Tag: Stage

  • ವಿಡಿಯೋ: ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗಲ್ಲವೆಂದ ಫಾದರ್ – ವೇದಿಕೆಯಿಂದ ತಳ್ಳಿದ ಮಹಿಳೆ

    ವಿಡಿಯೋ: ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗಲ್ಲವೆಂದ ಫಾದರ್ – ವೇದಿಕೆಯಿಂದ ತಳ್ಳಿದ ಮಹಿಳೆ

    ಬ್ರೆಸಿಲಿಯಾ: ಕಾರ್ಯಕ್ರಮವೊಂದರ ನೇರಪ್ರಸಾರದ ವೇಳೆ ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗಲ್ಲ ಎಂದ ಫಾದರ್ ನನ್ನು ಮಹಿಳೆಯೊಬ್ಬಳು ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆಯೊಂದು ಬ್ರೆಜಿಲ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

    ಧಾರ್ಮಿಕ ವಸ್ತುಗಳನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲು ಹೆಸರುವಾಸಿಯಾದ ಬ್ರೆಜಿಲ್ ಕ್ಯಾಥೋಲಿಕ್ ಸಮುದಾಯದ ಕ್ಯಾನೋ ನೋವಾ ಕಚೇರಿಯಲ್ಲಿ ಪಾದ್ರಿ ಮಾರ್ಸೆಲೊ ರೊಸ್ಸಿ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರು ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ಮಹಿಳೆ ಪಾದ್ರಿಯನ್ನು ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ.

    ವೈರಲ್ ಆಗಿರುವ 7 ಸೆಕೆಂಡ್ ವಿಡಿಯೋದಲ್ಲಿ ಮಹಿಳೆ ಪಾದ್ರಿಯ ಬಲಗಡೆಯಿಂದ ಓಡಿ ಬಂದು ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ. ಮಹಿಳೆಯ ವರ್ತನೆ ನೋಡಿ ಅಲ್ಲಿದ್ದ ಪ್ರೇಕ್ಷಕರು ಶಾಕ್ ಆಗಿದ್ದರು. ಪಾದ್ರಿ ಕೆಳಗೆ ಬೀಳುವ ಸದ್ದು ಮೈಕ್‍ನಲ್ಲಿ ಜೋರಾಗಿ ಕೇಳಿಸುತ್ತಿದ್ದಂತೆಯೇ ಮಹಿಳೆ ನಗಲು ಶುರು ಮಾಡಿದ್ದಾಳೆ. ಪಾದ್ರಿ ಯುವ ಶಿಬಿರದಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಅಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಪಾದ್ರಿ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.

    ಪಾದ್ರಿ ತಮ್ಮ ಧರ್ಮೋಪದೇಶವನ್ನು ಪೂರ್ಣಗೊಳಿಸಲು ಮತ್ತೆ ವೇದಿಕೆಗೆ ಮರಳಿದರು. ವೇದಿಕೆಗೆ ಮರಳಿದ ನಂತರ ಪಾದ್ರಿ ಮಹಿಳೆಯ ಹಲ್ಲೆ ಬಗ್ಗೆ ತಮ್ಮ ಧರ್ಮೋಪದೇಶದಲ್ಲಿ ಉಲ್ಲೆಖಿಸಿದ್ದರು. ಇದು ನನಗೆ ನೋವುಂಟು ಮಾಡಿದೆ. ಹೆಚ್ಚು ಗಮನ ಕೊಡಿ. ನಾನು ನೋವಿನ ಬಗ್ಗೆ ಮಾತನಾಡಲು ಮುಂದಾಗಿದ್ದೆ. ಆದರೆ ಇದು ಈ ರೀತಿ ಆಗುತ್ತದೆ ಎಂದು ನಾನು ಕಲ್ಪನೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

    32 ವರ್ಷದ ಮಹಿಳೆ ಯುವ ಶಿಬಿರದಲ್ಲಿ ಭಾಗವಹಿಸಲು ರಿಯೋ ಡಿ ಜನೈರೊದಿಂದ ಬಂದಿದ್ದಳು. ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, 94 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ.

    https://twitter.com/zemunna/status/1151930998768226304?ref_src=twsrc%5Etfw%7Ctwcamp%5Etweetembed%7Ctwterm%5E1151930998768226304&ref_url=https%3A%2F%2Fwww.timesnownews.com%2Fthe-buzz%2Farticle%2Fvideo-priest-says-fat-women-wont-go-to-heaven-woman-pushes-him-off-stage-during-live-stream%2F456564

  • ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ಲಕ್ನೋ: ಬಿಜೆಪಿ ಆಯೋಜಿಸಿದ್ದ ‘ಹೋಳಿ ಮಿಲನ್” ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು ಬಿದ್ದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಅವಿದೇಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವೇದಿಕೆ ಕುಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಕಾರ್ಯಕ್ರಮ ನಡೆಯುವಾಗ ಹಲವು ಜನ ವೇದಿಕೆ ಮೇಲೆ ಹತ್ತಿದ್ದಾರೆ. ಪರಿಣಾಮ ಭಾರ ಹೆಚ್ಚಾಗಿ ವೇದಿಕೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಹಲವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಸಿಎಂ ಕಾರ್ಯಕ್ರಮ- ವೇದಿಕೆಯಲ್ಲಿ ಮೊದ್ಲ ಸಾಲಿನಲ್ಲೇ ಕುಳಿತ ಸೂರಜ್ ರೇವಣ್ಣ

    ಸಿಎಂ ಕಾರ್ಯಕ್ರಮ- ವೇದಿಕೆಯಲ್ಲಿ ಮೊದ್ಲ ಸಾಲಿನಲ್ಲೇ ಕುಳಿತ ಸೂರಜ್ ರೇವಣ್ಣ

    – ರಾಜ್ಯಮಟ್ಟದ ಅಧಿಕಾರಿಗಳ ಮಧ್ಯೆ ಕುಳಿತ ಸೂರಜ್

    ಹಾಸನ: ಸೋಮವಾರ ಹಾಸನದಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಚಿವ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರಿಗೆ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸನ ನೀಡಿದ್ದು, ಈ ವಿಷಯ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸೌಟು ಹಿಡಿದ ಭವಾನಿ ರೇವಣ್ಣ!

    ಈ ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ವೇದಿಕೆಗೆ ಆಗಮಿಸಿದ ಸಚಿವ ರೇವಣ್ಣನವರು ತಮ್ಮ ಪುತ್ರ ಸೂರಜ್‍ಗೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಆಸನವನ್ನು ವ್ಯವಸ್ಥೆ ಮಾಡಿಕೊಟ್ಟರು.

    ಯಾವುದೇ ಚುನಾಯಿತ ಪ್ರತಿನಿಧಿಯೂ ಅಲ್ಲ ಆದರೂ ವೇದಿಕೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೂರಜ್ ವೇದಿಕೆಯಲ್ಲಿ ಕುಳಿತು ಗಮನ ಸೆಳೆದರು. ಒಂದು ಕಡೆ ಪೊಲೀಸ್ ಐಜಿ ಮತ್ತೊಂದೆಡೆ ಎಸ್‍ಪಿ ನಡುವೆ ಸೂರಜ್ ಕುಳಿತುಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇದಿಕೆಯಲ್ಲೇ ಸಚಿವ ರೇವಣ್ಣ, ಪ್ರೀತಂಗೌಡ ವಾಕ್ಸಮರ..!

    ವೇದಿಕೆಯಲ್ಲೇ ಸಚಿವ ರೇವಣ್ಣ, ಪ್ರೀತಂಗೌಡ ವಾಕ್ಸಮರ..!

    ಹಾಸನ: 70ನೇ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲೇ ಲೋಕೋಪಯೋಗಿ ಸಚಿವ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ಮಧ್ಯೆ ವಾಗ್ವಾದ ನಡೆದಿದೆ.

    ಹಾಸನ ಬಿ.ಎಂ. ರಸ್ತೆಯ ಅಗಲೀಕರಣ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನನ್ನ ಗಮನಕ್ಕೆ ಬಾರದೆ ರಸ್ತೆ ಕಾಮಗಾರಿ ಮಾಡಿದ್ದೀರಾ ಎಂದು ಶಾಸಕ ಪ್ರೀತಂಗೌಡ ಅವರು ವೇದಿಕೆಯಲ್ಲೇ ಸಚಿವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಚಿವರು ನಂಗೇನೂ ಗೊತ್ತಿಲ್ಲ ಎಲ್ಲ ಡಿಸಿ ಮೇಡಂ ಮಾಡಿರೋದು. ಹೋಗಿ ಅವರನ್ನೇ ಕೇಳು ಎಂದು ಹೇಳಿದ್ದಾರೆ.

    ಇದರಿಂದ ಸಿಡಿಮಿಡಿಗೊಂಡ ಶಾಸಕರು, ನಿಮ್ಮ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಹಕ್ಕುಚ್ಯುತಿ ಆದ್ರೆ ಏನು ಅಂತಾ ಮೊದಲು ತಿಳಿದುಕೊಂಡು ಬಾ ಎಂದು ಶಾಸಕರಿಗೆ ತಿರುಗೇಟು ನೀಡಿದ್ದಾರೆ.

    https://www.youtube.com/watch?v=O_eS2ctIFOE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

    ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

    ತಿರುವನಂತಪುರ: ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ಪಾತ್ರ ನಿರ್ವಹಿಸುತ್ತಿದ್ದಾಗ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

    ಖ್ಯಾತ ಓಟ್ಟಮ್‍ತುಳ್ಳಲ್ ಕಲಾವಿದರಾದ ಕಲಾಮಂಡಲಂ ಗೀತಾನಾಥನ್(58) ಅವರು ಪ್ರದರ್ಶನ ನೀಡುತ್ತಿರುವಾಗಲೇ ಹೃದಾಯಘಾತವಾಗಿ ಕುಸಿದು ಬಿದ್ದು ರಂಗಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

    ತ್ರಿಶೂರ್ ಜಿಲ್ಲೆಯ ಇರಿಂಙಲಕ್ಕುಡದಲ್ಲಿರುವ ಅವಿಟ್ಟತ್ತೂರ್ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ನೃತ್ಯ ಮಾಡುತ್ತಿರುವಾಗಲೇ ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅದಾಗಲೇ ಅವರು ಮೃತ ಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಪ್ರೇಕ್ಷಕರು ಗೀತಾ ಅವರ ನೃತ್ಯ ನೋಡುತ್ತಿರುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರು ಕೇರಳದ ಅತ್ಯಂತ ಹಿರಿಯ ಕಲಾವಿದರಾಗಿದ್ದಾರೆ. ಗೀತಾನಂದಮ್ ಅವರಿಗೆ 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಕಲಾಮಂದಲ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅಲ್ಲದೇ ಸುಮಾರು 30ಕ್ಕೂ ಹೆಚ್ಚು ಮಲೆಯಾಲಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಗೀತಾನಂದನ್ ಅವರ ಮರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

    2017ರ ಮಾರ್ಚ್ ನಲ್ಲಿ ಕಟೀಲು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದರು.

    https://www.youtube.com/watch?v=wO4QaCYdVyM

    https://www.youtube.com/watch?v=CJyPZsfLWFY

  • ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಬಾಗಲಕೋಟೆ: ಸ್ವಾಮೀಜಿಯೊಬ್ಬನ ಅಕ್ರಮ ಚಟುವಟಿಕೆಯ ವಿಚಾರ ತಿಳಿದು ಆತನನ್ನು ಗ್ರಾಮಸ್ಥರೇ ವೇದಿಕೆಯಿಂದ ಹೊರಹಾಕಿದ ಘಟನೆ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ನಡೆದಿದೆ.

    ಸೂಳಿಭಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಗಿತ್ತು. ಶಾಲಾ ಸಿಬ್ಬಂದಿ ಘನಮಠೇಶ್ವರ ಸ್ವಾಮೀಜಿಯ ಹಿಂದಿನ ಅಕ್ರಮ ವಿಚಾರ ತಿಳಿಯದೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸುವಂತೆ ಕೇಳಿಕೊಂಡು ಆಹ್ವಾನ ನೀಡಿದ್ದರು.

    ಆಹ್ವಾನ ನೀಡಿದ ಬಳಿಕ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮೀಣ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಸಮಿತಿ ಅಧ್ಯಕ್ಷರಾಗಿರುವ ಎಸ್.ಜಿ ನಂಜಯ್ಯನಮಠ ಅವರಿಗೆ ಜಿಲ್ಲೆ ಹಿರೆಕೆರೂರು ತಾಲೂಕಿನ ಅಬಲೂರು ಗ್ರಾಮದ ಈ ಸ್ವಾಮೀಜಿ ಒಂದು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದು ಅಲ್ಲದೇ ಇಬ್ಬರನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದಿದೆ.

    ವಿಚಾರ ತಿಳಿದ ಬಳಿಕ ಎಸ್.ಜಿ ನಂಜಯ್ಯನಮಠ ಮುಜುಗರ ತಪ್ಪಿಸಿಕೊಳ್ಳಲು ಸ್ವಾಮೀಜಿಗೆ ಫೋನ್ ಮಾಡಿ ಕಾರ್ಯಕ್ರಮ ರದ್ದಾಗಿದೆ ಬರಬೇಡಿ ಎಂದರೂ, ಕಳ್ಳ ಸ್ವಾಮೀಜಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ. ಬರಬೇಡಿ ಎಂದರೂ ಕಾರ್ಯಕ್ರಮಕ್ಕೆ ಹಾಜರಾಗಿದ್ದನ್ನು ನೋಡಿ ಗ್ರಾಮಸ್ಥರು ಹಾಗೂ ಮಾಜಿ ಶಾಸಕ ನಂಜಯನಮಠ ಈ ಸ್ವಾಮೀಜಿಯನ್ನ ವೇದಿಕೆಯಿಂದ ಹೊರ ನಡೆಯುವಂತೆ ಆಕ್ರೋಶದಿಂದ ಆಗ್ರಹಿಸಿದ್ದಾರೆ.

    ಈ ವೇಳೆ ಘನಮಠೇಶ್ವರ ಸ್ವಾಮೀಜಿ ನಾನು ಹಿಂದೂ ಧರ್ಮದ ರಕ್ಷಕ. ಧರ್ಮದ ಉಳಿವಿಗಾಗಿ ಹೋರಾಡುತ್ತಿದ್ದೇನೆ. ನಾನು ಉಗ್ರಗಾಮಿಯೇ? ನಕ್ಸಲೈಟಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾನು ತಪ್ಪು ಮಾಡಿದರೆ ಇಲ್ಲೇ ಗಲ್ಲಿಗೇರಿಸಬೇಕು ಇಲ್ಲವೇ ಕಾರ್ಯಕ್ರಮ ನಡೆಯಲು ಬಿಡಬಾರದು ಎಂದು ರಾದ್ಧಾಂತ ಮಾಡಿದ್ದಾನೆ.

    ಈತನ ಮಾತುಗಳಿಗೆ ಕೆರಳಿದ ಗ್ರಾಮಸ್ಥರು ಇದು ಮಕ್ಕಳ ಕಾರ್ಯಕ್ರಮ ಇಲ್ಲಿ ನಿನ್ನ ಅಸಂಬದ್ಧ ಮಾತುಗಳಿಗೆ ಆಸ್ಪದವಿಲ್ಲ, ಮೊದಲು ಹೊರಹೋಗಿ ಎಂದು ಹೇಳಿ ಸ್ವಾಮೀಜಿಯನ್ನು ಹೊರದಬ್ಬಿದ್ದಾರೆ.