Tag: stag

  • ಕಡವೆ ಬೇಟೆಯಾಡಿ 80 ಕೆ.ಜಿ ಮಾಂಸ ಬಚ್ಚಿಟ್ಟ ವ್ಯಕ್ತಿ ಅರೆಸ್ಟ್

    ಕಡವೆ ಬೇಟೆಯಾಡಿ 80 ಕೆ.ಜಿ ಮಾಂಸ ಬಚ್ಚಿಟ್ಟ ವ್ಯಕ್ತಿ ಅರೆಸ್ಟ್

    ಮೈಸೂರು: ಕಡವೆ ಬೇಟೆಯಾಡಿ ಮಾಂಸ ಬಚ್ಚಿಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೈಸೂರು ಜಿಲ್ಲೆಯ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಸ್ವಾಮಿ ಎಂಬಾತ ಕಡವೆ ಬೇಟೆಯಾಡಿದ್ದಾನೆ.

    ಬೇಟೆಯಲ್ಲಿ ಸಿಕ್ಕ 80 ಕೆ.ಜಿ ಕಡವೆ ಮಾಂಸವನ್ನು ತಂಬಾಕಿನ ಬ್ಯಾರಕ್ ನಲ್ಲಿ ಬಚ್ಚಿಟ್ಟಿದ್ದನು. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ವಾಮಿ ಮನೆ ಮೇಲೆ ದಾಳಿ ನಡೆಸಿದೆ. ಅಲ್ಲದೆ ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ. ಆರೋಪಿ ಸ್ವಾಮಿ ಜೊತೆ ಬೇಟೆಯಾಡಲು ತೆರಳಿದ್ದ ಇತರ ನಾಲ್ವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

  • ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು.

    ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಿಯ ಮೀನುಗಾರರ ಸಹಾಯದಿಂದ ಕಡವೆಯನ್ನು ರಕ್ಷಿಸಿದ್ದಾರೆ.

    ಮೂರು ವರ್ಷದ ಪ್ರಾಯದ ಕಡವೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಅದನ್ನು ಮರಳಿ ಕಾಡಿಗೆ ಬಿಡಲಾಗಿದೆ.

    https://www.youtube.com/watch?v=2jYcc65S2uQ

     

     

  • ಚಿಕ್ಕಮಗಳೂರು: ನಾಯಿ ದಾಳಿಗೆ ಕಡವೆ ಬಲಿ- ಕೊಂಬನ್ನು ಕದ್ದೊಯ್ದ ಕಿಡಿಗೇಡಿಗಳು

    ಚಿಕ್ಕಮಗಳೂರು: ನಾಯಿ ದಾಳಿಗೆ ಕಡವೆ ಬಲಿ- ಕೊಂಬನ್ನು ಕದ್ದೊಯ್ದ ಕಿಡಿಗೇಡಿಗಳು

    ಚಿಕ್ಕಮಗಳೂರು: ನೀರು ಹುಡುಕಿಕೊಂಡು ನಾಡಿಗೆ ಬಂದಿದ್ದ ಕಡವೆಯೊಂದು ನಾಯಿ ದಾಳಿಗೆ ಸಿಲುಕಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನ ಚಿಕ್ಕಮಗಳೂರು ಸಮೀಪದ ಚುರ್ಚೆಗುಡ್ಡದಿಂದ ಬಂದಿದ್ದ ಕಡವೆ ಮೇಲೆ ನಾಯಿಗಳು ದಾಳಿ ಮಾಡಿದ್ರಿಂದ ಕಡವೆ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಕೂಡಲೇ ಸ್ಥಳಿಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಅಧಿಕಾರಿಗಳು ಕಡವೆಗೆ ಚಿಕಿತ್ಸೆ ಕೊಡಿಸಿ, ಜಿಂಕೆವನದಲ್ಲಿ ಬಿಟ್ಟಿದ್ರು.

    ಆದ್ರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಡವೆ ಮಧ್ಯರಾತ್ರಿ ವೇಳೆ ಸಾವನ್ನಪ್ಪಿದೆ. ಕಿಡಿಗೇಡಿಗಳು ಸತ್ತ ಕಡವೆಯ ಕೊಂಬನ್ನು ಕಿತ್ತುಕೊಂಡು ಹೋಗಿದ್ದಾರೆ.