Tag: staff

  • ಕೊರೊನಾ ವಾರಿಯರ್ಸ್‌ಗೆ ಸಚಿವ ಪ್ರಭು ಚವ್ಹಾಣ್ ಸನ್ಮಾನ

    ಕೊರೊನಾ ವಾರಿಯರ್ಸ್‌ಗೆ ಸಚಿವ ಪ್ರಭು ಚವ್ಹಾಣ್ ಸನ್ಮಾನ

    ಬೀದರ್: ಚಿಟಗುಪ್ಪಾ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಕೊರೊನಾ ಕೊರೊನಾ ವಾರಿಯರ್ಸ್‌ಗೆ ಸಚಿವ ಸನ್ಮಾನ ಪ್ರಭು ಚವ್ಹಾಣ್ ಸನ್ಮಾನ ಮಡಿದ್ದಾರೆ.

    ವೈದ್ಯಾಧಿಕಾರಿಗಳು, ಶುಶ್ರೂಷಕರು, ಡಾಟಾ ಎಂಟ್ರಿ ಆಪರೇಟರ್, ಲ್ಯಾಬ್ ಟೆಕ್ನಿಷಿಯನ್, ಪೊಲೀಸ್, ಕಂದಾಯ ಇಲಾಖೆಯ ಕೊರೊನಾ ವಾರಿಯರ್ಸ್ ಸೇರಿದಂತೆ ಒಟ್ಟು 64 ಜನರಿಗೆ ಸಚಿವರು ಶಾಲು ಹೋದಿಸಿ,ಗೌರವಿಸಲಾಗಿದೆ. ಇದನ್ನೂ ಓದಿ:  ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ 2 ದಿನ ಆಸ್ಪತ್ರೆಗೆ ದಾಖಲು

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ 2020ರಲ್ಲಿ ಒಕ್ಕರಿಸಿದ ಕೊರೊನಾ ವೈರಸ್ ಜನರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಅದೇ ರೀತಿ ಈ ವರ್ಷವು ಕೂಡ 2ನೇ ಅಲೆಯ ರೂಪದಲ್ಲಿ ಜನರನ್ನು ಕಾಡುತ್ತಿದೆ. ಈ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಾವು ಕೆಲವರನ್ನು ಕಳೆದುಕೊಂಡಿದ್ದೇವೆ. ಈ ವೈರಸ್‍ನ್ನು ನಿಯಂತ್ರಿಸಲು ಜಿಲ್ಲಾಡಳಿತ, ತಾಲೂಕಾ ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಬಹಳಷ್ಟು ಇಲಾಖೆಗಳು ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ ಎಂದಿದ್ದಾರೆ.

    ತಮ್ಮ ಜೀವಕ್ಕೆ ಹೆದರದೆ ಕೊರೊನಾ ಸೋಂಕಿತರ ಸೇವೆ ಮಾಡಿದ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಗೌರವಿಸಿ ನಾವು ಅವರನ್ನು ಕೊರೊನಾ ವಾರಿಯರ್ಸ್ ಎಂದು ಸನ್ಮಾನ ಮಾಡುತ್ತಿದ್ದೇವೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.

    ಹುಮ್ನಬಾದ್ ಶಾಸಕರಾದ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಬಿಜೆಪಿ ಮುಖಂಡರಾದ ಸುಭಾಷ್ ಕಲ್ಲೂರ ಹಾಗೂ ಪುರಸಭೆಯ ಅಧಿಕಾರಿಗಳು,ತಹಸೀಲ್ದಾರರು ಸೇರಿದಂತೆ ಇನ್ನೀತರರು ಉಪಸ್ಥಿತಿ ಇದ್ದರು.

  • ಕೋವಿಡ್ ಲಸಿಕೆಗಾಗಿ ನೂಕುನುಗ್ಗಲು- ಸಾಮಾಜಿಕ ಅಂತರ, ಮಾಸ್ಕ್ ಮರೆತರು

    ಕೋವಿಡ್ ಲಸಿಕೆಗಾಗಿ ನೂಕುನುಗ್ಗಲು- ಸಾಮಾಜಿಕ ಅಂತರ, ಮಾಸ್ಕ್ ಮರೆತರು

    ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲಿಗಳಿಗಾಗಿ ಆಯೋಜಿಸಿದ್ದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಆಗಿದೆ. ಕೊರೊನಾ ನಿಯಮವನ್ನು ಗಾಳಿಗೆ ತೂರಿ ಜನರು ಲಸಿಕೆಗಾಗಿ ಮುಗಿಬಿದ್ದಿದ್ದರು.

    ನಗರದ ಎಪಿಎಂಸಿ ಕಚೇರಿ ಬಳಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಹಮಾಲರು, ಸಿಬ್ಬಂದಿ, ವರ್ತಕರಿಗಾಗಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಇದರ ಅಂಗವಾಗಿ ಇಂದು ಹಮಾಲಿಗಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿತ್ತು. ಹಮಾಲರ ಜೊತೆ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು, ನೂಕು ನುಗ್ಗಲು ಉಂಟಾಗಿದೆ.

    ಲಸಿಕೆ ಹಾಕಿಸಿಕೊಳ್ಳಲು ಬಂದ ಹಮಾಲರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇತ್ತು. ಸಾಮಾಜಿಕ ಅಂತರ, ಮಾಸ್ಕ್ ಮರೆತು ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಳಿಗ್ಗೆಯಿಂದ 30 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಎಪಿಎಂಸಿ ಯಲ್ಲಿ ಒಟ್ಟು 687 ಜನ ಹಮಾಲಿಗಳು ಇದ್ದಾರೆ. ಅದರಲ್ಲಿ 407 ಜನ 18 ರಿಂದ 45 ವರ್ಷದೊಳಗಿನವರಿದ್ದಾರೆ. ಇದರಲ್ಲಿ 75 ಜನಕ್ಕೆ ಅಧಿಕಾರಿಗಳೇ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಕರೆದಿದ್ದರು. ಆದರೆ ನಮಗೂ ಮೆಸೇಜ್ ಬಂದಿದೆ ಅಂತ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿದೆ.  ಇದನ್ನೂ ಓದಿ:  ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ

    ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗದೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕದ ವ್ಯವಸ್ಥೆಯನ್ನ ಸಾರಿಗೆ ಬಸ್‍ಗಳಲ್ಲಿ ಮಾಡಲಾಗುತ್ತಿದೆ. ಎನ್.ಈ.ಕೆ.ಎಸ್.ಆರ್. ಟಿ.ಸಿಯ ಮೂರು ಬಸ್‍ಗಳನ್ನ ಸಂಚಾರಿ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಬಸ್‍ನಲ್ಲಿ 4 ಬೆಡ್ ಹಾಗೂ ಸೋಂಕಿತರು ಕುಳಿತುಕೊಂಡು ಆಕ್ಸಿಜನ್ ಪಡೆಯಲು 4 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್‍ನಲ್ಲಿ 5 ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆಯಿದೆ. ಈ ಮೂರು ಬಸ್‍ಗಳನ್ನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕಾಸ್ಪತ್ರೆ ಮುಂದೆ ನಿಲ್ಲಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದವರು, ಉಸಿರಾಟ ತೊಂದರೆ ಉಂಟಾದವರಿಗೆ ಬಸ್ ನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ

  • ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

    ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

    ಹುಬ್ಬಳ್ಳಿ: ಕೋವಿಡ್ ಸೋಂಕಿತ ಮಹಿಳೆ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿಯ ಸಿರಗುಪ್ಪ ತಾಲೂಕಿನ 52 ವರ್ಷ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸೋಂಕಿತೆಯ ಪುತ್ರ ಮಾಡಿದ್ದಾರೆ.

    ಕೋವಿಡ್ ಸೋಂಕು ತಗುಲಿ ಪಾಶ್ರ್ವವಾಯು ಪೀಡಿತೆಯಾಗಿರುವ ನನ್ನ ತಾಯಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

    ಆರೋಪ ನಿರಾಕರಿಸಿದ ಆಸ್ಪತ್ರೆ ಎಂಡಿ: ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪವನ್ನು ಬಾಲಾಜಿ ಆಸ್ಪತ್ರೆಯ ಎಂಡಿ ಡಾಕ್ಟರ್ ಕ್ರಾಂತಿ ಕಿರಣ್ ನಿರಾಕರಿಸಿದ್ದಾರೆ. ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಆಸ್ಪತ್ರೆಯ ಸಿಬ್ಬಂದಿಯಿಂದ ತಪ್ಪು ನಡೆದಿಲ್ಲ. ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಶುದ್ದ ಸುಳ್ಳು. ಸೋಂಕಿತ ಮಹಿಳೆಗೆ ಪಾಶ್ರ್ವವಾಯು ಆಗಿದೆ. ಅವರನ್ನ ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಲಿಫ್ಟ್ ಮಾಡಿರಬಹುದು ಎಂದು ಹೇಳಿದ್ದಾರೆ.

    ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಪುತ್ರ ಆಸ್ಪತ್ರೆಯ ಅನುಮತಿ ಇಲ್ಲದೇ ಕೋವಿಡ್ ವಾರ್ಡ್ ಪ್ರವೇಶ ಮಾಡಿದ್ದಾರೆ. ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ಎಲ್ಲವೂ ದಾಖಲಾಗಿದೆ. ತನಿಖೆಯಿಂದ ಎಲ್ಲವೂ ದೃಢಪಡಲಿದೆ ಎಂದಿದ್ದಾರೆ.

  • ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಭೋಪಾಲ್: ಕೊರೊನಾ ರೋಗಕ್ಕೆ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ   ಗ್ರಾಮಸ್ಥರು ಥಳಿಸಿರುವ ಘಟನೆ ಮಧ್ಯಪ್ರದೇಶದ ಒಂದು ಹಳ್ಳಿಯೊಂದರಲ್ಲಿ ನಡೆದಿದೆ.

    ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಿಬ್ಬಂದಿಗಳ ತಂಡವು ಮಹಿಳಾ ತಹಶೀಲ್ದಾರ್ ನೇತೃತ್ವದಲ್ಲಿ ಮಧ್ಯಪ್ರದೇಶದ ಉಜ್ಜೈನ್ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಪರ್ಡಿ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ತಮ್ಮ ಹಳ್ಳಿಗೆ ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

    ಈ ಮೊದಲು ಕೂಡ ಆರೋಗ್ಯ ಸಿಬ್ಬಂದಿ ಈ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಆದರೆ ಆಗಲೂ ಸಹ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿರಲಿಲ್ಲ. ಮತ್ತೆ ತಂಡವು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಹೇಳಲು ಮುಂದಾಗಿದ್ದರು. ಈ ವೇಳೆ, ಕೆಲವು ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ತಂಡದ ಓರ್ವ ವ್ಯಕ್ತಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಮೊಹಮ್ಮದ್ ಖುರೇಷಿ ಅದೇ ಗ್ರಾಮ ಪಂಚಾಯತಿಯ ಮಹಿಳಾ ಪದಾಧಿಕಾರಿಯ ಪತಿ ಎಂದು ತಿಳಿದು ಬಂದಿದ್ದು, ಆತ ಕೂಡ ಆರೋಗ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಮಹಿಳಾ ತಹಶೀಲ್ದಾರ್, ಎನ್‍ಎಂ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪಟ್ವಾಡಿಗಳು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಗೊಂದಲಗಳನ್ನು ನಿವಾರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಪ್ರೇರೇಪಿಸಲು ಮುಂದಾಗಿದ್ದರು. ಈ ಕುರಿತಾಗಿ ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಸ್ಥರ ಜೊತೆ ಮಾತನಾಡುತ್ತಿರುವಾಗ, 50 ಮಂದಿಯನ್ನೊಳಗೊಂಡ ಒಂದು ಗುಂಪು   ನಮ್ಮ ಮೇಲೆ ಮೇಲೆ ದಾಳಿ ಮಾಡಿದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

    ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರೆ, ಗ್ರಾಮಸ್ಥರು ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ತಹಶೀಲ್ದಾರ್ ಹಾಗೂ ತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾದರು. ಆದರೆ ಈ ದಾಳಿಯಲ್ಲಿ ನನ್ನ ತಲೆಗೆ ಪೆಟ್ಟಾಗಿದೆ ಎಂದು ಗಾಯಗೊಂಡ ವ್ಯಕ್ತಿ ಶಕೀಲ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಎಸ್‍ಪಿ ಆಕಾಶ್ ಭೂರಿಯಾ ಹೇಳಿದರು.

  • ಕೊಡಗು ಕೋವಿಡ್ ಆಸ್ಪತ್ರೆಯ 31 ಸಿಬ್ಬಂದಿಗೆ ಪಾಸಿಟಿವ್

    ಕೊಡಗು ಕೋವಿಡ್ ಆಸ್ಪತ್ರೆಯ 31 ಸಿಬ್ಬಂದಿಗೆ ಪಾಸಿಟಿವ್

    ಮಡಿಕೇರಿ: ನಗರದ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 31 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅದರಲ್ಲಿ 8 ವೈದ್ಯರಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು, ಡಿ ಗ್ರೂಪ್ ನೌಕರರು, ನರ್ಸ್, ಮೆಡಿಕಲ್ ಆಫೀಸರ್ಸ್ ಸೇರಿ 31 ಜನರಿಗೆ ಕೊರೊನಾ ತಗುಲಿದೆ.

    ಕೋವಿಡ್ ಆಸ್ಪತ್ರೆಯಲ್ಲಿ ನಿತ್ಯ ಕೆಲಸ ಮಾಡುವ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಮೊದಲ ಅಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಪಾಸಿಟಿವ್ ಬಂದಿರಲ್ಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಒಟ್ಟು 31 ಜನರನ್ನು 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

    ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ತರಬೇತಿ ನಿರತ ಮತ್ತು ಖಾಯಂ ವೈದ್ಯರು ಸೇರಿ 123 ವೈದ್ಯರು ಕರ್ತವ್ಯ ಮಾಡುತ್ತಿದ್ದಾರೆ. ಒತ್ತಡ ಇದ್ದರೂ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತಿದ್ದೇವೆ. ಸಿಬ್ಬಂದಿ ಕೊರತೆಯಿಂದ ಈಗ ಕೆಲಸ ಮಾಡುತ್ತಿರುವವರೇ ಅನಿವಾರ್ಯತೆ ಬಂದಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಇರುವ ಸಿಬ್ಬಂದಿಗೆ ಮನವಿ ಮಾಡಿಕೊಂಡರು ಕರ್ತವ್ಯ ನಿರ್ವಹಣೆ ಮಾಡುತ್ತಿದೇವೆ ಎಂದು ಮೆಡಿಕಲ್ ಸೂಪರಿಡೆಂಟೆಂಡ್ ಲೋಕೇಶ್ ಮಾಹಿತಿ ನೀಡಿದರು.

  • ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ತಿರುಗಾಟ- ಎಸ್‍ಐಗೆ ಎಸಿ, ತಹಶೀಲ್ದಾರ್ ಅವಾಜ್

    ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ತಿರುಗಾಟ- ಎಸ್‍ಐಗೆ ಎಸಿ, ತಹಶೀಲ್ದಾರ್ ಅವಾಜ್

    – ಇನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ವಾರ್ನ್

    ಮಂಡ್ಯ: ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ತಿರುಗಾಡಿದ್ದು, ದಂಡ ಹಾಕಿದ್ದಕ್ಕೆ ಎಸ್‍ಐಗೆ ಎಸಿ ಹಾಗೂ ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಘಟನೆ ನಡೆದಿದ್ದು, ಹೆಲ್ಮೆಟ್ ಹಾಕದೆ ತಿರುಗಾಡಿದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ್ದಕ್ಕೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಅಹಮದ್ ಅವರು ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‍ಐ ರವಿಶಂಕರ್ ಅವರಿಗೆ ಅವಾಜ್ ಹಾಕಿದ್ದಾರೆ. ಇನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ವಾರ್ನ್ ಮಾಡಿದ್ದಾರೆ.

    ವಾಹನ ತಪಾಸಣೆ ವೇಳೆ ಹೆಲ್ಮೆಟ್ ಹಾಕದೆ ಬೈಕ್ ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ಎಸ್‍ಐ ದಂಡ ಹಾಕಿದ್ದರು. ದಂಡ ಹಾಕಿದ ವಿಷಯ ತಿಳಿದು ಸ್ಥಳಕ್ಕಾಗಮಿಸಿ, ಎಸಿ, ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ನಾನು ಮ್ಯಾಜಿಸ್ಟ್ರೆಟ್ ಹೇಳುತ್ತಿದ್ದೇನೆ ಇನ್ನು ದಂಡ ಹಾಕಬೇಡಿ ಎಂದು ತಹಸೀಲ್ದಾರ್ ವಾರ್ನಿಂಗ್ ಮಾಡಿದ್ದಾರೆ. ಇದೇ ಫಸ್ಟ್ ಆ್ಯಂಡ್ ಲಾಸ್ಟ್ ಕಂದಾಯ ಇಲಾಖೆ ಸಿಬ್ಬಂದಿಯನ್ನು ಪರಿಶೀಲನೆ ಮಾಡಬೇಡಿ ಎಂದು ಬೆದರಿಸಿದ್ದಾರೆ. ಈ ಮೂಲಕ ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆ. ಎಸ್‍ಐ ಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು, ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನಿದೆಯೇ ಎಂದು ಪ್ರಶ್ನಿಸಿದ್ದಾರೆ.

  • 100 ಸಿಬ್ಬಂದಿಯನ್ನು ಕೊರೊನಾ ಕರ್ತವ್ಯಕ್ಕೆ ಕಳುಹಿಸಿದ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ

    100 ಸಿಬ್ಬಂದಿಯನ್ನು ಕೊರೊನಾ ಕರ್ತವ್ಯಕ್ಕೆ ಕಳುಹಿಸಿದ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ

    ಚಾಮರಾಜನಗರ: ಕೊರೊನಾ ಕರ್ತವ್ಯಕ್ಕೆ ಸಿಬ್ಬಂದಿ ಕಳುಹಿಸಲು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಮ್ಮ 100 ಮಂದಿ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ಕಳುಹಿಸಿದ್ದಾರೆ.

    ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಈಗ ಕೊರೊನಾ ವಾರಿಯರ್‍ಗಳಾಗಿ ಫೀಲ್ಡಿಗಿಳಿದಿದ್ದು, ಸೋಂಕಿತರ ಆರೈಕೆ ಜೊತೆಗೆ ಕೊರೊನಾ ಸಮರೋಪಾದಿ ಕಾರ್ಯದಲ್ಲೇ ಇವರು ದೇವರನ್ನು ಕಾಣುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಮ್ಮ 100 ಮಂದಿ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ಕಳುಹಿಸಿದ್ದಾರೆ. ದೇಗುಲದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ.

    ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸ್ವಚ್ಛತೆ ಮತ್ತು ಸೆಕ್ಯೂರಿಟಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸಿಬ್ಬಂದಿ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಜಯವಿಭವಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಮುಂದೆಯೂ ಕೊರೊನಾ ಕರ್ತವ್ಯಕ್ಕೆ ಅಗತ್ಯ ಬಿದ್ದಲ್ಲಿ ಜಿಲ್ಲಾಡಳಿತದಕರೆಗೆ ಓಗೊಡಲಿದ್ದೇವೆ ಎಂದಿದ್ದಾರೆ.

  • ಕೊರೊನಾ ಗೆದ್ದ 103ರ ವೃದ್ಧ

    ಕೊರೊನಾ ಗೆದ್ದ 103ರ ವೃದ್ಧ

    ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಮೂಲದ 103 ವರ್ಷದ ವೃದ್ಧನೋರ್ವ ಇಳಿವಯಸ್ಸಿನಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ವೀರೇಂದ್ರ ನಗರ ಪ್ರದೇಶದ ನಿವಾಸಿಯಾಗಿರುವ ಶಮರಾವ್ ಇಂಗ್ಲೆ ಕೊರೊನಾ ಸೋಂಕಿಗೆ ಒಳಗಾಗಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಗೆ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಕೊರೊನಾದಿಂದ ಚೇತರಿಸಿಕೊಂಡು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಈ ಬಗ್ಗೆ ಆಸ್ಪತ್ರೆಯ ವೈದ್ಯರು, ಹಿರಿಯರಾದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಿದರು. ಶನಿವಾರ ಅವರು ಆಸ್ಪತ್ರೆಯಿಂದ ಹೊರಹೋಗುವಾಗ ನಗುಮುಖದಿಂದ ತೆರಳಿದರು ಎಂದು ಹೇಳಿದ್ದಾರೆ.

    ಶಮರಾವ್ ಇಂಗ್ಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಪಾಲ್ಘರ್ ಜಿಲ್ಲಾಧಿಕಾರಿ ಡಾ. ಮಣಿಕ್ ಗುರ್ಸಾಲ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಹೂವುಗಳನ್ನು ಹಾಕುವ ಮೂಲಕ ಬೀಳ್ಕೊಟ್ಟಿದ್ದಾರೆ.

  • ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಕೋವಿಡ್ ಆಸ್ಪತ್ರೆ ನುಗ್ಗಿ ಗಲಾಟೆ ಮಾಡಿದ್ದ ಯುವಕ ಅರೆಸ್ಟ್

    ಚಿಕ್ಕಬಳ್ಳಾಪುರ: ಕೋವಿಡ್ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ ವೈದ್ಯರು-ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕ ಜೈಲುಪಾಲಾಗಿದ್ದಾನೆ. ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ತಪ್ಪು ಗ್ರಹಿಕೆ ಮಾಡಿಕೊಂಡ ಕೆಲ ಕೊರೊನಾ ಸೋಂಕಿತರು ಆಕ್ಸಿಜನ್ ಖಾಲಿ ಆಗಿದೆ. ನಮಗೆ ಆಕ್ಸಿಜನ್ ಸಿಗ್ತಿಲ್ಲ ನಾವ್ ಸತ್ತೋಗಬಹುದು ಅಂತ ಕೆಲ ಕೊರೊನಾ ಸೋಂಕಿತರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.

    ಇದರಿಂದ ಆತಂಕದಿಂದ ಕೋವಿಡ್ ಆಸ್ಪತ್ರೆ ಬಳಿ ಬಂದಿದ್ದ ಜಾತವಾರದ ಜಗದೀಶ್ ಹಾಗೂ ಪವನ್ ಸೇರಿ ಇನ್ನಿತರರು ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಇಬ್ಬರು ಯುವಕರಯ ಆಟೋದಲ್ಲಿ ತಾವೇ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದು ಆಸ್ಪತ್ರೆಯ ಗೇಟ್ ಒಡೆದು ಒಳನುಗ್ಗಿ ತಗೊಳ್ಳಿ ಆಕ್ಸಿಜನ್ ನಾವ್ ಕೊಡ್ತೀವಿ ಅಂತ ಬಹಳ ಜೋರಾಗಿ ಏರು ಧ್ವನಿಯಲ್ಲಿ ವೈದ್ಯರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಹರಿಹಾಯ್ದಿದ್ದರು.

    ಈ ವೇಳೆ ಜಿಲ್ಲಾಸ್ಪತ್ರೆಯ ಡಿ.ಎಸ್ ರಮೇಶ್ ಹಾಗೂ ಡಿ.ಎಚ್.ಓ ಗಲಾಟೆ ಮಾಡ್ತಿದ್ದವರಿಗೆ ಪಿಪಿಇ ಕಿಟ್ ಹಾಕಿ ಆಕ್ಸಿಜನ್ ಇದೆ ಅಂತ ತೋರಿಸಿದ ಮೇಲೆ ಆಕ್ರೋಶಿತರು ಸುಮ್ಮನಾಗಿದ್ದರು. ಈ ಸಂಬಂಧ ಡಿ.ಎಸ್ ರಮೇಶ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಬೆಡ್ ಸಿಗದೇ ಕೋವಿಡ್ ರೋಗಿ ಸಾವು – ವೈದ್ಯರು, ಸಿಬ್ಬಂದಿ ಮೇಲೆ ಸಂಬಂಧಿಕರಿಂದ ಹಲ್ಲೆ

    ಬೆಡ್ ಸಿಗದೇ ಕೋವಿಡ್ ರೋಗಿ ಸಾವು – ವೈದ್ಯರು, ಸಿಬ್ಬಂದಿ ಮೇಲೆ ಸಂಬಂಧಿಕರಿಂದ ಹಲ್ಲೆ

    ನವದೆಹಲಿ: ದೆಹಲಿಯ ಸರಿತಾ ವಿಹಾರದ ಅಪೋಲೋ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಕೋವಿಡ್-19 ರೋಗಿ ಸಾವನ್ನಪ್ಪಿದ್ದಾರೆ. ಇದರಿಂದ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ ವಿರುದ್ಧ ಮೃತರ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಲದ ಮೇಲೆ ರಕ್ತದ ಕಲೆಗಳು, ಕಿಟಕಿ, ಬಾಗಿಲುಗಳು ಸೇರಿದಂತೆ ಆಸ್ಪತ್ರೆಯ ಕೆಲವು ವಸ್ತುಗಳಿಗೆ ಹಾನಿಯಾಗಿದೆ.

    ಇಂದು ಬೆಳಗ್ಗೆ 62 ವರ್ಷದ ಮಹಿಳೆಗೆ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಗದ ಕಾರಣ ಮೃತಪಟ್ಟಿದ್ದರು.ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೇಲೆ ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಆವರಣವನ್ನು ಧ್ವಂಸಗೊಳಿಸಿದ್ದಾರೆ.

    ಘಟನೆ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 8 ಮಂದಿ ಗಾಯಗೊಂಡಿದ್ದಾರೆ. ಕಾಯುವ ಕೊಠಡಿ ವೇಳೆ ಕುರ್ಚಿಗಳು ಕೆಳಗೆ ಬಿದ್ದಿರುವುದು, ಗೋಡೆಗಳು ನುಚ್ಚು ನೂರಾಗಿರುವುದು ಹಾಗೂ ನೆಲದ ಮೇಲೆ ರಕ್ತದ ಕಲೆಗಳಾಗಿರುವುದನ್ನು ಕಾಣಬಹುದಾಗಿದೆ.