Tag: Stadium

  • ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

    ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

    ಇಸ್ಲಾಮಾಬಾದ್‌: ಕ್ರಿಕೆಟ್‌ ಪಂದ್ಯ (Cricket Match) ನಡೆಯುತ್ತಿದ್ದಾಗಲೇ ಸ್ಟೇಡಿಯಂನಲ್ಲಿ (Stadium) ಸ್ಫೋಟ ಸಂಭವಿಸಿದ ಘಟನೆ ಪಾಕಿಸ್ತಾನದ (Pakistan) ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

    ಸ್ಫೋಟಕ್ಕೆ ಓರ್ವ ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಬಜೌರ್ ಜಿಲ್ಲೆಯ ಖಾರ್ ತೆಹ್ಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ.

    ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ಅವರು ಸುಧಾರಿತ ಸ್ಫೋಟಕ ಸಾಧನದ ಮೂಲಕ ಸ್ಫೋಟವನ್ನು ನಡೆಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್ಹೊಡೆದ ಟ್ರಂಪ್

    ಸ್ಫೋಟಗೊಂಡ ಬೆನ್ನಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಮೈದಾನದಲ್ಲಿ ದಟ್ಟವಾದ ಹೊಗೆ ಏಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

     

  • ಪ್ರೇಕ್ಷಕರಿಲ್ಲದೇ ಖಾಲಿ ಹೊಡೆದ ಸ್ಟೇಡಿಯಂ – ಕೇರಳ ಕ್ರೀಡಾ ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ನಿಲ್ಲದ ಆಕ್ರೋಶ

    ಪ್ರೇಕ್ಷಕರಿಲ್ಲದೇ ಖಾಲಿ ಹೊಡೆದ ಸ್ಟೇಡಿಯಂ – ಕೇರಳ ಕ್ರೀಡಾ ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ನಿಲ್ಲದ ಆಕ್ರೋಶ

    ತಿರುವನಂಪುರಂ: ಭಾನುವಾರ ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಕೊನೆಯ ಏಕದಿನ ಪಂದ್ಯ ಕೇರಳದ ತಿರುವನಂತಪುರಂ (Thiruvananthapura) ಸ್ಟೇಡಿಯಂನಲ್ಲಿ (Stadium) ನಡೆದಿತ್ತು. ಈ ಪಂದ್ಯಕ್ಕೆ ಪ್ರೇಕ್ಷಕರಿಲ್ಲದೇ ಸ್ಟೇಡಿಯಂ ಖಾಲಿ ಹೊಡೆದಿತ್ತು. ಇದಕ್ಕೆ ಕಾರಣ ಟಿಕೆಟ್ ತೆರಿಗೆ ದರ ಏರಿಕೆ ಮತ್ತು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ (V Abdurahiman) ವಿವಾದಾತ್ಮಕ ಹೇಳಿಕೆ. ಇದೀಗ ಈ ಬಗ್ಗೆ ಕೇರಳ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ.

    ಟಿಕೆಟ್ ತೆರಿಗೆ ದರ ಏರಿಕೆ ಬಳಿಕ ಟಿಕೆಟ್ ದರ ಇಳಿಕೆ ಬಗ್ಗೆ ಕ್ರೀಡಾ ಪ್ರೇಮಿಗಳು ಆಗ್ರಹಿಸಿದ್ದರು. ಇದಕ್ಕೆ ವಿ.ಅಬ್ದುರಹಿಮಾನ್, ತೆರಿಗೆ ಇಳಿಸುವ ಅಗತ್ಯ ಏನಿದೆ? ದೇಶದಲ್ಲಿ ಬೆಲೆ ಏರಿಕೆ ಸರ್ವೇಸಾಮಾನ್ಯವಾಗಿದೆ. ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಯಿದೆ ಆದರೆ ಟಿಕೆಟ್ ಹಣ ನೀಡಲಾಗದವರು ಪಂದ್ಯ ನೋಡಬೇಕಾಗಿಲ್ಲ. ಹಸಿವಿನಿಂದ ಬಳಲುತ್ತಿರುವವರು ಪಂದ್ಯ ವೀಕ್ಷಿಸಲು ಬರಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಆ ಬಳಿಕ ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಕಂಡು ಬಂತು. ಸ್ಟೇಡಿಯಂ ಕೂಡ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯಿತು. ಇದೀಗ ಈ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ.

    ವಿ.ಅಬ್ದುರಹಿಮಾನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಕ್ರೀಡಾ ಸಚಿವರ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಕಿಡಿಕಾರಿದ್ದಾರೆ. ಅಬ್ದುರಹಿಮಾನ್ ಏನೇ ಹೇಳಿದರೂ ಜನರು ಪಂದ್ಯಕ್ಕೆ ಬರುವುದನ್ನು ತಪ್ಪಿಸಬಾರದು. ಜನರು ಬರದಿರುವುದರಿಂದ ಸಚಿವರಿಗೆ ಏನು ನಷ್ಟವಿಲ್ಲ ಆದರೆ ಇದು ಕ್ರಿಕೆಟ್ ಮತ್ತು ಕ್ರೀಡೆಯನ್ನು ಪ್ರೀತಿಸುವವರಿಗೆ ನಷ್ಟ. ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪ್ರಚಾರಗಳನ್ನು ನಾನು ನೋಡಿದ್ದೇನೆ. ಅವರ ಪ್ರಚಾರವು ಪರಿಣಾಮಕಾರಿಯಾಗಿ ಕಂಡಿತ್ತು. ಆದರೆ ಈ ರೀತಿ ಮಾಡಬಾರದಿತ್ತು. ಮೂರನೇ ಏಕದಿನ ಪಂದ್ಯವನ್ನು ವೀಕ್ಷಿಸಲು ನಾನು ಮತ್ತು ಅಲ್ಲಿಗೆ ಬಂದವರು ಅದೃಷ್ಟಶಾಲಿಯಾಗಿದ್ದರು. ಉತ್ತಮವಾದ ಪಂದ್ಯವಾಗಿತ್ತು. ಸಚಿವರು ಆ ರೀತಿ ಹೇಳಿಕೆಯನ್ನು ಕೊಡಬಾರದಿತ್ತು ಎಂದಿದ್ದಾರೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಕೂಡ ವಾಗ್ದಾಳಿ ನಡೆಸಿದ್ದು, ಅಬ್ದುರಹಿಮಾನ್ ಅವರು ತಮ್ಮ ಹೇಳಿಕೆಯಿಂದ ಮಲಯಾಳಿಗಳ ಸ್ವಾಭಿಮಾನವನ್ನು ಪ್ರಶ್ನಿಸಬಾರದಿತ್ತು. ಸಚಿವರ ಹಸಿವಿನ ಹೇಳಿಕೆಯಿಂದ ಖಾಲಿ ಗ್ಯಾಲರಿಯಲ್ಲಿ ಪಂದ್ಯ ನಡೆಯುವಂತಾಯಿತು ಎಂದು ಕೆಂಡ ಕಾರಿದ್ದಾರೆ.

    ಆದರೆ ಸಿಪಿಐ(ಎಂ) ಕ್ರೀಡಾ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಅವರ ಹೇಳಿಕೆಯಲ್ಲಿ ಏನು ತಪ್ಪಿಲ್ಲ ಎಂದು ವಾದಿಸಿದೆ. ತಿರುವನಂತಪುರಂನ ಗ್ರೀನ್‍ಫೀಲ್ಡ್ ಸ್ಟೇಡಿಯಂ 55,000 ಪ್ರೇಕ್ಷಕರು ಹಾಜರಾಗುವಷ್ಟು ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ 10,000ಕ್ಕಿಂತ ಕಡಿಮೆ ಜನ ಹಾಜರಾಗಿದ್ದರು. ಆದರೆ ಪಂದ್ಯದಲ್ಲಿ ಭಾರತ 317 ರನ್‍ಗಳ ದಾಖಲೆಯ ಗೆಲುವಿನೊಂದಿಗೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಗೈದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    ಇಸ್ಲಾಮಾಬಾದ್: ಪಾಕಿಸ್ತಾನ (Pakistan) ಭೀಕರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ನಡುವೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿದೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸದೊಂದು ಫೋಟೋಗಳು ಹರಿದಾಡಿವೆ. ಬರೋಬ್ಬರು 32 ಸಾವಿರ ದ್ಯೋಗ ಆಕಾಂಕ್ಷಿಗಳು ಪೊಲೀಸ್ ಕಾನ್‌ಸ್ಟೇಬಲ್ (Police Constable) ಹುದ್ದೆಯ ನೇಮಕಾತಿಗಾಗಿ ಲಿಖಿತ ಪರೀಕ್ಷೆ (Recruitment Test) ಬರೆಯಲು ಕ್ರೀಡಾಂಗಣದಲ್ಲಿ (Stadium) ಪೆನ್ನು, ಪೇಪರ್ ಹಿಡಿದು ಕುಳಿತಿರುವುದು ಕಂಡುಬಂದಿದೆ.

    ಶನಿವಾರ ಇಸ್ಲಾಮಾಬಾದ್‌ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ನಡೆದಿದ್ದು, ಸುಮಾರು 32 ಸಾವಿರ ಅಭ್ಯರ್ಥಿಗಳು ಸ್ಟೇಡಿಯಂನ ನೆಲದ ಮೇಲೆ ಕುಳಿತು ಪರೀಕ್ಷೆ ಬರೆದಿದ್ದಾರೆ.

    ವರದಿಗಳ ಪ್ರಕಾರ ಪಾಕಿಸ್ತಾನದಾದ್ಯಂತ 1,667 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ಖಾಲಿಯಿದೆ. ಇದಕ್ಕಾಗಿ ಲಿಖಿತ ಪರೀಕ್ಷೆ ನೀಡಲು ಜಾಹೀರಾತು ನೀಡಲಾಗಿತ್ತು. ಈ ಹಿನ್ನೆಲೆ 30 ಸಾವಿರಕ್ಕೂ ಹೆಚ್ಚಿನ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಳೆದ 5 ವರ್ಷಗಳಿಂದ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು ಖಾಲಿ ಉಳಿದಿವೆ ಎನ್ನಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಭಾರತೀಯ ವಿದ್ಯಾರ್ಥಿ ಸಾವು – ಶವ ತರಿಸಿಕೊಳ್ಳಲು ಸಹಾಯ ಕೋರಿದ ಕುಟುಂಬಸ್ಥರು

    ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಸರ್ಕಾರಿ ಉದ್ಯೋಗಕ್ಕೆ ಅತ್ಯಂತ ಕಡಿಮೆ ನೇಮಕಾತಿ ಮಾಡಿಕೊಳ್ಳುವುದರಿಂದ ನಿರುದ್ಯೋಗಿಳ ಸಂಖ್ಯೆಯೂ ಹೆಚ್ಚಾಗಿದೆ. ಸರ್ಕಾರಿ ವಲಯದಲ್ಲಿ ಖಾಲಿಯಿರುವ ಕೆಲವೇ ಕೆಲವು ಹುದ್ದೆಗೆ ಲಕ್ಷಾಂತರ ಆಕಾಂಕ್ಷಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ

    Live Tv
    [brid partner=56869869 player=32851 video=960834 autoplay=true]

  • ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ

    ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ

    ಜಕಾರ್ತ: ಈ ತಿಂಗಳ ಆರಂಭದಲ್ಲಿ ಕಾಲ್ತುಳಿತದಿಂದಾಗಿ (Stampede) 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಇಂಡೋನೇಷ್ಯಾದ (Indonesia) ಫುಟ್‌ಬಾಲ್  ಕ್ರೀಡಾಂಗಣವನ್ನು (Football Stadium) ಕೆಡವಲು (Demolish) ನಿರ್ಧರಿಸಲಾಗಿದೆ.

    ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ (Joko Widodo) ಮಂಗಳವಾರ ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾದ (FIFA) ಮುಖ್ಯಸ್ಥ ಜಿಯಾನಿ ಇನ್‌ಫಾಂಟಿನೋ (Gianni Infantino) ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕ್ರೀಡಾಂಗಣವನ್ನು ನೆಲಸಮಗೊಳಿಸುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೇ ಆ ಕ್ರೀಡಾಂಗಣವನ್ನು ಮರು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಗಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಆ ಕ್ರೀಡಾಂಗಣವನ್ನು ಕೆಡವಲು ನಿರ್ಧರಿಸಲಾಗಿದ್ದು, ಮತ್ತೆ ಅದನ್ನು ಫಿಫಾ ಮಾನದಂಡಗಳ ಪ್ರಕಾರ ಮರುನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ- ನೂರಾರು ಹೋರಾಟಗಾರರ ಬಂಧನ

    ಅಕ್ಟೋಬರ್ 1 ರಂದು ಮಲಾಂಗ್ ನಗರದಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ಬಳಿಕ ಗಲಭೆ ಸಂಭವಿಸಿತ್ತು. ಈ ವೇಳೆ ಪೊಲೀಸರು ಸ್ಟೇಡಿಯಂನಲ್ಲಿ ಅಶ್ರುವಾಯು ಪ್ರಯೋಗಿಸಿದ್ದರು. ಜನಸಂದಣಿಯೂ ಹೆಚ್ಚಿದ್ದರಿಂದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ, ಪೊಲೀಸರು, ಮಕ್ಕಳು ಸೇರಿದಂತೆ 130ಕ್ಕೂ ಹೆಚ್ಚು ಜನರು ಸ್ಟೇಡಿಯಂನಲ್ಲಿ ಸಾವನ್ನಪ್ಪಿದ್ದರು.

    ಅಂದು ಸ್ಟೇಡಿಯಂನಲ್ಲಿ ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಸ್ಥಳೀಯ ತಂಡ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತ್ತು. ಇದರಿಂದ ಬೇಸರಗೊಂಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಚ್‌ಗೆ ನುಗ್ಗಿದ್ದರು. ಬಳಿಕ ಸಾಮೂಹಿಕ ಗಲಭೆ ಭುಗಿಲೆದ್ದಿತ್ತು. ಇದನ್ನೂ ಓದಿ: ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    Live Tv
    [brid partner=56869869 player=32851 video=960834 autoplay=true]

  • ಅಫ್ಘಾನಿಸ್ತಾನದ ಟಿ20 ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಬಾಂಬ್ ಸ್ಫೋಟ

    ಅಫ್ಘಾನಿಸ್ತಾನದ ಟಿ20 ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಬಾಂಬ್ ಸ್ಫೋಟ

    ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಶಪಜೀಜಾ ಕ್ರಿಕೆಟ್ ಲೀಗ್ ಟಿ20 ಪಂದ್ಯದ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ.

    ಬ್ಯಾಂಡ್-ಎ-ಅಮೀರ್ ಡ್ರ‍್ಯಾಗನ್ ಹಾಗೂ ಪಮೀರ್ ಝಲ್ಮಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆಯೇ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ಎಲ್ಲಾ ಆಟಗಾರರೂ ಸುರಕ್ಷಿತರಾಗಿದ್ದು, ಅವರನ್ನು ರಕ್ಷಣೆಗೆ ಬಂಕರ್‌ಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ಸ್ಫೋಟ ಸಂಭವಿಸುತ್ತಲೇ ಕ್ರೀಡಾಂಗಣದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜನರು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ಗುಂಪಾಗಿ ಧಾವಿಸಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    2 ದಿನಗಳ ಹಿಂದೆಯಷ್ಟೇ ಕಾಬೂಲ್ ಗುರುದ್ವಾರ ಕಾರ್ಟೆ ಪರ್ವಾನ್ ಗೇಟ್ ಬಳಿ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಕ್ರೀಡಾಂಗಣದಲ್ಲಿ ಸ್ಫೋಟ ಸಂಭವಿಸಿದೆ. ಸಾರ್ವಕನಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಆಗಾಗ ಮರುಕಳಿಸುತ್ತಿರುವುದು ಆಫ್ಘನ್ನರಲ್ಲಿ ನಡುಕ ಉಂಟು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಾಯಿ ವಾಕಿಂಗ್‍ಗೆ ಸ್ಟೇಡಿಯಂ ಖಾಲಿ ಮಾಡಿಸಿದ್ದ ಐಎಎಸ್ ಅಧಿಕಾರಿ ವರ್ಗಾವಣೆ

    ನಾಯಿ ವಾಕಿಂಗ್‍ಗೆ ಸ್ಟೇಡಿಯಂ ಖಾಲಿ ಮಾಡಿಸಿದ್ದ ಐಎಎಸ್ ಅಧಿಕಾರಿ ವರ್ಗಾವಣೆ

    ನವದೆಹಲಿ: ತಮ್ಮ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಸ್ಟೇಡಿಯಂನಲ್ಲಿದ್ದ ಕ್ರೀಡಾ ಪಡುಗಳನ್ನು ಸಮಯಕ್ಕಿಂತಲೂ ಮೊದಲೇ ಹೊರಗೆ ಕಳುಹಿಸಿದ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರನ್ನು ವರ್ಗಾಯಿಸಲಾಗಿದೆ. ಅಲ್ಲದೇ ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.

    ದೆಹಲಿಯಲ್ಲಿರುವ ತ್ಯಾಗರಾಜ್ ಸ್ಟೇಡಿಯಂ ಸಂಜೆ 8 ಗಂಟೆ ವರೆಗೂ ತೆರೆದಿಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ಅವಧಿಗಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗುತ್ತಿದ್ದಂತೆ ಸಂಜೀವ್ ಖಿರ್ವಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರಹಾಕಿ, ಐಎಎಸ್ ಅಧಿಕಾರಿಯ ನಾಯಿಗೆ ವಾಕಿಂಗ್

    ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣದಲ್ಲಿನ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆ , ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‍ಗೆ ಮತ್ತು ರಿಂಕು ಧುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ಎಂಎಚ್‍ಎ ವರ್ಗಾಯಿಸಲಾಗಿದೆ.

    ನಾವು ರಾತ್ರಿ 8 ರಿಂದ 8:30ರ ವರೆಗೂ ತರಬೇತಿ ನಡೆಸುತ್ತಿದ್ದೆವು. ಆದರೆ ಈಗ ಅಧಿಕಾರಿಯ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ನಮ್ಮನ್ನು ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಹೇಳಲಾಗುತ್ತಿದೆ ಎಂದು ಕ್ರೀಡಾ ತರಬೇತುದಾರರೊಬ್ಬರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ಬಗ್ಗೆ ಪ್ರತಿಕ್ರಿಯಿಸಿದ ಖಿರ್ವಾರ್, ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು, ನಾನು ತೀರಾ ಅಪರೂಪಕ್ಕೆ ನಾಯಿಯನ್ನು ಸ್ಟೇಡಿಯಂಗೆ ಕರೆದುಕೊಂಡು ಹೋಗಿದ್ದೆ. ಆದರೆ ಇದರಿಂದ ಯಾವುದೇ ಕ್ರೀಡಾಪಟುಗಳಿಗೂ ಅಡ್ಡಿ ಪಡಿಸಿರಲಿಲ್ಲ ಎಂದಿದ್ದರು.

    ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಗರದಲ್ಲಿನ ಎಲ್ಲಾ ಸರ್ಕಾರಿ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೆರೆದಿಡಲು ಆದೇಶಿಸಿದ್ದಾರೆ.

  • ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರಹಾಕಿ, ಐಎಎಸ್ ಅಧಿಕಾರಿಯ ನಾಯಿಗೆ ವಾಕಿಂಗ್

    ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರಹಾಕಿ, ಐಎಎಸ್ ಅಧಿಕಾರಿಯ ನಾಯಿಗೆ ವಾಕಿಂಗ್

    ನವದೆಹಲಿ: ಐಎಎಸ್ ಅಧಿಕಾರಿಯಬ್ಬರು ತಮ್ಮ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ಸ್ಟೇಡಿಯಂನಲ್ಲಿದ್ದ ಕ್ರೀಡಾ ಪಟುಗಳನ್ನು ಸಮಯಕ್ಕಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಿರುವ ಘಟನೆ ವರದಿಯಾಗಿದೆ.

    ದೆಹಲಿಯಲ್ಲಿರುವ ತ್ಯಾಗರಾಜ್ ಸ್ಟೇಡಿಯಂ ಸಂಜೆ 8 ಗಂಟೆ ವರೆಗೂ ತೆರೆದಿಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ಅವಧಿಗಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾಯಿಯಾಗಲು ಲಕ್ಷಗಟ್ಟಲ್ಲೇ ಖರ್ಚು ಮಾಡಿದ

    ಈ ಬಗ್ಗೆ ಕ್ರೀಡಾ ತರಬೇತುದಾರರೊಬ್ಬರು, ನಾವು ರಾತ್ರಿ 8 ರಿಂದ 8:30ರ ವರೆಗೂ ತರಬೇತಿ ನಡೆಸುತ್ತಿದ್ದೆವು. ಆದರೆ ಈಗ ಅಧಿಕಾರಿಯ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ನಮ್ಮನ್ನು ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 1 ರೂಪಾಯಿ ಸಂಭಾವನೆ ಪಡೆದು, ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಐಪಿಎಸ್ ಅಧಿಕಾರಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಖಿರ್ವಾರ್ ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು, ನಾನು ತೀರಾ ಅಪರೂಪಕ್ಕೆ ನಾಯಿಯನ್ನು ಸ್ಟೇಡಿಯಂಗೆ ಕರೆದುಕೊಂಡು ಹೋಗಿದ್ದೆ. ಆದರೆ ಇದರಿಂದ ಯಾವುದೇ ಕ್ರೀಡಾಪಟುಗಳಿಗೂ ಅಡ್ಡಿ ಪಡಿಸಿರಲಿಲ್ಲ ಎಂದಿದ್ದಾರೆ.

    ಈ ಘಟನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಮನಕ್ಕೆ ಬಂದಿದ್ದು, ನಗರದಲ್ಲಿನ ಎಲ್ಲಾ ಸರ್ಕಾರಿ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೆರೆದಿಡಲು ಆದೇಶ ನೀಡಿದ್ದಾರೆ.

  • ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಮುಂಬೈ: 15 ಐಪಿಎಲ್ ಆವೃತ್ತಿಯಲ್ಲಿ ಕಳೆದ 5 ಪಂದ್ಯಗಳಲ್ಲೂ ಸತತವಾಗಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಬರೆ ಬಿದ್ದಿದೆ.

    ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ 11 ಸಹ ಆಟಗಾರರಿಗೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    IPL 2022 MI (1)

    ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೆಶನ್ ಸ್ಟೇಡಿಯಂನಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ 10 ಸಹ ಆಟಗಾರರಿಗೆ ತಲಾ 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ.25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

    15ನೇ ಆವೃತ್ತಿಯ ಐಪಿಎಲ್‌ನ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 186 ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    suryakumar and rohith sharma

    ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಸತತವಾಗಿ 5 ಪಂದ್ಯಗಲ್ಲಿ ಸೋಲನ್ನು ಕಂಡಿದೆ. ಪಂಜಾಬ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಕೊನೆಯ ಇನ್ನಿಂಗ್ಸನಲ್ಲಂತೂ ಗೆಲುವಿನ ಸಮೀಪಕ್ಕೆ ಬಂದಿದ್ದೇವೆ. ಆದರೆ, ಪ್ರಮುಖ ರನೌಟ್‌ಗಳು ಸಂಭವಿಸಿದ್ದರಿಂದ ಸೋಲಾಯಿತು. ಬದಲಾವಣೆಗಾಗಿ ಹೊಸ ಆಲೋಚನಾ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

     

  • ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

    ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

    ಕಾಬೂಲ್: ತನ್ನ ವಿಚಿತ್ರ ನಿರ್ಧಾರಗಳಿಂದಲೇ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ತಾಲಿಬಾನ್ ಆಡಳಿತ ಈಗ ಅಫ್ಘಾನಿಸ್ಥಾನದಲ್ಲಿ ಮತ್ತೊಂದು ಹಾಸ್ಯಾಸ್ಪದ ನಿರ್ಧಾರವನ್ನು ಕೈಗೊಂಡಿದೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ ಎಂಬ ಕಾರಣಕ್ಕೆ ಐಪಿಎಲ್ ಪ್ರಸಾರವನ್ನೇ ದೇಶದಲ್ಲಿ ನಿಷೇಧಿಸಿದೆ.

    ಅಫ್ಘಾನಿಸ್ಥಾನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಿದೆ. ಎಲ್ಲಾ ಮಾಧ್ಯಮಗಳಿಗೂ ಎಚ್ಚರಿಕೆ ರವಾನಿಸಿರುವ ತಾಲಿಬಾನ್ ಐಪಿಎಲ್‍ನ ಯುಎಇನಲ್ಲಿ ನಡೆಯುವ ಪಂದ್ಯಗಳನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇರುತ್ತಾರೆ ಎನ್ನುವ ಕಾರಣದಿಂದಾಗಿ ಈ ನಿರ್ಧಾರವನ್ನು ತಾಲಿಬಾನ್ ಸರ್ಕಾರ ತೆಗೆದುಕೊಂಡಿದೆ. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

    ಹಾಸ್ಯಾಸ್ಪದ, ಅಫ್ಘಾನಿಸ್ಥಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ ಪ್ರಸಾರವನ್ನು ತಾಲಿಬಾನ್ ನಿಷೇಧಿಸಿದೆ. ಕ್ರೀಡಾಂಗಣಗಳಲ್ಲಿ ಮಹಿಳಾ ಪ್ರೇಕ್ಷಕರ ಉಪಸ್ಥಿತಿ ಹಾಗೂ ಯುವತಿಯರು ನೃತ್ಯಗಳನ್ನು ಮಾಡುವ ಕಾರಣದಿಂದಾಗಿ ಅಫ್ಘಾನ್ ಮಾಧ್ಯಮಗಳು ಐಪಿಎಲ್ ಲೀಗ್‍ನ ಪ್ರಸಾರವನ್ನು ಮಾಡಬಾರದು ಎಂದು ತಾಲಿಬಾನ್ ಎಚ್ಚರಿಸಿದೆ ಎಂದು ಅಫ್ಘಾನಿಸ್ತಾನದ ಪತ್ರಕರ್ತ ಫಾವದ್ ಅಮನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಅಂತ್ಯ – ಶೀಘ್ರದಲ್ಲಿ ಡಿಸಿಜಿಐಗೆ ವರದಿ ಸಲ್ಲಿಕೆ

    ಇಸ್ಲಾಂನ ಚೌಕಟ್ಟಿನೊಳಗೆ ಮಹಿಳಾ ಹಕ್ಕುಗಳನ್ನು ಗೌರವಿಸಲಾಗುವುದು ಎಂದು ಭಯೋತ್ಪಾದಕ ಗುಂಪು ಹೇಳುತ್ತಿದೆ. ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ಮಾತ್ರವಲ್ಲದೇ ಮಹಿಳೆಯರನ್ನು ಕ್ರೀಡೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

     

    400 ಕ್ರೀಡೆಗಳಿಗೆ ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿತ್ತು. ಆದರೆ ಮಹಿಳೆಯರು ಆಡಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ್ದರು. ದಯವಿಟ್ಟು ಮಹಿಳೆಯರ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಬೇಡಿ ಎಂದು ಅಫ್ಘಾನಿಸ್ಥಾನದ ಹೊಸ ಕ್ರೀಡಾ ಮುಖ್ಯಸ್ಥ ಬಶೀರ್ ಅಹ್ಮದ್ ರುಸ್ತಮಜಾ ಕಳೆದ ವಾರವಷ್ಟೇ ಹೇಳಿದ್ದರು.

  • ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

    ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

    ದುಬೈ: ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್ ಆರಂಭಕ್ಕೂ ಮೊದಲು ದುಬೈ ಕ್ರಿಕೆಟ್ ಮಂಡಳಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ನಿಯಮಿತ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ನೀಡಿದೆ.

    ಕೊರೊನಾದಿಂದಾಗಿ ಐಪಿಎಲ್ ವೀಕ್ಷಣೆಗೆ ಪ್ರೇಕ್ಷಕರ ಗ್ಯಾಲರಿ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಇದೀಗ ಯುಎಇನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ದ್ವಿತೀಯ ಚರಣದ ಪಂದ್ಯಗಳಿಗೆ ಸೀಮಿತ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿಕೊಡಲು ಐಪಿಎಲ್ ಆಯೋಜಕ ಮಂಡಳಿ ನಿರ್ಧರಿಸಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

    ಯುಎಇನ ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಈ ಎಲ್ಲಾ ಸ್ಟೇಡಿಯಂಗಳಿಗೆ ಪ್ರೇಕ್ಷರಿಗೆ ಪ್ರವೇಶ ಕಲ್ಪಿಸಿಕೊಡುವ ನಿರೀಕ್ಷೆ ಇದೆ. ಆದರೆ ಎಷ್ಟು ಪ್ರಮಾಣದಲ್ಲಿ ಅವಕಾಶ ಎಂಬುದು ಇನ್ನೂ ಕೂಡ ಸಂಘಟಕರು ಸ್ಪಷ್ಟಪಡಿಸಿಲ್ಲ. ಆದರೆ ಸೆಪ್ಟೆಂಬರ್ 16ರಿಂದ ಆನ್‍ಲೈನ್‍ನಲ್ಲಿ ಟಿಕೆಟ್ ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್