Tag: star Tortoise

  • ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆ ಮಾರಾಟ – ಇಬ್ಬರ ಬಂಧನ

    ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆ ಮಾರಾಟ – ಇಬ್ಬರ ಬಂಧನ

    ಮಡಿಕೇರಿ: ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕ ಬಂಧಿಸಿದೆ.

    ಅಪ್ರೋಜ್ ಪಾಷಾ ಮತ್ತು ಮನ್ಸೂರ್ ಬಂಧಿತ ಆರೋಪಿಗಳಾಗಿದ್ದು, 1 ನಕ್ಷತ್ರ ಆಮೆಯನ್ನು ರಕ್ಷಿಸಲಾಗಿದೆ. ಆರೋಪಿಗಳು ಶುಕ್ರವಾರ ಸಂಜೆ ನಗರದ ಚೈನ್ ಗೇಟ್ ಬಳಿ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಇದನ್ನೂ ಓದಿ: ಐದು ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶದಿಂದ 42 ಕಾರ್ಮಿಕರ ಬಲಿ! 

    ಈ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಂದರ್ಭ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

  • ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ಆರೋಪಿ ಬಂಧನ

    ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ಆರೋಪಿ ಬಂಧನ

    ಮಡಿಕೇರಿ : ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಡಿಕೇರಿಯಲ್ಲಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನಿಂದ ಅಪರೂಪದ ನಕ್ಷತ್ರ ಆಮೆಯನ್ನು ಪಳನಿಯಪ್ಪನ್ (32) ಎಂಬಾತ ಮಡಿಕೇರಿ ನಗರದ ಅಶೋಕಪುರದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿ, ಜೀವಂತವಾಗಿದ್ದ ನಕ್ಷತ್ರ ಆಮೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಕ್ಷತ್ರ ಆಮೆಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಚ್ಚೆತ್ತುಕೊಂಡ ಮಡಿಕೇರಿಯ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಆಮೆಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪಳನಿಯಪ್ಪನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  • ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ – ಮೂವರು ಆರೋಪಿಗಳು ಬಂಧನ

    ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ – ಮೂವರು ಆರೋಪಿಗಳು ಬಂಧನ

    ಮಡಿಕೇರಿ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿರಾಜಪೇಟೆಯ ಅರಣ್ಯ ವಿಭಾಗದ ಫಾರೆಸ್ಟ್ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ರಾಮಮೂರ್ತಿ, ರಮೇಶ್ ಮತ್ತು ಯೋಗೇಶ್ ಎಂಬ ಆರೋಪಿಗಳನ್ನು ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯ ಗ್ರಾಮದಲ್ಲಿ ಬಂಧಿಸಲಾಗಿದೆ. ಜೊತೆಗೆ ಆರೋಪಿಗಳಿಂದ ಬಳಿ ಇದ್ದ ಎರಡು ಜೀವಂತ ನಕ್ಷತ್ರ ಆಮೆ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

    ನಕ್ಷತ್ರ ಆಮೆಗಳನ್ನು ಐದು ಲಕ್ಷ ರೂಪಾಯಿ ಮಾರಾಟ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಎಚ್ಚೆತ್ತುಕೊಂಡ ವಿರಾಜಪೇಟೆಯ ಅರಣ್ಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಎರಡು ಆಮೆಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  • ನಕ್ಷತ್ರ ಆಮೆ ಸಾಗಾಟ ಮಾಡ್ತಿದ್ದ ಇಬ್ಬರ ಬಂಧನ- 3 ಆಮೆ, ಕಾರ್ ವಶ

    ನಕ್ಷತ್ರ ಆಮೆ ಸಾಗಾಟ ಮಾಡ್ತಿದ್ದ ಇಬ್ಬರ ಬಂಧನ- 3 ಆಮೆ, ಕಾರ್ ವಶ

    ಮೈಸೂರು: ನಕ್ಷತ್ರ ಆಮೆಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಹುಣಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಾಸೀರ್ (40) ಹಾಗೂ ರಿಯಾಜ್ (42) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಮೂಲತಃ ಕೇರಳ ರಾಜ್ಯದವರಾಗಿದ್ದಾರೆ. ಅಕ್ರಮವಾಗಿ ನಕ್ಷತ್ರ ಆಮೆಗಳನ್ನು ಕಾರಿನಲ್ಲಿ ತಂದು ಹುಣಸೂರು ವ್ಯಾಪ್ತಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದರು. ಇದರ ಖಚಿತ ಮಾಹಿತಿ ಪಡೆದ ಹುಣಸೂರು ಇನ್ಸ್ ಪೆಕ್ಟರ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ ಮೂರು ನಕ್ಷತ್ರ ಆಮೆಗಳು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇವರು ಇಂತಹ ಅನೇಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    ಹೈದರಾಬಾದ್: ಅಕ್ರಮವಾಗಿ 1,125 ನಕ್ಷತ್ರ ಆಮೆಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ಈ ಆಮೆಗಳನ್ನು ಅಕ್ರಮವಾಗಿ 3 ಆರೋಪಿಗಳು ಕಳ್ಳಸಾಗಾಣೆ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

    ಆರೋಪಿಗಳಿಂದ ಸದ್ಯ ವಶಕ್ಕೆ ಪಡೆದ ಆಮೆಗಳನ್ನು ಅರಣ್ಯ ಇಲಾಖೆ ಗೆ ವಶಕ್ಕೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಸಂಪೂರ್ಣ ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

    ಸ್ಟಾರ್ ಆಮೆ ಭಾರತದಲ್ಲಿ ದೊರೆಯುವ ಅಪರೂಪದ ಜಾತಿಗೆ ಸೇರಿದಾಗಿದ್ದು, ಕಾಳಸಂತೆಯಲ್ಲಿ ಇವುಗಳಿಗೆ ಹೆಚ್ಚಿನ ಲಕ್ಷ ರೂ.ಗಳಲ್ಲಿ ಬೆಲೆ ಇರುವುದರಿಂದ ಇತ್ತೀಚೆಗೆ ಇವುಗಳ ಕಳ್ಳಸಾಗಾಣೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆಮೆಗಳನ್ನು ಮನೆಯಲ್ಲಿ ಸಾಕಾಣೆ ಮಾಡಿದರೆ ಅದೃಷ್ಟ ಬರುತ್ತದೆ ಎಂಬ ಮೂಢ ನಂಬಿಕೆಯೂ ಕಳ್ಳಸಾಗಾಣೆಗೆ ಕಾರಣವಾಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲೂ ನಕ್ಷತ್ರ ಆಮೆಗಳಿಗೆ ಭಾರೀ ಬೇಡಿಕೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೂಢನಂಬಿಕೆ ಹೆಸರಲ್ಲಿ ಕಳ್ಳಸಾಗಾಣೆ- ದೇಶದಲ್ಲಿ ಆಮೆಗಳ ಸ್ಲಗ್ಮಿಂಗ್‍ಗೆ ಮಾಸ್ಟರ್‍ಮೈಂಡ್ ಬೆಂಗ್ಳೂರು!

    ಮೂಢನಂಬಿಕೆ ಹೆಸರಲ್ಲಿ ಕಳ್ಳಸಾಗಾಣೆ- ದೇಶದಲ್ಲಿ ಆಮೆಗಳ ಸ್ಲಗ್ಮಿಂಗ್‍ಗೆ ಮಾಸ್ಟರ್‍ಮೈಂಡ್ ಬೆಂಗ್ಳೂರು!

    ಬೆಂಗಳೂರು: ನಗರದಲ್ಲಿ ಅದೃಷ್ಟದ ಹೆಸರಿನಲ್ಲಿ ಆಮೆಗಳ ಅಕ್ರಮ ಸಾಗಾಟ ಮಾಡುತ್ತಿರುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಬಾಯಿ ಬಾರದ ಮೂಕ ಪ್ರಾಣಿಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹಿಂಸಿಸುತ್ತಾನೆ, ಕೊಲ್ಲುತ್ತಾನೆ. ಅದ್ರಲ್ಲೂ ಈಗ ಅದೃಷ್ಟ ದುರಾದೃಷ್ಟದ ಮೂಢನಂಬಿಕೆಗೆ ಬಲಿಯಾಗುತ್ತಿರೋದು ಅಪರೂಪದ ನಕ್ಷತ್ರ ಆಮೆ.

    ಹೌದು. ವನ್ಯಜೀವಿ ಘಟಕದ ಸಾಥ್ ನೊಂದಿಗೆ ರಹಸ್ಯ ಕಾರ್ಯಾಚಾರಣೆಯ ವೇಳೆ ಇಡೀ ಭಾರತದಲ್ಲಿ ಆಮೆಗಳ ಸ್ಲಗ್ಮಿಂಗ್‍ಗೆ ಮಾಸ್ಟರ್ ಮೈಂಡ್ ಬೆಂಗಳೂರಿನ ಕೆಆರ್ ರಸ್ತೆಯ ಯುಮಿನೋಪೆಟ್ ಶಾಪ್ ಅನ್ನೋದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಖರೀದಿಯ ಸೋಗಿನಲ್ಲಿ ನಮಗೊಂದು ನಕ್ಷತ್ರ ಆಮೆ ಬೇಕು ಅಂತ ಡೀಲ್‍ಗಿಳಿದಾಗ, ನಾಲ್ಕು ಸಾವಿರಕ್ಕೆ ಚೌಕಾಸಿ ಮಾಡಿ ಪುಟ್ಟದೆರಡು ಆಮೆಗಳನ್ನು ನೀಡಿದ್ದಾರೆ. ಹೀಗೆ ಆಮೆಗಳನ್ನು ತಮ್ಮ ಕೈಗೆ ನೀಡುತ್ತಿದ್ದಂತೆ ವನ್ಯಜೀವಿ ಘಟಕ ಅಧಿಕಾರಿಗಳು, ಅರಣ್ಯ ಇಲಾಖೆ ಸಿಐಡಿ ಸೆಲ್ ಅಧಿಕಾರಿಗಳು ಎಂಟ್ರಿ ಕೊಟ್ರು. ಬಳಿಕ ಇಡೀ ಶಾಪ್ ಜಾಲಾಡಿದಾಗ ಅಧಿಕಾರಿಗಳೇ ದಂಗಾದ್ರು.

    ನಕ್ಷತ್ರ ಆಮೆಯ ಬೆನ್ನು ಬಿದ್ದಿದ್ದ ಸಿಐಡಿ ಅಧಿಕಾರಿಗಳು, ಅಲ್ಲಿ ಬಿದ್ದಿದ್ದ ಹವಳದ ರಾಶಿ ಕಂಡು ಬೆಚ್ಚಿಬಿದ್ರು. ಅಲ್ಲಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 460 ಕೆಜಿ ಹವಳದ ಶೆಲ್‍ಗಳನ್ನು ಹುಡುಕಿ ಹೊರ ತೆಗೆದಿದ್ದಾರೆ. ಇದರ ಜೊತೆಗೆ ವೈಟ್ ಕ್ಯಾಟ್, ಇಲಿ, ರಾಶಿ ರಾಶಿಪುಟ್ಟ ಆಮೆ, ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರಿನಿಂದ ಚೀನಾಕ್ಕೂ ಆಮೆಗಳನ್ನು ಹಾಗೂ ಇತರ ಪ್ರಾಣಿಗಳನ್ನು ಸ್ಮಗ್ಲಿಂಗ್ ಮಾಡಲಾಗುವ ಕಿಂಗ್ ಫಿನ್ ಈ ಶಾಪ್ ಮಾಲೀಕ ಅನ್ನೋದು ತಿಳಿದು ಬಂದಿದೆ. ಸದ್ಯ ಇಲ್ಲಿ ಕೆಲಸ ಮಾಡುವ ಚಿನ್ನಾರಾಯ್ಡು, ಗಣೇಶನ್, ವೆಲ್ಲೈ ಕಣ್ಣು ಅನ್ನೋರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.