Tag: Stage

  • ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ

    ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ

    ನವದೆಹಲಿ: ಜಾಗರಣೆಗಾಗಿ (Jagran) ಭಕ್ತರಿಗೆ ಕೂರಲು ಸಿದ್ಧಪಡಿಸಿದ್ದ ವೇದಿಕೆ (Stage) ಕುಸಿದು ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡ ಘಟನೆ ದೆಹಲಿಯ (New Delhi) ಕಲ್ಕಾಜಿ ದೇಗುಲದಲ್ಲಿನಡೆದಿದೆ.

    ಘಟನೆಯಲ್ಲಿ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಮಹಿಳೆಯನ್ನು ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ಮಹಿಳೆ ಸಾವನ್ನಪ್ಪಿದ್ದರು. ಶುಕ್ರವಾರ ರಾತ್ರಿ ಅನುಮತಿ ಇಲ್ಲದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 1,600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಚ್‌, ಕೆರಗೋಡು ಗ್ರಾಮ ಉದ್ವಿಗ್ನ

    ಘಟನೆ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ನಮಗೆ ಮಧ್ಯರಾತ್ರಿ 12:30ರ ಸುಮಾರಿಗೆ ಕಲ್ಕಾಜಿ ದೇವಸ್ಥಾನದಲ್ಲಿ (Kalkaji Temple) ಜಾಗರಣೆಗಾಗಿ ಸಿದ್ಧಪಡಿಸಿದ್ದ ವೇದಿಕೆ ಕುಸಿದುಬಿದ್ದಿದೆ ಎಂದು ದೂರವಾಣಿ ಕರೆ ಮೂಲಕ ಮಾಹಿತಿ ಬಂದಿತು. ವಿಷಯ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ಕಾರ್ಯಕ್ರಮ ಆಯೋಜಕರು ಮತ್ತು ಇತರ ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ನಿರ್ಮಿಸಲಾದ ಮರದ ವೇದಿಕೆ ಅತಿಯಾದ ತೂಕದಿಂದ ವಾಲಲು ಪ್ರಾರಂಭಿಸಿದ್ದು, ಮಧ್ಯರಾತ್ರಿಯ ಸುಮಾರಿಗೆ ಭಕ್ತರ ಮೇಲೆ ಬಿದ್ದಿದೆ. ವೇದಿಕೆ ಕುಸಿದ ಬಳಿಕ ಜನರು ಭಯದಿಂದ ಚೀರಾಡುತ್ತಾ ಸ್ಥಳದಿಂದ ಹೊರಗೆ ಓಡಿಹೋಗಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಐಐಎಮ್‌ಎಸ್ ಟ್ರಾಮಾ ಸೆಂಟರ್, ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ಸಾಕೇತ್‌ನ ಒಂಘಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಆಸ್ತಿ ತೆರಿಗೆ ಪಾವತಿಗೆ ಅವಕಾಶ!

    ಕಾರ್ಯಕ್ರಮಕ್ಕೆ ಅನುಮತಿ ನೀಡದಿದ್ದರೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಮತ್ತು ಜನರ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು

  • ವೇದಿಕೆಯಲ್ಲಿ ಮೈಮರೆತ ಬೈಡನ್

    ವೇದಿಕೆಯಲ್ಲಿ ಮೈಮರೆತ ಬೈಡನ್

    ವಾಷಿಂಗ್ಟನ್: ಅಮೆರಿಕದ (America) ಅಧ್ಯಕ್ಷ ಜೋ ಬೈಡನ್ (Joe Biden) ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣದ ಬಳಿಕ ವೇದಿಕೆಯಲ್ಲಿ (Stage) ಮೈಮರೆತಂತೆ ವರ್ತಿಸಿದ್ದಾರೆ. ಭಾಷಣದ ಬಳಿಕ ವೇದಿಕೆಯಿಂದ ಆಚೆ ಹೋಗಬೇಕಿದ್ದ ಬೈಡನ್ ಯಾವುದೋ ಯೋಚನೆಯಲ್ಲಿ ಕಳೆದು ಹೋದಂತೆ ಭಾಸವಾಗಿರುವ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಅಮೆರಿಕದ ಅಧ್ಯಕ್ಷ ನಿನ್ನೆ ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೋಬಲ್ ಫಂಡ್‌ನ 7ನೇ ರಿಪ್ಲೇಸ್‌ಮೆಂಟ್ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಅವರು ವೇದಿಕೆಯಿಂದ ಹೊರಡಲು ಮುಂದಾಗಿದ್ದು, 2 ಹೆಜ್ಜೆ ಮುಂದೆ ಹೋಗಿ ಮತ್ತೆ ಅಲ್ಲಿಯೇ ಯಾವುದೋ ಯೋಚನೆಯಲ್ಲಿ ಮೈಮರೆತಿದ್ದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‍ನ ಲೈಸನ್ಸ್ ರದ್ದುಪಡಿಸಿದ RBI

    ಬೈಡನ್ ಅವರು ವೇದಿಕೆಯಿಂದ ಕೆಳಗೆ ಇಳಿಯಬೇಕೇ ಬೇಡವೇ ಎಂಬ ಯೋಚನೆಯಲ್ಲಿ ನಿಂತಂತೆ ತೋರಿದೆ. ಬಳಿಕ ಓದಲಾದ ಧನ್ಯವಾದ ಟಿಪ್ಪಣಿ ಬೈಡನ್ ಅವರ ಗಮನ ಸೆಳೆದಿದೆ.

    ಕೆಲವು ತಿಂಗಳ ಹಿಂದೆ ಬೈಡನ್ ಅವರು ಭಾಷಣದ ವೇಳೆ ಯಾವುದೋ ಯೋಚನೆಯಲ್ಲಿ ಇದೇ ರೀತಿ ಕಳೆದು ಹೋದಂತೆ ಕಾಣಿಸಿಕೊಂಡಿದ್ದರು. ತಮ್ಮ ಎದುರು ಯಾರೂ ಇಲ್ಲದಾಗಲೂ ಕೈಯನ್ನು ಹಸ್ತಲಾಘವಕ್ಕೆ ಚಾಚಿ ಅಲ್ಲೇ ಮೈಮರೆತಿದ್ದಂತೆ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ನಟಿ ವೇದಿಕಾಗೆ ಕರೋನಾ ಪಾಸಿಟಿವ್ : ತೀವ್ರ ಜ್ವರದಿಂದ ಬಳಲುತ್ತಿರುವ ನಟಿ

    ಕನ್ನಡದ ನಟಿ ವೇದಿಕಾಗೆ ಕರೋನಾ ಪಾಸಿಟಿವ್ : ತೀವ್ರ ಜ್ವರದಿಂದ ಬಳಲುತ್ತಿರುವ ನಟಿ

    ಶಿವರಾಜ್ ಕುಮಾರ್ ನಟನೆಯ ಶಿವಲಿಂಗು ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ವೇದಿಕಾಗೆ ಕರೋನಾ ಪಾಸಿಟಿವ್ ಆಗಿದೆಯಂತೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊರೊನಾ ಲಕ್ಷಣಗಳನ್ನು ಬರೆದುಕೊಂಡಿದ್ದಾರೆ. ತಾವೀಗ ತೀವ್ರ ರೀತಿಯ ಜ್ವರದಿಂದ ನರಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗಾಗಿ ಅಗತ್ಯ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

    ಕನ್ನಡ ಸಂಗಮಾ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವೇದಿಕಾ ತಮಗೆ ಕೋವಿಡ್ ಸೋಂಕು ತಗಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ ಎಂದು ಅವರು ನೋವು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು. ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಅವರಿಗೆ 103 ಡಿಗ್ರಿ ಜ್ವರ ಇದೆಯಂತೆ. ಮೈಕೈ ನೋವಿನಿಂದಲೂ ಅವರು ನರಳುತ್ತಿದ್ದಾರಂತೆ.

    Live Tv

  • ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ತಿರುವನಂತಪುರಂ: ವೇದಿಕೆ ಮೇಲೆ ಹಾಡು ಹೇಳುವ ವೇಳೆ ಕುಸಿದು ಬಿದ್ದು ಮಲಯಾಳಂ ಗಾಯಕ ಎಡವ ಬಶೀರ್(87) ಶನಿವಾರ ಸಾವನ್ನಪ್ಪಿದ್ದಾರೆ.

    ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್ ಹೆಚ್ಚು ಜನಪ್ರಿಯರಾಗಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್‍ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ಮಾನ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದುಬಿದ್ದಿದ್ದಾರೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

    ಹಾಡು ಹಾಡುತ್ತಾ ವೇದಿಕೆ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ ಅವರು ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರ ಕೈಯಲ್ಲಿದ್ದ ಮೈಕ್ ಕೂಡ ಕೆಳಗೆ ಬಿದ್ದಿದೆ. ನಂತರ ಕೂಡಲೇ ವೇದಿಕೆಯತ್ತ ಜನರು ಆಗಮಿಸಿ, ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್- ರಾಯರ ಕೃಪೆ, ಪವಾಡಕ್ಕೆ ಧನ್ಯ ಅಂದ್ರು ನವರಸ ನಾಯಕ

  • ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ಲಕ್ನೋ: ಮದುವೆ ಸಮಾರಂಭದ ವೇದಿಕೆ ಮೇಲೆಯೇ ವರನಿಗೆ ತಾಯಿ ಚಪ್ಪಲಿಯಲ್ಲಿ ಹೊಡೆದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

    ಈ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯ ಭರೂವಾ ಸುಮೇರ್‍ಪುರ ಗ್ರಾಮದಲ್ಲಿ ನಡೆದಿದ್ದು, ವಧು ಹಾಗೂ ವರ ಇಬ್ಬರು ಹಾರ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದಕ್ಕಿದಂತೆ ಮೆಟ್ಟಿಲುಗಳನ್ನು ಹತ್ತಿ ವೇದಿಕೆ ಮೇಲೆ ಬಂದ ವರನ ತಮ್ಮ ಚಪ್ಪಲಿಯನ್ನು ಕಾಲಿನಿಂದ ಬಿಚ್ಚಿ ವರನಿಗೆ ಹೊಡೆಯಲು ಆರಂಭಿಸುತ್ತಾರೆ.

    ಈ ದೃಶ್ಯವನ್ನು ಕಂಡು ಸಮಾರಂಭಕ್ಕೆ ಆಗಮಿಸಿದ್ದ ಅಥಿತಿಗಳಿಗೆ ಆಶ್ಚರ್ಯವಾಗಿದೆ. ನಂತರ ಮಗನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಅಸಮಾಧಾನಗೊಂಡ ತಾಯಿ ವರ ಉಮೇಶ್ ಚಂದ್ರರಿಗೆ ಹೊಡೆದಿದ್ದಾರೆ ಎಂಬ ಅಸಲಿ ಸತ್ಯ ಬಹಿರಂಗಗೊಂಡಿದೆ.

    ಕುಟುಂಬಸ್ಥರ ವಿರೋಧದ ನಡುವೆ ಉಮೇಶ್ ಚಂದ್ರರವರು ಅಂಕಿತಾ ಎಂಬವರನ್ನು ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ವಿವಾಹದ ನಂತರ ವಧುವಿನ ತಂದೆ ಜುಲೈ 3 ರಂದು ಜಿಲ್ಲಾ ಸಭಾಂಗಣವೊಂದರಲ್ಲಿ ಸಣ್ಣದಾಗಿ ಫಂಕ್ಷನ್ ಮಾಡಲು ನಿರ್ಧರಿಸಿದ್ದರು. ಆದರೆ ಸಮಾರಂಭಕ್ಕೆ ವರನ ಕುಟುಂಬ ಮತ್ತು ಅವರ ಸಹೋದರರನ್ನು ಆಹ್ವಾನಿಸಿದ ಕಾರಣ ಆಕ್ರೋಶಗೊಂಡು ವರನ ತಾಯಿ ಸ್ಥಳಕ್ಕೆ ಆಗಮಿಸಿ ಮಗನಿಗೆ ಎಲ್ಲರ ಸಮ್ಮುಖ ವೇದಿಯಲ್ಲಿಯೇ ಚಪ್ಪಲಿ ಮೂಲಕ ಹೊಡೆದಿದ್ದಾರೆ.

    https://youtu.be/AWL9p72roF4

  • ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಬೆಂಗಳೂರು: ಚಂದನವನದ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧರಾಗಿದ್ದರೂ ಅವರ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ. ಸದ್ಯ ಸ್ಯಾಂಡಲ್‍ವುಡ್ ನಟ ರಿಷಿ ತಮ್ಮ ಗೆಳೆಯ ವಿಜಯ್ ಜೊತೆ ಕಳೆದ ಒಂದು ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

    ಬಾಲ್ಯದಿಂದಲೂ ರಂಗಭೂಮಿ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ವಿಜಯ್ ಕುಮಾರ್‍ರವರು 10 ವರ್ಷಗಳ ಕಾಲ ಸಂಚಾರಿ ಥಿಯೇಟರ್‍ನಲ್ಲಿ ನಾಟಕಗಳನ್ನು ಮಾಡಿದ್ದರು. ಈ ಸಮಯದಲ್ಲಿ ನಟ ರಿಷಿ ಕೂಡ ಸಂಚಾರಿ ಥಿಯೇಟರ್ ನಲ್ಲಿ ನಟನಾಭ್ಯಾಸ ಮಾಡುತ್ತಿದ್ದರು. ಹೀಗೆ ರಿಷಿ ಹಾಗೂ ವಿಜಯ್ ನಾಟಕವೊಂದರಲ್ಲಿ ಅಭಿನಯಿಸುತ್ತಿದ್ದ ವೇಳೆ ವೇದಿಕೆ ಮೇಲೆ ಸಂಚಾರಿ ವಿಜಯ್ ಡೈಲಾಂಗ್‍ವೊಂದನ್ನು ಮರೆತಾಗ ಅದನ್ನು ಎಷ್ಟು ಚಾಣಕ್ಷತನದಿಂದ ನಿಭಾಯಿಸಿದರು ಎಂಬುವುದನ್ನು ರಿಷಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವಿಜಯ್ ಒಬ್ಬ ಪ್ರತಿಭಾವಂತ ನಟ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ನಾವು 13 ಮಾರ್ಗೋಸಾ ಮಹಲ್ ನಾಟಕವನ್ನು ಒಟ್ಟಿಗೆ ವೇದಿಕೆ ಮೇಲೆ ನಟಿಸಿದ್ದೆವು. ಈ ವೇಳೆ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದನ್ನೂ ಓದಿ: ಲಾಕ್‍ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್

    ವಿಜಯ್ ಒಮ್ಮೆ ವೇದಿಕೆ ಮೇಲೆ ಅಭಿನಯಿಸುವಾಗ ಡೈಲಾಗ್‍ನ ಸಾಲೊಂದನ್ನು ಮರೆತು ಹೋಗಿದ್ದರು. ಒಂದು ವೇದಿಕೆ ಮೇಲೆ ಡೈಲಾಗ್ ಮೆರೆತಾಗ ಅದರಿಂದ ಆಗುವ ಆಂತರಿಕ ಭಯ ಒಬ್ಬ ಕಲಾವಿದನಿಗೆ ಮಾತ್ರ ತಿಳಿದಿರುತ್ತದೆ. ಆದರೆ ವಿಜಯ್ ಭಯಗೊಳ್ಳವ ಬದಲಿಗೆ, ತಕ್ಷಣವೇ ದೈಹಿಕವಾಗಿ ಪ್ರತಿಕ್ರಿಯಿಸುವ ಮೂಲಕ ಪಾತ್ರವನ್ನು ನಿಭಾಯಿಸಿದರು. ಅವರ ಆ್ಯಕ್ಟಿಂಗ್ ಎಷ್ಟು ಅದ್ಭುತವಾಗಿತ್ತು ಅಂದರೆ ಒಂದು ನಿಮಿಷದವರೆಗೂ ಒಂದು ಪದವನ್ನು ಹೇಳದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರು ಹೇಳಿದ ಒಂದೇ ಒಂದು ಮಾತಿಗೆ ಪ್ರೇಕ್ಷಕರೇ ಅಚ್ಚರಿಗೊಂಡು ಚಪ್ಪಾಳೆ ತಟ್ಟಿದ್ದರು. ಅವರು ಡೈಲಾಗ್‍ನನ್ನು ಮರೆತಿರುವುದರ ಬಗ್ಗೆ ನಮಗೂ ಸುಳಿವು ನೀಡದೇ, ಡೈಲಾಗ್‍ನನ್ನು ಹೆಚ್ಚಾಗಿ ವೈಭವಿಕರಿಸದೇ ತಮ್ಮ ನಟನಕೌಶಲ್ಯದಿಂದ ಅಭಿನಯಿಸುವ ಮೂಲಕ ಚಪ್ಪಾಳೆಗಿಟ್ಟಿಕೊಂಡಿದ್ದರು. ಡೈಲಾಗ್ ಮರೆತ ವೇಳೆ ಅವರು ಆ ಪಾತ್ರವನ್ನು ಸುಧಾರಿಸಿದ ರೀತಿ ನನಗೆ ಇನ್ನೂ ಕೂಡ ನೆನಪಿದೆ. ಇದು ವೇದಿಕೆಯಲ್ಲಿ ನಡೆದ ಒಂದು ಅದ್ಭುತ ಕ್ಷಣವಾಗಿದೆ.

    ನಾನು ಅಂದು ವಿಜಯ್‍ರಿಂದ 2 ವಿಷಯಗಳನ್ನು ಕಲಿತುಕೊಂಡೆ. ಒಂದು ಯೋಜಿಸಿದ ಪ್ರಕಾರ ನಾಟಕಗಳು ಅಭಿನಯಿಸಲು ಆಗದೇ ಇದ್ದಾಗ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಸುಧಾರಿಸುವ ಮೂಲಕ ಅಭಿನಯಿಸಬೇಕು. ಮತ್ತೊಂದು ಸಹೋದ್ಯೋಗಿಗಳೊಂದಿಗೆ ಹಾಗೂ ಸಹ ನಟರೊಂದಿಗೆ ಪ್ರೀತಿ ಹಾಗೂ ಗೌರವದಿಂದಿ ನಡೆದುಕೊಳ್ಳಬೇಕು. ಬೇರೆಯವರಿಗೆ ನಾವು ಸಹಾಯ ಮಾಡಿದರೆ ನಮಗೆ ಯಾವುದೋ ರೀತಿ ಸಹಾಯ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ? 

    ಪ್ರಸ್ತುತ ಯುವ ನಟರಲ್ಲಿ ಸಂಚಾರಿ ವಿಜಯ್ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಅವರು ರಾಷ್ಟ್ರಪ್ರಶಸ್ತಿ ವಿಜೇತರಾದಾಗ ಇಡೀ ಕನ್ನಡ ಚಿತ್ರರಂಗ ಮತ್ತು ಫಿಲ್ಮ್ ಸಕ್ರ್ಯೂಟ್ ಭಾರಿ ಹೆಮ್ಮೆ ಪಟ್ಟಿತು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನಾವು ಯಾವಾಗಲೂ ಹೇಳುತ್ತಿರುತ್ತೇವೆ. ಆದರೆ ಅದು ಅರ್ಧದಲ್ಲಿಯೇ ವ್ಯರ್ಥವಾಗುತ್ತಿರುವುದನ್ನು ಇಂದಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

    ಈ ನಷ್ಟವನ್ನು ಭರಿಸಲು ಉತ್ತಮ ಮಾರ್ಗವೆಂದರೆ ಎಲ್ಲರೂ ವ್ಯಕ್ತಿಯನ್ನು ಪ್ರೀತಿಸೋಣ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರನ್ನು ಗೌರವಿಸೋಣ. ಸದ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

     

    View this post on Instagram

     

    A post shared by Rishi (@rishi_actor)

  • ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ಜೈಪುರ: ವಿದ್ಯಾರ್ಥಿಗಳ ಮುಂದೆಯೇ ವೇದಿಕೆ ಮೇಲೆ ಶಿಕ್ಷಕಿಗೆ ಶಿಕ್ಷಕನೋರ್ವ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೌಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತ್ತಿದ್ದ ಶಿಕ್ಷಕನೋರ್ವ ತನ್ನ ಪಕ್ಕದಲ್ಲಿದ್ದ ಶಿಕ್ಷಕಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ವಿದ್ಯಾರ್ಥಿಗಳ ಎದುರೇ ಶಿಕ್ಷಕಿಗೆ ಶಿಕ್ಷಕ ಮುತ್ತಿಟ್ಟ ದೃಶ್ಯವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ತರಗತಿಯಲ್ಲೇ 8ನೇ ತರಗತಿ ಹುಡ್ಗ-ಹುಡ್ಗಿ ಕಿಸ್ಸಿಂಗ್

    ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ರಾಜಸ್ಥಾನದ ಶಿಕ್ಷಣ ಸಚಿವರನ್ನು ಪ್ರಶ್ನಿಸಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುರ್ವರ್ತನೆ ತೋರಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವರು ತಲೆಕೆಡಿಸಿಕೊಂಡಿಲ್ಲ. ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನವೇ ವಿದ್ಯಾರ್ಥಿಗಳಿಬ್ಬರ ಲಿಪ್ ಲಾಕ್

    ವೈರಲ್ ವಿಡಿಯೋದಲ್ಲಿ, ವೇದಿಕೆ ಮೇಲೆ ಓರ್ವ ಶಿಕ್ಷಕ, ಒಬ್ಬರು ಶಿಕ್ಷಕಿ ಕೂತಿರುವಾಗ ಏಕಾಏಕಿ ಶಿಕ್ಷಕ ಪಕ್ಕದಲ್ಲಿದ್ದ ಶಿಕ್ಷಕಿ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಈ ವೇಳೆ ವೇದಿಕೆ ಎದುರಿಗಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ, ಶಿಕ್ಷಕನಿಗೆ ರೇಗಿಸಿದ ದೃಶ್ಯಗಳು ಸೆರೆಯಾಗಿದೆ.

    ಈ ಹಿಂದೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕವಾಗಿಯೇ ಕಿಸ್ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆ ಬಳಿಕ ಗುಜರಾತಿನಲ್ಲಿ 8ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿ ತರಗತಿಯಲ್ಲೇ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.

    ಗುಜರಾತ್‍ನ ಪಂಚಮಹಲ್ ಜಿಲ್ಲೆಯ ಗೋದ್ರಾ ಸಮೀಪವಿರುವ ಮೊರ್ವಾ ಹಡಾಫ್‍ನ ಕ್ರುಶಿಕರ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡಿದ್ದರು. 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿ ಕ್ಲಾಸ್ ರೂಮಿನಲ್ಲಿಯೇ ಒಬ್ಬರಿಗೊಬ್ಬರು ಕಿಸ್ ಕೊಡುತ್ತಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡುತ್ತಿರುವ ವಿಡಿಯೋವನ್ನು ಯಾರೋ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

  • ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ಧೋನಿ

    ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ಧೋನಿ

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಧೋನಿ ಅವರು, ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮೈದಾನಕ್ಕೆ ಇಳಿದಾಗ ಸಾವಿರಾರು ಜನರ ಮುಂದೆ ಸಖತ್ ಕೂಲ್ ಹಾಗೇ ಇರುತ್ತಿದ್ದ ಧೋನಿ, ನಾಚಿಕೆ ಸ್ವಭಾವದವರಂತೂ ಅಲ್ಲವೇ ಅಲ್ಲ. ಕ್ರಿಕೆಟ್ ಗೀಳಿನ ನಡುವೆಯು ಸಿಕ್ಕ ಅವಕಾಶಗಳನ್ನ ಧೋನಿ ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಮೈಕ್ ಸಿಕ್ಕಾಗ ಹಾಡೇಳಿ ರಂಜಿಸುತ್ತಿದ್ದರು. ಆದರೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸ್ಟೇಜ್ ಹತ್ತೋಕೆ ಧೋನಿ ಸಿಕ್ಕಾಪಟ್ಟೆ ನಾಚಿಕೊಂಡಿದ್ದು ಅಲ್ಲಿದ್ದವರಿಗೆ ಸಖತ್ ಮಜಾ ನೀಡಿದೆ.

    https://www.instagram.com/p/B72Us8NgFrc/?utm_source=ig_embed

    ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಧೋನಿಯನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸ್ಟೇಜ್ ಮೇಲೆ ಬರುವಂತೆ ಆಹ್ವಾನಿಸಿದರು. ಆದರೆ ಸ್ಟೇಜ್ ಮೆಟ್ಟಿಲು ಹತ್ತಿದ್ದ ಮಾಹಿ, ನಾಚಿಕೊಳ್ಳುತ್ತಾ ಹಿಂದಕ್ಕೆ ಓಡಿ ಬಂದು ನೆರೆದಿದ್ದ ಜನರ ಗುಂಪು ಸೇರಿದರು.

    ಇದನ್ನೆಲ್ಲ ನೋಡುತ್ತಿದ್ದ ಪತ್ನಿ ಸಾಕ್ಷಿ ಧೋನಿಯನ್ನ ಸ್ಟೇಜ್ ಮೇಲೆ ಹೋಗಿ ಎಂದು ಧರ್ಮ ಪತಿಯನ್ನ ಸ್ಟೇಜ್ ಹತ್ತಿಸಿದರು. ನಂತರ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿಗೆ ತಲೆತೂಗಿದ್ದ ಧೋನಿ, ಪತ್ನಿ ಸಾಕ್ಷಿಯನ್ನು ಸ್ಟೇಜ್‍ಗೆ ಕರೆದು ವೇದಿಕೆ ಮೇಲೆ ಬಂದ ಧೋನಿ ದಂಪತಿ ಅರ್ಮಾನ್ ಮಲ್ಲಿಕ್‍ರ ಕೌನ್ ತುಜೇ ಅನ್ನೋ ಹಾಡಿಗೆ ಫಿದಾ ಆದರು. ಈಗ ಧೋನಿ ದಂಪತಿಯ ಈ ವಿಡಿಯೋ ಇಸ್ಟಾಗ್ರಾಮ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

  • ಮಂಗ್ಳೂರು ಸಮಾವೇಶದ ವೇದಿಕೆಗೆ ಗೊಲೀಬಾರ್‌ನಲ್ಲಿ ಮೃತರಾದವರ ಹೆಸರು

    ಮಂಗ್ಳೂರು ಸಮಾವೇಶದ ವೇದಿಕೆಗೆ ಗೊಲೀಬಾರ್‌ನಲ್ಲಿ ಮೃತರಾದವರ ಹೆಸರು

    ಮಂಗಳೂರು: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯ ವೇದಿಕೆಗೆ ಗೊಲೀಬಾರ್ ನಲ್ಲಿ ಮೃತಪಟ್ಟ ಇಬ್ಬರ ಹೆಸರು ಹಾಕಿರೋದು ಎಲ್ಲರನ್ನು ಸೆಳೆಯಿತು.

    ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಸಿ.ಎ.ಎ, ಎನ್.ಆರ್.ಸಿ ವಿರೋಧಿಸಿ ಮಂಗಳೂರಿನ ಅಡ್ಯಾರ್ ಮೈದಾನದಲ್ಲಿನಡೆದ ಬೃಹತ್ ಪ್ರತಿಭಟನೆ ಭಾರೀ ಯಶಸ್ಸು ಕಂಡಿದೆ. ಈ ಬೃಹತ್ ಸಮಾವೇಶಕ್ಕಾಗಿ ಹಾಕಲಾದ ವೇದಿಕೆಗೆ ಶಹೀದ್ ಅಬ್ದುಲ್, ಜಲೀಲ್ ಕಂದಕ್ ಹಾಗೂ ನೌಶೀನ್ ಕುದ್ರೋಳಿಯ ಹೆಸರು ಹಾಕಿರೋದು ಬಂದ ಪ್ರತಿಭಟನಾಕಾರರನ್ನು ಸೆಳೆಯಿತು.

    ಡಿಸೆಂಬರ್ 19 ರಂದು ನಡೆದ ಪ್ರತಿಭಟನೆಯ ವೇಳೆ ಲಾಠಿಚಾರ್ಚ್ ನಡೆದು ಬಳಿಕ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಗೊಲೀಬಾರ್ ಗೆ ಬಲಿಯಾಗಿದ್ದರು. ಈ ಘಟನೆಯ ಬಳಿಕ ನಡೆದ ಮೊದಲ ಬೃಹತ್ ಸಮಾವೇಶ. ಹೀಗಾಗಿ ಈ ಪ್ರತಿಭಟನೆಯ ವೇಳೆ ಗೊಲೀಬಾರ್ ಗೆ ಮೃತಪಟ್ಟ ಒಬ್ಬರ ಹೆಸರನ್ನು ಇಟ್ಟಿರೋದು ಮಾತ್ರವಲ್ಲ ಇಬ್ಬರ ಸಾವಿಗೂ ನ್ಯಾಯ ಸಿಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

  • ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಮ್ಯಾಡ್ರಿಡ್: ಹೊಟ್ಟೆಗೆ ರಾಕೆಟ್ ಬಡಿದು ಪಾಪ್ ಗಾಯಕಿ ವೇದಿಕೆಯಲ್ಲೇ ಮೃತಪಟ್ಟ ಘಟನೆ ಸ್ಪೇನ್‍ನ ಲಾಸ್ ಬರ್ಲನ್ಸ್‍ನಲ್ಲಿ ನಡೆದಿದೆ.

    ಜೊವಾನ್ನಾ ಸೆನ್ಜ್(30) ಮೃತಪಟ್ಟ ಗಾಯಕಿ. ಜೊವಾನ್ನಾ ಭಾನುವಾರ ಲಾಸ್ ಬರ್ಲನ್ಸ್ ನಲ್ಲಿ ನಡೆಯುತ್ತಿದ್ದ ಮ್ಯೂಸಿಕಲ್ ಫೆಸ್ಟಿವಲ್‍ನಲ್ಲಿ ತನ್ನ ಸೂಪರ್ ಹಾಲಿವುಡ್ ಆರ್ಕೆಸ್ಟ್ರಾ ತಂಡದ ಜೊತೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಆಕಸ್ಮಿಕವಾಗಿ ಪಟಾಕಿ ಸಿಡಿದ ಕಾರಣ ಜೊವಾನ್ನಾ ಮೃತಪಟ್ಟಿದ್ದಾರೆ.

    ಸ್ಥಳೀಯರ ಪ್ರಕಾರ ಎರಡು ರಾಕೆಟ್ ಅನ್ನು ಇಡಲಾಗಿತ್ತು. ಒಂದು ರಾಕೆಟ್ ಸರಿಯಾದ ಮಾರ್ಗದಲ್ಲಿ ಹೋದರೆ, ಮತ್ತೊಂದು ರಾಕೆಟ್ ಜೊವಾನ್ನಾರ ಹೊಟ್ಟೆಗೆ ಬಡಿದಿದೆ. ಪರಿಣಾಮ ಜೊವಾನ್ನಾ ಪ್ರಜ್ಞೆ ತಪ್ಪಿದ್ದರು. ವೇದಿಕೆ ಮೇಲಿದ್ದ ತಂಡದ ಸದಸ್ಯರು ಜೊವಾನ್ನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದ ಕೆಲವೇ ನಿಮಿಷದಲ್ಲಿ ಜೊವಾನ್ನಾ ನಿಧನರಾಗಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸುಮಾರು 1000 ಮಂದಿ ಆಗಮಿಸಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೇದಿಕೆ ತಯಾರಿಸುವ ಕಂಪನಿ ಮತ್ತು ಕಾನ್ಸರ್ಟ್ ನಡೆಸುವ ಗುಂಪು, ಅವರು ಕಳೆದ ಹಲವಾರು ವರ್ಷಗಳಿಂದ ಇಂತಹ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಆದರೆ ಈ ಘಟನೆ ಹಿಂದೆ ಎಂದು ಸಂಭವಿಸಿಲ್ಲ ಎಂದು ಹೇಳಿದ್ದಾರೆ.