Tag: staff

  • ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!

    ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!

    ಬೆಂಗಳೂರು: ಶಿಕ್ಷಣ ಕ್ಷೇತ್ರದ ಪ್ರಮುಖ ಸ್ಟಾರ್ಟಪ್ ಕಂಪನಿ ಬೈಜೂಸ್‍  ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಈ ಕಂಪನಿ ತನ್ನ ಉದ್ಯೋಗಿಗಳಿಗೆ ವೇತನವನ್ನು ಪಾವತಿ ಮಾಡಿರಲಿಲ್ಲ. ಆದರೆ ಇದೀಗ ತಮ್ಮ ಮನೆಯನ್ನೇ ಅಡವಿಟ್ಟು ಸಂಬಳ ನೀಡುವ ಮೂಲಕ ಭಾರೀ ಸುದ್ದಿಯಾಗಿದೆ.

    ಹೌದು. ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ (Byju’s Founder Byju Raveendran), ತಮ್ಮ ಬೆಂಗಳೂರಿನ ಮನೆಯನ್ನೇ ಅಡವಿಟ್ಟು  ಸೋಮವಾರ ಒಂದು ಸಾವಿರ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಮಾಡಿದ್ದಾರೆ ಎಂಬ ಸಂಗತಿಯೊಂದು ಇದೀಗ ಬಯಲಾಗಿದೆ.

    ಬೈಜು ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಒಂದು ಇದೆ. ಇವುಗಳನ್ನು ಅಡವಿಟ್ಟು ಸುಮಾರು 100 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಸಾಲದಿಂದ ತಮ್ಮ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಸೋಮವಾರದಂದು ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್‍ನ 15,000 ಉದ್ಯೋಗಿಗಳಿಗೆ ಸಂಬಳ (Employees Salary) ಪಾವತಿಸಲು ಸ್ಟಾರ್ಟಪ್ ತನ್ನಲ್ಲಿರುವ ಹಣವನ್ನು ಬಳಸಿಕೊಂಡಿದ್ದಾರೆ. ಇನ್ನು ಕಡಿಮೆಯಾದ ಮೊತ್ತಕ್ಕೆ ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ

    ಸಿಬ್ಬಂದಿಯ ಸಂಬಳ ವಿಳಂಬಕ್ಕೆ ಏಕಾಏಕಿ ಉಂಟಾದ ತಾಂತ್ರಿಕ ದೋಷವೆಂದು ಬೈಜೂಸ್ ಕಾರಣ ನೀಡಿತ್ತು. ಅಲ್ಲದೆ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 4ರ ಸೋಮವಾರದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು. ಅಂತೆಯೇ ಇದೀಗ ರವೀಂದ್ರನ್ ಅವರು ತಮ್ಮ ಮನೆಯನ್ನೇ ಅಡವಿಟ್ಟು ಉದ್ಯೋಗಿಗಳ ವೇತನ ಪಾವತಿ ಮಾಡಿದ್ದಾರೆ.

  • 74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್‌ಗಿದ್ರು 40+ ಸಿಬ್ಬಂದಿ

    74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್‌ಗಿದ್ರು 40+ ಸಿಬ್ಬಂದಿ

    ನವದೆಹಲಿ: ಯುಯು ಲಲಿತ್ (UU Lalit) ಅವರು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಸಂದರ್ಭದಲ್ಲಿ ಅಕ್ಬರ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ 40ಕ್ಕೂ ಅಧಿಕ ಕೆಲಸಗಾರರನ್ನು (Staff) ಹೊಂದಿದ್ದ ವಿಷಯ ಚರ್ಚೆಗೆ ಗ್ರಾಸವಾಗಿದೆ.

    ಆ. 27ರಿಂದ ನ. 8ರವರೆಗೆ 49ನೇ ಸಿಜೆಐ ಆಗಿ ನ್ಯಾಯಮೂರ್ತಿ ಲಲಿತ್ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಗುಮಾಸ್ತ ಸೇರಿದಂತೆ ಸುಮಾರು 40ಕ್ಕೂ ಅಧಿಕ ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರು. ಅದಾದ ಬಳಿಕ ಕಳೆದ ತಿಂಗಳು ನಿವೃತ್ತಿ ಹೊಂದಿದ ಬಳಿಕ ಕೆಲವು ಸಿಬ್ಬಂದಿಯನ್ನು ತೆಗೆದು ಹಾಕಿ 28 ಸಹಾಯಕ ಸಿಬ್ಬಂದಿಯನ್ನು ತಮ್ಮ ಅಧಿಕೃತ ನಿವಾಸದಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಈ ಮೂಲಕ ಹಿಂದಿನ ಸಿಜೆಐಗಿಂತ ಅಧಿಕ ಕೆಲಸಗಾರರನ್ನು ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸಾಮಾನ್ಯವಾಗಿ ಲಲಿತ್ ಅವರ ಮೊದಲಿನ ಸಿಜೆಐಗಳು 12-15 ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರು. ಅವರೆಲ್ಲರೂ ನಿವೃತ್ತಿಯ ನಂತರ ಕೇವಲ ಇಬ್ಬರು ಅಥವಾ ಮೂವರು ಸಹಾಯಕ ಸಿಬ್ಬಂದಿಯನ್ನು ಉಳಿಸಿಕೊಳ್ಳುತ್ತಿದ್ದರು. ಕೆಲವು ನಿವೃತ್ತ ಸಿಜೆಐ ದೆಹಲಿಯಲ್ಲಿ ಉಳಿದುಕೊಂಡಿದ್ದರೆ ಅಥವಾ ಅವರು ತಮ್ಮ ತವರು ರಾಜ್ಯಕ್ಕೆ ಮರಳಲು ನಿರ್ಧರಿಸುತ್ತಾರೆ. ಈ ವೇಳೆ ಸಂಬಂಧಪಟ್ಟ ಎಚ್‍ಸಿಗಳು ಈ ಸಹಾಯಕ ಸಿಬ್ಬಂದಿಯನ್ನು ಅಲ್ಲಿಗೆ ಒದಗಿಸಿದ್ದಾರೆ ಎಂಬುದನ್ನು ಮೂಲಗಳು ತಿಳಿಸಿವೆ.

    ಅಷ್ಟೇ ಅಲ್ಲದೇ ರಾಷ್ಟ್ರಪತಿ ಭವನದಲ್ಲಿ ಅಥವಾ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಿರತರಾಗಿರುವ ಸಹಾಯಕ ಸಿಬ್ಬಂದಿಯ ಸಂಖ್ಯೆಯನ್ನು ಹೊರತುಪಡಿಸಿದರೆ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರುವವರು ತಮ್ಮ ನಿವಾಸಗಳಲ್ಲಿ ಇಷ್ಟು ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಹೊಂದಿರುವುದಿಲ್ಲ. ಇದನ್ನೂ ಓದಿ: ನಿಂತಿದ್ದ ವೇಳೆ ಆಕಸ್ಮಿಕ ಬೆಂಕಿ- ಮೂರು ಬಸ್‍ಗಳು ಬೆಂಕಿಗಾಹುತಿ

    ಆಗಸ್ಟ್‍ನಲ್ಲಿ ಕೇಂದ್ರ ಸರ್ಕಾರವು 1959ರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಈ ವೇಳೆ ನಿವೃತ್ತ ಸಿಜೆಐಗಳಿಗೆ 6 ತಿಂಗಳ ಕಾಲ ಬಾಡಿಗೆ ಮುಕ್ತ ವಸತಿ ಒದಗಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಲಲಿತ್ ಅವರಿಗೆ ಶಹಜಹಾನ್ ರಸ್ತೆಯಲ್ಲಿ ಬಂಗಲೆಯನ್ನು ನೀಡಲಾಗಿತ್ತು. ಆದರೆ ನ್ಯಾಯಮೂರ್ತಿ ಲಲಿತ್ ಅವರು ಕಟ್ಟಡವು ಕೆಟ್ಟ ಸ್ಥಿತಿಯಲ್ಲಿದೆ ಎಂದು ಹೇಳಿ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದನ್ನೂ ಓದಿ: ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ

    Live Tv
    [brid partner=56869869 player=32851 video=960834 autoplay=true]

  • ಬಿರಿಯಾನಿ ಕೊಡಲು ತಡಮಾಡಿದ ರೆಸ್ಟೋರೆಂಟ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಬಿರಿಯಾನಿ ಕೊಡಲು ತಡಮಾಡಿದ ರೆಸ್ಟೋರೆಂಟ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಲಕ್ನೋ: ಬಿರಿಯಾನಿ (Biriyani) ಕೊಡಲು ರೆಸ್ಟೋರೆಂಟ್ ಸಿಬ್ಬಂದಿ ತಡ ಮಾಡಿದ್ದಕ್ಕೆ ಸಿಟ್ಟಿಗೆದ್ದು ಮೂವರು ವ್ಯಕ್ತಿಗಳು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶ (Uttarpradesh) ದಲ್ಲಿ ನಡೆದಿದೆ.

    ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‍ನಲ್ಲಿರುವ ಝೌಕ್ ರೆಸ್ಟೋರೆಂಟ್‍ನಲ್ಲಿ ಬುಧವಾರ ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಧಿತರನ್ನು ಮನೋಜ್, ರರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾದ್ರಿ ನಿವಾಸಿಗಳು.

    ಸಿಬ್ಬಂದಿಗೆ ತಲಿಸುತ್ತಿರುವ ದೃಶ್ಯವು ರೆಸ್ಟೋರೆಂಟ್ (Restorent) ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಮೂವರು ಯುವಕರು ಕುಳಿತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಹೊತ್ತಿನವರೆಗೆ ಕುಳಿತಿದ್ದ ಅವರಲ್ಲಿ ಓರ್ವ ಇದ್ದಕ್ಕಿದ್ದಂತೆ ಎದ್ದು, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.

    ನಂತರ ಆತನ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಸಿಬ್ಬಂದಿಯನ್ನು ರೆಸ್ಟೋರೆಂಟ್‍ನಿಂದ ಹೊರಗೆಳೆದುಕೊಂಡು ಬಂದು ಮೂವರು ಒದ್ದು, ಥಳಿಸಿದ್ದಾರೆ.

    ಬುಧವಾರ ರಾತ್ರಿ ಮೂವರು ಯುವಕರು ಊಟಕ್ಕೆಂದು ರೆಸ್ಟೋರೆಂಟ್‍ಗೆ ತೆರಳಿ ಚಿಕನ್ ಬಿರಿಯಾನಿ (Chicken Biriyani) ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, ಅಲ್ತಾಫ್ ಎಂಬ ಸಿಬ್ಬಂದಿ ಬಿರಿಯಾನಿ ಮುಗಿದಿದೆ ಎಂದು ಹೇಳಿದರು. ಈ ವೇಳೆ ಆರೋಪಿಗಳಲ್ಲಿ ಒಬ್ಬನು ತನ್ನ ತಾಳ್ಮೆ ಕಳೆದುಕೊಂಡನು. ನಂತರ ಸಿಬ್ಬಂದಿ ಕಾಲರ್ ಅನ್ನು ಹಿಡಿದನು ಎಂದು ಗ್ರೇಟರ್ ನೋಯ್ಡಾದ ಎಸಿಪಿ ಮಹೇಂದ್ರ ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ಸಂಬಂಧ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ

    ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ

    ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ(ಜೆಎನ್‌ಯು) ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ವಿದ್ಯಾರ್ಥಿವೇತನ ವಿಚಾರವಾಗಿ ಘರ್ಷಣೆ ಉಂಟಾಗಿದೆ. ಘಟನೆಯಲ್ಲಿ 6 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

    ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿದ್ಯಾರ್ಥಿಗಳ ಗುಂಪು ಇಂದು 2 ವರ್ಷಗಳಿಂದ ತಡೆಹಿಡಿಯಲಾದ ವಿದ್ಯಾರ್ಥಿವೇತನದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು, ಈ ವೇಳೆ ಸಂಸ್ಥೆಯ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ದಾಳಿ ನಡೆಸಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ವಿದ್ಯಾರ್ಥಿವೇತನದ ಬಗ್ಗೆ ವಿಚಾರಿಸಲು ಬೆಳಗ್ಗೆ 11 ಗಂಟೆಗೆ 5 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ವಿಭಾಗಕ್ಕೆ ತೆರಳಿದ್ದರು. ಈ ವೇಳೆ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಂದಿಸಿ, ಅನುಚಿತವಾಗಿ ವರ್ತಿಸಿದರು. ಈಗ ಸಂಸ್ಥೆಯ ಸ್ಥಿತಿ ಹೀಗಿದೆ, ಈ ಹಿಂದೆ 17 ಸಿಬ್ಬಂದಿ ಇದ್ದರು. ಈಗ 4 ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳು 2 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎಬಿವಿಪಿ ಜೆಎನ್‌ಯು ಅಧ್ಯಕ್ಷ ರೋಹಿತ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: 8 ತಿಂಗಳ ಗರ್ಭಿಣಿಯನ್ನು ಒದ್ದ ಟಿಎಂಸಿ ಶಾಸಕನ ಬೆಂಬಲಿಗರು

    ಅಧಿಕಾರಿಗಳು ಆಗಾಗ ಅನುಚಿತವಾಗಿ ವರ್ತಿಸುತ್ತಾರೆ, ಸುಳ್ಳು ಹೇಳುತ್ತಾರೆ. ನಾವು ಎಷ್ಟು ಕಾದರೂ ನಮಗೆ ಪರಿಹಾರ ನೀಡುವುದಿಲ್ಲ. ನಮಗೆ ಸ್ಕಾಲರ್‌ಶಿಪ್ ಹಣ ಬಿಡುಗಡೆಯಾಗುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್

    ಸಂಘರ್ಷದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಸಂಘರ್ಷ ಕಂಡುಬಂದಿದೆ. ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳನ್ನು ಸಿಬ್ಬಂದಿ ತಳ್ಳುವ ಹಾಗೂ ತಡೆಯುವುದು ಕಾಣಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಬ್ಬಂದಿಗೆ ಮೆಣಸಿನ ಪುಡಿ ಎರಚಿ ಬೆಲೆ ಬಾಳುವ ನೆಕ್ಲೇಸ್ ಕದ್ದ ಖತರ್ನಾಕ್ ಅಪ್ಪ-ಮಗಳು

    ಸಿಬ್ಬಂದಿಗೆ ಮೆಣಸಿನ ಪುಡಿ ಎರಚಿ ಬೆಲೆ ಬಾಳುವ ನೆಕ್ಲೇಸ್ ಕದ್ದ ಖತರ್ನಾಕ್ ಅಪ್ಪ-ಮಗಳು

    ಲಕ್ನೋ: ತಂದೆ-ಮಗಳ ಜೋಡಿ ಚಿನ್ನಾಭರಣ ಮಳಿಗೆಯೊಂದರಲ್ಲಿ ಸಿಬ್ಬಂದಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ನೆಕ್ಲೇಸ್ ಕಳ್ಳತನ ಮಾಡಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಘಟನೆ ಪೂರ್ತಿ ಚಿತ್ರಣ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವ್ಯಕ್ತಿಯೊಬ್ಬ ಗ್ರಾಹಕನಂತೆ ಪೋಸ್ ನೀಡುತ್ತ ಗ್ರಾಹರ ಬಳಿ ಮಾತನಾಡುತ್ತಿರುವುದನ್ನು ಕಾಣಬಹುದು. ಚಿನ್ನಾಭರಣ ಮಳಿಗೆಯ ಡಿಸ್ಪ್ಲೇಯಲ್ಲಿ ಚಿನ್ನದ ನೆಕ್ಲೇಸ್ ಇರುತ್ತೆ. ಈ ವೇಳೆ ಗ್ರಾಹಕನಂತೆ ವ್ಯಕ್ತಿಯೊಬ್ಬ ತನ್ನ ಮಗಳೊಂದಿಗೆ ಬಂದು ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುತ್ತಾನೆ. ಯುವತಿಯೂ ಚಿನ್ನದ ಸರವನ್ನು ಧರಿಸಿದ ನಂತರ ಸಿಬ್ಬಂದಿ ಅದನ್ನು ತೆಗೆಯಲು ಸಹಾಯ ಮಾಡುತ್ತಿರುತ್ತಾನೆ. ಇದನ್ನೂ ಓದಿ: ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್ 

    ಅಲ್ಲಿಯವರೆಗೆ ಸುಮ್ಮನೆ ಕುಳಿತಿದ್ದ ಯುವತಿ ಏಕಾಏಕಿ ಸಿಬ್ಬಂದಿಯ ಮುಖಕ್ಕೆ ಎರಡೂ ಕೈಗಳಿಂದ ಮೆಣಸಿನ ಪುಡಿ ಎಸೆದು ಓಡಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಆ ವ್ಯಕ್ತಿ ಡಿಸ್ಪ್ಲೇಯಲ್ಲಿ ಇಟ್ಟಿದ್ದ ನೆಕ್ಲೇಸ್‍ನ್ನು ಕಿತ್ತುಕೊಂಡು ಅಂಗಡಿಯಿಂದ ಹೊರಬರಲು ಪ್ರಯತ್ನ ಮಾಡುತ್ತಾನೆ.

    In Video, Father-Daughter Duo Steal Jewellery With Chilli Powder Attack

    ತಕ್ಷಣ ಇತರ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಆತನ ಟಿ-ಶರ್ಟ್ ಕಾಲರ್ ಹಿಡಿಯುತ್ತಾರೆ. ಆದರೂ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ 

    ಘಟನೆಯು ಗಾಜಿಯಾಬಾದ್‍ನ ಸಿಹಾನಿ ಗೇಟ್ ಪ್ರದೇಶದಲ್ಲಿ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಗಮನೆ ಟೆಕ್ ಪಾರ್ಕ್‍ನಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸುವಾಗ ಕಟ್ಟಡದಿಂದ ಬಿದ್ದ ಸಿಬ್ಬಂದಿ

    ಬಾಗಮನೆ ಟೆಕ್ ಪಾರ್ಕ್‍ನಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸುವಾಗ ಕಟ್ಟಡದಿಂದ ಬಿದ್ದ ಸಿಬ್ಬಂದಿ

    ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿ ಆಯತಪ್ಪಿ ಬಿದ್ದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಆಯತಪ್ಪಿ ಬಿದ್ದಿದ್ದಾರೆ. ಬೆಂಗಳೂರಿನ ಮಾರತಹಳ್ಳಿಯ ಕಾರ್ತಿಕ್ ನಗರದಲ್ಲಿರುವ ಬಾಗಮನೆ ಟೆಕ್ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ. ವಿನಯ್ ಕೆಳಗೆ ಬಿದ್ದ ರಭಸಕ್ಕೆ ಕೈ, ಕಾಲು ಹಾಗೂ ತಲೆಗೆ ಗಾಯಗಾಳಾಗಿವೆ. ಅವರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ತೆರಳಿ ಅಗ್ನಿ ನಂದಿಸುವ ಕಾರ್ಯ ನಡೆಸಿದರು. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಹತ್ತು ಅಗ್ನಿಶಾಮಕ ವಾಹನಗಳ ಜೊತೆ ಲ್ಯಾಡರ್ ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಮನೆ ಟೆಕ್ ಪಾರ್ಕ್‍ನಲ್ಲಿರುವ ಲೊಗ್ಯಾಟೋ ಕಂಪನಿಯಲ್ಲಿ ಈ ಅಗ್ನಿ ಅವಘಡ ನಡೆದಿದೆ. 12 ಅಗ್ನಿಶಾಮಕ ವಾಹನದಿಂದ ಕಾರ್ಯಾಚರಣೆ ನಡೆಯುತ್ತಿದೆ. ಏರಿಯಲ್ ಲ್ಯಾಡರ್ ಮೂಲಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

  • ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಚಿಕ್ಕಮಗಳೂರು: ಒಂದೇ ವಾರದಲ್ಲಿ ಮೂರು ಕಡೆ ಇಟ್ಟಿದ್ದ ಬೋನಿಗೆ ಬೀಳದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಕ್ಕರ್ ಕೊಟ್ಟುಕೊಂಡು ಓಡಾಡುತ್ತಿತ್ತು. ಆದರೆ ನಾಲ್ಕನೇ ಜಾಗದಲ್ಲಿ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.

    ಬೀರೂರಿನ ಸುತ್ತಮುತ್ತಲಿನ ಬ್ಯಾಗಡೇಹಳ್ಳಿ, ಹುಲ್ಲೇಹಳ್ಳಿ, ಜೋಗಿಹಟ್ಟಿ, ಸೀಗೆಹಡ್ಲು, ದಾಸರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನರಿಗೆ ಈ ಚಿರತೆ ತಲೆನೋವು ತರಿಸಿತ್ತು. ಕಳೆದೊಂದು ತಿಂಗಳಿಂದ ಊರಿನ ಜನರ ಕಣ್ಣಿಗೆ ಬಿದ್ದು ಮಾಯವಾಗುತ್ತಿತ್ತು. ಇದರಿಂದ ಹಳ್ಳಿಯ ಜನ ಹೊಲಗದ್ದೆಗಳಿಗೆ ತೋಟಕ್ಕೆ ಹೋಗಲು ಭಯ ಪಡುತ್ತಿದ್ದರು. ಹಳ್ಳಿಯಲ್ಲಿ ನಾಯಿ-ಕುರಿಗಳನ್ನ ಹೊತ್ತೊಯ್ದು ಒಂದೆರಡು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಅಲ್ಲಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೆಲ ಹಳ್ಳಿಗಳಲ್ಲಿ ಜಾನುವಾರುಗಳನ್ನೂ ಬೇಟೆಯಾಡಿತ್ತು. ಇದರಿಂದ ಭಯಗೊಂಡು ಹಳ್ಳಿಗರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.

    ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಮೂರು ಕಡೆ ಬೋನಿಟ್ಟರು ಕೂಡ ಚಿರತೆ ಸೆರೆಯಾಗಿರಲಿಲ್ಲ. ಕಡೆಯದಾಗಿ ಬೀರೂರಿನ ಕಾವಲು ಚೌಡೇಶ್ವರಿ ದೇವಾಲಯದ ಬಳಿ ಅರಣ್ಯ ಇಲಾಖೆ ನಾಲ್ಕನೇ ಬಾರಿ ಇಟ್ಟ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು 12-14 ವರ್ಷದ ಚಿರತೆ ಪ್ರಾಯದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು. ಕಳೆದೊಂದು ತಿಂಗಳಿಂದ ಹತ್ತಾರು ಹಳ್ಳಿಗರಿಗೆ ಭಯ ಹುಟ್ಟಿಸಿದ ಚಿರತೆ ಸೆರೆಯಾಗಿದ್ದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.

  • ಸೇಡಿಗಾಗಿ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮಗನನ್ನೇ ಅಪಹರಿಸಿ ಕೊಂದ್ರು

    ಸೇಡಿಗಾಗಿ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮಗನನ್ನೇ ಅಪಹರಿಸಿ ಕೊಂದ್ರು

    ಲಕ್ನೋ: ದ್ವೇಷಕ್ಕಾಗಿ ವಜಾಗೊಂಡಿದ್ದ ಸಿಬ್ಬಂದಿ ವೈದ್ಯರೊಬ್ಬರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ನಿಜಾಮ್ ಮತ್ತು ಶಾಹಿದ್ ಬಂಧಿತ ಆರೋಪಿಗಳು. ಉತ್ತರಪ್ರದೇಶದ ಬುಲಂದ್‍ಶಹರ್‍ನಲ್ಲಿ ವೈದ್ಯರೊಬ್ಬರು ನೋಂದಣಿಯಾಗದ ಕ್ಲಿನಿಕ್‍ನ್ನು ನಡೆಸುತ್ತಿದ್ದರು. ನಿಜಾಮ್ ಹಾಗೂ ಶಾಹಿದ್ ಇದೇ ಕ್ಲಿನಿಕ್‍ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಪ್ಪಿನಿಂದಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

    ಇದರಿಂದ ಈ ಸಿಬ್ಬಂದಿ ವೈದ್ಯರ ಮೇಲೆ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದರು. ಅದರಲ್ಲೂ ಕ್ಲಿನಿಕ್ ಚೆನ್ನಾಗಿ ನಡೆಯುತ್ತಿರುವುದನ್ನು ನೋಡಿ ನಿಜಾಮ್ ಮತ್ತು ಶಾಹಿದ್ ಅವರ ಕೋಪ ಇನ್ನೂ ಹೆಚ್ಚಿತ್ತು. ಇದರಿಂದಾಗಿ ವೈದ್ಯನ ಮಗನನ್ನು ಅಪಹರಿಸಿದ್ದಾರೆ.

    ಇತ್ತ ಎಂಟು ವರ್ಷದ ಮಗ ಮನೆಗೆ ಬಾರದಿದ್ದರಿಂದ ಶುಕ್ರವಾರ ಅಪಹರಣದ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳು ಬಾಲಕನಿಗಾಗಿ ಹುಡುಕಾಟ ಆರಂಭಿಸಿವೆ.  ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸುಮಾರು 60 ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕತ್ತು ಹಿಸುಕಿ ಮಗುವಿನ ಬಾಯಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

  • ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ

    ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ

    ರಾಯಚೂರು: 23 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿಗೆ ಸಿಬ್ಬಂದಿಯೇ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಬ್ಬಂದಿ ಹೋರಾಟಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರು ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸಿದ್ದಾರೆ.

    ಗ್ರಾ.ಪಂ ಸಿಬ್ಬಂದಿ ಹೋರಾಟದಿಂದಾಗಿ ಕಳೆದೆರಡು ದಿನದಿಂದ ಕುಡಿಯುವ ನೀರಿಲ್ಲದೇ ಜಾಲಹಳ್ಳಿಯಲ್ಲಿ ಜನರು ಪರದಾಡುತ್ತಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳು ಇಲ್ಲ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿದ್ದಾರೆ. ಪಂಚಾಯ್ತಿಗೆ ಅಧಿಕಾರಿ ನೇಮಕ ಮಾಡುವಂತೆಯೂ ಜನರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ:  ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    20,000 ಜನಸಂಖ್ಯೆ ಇರುವ ಜಾಲಹಳ್ಳಿ ಪಟ್ಟಣಕ್ಕೆ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆಡಳಿತಾತ್ಮಕ ಸಮಸ್ಯೆಯ ನೆಪವೊಡ್ಡಿ ಅಧಿಕಾರಿಯ ನೇಮಕ ವಿಳಂಬ ಮಾಡಲಾಗುತ್ತಿದೆ. ಪ್ರತಿಭಟನೆ ವೇಳೆ ಘಟನಾ ಸ್ಥಳಕ್ಕೆ ಬಂದ ತಾಲೂಕು ಅಧಿಕಾರಿಗಳನ್ನೇ ಕೂಡಿ ಹಾಕಿ ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹೋರಾಟಗಾರರು ತಾಲೂಕು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವೇಗವಾಗಿ ಬೈಕ್‍ನಲ್ಲಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ – ವೀಡಿಯೋ ವೈರಲ್

    ವೇಗವಾಗಿ ಬೈಕ್‍ನಲ್ಲಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ – ವೀಡಿಯೋ ವೈರಲ್

    ಹೈದರಾಬಾದ್: ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಅಂಗಡಿಗೆ ನುಗ್ಗಿದ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಘಟನೆ ವೇಳೆ ಬಟ್ಟೆ ಅಂಗಡಿಯ ಕೌಂಟರ್ ಬಳಿ ನಿಂತಿದ್ದ ಮೂವರು ಗ್ರಾಹಕರು ಸಮಯಕ್ಕೆ ಸರಿಯಾಗಿ ಪಕ್ಕಕ್ಕೆ ಸರಿದ್ದರಿಂದ ಬಚಾವ್ ಆಗಿದ್ದಾರೆ. ಈ ಘಟನೆ ಸೋಮವಾರ ರಾತ್ರಿ 8.30ರ ಸುಮಾರಿಗೆ ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಜಾರ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 4 ಜನರು ಅಂಗಡಿಯೊಳಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಇವರಲ್ಲಿ 3 ಗ್ರಾಹಕರಾಗಿದ್ದರೆ, ಓರ್ವ ಸಿಬ್ಬಂದಿಯಾಗಿದ್ದಾನೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    Bike

    ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬಜಾಜ್ ಪಲ್ಸರ್ ಬೈಕ್ ಅಂಗಡಿಯ ಒಳಗೆ ನುಗ್ಗಿದ್ದು, ವಾಹನ ಸವಾರ ಕೌಂಟರ್‍ಗೆ ಜಿಗಿದಿರುವುದನ್ನು ಕಾಣಬಹುದಾಗಿದೆ. ಅಷ್ಟು ಭಯಾಂಕರವಾದ ಅಪಘಾತ ಸಂಭವಿಸಿದ್ದರು. ಸದ್ಯ ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಬೈಕ್ ಸವಾರನಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಕೊನೆಗೆ ಅಪಘಾತದ ಬಳಿಕ ಬೈಕ್ ಸವಾರ ಅಂಗಡಿ ಅವರಿಗೆ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತಂತೆ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.