ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಬೆಂಗಳೂರಿನ ಜಯನಗರದ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಸ್ಥಳೀಯರಿಂದ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧ ದಂಪತಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ದಂಪತಿ ವಾಸವಿದ್ದ ಮನೆಗೆ ಕೆಮಿಕಲ್ ಸ್ಪ್ರೇ ಸಿಂಪಡನೆ ಮಾಡಿಸಲಾಗಿದೆ. ಮನೆಗೆ ಸೋಡಿಯಂ ಹೈಪೋಕ್ಲೋರೈಡ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಿತ ಕೆಮಿಕಲ್ ಸ್ಪ್ರೇ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಬ್ರೆಜಿಲ್ ದೇಶದಿಂದ ಮಾರ್ಚ್ 13ರಂದು ಬೆಂಗಳೂರಿಗೆ ವೃದ್ಧ ದಂಪತಿ ವಾಪಸ್ಸಾಗಿದ್ದರು. ಬಳಿಕ ಜಯನಗರ ಠಾಣಾ ವ್ಯಾಪ್ತಿಯ ತಮ್ಮ ಮನೆಯೊಂದರಲ್ಲಿ ವಾಸವಿದ್ದರು. ಸದ್ಯ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಭಯದಿಂದ ನಾಳೆಯಿಂದ ಅಂದರೆ ಮಂಗಳವಾರದಿಂದ ಮಾರ್ಚ್ 31ರವರೆಗೂ ಎಲ್ಲ ಗಾರ್ಮೆಂಟ್ಸ್ ಕಂಪನಿಗಳು ಬಂದ್ ಆಗಲಿವೆ.
ನಾಳೆಯಿಂದ ಮಾಚ್9 31ರ ತನಕ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳು, ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ ಅಂತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್ ಜನಾರ್ಧನ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಎಫ್‍ಕೆಸಿಸಿಐನ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ 4 ಸಾವಿರ ಗಾರ್ಮೆಂಟ್ಸ್ ಹಾಗೂ ರಾಜ್ಯದ 10 ಸಾವಿರಕ್ಕೂ ಹೆಚ್ಚು ಗಾರ್ಮೆಂಟ್ಸ್‌ಗಳು ನಾಳೆಯಿಂದ ಬಂದ್ ಆಗಲಿವೆ. ಇನ್ನೂ ವೇತನ ಸಹಿತ ಕಾರ್ಮಿಕರಿಗೆ ರಜೆಯನ್ನ ನೀಡಲಾಗುತ್ತದೆ. ಆದೇಶ ಉಲ್ಲಂಘಿಸಿ ಗಾರ್ಮೆಂಟ್ಸ್ ಕಂಪನಿಗಳು ಓಪನ್ ಮಾಡಿದರೆ ಆಯಾ ಕಂಪನಿಗಳ ಲೈಸೆನ್ಸ್ ನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆ ಗಾರ್ಮೆಂಟ್ಸ್‌ನಲ್ಲಿ ಇವತ್ತು ಗಾರ್ಮೆಂಟ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ರಜೆ ಸಹಿತ ವೇತನ ನೀಡಬೇಕು ಎಂದು ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು.
ಬೆಂಗಳೂರು: ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ.
Karnataka: 'Home quarantine' stamping with indelible ink for international passengers has started at Kempegowda International Airport, Bengaluru. The stamp indicates last day of quarantine. #Coronaviruspic.twitter.com/R84nnHSfPX
ವಿದೇಶದಿಂದ ಭಾರತಕ್ಕೆ ಬಂದ ಪ್ರಜೆಗಳಿಂದ ಕೊರೊನಾ ಸೋಂಕು ದೇಶದಲ್ಲಿ ಹರಡಿದೆ. ರಾಜ್ಯದಲ್ಲೂ ಹೀಗೆ ವಿದೇಶಕ್ಕೆ ಭೇಟಿ ಕೊಟ್ಟು ವಾಪಸ್ಸಾಗಿರುವ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ವಿದೇಶದಿಂದ ರಾಜ್ಯಕ್ಕೆ ಹಿಂದಿರುಗುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಲು ಸಿಬ್ಬಂದಿಗೆ ಸರ್ಕಾರ ಸೂಚಿಸಿದೆ. ಆದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ವಿದೇಶದಿಂದ ಬಂದ ಪ್ರಯಾಣಿಕರ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಿ ಗುರುತಿಸುತ್ತಿದ್ದಾರೆ.
ಕಳೆದ ರಾತ್ರಿಯಿಂದ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಮತ್ತೊಂದೆಡೆ ದೇವನಹಳ್ಳಿಯ ಆಕಾಶ್ ಆಸ್ವತ್ರೆಯಲ್ಲಿ ಎಂದಿನಂತೆ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಅಲ್ಲೂ ಸಹ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ದುಬೈ ಸೇರಿದಂತೆ ಹಲವು ದೇಶಗಳಿಂದ ಬಂದಿದ್ದ 230 ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಈ ವೇಳೆ ಒರ್ವನಿಗೆ ಎ ಗ್ರೇಡ್, ಮೂವರಿಗೆ ಬಿ ಗ್ರೇಡ್ ಮತ್ತು 226 ಜನರಿಗೆ ಸಿ ಗ್ರೇಡ್ ಬಂದಿದೆ. ಹೀಗಾಗಿ ಸಿ ಗ್ರೇಡ್ ಬಂದವರಿಗೆ ಸ್ಟ್ಯಾಂಪಿಂಗ್ ಮಾಡಿ ಹೋಂ ಕ್ವಾರಂಟೈನ್‍ಗೆ ಕಳಿಸಲಾಗಿದೆ. ಸ್ಟ್ಯಾಂಪಿಂಗ್‍ನಲ್ಲಿ ದಿನಾಂಕ ಸಮೇತ ಪ್ರಯಾಣಿಕರ ಎಡಗೈಗೆ ಹೊಂ ಕ್ವಾರಂಟೈನ್ ಅಂತ ಗುರುತು ಹಾಕಲಾಗುತ್ತಿದೆ.
ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಬರೆದು #IndiaFightsCorona ಅಂತ ಹ್ಯಾಷ್‍ಟ್ಯಾಗ್ ಜೊತೆ ಟ್ವೀಟ್ ಮಾಡಿದ್ದಾರೆ.
ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ.
ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.
ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ.
ಬುಧವಾರ ಒಟ್ಟು 37 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 25, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲಿ 3, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬೊಬ್ಬರು ದಾಖಲಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 80 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.
ಬೆಂಗಳೂರು: ಸುಮಾರು 9.65 ಲಕ್ಷ ರೂ. ಮೌಲ್ಯದ ಎರಡು ಗೋಲ್ಡ್ ಬಿಸ್ಕೆಟ್ ಮಾರಲು ಹೋದ ಏರ್‌ಪೋರ್ಟ್ ಸಿಬ್ಬಂದಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚತೆ ಕೆಲಸ ಮಾಡುವ ಅಂಜಪ್ಪ ಬಂಧಿತ ಆರೋಪಿ. ಅಂಜಪ್ಪ ಚಿಂತಾಮಣಿ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಿಂತಾಮಣಿ ನಗರದ ಬಾಲಾಜಿ ಜ್ಯೂವೆಲ್ಲರ್ಸ್‍ನಲ್ಲಿ ತನ್ನ ಬಳಿ ಇದ್ದ ಚಿನ್ನದ ಬಿಸ್ಕೆಟ್‍ಗಳನ್ನು ಮಾರಾಟ ಮಾಡಲು ಮುಂದಾಗಿದ್ದನು. ಸುಮಾರು 9.65 ಲಕ್ಷ ರೂ. ಮೌಲ್ಯದ 232 ಗ್ರಾಂ ತೂಕದ ಎರಡು ಚಿನ್ನದ ಬಿಸ್ಕೆಟ್ ಗಳನ್ನು ಮಾರಾಟ ಮಾಡಲು ಅಂಜಪ್ಪ ಹೋಗಿದ್ದನು.
ಈ ವೇಳೆ ಅನುಮಾನಗೊಂಡ ಚಿನ್ನದಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಚಿಂತಾಮಣಿ ಪೊಲೀಸರು ಅಂಜಪ್ಪನನ್ನು ಬಂಧಿಸಿದ್ದಾರೆ. ಅಲ್ಲದೇ ಅಂಜಪ್ಪ ಬಳಿ ಒಟ್ಟು 6 ಚಿನ್ನದ ಬಿಸ್ಕೆಟ್‍ಗಳು ಪತ್ತೆಯಾಗಿದೆ. ಏರ್‌ಪೋರ್ಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ತನಗೆ ಚಿನ್ನದ ಬಗ್ಗೆ ಮಾಹಿತಿ ಕೊಟ್ಟಿದ್ದರು ಎಂದನು. ಕಸ್ಟಮ್ಸ್ ಅಧಿಕಾರಿಗಳಿಗೆ ಹೆದರಿ ಅಂಜಪ್ಪಗೆ ಅಪರಿಚಿತರು ಚಿನ್ನದ ಬಿಸ್ಕೆಟ್ ನೀಡಿ ಪರಾರಿಯಾಗಿದ್ದರು. ಏರ್‌ಪೋರ್ಟ್‌ನಿಂದ ಹೊರಬಂದ ಬಳಿಕ ಚಿನ್ನವನ್ನು ವಾಪಸ್ ಕೊಡುವಂತೆ ಹೇಳಿದ್ದರು, ಆದರೆ ಅಂಜಪ್ಪ ಚಿನ್ನವನ್ನು ವಾಪಸ್ ಕೊಡದೆ ತಾನೇ ಇಟ್ಟುಕೊಂಡಿದ್ದನು.
ಬೆಂಗಳೂರು: ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ತೆಲಂಗಾಣ ಮೂಲದ ಟೆಕ್ಕಿ ಕೊರೊನಾ ವೈರಸ್‍ಗೆ ತುತ್ತಾಗಿರುವುದು ದೃಢಪಟ್ಟಿರುವ ಬೆನ್ನಲ್ಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೊರೊನಾ ವೈರಸ್ ವಿಶ್ವಾದ್ಯಂತ ಹರಡುತ್ತಿದೆ ಎಂದು ಗೊತ್ತಾದ ದಿನದಿಂದಲೇ ವಿಮಾನ ನಿಲ್ದಾಣದ ಒಳಭಾಗದಲ್ಲಿ ಚೀನಾ ಹಾಗೂ ಕೊರೊನಾ ಹರಡಿದ್ದ ದೇಶಗಳಿಂದ ಆಗಮಿಸುತ್ತಿದ್ದ ಪ್ರಯಾಣಿಕರನ್ನ ಉಷ್ಣ ತಪಾಸಣೆ ನಡೆಸಿ ಹೊರಬಿಡಲಾಗುತ್ತಿತ್ತು. ಆದರೆ ಈಗ ಕೊರೊನಾ ವೈರಸ್ ಯೂರೋಪ್ ರಾಷ್ಟಗಳಿಗೆ ಹರಡಿರುವ ಬೆನ್ನಲ್ಲೇ ಸದ್ಯ 13 ದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನ ತಪಾಸಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?
ಮಾಸ್ಕ್ ಧರಿಸಿ ಓಡಾಡುತ್ತಿರುವ ಪ್ರಯಾಣಿಕರು:
ಕೊರೊನಾ ವೈರಸ್ ಚೀನಾದಿಂದ ದಿನದಿಂದ ದಿನಕ್ಕೆ ಇತರೆ ರಾಷ್ಟ್ರಗಳಿಗೆ ವ್ಯಾಪಿಸುತ್ತಿದ್ದು, ಭಾರತಕ್ಕೂ ಕಾಲಿಟ್ಟಿರೋದು ದೃಢವಾಗಿದೆ. ಹೀಗಾಗಿ ರಾಜ್ಯದ ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ ಅತಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಅಂತೆಯೇ ಕೆಐಎಎಲ್‍ನಲ್ಲಿ ಸಹ ವಿವಿಧ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರು ಮಾಸ್ಕ್ ಧರಿಸಿ ಹೊರಬರುತ್ತಿರೋ ದೃಶ್ಯಗಳು ಸರ್ವೆ ಸಾಮಾನ್ಯ ಎಂಬಂತಾಗಿದೆ. ಇದನ್ನೂ ಓದಿ: ಚೀನಾದಲ್ಲಿ 10 ದಿನದಲ್ಲಿ ಆಸ್ಪತ್ರೆ ಕಟ್ಟಿದ್ರು – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಪ್ರತ್ಯೇಕ ವಾರ್ಡ್ ಇಲ್ಲ
ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿ:
ಕೊರೊನಾ ಕಾಟಕ್ಕೆ ವಿಮಾನ ನಿಲ್ದಾಣದ ಭದ್ರತಾ ಹಾಗೂ ಇತರೆ ಸಿಬ್ಬಂದಿ ಸಹ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಯೂ ಸಹ ಕೊರೊನಾ ಪೀಡಿತ 13 ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಿ ಹೊರಬಿಡಲಾಗ್ತಿದೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಎಚ್‍ಒ ಮಂಜುಳಾ ಅವರು, 24 ಗಂಟೆಗಳ ಕಾಲ ನಿರಂತರವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ಸೇರಿದಂತೆ ವಿವಾನ ನಿಲ್ದಾಣ ಅಧಿಕಾರಿಗಳು, ಮೆಡಿಕಲ್ ಸ್ಟಾಪ್ ಜೊತೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಟೆಕ್ಕಿ ಕೊರೊನಾಗೆ ತುತ್ತಾಗಿರುವ ಪ್ರಕರಣ ಬಿಟ್ಟು ಬೇರೆ ಯಾವ ಸೋಂಕಿತ ಪ್ರಕರಣಗಳು ದೃಢಪಟ್ಟಿಲ್ಲ. ಅನುಮಾನಸ್ಪದ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಆರೋಗ್ಯ ಚಿಕಿತ್ಸೆ ನೀಡಲು ಸನ್ನದ್ದರಾಗಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ಕಾರ್ಮಿಕರ ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಅರ್ಧಕ್ಕೆ ಅರ್ಧದಷ್ಟು ಬಿಬಿಎಂಪಿ ಬಸ್ಸುಗಳ ಓಡಾಟ ಕಡಿಮೆಯಾಗಿದೆ.
ಪ್ರಯಾಣಿಕರ ಸಂಖ್ಯೆ ಸಹ ವಿರಳವಾಗಿದೆ. ಶಿಫ್ಟ್ ಗಳನ್ನು ನೋಡಿಕೊಂಡು ಸಾರಿಗೆ ಸಿಬ್ಬಂದಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸೋ ಸಾಧ್ಯತೆ ಇದೆ. ಜೊತೆಗೆ, ಮೊದಲೇ ಹಲವರು ರಜೆ ಪಡೆದಿರೋದ್ರಿಂದ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಫ್ರೀಡಂ ಪಾರ್ಕ್‍ನಲ್ಲಿ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಉಪವಾಸ ಸತ್ಯಾಗ್ರಹ ನಡೆಸಲಿದೆ. ಅದೇ ಫ್ರೀಡಂಪಾರ್ಕ್‍ನಲ್ಲಿ ಪೌರತ್ವ ಕಾಯಿದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆ ನಡೆಯಲಿದೆ.
ಎಂಐಎಂನ ಸಂಸದ ಅಸಾದುದ್ದೀನ್ ಓವೈಸಿ ಭಾಗಿಯಾಗಲಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಓವೈಸಿಗೆ ಈಗಾಗಲೇ ಉಪ್ಪಾರಪೇಟೆ ಪೊಲೀಸರು ಷರತ್ತು ಬದ್ಧ ಅನುಮತಿ ಕೊಟ್ಟಿದ್ದಾರೆ. ಎರಡು ಪ್ರತಿಭಟನೆಯಿಂದಾಗಿ ಫ್ರೀಡಂ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ.
ಬೆಂಗಳೂರು: ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಾಲ್ವರು ಕಿಡಿಗೇಡಿಗಳು ಗೃಹ ಬಂಧನದಲ್ಲಿಟ್ಟು ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ವಿಜಯನಗರ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ನಡೆದಿದೆ.
ಅದೊಂದು ಕೋಮಿನ ಸೈಟ್‍ಗೆ ಬಿಬಿಎಂಪಿ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ರು. ಇದಕ್ಕೆ ಮತ್ತೊಂದು ಕೋಮಿನವರು ಆಕ್ರೋಶ ವ್ಯಕ್ತಪಡಿಸಿ ಖಾತೆ ಕ್ಯಾನ್ಸಲ್ ಮಾಡುವಂತೆ ದೂರು ಕೂಡ ಕೊಟ್ಟಿದ್ರು. ಖಾತೆ ಮಾಡಲು ಆದೇಶ ಕೂಡ ಆಗಿತ್ತು. ಆದರೆ ಈಗ ಆ ದಾಖಲೆಗಳು ಪಾಲಿಕೆ ಕಚೇರಿಯಿಂದ ಮಂಗಮಾಯವಾಗಿದೆ. ಇದಕ್ಕೆ ಕೆರಳಿದ ಗುಂಪೊಂದು ಏಕಾಏಕಿ ಪಾಲಿಕೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿಯನ್ನು ಕಚೇರಿ ಬಂಧನಲ್ಲಿಟ್ಟು ಡೋರ್ ಕ್ಲೋಸ್ ಮಾಡಿ, ದಾಖಲೆಗಳು ಬೇಕು ಅಷ್ಟೆ ಅಂತ ಅವಾಜ್ ಹಾಕಿದ್ದಾರೆ. ವಿಜಯನಗರದ ವಾರ್ಡ್ ನಂ- 124ರ ಹೊಸಹಳ್ಳಿಯಲ್ಲಿರುವ ಒಂದು ಟ್ರಸ್ಟ್ ಗೆ, ಬಿಬಿಎಂಪಿಯ ಜಾಗವನ್ನು ಸೇರಿಸಿ ಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ರು. ಆದರೆ ಆ ದಾಖಲೆಗಳು ಈಗ ಕಾಣೆಯಾಗಿವೆ. ಅದನ್ನು ಹುಡಿಕಿ ಅಂತ ಸ್ಥಳೀಯ ಶಿವಕುಮಾರ್ ಹಾಗೂ ತನ್ನ 25 ಜನರ ಪಟಾಲಂ ಬಿಬಿಎಂಪಿ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಕಚೇರಿ ಬಂದ್ ಮಾಡಿ ರಾತ್ರಿ 10 ಗಂಟೆಯವರೆಗೆ ಕೂಡಿ ಹಾಕಿ ಮೊಬೈಲ್ ಕಸಿದುಕೊಂಡು ಅವಾಜ್ ಹಾಕಿದ್ದಾರೆ ಅಂತ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಸಿದ್ದಾರೆ.
ವಿಜಯನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸಂಜೆ 5 ರಿಂದ ರಾತ್ರಿ 10 ಗಂಟೆಯ ತನಕ ಪಾಲಿಕೆ ಅಧಿಕಾರಿಗಳನ್ನ ಕಚೇರಿಯಲ್ಲಿಯೇ ಕಿಡಿಗೇಡಿಗಳು ಲಾಕ್ ಮಾಡಿದ್ದಾರೆ. ಈ ವೇಳೆ 15ಕ್ಕೂ ಹೆಚ್ಚು ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ರಂತೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್, ಬ್ಯಾಗ್ ಗಳನ್ನ ಕಸಿದುಕೊಂಡು ಫೈಲ್ ಹುಡ್ಕುವಂತೆ ಧಮ್ಕಿ ಹಾಕಿದ್ದಾರೆ.
ವಾಡ್9 124 ಹೊಸಹಳ್ಳಿಯ ಇಸ್ಲಾಮಿಕ್ ವೆಲ್ ಫೇರ್ ಟ್ರಸ್ಟ್ ಗೆ ಸರ್ಕಾರಿಯ ಐದು ಅಡಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು ಆ ಖಾತಾ ರದ್ದು ಮಾಡುವಂತೆ ಸ್ಥಳೀಯ ಶಿವಕುಮಾರ್ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಆ ಫೈಲ್ ಸಿಕ್ಕಿಲ್ಲ, ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ. ಆದರೆ ಏಕಾಏಕಿ ಕಳೆದ ನಾಲ್ಕು ದಿನದ ಹಿಂದೆ ಕಚೇರಿಗೆ ನುಗಿದ್ದ ಶಿವಕುಮಾರ್ ಹಾಗೂ ತನ್ನ 25 ಮಂದಿಯಿಂದಿಗೆ ಬಿಬಿಎಂಪಿ ಆಫೀಸ್ ಬಾಗಿಲು ಹಾಕಿ ಕಡತಗಳನ್ನು ಹುಡುಕುವಂತೆ ಧಮ್ಕಿ ಹಾಕಿದ್ದಾರೆ. ಈ ವೇಳೆ ಇದನ್ನು ವಿಡಿಯೋ ಮಾಡಲು ಬಂದ ಮಹಿಳಾ ಸಿಬ್ಬಂದಿಯ ಫೋನ್ ಕಸಿದುಕೊಂಡು ನಿಂದಿಸಿದ್ದಾರಂತೆ. ರಾತ್ರಿ 10 ಗಂಟೆಯವರೆಗೆ ಕಚೇರಿ ಬಂಧನದಲ್ಲಿಟ್ಟಿದ್ದಾರೆ. ನಂತರ ಸೌತ್ ಜೆಸಿ ವೀರಭದ್ರ ಸ್ವಾಮಿ ನಾಳೆ ದಾಖಲೆಯನ್ನು ಹುಡುಕಿಕೊಡ್ತಿವಿ ಅಂತ ಹೇಳಿದ ಮೇಲೆ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳಿಸಿದ್ದಾರಂತೆ.
ಬಿಬಿಎಂಪಿ ಅಧಿಕಾರಿಗಳ ಆರೋಪವನ್ನ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಕಡತಗಳನ್ನ ಕೇಳಿದ್ದೇನೆ. ಆದರೆ ನಾನು ಅಧಿಕಾರಿ, ಸಿಬ್ಬಂದಿಯನ್ನು ಗೃಹ ಬಂಧನದಲ್ಲಿ ಇಟ್ಟಿಲ್ಲ ಅಂತಿದ್ದಾರೆ. ನಾಳೆಯೊಳಗೆ ಶಿವಕುಮಾರ್ ಗ್ಯಾಂಗ್ ನನ್ನ ಬಂಧಿಸಬೇಕು. ಇಲ್ಲವಾದರೆ ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗ್ತಾರೆ ಅಂತ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಎಚ್ಚರಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಶಿವಕುಮಾರ್ ಹಾಗೂ ಟೀಂ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಬೇಕಂತಲೇ ಶಿವಕುಮಾರ್ ಮೇಲೆ ಆರೋಪ ಮಾಡಿದ್ರಾ ಅಥವಾ ನಿಜವಾಗಿಯೂ ಶಿವಕುಮಾರ್ ಪಾಲಿಕೆ ಕಚೇರಿಗೆ ಹೋಗಿ ದಾಂಧಲೆ ನಡೆಸಿದ್ರಾ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ಮಂಡ್ಯ: ಗರ್ಭಿಣಿ ಪೇದೆಗೆ ಪೊಲೀಸ್ ಠಾಣೆಯಲ್ಲಿ ಶಾಸ್ತ್ರೋಕ್ತವಾಗಿ ಸಿಬ್ಬಂದಿ ಸೀಮಂತ ಮಾಡುವ ಮೂಲಕ ಗರ್ಭಿಣಿ ಪೇದೆಗೆ ಶುಭ ಹಾರೈಸಿದ್ದಾರೆ.
ಮಹಿಳಾ ಪೇದೆ ಪಲ್ಲವಿ ಅವರಿಗೆ ಅಲ್ಲಿನ ಸಿಬ್ಬಂದಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪಲ್ಲವಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಅವರು ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ರಜೆಯ ಮೇರೆಗೆ ಹೋಗುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಹಿರಿಯರು ಮತ್ತು ಸಂಬಂಧಿಕರು ಶಾಸ್ತ್ರೋಕ್ತವಾಗಿ ಮಾಡುವ ಸೀಮಂತದ ರೀತಿಯಲ್ಲೇ ಸಿಬ್ಬಂದಿ ತಮ್ಮ ಸಹೋದ್ಯೋಗಿಯಾದ ಪಲ್ಲವಿ ಅವರಿಗೆ ಸೀಮಂತ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಸೀಮಂತಕ್ಕಾಗಿ ಕುರ್ಚಿ ಹಾಕಿ, ಹಣ್ಣು-ಹಂಪಲು ಹಾಗೂ ತಿಂಡಿ-ತಿನಿಸುಗಳನ್ನು ಇಟ್ಟಿದ್ದರು. ಅಲ್ಲದೇ ಸೋಬಾನ ಪದಗಳನ್ನು ಹಾಡಿಕೊಂಡು ಪಲ್ಲವಿ ಅವರಿಗೆ ಒಳಿತಾಗಲೆಂದು ಸೀಮಂತ ಮಾಡಿದರು. ತಮ್ಮ ಸಹೋದ್ಯೋಗಿಗಳು ಸೀಮಂತ ಮಾಡಿರುವುದರಿಂದ ಪಲ್ಲವಿ ಅವರು ಸಂತಸಪಟ್ಟಿದ್ದಾರೆ.
ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡು ಅದರಲ್ಲಿರುವ ಹಣ ರಿಫಂಡ್ ಮಾಡಿಕೊಡಿ ಎಂದು ದೂರು ಕೊಟ್ಟು ಕಳೆದ ನಾಲ್ಕು ದಿನಗಳಿಂದ ಮಹಿಳೆಯೊಬ್ಬರು ಬೈಯಪ್ಪನಹಳ್ಳಿ ಮೆಟ್ರೋ ಅಡ್ಮಿನ್ ಕಚೇರಿಗೆ ಅಲೆದಾಡಿ, ದುಂಬಾಲು ಬಿದ್ದರೂ ಮೆಟ್ರೋ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರಿಸಿದ ಘಟನೆ ನಡೆದಿದೆ.
ಪವಿತ್ರಾ ಎಂಬವರು ಕಳೆದ ನಾಲ್ಕು ದಿನದ ಹಿಂದೆ ಬೈಯಪ್ಪನಹಳ್ಳಿಯಿಂದ ಹೊಸಹಳ್ಳಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಮೆಟ್ರೋ ಕಾರ್ಡ್ ನಲ್ಲಿ 900 ರೂ.ಗೂ ಹೆಚ್ಚು ಹಣವಿತ್ತು. ಹೀಗಾಗಿ ಕಳೆದುಕೊಂಡಿರುವ ಕಾರ್ಡ್ ಗೆ ಮತ್ತೊಂದು ನಕಲಿ ಕಾರ್ಡ್ ಕೊಟ್ಟು, ಹಣ ರೀಫಂಡ್ ಮಾಡಿ ಅಂತ ಬೈಯಪ್ಪನ ಹಳ್ಳಿ ಮೆಟ್ರೋ ಅಧಿಕಾರಿಗಳಿಗೆ ಹಾಗೂ ಕೇಂದ್ರ ಕಚೇರಿಗೂ ಕೈಬರಹ ಹಾಗೂ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.
ಎರಡು ಬಾರಿ ದೂರು ಕೊಟ್ಟಾಗಲೂ ಅಧಿಕಾರಿಗಳು ಸ್ಪಂದಿಸಿಲ್ಲ. ಮೂರನೇ ಬಾರಿಗೆ ಸ್ಪಂದಿಸಿದ ಕೇಂದ್ರ ಕಚೇರಿಯ ಅಧಿಕಾರಿಗಳು , ಕಳೆದುಕೊಂಡ ಕಾರ್ಡ್ ನಲ್ಲಿರುವ ಹಣವನ್ನ ಹಿಂದಿರುಗಿಸಲು ಆಗೋದಿಲ್ಲ. ಅಂತಹ ಸೇವೆ ನಮ್ಮಲ್ಲಿ ಇಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಕೆರಳಿದ ಪವಿತ್ರಾ, ಪ್ರಯಾಣಿಕರ ಅನುಕೂಲಕ್ಕಾಗಿ ಎಂದು ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದೀರಾ. ಅದೇ ಕಾರ್ಡ್ ನಿಂದ ಸಮಸ್ಯೆಯಾದಾಗ ಯಾಕೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯವಾಗಿ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಂಡ ಬಳಿಕ ರಿಚಾರ್ಜ್ ಆದ ಹಣ ಬಿ.ಎಂ.ಆರ್.ಸಿ.ಎಲ್ ಹಣಕಾಸು ವಿಭಾಗಕ್ಕೆ ಹೋಗುತ್ತೆ. ಸೇವೆಯಲ್ಲಿರುವ ಕಾರ್ಡ್, ಕಳೆದುಕೊಂಡರೆ ಅದರಲ್ಲಿರುವ ಹಣವನ್ನು ಮರಳಿ ಕೊಡುವ ವ್ಯವಸ್ಥೆ ಬಿ.ಎಂ.ಆರ್.ಸಿ.ಎಲ್ ಮಾಡಿಕೊಂಡಿಲ್ಲ. ಗ್ರಾಹಕರೇ ಈ ವಿಷಯದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಹಿಳೆ ಪವಿತ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಿ.ಎಂ.ಆರ್.ಸಿ.ಎಲ್ ಗೆ ಹಣ ಮಾಡೋದಷ್ಟೆ ಮಾನದಂಡವಲ್ಲ. ಪ್ರಯಾಣಿಕರ ದೂರುಗಳಿಗೂ ಸ್ಪಂದಿಸಬೇಕು. ಒಂದು ಮಹಿಳೆಯ ದೂರು ಸ್ವೀಕರಿಸಲು ಇಷ್ಟೊಂದು ತಾತ್ಸರ ಮಾಡ್ತಾರೆ ಅಂತಾದರೆ, ಪ್ರಯಾಣಿಕರ ಬಗ್ಗೆ ಇವರಿಗೆಷ್ಟು ಕಾಳಜಿಯಿದೆ ಅನ್ನೋದು ಗೊತ್ತಾಗುತ್ತೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಧಾರವಾಡ: ವಿದ್ಯುತ್ ಕಂಬ ಬದಲಿಸುವ ವೇಳೆ ಭಾರೀ ಅನಾಹುತವೊಂದು ತಪ್ಪಿದೆ.
ಧಾರವಾಡ ನಗರದ ಕಮಲಾಪುರದಲ್ಲಿ ಈ ಘಟನೆ ನಡೆದಿದೆ. ಹೆಸ್ಕಾಂ ಲೈನ್ ಮ್ಯಾನ್ ಕಂಬ ಬದಲಿಸುವ ವೇಳೆ ಏಕಾಏಕಿ ಕಂಬ ಸಿಬ್ಬಂದಿ ಮೈಮೇಲೆ ಬೀಳುತ್ತಿತ್ತು. ಈ ವೇಳೆ ಲೈನ್ ಮ್ಯಾನ್ ಕಂಬದಿಂದ ಹಾರಿ ಪಾರಾಗಿದ್ದಾರೆ.
ಕಂಬ ಬದಲಿಸುವ ಕೆಲಸದ ವೇಳೆ ಕಂಬದ ಮೇಲೆ ಹತ್ತಿ ವೈಯರ್ ತಪ್ಪಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮುರಿದಿದ್ದ ಕಂಬ ವಾಲತೊಡಗಿದೆ. ಇದನ್ನರಿತ ಲೈನ್ ಮ್ಯಾನ್ ತಕ್ಷಣ ಕಂಬದಿಂದ ಜಿಗಿದು ಪಾರಾಗಿದ್ದಾರೆ.
ಹೆಸ್ಕಾಂ ಸಿಬ್ಬಂದಿ ಕಂಬದಿಂದ ಬೀಳುವಾಗ ಕೆಳಗಡೆನೇ ಟ್ರ್ಯಾಕ್ಟರ್ ಕೂಡ ನಿಂತಿತ್ತು. ಟ್ರ್ಯಾಕ್ಟರ್ ಹಾಗೂ ಕಂಬದ ನಡುವೆ ಹೆಸ್ಕಾಂ ಸಿಬ್ಬಂದಿ ಸಿಲುಕುತ್ತಿದ್ರೂ ಅವರ ಜೀವಕ್ಕೆ ಅಪಾಯವಿತ್ತು. ಆದರೆ ಅವರು ತಕ್ಷಣ ಎಚ್ಚೆತ್ತ ಕಾರಣ ಜೀವ ಉಳಿಸಿಕೊಂಡು ಪಾರಾಗಿದ್ದಾರೆ.
ಕಂಬದ ಬಳಿಯೇ ನಿಂತಿದ್ದ ಟ್ರ್ಯಾಕ್ಟರ್ ಚಾಲಕ ಕೂಡ ಈ ಕಂಬ ಬೀಳುವುದನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದಾರೆ. ಸದ್ಯ ಈ ಎಲ್ಲ ದೃಶ್ಯವನ್ನು ಅಲ್ಲೇ ನಿಂತಿದ್ದ ಯುವಕನೋರ್ವ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ.