Tag: staff

  • ಪರೀಕ್ಷೆ ಬಳಿಕ ಹಾಸ್ಟೆಲ್‍ನಲ್ಲಿ ಪಾರ್ಟಿ-ಆಳ್ವಾಸ್ ಕಾಲೇಜು ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಥಳಿತ

    ಪರೀಕ್ಷೆ ಬಳಿಕ ಹಾಸ್ಟೆಲ್‍ನಲ್ಲಿ ಪಾರ್ಟಿ-ಆಳ್ವಾಸ್ ಕಾಲೇಜು ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಥಳಿತ

    ಮಂಗಳೂರು: ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮತ್ತೊಂದು ಎಡವಟ್ಟು ಮರುಕಳಿಸಿದೆ. ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ ಸೇರಿ ಯದ್ವಾತದ್ವಾ ಹೊಡೆದಿದ್ದಾರೆ.

    ಶನಿವಾರ ರಾತ್ರಿ ಕಾಲೇಜಿನ ಪುಷ್ಪಗಿರಿ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು, ಸಿಬ್ಬಂದಿ ಕೃತ್ಯ ವಿರೋಧಿಸಿ ವಿದ್ಯಾರ್ಥಿಗಳು ಇಂದು ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ.

    ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್ ನಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಆದರೆ ಇದಕ್ಕೆ ವಾರ್ಡನ್ ಮತ್ತು ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಯ ಮಾಹಿತಿ ಪ್ರಕಾರ, ಊಟದ ವಿಚಾರದಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದರಂತೆ. ಇದೇ ನೆಪ ಇಟ್ಟುಕೊಂಡು ವಾರ್ಡನ್ ಮತ್ತು ಇತರೇ ಕಾಲೇಜು ಸಿಬ್ಬಂದಿ ಸೇರಿ ರಾತ್ರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

    20ಕ್ಕಿಂತಲೂ ಹೆಚ್ವು ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಥಳಿಸಿದ್ದಾರೆ. ಥಳಿಸುವ ವಿಡಿಯೋವನ್ನು ಸ್ವತಃ ವಿದ್ಯಾರ್ಥಿಗಳೇ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ, ಮಾಧ್ಯಮಕ್ಕೆ ನೀಡಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಥಳಿಸಿದ ವಿಚಾರದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಕಾಲೇಜು ಕ್ಯಾಂಪಸ್ ನಲ್ಲಿ ಜಟಾಪಟಿ ನಡೀತಿದೆ.

  • ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ಚಿಕ್ಕಬಳ್ಳಾಪುರ: 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ವೀರಾಪುರ ಬಳಿ ನಡೆದಿದೆ.

    ಬೆಸ್ಕಾಂ ನ ಹೊರಗುತ್ತಿಗೆ ನೌಕರ ತೌಶೀಫ್ (20) ಮೃತ ಯುವಕ. ಕಳೆದ ರಾತ್ರಿ ಮಳೆಗೆ ನೆಲಕ್ಕುರುಳಿದ್ದ 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ಏಕಾಏಕಿ ವಿದ್ಯುತ್ ಹರಿದಿದೆ. ಈ ವೇಳೆ ಕಂಬದ ಮೇಲಿದ್ದ ತೌಶೀಫ್ ಗೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಈ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಯಿಂದ ಗ್ರಾಹಕನಿಗೆ ಧಮ್ಕಿ

    ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಯಿಂದ ಗ್ರಾಹಕನಿಗೆ ಧಮ್ಕಿ

    ತುಮಕೂರು: ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರೊಬ್ಬರಿಗೆ ಧಮ್ಕಿ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಮಲ್ಲಸಂದ್ರದ ಬಳಿ ಇರುವ ಹಕ್ಕಿಗೂಡು ಅನ್ನೋ ಹೋಟೆಲ್ ನಲ್ಲಿ ಈ ಅವಾಂತರ ನಡೆದಿದೆ. ಕೊರಟಗೆರೆಯ ನಿವಾಸಿ ನಾಗರಾಜ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಕ್ಕಿಗೂಡು ಹೋಟೆಲ್ ಗೆ ತಿಂಡಿ ತಿನ್ನಲು ಹೋಗಿದ್ದಾರೆ. ಅಲ್ಲಿ ದೋಸೆ ಆರ್ಡರ್ ಮಾಡಿದ್ದಾರೆ. ದೋಸೆ ಜೊತೆ ಕೊಟ್ಟ ಸಾಗುವಿನಲ್ಲಿ ಜಿರಳೆ ಬಿದ್ದಿರೋದು ಪತ್ತೆಯಾಗಿದೆ.

    ಇದನ್ನ ಹೋಟೆಲ್ ಸಪ್ಲೈಯರ್ ಹಾಗೂ ಸಿಬ್ಬಂದಿಗಳಿಗೆ ಕರೆದು ತೋರಿಸಿದ್ದಾರೆ. ಅಲ್ಲದೆ ನಾಗರಾಜ್ ಇದನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಬ್ಬಂದಿ ನಾಗರಾಜ್ ಅವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಹಕ್ಕಿಗೂಡು ಹೋಟೆಲ್ ಹೆದ್ದಾರಿ ಪಕ್ಕದಲ್ಲಿ ಇರೋದ್ರಿಂದ ಪ್ರತಿನಿತ್ಯ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣಿಕರಿಗೆ ಇಲ್ಲೇ ತಿಂಡಿ, ಊಟಕ್ಕೆ ನಿಲ್ಲಿಸ್ತಾರೆ.

    https://www.youtube.com/watch?v=OAfcHUORoqk

  • ಆಸ್ಪತ್ರೆ ಬಳಿ ಗಂಡು ಮಗುವಿಗೆ ಜನ್ಮ ಕೊಟ್ಟು ಅಲ್ಲೇ ಬಿಟ್ಟು ಹೋದ ತಾಯಿ

    ಆಸ್ಪತ್ರೆ ಬಳಿ ಗಂಡು ಮಗುವಿಗೆ ಜನ್ಮ ಕೊಟ್ಟು ಅಲ್ಲೇ ಬಿಟ್ಟು ಹೋದ ತಾಯಿ

    ಚಾಮರಾಜನಗರ: ಹೃದಯಹೀನ ತಾಯಿಯೊಬ್ಬಳು ಆಸ್ಪತ್ರೆಯ ಮುಂಭಾಗದಲ್ಲಿ ನವಜಾತ ಗಂಡು ಶಿಶುವಿಗೆ ಜನ್ಮ ನೀಡಿ ಶಿಶುವನ್ನು ಆಸ್ಪತ್ರೆಯ ಬಳಿಯೇ ಬಿಟ್ಟು ಹೋಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರದ ಜಿಲ್ಲಾಸ್ಪತ್ರೆಯ ಮುಂಭಾಗದ ಜನರಿಕ್ ಔಷಧಿ ಮಳಿಗೆಯ ಬಳಿ ಗಂಡು ಮಗುವಿಗೆ ಜನ್ಮ ನೀಡಿ ಮಗುವನ್ನು ಮಳಿಗೆಯ ಬಳಿ ತಾಯಿ ಬಿಟ್ಟು ಹೋಗಿದ್ದಾಳೆ. ಮಧ್ಯರಾತ್ರಿ 12 ಗಂಟೆ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಮಗುವಿನ ಅಳುವಿನ ಶಬ್ದ ಕೇಳಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ವಿಷಯ ತಿಳಿಸಿದ್ದಾರೆ.

    ನಂತರ ವೈದ್ಯರು ಜಿಲ್ಲಾಸ್ಪತ್ರೆಯ ಶಿಶು ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ್ದು, ಸದ್ಯ ಮಗು ಆರೋಗ್ಯಕರವಾಗಿದೆ.

     

     

  • ಅನ್ನಭಾಗ್ಯ ಅಕ್ಕಿಯ ತೂಕದಲ್ಲಿ ಗೋಲ್‍ಮಾಲ್: ಜನರಿಂದ ಪ್ರತಿಭಟನೆ

    ಅನ್ನಭಾಗ್ಯ ಅಕ್ಕಿಯ ತೂಕದಲ್ಲಿ ಗೋಲ್‍ಮಾಲ್: ಜನರಿಂದ ಪ್ರತಿಭಟನೆ

    ಬೆಂಗಳೂರು: ಸರ್ಕಾರ ರಾಜ್ಯದ ಪ್ರತಿ ಬಡ ಜನರಿಗೆ ಅನ್ನ ಸಿಗಲಿ ಅನ್ನೂ ಉದ್ದೇಶದಿಂದ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದಿದೆ. ಆದ್ರೆ ಅದೇ ಅನ್ನ ಭಾಗ್ಯವನ್ನ ಬಂಡವಾಳ ಮಾಡಿಕೊಂಡಿರೋ ಕೆಲವರು ಬಡ ಜನರಿಗೆ ಸೇರಬೇಕಾದ ಅಕ್ಕಿಗೆ ಕನ್ನ ಹಾಕಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಳ್ಳಿ ಜನರಿಗೆ ತಲುಪಬೇಕಾದ ಅಕ್ಕಿಯ ತೂಕದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಜನರು ನ್ಯಾಯಬೆಲೆ ಅಂಗಡಿ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರ ಪ್ರತಿ ತಿಂಗಳು ಗ್ರಾಮೀಣ ಭಾಗದ ಜನರಿಗೆ ಪಡಿತರ ತಲುಪಲಿ ಅನ್ನೂ ಉದ್ದೇಶದಿಂದ ನಾಲ್ಕೈದು ಹಳ್ಳಿಗಳಿಗೆ ಒಂದೂಂದು ನ್ಯಾಯಬೆಲೆ ಅಂಗಡಿಗಳನ್ನ ತೆರೆದಿದ್ದು, ಈ ಮುಖಾಂತರ ರೈತರಿಗೆ ಪಡಿತರ ಧಾನ್ಯವನ್ನ ತಲುಪಿಸುತ್ತಿದೆ. ಆದ್ರೆ ಕೆಲವರು ಸರ್ಕಾರದ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ್ದು, ಹಳೆ ತಕಡಿಗಳಲ್ಲಿ ತೂಕ ಹಾಕುವ ಮುಖಾಂತರ ಒಂದು ಕೂಪನ್ ಮೇಲೆ, ಒಮ್ಮೆಲೆ ಎರಡರಿಂದ ಮೂರು ಕೆಜಿ ಅಕ್ಕಿಯನ್ನ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಹೀಗಾಗಿ ಹಲವು ತಿಂಗಳುಗಳಿಂದ ತೂಕದ ಮೇಲೆ ಅನುಮಾನಗೊಂಡಿದ್ದ ಸಾರ್ವಜನಿಕರು ಶನಿವಾರ ಸೊಸೈಟಿ ಬಳಿ ಎಲೆಕ್ಟ್ರಾನಿಕ್ ಸ್ಕೇಲ್ ತಂದು ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ಮುಖಾಂತರ ಅನ್ನಭಾಗ್ಯ ಅಕ್ಕಿಯಲ್ಲಿ ಸೊಸೈಟಿ ಸಿಬ್ಬಂದಿ ನಡೆಸುತ್ತಿದ್ದ ಗೋಲ್ ಮಾಲ್ ಬೆಳಕಿಗೆ ತಂದಿದ್ದಾರೆ.

  • ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ತೂಮಕೂರು: ವರ್ಗಾವಣೆ ಪತ್ರ ಕೇಳಿದಕ್ಕೆ ವಿದ್ಯಾರ್ಥಿನಿ ಮೇಲೆ ಕಾಲೇಜು ಸಿಬ್ಬಂದಿ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ತುಮಕೂರು ನಗರದ ವಿವೇಕಾನಂದ ಕಾಮರ್ಸ್ ಕಾಲೇಜಿನಲ್ಲಿ ನಡೆದಿದೆ.

    ರಂಜಿತಾ(ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿ ಮೇಲೆ, ಕಾಲೇಜು ಮುಖ್ಯಸ್ಥರ ಕಾರು ಚಾಲಕ ಯದುಕುಮಾರ್ ಅವಾಚ್ಯ ಶಬ್ಧಗಳಿಂದ ಅವಹೇಳನ ಮಾಡಿ ಹಲ್ಲೆ ನಡೆಸಿದ್ದಾನೆ.

    ಎಂಕಾಂ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿನಿ ರಂಜಿತಾ ದ್ವಿತೀಯ ವರ್ಷದ ವ್ಯಾಸಾಂಗಕ್ಕಾಗಿ ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಳು. ಈ ಕಾರಣಕ್ಕೆ ಪ್ರಾಂಶುಪಾಲರಾಗಿರುವ ಸುಮಾ ಅವರ ಬಳಿ ವರ್ಗಾವಣೆ ಪತ್ರವನ್ನು ನೀಡುವಂತೆ ಕೇಳಿದ್ದಾಳೆ.

    ಈ ವೇಳೆ ಪಕ್ಕದಲ್ಲಿದ್ದ ಕಾರು ಚಾಲಕ ಯದುಕುಮಾರ್ ವಿದ್ಯಾರ್ಥಿನಿಗೆ ಅಶ್ಲೀಲವಾಗಿ ಬೈದಿದ್ದಾನೆ. ಹಾಗಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಬಳಿಕ ರಶ್ಮಿ ಪೋಷಕರ ಜೊತೆ ಕಾಲೇಜಿಗೆ ಬಂದು ಪ್ರಶ್ನೆ ಮಾಡಿದ್ದಾಳೆ.

    ಪರಿಣಾಮವಾಗಿ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನ ಮುಖ್ಯಸ್ಥ ಬಿಜೆಪಿ ಮುಖಂಡರಾದ ಬ್ಯಾಟರಂಗೇಗೌಡರು ರಾಜಿ ಸಂಧಾನ ನಡೆಸಿ, ಕಾರು ಚಾಲಕನಿಂದ ವಿದ್ಯಾರ್ಥಿನಿಗೆ ಕ್ಷಮೆ ಕೇಳಿಸಿ ಆ ಜಗಳವನ್ನು ಮುಗಿಸಿದರು.