Tag: staff

  • ಎಟಿಎಂ ಹಣದೊಂದಿಗೆ ಪರಾರಿಯಾದ ಡ್ರೈವರ್

    ಎಟಿಎಂ ಹಣದೊಂದಿಗೆ ಪರಾರಿಯಾದ ಡ್ರೈವರ್

    ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣವಿರುವ ಬ್ಯಾಗ್‍ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ನಗರದಲ್ಲಿ ನಡೆದಿದೆ.

    ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣ ಖದ್ದು ಎಸ್ಕೇಪ್ ಆಗಿದ್ದಾನೆ. ಆಕ್ಸಿಸ್ ಬ್ಯಾಂಕ್‍ಗೆ ಸೇರಿದ್ದ ಸುಮಾರು 50 ಲಕ್ಷ ಹಣವಿದ್ದ ವಾಹನವಾಗಿತ್ತು. ಅಧಿಕಾರಿಗಳು ಎಟಿಎಂಗೆ ಹಣ ತುಂಬಲು ಹೋಗಿರುವ ಸಮಯ ನೋಡಿಕೊಂಡು ಚಾಲಕ ಹಣದೊಂದಿಗೆ ಪರಾರಿಯಾಗಿದ್ದಾನೆ.

    ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದರು. ಈ ವೇಳೆ ವಾಹನದಲ್ಲಿದ್ದ ಡ್ರೈವರ್ ವಾಹನದಲ್ಲಿದ್ದ 65 ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ವಾಪಸ್ಸು ಬಂದು ನೋಡುವಷ್ಟರಲ್ಲಿ ಬ್ಯಾಗ್‍ಗಳಲ್ಲಿದ್ದ ಹಣದ ಸಮೇತ ಪರಾರಿಯಗಿರುವುದು ತಿಳಿದಿದೆ. ಎಟಿಎಂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಹಣವಿರುವ ಬ್ಯಾಗ್‍ಗಳೊಂದಿಗೆ ಪರಾರಿಯಾಗಿದ್ದಾನೆ. ನವರಂಗ್ ಬಳಿಯ ಅಕ್ಸಿಸ್ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ.

  • ದಿಢೀರ್ ಬಂತು 15 ಸಾವಿರಕ್ಕೂ ಹೆಚ್ಚು ಟಪಾಲ್ – ಕಂಗಲಾದ ವಿಧಾನಸಭೆ ಸಿಬ್ಬಂದಿ

    ದಿಢೀರ್ ಬಂತು 15 ಸಾವಿರಕ್ಕೂ ಹೆಚ್ಚು ಟಪಾಲ್ – ಕಂಗಲಾದ ವಿಧಾನಸಭೆ ಸಿಬ್ಬಂದಿ

    ಬೆಂಗಳೂರು: ಸಿಎಂ, ಮೂವರು ಸಚಿವರು, ನಾಲ್ವರು ಅಧಿಕಾರಿಗಳಿಗೆ ಬಂದಿರುವ ಟಪಾಲ್‍ಗಳನ್ನು ನೋಡಿ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿದ್ದಾರೆ.

    ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಈ ಟಪಾಲ್‍ಗಳನ್ನು ನೋಡಿ ಸಿಬ್ಬಂದಿ ಗಾಬರಿಯಾಗಿದ್ದಾರೆ. ಒಂದೇ ಕವರ್, ಒಂದೇ ವಿಷಯ ಹೊಂದಿರುವ ಸಾವಿರಾರು ಪತ್ರಗಳಿವೆ. ಸಿಎಂ ಕಚೇರಿಗೂ 5 ಸಾವಿರ ಟಪಾಲ್‍ಗಳು ಬಂದಿವೆ.

    ತಂಬಾಕು ಉತ್ಪನ್ನ ನಿಷೇಧ ಕಾಯ್ದೆ ಜಾರಿಗೊಳಿಸದಂತೆ ಸಾವಿರಾರು ಪತ್ರಗಳ ಮೂಲಕ ಒತ್ತಡ ಹೇರಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಬೆಂಗಳೂರಿನ ಅಂಗಡಿ ಮುಂಗಟ್ಟುಗಳಿಗೆ ದೌರ್ಜನ್ಯ ಮಾಡ್ತಿದ್ದಾರೆ. ತಂಬಾಕು ಸಿಗರೇಟ್ ನಿಷೇಧದ ಹೆಸರಲ್ಲಿ ದೌರ್ಜನ್ಯ ಎಸಗಿ ಹಣ ವಸೂಲಿ ಮಾಡ್ತಿದ್ದಾರೆ. ಇದನ್ನು ನಿಯಂತ್ರಿಸುವಂತೆ ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ್ದಾರೆ. ಅಂಗಡಿ ಮಾಲೀಕರು ಸಿಎಂ ಯಡಿಯೂರಪ್ಪ, ಭೈರತಿ ಬಸವರಾಜ್, ಸುಧಾಕರ್ ಸೇರಿ ಅಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.

    ಟಪಾಲ್‍ನ ವಿಚಾರ ನೋಡಿ ಸಚಿವರ ಕಚೇರಿ ಸಿಬ್ಬಂದಿಗಳು ತಲೆ ಕೆಡಿಸಿಕೊಂಡಿದ್ದಾರೆ. ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಮಾಲೀಕರಿಂದ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಸಿಗರೇಟ್ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಅಂಗಡಿ ಮುಂಗಟ್ಟು ಮಾಲೀಕರು ಪತ್ರ ಬರೆದಿದ್ದಾರೆ. ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ಅಂಗಡಿ ಮಾಲೀಕರಿಂದ 15 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ.

    ಭಾರೀ ಸಂಖ್ಯೆಯಲ್ಲಿ ಬಂದ ಪೋಸ್ಟ್‍ಗಳನ್ನು ನೋಡಿ, ನಮ್ಮ ಬಳಿ ಈ ಟಪಾಲ್‍ಗಳನ್ನು ನೋಡಲು ಸಾಧ್ಯವಿಲ್ಲ. ನೀವು ಬಂದು ತೆಗೆದುಕೊಂಡು ಹೋಗಿ ವಿಧಾನಸಭೆಯ ಸಿಬ್ಬಂದಿ ಸಚಿವರ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ.

  • ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ಯಾದಗಿರಿ: ಅಮ್ಮಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿವೆ. ವೈದ್ಯ ರಾಹಿಲ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರೆ, ಕೆಲವರು ಕಣ್ಣೀರು ಸಹ ಹಾಕಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರದ ವೈದ್ಯ ಡಾ.ಎಂ.ಎಂ.ರಾಹೀಲ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಡಾ.ಎಂ.ಎಂ.ರಾಹೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲಾಗಿ ಸಹೋದ್ಯೋಗಿಗಳಿಗೆ ಬೇಕಂತಲೇ ಹಾಜರಾತಿ ಕಡಿಮೆ ಹಾಕುವುದು. ವಿಶೇಷ ಭತ್ಯೆ ಕಟ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಾಯಿ ಬಂದಂತೆ ನಿಂದಿಸುತ್ತಾರೆ. ರಾಹೀಲ್ ವರ್ತನೆಯಿಂದ ಆಸ್ಪತ್ರಗೆ ರೋಗಿಗಳು ಬರಲು ಭಯಪಡುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

    ವೈದ್ಯ ರಾಹಿಲ್ ನಿರ್ಲಕ್ಷ್ಯ ಔಷಧಿ, ಸ್ಯಾನಿಟೆರಿ ಪ್ಯಾಡ್ ಗಳು ಹಂಚಿಕೆಯಾಗಿದೆ ಆಸ್ಪತ್ರೆಯ ಮೂಲೆಯಲ್ಲಿ ಸೇರಿವೆ. ಆಸ್ಪತ್ರೆಗೆಂದು ಮಂಜೂರಾಗಿರುವ ಬೆಲೆ ಬಾಳುವ ವೈದ್ಯಕೀಯ ಪೀಠೋಪಕರಣಗಳು, ಕಚೇರಿ ಬಳಕೆ ವಸ್ತುಗಳು ಸಹ ತುಕ್ಕು ಹಿಡಿಯುತ್ತಿವೆ. ಈ ಎಲ್ಲಾ ವಿಚಾರವಾಗಿ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

  • ಇಂಡೋನೇಷ್ಯಾದಲ್ಲಿ ಭೂಕಂಪ – ಮೂವರು ಸಾವು

    ಇಂಡೋನೇಷ್ಯಾದಲ್ಲಿ ಭೂಕಂಪ – ಮೂವರು ಸಾವು

    ಜಕಾರ್ತಾ: ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಭೂಕಂಪದಲ್ಲಿ ಖಾಸಗಿ ಆಸ್ಪತ್ರೆಯ ಬಿಲ್ಡಿಂಗ್ ಕುಸಿದಿದ್ದು, ಘಟನೆಯಲ್ಲಿ ಸುಮಾರು 12ಕ್ಕೂ ಹೆಚ್ಚು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಭೂ ಕುಸಿತದಲ್ಲಿ ಸಿಲುಕಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಆಸ್ಪತ್ರೆಯು ಸಮತಟ್ಟಾಗಿರುವ ಕಾರಣ ಕಟ್ಟಡ ಕುಸಿದಿದೆ ಎಂದು ಮಾಮುಜು ನಗರದ ಪಾರುಗಾಣಿಕಾ ಸಂಸ್ಥೆಯ ಅರಿಯಾಂಟೋ ತಿಳಿಸಿದ್ದಾರೆ. ಭೂಕಂಪದಿಂದ ಕಟ್ಟಡದ ಅವಶೇಷಗಳಡಿ ಸಿಲುಕಿರುವ ರೋಗಿಗಳನ್ನು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

  • ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    – ಪಿಸ್ತೂಲು ತೋರಿಸಿ ಅತ್ಯಾಚಾರ

    ಜೈಪುರ್ : ಸ್ಟಾರ್ ಹೋಟೆಲ್‍ವೊಂದರಲ್ಲಿ ತಂಗಿದ್ದ ಐವರು ಹೋಟೆಲ್ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

    ಆರೋಪಿಗಳನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ. ಐವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಆರೋಪಿಗಳು ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ.

    ಈ ಐವರು ಆರೋಪಿಗಳು ತ್ರಿಸ್ಟಾರ್ ಹೋಟೆಲ್‍ವೊಂದಕ್ಕೆ ಬಂದು ಉಳಿದಿದ್ದಾರೆ. ರೂಮ್ ಕೀಯನ್ನು ತೆಗೆದುಕೊಂಡು ರೂಂಗೆ ಹೋಗಿದ್ದಾರೆ. ಕೆಲವೇ ಕ್ಷಣದಲ್ಲಿ ಮತ್ತೆ ಬಂದು ಸೆಕ್ಸ್ ವರ್ಕರ್‍ಗಳನ್ನು ರೂಮ್‍ಗೆ ಕಳುಹಿಸುವಂತೆ ಹೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಾರೆ.

    ಸಿಟ್ಟಿಗೆದ್ದ ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆ ಕಡೆಗೆ ಹೋಗಿದ್ದಾರೆ. ಇಬ್ಬರು ಒಳಗೆ ಹೋಗಿದ್ದಾರೆ. ಮೂವರು ಹೊರಗೆ ಕಾವಲು ಕಾಯಲು ನಿಂತಿದ್ದಾರೆ. ಒಳಗೆ ಹೋದ ಆರೋಪಿಗಳು ಮಹಿಳಾ ಸಿಬ್ಬಂದಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.

    ಕೂಡಲೇ ಎಚ್ಚೆತ್ತ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರ ವಿಶೇಷ ತಂಡ ಸ್ಥಳಕ್ಕೆ ಬಂದು ಮಹಿಳಾ ಸಿಬ್ಬಂದಿಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಐವರು ಒಬ್ಬ ಬಿಸಿನೆಸ್‍ಮ್ಯಾನ್‍ನನ್ನು ಕೊಲೆ ಮಾಡುವ ಉದ್ದೇಶದಿಂದ ಹೋಟೆಲ್‍ಗೆ ಬಂದು ಉಳಿದುಕೊಂಡಿದ್ದರು. ಇವರ ಟಾರ್ಗೆಟ್‍ನಲ್ಲಿರುವ ಬಿಸಿನೆಸ್ ಮ್ಯಾನ್‍ಗೆ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕೊಲೆ ಮಾಡುವವರಾಗಿದ್ದರು ಎಂದು ತಿಳಿದು ಬಂದಿದೆ. ಈ ಐವರು ಆರೋಪಿಗಳಲ್ಲಿ ಒಬ್ಬನಾದ ನರೇಶ್ ಈಗಾಗಲೇ ಒಂದು ಕೊಲೆ ಆರೋಪವನ್ನು ಹೊತ್ತಿದ್ದು, ಪೆರೋಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ.

  • ಅಕ್ರಮ ವಿದ್ಯುತ್ ಸಂಪರ್ಕ – ಕಡಿತಗೊಳಿಸಿದ ಬೆಸ್ಕಾಂ ಸಿಬ್ಬಂದಿಗೆ ಚಪ್ಪಲಿ ಏಟು

    ಅಕ್ರಮ ವಿದ್ಯುತ್ ಸಂಪರ್ಕ – ಕಡಿತಗೊಳಿಸಿದ ಬೆಸ್ಕಾಂ ಸಿಬ್ಬಂದಿಗೆ ಚಪ್ಪಲಿ ಏಟು

    ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೆಸ್ಕಾಂ ಕಚೇರಿ ಬಳಿ ನಡೆದಿದೆ.

    ಹಲವು ದಿನಗಳಿಂದ ಶಿವರಾಜ್ ಎನ್ನುವವರು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಹಾಕಿಕೊಂಡಿದ್ದರು. ಈ ಬಗ್ಗೆ ಲೈನ್‍ಮ್ಯಾನ್ ಕೇಶವ ಅವರು ಒಂದು ಬಾರಿ ಶಿವರಾಜ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ನಿನ್ನೆ ಆಕಸ್ಮಿಕವಾಗಿ ಲೈನ್ ಮ್ಯಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗಲು ಅಕ್ರಮ ಮತ್ತೆ ಮುಂದುವರೆದಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬೆಸ್ಕಾಂ ಕಚೇರಿಗೆ ಸಿಬ್ಬಂದಿ ಹಿಂತಿರುಗಿದ್ದರು.

    ಇದರಿಂದಾಗಿ ಆಕ್ರೋಶಗೊಂಡ ಶಿವರಾಜ್ ಹಾಗೂ ಅವರ ಮಕ್ಕಳಾದ ಚೇತನ್ ಮತ್ತು ನಿತನ್ ಬೆಸ್ಕಾಂ ಕಚೇರಿ ಬಳಿ ಬಂದು ದಾಂಧಲೆ ಮಾಡಿದ್ದಾರೆ. ಬೆಸ್ಕಾಂ ಕಚೇರಿ ಮುಂಭಾಗದಲ್ಲೇ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಆಗ ಪರಸ್ಪರ ಸಿಬ್ಬಂದಿಗಳು ಹಾಗೂ ಶಿವರಾಜ್ ಕುಟುಂಬಸ್ತರ ನಡುವೇ ಮಾತಿನ ಚಕಮಕಿ, ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಬಳಿಕ ದಿಢೀರ್ ಎಂದು ಬೈಕ್‍ನಲ್ಲಿದ್ದ ಮಾರಾಕಾಸ್ತ್ರ ತೆಗೆದ ಶಿವರಾಜ್, ಬೆಸ್ಕಾಂ ಸಿಬ್ಬಂದಿಯಾಗಿರುವ ಕೇಶವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

    ಈ ವೇಳೆ ಚಪ್ಪಲಿ ಹಾಗೂ ಕೋಲಿನಿಂದಲೂ ಸಹ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ

    ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ

    ಬೆಂಗಳೂರು: ಕೊರೊನಾ ವೇಳೆಯಲ್ಲೂ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಕೊರೊನಾದ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸರ್ಕಾರ ರಸ್ತೆಗಿಳಿಸಿತ್ತು. ಸಾರ್ವಜನಿರ ಹಿತ ದೃಷ್ಟಿಯಿಂದ ಅಂದು ಬಿಎಂಟಿಸಿ ನೌಕಕರು ಕೊರೊನಾ ನಡುವೆಯೂ ಎದರದೇ ಕಾರ್ಯನಿರ್ವಹಿಸಿದ್ದರು. ಕೊರೊನಾ ವೇಳೆಯೂ ಕೆಲಸ ಮಾಡಿದ್ದ ಸಿಬ್ಬಂದಿಗೆ ಬಿಎಂಟಿಸಿ ಒಂದು ದಿನ ವಂಡರ್ ಲಾಗೆ ಹೋಗುವ ಆಫರ್ ನೀಡಿದೆ.

    ಬಿಎಂಟಿಸಿ ಸಿಬ್ಬಂದಿಗಳಿಗೆ ಒಟ್ಟು 200 ವಂಡರ್ ಲಾ ಉಚಿತ ಪಾಸ್‍ಗಳನ್ನು ವಿತರಿಸಿದ್ದು, ಈ ಒಂದು ಪಾಸ್‍ನಲ್ಲಿ ನಾಲ್ಕು ಜನ ಹೋಗುವಂತೆ ಅವಕಾಶ ಮಾಡಿಕೊಟ್ಟಿದೆ. Corona-eleven.wonderland.comಗೆ ಹೋಗಿ ಕೂಪನ್ ಕೋಡ್ ನಮೂದಿಸಿದರೆ ವಂಡರ್ ಲಾಗೆ ಹೋಗಿ ಎಂಜಾಯ್ ಮಾಡಬಹುದುದಾಗಿದೆ.

  • ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    – ದಸರಾ ಪ್ರಯುಕ್ತ ವಿಶೇಷ ಉಡುಗೊರೆ
    – ಗಿಫ್ಟ್ ವೀಡಿಯೋ ಸಖತ್ ವೈರಲ್

    ನವದೆಹಲಿ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಅಲಿಯಾ ಭಟ್ ನಂತರ ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

    ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ ಕೂಡ ನೆರವೇರಿಸಿದ್ದಾರೆ.

    ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿ ಸಿಬ್ಬಂದಿಯ ಸಂತಸ, ಸಂಭ್ರಮ ಮತ್ತಷ್ಟು ಹೆಚ್ಚಿಸಿದ್ದಾರೆ. ವಿಶೇಷ ಅಂದರೆ ಇದೇ ಸಂದರ್ಭದಲ್ಲಿ ಜಾಕ್ವೆಲಿನ್ ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ವೀಡಿಯೋದಲ್ಲಿ ಊದಿನ ಕಡ್ಡಿ ಹಾಗೂ ಸ್ವೀಟ್ ಹಿಡಿದುಕೊಂಡು ನಿಂತಿರುತ್ತಾರೆ. ಈ ವೇಳೆ ಸಿಬ್ಬಂದಿಗೆ ಒಡೆಯಲು ತೆಂಗಿನ ಕಾಯಿ ಹಿಡಿದುಕೊಂಡು ಬರುತ್ತಾರೆ. ಅಲ್ಲದೆ ನಟಿಯನ್ನು ಹಿಂದೆ ಸರಿಯುವಂತೆ ಹೇಳಿ ಕುಳಿತುಕೊಂಡು ತೆಂಗಿನ ಕಾಯಿ ಒಡೆಯುವ ಮೂಲಕ ಕಾರಿಗೆ ಆಯುಧ ಪೂಜೆ ಮಾಡಿರುವುದನ್ನು ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಜಾಕ್ವೆಲಿನ್ ಮೂವಿ ಸೆಟ್ ನಲ್ಲಿರುವ ಒಂದು ಫೋಟೋ ಕೂಡ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರ ಭಾನುವಾರ ಹೇಗಿತ್ತು? ಶೀಘ್ರವೇ ತಮಾಷೆಯ ಪ್ರಾಜೆಕ್ಟ್ ಒಂದು ಬರಲಿದೆ. ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

    ಜಾಕ್ವೆಲಿನ್ ಅವರು ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರು. ನಟಿ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಾಕ್ವೆಲಿನ್ ಅವರು ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

     

    View this post on Instagram

     

    How was everyone’s Sunday?? Fun project coming up soon! #myhappyplace❤️

    A post shared by Jacqueline Fernandez (@jacquelinef143) on

    ಜಾಕ್ವೆಲಿನ್ ಸಪ್ರ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದ್ದಾರೆ. ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದ್ರಿ. ಆದರೆ ನನಗೆ ಈ ಸರ್ಪ್ರೈಸ್ ನೀಡುತ್ತೀರಿ ಎಂದು ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ” ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

  • ಠಾಣೆಗೆ ಬೆಂಕಿ ಬಿದ್ರೂ ದೇಶಪ್ರೇಮ ಮೆರೆದ ಡಿಜೆ ಹಳ್ಳಿ ಪೊಲೀಸರು

    ಠಾಣೆಗೆ ಬೆಂಕಿ ಬಿದ್ರೂ ದೇಶಪ್ರೇಮ ಮೆರೆದ ಡಿಜೆ ಹಳ್ಳಿ ಪೊಲೀಸರು

    ಬೆಂಗಳೂರು: ಪೊಲೀಸ್ ಠಾಣೆಗೆ ಬೆಂಕಿ ಬಿದ್ದರೂ ಡಿಜಿ ಹಳ್ಳಿ ಪೊಲೀಸರು ದೇಶಪ್ರೇಮ ಮೆರೆದಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.

    ಆರೋಪಿಗಳು ಮಾಡಿದ್ದ ಗಲಭೆಯಿಂದ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ವಾಹನಗಳೆಲ್ಲ ಸುಟ್ಟು ಕರಕಲಾಗಿವೆ. ಅಲ್ಲದೇ ಠಾಣೆಯ ಒಳಗೆ, ಹೊರಗೂ ಹಾನಿಯಾಗಿದೆ. ಆದರೂ ಠಾಣೆಯ ಹೊರಗಡೆ ಸಿಬ್ಬಂದಿ ದೇಶಕ್ಕೆ ಗೌರವ ಸೂಚಿಸಿದ್ದಾರೆ. ಮೊದಲಿಗೆ ಕಿಡಿಗೇಡಿಗಳಿಂದ ಹಾನಿಯಾಗಿದ್ದ ಧ್ವಜ ಸ್ತಂಭವನ್ನು ಡಿಜೆ ಹಳ್ಳಿ ಪೊಲೀಸರು ಸ್ವಚ್ಛಗೊಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಸಗುಡಿಸಿ, ಧ್ವಜ ಸ್ತಂಭ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಠಾಣೆಯ ಮುಂದೆ ಸಿಂಗಾರ ಮಾಡಲಾಗಿತ್ತು. ನಂತರ ಎಸಿಪಿ ರವಿ ಪ್ರಸಾದ್ ಅವರು ಧ್ವಜಾರೋಹಣ ಮಾಡಿದ್ದಾರೆ.

    ಡಿಸಿಪಿ ಶರಣಪ್ಪ ಅವರು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಲು ಮಾತನಾಡಿದ್ದಾರೆ. ಎಲ್ಲರಿಗೂ ಪೊಲೀಸ್ ಆಗುವುದಕ್ಕೆ ಅವಕಾಶ ಇದಿಯಾ? ನಿಮ್ಮ ಜೊತೆ ಪರೀಕ್ಷೆ ಬರೆದವರೆಲ್ಲಾ ಆಯ್ಕೆಯಾಗಿದ್ದಾರ ಎಂದು ಪ್ರಶ್ನೆ ಮಾಡಿದರು. ನಾವೆಲ್ಲ ಯೂನಿಫಾರ್ಮ್ ಧರಿಸುವುದಕ್ಕೆ ಲಕ್ಕಿಯಾಗಿದ್ದೇವೆ. ಬೆಂಗಳೂರು ಪೊಲೀಸರಾಗಿ ಕೆಲಸ ಮಾಡೋದು ಅದೃಷ್ಟ. ಕಳೆದ ನಾಲ್ಕೈದು ದಿನದ ಬಂದೋಬಸ್ತ್ ಮಾಡಿದ್ದರ ಪ್ರತಿಫಲವಾಗಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಯಿತು. ನೀವು ಒಳ್ಳೆಯ ರೀತಿ ಕೆಲಸ ಮಾಡಿದ್ದೀರಿ ಎಂದು ಹೇಳಿದರು.

    ಇದು ಎಷ್ಟು ದಿನದವರೆಗೆ ಮುಂದುವರಿಯುತ್ತೋ ಅಲ್ಲಿಯವರೆಗೂ ಇದೇ ಉತ್ಸಾಹ ಇರಬೇಕು. ತರಬೇತಿ ಮಾಡಿದಾಗ ಕಲಿತ ವಿದ್ಯೆ ತೋರಿಸಲು ಅವಕಾಶ ಸಿಕ್ಕಿದೆ. ಪರಿಸ್ಥಿತಿ ನಿಯಂತ್ರಣವಾಗಿದೆ ಎಂದು ನಿರ್ಲಕ್ಷ ಮಾಡಬೇಡಿ. ಮೈ ಮರೆತರೆ ಮತ್ತೊಂದು ಏನಾದರೂ ಆಗಬಹುದು. ನಿಮ್ಮ ನಿಮ್ಮ ಪಾಯಿಂಟ್‍ಗಳಲ್ಲಿ ಹುಷಾರಾಗಿ ಕೆಲಸ ಮಾಡಿ. ಯಾವುದೇ ರೀತಿಯ ಮುಲಾಜು, ಫ್ರೀ ಕೊಡಬೇಡಿ ಎಂದು ಪೊಲೀಸರಿಗೆ ಡಿಸಿಪಿ ಸೂಚನೆ ನೀಡಿದರು.

  • 5ನೇ ದಿನಕ್ಕೆ ಕಾಲಿಟ್ಟ ಕಿಮ್ಸ್ ವೈದ್ಯಕೀಯ ಸಿಬ್ಬಂದಿಯ ಪ್ರತಿಭಟನೆ

    5ನೇ ದಿನಕ್ಕೆ ಕಾಲಿಟ್ಟ ಕಿಮ್ಸ್ ವೈದ್ಯಕೀಯ ಸಿಬ್ಬಂದಿಯ ಪ್ರತಿಭಟನೆ

    ಹುಬ್ಬಳ್ಳಿ: ಎನ್.ಪಿ.ಎಸ್ ಸೌಲಭ್ಯ ಸೇರಿದಂತೆ ಜ್ಯೋತಿ ಸಂಜೀವಿನಿ ಒದಗಿಸುವಂತೆ ಆಗ್ರಹಿಸಿ ಕಿಮ್ಸ್ ಶುಶ್ರೂಷಾ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಯಾವುದೇ ದಕ್ಕೆ ಉಂಟಾಗದಂತೆ ಪ್ರತಿಭಟನೆ ನಡೆಸಿದರು.

    ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದೆ ಕಾರ್ಯ ಮಾಡಿದ್ದೇವೆ. ಪಿಂಚಣಿ ಸೌಲಭ್ಯ ಕುಟುಂಬ ಕಲ್ಯಾಣ ಇಲಾಖೆಗೆ ಇದ್ದು ನಮಗೂ ನೀಡಿ ಎಂದು ಒತ್ತಾಯಿಸಿದರು.

    ವೈದ್ಯಕೀಯ ವಿದ್ಯಾಲಯದಲ್ಲಿ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಾರತಮ್ಯವನ್ನು ನಿಭಾಯಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಮೂಲ ವೇತನ ಶೇ.50ರಷ್ಟು ಹೆಚ್ಚುವರಿ ನೀಡಿ ಎಂದು ಸ್ಟಾಪ್ ನರ್ಸಿಂಗ್ ಸಿಬ್ಬಂದಿಯಿಂದ ಒತ್ತಾಯಸಿದ ಅವರು, ಬೇಡಿಕೆ ಈಡೇರಿರುವವರೆಗೂ ಕಪ್ಪು ಪಟ್ಟಿ ಧರಿಸಿಯೇ ಕೆಲಸ ಪ್ರಾರಂಭಿಸುತ್ತೇವೆ ಎಂದು ಪಟ್ಟು ಹಿಡಿದರು.