Tag: stabbed

  • ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

    ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

    ಮಂಡ್ಯ: ಹಳೇ ದ್ವೇಷ ಹಿನ್ನೆಲೆ ಗಣೇಶ ವಿಸರ್ಜನೆ ಮೆರವಣಿಗೆ (Ganesh Idol Procession) ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತವಾಗಿರುವ ಘಟನೆ ಮಂಡ್ಯದ (Mandya) ಮಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

    ಮಾಚಹಳ್ಳಿ ಗ್ರಾಮದ ಸಚ್ಚಿನ್ (24) ಎಂಬಾತನ ಕೈ ಹಾಗೂ ಹೊಟ್ಟೆ ಭಾಗಕ್ಕೆ ಚಾಕು ಇರಿತವಾಗಿದ್ದು, ನಂಜುಂಡಸ್ವಾಮಿ (26) ಎಂಬಾತನಿಗೆ ತಲೆ ಹಾಗೂ ಕಣ್ಣಿ ಭಾಗಕ್ಕೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಇದನ್ನೂ ಓದಿ: ಕಂಟೇನರ್ ಡಿಕ್ಕಿ ಹೊಡೆದು ಈರುಳ್ಳಿ ಟೆಂಪೋ ಪಲ್ಟಿ – ಓರ್ವ ಸಾವು

    ದರ್ಶನ್, ಲೋಕೇಶ್, ಪ್ರಜ್ವಲ್ ಸೇರಿದಂತೆ ಹಲವರಿಂದ ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸ್ನೇಹಿತರೊಂದಿಗೆ ಸಚ್ಚಿನ್ ಹಾಗೂ ನಂಜುಂಡಸ್ವಾಮಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದರ್ಶನ್ & ಗ್ಯಾಂಗ್‌ನಿಂದ ಏಕಾಏಕಿ ಹಳೇ ದ್ವೇಷದಿಂದ ಗಲಾಟೆ ಆಗಿದೆ. ಬಳಿಕ ಇವರು ಚಾಕು ಇರಿದಿದ್ದು, ಕಲ್ಲಿನಿಂದಲೂ‌ ಹಲ್ಲೆ ಮಾಡಿದ್ದಾರೆ.

    ಕಳೆದ 3 ವರ್ಷದಿಂದ ಗಾಯಾಳು ಸಚ್ಚಿನ್ ಹಾಗೂ ಆರೋಪಿ ದರ್ಶನ್ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ್ಗೆ ಕಿರಿಕ್ ಆಗುತ್ತಿತ್ತು. 5 ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ರಾಜಿಯಾಗಿತ್ತು. ನಿನ್ನೆ ಮತ್ತೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಾಯಾಳುಗಳಿಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ‌ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು

  • ದೆಹಲಿಯಲ್ಲಿ ಇನ್ನೊಂದು ಆಘಾತ – ಸ್ನೇಹ ಕೊನೆಗೊಳಿಸಲು ಬಯಸಿದ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ

    ದೆಹಲಿಯಲ್ಲಿ ಇನ್ನೊಂದು ಆಘಾತ – ಸ್ನೇಹ ಕೊನೆಗೊಳಿಸಲು ಬಯಸಿದ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ

    ನವದೆಹಲಿ: ದೆಹಲಿಯಲ್ಲಿ (Delhi) ಭೀಕರ ಅಪಘಾತಕ್ಕೆ 20 ವರ್ಷದ ಯುವತಿ ಸಾವನ್ನಪ್ಪಿದ ಆಘಾತಕಾರಿ ಘಟನೆಯ ಬೆನ್ನಲ್ಲೇ ಇನ್ನೊಂದು ಘಟನೆ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಸ್ನೇಹವನ್ನು (Friendship) ಕೊನೆಗೊಳಿಸಲು ಬಯಸಿದ ಯುವತಿಗೆ (Young Woman) ಪಾಗಲ್ ಪ್ರೇಮಿ ಚಾಕುವಿನಿಂದ ಪದೇ ಪದೇ ಇರುದಿರುವ (Stabbed) ಘಟನೆ ವರದಿಯಾಗಿದೆ.

    ಆದರ್ಶ ನಗರದಲ್ಲಿ (Adarsh Nagar) ನಡೆದ ಘಟನೆ ನಡೆದಿದ್ದು,  ಆರೋಪಿಯನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಹರಿಯಾಣದ ಅಂಬಾಲಾದಲ್ಲಿ ಬಂಧಿಸಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಯುವತಿಯನ್ನು ಪ್ರಸ್ತುತ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.

    ವರದಿಗಳ ಪ್ರಕಾರ ಯುವತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಆಕೆ 5 ವರ್ಷಗಳಿಂದ ಸುಖ್ವಿಂದರ್ ಜೊತೆ ಸ್ನೇಹ ಹೊಂದಿದ್ದಳು. ಆದರೆ ಜನವರಿ 2 ರಂದು ಇಬ್ಬರು ಜಗಳ ಮಾಡಿಕೊಂಡಿದ್ದು, ಆಕೆ ಸ್ನೇಹವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಕೋಪಗೊಂಡ ಸುಖ್ವಿಂದರ್ ಯುವತಿಗೆ 3-4 ಬಾರಿ ಚಾಕುವಿನಿಂದ ಇರಿಸಿದ್ದಾನೆ. ಇದನ್ನೂ ಓದಿ: ತಲೆಬುರುಡೆ ಒಡೆದಿತ್ತು, ಪಕ್ಕೆಲುಬು ಕಾಣಿಸ್ತಿತ್ತು- ಅಂಜಲಿ ಶವಪರೀಕ್ಷೆ ಬಳಿಕ ಆಘಾತಕಾರಿ ಮಾಹಿತಿ

    ಸುಖ್ವಿಂದರ್ ಭೇಟಿ ಮಾಡಲು ಬಂದಿದ್ದ ಸಂದರ್ಭ ಯುವತಿ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದಳು. ತನಗೆ ಆತ ಪರಿಚಯವಿದ್ದರಿಂದ ಹಲ್ಲೆ ಮಾಡುತ್ತಾನೆಂದು ನಿರೀಕ್ಷಿಸಿರಲಿಲ್ಲ. ಆತ ಯಾವುದೋ ವಿಷಯ ಚರ್ಚಿಸುವ ನೆಪದಲ್ಲಿ ರಸ್ತೆಯ ಬಳಿ ಕರೆದುಕೊಂಡು ಹೋಗಿ ಏಕಾಏಕಿ ಚಾಕುವಿನಿಂದ ಇರಿದಿರುವುದಾಗಿ ಯುವತಿ ತಿಳಿಸಿದ್ದಾಳೆ.

    ನಾವು ಸ್ನೇಹಿತರಾಗಿದ್ದೆವು. ಆದರೆ ಆತನೊಂದಿಗೆ ಸಂಬಂಧ ಹೊಂದಲು ನಾನು ಬಯಸಿರಲಿಲ್ಲ. ನಾನು ಕೆಲವು ಸಮಸ್ಯೆಗಳಿಂದ ಆತನ ಸ್ನೇಹವನ್ನು ಮುರಿದುಬಿಟ್ಟಿದ್ದೆ. ಈ ನಡುವೆ ಆತ ಜನವರಿ 2 ರಂದು ನನ್ನನ್ನು ಭೇಟಿಯಾಗಿ ಸ್ನೇಹ ಮುಂದುವರಿಸುವಂತೆ ಕೇಳಿಕೊಂಡಿದ್ದ. ಆದರೆ ನಾನು ನಿರಾಕರಿಸಿದ್ದಕ್ಕೆ ಆತ ಚೂರಿಯಿಂದ ಇರಿದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ

    ಕೃತ್ಯದ ಬಳಿಕ ಆರೋಪಿ ದೆಹಲಿಯಿಂದ ಅಂಬಾಲಾಗೆ ಪರಾರಿಯಾಗಿದ್ದ. ಪೊಲೀಸರ ತಂಡ ಅಂಬಾಲಾಗೆ ತೆರಳಿ ಮಂಗಳವಾರ ಸಂಜೆ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಚಾಕು ಇರಿದ ಪಾಗಲ್ ಪ್ರೇಮಿ

    ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಚಾಕು ಇರಿದ ಪಾಗಲ್ ಪ್ರೇಮಿ

    ಹಾಸನ: ಪ್ರೀತಿ ನಿರಾಕರಿಸಿದಕ್ಕೆ ಸಿಟ್ಟಿಗೆದ್ದ ಪಾಗಲ್ ಪ್ರೇಮಿಯೋರ್ವ ವಿದ್ಯಾರ್ಥಿನಿಗೆ ಚಾಕು ಇರಿದು ಕೌರ್ಯ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.

    ಹೊಳೆನರಸೀಪುರದ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಗೆ ಪಾಗಲ್ ಪ್ರೇಮಿ ಮಣಿಕಂಠ(19) ಚಾಕು ಇರಿದಿದ್ದಾನೆ. ಆರೋಪಿ ಮಣಿಕಂಠ ಅಲಿಯಾಸ್ ಮಲ್ಲೇಶ್ ಪಡವಲಹಿತ್ತೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಮಣಿಕಂಠ ಆಕೆ ಎಷ್ಟೇ ಬಾರಿ ನಿರಾಕರಿಸಿದರೂ ತನ್ನನ್ನು ಪ್ರೀತಿ ಮಾಡು ಎಂದು ಬಹಳ ದಿನಗಳಿಂದ ಪೀಡಿಸುತ್ತಾ ಕಾಟಕೊಡುತ್ತಿದ್ದನು. ಆದರೇ ಏನೇ ಮಾಡಿದರು ವಿದ್ಯಾರ್ಥಿನಿ ತನ್ನ ಪ್ರೀತಿಯನ್ನು ಒಪ್ಪಲಿಲ್ಲ ಎಂಬ ಕೋಪಕ್ಕೆ ಇಂದು ಮಧ್ಯಾಹ್ನ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ:ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಸುಟ್ಟು ತಾನು ಹೆಣವಾದ

    ಪಟ್ಟಣದ ರೈಲು ನಿಲ್ದಾಣ ಬಳಿಯೇ ಯುವತಿಯ ಕಾಲೇಜು ಇರುವುದರಿಂದ ಆಕೆ ಮಧ್ಯಾಹ್ನ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಳು. ಈ ವೇಳೆ ರೈಲು ನಿಲ್ದಾಣ ಬಳಿ ಆಕೆಯನ್ನು ಅಡ್ಡಗಟ್ಟಿದ ಮಣಿಕಂಠ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಕೈಗೆ ಹಾಗೂ ಕುತ್ತಿಗೆಗೆ ಗಾಯಗಳಾಗಿವೆ. ತಕ್ಷಣ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಕಾರಣ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಕಂಠನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಕಾರ್ಪೋರೇಟರ್ ಮಗನ ಅಟ್ಟಹಾಸ – ಹುಡುಗಿಗಾಗಿ ಸ್ನೇಹಿತನ ಎದೆಗೆ ಚೂರಿ

    ಕಾರ್ಪೋರೇಟರ್ ಮಗನ ಅಟ್ಟಹಾಸ – ಹುಡುಗಿಗಾಗಿ ಸ್ನೇಹಿತನ ಎದೆಗೆ ಚೂರಿ

    ದಾವಣಗೆರೆ: ಯುವತಿಗೊಬ್ಬಳಿಗಾಗಿ ಕಾರ್ಪೋರೇಟರ್ ಮಗ ತನ್ನ ಸ್ನೇಹಿತನಿಗೆ ಚಾಕುವಿಂದ ಇರಿದು ಅಟ್ಟಹಾಸ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಕೆಟಿಜೆ ನಗರದ ನಿವಾಸಿಗಳಾದ ಹರೀಶ್ ಹಾಗೂ ರಾಕೇಶ್ ಸ್ನೇಹಿತರಾಗಿದ್ದು, ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಅತೀ ರೇಕಕ್ಕೆ ಹೋಗಿದ್ದು, ಕಾರ್ಪೋರೇಟರ್ ಪುತ್ರ ರಾಕೇಶ್ ಸ್ನೇಹಿತ ಹರೀಶ್ ಗೆ ನಡುಬೀದಿಯಲ್ಲಿ ಚಾಕು ಹಾಕಿದ್ದಾನೆ.

    ಹರೀಶ್ ಎದೆ ಮತ್ತು ತಲೆ ಭಾಗಕ್ಕೂ ಪೆಟ್ಟು ಬಿದ್ದಿದೆ. ತಕ್ಷಣ ಗಾಯಾಳು ಹರೀಶ್ ನನ್ನು ಸಮೀಪದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಾಕೇಶ್ ಮತ್ತು ಹರೀಶ್ ಇಬ್ಬರು ಯುವತಿಯ ಸ್ನೇಹಿತರಾಗಿದ್ದು, ಇತ್ತೀಚೆಗೆ `ಡೇಂಜರ್ಸ್ ಗರ್ಲ್’ ಎಂಬ ವಿಡಿಯೋ ಆಲ್ಬಂ ಸಾಂಗ್ ಶೂಟ್ ಮಾಡಿದ್ದರು.

    ಆಲ್ಬಂ ಶೂಟಿಂಗ್ ನಡೆದ ನಂತರ ರಾಕೇಶ್ ಮತ್ತು ಯುವತಿ ನಡುವೆ ಪ್ರೇಮಾಂಕುರ ಇತ್ತು. ಇತ್ತ ಹರೀಶ್ ಕೂಡ ಯುವತಿ ಜೊತೆ ಕ್ಲೋಸ್ ಆಗಿ ಇದ್ದ ಕಾರಣ ರಾಕೇಶ್ ಅನುಮಾನಗೊಂಡು ಹರೀಶ್ ಜೊತೆ ಜಗಳಕ್ಕಿಳಿದು ಚಾಕು ಹಾಕಿದ್ದಾನೆ.

    ಸದ್ಯಕ್ಕೆ ರಾಕೇಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ. ಕಾರ್ಪೋರೇಟರ್ ಪುತ್ರನ ಅಟ್ಟಹಾಸಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ವಿವಾಹಿತನ ಜೊತೆ ಓಡಿಹೋದ ಯುವತಿ- ಕ್ಯಾಬ್ ಹಿಂಬಾಲಿಸಿ 14 ಬಾರಿ ಇರಿದು ವ್ಯಕ್ತಿಯನ್ನ ಕೊಂದ್ರು

    ವಿವಾಹಿತನ ಜೊತೆ ಓಡಿಹೋದ ಯುವತಿ- ಕ್ಯಾಬ್ ಹಿಂಬಾಲಿಸಿ 14 ಬಾರಿ ಇರಿದು ವ್ಯಕ್ತಿಯನ್ನ ಕೊಂದ್ರು

    – 12 ಬಾರಿ ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರ

    ನವದೆಹಲಿ: 23 ವರ್ಷದ ತನ್ನ ಪ್ರಿಯತಮೆಯ ಜೊತೆಯಿದ್ದ 35 ವರ್ಷದ ವ್ಯಕ್ತಿಯನ್ನು ಯುವತಿಯ ಸಂಬಂಧಿಕರೇ ಇರಿದು ಕೊಂದ ಭೀಕರ ಘಟನೆ ದೆಹಲಿಯ ಮಯೂರ್ ವಿಹಾರ್ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

    ಮೃತ ವ್ಯಕ್ತಿಯನ್ನು ದಿನೇಶ್ ಎಂದು ಗುರುತಿಸಲಾಗಿದೆ. ಯುವತಿಯನ್ನೂ ಕೊಲ್ಲಲು ಯತ್ನಿಸಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಯುವತಿಯನ್ನ ದೆಹಲಿಯ ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಏನಿದು ಘಟನೆ?: ಮೃತ ವ್ಯಕ್ತಿ ಮತ್ತು ಹಲ್ಲೆಗೊಳಗಾದ ಯುವತಿ ಇವರಿಬ್ಬರೂ ಕ್ಯಾಬ್ ಬುಕ್ ಮಾಡಿ ಡಲ್ಲುಪುರ ಕಡೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಇವರಿಬ್ಬರ ಮೇಲೆ ಹಲ್ಲೆ ನಡೆದಿದ್ದು, ದಿನೇಶ್ ಮೇಲೆ ಹರಿತವಾದ ಚೂರಿಯಿಂದ 14 ಬಾರಿ ಇರಿಯಲಾಗಿದೆ. ಯುವತಿಗೂ ಕೂಡ 12 ಬಾರಿ ಇರಿಯಾಗಿದೆ. ಗಂಭೀರವಾಗಿ ಗಾಯಗೊಂಡ ದಿನೇಶ್ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃಪಟ್ಟಿದ್ದಾರೆ.

    ಯುವತಿಯ ಸಂಬಂಧಿ ಮತ್ತು ಸಹೋದರನಿಂದ ಈ ಕೃತ್ಯ ನಡೆದಿದೆ. ಮೃತ ದಿನೇಶ್ ಮತ್ತು ಯುವತಿ ದೂರದ ಸಂಬಂಧಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಸಮಯದಿಂದ ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ ಓಡಿ ಹೋಗಿ ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

    ಮೃತ ದಿನೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಸೀಮಾಪುರಿಯಲ್ಲಿ ಮೂವರು ಮಕ್ಕಳು ಮತ್ತು ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ. ಇತ್ತ ಯುವತಿ ಕೂಡ ದೆಹಲಿಯ ಪಟ್ಪಪರ್ ಗಂಜ್‍ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು.

    ದಿನೇಶ್‍ನನ್ನು ಯುವತಿ ಪ್ರೀತಿಸುತ್ತಿರುವ ವಿಷಯ ಅರಿತ ಯುವತಿಯ ಪೋಷಕರು ಇದಕ್ಕೆ ವಿರೋಧಿಸಿದ್ದರು. ಅಲ್ಲದೆ ಆಕೆಗೆ ಬೇರೆ ಮದುವೆ ಮಾಡಲು ಮುಂದಾಗಿದ್ದರು. ಹೀಗಾಗಿ ಯುವತಿ ಹಾಗೂ ದಿನೇಶ್ ಓಡಿಹೋಗಲು ನಿರ್ಧರಿಸಿದ್ದರು.

    ಈ ನಿರ್ಧಾರಕ್ಕೆ ಬಂದ ಬಳಿಕ ಯುವತಿ ದಿನೆಶ್ ಮಾತಿನಂತೆ ಶುಕ್ರವಾರ ಹಣ ಮತ್ತು ಚಿನ್ನದ ಒಡೆವೆಗಳ ಸಹಿತ ಮನೆಯಿಂದ ಪರಾರಿಯಾಗಿದ್ದರು. ಬಳಿಕ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ಇಬ್ಬರೂ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಇದನ್ನರಿತ ಯುವತಿ ಸಂಬಂಧಿಕರು ಇವರಿಬ್ಬರನ್ನು ಹಿಂಬಾಲಿಸಿದ್ದಾರೆ. ದಿನೇಶ್ ಕ್ಯಾಬ್ ನಿಂದ ಇಳಿಯುತ್ತಿದ್ದಂತೆಯೇ ಯುವತಿ ಸಂಬಂಧಿಕರು ತಮ್ಮ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ದಿನೇಶ್ ಗೆ ಸುಮಾರು 14 ಬಾರಿ ಇರಿದಿದ್ದಾರೆ. ಈ ವೇಳೆ ದಿನೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇತ್ತ ಕ್ಯಾಬ್ ಒಳಗಡೆ ಕುಳಿತಿದ್ದ ಯುವತಿಗೂ 12 ಬಾರಿ ಇರಿದಿದ್ದಾರೆ.

    ಕಿರುಚಾಟ ಕೇಳಿ ಅದೇ ಪ್ರದೇಶದಲ್ಲಿದ್ದ ಹೋಮ್ ಗಾರ್ಡ್‍ವೊಬ್ಬರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನ ಹಿಡಿದಿದ್ದಾರೆ. ಘಟನಾ ಸ್ಥಳದಿಂದಲೇ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

    ಯುವತಿ ಓಡಿಹೋಗಿದ್ದರಿಂದ ಕುಟುಂಬದವರಿಗೆ ಅವಮಾನವಾದ ಕಾರಣ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳಲ್ಲೊಬ್ಬ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.

  • ಜ್ಯೂಸ್ ಕುಡಿದು ಹಣ ಕೊಡದೇ ತಕರಾರು- ಮಾಲೀಕನ ಸಹಾಯಕ್ಕೆ ಬಂದ ನಾಗರಿಕ ರಕ್ಷಣಾ ಸಿಬ್ಬಂದಿಯೇ ಕೊಲೆಯಾದ್ರು!

    ಜ್ಯೂಸ್ ಕುಡಿದು ಹಣ ಕೊಡದೇ ತಕರಾರು- ಮಾಲೀಕನ ಸಹಾಯಕ್ಕೆ ಬಂದ ನಾಗರಿಕ ರಕ್ಷಣಾ ಸಿಬ್ಬಂದಿಯೇ ಕೊಲೆಯಾದ್ರು!

    ನವದೆಹಲಿ: ಮೂವರು ಗೆಳೆಯರು ಸೇರಿ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಭಾನುವಾರ ನಡೆದಿದೆ.

    ಮೃತ ದುರ್ದೈವಿಯನ್ನು ಗೋವಿಂದ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ಆದರ್ಶನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸತೀಶ್(23), ಸಂದೀಪ್(30) ಹಾಗೂ ಸಾಗರ್(30) ಎಂಬ ಮೂವರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಶನಿವಾರ ಮಧ್ಯಾಹ್ನದ ಬಳಿಕ ಇಬ್ಬರು ಜ್ಯೂಸ್ ಕುಡಿಯಲೆಂದು ಇಲ್ಲಿನ ಸಂತೋಷ್ ಎಂಬವರ ಸ್ಟಾಲ್ ಗೆ ಬಂದಿದ್ದರು. ಜ್ಯೂಸ್ ಕುಡಿದ ನಂತರ ಸಂತೋಷ್ ಬಿಲ್ ಪಾವತಿ ಮಾಡುವಂತೆ ತಿಳಿಸಿದ್ರು. ಈ ವೇಳೆ ಜ್ಯೂಸ್ ಕುಡಿದ ಇಬ್ಬರು ಹಣ ಕೊಡಲು ನಿರಾಕರಿಸಿ ಸಂತೋಷ್ ರನ್ನು ನಿಂದಿಸಿದ್ದಲ್ಲದೆ ಜಗಳವಾಡಿದ್ದರು. ಅಲ್ಲದೇ ಅದೇ ದಿನ ಸಂಜೆ ಸಂತೋಷ್‍ಗೆ ಪಾಠ ಕಲಿಸಬೇಕೆಂದು ಸಾಗರ್ ಎಂಬ ಮತ್ತೊಬ್ಬ ಗೆಳೆಯನನ್ನು ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಸಂತೋಷ್ ಗೆಳೆಯರಾದ ಮಹೇಶ್ ಹಾಗೂ ಸುಮಿತ್ ಎಂಬವರು ಸ್ಥಳದಲ್ಲಿದ್ದರು. ಅವರು ಕೂಡ ಸಹಾಯಕ್ಕೆಂದು ನಾಗರಿಕ ರಕ್ಷಣಾ ಸಿಬ್ಬಂದಿಯಾಗಿದ್ದ ಗೋವಿಂದ್ ಅವರನ್ನ ಘಟನಾ ಸ್ಥಳಕ್ಕೆ ಕರೆದಿದ್ದರು. ಈ ಸಂದರ್ಭದಲ್ಲಿ ಗಲಾಟೆ ತಾರಕಕ್ಕೇರಿ ಮೂವರು ಆರೋಪಿಗಳು ಮಹೇಶ್ ಹಾಗೂ ಗೋವಿಂದ್‍ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ್ ಅವರನ್ನು ಬಡಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಗೋವಿಂದ್ ಮೃತಪಟ್ಟಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯ ಮಾಹಿತಿ ಪಡೆದ ಪೊಲಿಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದರು. ಗೋವಿಂದ್ ಅವರ ಎದೆಗೆ ಸಾಕಷ್ಟು ಬಾರಿ ಚಾಕುವಿನಿಂದ ಇರಿದ ಪರಿಣಾಮ ಗಂಭೀರ ಗಾಯವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ.

  • ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಕ್ರಿಯೆಗೂ ಮುನ್ನ ದಕ್ಷಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತವಾಗಿರೋ ಘಟನೆ ನಡೆದಿದೆ.

    ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ರಿಯಾಜ್(26) ಎಂದು ಗುರುತಿಸಲಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಇರ್ವತ್ತೂರು ಪದವು ನಿವಾಸಿ. ಶರತ್ ಮಡಿವಾಳ ಪಾರ್ಥಿವ ಶರೀರ ಹೋದ ಬಳಿಕ ಬಂಟ್ವಾಳದ ಬಿ.ಸಿ ರೋಡಿನ ಕೈಕಂಬದ ಬಳಿ ಈ ಘಟನೆ ನಡೆದಿದೆ.

    ಶರತ್ ಅಂತ್ಯಕ್ರಿಯೆಗೆಂದು ಮಂಗಳೂರಿನಿಂದ ಬಂಟ್ವಾಳದಲ್ಲರೋ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಲ್ಲು ತೂರಾಟ, ಲಾಠಿಪ್ರಹಾರ ನಡೆದಿದ್ದು, ಇದೇ ವೇಳೆ 7 ರಿಂದ 8 ಮಂದಿ ದುಷ್ಕರ್ಮಿಗಳು ರಿಯಾಜ್ ಕುತ್ತಿಗೆ ಹಾಗೂ ಹೆಗಲ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

    ಸದ್ಯ ರಿಯಾಜ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ರಕ್ತದ ಮಡುವಲ್ಲಿ ಬಿದ್ದಿದ್ದ ಶರತ್‍ನನ್ನ ಆಸ್ಪತ್ರೆಗೆ ಸೇರಿಸಿದ್ದು ಮುಸ್ಲಿಂ ಯುವಕ

    ಇದನ್ನೂ ಓದಿ: ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    https://www.youtube.com/watch?v=o40hIeKFh8E

    https://www.youtube.com/watch?v=bHr6olvlgmU

  • ಕೋಲಾರದಲ್ಲಿ ಗಾಂಜಾ ಮತ್ತಿನಲ್ಲಿ 6 ಜನರಿಗೆ ಚಾಕು ಇರಿತ- ಆರೋಪಿ ಪೊಲೀಸ್ ವಶ

    ಕೋಲಾರದಲ್ಲಿ ಗಾಂಜಾ ಮತ್ತಿನಲ್ಲಿ 6 ಜನರಿಗೆ ಚಾಕು ಇರಿತ- ಆರೋಪಿ ಪೊಲೀಸ್ ವಶ

    ಕೋಲಾರ: ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊರ್ವ 6 ಜನರಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಕೋಲಾರದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಕೋಲಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸದ್ಯ ಆರೋಪಿ 22 ವರ್ಷದ ಮುಕ್ತಾರ್ ಪೊಲೀಸರ ವಶದಲ್ಲಿದ್ದಾನೆ.

    ನಡೆದಿದ್ದೇನು?: ಗಾಂಜಾ ಮತ್ತಿನಲ್ಲಿ ಯುವಕ ಮುಕ್ತಾರ್ ಕೋಲಾರ ಹೊರವಲಯದ ಟಮಕ ನಿವಾಸಿ 37 ವರ್ಷದ ಶ್ರೀನಿವಾಸ್, ಕೀಲುಕೋಟೆ ನಿವಾಸಿ 46 ವರ್ಷದ ವೆಂಕಟೇಶಪ್ಪ ಹಾಗೂ ಇನ್ನಿತರರ ಮುಖ, ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಆರೋಪಿ ಮುಕ್ತಾರ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆಯಲ್ಲಿ ಗಾಯಗೊಂಡವರಲ್ಲಿ ಇಬ್ಬರು ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ, ಉಳಿದಂತೆ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ದಿವ್ಯಾಗೋಪಿನಾಥ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆ ಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಬೆಂಗಳೂರು: ಅತ್ತೆಯ ಎದುರೇ ಪತ್ನಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಪತಿರಾಯನೊಬ್ಬ ಕೊಲೆಗೈದ ಹೃದಯವಿದ್ರಾವಕ ಘಟನೆಯೊಂದು ಇಂದು ಮಧ್ಯಾಹ್ನ ನಡೆದಿದೆ.

    ಬೆಂಗಳೂರಿನ ಬೇಂದ್ರೆ ನಗರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷ ಹೇಮ ಕೊಲೆಯಾದ ದುರ್ದೈವಿ ಮಹಿಳೆ.

    40 ವರ್ಷದ ನಾಗರಾಜ ಕೊಲೆಗೈದ ಪತಿರಾಯನಾಗಿದ್ದು, ಈತ ಮೂಲತಃ ತಮಿಳುನಾಡು ಮೂಲದವನು ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಬೇಂದ್ರೆಗೆ ಬಂದು ನೆಲೆಸಿತ್ತು. ಪತ್ನಿಯ ಶೀಲಶಂಕಿಸಿ ಈ ಹತ್ಯೆ ನಡೆದಿದೆ ಅಂತಾ ಹೇಳಲಾಗುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯ ಬಳಿಕ ನಾಗರಾಜ್ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಆದ್ರೆ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

    ಅತ್ತೆಯ ಎದುರೇ ನಾಗರಾಜ ಪತ್ನಿ ಹೇಮಾರಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದಿದ್ದರಿಂದ ಘಟನೆಯನ್ನು ಕಣ್ಣಾರೆ ನೋಡಿದ ಹೇಮಾ ತಾಯಿ ಇನ್ನೂ ಶಾಕ್ ನಿಂದ ಹೊರಬಂದಿಲ್ಲ.

    ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=3Z21G8t8WEg