Tag: Star

  • ‘ನಕ್ಷತ್ರ’ವೊಂದಕ್ಕೆ ಸಾನ್ಯಾ ಅಯ್ಯರ್ ಹೆಸರು: ಇದು ಅಭಿಮಾನಿಗಳ ಗಿಫ್ಟ್

    ‘ನಕ್ಷತ್ರ’ವೊಂದಕ್ಕೆ ಸಾನ್ಯಾ ಅಯ್ಯರ್ ಹೆಸರು: ಇದು ಅಭಿಮಾನಿಗಳ ಗಿಫ್ಟ್

    ಕ್ಷತ್ರಗಳಿಗೆ (Stars)  ತಮ್ಮ ನೆಚ್ಚಿನ ತಾರೆಯರು ಹೆಸರು ಇಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಕನ್ನಡದಲ್ಲಿ ಇದನ್ನು ಮೊದಲು ಶುರು ಮಾಡಿದ್ದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು. ಪುನೀತ್ ಅಗಲಿದಾಗ ನಕ್ಷತ್ರವೊಂದಕ್ಕೆ ಪುನೀತ್ ಅವರ ಹೆಸರು ಇಡಲಾಗಿತ್ತು. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದಂದು ಹರೀಶ್ ಅರಸು ಅವರು ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದರು. ಇದೀಗ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಅಭಿಮಾನಿಗಳು ನಟಿಯ ಹೆಸರಿನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದಾರೆ.

    ಸಾನ್ಯಾ ಅಯ್ಯರ್ ಹುಟ್ಟು ಹಬ್ಬದಂದು ಅಭಿಮಾನಿಗಳು ಈ ಕೆಲಸ ಮಾಡಿದ್ದು, ಆ ವಿಡಿಯೋವನ್ನು ಸ್ವತಃ ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಕ್ಷತ್ರಗಳಿಗೆ ಹೆಸರು ಇಡುವುದು ನನಗೆ ಗೊತ್ತೇ ಇರಲಿಲ್ಲ. ಇದೇ ಮೊದಲ ಬಾರಿಗೆ ನನಗೆ ಗೊತ್ತಾಗಿದ್ದು ಎಂದು ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಇಂಥದ್ದೊಂದು ಕೆಲಸ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದಾರೆ.

    ಕಿರುತೆರೆಯ ಮುದ್ದಾದ ಗೊಂಬೆ ಎಂದೇ ಖ್ಯಾತರಾದವರು ಸಾನ್ಯಾ ಅಯ್ಯರ್ (Sanya Iyer). ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದಕ್ಕಾಗಿಯೇ ಬಾಲಿವುಡ್ (Bollywood) ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ (Daboo Ratnani) ಅವರಿಂದ ಫೋಟೋಶೂಟ್ (Photo Shoot) ಮಾಡಿಸಿಕೊಂಡಿದ್ದರು. ಬಿಳಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಥೇಟ್ ರಾಣಿಯಂತೆ ಕಂಡಿದ್ದರು.

    ಬಾಲಿವುಡ್ ನ ಖ್ಯಾತ ನಟ ನಟಿಯರ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಶ್ರೇಯಸ್ಸು ಡಬು ರತ್ನಾನಿಗೆ ಸಲ್ಲುತ್ತದೆ. ಅಮಿತಾಭ್ ಬಚ್ಚನ್ ರಿಂದ ಹಿಡಿದು ಈ ಹೊತ್ತಿನ ಯುವ ನಟರವರೆಗೂ ಡಬು ತಮ್ಮ ಕ್ಯಾಮೆರಾದಲ್ಲಿ ಅವರನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಕನ್ನಡದ ಹೆಸರಾಂತ ನಟ ಯಶ್ ಕೂಡ ಇವರ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸಾನ್ಯಾ ಕೂಡ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಈ ಫೋಟೋ ಶೂಟ್ ಬಳಿಕ ಅವರು ಕನ್ನಡ ಸಿನಿಮಾವೊಂದನ್ನು ಒಪ್ಪಿಕೊಂಡರು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ (Gauri) ಚಿತ್ರಕ್ಕೆ ಇವರೇ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಸುದೀಪ್ ಹೆಸರಿನಲ್ಲೂ ನಕ್ಷತ್ರ

    ಕಿಚ್ಚ ಸುದೀಪ್ (Sudeep) ಅವರ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಿತ್ತು ಅರಸು ಕ್ರಿಯೇಷನ್ಸ್ (Arasu Creation). ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ (Nakshatra) ನಾಮಕರಣ ಮಾಡಿದ್ದು, ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿತ್ತು. ಈ ಹಿಂದೆ ದಕ್ಷಿಣದ ಖ್ಯಾತ ನಟ ಮಹೇಶ್ ಬಾಬು ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಇಂಥದ್ದೊಂದು ನೋಂದಣಿ ಮಾಡಿಸಿದ್ದರು. ಅಲ್ಲದೇ, ಪುನೀತ್ ರಾಜ್ ಕುಮಾರ್ ಹೆಸರಿನಲ್ಲೂ ಒಂದು ನಕ್ಷತ್ರವಿದೆ. ಅಂಥದ್ದೊಂದು ಗೌರವ ಸುದೀಪ್ ಪಾಲಾಗಿತ್ತು. ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಕಾಣಸಿಗುವ ನಕ್ಷತ್ರವೊಂದಕ್ಕೆ ಸುದೀಪ್ ಹೆಸರು ಇಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯ ಚಿತ್ರಕ್ಕೆ ಪತ್ನಿಯೇ ನಿರ್ದೇಶಕಿ: ಇದು ‘ಸ್ಟಾರ್’ ದುನಿಯಾ

    ಪತಿಯ ಚಿತ್ರಕ್ಕೆ ಪತ್ನಿಯೇ ನಿರ್ದೇಶಕಿ: ಇದು ‘ಸ್ಟಾರ್’ ದುನಿಯಾ

    ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳು ಮಾಡಿದ ದಾಖಲೆ ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿಯ ಟೈಟಲ್ ಇರುವ ಮತ್ತೊಂದು ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ಅದರ ಹೆಸರು ಸ್ಟಾರ್ (Star). ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್, ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ, ಅನು (Anu) ಹಾಗೂ ಮಂಜು ವಿಜಯಸೂರ್ಯ (Manju Vijayasurya) ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ  ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಶರತ್ (Sarath) ಮಾತನಾಡಿ ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ, ಈ ಹಿಂದೆ ನಾನು ಪ್ಯಾಟಿ ಮಂದಿ ಕಾಡಿಗ್ ಬಂದ್ರು ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ, ಥೇಟರ್ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಬೇಸ್ ಸಬ್ಜೆಕ್ಟ್. ನಿರ್ದೇಶಕರು ತುಂಬಾ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದ್ದಾರೆ,  ವಿಭಿನ್ನವಾದ ಕಥೆ,  ಕ್ಲೈಮ್ಯಾಕ್ಸ್ ನೋಡಿ ಹೊರಬರುವಾದ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ, ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ  ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ನಂತರ ನಿರ್ದೇಶಕ ಮಂಜು ವಿಜಯಸೂರ್ಯ ಮಾತನಾಡಿ 16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ಬರವಣೆಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ.  ನಮ್ಮ ಚಿತ್ರದ ಟೈಟಲ್ಲೇ ಕಥೆ ಹೇಳುತ್ತದೆ. ಇದು ಅಂಡರ್‌ ವರ್ಲ್ಡ್ ಸಬ್ಜೆಕ್ಟ್. ಹೀರೋಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಅಂತ ಹೇಳಿದ್ದೇವೆ. ನ್ಯಾಚುರಲ್ ಆದಂಥ ಫೈಟ್ಸ್ ಚಿತ್ರದಲ್ಲಿರುತ್ತವೆ. ಇದೊಂದು ಲೋಕಲ್ ಸಬ್ಜೆಕ್ಟ್ ಆಗಿರುವುದರಿಂದ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಹೆಚ್ಚು ಫೋಕಸ್ ಮಾಡಿದ್ದೇವೆ. ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿಕೊಂಡು ಹೋಗುವ ಕಂಟೆಂಟ್ ಎಂದು ಹೇಳಿದರು.

    ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ನಟಿ ರಜತ ರಕ್ಷ (Rajata Raksha) ಮಾತನಾಡಿ ಈಹಿಂದೆ ಸದ್ದು ವಿಚಾರಣೆ ನಡೆಯುತ್ತಿದೆ, ತಲವಾರ್ ಸೇರಿ ಮೂರು  ಚಿತ್ರಗಳಲ್ಲಿ ನಟಿಸಿದ್ದೆ. ನಾಯಕಿಯಾಗಿ ಇದೇ ಮೊದಲ ಚಿತ್ರ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ, ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಛಾಯಾಗ್ರಾಹಕ ಪ್ರವೀಣ್ ಎಂ, ಪ್ರಭು ಮಾತನಾಡಿ ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾವನ್ನು  ಶೂಟ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ, ನಿರ್ದೇಶಕರ ಜೊತೆ ಈ ಹಿಂದೆ ಶಾರ್ಟ್ ಫಿಲಂಸ್ ಮಾಡಿದ್ದೆ ಎಂದರು. ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಜಾಸ್ತಿ ಇನ್‌ವಾಲ್ ಆಗಿದ್ದೇನೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ತೆರೆಮೇಲೆ ತರಬೇಕು ಎಂದುಕೊಂಡಿದ್ದೇವೆ ಎಂದರು. ಒಂದು ಪ್ಯಾಥೋ, ಒಂದು ಮಾಸ್ ಹಾಗೂ ಎರಡು ಲವ್ ಸಾಂಗ್ ಸೇರಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ.

  • ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ : ಎಲ್ಲೆಲ್ಲೂ ಕಾಂತಾರ

    ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ : ಎಲ್ಲೆಲ್ಲೂ ಕಾಂತಾರ

    ನ್ನಡದ ಕಾಂತಾರ (Kantara) ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರವನ್ನು ಮೆಚ್ಚಿದ್ದಾರೆ. ಆಯಾ ಭಾಷೆಯ ಬಹುತೇಕ ನಟರು ಸಿನಿಮಾ ಕುರಿತು ಮಾತನಾಡಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ (Rishabh Shetty) ನಟನೆಗೆ ಫಿದಾ ಆಗಿದ್ದಾರೆ. ಕನ್ನಡಕ್ಕೆ ಮಾತ್ರ ಸೀಮಿತರಾಗಿದ್ದ ರಿಷಬ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಬದಲಾಗಿದ್ದಾರೆ.

    ಮತ್ತೊಂದಡೆ ನಟ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ಇವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮೂಡಿಸಿದ್ದರೆ, ಮತ್ತೊಂದು ಕಡೆ ಇವರ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಇದು ಜೈ ಶಂಕರ್ ನಿರ್ದೇಶನ ಮಾಡಿ, ರಿಷಬ್ ನಿರ್ಮಾಣ ಮಾಡಿರುವ ಸಿನಿಮಾ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಬೂಸಾನ್ ನಲ್ಲಿ ನಡೆಯುತ್ತಿರುವ 27ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಶಿವಮ್ಮ’ (Shivamma) ಚಿತ್ರ ಆಯ್ಕೆಯಾಗಿತ್ತು. ಇದೀಗ ಸ್ಪರ್ಧೆಯಲ್ಲೂ ಅದು ಗೆದ್ದಿದ್ದು, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್ ವರ್ಕ್ ವಹಿವಾಟಿನಲ್ಲಿ ಹೂಡಿಕೆ ಮಾಡಿ, ಅದರಿಂದ ಪಡುವ ಸಂಕಟವನ್ನು ಕುರಿತಾದ ಸಿನಿಮಾವಿದು.

    ಈ ಸಿನಿಮಾ ವೀಕ್ಷಿಸಿದ ತೀರ್ಪುಗಾರರು ನಿರ್ದೇಶಕ ಜೈ ಶಂಕರ್ (Jai Shankar) ಅವರ ಪ್ರಯತ್ನವನ್ನು ಶ್ಲ್ಯಾಘಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಕಟ್ಟಿಕೊಟ್ಟ ನಿರ್ದೇಶಕರ ಜಾಣ್ಮೆಯನ್ನು ಕೊಂಡಾಡಿದ್ದಾರೆ. ಇಂತಹ ಸಿನಿಮಾಗೆ ರಿಷಬ್ ಹಣ ಹೂಡುವ ಮೂಲಕ ಹೊಸ ಹುಡುಗನ ಚಿತ್ರಕ್ಕೆ ಉತ್ತೇಜನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಭಾರತದ ಕ್ರಿಕೆಟ್ ತಂಡ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಈಗಾಗಲೇ ಹಲವು ಉದ್ಯಮಗಳಲ್ಲಿ ಹಣ ಹೂಡಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಸಿನಿಮಾ (Cinema) ಕ್ಷೇತ್ರಕ್ಕೂ ಅವರು ಕಾಲಿಟ್ಟಿದ್ದು, ದಕ್ಷಿಣದ ಸಿನಿಮಾಗಳತ್ತ ಒಲವು ತೋರಿದ್ದಾರೆ. ಈಗಾಗಲೇ ತಮ್ಮದೇ ಪ್ರೊಡಕ್ಷನ್ (Production) ಹೌಸ್ ಶುರು ಮಾಡಿರುವ ಧೋನಿ, ಮೊದಲು ತಮಿಳು ಚಿತ್ರಕ್ಕೆ ಹಣ ಹಾಕಲಿದ್ದಾರಂತೆ.

    ಧೋನಿ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವುದು ಹಲವು ದಿನಗಳಿಂದ ಕೇಳಿ ಬರುತ್ತಿರುವ ಸುದ್ದಿ. ಇದೀಗ ಆ ಸುದ್ದಿ ಪಕ್ಕಾ ಆಗಿದ್ದು, ತಮ್ಮ ಚೊಚ್ಚಲು ನಿರ್ಮಾಣದ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಇರಲಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ದಕ್ಷಿಣದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ಇಬ್ಬರು ಕಲಾವಿದರ ಜೊತೆ ಧೋನಿ ಮಾತನಾಡಿದ್ದು, ಅವರ ಹೆಸರನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಈ ಹಿಂದೆ ನಯನತಾರಾ ಸಿನಿಮಾಗಾಗಿ ಧೋನಿ ಹಣ ಹೂಡಲಿದ್ದಾರೆ ಎಂದು ಹೇಳಲಾಗಿತ್ತು. ಅದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವ ಮಾಹಿತಿಯೂ ಇತ್ತು. ಆದರೆ, ಆ ಸಿನಿಮಾ ಡ್ರಾಪ್ ಆದಂತೆ ಕಾಣುತ್ತಿದೆ. ಅಥವಾ ಅದು ಗಾಸಿಪ್ ಆಗಿರಬಹುದು.  ಇದೀಗ ಪಕ್ಕಾ ಸುದ್ದಿ ಬಂದಿದ್ದು, ಮಲ್ಟಿಸ್ಟಾರ್ ಸಿನಿಮಾ ಮೂಲಕ ಧೋನಿ ನಿರ್ಮಾಪಕರಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿಯೇ ಕೆಲವು ಮಾಹಿತಿಗಳನ್ನು ಅವರು ಹಂಚಿಕೊಳ್ಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಲೈವ್ ಶೋನಲ್ಲೇ ಮಾಜಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ

    ಲೈವ್ ಶೋನಲ್ಲೇ ಮಾಜಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ

    – ಕುಟುಂಬಸ್ಥರ ಮುಂದೆಯೇ ಮಹಿಳೆಯ ಮೇಲೆ ಹಲ್ಲೆ
    – 2 ವಾರಗಳಿಂದ ಆಸ್ಪತ್ರೆಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ

    ಬೀಜಿಂಗ್: ಚೀನಾದ ಸೋಶಿಯಲ್ ಮಿಡಿಯಾದ ಸ್ಟಾರ್ ಲೈವ್ ಶೋ ಮಾಡುವಾಗಲೇ ಆಕೆಯ ಮೇಲೆ ಮಾಜಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.

    ಲಾಮು ಮೃತ ಮಹಿಳೆ. ಈ ಘಟನೆ ಸೆಪ್ಟೆಂಬರ್‌ನಲ್ಲಿ ನಡೆದಿದೆ. ಲಾಮು ವಿಡಿಯೋ ಬ್ಲಾಗರ್ ಆಗಿದ್ದು, ಲೈವ್ ಶೋ ಮಾಡುವಾಗ ಆಕೆ ಮಾಜಿ ಪತಿ ಟ್ಯಾಂಗ್ ಏಕಾಏಕಿ ಮನೆಗೆ ನುಗ್ಗಿದ್ದನು. ನಂತರ ಆಕೆಯ ಕುಟುಂಬ ಸದಸ್ಯರ ಮುಂದೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು ಎಂದು ವರದಿಯಾಗಿದೆ.

    ಹಲ್ಲೆಯಿಂದ ಲಾಮು ಶೇ.90 ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಎರಡು ವಾರಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಲಾಮು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತ ಲಾಮು ಮಾಜಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

    ಮೃತ ಲಾಮು ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಹೀಗಾಗಿ ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಲಾಮು ಮಾಜಿ ಪತಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಲಾಮು ಜನಪ್ರಿಯ ಟಿಬೆಟಿಯನ್ ವಿಡಿಯೋ ಬ್ಲಾಗರ್ ಆಗಿದ್ದು, ಆಕೆ ಪಶ್ಚಿಮ ಚೀನಾದ ಸಿಚುವಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಳು. ಟಿಕ್‍ಟಾಕ್ ಮಾದರಿಯ ಚೀನೀ ಆವೃತ್ತಿಯಾದ ಡೌಯಿನ್‍ನಲ್ಲಿ ಲಾಮು ಖಾತೆಯನ್ನು ಹೊಂದಿದ್ದಳು. ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಲಾಮು 7,82,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು.

    ಲಾಮು ಸೆಪ್ಟೆಂಬರ್ 14 ರಂದು ಕೊನೆಯ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಳು. ಆದರೆ ಮಾಜಿ ಪತಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಬಗ್ಗೆ ತಿಳಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಲಾಮುವಿನ ಮಾಜಿ ಪತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಾಹಿಸಿದ್ದಾರೆ.

  • ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಕ್ಯಾರೊಲಿನಾ ಮರಿನ್ ವಿರುದ್ಧ ಸೈನಾ ಸೆಣಸಿದ್ರು. ಆದರೆ ಮರಿನ್ ಗಾಯಗೊಂಡು ಮೈದಾನದಿಂದ ಹೊರ ನಡೆದ ಪರಿಣಾಮ ಸೈನಾ ಜಯ ಪಡೆದರು.

    ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ಮರಿನ್ 10-4 ರಿಂದ ಮುನ್ನಡೆ ಪಡೆದಿದ್ರು, ಈ ವೇಳೆ ರಿಟರ್ನ್ ಮಾಡುವ ವೇಳೆ ಮೊಣಕಾಲಿಗೆ ಗಾಯವಾಗಿದೆ. ಗಾಯಗೊಂಡಿದ್ದರಿಂದ ಕಣ್ಣೀರಿಡುತ್ತಾಲೇ ಮೈದಾನದಿಂದ ಮರಿನ್ ಹೊರ ನಡೆದರು. ಇದರೊಂದೊಗೆ ಸೈನಾರನ್ನು ಜಯಶಾಲಿ ಎಂದು ಘೋಷಿಸಲಾಯಿತು.

    ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಹಿ ಬಿಂಗ್ ಜಿಯಾವೊರನ್ನು ಮಣಿಸುವ ಮೂಲಕ ಸೈನಾ ಫೈನಲ್ ಪ್ರವೇಶ ಮಾಡಿದ್ದರು. ಉಳಿದಂತೆ ಮರಿನ್ ಚೀನಾದ ಚೆನ್ ಯುಫೆಇ ಅವರಿಗೆ ಸೋಲುಣಿಸಿ ಫೈನಲಿಗೆ ಆಗಮಿಸಿದ್ದರು.

    ಸದ್ಯ ವರ್ಷದ ಆರಂಭದಲ್ಲೇ ಇಂಡೋನೇಷಿಯಾ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ಶುಭಾರಂಭ ಮಾಡಿದ್ದಾರೆ. 28 ವರ್ಷದ ಸೈನಾ ನೆಹ್ವಾಲ್ 2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv