಯ್ ದಳಪತಿ (Vijay) ಅಭಿಮಾನಿಗಳು ಈ ಟೈಟಲ್ ವಿಚಾರವಾಗಿ ಆಗಾಗ್ಗೆ ಕಾಲೆಳೆಯುವುದುಂಟು. ಈ ವಿಷಯದ ಕುರಿತಾಗಿ ಮತ್ತೆ ತಮಿಳು ಚಿತ್ರೋದ್ಯಮದಲ್ಲಿ ಚರ್ಚೆ ಶುರುವಾಗಿದೆ. ಕಾರಣ ರಜನಿ ಹೇಳಿದ ಹದ್ದು ಕಾಗೆಯ ಕಥೆ.

    ಮೊನ್ನೆಯಷ್ಟೇ ರಜನಿ ನಟನೆಯ ‘ಜೈಲರ್’ ಸಿನಿಮಾದ ಹಾಡುಗಳು ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಲ್ಲಿ ರಜನಿ ಪರೋಕ್ಷವಾಗಿಯೇ ವಿಜಯ್ ಅವರನ್ನು ಕಾಗೆ ಹೋಲಿಸಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆ ಸೂಪರ್ ಸ್ಟಾರ್ ಟೈಟಲ್ ಬೇಡ ಎಂದು ಹೇಳಿದ್ದೆ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದರು. ಈ ಕಾಗೆ ಮತ್ತು ಹದ್ದಿನ ಕಥೆಯು ವಿಜಯ್ ಫ್ಯಾನ್ಸ್ (Fans) ಅನ್ನು ಕೆರಳಿಸಿದೆ. ಇದನ್ನೂ ಓದಿ:ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

    ಹದ್ದಿನ ತಾಕತ್ತು ಮಾತ್ರ ಗಾತ್ರವನ್ನು ಅರಿಯದ ಕಾಗೆ, ಅದರೊಂದಿಗೆ ಹೋರಾಟ ಮಾಡಲು ಪೈಪೋಟಿ ಮಾಡುತ್ತದೆ. ಕಾಗೆ ಏನೇ ಮಾಡಿದರೂ ಹದ್ದಿನಷ್ಟು ಹಾರಾಡಲು ಆಗುವುದಿಲ್ಲ. ಹದ್ದನ್ನು ಕಾಗೆಯಿಂದ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲವೆಂದು  ಮಾತನಾಡಿದ್ದು ರಜನಿ. ಕಾಗೆಯನ್ನು ವಿಜಯ್ ಅವರಿಗೆ ಹೋಲಿಸಿದ್ದಾರೆ ಎನ್ನುವುದು ಅಭಿಮಾನಿಗಳ ಊಹೆ ಆಗಿತ್ತು. ಹಾಗಾಗಿ ವಿಜಯ್ ಫ್ಯಾನ್ಸ್ ರಜನಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ರಜನಿಕಾಂತ್ ಪರೋಕ್ಷವಾಗಿ ವಿಜಯ್ ಅವರನ್ನು ತಿವಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಸೂಪರ್ ಸ್ಟಾರ್‍ ವಿಚಾರವಾಗಿ ಮುಸುಕಿನ ಗುದ್ದಾಟವಿದ್ದೇ ಇದೆ. ಹಾಗಾಗಿ ವಿಜಯ್ ಫ್ಯಾನ್ಸ್ ರಜನಿ ಆಡಿದ ಮಾತಿಗೆ ಗರಂ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ಭಾರತೀಯ ಸಿನಿಮಾ ರಂಗದಲ್ಲೇ ಸ್ಟಾರ್ ವಾರ್ ಗೆ ತೆಲುಗು ಸಿನಿಮಾ ರಂಗ ಫೇಮಸ್. ಸಮಯ ಸಿಕ್ಕಾಗೆಲ್ಲ ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನಿಗೆ ಕಾಲೆಳೆಯುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಡೈಲಾಗ್ ಮೂಲಕ ಟಾಂಗ್ ಕೊಡುವ ಸಂಪ್ರದಾಯ ಮೊದಲಿನಿಂದಲೂ ತೆಲುಗು ಚಿತ್ರೋದ್ಯಮದಲ್ಲಿದೆ. ಕೇವಲ ಕಲಾವಿದರು ಮಾತ್ರವಲ್ಲ ಅಭಿಮಾನಿಗಳು ಕೂಡ ಅದೇ ಸಂಪ್ರದಾಯವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಿರ್ದೇಶಕ ರಾಜಮೌಳಿ, ಆ ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಳ್ಳದೇ ಭರಪೂರ್ ತುಪ್ಪವನ್ನೇ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ತೇಜ ಸಿನಿಮಾಗಳು ಯಾವತ್ತಿಗೂ ಪೈಪೋಟಿ ಮಾಡುತ್ತಿವೆ. ಇಬ್ಬರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟರು. ಈ ಹಿಂದಿನ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್ ಮೂಲಕ ಒಬ್ಬರನ್ನೊಬ್ಬರು ಟೀಕಿಸಿಕೊಂಡಿದ್ದಾರೆ. ಕಾಲೆಳೆದಿದ್ದಾರೆ. ಟಾಂಗ್ ಕೊಡುವಂತಹ ಡೈಲಾಗ್ ಹೊಡೆದಿದ್ದಾರೆ. ಇಂತಹ ಇಬ್ಬರು ಸ್ಟಾರ್ ನಟರನ್ನು ಒಟ್ಟಾಗಿಸಿ, ಸಂಭಾಳಿಸಿ ‘ಆರ್.ಆರ್.ಆರ್’ ಸಿನಿಮಾ ಮಾಡಿ ಗೆದ್ದಿದ್ದಾರೆ ರಾಜಮೌಳಿ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ಈ ಇಬ್ಬರೂ ಅಭಿಮಾನಿಗಳ ನಾಡಿಮಿಡಿತವನ್ನು ಸರಿಯಾಗಿ ಬಳಸಿಕೊಂಡು, ಹಾಗೆಯೇ ಸಿನಿಮಾದಲ್ಲೂ ದೃಶ್ಯಗಳನ್ನು ಹೆಣೆದಿದ್ದಾರೆ. ಆಯಾ ಪಾತ್ರಕ್ಕೆ ಏನೆಲ್ಲ ಬಿಲ್ಡ್ ಅಪ್ ಬೇಕಿತ್ತೋ ಅಷ್ಟನ್ನೂ ದಯಪಾಲಿಸಿದ್ದಾರೆ. ಯಾರ ಅಭಿಮಾನಿಗೂ ನೋವಾಗದಂತೆ ಚಿತ್ರಿಸಿದ್ದಾರೆ. ಹಾಗಾಗಿ ಇಬ್ಬರೂ ಕಲಾವಿದರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ಥಿಯೇಟರ್ ಒಳಗೆ ಹೀಗಿದ್ದರೆ ಚಿತ್ರಮಂದಿರದ ಹೊರಗೆ ಮತ್ತೊಂದು ರೀತಿಯ ವಾತಾವರಣ ಸೃಷ್ಟಿಯಾಗಿದೆ. ತಮ್ಮ ತಮ್ಮ ನೆಚ್ಚಿನ ನಟರ ಪೋಸ್ಟರ್ ಗೆ ಹಾಲು, ಹೂವು ಹಾಕುವುದು, ಪೂಜೆ ಸಲ್ಲಿಸುವುದು ಇದು ಇದ್ದೇ ಇದೆ. ಕೆಲವು ಕಡೆ ರಾಮ್ ಚರಣ್ ತೇಜ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರಾಮುಖ್ಯತೆ ಕೊಟ್ಟರೆ, ಮತ್ತೊಂದು ಕಡೆ ಜೂನಿಯರ್ ಎನ್.ಟಿ.ಆರ್ ಗೆ ಮಹತ್ವ ನೀಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಒಟ್ಟಾಗಿಯೇ ಸಿನಿಮಾ ನೋಡುತ್ತಿದ್ದಾರೆ. ಇಂಥದ್ದೊಂದು ಮಹತ್ವದ ಬದಲಾವಣೆಗೆ ‘ಆರ್.ಆರ್.ಆರ್’ ಕಾರಣವಾಗಿದ್ದಂತೂ ಸುಳ್ಳಲ್ಲ.

    ಕೇವಲ ಸಿನಿಮಾ ಮಾಡಿ ಗೆಲ್ಲುವುದಲ್ಲ, ಸ್ಟಾರ್ ಗಳನ್ನು ನಿಭಾಯಿಸಿಕೊಂಡು ಅಭಿಮಾನಿಗಳನ್ನು ಸಮಾಧಾನಿಸುವುದು ಸಿನಿಮಾ ಗೆಲುವಿಗಿಂತ ದೊಡ್ಡದರು. ಅದರಲ್ಲಿ ರಾಜಮೌಳಿ ಭಾರೀ ಅಂತರದಿಂದ ಗೆದ್ದಿದ್ದಾರೆ.

  • ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನಟಿ ಶಕೀಲಾ ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜನ್ ಫಾನ್ಸ್ ನಡುವೆ ಬೆಂಕಿ ಹಚ್ಚಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಎಂಬುದು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಈ ವಿಚಾರಕ್ಕೆ ಈಗ ತೆಲುಗು ಚಿತ್ರರಂಗದಲ್ಲಿ ಅಲ್ಲು ಮತ್ತು ಮಹೇಶ್ ಅಭಿಮಾನಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೋ ಮತ್ತು ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಸಿನಿಮಾ ಒಂದೇ ಬಾರಿ ರಿಲೀಸ್ ಆಗಿ ಸ್ಟಾರ್ ವಾರ್ ಗೆ ಕಾರಣವಾಗಿದೆ.

    ಬಿನ್ನಿ ಮತ್ತು ಪ್ರಿನ್ಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಹೀರೋಗಳನ್ನು ಹೊಗಳಿ, ಅಲ್ಲು ಮತ್ತು ಮಹೇಶ್‍ರನ್ನು ಸಖತ್ ಅಗಿ ಟ್ರೋಲ್ ಮಾಡಿದ್ದರು. ಈ ವಿಚಾರ ಸಿನಿಮಾ ಸಂಪಾದನೆಯವರೆಗೂ ಹೋಗಿ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಈಗ ನಟಿ ಶಕೀಲಾ ಕೊಟ್ಟಿರುವ ಹೇಳಿಕೆಯೊಂದು ಮತ್ತೆ ಈ ಸ್ಟಾರ್ ವಾರ್ ಗೆ ಪುಷ್ಟಿಕೊಟ್ಟಂತೆ ಆಗಿದೆ.

    ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಶಕೀಲಾ, ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ಮಹೇಶ್ ಬಾಬು ಸಹೋದರನಂತೆ, ಜೂನಿಯರ್ ಎನ್‍ಟಿಆರ್ ಸೂಪರ್ ಅಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಶಕೀಲಾ ಅವರ ಹೇಳಿಕೆಯಿಂದ ಟಾಲಿವುಡ್‍ನಲ್ಲಿ ಸ್ವಲ್ಪ ಕಮ್ಮಿ ಆಗಿದ್ದ ಸ್ಟಾರ್ ವಾರ್ ಮತ್ತೆ ಶುರುವಾಗಿದ್ದು, ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.

    ಶಕೀಲಾ ಅವರ ಈ ಹೇಳಿಕೆಯಿಂದ ಕಾದ ಕೆಂಡದಂತಾಗಿರುವ ಅರ್ಜುನ್ ಫಾನ್ಸ್, ಅಲ್ಲು ಅರ್ಜನ್ ಅವರಿಗೆ ನಮ್ಮ ದೇಶದಲ್ಲಿ ಅಲ್ಲದೇ ಹೊರದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಆದರೆ ಇಲ್ಲಿಯವರೇ ಆದ ಶಕೀಲಾ ಅವರಿಗೆ ಅಲ್ಲು ಗೊತ್ತಿಲ್ವಾ? ಅವರು ಬೇಕಂತಲೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಶಕೀಲಾ ಅವರ ಸಹೋದರ ಮಹೇಶ್ ಬಾಬು ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ.

  • ಹಿರಿಯರ ಮಾತಿಗೆ ಬೆಲೆ ಕೊಡಿ- ಸ್ಟಾರ್ ವಾರ್‌ಗೆ ಹ್ಯಾಟ್ರಿಕ್ ಹೀರೋ ಕಿಡಿ

    ಹಿರಿಯರ ಮಾತಿಗೆ ಬೆಲೆ ಕೊಡಿ- ಸ್ಟಾರ್ ವಾರ್‌ಗೆ ಹ್ಯಾಟ್ರಿಕ್ ಹೀರೋ ಕಿಡಿ

    – ‘ಪೈಲ್ವಾನ್’ ಸಿನಿಮಾ ಸೂಪರ್ ಮೇಕಿಂಗ್ ಅಂದ್ರು ಶಿವಣ್ಣ
    – ಕುಟುಂಬದಲ್ಲಿ ಒಂದಾಗಿರೋದನ್ನು ಕಲಿಬೇಕು

    ಬೆಂಗಳೂರು: ಬಾಕ್ಸ್ ಆಫೀಸ್ ಭಾರೀ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾವ್’ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಗರದ ಒರಾಯನ್ ಮಾಲ್‍ನಲ್ಲಿ ‘ಪೈಲ್ವಾನ್’ ಸಿನಿಮಾ ವೀಕ್ಷಿಸಿ ಮಾತನಾಡಿದ ಶಿವಣ್ಣ, ಪೈಲ್ವಾನ್ ಸಿನಿಮಾ ಮೇಕಿಂಗ್ ತುಂಬಾ ಚೆನ್ನಾಗಿದೆ. ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸಲಾಗಿದೆ. ಸುದೀಪ್ ಅಭಿನಯ ಅದ್ಭುತವಾಗಿದ್ದು, ಪಾತ್ರಕ್ಕೆ ತಕ್ಕಂತೆ ಮೈಕಟ್ಟು ಬೆಳೆಸಿಕೊಂಡಿದ್ದಾರೆ. ನಿರ್ದೇಶಕ ಎಸ್.ಕೃಷ್ಣ ಅವರು ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೈಬರ್ ಕ್ರೈಂಗೆ ಪೈಲ್ವಾನ್ ಚಿತ್ರತಂಡ ದೂರು

    ಎಸ್.ಕೃಷ್ಣ ಅವರು ‘ಕಡ್ಡಿಪುಡಿ’ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಿ ನನ್ನ ಜೊತೆಗೆ ಕೆಲಸ ಮಾಡಿದ್ದರು. ಆದರೆ ಈಗ ಉತ್ತಮ ನಿರ್ದೇಶಕರಾಗಿ ಬೆಳೆಯುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಗಜಕೇಸರಿ’ ಹಾಗೂ ಎರಡನೇ ಸಿನಿಮಾ ಹೆಬ್ಬುಲಿ ಅಭಿಮಾನಿಗಳ ಮನ ಗೆದ್ದಿವೆ. ಈಗ ಅವರ ಮೂರನೇ ಸಿನಿಮಾ ‘ಪೈಲ್ವಾನ್’ ಭರ್ಜರಿ ಸದ್ದು ಮಾಡುತ್ತಿದೆ. ಈ ಮೂಲಕ ತಾವು ಉತ್ತಮ ನಿರ್ದೇಶಕ ಎನ್ನುವುದನ್ನು ಕೃಷ್ಣ ಹಂತ ಹಂತವಾಗಿ ನಿರೂಪಿಸುತ್ತಾ ಬಂದಿದ್ದಾರೆ ಎಂದು ನಿರ್ದೇಶಕರ ಬೆನ್ನು ತಟ್ಟಿದರು. ಇದನ್ನೂ ಓದಿ: ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ: ದರ್ಶನ್

    ಸ್ಟಾರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಕುಟುಂಬದಲ್ಲಿ ಒಬ್ಬರಾಗಿ ಇರಬೇಕು. ನಾನು ದೊಡ್ಡವನು, ಅವರು ದೊಡ್ಡವರು ಎನ್ನುವುದು ಸರಿಯಲ್ಲ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾ ಬಂದಾಗ ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ಹೊಟ್ಟೆಕಿಚ್ಚು ಪಡಬಾರದು. ಒಬ್ಬರಿಗೆ ಒಬ್ಬರು ಟಾಂಗ್ ಕೊಡುವುದು ಸರಿಯಲ್ಲ. ಹಿರಿಯನಾಗಿ ಒಂದು ಮಾತು ಹೇಳುತ್ತೇನೆ. ಸರಿಯಾಗಿದ್ದರೆ ಸ್ವೀಕರಿಸಿ, ಹಿರಿಯರ ಮಾತಿಗೆ ಬೆಲೆ ಕೊಡಿ ಎಂದರು.

    ಸಿನಿಮಾ ಪೈರಸಿ ಮಾಡುವುದು ಉತ್ತಮ ನಡೆಯಲ್ಲ. ಹೀಗೆ ಮಾಡಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ನಿರ್ಮಾಪಕರು ಪ್ರಕರಣ ದಾಖಲಿಸಿ, ತನಿಖೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.

    ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ನಟಿ ಆಕಾಂಕ್ಷಾ ಸಿಂಗ್ ಅವರನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆಯಾಗುತ್ತಾರೆ. ಆಗ ನಟಿಯ ತಂದೆ ಅವಿನಾಶ್ ಅವರು ತುಂಬಾ ನೋವನ್ನು ವ್ಯಕ್ತಪಡಿಸುತ್ತಾರೆ. ಈ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಹೆಣ್ಣು ಮಕ್ಕಳು ಇದ್ದವರಿಗೆ ಆ ನೋವು ಏನು ಅಂತ ತಿಳಿಯುತ್ತದೆ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಣ್ಣ, ತಾಯಿ, ತಂದೆ ಯಾರೇ ಆಗಿದ್ದರೂ ಅವರಿಗೆ ಹೆಣ್ಣು ಮಕ್ಕಳು ಅಂದ್ರೆ ಅತ್ಯಮೂಲ್ಯ ಸಂಬಂಧ. ನಾನು ನಟಿಸಿದ ‘ತವರಿಗೆ ಬಾ ತಂಗಿ’, ‘ಜೋಗಿ’ ಅಂತಹ ಸಿನಿಮಾಗಳಲ್ಲಿ ಹೆಣ್ಣಿನ ಭಾವನೆಗಳಿವೆ. ಇಂತಹ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುತ್ತವೆ ಎಂದು ತಿಳಿಸಿದರು.

    ನಟನಿಗೆ ವಯಸ್ಸು ಮುಖ್ಯವಲ್ಲ. ಪಾತ್ರಕ್ಕೆ ತಕ್ಕಂತೆ ಬದಲಾಗುವ ಪವರ್ ಇರಬೇಕು. ಇಂತಹ ಬದಲಾವಣೆ ನನ್ನಿಂದ ಆಗಿದೆ ಎಂದು ಹೇಳುವುದು ಸರಿಯಲ್ಲ. ‘ಭಜರಂಗಿ’ ಸಿನಿಮಾದಲ್ಲಿ ಕೊನೆಯ ಸೀನ್‍ನಲ್ಲಿ ಮೈಕಟ್ಟು ತೋರಿಸಿದ್ದೇನೆ. ಅಗತ್ಯವಿರುವ ಸೀನ್‍ಗಳಲ್ಲಿ ಮಾತ್ರ ಮೈಕಟ್ಟು ತೋರಿಸಬೇಕು. ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಅವರು ಕೂಡ ತಮ್ಮ ಸಿನಿಮಾಗೆ ತಕ್ಕಂತೆ ಮೈಕಟ್ಟು ಬೆಳೆಸಿಕೊಳ್ಳಲು ಹಾರ್ಡ್ ವರ್ಕೌಟ್ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪೈಲ್ವಾನ್ ರೀತಿಯ ಚಿತ್ರಕಥೆ ಬಂದರೆ ಖಂಡಿತ ನಟಿಸುತ್ತೇನೆ. ನಾನು ಫಿಟ್ ಆಗಿರಲು ಬಯಸುತ್ತೇನೆ. ನನಗೆ ಶಸ್ತ್ರಚಿಕಿತ್ಸೆ ಆಗಿದ್ದರೂ ವರ್ಕೌಟ್ ಆರಂಭಿಸಿದ ನಾಲ್ಕು ದಿನಕ್ಕೆ ವೇಟ್ ಲಿಫ್ಟ್ ಮಾಡಲು ಆರಂಭಿಸಿದೆ. ಇಂತಹ ಅದ್ಭುತ ಸಿನಿಮಾ ಮಾಡಲು ನಿರ್ದೇಶಕ ಕೃಷ್ಣ ಹೆಚ್ಚು ಶ್ರಮಪಟ್ಟಿದ್ದಾರೆ ಎಂದು ತಿಳಿಸಿದರು.

  • ‘ರಾಜಹುಲಿ, ಐರಾವತ ಬಂದರೂ ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್’

    ‘ರಾಜಹುಲಿ, ಐರಾವತ ಬಂದರೂ ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್’

    – ಸಕ್ಕರೆ ನಾಡಲ್ಲಿ ರಂಗೇರಿದ ಕಣ
    – ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪೋಸ್ಟ್

    ಬೆಂಗಳೂರು: ರಾಜಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ, ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿನೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಟಾರ್ ವಾರ್ ಶುರುಮಾಡಿದ್ದಾರೆ.

    ಹೌದು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಸಕ್ಕರೆ ನಾಡಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ, ಯಶ್, ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಂಡ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವರ್ಸಸ್ ಸ್ಯಾಂಡಲ್‍ವುಡ್ ಸ್ಟಾರ್ ವಾರ್ ಶುರುವಾಗಿದೆ. ಫೇಸ್‍ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪರಸ್ಪರ ಪೋಸ್ಟ್ ಹಾಕುತ್ತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ದರ್ಶನ್ ದೊಡ್ಡ ಮಗ, ಯಶ್ ಚಿಕ್ಕಮಗ ಎಂದಿದ್ದ ಸುಮಲತಾ ಹೇಳಿಕೆಗೆ ಜೆಡಿಎಸ್ ಹಾಗೂ ನಿಖಿಲ್ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ದರ್ಶನ್ ದೊಡ್ಡ ಮಗ, ಯಶ್ ಚಿಕ್ಕ ಮಗನಾದರೇ ಅಭಿಷೇಕ್ ಯಾರು ಎಂದು ಪೋಸ್ಟ್ ನಲ್ಲಿ ಪ್ರಶ್ನಿಸಿ ಎಂದು ಟೀಕಿಸುತ್ತಿದ್ದಾರೆ.

    ಜೆಡಿಎಸ್ ಚನ್ನಪಟ್ಟಣ, ನಿಖಿಲ್ ಕುಮಾರಸ್ವಾಮಿ ಎಂಪಿ ಹೀಗೆ ಹಲವು ಫೇಸ್‍ಬುಕ್ ಖಾತೆಯಿಂದ ಸುಮಲತಾ ಅವರ ವಿರುದ್ಧ ಪೋಸ್ಟ್ ಮಾಡಲಾಗುತ್ತಿದೆ. ಮಂಡ್ಯ ಜನರ ಕಷ್ಟಕ್ಕೆ ಬರೋದು ಜೆಡಿಎಸ್ ಹೊರತು ನಟರಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.