Tag: stab

  • ಚಾನೆಲ್ ಚೇಂಜ್ ಮಾಡಿ ಎಂದಿದ್ದಕ್ಕೆ ಪತ್ನಿಗೆ ಚಾಕು ಇರಿತ

    ಚಾನೆಲ್ ಚೇಂಜ್ ಮಾಡಿ ಎಂದಿದ್ದಕ್ಕೆ ಪತ್ನಿಗೆ ಚಾಕು ಇರಿತ

    ಚೆನ್ನೈ: ಚಾನೆಲ್ ಚೇಂಜ್ ಮಾಡಿ ಎಂದು ಹೇಳಿದಕ್ಕೆ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ತಮಿಳುನಾಡಿನ ತ್ರಿಪ್ಲಿಕೇನ್‍ನ ಅಯೋತಿನಗರದಲ್ಲಿ ನಡೆದಿದೆ.

    ವೀರನ್ ಪತ್ನಿಗೆ ಚಾಕು ಇರಿದ ಪತಿ. ವೀರನ್ ಹಾಗೂ ಪತ್ನಿ ಉಷಾ(47) ಇಬ್ಬರು ಜೊತೆಯಲ್ಲಿ ಟಿವಿ ನೋಡುತ್ತಿದ್ದರು. ಈ ವೇಳೆ ಉಷಾ ತನ್ನ ಬೇರೆ ಚಾನೆಲ್‍ನಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಿಸಬೇಕು ಚೇಂಜ್ ಮಾಡಿ ಎಂದು ಪತಿಗೆ ಹೇಳಿದ್ದಾಳೆ. ಆದರೆ ಪತಿ ಇದಕ್ಕೆ ನಿರಾಕರಿಸಿದ್ದಾನೆ.

    ಇದೇ ವಿಷಯಕ್ಕಾಗಿ ವೀರನ್ ಹಾಗೂ ಉಷಾ ನಡುವೆ ಜಗಳ ಶುರುವಾಗಿದೆ. ಅಲ್ಲದೇ ವೀರನ್ ತನ್ನ ಪತ್ನಿ ಉಷಾಗೆ ನಿಂದಿಸಿ ಆಕೆಯನ್ನು ನೆಲಕ್ಕೆ ತಳ್ಳಿದ್ದಾನೆ. ಈ ವೇಳೆ ಉಷಾ ಮೊದಲು ಟೇಬಲ್ ಮೇಲೆ ಬಿದ್ದು ಬಳಿಕ ಕೆಳಗೆ ಬಿದ್ದಿದ್ದಾಳೆ. ಟೇಬಲ್ ಮೇಲೆ ಬಿದ್ದಾಗ ಉಷಾಗೆ ಗಂಭೀರ ಗಾಯಗಳಾಗಿದೆ.

    ಇದಾದ ಬಳಿಕ ವೀರನ್ ಅಡುಗೆ ಮನೆಗೆ ಹೋಗಿ ಚಾಕು ತಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಆದರೂ ಉಷಾ ಸುಮ್ಮನಿರದೇ ವೀರನ್ ಜೊತೆ ವಾದ ಮಾಡಿದ್ದಾಳೆ. ಇದರಿಂದ ಕೋಪಗೊಂಡ ವೀರನ್ ಪತ್ನಿಗೆ ಹಲವು ಬಾರಿ ಚಾಕು ಇರಿದಿದ್ದಾನೆ.

    ಸದ್ಯ ಉಷಾಳ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೀರನ್‍ನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ ಕೊಲೆ ಪ್ರಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೇಳಿದ ಸಾಂಗ್ ಹಾಕಿಲ್ಲವೆಂದು ಚಾಕು ಇರಿದ ದುಷ್ಕರ್ಮಿಗಳು..!

    ಕೇಳಿದ ಸಾಂಗ್ ಹಾಕಿಲ್ಲವೆಂದು ಚಾಕು ಇರಿದ ದುಷ್ಕರ್ಮಿಗಳು..!

    ಬೆಂಗಳೂರು: ಕೇಳಿದ ಸಾಂಗ್ ಹಾಕಿಲ್ಲ ಎಂದು ದುಷ್ಕರ್ಮಿಗಳು ಚಾಕು ಇರಿದ ಘಟನೆ ಮಂಗಳವಾರ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.

    ವಿಘ್ನೇಶ್ ವಿಗ್ಗಿ, ಅಜಯ್ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಮ್ಯೂಸಿಷಿಯನ್ ಗಂಗಾಧರ್(26)ಗೆ ಚಾಕು ಇರಿದಿದ್ದಾರೆ.

    ಗಣೇಶ ಪೂಜೆಯ ಮೆರವಣಿಗೆ ಸಾಗುತ್ತಿದ್ದಾಗ ತಮಗೆ ಬೇಕಾದ ಸಾಂಗ್ ಹಾಕುವಂತೆ ಆರೋಪಿಗಳು ಕೇಳಿದ್ದರು. ಈ ವೇಳೆ ಗಂಗಾಧರ್ ಆ ಹಾಡು ಇಲ್ಲ ಎಂದು ಹೇಳಿದ್ದಾರೆ. ಬಳಿಕ ಈ ವಿಷಯಕ್ಕಾಗಿ ಇಬ್ಬರು ಆರೋಪಿಗಳು ವಾಗ್ವಾದಕ್ಕೆ ಇಳಿದು ಗಂಗಾಧರ್‍ನನ್ನು ಚಾಕುವಿನಿಂದ ಇರಿದಿದ್ದಾರೆ.

    ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗರೇಟ್ ಸೇದ್ಬೇಡ ಅಂದಿದ್ದಕ್ಕೆ ಪತ್ನಿಗೆ ಚಾಕುವಿನಿಂದ್ಲೇ ಇರಿದ..!

    ಸಿಗರೇಟ್ ಸೇದ್ಬೇಡ ಅಂದಿದ್ದಕ್ಕೆ ಪತ್ನಿಗೆ ಚಾಕುವಿನಿಂದ್ಲೇ ಇರಿದ..!

    ಬೆಂಗಳೂರು: ಸಿಗರೇಟ್ ಸೇದಬೇಡ ಎಂದು ಪತ್ನಿ ಹೇಳಿದ್ದಕ್ಕೆ ಪತಿ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

    ಗಾಯತ್ರಿ ಚಾಕು ಇರಿತಕ್ಕೊಳಗಾದ ಮಹಿಳೆ. ನಗರದ ಬಾಣಸವಾಡಿ ನಿವಾಸಿಯಾಗಿರುವ ಗಾಯತ್ರಿಗೆ ಎಲ್ಲ ಮಹಿಳೆಯರಿಗೆ ಇರುವಂತೆ, ತನ್ನ ಗಂಡನಿಗೆ ಯಾವುದೇ ದುಶ್ಚಟಗಳಿಬಾರದು. ಒಳ್ಳೆಯ ಗುಣವಿರುವ ಆರೋಗ್ಯವಂತ ಗಂಡ ಸಿಗಬೇಕು. ಅವನನ್ನು ತುಂಬಾ ಚೆನ್ನಾಗಿ ನೋಡ್ಕೋಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಗಾಯತ್ರಿಗೆ ಎಲ್ಲ ಚಟಗಳಿರುವ ಧರ್ಮ ಎನ್ನುವ ಪಾಪಿ ಗಂಡ ಸಿಕ್ಕಿದ್ದಾನೆ.

    ಗಾಯತ್ರಿ ಪತಿ ಧರ್ಮನಿಗೆ ಮಾಡುವುದಕ್ಕೆ ಯಾವುದೇ ಕೆಲಸ ಇಲ್ಲ. ದಿನ ಕಂಠಪೂರ್ತಿ ಕುಡಿಬೇಕು. ಸದಾ ಸಿಗರೇಟು ಘಾಟಲ್ಲೇ ತೇಲಾಡುತ್ತಿದ್ದನು. ಇಷ್ಟೆಲ್ಲ ಆದರೂ ಕೂಡ ಪತ್ನಿ ಗಾಯತ್ರಿ ತಾನೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಸೇರಿಕೊಂಡು ಪತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಧರ್ಮ ಮಾತ್ರ ದಿನ ಕುಡಿದು ಮನೆಗೆ ಬಂದು ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದನು.

    ಪತಿ ಧರ್ಮನ ಈ ದುಶ್ಚಟಗಳ ಪರಿಣಾಮ ಕ್ಯಾನ್ಸರ್ ಕಾಯಿಲೆ ಅಟ್ಯಾಕ್ ಆಗಿತ್ತು. ಇನ್ನು ಮೇಲೆ ಇವೆಲ್ಲಾ ಬಿಟ್ಟು ಬದುಕಿ ಎಂದು ಪತ್ನಿ ಬುದ್ಧಿ ಹೇಳಿ, ಮೊದಲಿನಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

    ಫೆ. 18ರ ಸಂಜೆ ಧರ್ಮ ಮನೆ ಮುಂದೆ ಕೈಯಲ್ಲಿ ಸಿಗರೇಟ್ ಪ್ಯಾಕ್ ಹಿಡಿದು ಸಿಗರೇಟ್ ಸೇದುತ್ತಿದ್ದನು. ಇದನ್ನು ನೋಡಿದ ಪತ್ನಿ ಗಾಯತ್ರಿ ಮತ್ತೆ ಸಿಗರೇಟು ಶುರು ಮಾಡಿದ್ಯಾ ಅದನ್ನು ಬಿಸಾಕು ಎಂದು ಕೈಯಿಂದ ಸಿಗರೇಟು ಕಿತ್ತು ಎಸೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಧರ್ಮ ಅಲ್ಲಿಯೇ ಇದ್ದ ಚಾಕುವಿನಿಂದ ಪತ್ನಿಯ ಎಡಗಣ್ಣಿಗೆ ಇರಿದ್ದಾನೆ. ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಗಾಯತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್‍ಜಿಗೆ ಅಡಿಕ್ಟ್ ಆಗಿ ಸಹೋದರಿಯ ಬಾವಿ ಪತಿಗೆ ಚಾಕು ಇರಿದ

    ಪಬ್‍ಜಿಗೆ ಅಡಿಕ್ಟ್ ಆಗಿ ಸಹೋದರಿಯ ಬಾವಿ ಪತಿಗೆ ಚಾಕು ಇರಿದ

    ಮುಂಬೈ: ಪಬ್‍ಜಿ ಆಟಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಬಾವಿ ಪತಿಯನ್ನೇ ಚಾಕು ಇರಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.

    ರಾಜ್ನೀಶ್ ರಾಜ್ಬರ್(27) ತನ್ನ ಬಾವ ಓಂ ಚಂದ್ರಕಿಶೋರ್ ಭಾವದ್ನಕರ್(32)ರನ್ನು ಚಾಕು ಇರಿದಿದ್ದಾನೆ. ಚಂದ್ರಕಿಶೋರ್ ಅಂಬೇನಾತ್ ನಿವಾಸಿಯಾಗಿದ್ದು, ಇತ್ತೀಚೆಗೆ ಕಲ್ಯಾಣನಗರದ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಫೆ. 6ರ ರಾತ್ರಿ 9.30ಕ್ಕೆ ಚಂದ್ರಕಿಶೋರ್ ತನ್ನ ಬಾವಿ ಪತ್ನಿಯನ್ನು ಭೇಟಿ ಮಾಡಲು ಕಲ್ಯಾಣ್‍ಗೆ ಬಂದಿದ್ದರು. ಬಾವಿ ಪತ್ನಿಯ ಮನೆಯಲ್ಲಿ ಊಟ ಮಾಡಿದ ಬಳಿಕ ಆತ ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಫೆ. 7ರ ಬೆಳಗಿನ ಜಾವ 4 ಗಂಟೆಗೆ ರಾಜ್ನೀಶ್ ಮನೆಗೆ ಹಿಂತಿರುಗಿದ್ದನು. ರಾಜ್ನೀಶ್ ಯಾವಾಗಲೂ ತನ್ನ ಮೊಬೈಲಿನಲ್ಲಿ ಪಬ್‍ಜಿ ಆನ್‍ಲೈನ್ ಗೇಮ್ ಆಡುತ್ತಿದ್ದನು. ಆ ರಾತ್ರಿ ಕೂಡ ಪಬ್‍ಜಿ ಆಡುವಾಗ ಆತನ ಮೊಬೈಲಿನ ಚಾರ್ಜ್ ಕಡಿಮೆ ಆಗಿದೆ. ಗೇಮಿನಲ್ಲಿ ಒಂದು ಲೆವಿಲ್‍ಯಿಂದ ಹಿಂದೆ ಇರಬಾರದು ಎಂದು ರಾಜ್ನೀಶ್ ಮೊಬೈಲ್ ಚಾರ್ಜ್‍ರ್ ಗಾಗಿ ಹುಡುಕಾಡಿದ್ದಾನೆ. ಬಳಿಕ ಆತನ ಮೊಬೈಲ್ ಚಾರ್ಜರ್ ನ ವೈರ್ ಕೆಟ್ಟು ಹೋಗಿದ್ದು ನೋಡಿ ಆತ ತನ್ನ ಮನೆಯ ನಾಯಿಯನ್ನು ಕಾಲಿನಿಂದ ಒದ್ದಿದ್ದಾನೆ.

    ಈ ವೇಳೆ ಕೋಪಗೊಂಡ ರಾಜ್ನೀಶ್ ಅಡುಗೆ ಮನೆಗೆ ಹೋಗಿ ಅಲ್ಲಿಂದ ಚಾಕು ತೆಗೆದುಕೊಂಡು ಬಂದು ತನ್ನ ಸಹೋದರಿಯ ಲ್ಯಾಪ್‍ಟಾಪ್ ಚಾರ್ಜರ್ ನನ್ನು ಕಟ್ ಮಾಡಿದ್ದಾನೆ. ಇದನ್ನು ನೋಡಿದ ಚಂದ್ರಕಿಶೋರ್, ನೀನು ಲ್ಯಾಪ್‍ಟಾಪ್ ಚಾರ್ಜರ್ ಏಕೆ ಕಟ್ ಮಾಡಿದೆ? ನಾನು ನಿನಗೆ ಹೊಸ ಚಾರ್ಜರ್ ತಂದುಕೊಡುತ್ತಿದೆ. ನಿನಗಾಗಿ ನಿನ್ನ ಪೋಷಕರು ಮೊಬೈಲ್ ಅಂಗಡಿಯನ್ನು ತೆರೆದಿದ್ದಾರೆ. ನೀನು ರಾತ್ರಿ ಹೊತ್ತು ಯಾವಾಗಲೂ ಮೊಬೈಲಿನಲ್ಲಿ ಗೇಮ್ ಆಡುತ್ತೀಯಾ ಹಾಗೂ ಬೆಳಗ್ಗೆ ಹೊತ್ತು ನಿದ್ದೆ ಮಾಡುತ್ತೀಯಾ. ನೀನು ಈ ರೀತಿ ಮಾಡಿದರೆ ನಿನ್ನ ಬ್ಯುಸಿನೆಸ್ ಏನ್ ಆಗಬೇಕು ಎಂದು ಪ್ರಶ್ನಿಸಿದ್ದಾರೆ.

    ಇದರಿಂದ ಮತ್ತೆ ಕೋಪಗೊಂಡ ರಾಜ್ನೀಶ್ ತನ್ನ ಸಹೋದರಿಯ ಬಾವಿ ಪತಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಚಂದ್ರಕಿಶೋರ್ ಚಿಕಿತ್ಸೆಗಾಗಿ ಉಲ್ಲಾಸ್‍ನಗರದ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲ್ವಾದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ಬಗ್ಗೆ ಚಂದ್ರಕಿಶೋರ್ ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಗೆ ಟೈಂ ಆಯ್ತು ಡ್ಯಾನ್ಸ್ ಬೇಡ ಎಂದಿದಕ್ಕೆ ಚಾಕು ಇರಿತ

    ಮದ್ವೆಗೆ ಟೈಂ ಆಯ್ತು ಡ್ಯಾನ್ಸ್ ಬೇಡ ಎಂದಿದಕ್ಕೆ ಚಾಕು ಇರಿತ

    ಅಂಬಾಲಾ: ಮದುವೆಯ ಸಂದರ್ಭದಲ್ಲಿ ಡ್ಯಾನ್ಸ್ ಬೇಡ ಎಂದಿದಕ್ಕೆ ವರನ ಕಡೆಯವರು ವಧುವಿನ ಸಂಬಂಧಿಕನ ಮೇಲೆ ಚಾಕು ಇರಿದ ಘಟನೆ ಶುಕ್ರವಾರ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ವಿಕಾಸ್ ಕೊಲೆಯಾದ ವ್ಯಕ್ತಿ. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವರನನ್ನು ಮದುವೆಗೆ ಕರೆದುಕೊಂಡು ಬರುವಾಗ ರಸ್ತೆ ಉದ್ದಕ್ಕೂ ನೃತ್ಯ ಮಾಡುವ ಸಂಪ್ರದಾಯವಿದೆ. ಹೀಗೆ ಗುರುವಾರ ರಾತ್ರಿ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಡ್ಯಾನ್ಸ್ ಮಾಡುತ್ತಲೇ ಇದ್ದರು.

    ಈ ವೇಳೆ ಮದುವೆಗೆ ತಡವಾಗುತ್ತಿದೆ. ಹೀಗಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದು ವಧುವಿನ ಕಡೆಯವರಾದ ವಿಕಾಸ್ ವರನ ಸಂಬಂಧಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿಕಾಸ್ ಮನವಿಗೆ ಸ್ಪಂದಿಸದೇ ವರನ ಕಡೆಯವರು ಡ್ಯಾನ್ಸ್ ಮಾಡುತ್ತಿದ್ದರು.

    ವಿಕಾಸ್ ಡ್ಯಾನ್ಸ್ ಬೇಡವೆಂದು ಹೇಳಿದಕ್ಕೆ ವರ ಹಾಗೂ ವಧುವಿನ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಕ ಸಂಜಯ್, ವಿಕಾಸ್‍ಗೆ ಚಾಕುಯಿಂದ ಇರಿದಿದ್ದಾನೆ. ಪರಿಣಾಮ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಆರೋಪಿ ಸಂಜಯ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ ಮಾಡದ್ದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿತ

    ವಿಶ್ ಮಾಡದ್ದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿತ

    ಬೆಂಗಳೂರು: ಹೊಸ ವರ್ಷಕ್ಕೆ ಶುಭಾಶಯ ಹೇಳದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿದ ಘಟನೆ ತಡರಾತ್ರಿ 12 ಗಂಟೆಗೆ ಬೆಂಗಳೂರಿನ ಕುರುಬರಹಳ್ಳಿಯ ಕಮಲಾನಗರದ ಶೆಟ್ಟಿ ಗಣಪತಿ ವಾರ್ಡ್ ನಲ್ಲಿ ನಡೆದಿದೆ.

    ಪ್ರವೀಣ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಮಧ್ಯರಾತ್ರಿ ಕಿಡಿಗೇಡಿಗಳು ಕುಡಿದು ಬೈಕಿನಲ್ಲಿ ಚಾಕು ಹಿಡಿದುಕೊಂಡು ತೂರಾಡಿಕೊಂಡು ಬಂದಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಪ್ರವೀಣ್‍ಗೆ ನ್ಯೂ ಇಯರ್ ವಿಶ್ ಮಾಡಿದ್ದಾರೆ. ಬಳಿಕ ನಮಗೆ ವಿಶ್ ಮಾಡು ಎಂದು ಅವಾಜ್ ಹಾಕಿದ್ದಾರೆ.

    ಚಾಕು ಕಂಡು ಗಾಬರಿಯಾದ ಪ್ರವೀಣ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಮಗೆ ವಿಶ್ ಮಾಡುವುದಿಲ್ಲವಾ ನೀನು ಎಂದು ಅಡ್ಡಹಾಕಿ ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಪ್ರವೀಣ್‍ಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗಾಯಗೊಂಡ ಪ್ರವೀಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಬಳ್ಳಾರಿ: ಪಕ್ಕದ ಮನೆ ಉಪನ್ಯಾಸಕಿ ತನ್ನ ಅಕ್ರಮ ಸಂಬಂಧವನ್ನು ಸ್ನೇಹಿತನ ಬಳಿ ಬಯಲು ಮಾಡಿದ್ದಕ್ಕೆ ಸಿಟ್ಟಾಗಿ ಆಕೆಗೆ ಚಾಕು ಇರಿದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಶಾಂತ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸ್ನೇಹಿತ ಮನೆಯಲ್ಲಿ ಇಲ್ಲದ ವೇಳೆ ಮನೆಗೆಲ್ಲಾ ಹೋಗಿ ಬರುತ್ತಿದ್ದ. ಈ ವಿಚಾರವನ್ನು ಪಕ್ಕದ ಮನೆಯಲ್ಲಿದ್ದ ಉಪನ್ಯಾಸಕಿ ಸುಧಾರಾಣಿಯೇ ತನ್ನ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ಚಾಡಿ ಹೇಳಿದ್ದಾಳೆ ಎಂದು ರೊಚ್ಚಿಗೆದ್ದು ಉಪನ್ಯಾಸಕಿಗೆ ಚಾಕು ಇರಿದಿದ್ದಾನೆ.

    ಗುಡೇಕೋಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಧಾರಾಣಿ ಮಂಗಳವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಪ್ರಶಾಂತ್ ದಾಳಿ ಮಾಡಿ ಚಾಕು ಇರಿದಿದ್ದಾನೆ. ಘಟನೆಯನ್ನು ನೋಡಿದ ಸ್ಥಳೀಯರು ಪ್ರಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಪನ್ಯಾಸಕಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಗುಡೇಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಸಾಂದರ್ಭಿಕ ಚಿತ್ರ

    ನವದೆಹಲಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.

    ವಿಜೇಂದರ್ ರಾಣಾ ಮೃತ ದುರ್ದೈವಿ ವ್ಯಕ್ತಿ. ರಾಣಾ ಅವರ ಟೆಂಪೋ ನಾಯಿಮರಿಗೆ ತಾಗಿತ್ತೆಂದು ಸಿಟ್ಟುಗೊಂಡ ನಾಯಿಯ ಮಾಲೀಕ ಈ ಕೃತ್ಯ ಎಸಗಿದ್ದಾನೆ.

    ಏನಿದು ಘಟನೆ?:
    ರಾಣಾ ಅವರ ಟಾಟಾ ಏಸ್ ಟೆಂಪೋ ಆಕಸ್ಮತ್ತಾಗಿ ನಾಯಿಗೆ ಟಚ್ ಆಗಿದೆ. ಈ ವೇಳೆ ನಾಯಿಯ ಮಾಲೀಕ ತಗಾದೆ ತೆಗೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಸ್ಥಳೀಯರನ್ನು ಸ್ಥಳದಲ್ಲಿ ಜಮಾಯಿಸುವಂತೆ ಮಾಡಿದ್ದಾನೆ. ಈ ವೇಳೆ ರಾಣಾ ಸಹೋದರ ಕೂಡ ಸ್ಥಳಕ್ಕೆ ದೌಡಾಯಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಅಂದರೆ ಮಧ್ಯರಾತ್ರಿ 12.50ರ ಸುಮಾರಿಗೆ ರಾಣಾ ಸಹೋದರಿ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಮಾತಿನ ಚಕಮಕಿ ಮುಂದುವರೆದು ತಾರಕಕ್ಕೇರಿ ಟೆಂಪೋ ಚಾಲಕ ವಿಜೇಂದರ್ ರಾಣಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಮಟ ರೂಪ್ ರಾಣಿ ಮಾಗ್ಗೋ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಇವರ ಸಹೋದರ ರಾಜೇಶ್ ಅವರಿಗೂ ಚಾಕು ಇರಿತವಾಗಿದ್ದು, ಗಾಯಗಳಾಗಿವೆ. ಸದ್ಯ ರಾಜೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಮೂವರು ಆರೋಪಿಗಳಾದ ಅಂಕಿತ್, ಪರಸ್ ಹಾಗೂ ಅವರ ಮನೆ ಮಾಲೀಕ ದೇವ್ ಚೋಪ್ರಾ ಇದೀಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಕಲಬುರಗಿ: ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಮನೋಜ್ ಮೃತ ದುರ್ದೈವಿ. ಇವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೋಜ್ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಈಕೆ ಎಂ.ಎ ಎಕನಾಮಿಕ್ಸ್ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗಾಗಿ ಆಕೆಯನ್ನು ಭೇಟಿಯಾಗಲು ಬಂದಿದ್ದನು. ಶನಿವಾರ 7.30ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಮನೋಜ್ ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಮನೋಜ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

    ಘಟನಾ ಸ್ಥಳಕ್ಕೆ ಎಸ್‍ಪಿ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅತ್ತಿಗೆ ಸೋತಿದ್ದಕ್ಕೆ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಕೈ ನಾಯಕನಿಂದ ಚಾಕು ಇರಿತ

    ಅತ್ತಿಗೆ ಸೋತಿದ್ದಕ್ಕೆ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಕೈ ನಾಯಕನಿಂದ ಚಾಕು ಇರಿತ

    ಕೊಪ್ಪಳ: ಚುನಾವಣೆಯಲ್ಲಿ ಅತ್ತಿಗೆ ಸೋತ ಹಿನ್ನೆಲೆಯಲ್ಲಿ ಮೈದುನ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಚಾಕು ಇರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ನಗರದ 19ನೇ ವಾರ್ಡ್ ನಲ್ಲಿ ಘಟನೆ ನಡೆದಿದ್ದು, ಜೆಡಿಎಸ್ ಕಾರ್ಯಕರ್ತನ ತಾಯಿ ರೆಹಮತ್ ಬಿಗೆ ಚಾಕು ಹಾಕಿ ಕಾಂಗ್ರೆಸ್ ಮುಖಂಡ ಸೈಯ್ಯದ್ ನಿಜಾಮುದ್ದೀನ್ ಪರಾರಿಯಾಗಿದ್ದಾನೆ.

    ನಗರಸಭೆ ವ್ಯಾಪ್ತಿಯ 19ನೇ ವಾರ್ಡಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಆಯಿಷಾ ರುಬೀನಾ ಗೆಲವು ಸಾಧಿಸಿದರು. ಈ ಹಿನ್ನೆಲೆಯಲ್ಲಿ ಇದರಿಂದ ಆಕ್ರೋಶಗೊಂಡ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾದ ಸೈಯ್ಯದ್ ಸಾಜಿಯಾ ಹುಸೇನಿ ಮೈದುನನಾದ ಸೈಯ್ಯದ್ ನಿಜಾಮುದ್ದೀನ್ ಹುಸೇನಿ ಜೆಡಿಎಸ್ ಬೆಂಬಲಿಸದ ಮನೆಯವರಿಗೆ ಚಾಕು ಹಾಕಿದ್ದಾನೆ.

    ಅತ್ತಿಗೆ ಸೋಲುತ್ತಿದ್ದಂತೆ ವಾರ್ಡ್‍ಗೆ ಬಂದ ಸೈಯ್ಯದ್ ಹಾಗೂ ಆತನ ಸಹಚರರು ರೆಹಮತ್ ಮನೆಯಲ್ಲಿ ಹುಡಕಾಟ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮನೆಯಲ್ಲಿ ಯಾರೂ ಗಂಡಸರಿಲ್ಲದ ಕಾರಣ ರೆಹಮತ್.ಬಿ ಅವರಿಗೆ ಚಾಕು ಇರಿದು ಪರಾರಿಯಾಗಿದ್ದಾನೆ

    ಸೈಯ್ಯದ್ ಜೊತೆ ಬಂದಿದ್ದ ಹಾಜಿ ಹುಸೇನಿಯನ್ನು ಕೊಪ್ಪಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ರಹಮತ್.ಬಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆ ಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯವಾಗಿದ್ದು, ಯಾವುದೇ ಪ್ರಾಣಾಪಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಾಕು ಹಾಕಿ ಪರಾರಿಯಾದ ಸೈಯ್ಯದ್ ನಿಜಾಮುದ್ದೀನ್ ಹುಸೇನಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv