Tag: Staircase

  • ಚುನಾವಣೆ ಹೊತ್ತಲ್ಲಿ ವಾಸ್ತು ಮೊರೆ ಹೋದ ದಕ್ಷಿಣ ಕನ್ನಡ ಕಾಂಗ್ರೆಸ್

    ಚುನಾವಣೆ ಹೊತ್ತಲ್ಲಿ ವಾಸ್ತು ಮೊರೆ ಹೋದ ದಕ್ಷಿಣ ಕನ್ನಡ ಕಾಂಗ್ರೆಸ್

    ಮಂಗಳೂರು: ಕರಾವಳಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ (Congress) ಈಗ ವಾಸ್ತು (Vastu) ಮೊರೆ ಹೋಗಿದೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಕಚೇರಿ ವಾಸ್ತು ಸರಿಪಡಿಸಲು ಮುಂದಾಗಿದ್ದು, 8 ಮೆಟ್ಟಿಲಿದ್ದ ಕಡೆ 9 ಮೆಟ್ಟಿಲು (Staircase) ಇರುವಂತೆ ಕಾಮಗಾರಿ ನಡೆಸಲಾಗುತ್ತಿದೆ.

    ಜಿಲ್ಲೆಯ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ಕಚೇರಿಯ ಮುಂಭಾಗದ ಮೆಟ್ಟಿಲಿನ ನವೀಕರಣ ಕಾಮಗಾರಿ ಮಾಡಲಾಗುತ್ತಿದೆ. ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣವಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿಂದೆ ಪ್ರವೇಶ ದ್ವಾರದಲ್ಲಿ 8 ಮೆಟ್ಟಿಲುಗಳಿದ್ದವು. ಆದರೆ 8 ಮೆಟ್ಟಿಲುಗಳಿರುವುದು ದೋಷ. ವಾಸ್ತು ಪದ್ದತಿ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು. ಇದಕ್ಕಾಗಿ 9ನೇ ಮೆಟ್ಟಿಲು ಸೇರ್ಪಡೆಗೊಳಿಸಲು ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ, ಮಹಾ ಸಿಎಂ ಜೊತೆ ಶಾ ಚರ್ಚೆ – ಶೀಘ್ರವೇ ತಟಸ್ಥ ಸಮಿತಿ ರಚನೆ

    ಈ ವಾಸ್ತು ವಾದವನ್ನು ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದಾರೆ. ಮೆಟ್ಟಿಲು ಹತ್ತಲು ಸುಲಭವಾಗಲು ಹಾಗೂ ವಾಟರ್ ಟ್ಯಾಂಕ್ ದುರಸ್ಥಿಗಾಗಿ ಈ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    2016ರಲ್ಲಿ ಈ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋತಿತ್ತು. 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತ್ತು. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ಮಾಡಲಾಗುತ್ತಿದೆ ಎಂದು ಭಾರೀ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಹೈಕಮಾಂಡ್‌ ಕ್ಲಾಸ್‌ – ಕೊಪ್ಪಳ ಕಾರ್ಯಕ್ರಮಕ್ಕೆ ಬಿಜೆಪಿಯಿಂದ ಬಿಸ್‌ವೈಗೆ ಆಹ್ವಾನ

    Live Tv
    [brid partner=56869869 player=32851 video=960834 autoplay=true]

  • ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    ಚಾಮರಾಜನಗರ: ಮಾದಪ್ಪನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ದಟ್ಟಾರಣ್ಯದಲ್ಲಿ ಕಲ್ಲುಮುಳ್ಳಿನ ಹಾದಿ ನಡುವೆಯೂ ಮಹದೇಶ್ವರನ ದರ್ಶನ ಮಾಡುತ್ತಾರೆ. ಇದನ್ನರಿತ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಗುಡ್ ನ್ಯೂಸ್‍ವೊಂದನ್ನು ನೀಡುತ್ತಿದೆ.

    ಹೌದು ರಾಜ್ಯದಲ್ಲಿರುವ ದೇಗುಲಗಳಲ್ಲಿ ಅತೀ ಹೆಚ್ಚು ಆದಾಯ ಬರುವ ಎರಡನೇ ದೇವಾಲಯ ಎಂದರೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದೆ.

    ಮಲೆ ಮಹದೇಶ್ವರ ಪ್ರಾಧಿಕಾರ ಈಗಾಗಲೇ ಮೆಟ್ಟಿಲು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣವಾಗುತ್ತಿದೆ. ಈಗಾಗಲೇ 2 ಕಿಮೀ ನಷ್ಟು ಮೆಟ್ಟಿಲು ಮಾಡುವ ಕೆಲಸ ನಡೆದಿದೆ. ಇನ್ನೆರಡು ತಿಂಗಳಲ್ಲಿ ಮೆಟ್ಟಿಲು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಈ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಭಕ್ತರೊಬ್ಬರು, ಈ ಕಾಡಿನಲ್ಲಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಭಕ್ತರಿಗೂ ಸಂತಸ ತಂದಿದೆ. ಇಷ್ಟು ವರ್ಷ ನಾವು ಕಾಡಿನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ನಡೆಯುತ್ತಿದ್ದೆವು. ಈ ವೇಳೆ ಕಲ್ಲು ಬಡಿದು ಕಾಲಿಗೆ ಗಾಯವಾಗಿರುವ ಉದಾಹರಣೆ ಸಹ ಇವೆ. ಸದ್ಯ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ನಾವು ಸಹ ಆರಾಮಾಗಿ ಕಾಡಿನ ಮಧ್ಯೆ ನಡೆದು ಹೋಗಬಹುದು ಎಂದು ಹೇಳುತ್ತಾರೆ.

    ಒಟ್ಟಾರೆ ಭಕ್ತರ ಅನುಕೂಲಕ್ಕಾಗಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಮಾದಪ್ಪನ ಭಕ್ತರಿಗೆ ಖುಷಿ ನೀಡಿದೆ. ಇಷ್ಟು ದಿನ ಕಾಡಿನ ದುರ್ಗಮ ಹಾದಿಯಲ್ಲಿ ನಡೆದು ಮಾದಪ್ಪನ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಕಾಡಿನ ನಡುವೆ ಸಹಾ ಸುಗಮ ಹಾದಿಯಲ್ಲಿ ಸಾಗಬಹುದಾಗಿದೆ. ಇದನ್ನೂ ಓದಿ: ಪಿಎಸ್‍ಐ ಆಯ್ತು, ಇದೀಗ ಕೆಪಿಟಿಸಿಎಲ್ ಎಕ್ಸಾಂನಲ್ಲಿ ಗೋಲ್‍ಮಾಲ್

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ

    ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ

    ನವದೆಹಲಿ: ಸ್ನೇಹಿತನ ತಲೆಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಸಂದೀಪ್ ಸಿಂಗ್ ಅಹ್ಲುವಾಲಿಯಾ (52) ಮೃತನಾಗಿದ್ದಾನೆ. 54 ವರ್ಷದ ಮಂಗಲ್ ಸಿಂಗ್ ಜಗಳಕ್ಕಾಗಿ ತನ್ನ ಸ್ನೇಹಿತನನ್ನು ಕೊಂದಿದ್ದಾನೆ. ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ ಸಂದೀಪ್ ವಾಸಿಸುತ್ತಿದ್ದ ಈತ ಸ್ನೇಹಿತನ ಸಿಟ್ಟಿನಿಂದ ಪ್ರಾಣ ಬಿಟ್ಟಿದ್ದಾನೆ.

    ಸಂದೀಪ್ ಪತ್ನಿ ಮಂಜಿತ್ ಕೌರ್ ನೀಡಿರುವ ಹೇಳಿಕೆಯಂತೆ, ಪತಿ ಮಂಗಲ್ ಸಿಂಗ್ ಜೊತೆಗೆ ಮನೆಯಿಂದ ಹೊರ ಹೋಗಿದ್ದರು. ಮನೆಗೆ ವಾಪಸ್ ಬಂದಿಲ್ಲ. ಆಗ ನಾನು ಪತಿಯ ಫೋನ್‍ಗೆ ಕರೆ ಮಾಡಿದೆ. ಮಂಗಲ್ ಫೋನ್ ಸ್ವೀಕರಿಸಿ ಸಂದೀಪ್ ಇರುವ ವಿಳಾಸವನ್ನು ತಿಳಿಸಿದರು. ನಾನು ಅಲ್ಲಿ ಹೋಗಿ ನೋಡಿದಾಗ ಪತಿಗೆ ಎಡ ಕಿವಿ, ಮೂಗು ಮತ್ತು ತಲೆಗೆ ಗಾಯಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಅವರು ಮೃತಪಟ್ಟಿದ್ದಾರೆ. ಆದರೆ ಅವರು ಸಾಯುವ ಮುನ್ನ ನಡೆದ ಘಟನೆಯನ್ನು ನನ್ನ ಬಳಿ ಹೇಳಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಇದನ್ನೂ ಓದಿ: ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ

    POLICE JEEP

    ಪತಿ ಸಾವಿನ ನಂತರ ಮಂಜಿತ್ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ದೆಹಲಿ ಪೆÇಲೀಸರು ಮಂಗಲ್‍ನನ್ನು ಪತ್ತೆಹಚ್ಚಿದರು. ಮಂಗಲ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾವು ಕುಡಿದಿದ್ದೇವು. ನಮ್ಮಿಬ್ಬರ ನಡುವೆ ಕೆಲವು ವಿವಾದಗಳಿವೆ. ಸಂದೀಪ್ ನನ್ನನ್ನು ನಿಂದಿಸಲು ಪ್ರಾರಂಭಿಸಿದ್ದನು. ಇದನ್ನು ತಡೆದುಕೊಳ್ಳಲಾಗದೆ ಆತನ ಮೇಲೆ ಇಕ್ಕಳದಿಂದ ಹಲ್ಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

     

  • ಮೆಟ್ಟಿಲಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಬೆಕ್ಕು- ವಿಡಿಯೋ ನೋಡಿ

    ಮೆಟ್ಟಿಲಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಬೆಕ್ಕು- ವಿಡಿಯೋ ನೋಡಿ

    ಬೋಗೋಟಾ: ತನ್ನ ಒಡೆಯನಿಗಾಗಿ ನಾಯಿಗಳು ಮಾಡಿದ ಸಾಹಸಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಬೆಕ್ಕು ಮಗುವನ್ನು ಮೆಟ್ಟಿಲ ಕೆಳಗೆ ಬೀಳುವುದನ್ನು ತಡೆಯಲು ಹರಸಾಹಸ ಮಾಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ.

    ಹಿಂದೆ ನಾಯಿಯೊಂದು ಸಣ್ಣ ಹುಡುಗಿಯನ್ನು ಕಾಪಾಡಲು ಆಕೆಯೆ ಉಡುಪನ್ನು ತನ್ನ ಕೋರೆ ಹಲ್ಲಿನಿಂದ ಎಳೆದು ನೀರಿಗೆ ಬೀಳುವುದರಿಂದ ತಡೆದಿತ್ತು. ಮಾತ್ರವಲ್ಲದೆ ಜಮ್ಮು ಕಾಶ್ಮೀರದಲ್ಲಿ ಭೂಕುಸಿತದ ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸಿಆರ್‍ಪಿಎಫ್ ನಾಯಿ ಪತ್ತೆ ಹಚ್ಚಿ ರಕ್ಷಿಸಲು ಸಹಾಯ ಮಾಡಿತ್ತು. ಇದೀಗ ಬೆಕ್ಕು ಸಹ ತನ್ನ ಜಾಗರೂಕತೆಯಿಂದ ಮಗುವನ್ನು ರಕ್ಷಿಸುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಬೆಕ್ಕು ಮಗುವಿನ ಮೇಲೆ ಹಾರಿ ಮೆಟ್ಟಿಲುಗಳಿಂದ ಮಗು ಬೀಳದಂತೆ ತಡೆಯುವ ಮೂಲಕ ಹೀರೋ ಆಗಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಲೋರ್ ಅಲ್ವಾರೆಜ್ ಎಂಬ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ 9.44 ಲಕ್ಷ ವ್ಯೂವ್ಸ್ ಹಾಗೂ 32 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳನ್ನು ಪಡೆಯುವ ಮೂಲಕ ವೈರಲ್ ಆಗಿದೆ.

    ವಿಡಿಯೋದಲ್ಲಿ ಕೆಂಪು ಬಟ್ಟೆ ಧರಿಸಿದ ಮಗು ನೆಲದ ಮೇಲೆ ತೆವಳುತ್ತಿದ್ದಾಗ ಬೆಕ್ಕು ಹತ್ತಿರದ ಮಂಚದ ಮೇಲೆ ಕುಳಿತಿತ್ತು. ಆಟವಾಡುತ್ತ ಮಗು ಮೆಟ್ಟಿಲುಗಳ ಬಳಿ ತೆರಳುತ್ತದೆ. ಅಪಾಯವನ್ನು ಗಮನಿಸಿದ ಬೆಕ್ಕು ತಕ್ಷಣ ಮಗುವಿನ ಮೇಲೆ ನೆಗೆಯುತ್ತದೆ. ಮಗು ಹಿಂದಕ್ಕೆ ತಿರುಗುವವರೆಗೂ ಬೆಕ್ಕು ಮಗುವಿನ ಮೇಲೆಯೇ ಕುಳಿತಿರುತ್ತದೆ.

    ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಕಮೆಂಟ್ ಮಾಡಿದ್ದು, ಕೆಲವರು ಬೆಕ್ಕು ಅದ್ಭುತ ಸಾಕುಪ್ರಾಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮಗುವಿನ ಪೋಷಕರ ನಿರ್ಲಕ್ಷ್ಯ ಎಂದು ಟೀಕಿಸಿದ್ದಾರೆ.

  • ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಫಿಟ್ ಇಂಡಿಯಾ ಅಭಿಯಾನ ಚಾಲನೆ ನೀಡಿ ರಾಷ್ಟ್ರದ ಜನರು ಸದೃಢರಾಗುವಂತೆ ಕೋರಿಕೊಂಡಿದ್ದಾರೆ.

    ಇಂದು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲುಗಳನ್ನು ಬಳಸಿ ಫಿಟ್ ಆಗಿರಬೇಕು ಎಂದು ಕರೆಕೊಟ್ಟರು.

    ಸಚಿವರು, ಶಾಲಾ ಮಕ್ಕಳು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದು ಬೋರ್ಡ್ ರೂಮ್ ಆಗಿರಲಿ ಬಾಲಿವುಡ್ ಆಗಿರಲಿ ನಾವು ಫಿಟ್ ಆಗಿರಬೇಕು. ನಮಗೆ ಫಿಟ್ ಆದ ದೇಹವಿದ್ದರೆ. ಮನಸ್ಸು ನಿಯಂತ್ರಣದಲ್ಲಿರುತ್ತದೆ. ಈ ಫಿಟ್ ಇಂಡಿಯಾ ಚಾಲೆಂಜ್ ಅನ್ನು ಎಲ್ಲರೂ ಸ್ವೀಕರಿಸಬೇಕು. ‘ಸ್ವಚ್ಛ ಭಾರತ್’ ಅಭಿಯಾನದಂತೆ ಇದನ್ನು ಎಲ್ಲರೂ ಸ್ವೀಕಾರ ಮಾಡಿ ಎಂದು ಜನರಲ್ಲಿ ಮೋದಿ ಕೋರಿಕೊಂಡರು.

    ನಾವು ಫಿಟ್‍ನೆಸ್ ಅನ್ನು ಜೀವನದ ಮಂತ್ರವಾಗಿ ಮಾಡಿಕೊಳ್ಳಬೇಕು. ನಾವು ಆಹಾರ ಪದ್ಧತಿ ಮತ್ತು ದೇಹದ ಫಿಟ್‍ನೆಸ್ ಬಗ್ಗೆ ಮಾತನಾಡುತ್ತೇವೆ ಆದರೆ ಊಟದ ಟೇಬಲ್ ಬಳಿ ಬಂದಾಗ ನಾವು ಅದನ್ನು ಪಾಲಿಸುವುದಿಲ್ಲ. ಈಗಿನ ನಮ್ಮ ಯಂತ್ರಚಾಲಿತ ಜೀವನ ಶೈಲಿಗೆ ನಮ್ಮ ತಂತ್ರಜ್ಞಾನವು ಬಹುದೊಡ್ಡ ಕಾರಣ. ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ದಿನದಲ್ಲಿ 8-10 ಕಿ.ಮೀ ನಡೆಯುತ್ತಿದ್ದ, ಸೈಕ್ಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದನು. ಆದರೆ ಈಗ ತಂತ್ರಜ್ಞಾನದಿಂದ ಈ ಎಲ್ಲಾ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ನಾವು ಈಗ ಕಡಿಮೆ ನಡೆಯುತ್ತೇವೆ ಎಂದು ಮೋದಿ ಹೇಳಿದರು.

    ತಮ್ಮ ದೈನಂದಿನ ದಿನಚರಿಯಲ್ಲಿ ದಿನ ಯೋಗ ಮಾಡುವ ಮೋದಿ ಅವರು ಜನರು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾವು ಹಿಂದಿನ ಕಾಲದಲ್ಲಿ 60 ವರ್ಷ ಆದ ನಂತರ ಹೃದಯಾಘಾತವಾಗುತ್ತದೆ ಎಂದು ಕೇಳಿದ್ದವು. ಆದರೆ ಈಗ 30, 40 ವರ್ಷಕ್ಕೆ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ನಮ್ಮ ಜೀವನದಲ್ಲಿ ನಾವು ಮಾಡಿಕೊಂಡ ಸಣ್ಣ ಬದಲಾವಣೆ ನಮ್ಮ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

    ಈ ಫಿಟ್ ಇಂಡಿಯಾ ಚಳುವಳಿಯು ರಾಷ್ಟ್ರೀಯ ಕ್ರೀಡಾದಿನವನ್ನು ಸೂಚಿಸುತ್ತದೆ. ರಾಷ್ಟ್ರದ ಜನರ ದೈನಂದಿನ ದಿನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.