Tag: stab

  • Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

    Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

    ಬೆಂಗಳೂರು: ಮಾಜಿ ಬಾಯ್‌ಫ್ರೆಂಡ್ (Ex Boyfriend) ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ (Stab) ಘಟನೆ ಬೆಂಗಳೂರಿನ (Bengaluru) ವೈಯಾಲಿ ಕಾವಲ್ (Vyalikaval) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಂದನ್, ಹಳೆ ಬಾಯ್ ಫ್ರೆಂಡ್‌ನಿಂದ ಚಾಕು ಇರಿತಕ್ಕೆ ಒಳಗಾದ ಯುವಕ. ಯತೀಶ್ ಎಂಬಾತ ಚಂದನ್‌ಗೆ ಚಾಕು ಇರಿದಿದ್ದಾನೆ. ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಚಂದನ್ ಅದೇ ಏರಿಯಾದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಯುವತಿ ಕೂಡ ಚಂದನ್‌ನನ್ನು ಪ್ರೀತಿಸುತ್ತಿದ್ದಳು. ಈ ಹಿಂದೆ ಯುವತಿ ಯತೀಶ್ ಎಂಬಾತನ್ನ ಪ್ರೀತಿಸುತ್ತಿದ್ದಳಂತೆ. ಯುವತಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದ ವಿಚಾರ ಯತೀಶ್‌ಗೆ ತಿಳಿದು ಚಂದನ್‌ನನ್ನು ಮಾತುಕತೆಗೆ ಅಂತಾ ಕರೆಸಿ ಯತೀಶ್ ಅಂಡ್ ಗ್ಯಾಂಗ್ ಚಾಕು ಇರಿದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ಹಣ – ಹೇಳಿಕೆ ಖಂಡಿಸಿ ಯತ್ನಾಳ್ ಕಾರ್‌ಗೆ ಘೇರಾವ್ ಹಾಕಲು ಯತ್ನ

    ಘಟನೆ ಬಳಿಕ ರಕ್ತ ಸಿಕ್ತ ಮೈಯಲ್ಲೇ ನಿತ್ರಾಣನಾಗಿದ್ದ ಚಂದನ್, ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ತೆರಳಿದ ಚಂದನ್ ಸ್ನೇಹಿತರು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುನಲ್ಲಿ ಚಂದನ್ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ. ಘಟನೆ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

  • ಕಳ್ಳತನ ಮಾಡಲು ಬಾರದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

    ಕಳ್ಳತನ ಮಾಡಲು ಬಾರದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

    ಚಿತ್ರದುರ್ಗ/ಹಾಸನ: ಕಬ್ಬಿಣ ಕುಯ್ದು ಕಳ್ಳತನ (Theft) ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನ (Hassan) ನಗರದ ಎನ್.ಆರ್.ವೃತ್ತದಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ.

    ಚಿತ್ರದುರ್ಗ (Chitradurga) ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಗಾಯಾಳು. ಚಿತ್ರಲಿಂಗೇಶ್ವರ ನಗರದ ಸಿಟಿ ಬಸ್ ನಿಲ್ದಾಣದ ಹತ್ತಿರ ವಾಸವಾಗಿದ್ದು, ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ಎನ್.ಆರ್.ಸರ್ಕಲ್‌ನಲ್ಲಿದ್ದಾಗ ಹೊಳೇನರಸೀಪುರ ತಾಲೂಕಿನ, ಓಡನಹಳ್ಳಿ ಗ್ರಾಮದ ಚೇತು ಅಲಿಯಾಸ್ ಚೇತನ್ ಎಂಬಾತ ಬಂದು ಮದ್ಯಪಾನ ಮಾಡೋಣ ಬಾ ಎಂದು ಕರೆದಿದ್ದಾನೆ. ಇಬ್ಬರು ಎನ್.ಆರ್.ಸರ್ಕಲ್‌ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡುತ್ತಿದ್ದಾಗ, ಎಲ್ಲೋ ಒಂದು ಕಡೆ ಕಬ್ಬಿಣ ಇದೆ. ಅದನ್ನು ಇಬ್ಬರು ಸೇರಿ ಕುಯ್ದುಕೊಂಡು ಬಂದು ಮಾರಾಟ ಮಾಡೋಣ ಎಂದು ಚೇತು ಕರೆದಿದ್ದಾನೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ನನಗೆ ತಿರುಗಾಡಲು ಆಗುವುದಿಲ್ಲ. ರಾತ್ರಿ 9:30 ಆಗಿದೆ. ಹಾಗಾಗಿ ನಾನು ಬರುವುದಿಲ್ಲವೆಂದು ಚಿತ್ರಲಿಂಗೇಶ್ವರ ಹೇಳಿದ್ದಾನೆ. ಇದರಿಂದ ಸಿಟ್ಟಾದ ಚೇತು, ನಾನು ನಿನಗೆ ಎಣ್ಣೆ ಕುಡಿಸಿ, ಊಟ ಕೊಡಿಸಿದ್ದೇನೆ. ನೀನೇನಾದರೂ ಬರಲಿಲ್ಲವೆಂದರೆ ನಿನ್ನನ್ನು ಮುಗಿಸಿ ಬಿಡುತ್ತೇನೆಂದು ಹೆದರಿಸಿದ್ದಾನೆ. ಬಾರ್‌ನಿಂದ ಹೊರಗೆ ಬಂದಾಗ ತನ್ನ ಜೇಬಿನಲ್ಲಿದ್ದ ಸಣ್ಣ ಫೋಲ್ಡಿಂಗ್ ಚಾಕು ತೆಗೆದುಕೊಂಡು ಕುತ್ತಿಗೆ ಹಾಗೂ ಹೊಟ್ಟೆಗೆ ತಿವಿಯಲು ಬಂದಾಗ ಚಿತ್ರಲಿಂಗೇಶ್ವರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಬಿಡದ ಚೇತು ಚಿತ್ರಲಿಂಗೇಶ್ವರ ಎಡಕಣ್ಣಿನ ಹತ್ತಿರ ಹಾಗೂ ಎಡ ಮೊಣಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಚಿತ್ರಲಿಂಗೇಶ್ವರ ತಪ್ಪಿಸಿಕೊಂಡಿದ್ದು, ತೀವ್ರ ರಕ್ತಸ್ರಾವವಾಗಿ ಬಿದ್ದವನನ್ನು ಸ್ಥಳೀಯರು ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್‌

  • ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಪುತ್ತೂರಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ

    ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಪುತ್ತೂರಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ

    ಮಂಗಳೂರು: ಪ್ರೇಮ ನಿವೇದನೆ (Love Proposal) ನಿರಾಕರಣೆ ಹಿನ್ನೆಲೆ ಅನ್ಯಕೋಮಿನ ಅಪ್ರಾಪ್ತೆ ವಿದ್ಯಾರ್ಥಿನಿ (Student) ಕೈಗೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಚಾಕುವಿನಿಂದ (Stab) ಇರಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನಲ್ಲಿ ನಡೆದಿದೆ.

    ಹಿಂದೂ ವಿದ್ಯಾರ್ಥಿ ಚಾಕುವಿನಿಂದ ವಿದ್ಯಾರ್ಥಿನಿಯ ಕೈಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕೂಡ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವ – ಎಲ್ಲೆಡೆ ಪೂರ್ವಾರಾಧನೆ ಸಂಭ್ರಮ

    ಬುಕ್‌ಸ್ಟಾಲ್‌ನಿಂದ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ವಿದ್ಯಾರ್ಥಿ, ನಿನ್ನನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಅದನ್ನು ನಿರಾಕರಿಸಿದ್ದಾಳೆ. ಆಗ ಆತ ಕೈಗೆ ಚಾಕುವಿನಿಂದ ಇರಿದಿರುವುದಾಗಿ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇಷ್ಟು ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದರು. ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.  ಇದನ್ನೂ ಓದಿ: ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂ ಕೋರ್ಟ್

    ಘಟನೆ ಹಿನ್ನೆಲೆ ಆಸ್ಪತ್ರೆಯ ಮುಂದೆ ಜನ ಸೇರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಆಸ್ಪತ್ರೆ ಬಳಿ ಜಮಾಯಿಸಿದ್ದ ಜನರನ್ನು ಪೋಲೀಸರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ. ಕೈಗೆ ಗಾಜು ತಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಿಂದ ಹಾಲಿನ ಪುಡಿ ಮನೆಗೆ – ಮೈಸೂರಿನಲ್ಲಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ

  • ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ ಪ್ರಕರಣ- ಮೂವರು ಪೊಲೀಸ್ ವಶಕ್ಕೆ

    ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ ಪ್ರಕರಣ- ಮೂವರು ಪೊಲೀಸ್ ವಶಕ್ಕೆ

    ಮಂಗಳೂರು: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಕೊಣಾಜೆ ಪೊಲೀಸರು (Konaje Police) ವಕ್ಕೆ ಪಡೆದಿದ್ದಾರೆ.

    ಘಟನೆ ಮುನ್ನ ಬೋಳಿಯಾರಿನಲ್ಲಿ ನಡೆದ ಗಲಾಟೆ ದೃಶ್ಯ ಲಭ್ಯವಾಗಿದೆ. ವೀಡಿಯೋದಲ್ಲಿ ಮೆರವಣಿಗೆ ವೇಳೆ ಬೈಕ್‍ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು, ಬೋಲೋ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲ ಯುವಕರು ಬೈಕ್‍ನಲ್ಲಿದ್ದ ಮೂವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬಳಿಕ ಬಾರ್ ಮುಂಭಾಗ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆ.

    ಚೂರಿ ಇರಿತದಲ್ಲಿ ಹರೀಶ್ (41) ಹಾಗೂ ನಂದಕುಮಾರ್(24) ಗಾಯಗಳಾಗಿದ್ದು, ಮತ್ತೊಬ್ಬ ಕೃಷ್ಣ ಕುಮಾರ್ ಗೆ ಯುವಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಹಲ್ಲೆ ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ- ಇಬ್ಬರಿಗೆ ಚಾಕು ಇರಿತ

  • ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಘಟನೆ ವಿವರ: ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹೀಗಾಗಿ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು.

    ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದನು. ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

    ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Kamakshipalya Police Station) ಎಫ್‍ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

  • ಕುಡಿದ ಅಮಲಿನಲ್ಲಿ ತಂದೆಗೆ ಚಾಕು ಇರಿದ ಮಗ!

    ಕುಡಿದ ಅಮಲಿನಲ್ಲಿ ತಂದೆಗೆ ಚಾಕು ಇರಿದ ಮಗ!

    ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಮಗನೇ ತಂದೆಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ವೆಂಕಟೇಶ ಕಾಲೋನಿಯ ಕಾಳೆ ಲೇಔಟ್ ನಲ್ಲಿ ನಡೆದಿದೆ.

    ಶ್ರೀಧರ ಎಂಬಾತನ ಮಗನೇ ತಂದೆ ಮುದಕಪ್ಪ ದೇವನೂರಗೆ ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿದ್ದ. ಇದೇ ವಿಚಾರವಾಗಿ ತಂದೆಯ ಜೊತೆ ಜಗಳವಾಡುತ್ತಿದ್ದ ಮಗ ಮಂಗಳವಾರ ರಾತ್ರಿ ತಂದೆಗೆ ಕುಡಿದ ಅಮಲಿನಲ್ಲಿ ಚಾಕು ಇರಿದಿದ್ದಾನೆ.

    ಚಾಕು ಇರಿತದಿಂದ ಗಾಯಗೊಂಡಿರುವ ತಂದೆ ಮುದಕಪ್ಪನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಚಾಕು ಇರಿದ ನಂತರ ಮಗ ಶ್ರೀಧರ ಪರಾರಿಯಾಗಿದ್ದಾನೆ.

    ಘಟನೆಯ ಕುರಿತು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

  • ಬಾರ್ ಬಳಿ ನಿಂತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿತ ಪ್ರಕರಣ – ಓರ್ವ ಸಾವು

    ಬಾರ್ ಬಳಿ ನಿಂತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿತ ಪ್ರಕರಣ – ಓರ್ವ ಸಾವು

    ಶಿವಮೊಗ್ಗ: ಬಾರ್ ಬಳಿ ನಿಂತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಾವನ್ನಪ್ಪಿದ್ದಾನೆ.

    ಮೃತಪಟ್ಟ ಯುವಕನನ್ನು ಸೀಗೆಹಟ್ಟಿಯ ಜೀವನ್ (28), ಹಾಗೂ ಗಾಯಾಳು ಕೇಶವ (28) ಎಂದು ಗುರುತಿಸಲಾಗಿದೆ. ಮೃತ ಜೀವನ್ ಹಾಗೂ ಗಾಯಾಳು ಕೇಶವ ಇಬ್ಬರು ಸ್ನೇಹಿತರು. ಮೃತ ಜೀವನ್ ಡ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಇನ್ನು ಕೇಶವ ಖಾಸಗಿ ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದ.

    ಜೀವನ್ ಹಾಗೂ ಕೇಶವ್ ಇಬ್ಬರು ನಿನ್ನೆ ರಾತ್ರಿ ನಗರದ ಎನ್ ಟಿ ರಸ್ತೆಯಲ್ಲಿರುವ ಬಾರ್ ವೊಂದರ ಬಳಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತರ ಗುಂಪು ಏಕಾಏಕಿ ಇಬ್ಬರ ಮೇಲೆ ಚಾಕು ಇರಿದು ಪರಾರಿಯಾಗಿತ್ತು. ಮೃತ ಜೀವನ್ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡುರುವ ಕೇಶವ ಎಂಬಾತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಪೂರ್ವ ವಲಯ ಐಜಿಪಿ ಎಸ್.ರವಿ ಭೇಟಿ ನೀಡಿ ಘಟನೆ ಬಗ್ಗೆ ಗಾಯಾಳು ಕೇಶವನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಕೆಲವೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

  • ಮಹಿಳೆಗೆ ಚಾಕು ಇರಿತ – ಬಿಡಿಸಲು ಹೋದ ಮಗನ ಮೇಲೂ ಹಲ್ಲೆ

    ಮಹಿಳೆಗೆ ಚಾಕು ಇರಿತ – ಬಿಡಿಸಲು ಹೋದ ಮಗನ ಮೇಲೂ ಹಲ್ಲೆ

    ಚಿತ್ರದುರ್ಗ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮಹಿಳೆಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ.

    ಬರಹನ್ ಬೇಗಂ(55) ಹತ್ಯೆಯಾದ ದುರ್ದೈವಿ ಮಹಿಳೆ. ಆರೋಪಿಯನ್ನು ಆರೋಪಿ ಇಂತಿಯಾಜ್ ಎಮದು ಗುರುತಿಸಲಾಗಿದ್ದು, ಈತ ಘಟನೆ ಬೆನ್ನಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಮಹಿಳೆಗೆ ಚಾಕು ಇರಿಯುವಾಗ ಬಿಡಿಸಲು ಹೋದ ಪುತ್ರನ ಮೇಲೂ ಗಾಯಗಳಾಗಿವೆ. ಕೂಡಲೇ ಗಾಯಾಳು ಮೆಹಫೂಜ್ ಇಲಾಯಿನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆರೋಪಿ ಇಂತಿಯಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಚಹಾದಂಗಡಿಯಲ್ಲಿ ರಾಜಕೀಯ ಚರ್ಚೆಯ ವೇಳೆ ವ್ಯಕ್ತಿಯ ಕುತ್ತಿಗೆಗೆ ಚಾಕು ಇರಿತ

    ಚಹಾದಂಗಡಿಯಲ್ಲಿ ರಾಜಕೀಯ ಚರ್ಚೆಯ ವೇಳೆ ವ್ಯಕ್ತಿಯ ಕುತ್ತಿಗೆಗೆ ಚಾಕು ಇರಿತ

    ಕಲಬುರಗಿ: ರಾಜಕೀಯ ವಿಷಯದಲ್ಲಿ ನಡೆದ ಚರ್ಚೆಯ ವೇಳೆ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.

    ಗುರುಲಿಂಗಪ್ಪ ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಕೊಡ್ಲಾ ಗ್ರಾಮದ ನಿವಾಸಿ. ಗ್ರಾಮದ ಅಂಗಡಿಯೊಂದರ ಬಳಿ ಟೀ ಸೇವಿಸುತ್ತಾ ರಾಜಕೀಯ ವಿಷಯದಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅದೇ ಗ್ರಾಮದ ವೆಂಕಟರೆಡ್ಡಿ ಎಂಬಾತ ಗುರುಲಿಂಗಪ್ಪ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

    ಚಾಕು ಇರಿತದಿಂದ ಗಂಭೀರ ಗಾಯಗೊಂಡ ಗುರುಲಿಂಗಪ್ಪ ಅವರನ್ನು ಕೂಡಲೇ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವತಿಗೆ ಚಾಕು ಇರಿದ ಪ್ರಕರಣ – ಪೊಲೀಸರಿಗೆ ಶರಣಾದ ಆರೋಪಿ

    ಯುವತಿಗೆ ಚಾಕು ಇರಿದ ಪ್ರಕರಣ – ಪೊಲೀಸರಿಗೆ ಶರಣಾದ ಆರೋಪಿ

    – ಯುವಕ ಹಲ್ಲೆ ನಡೆಸಿದ್ದು ಯಾಕೆ..?

    ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕ ಪೊಲೀಸರಿಗೆ ಶರಣಾಗಿದ್ದಾನೆ.

    ಆರೋಪಿಯನ್ನು ಗಗನ್ ಎಂದು ಗುರುತಿಸಲಾಗಿದೆ. ಯುವತಿಗೆ ಚಾಕು ಇರಿದ ನಂತರ ಗಗನ್ ಪೊಲೀಸರ ಮುಂದೆ ಹಾಜರಾಗಿದ್ದಾನೆ. ಇದನ್ನೂ ಓದಿ: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಯುವಕ!

    ಗಗನ್ ಕಳೆದ 5 ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಅಲ್ಲದೆ 18 ವರ್ಷ ಆದ ನಂತರ ಆಕೆಯ ಮುಂದೆ ಮದುವೆ ಪ್ರಸ್ತಾಪ ಇಡಲು ಕಾಯುತ್ತಿದ್ದನು. ಇದೀಗ ಆಕೆಗೆ 18 ವರ್ಷ ಕಳೆದಿದ್ದು, ಮದುವೆ ಪ್ರಸ್ತಾಪವನ್ನು ಆಕೆಯ ಮುಂದಿಟ್ಟಿದ್ದಾನೆ. ಈ ವೇಳೆ ಯುವತಿ ಆತನನ್ನು ಮದುವೆ ಆಗಲು ನಿರಾಕರಿಸಿದ್ದಾಳೆ.

    ಇತ್ತ ಯುವತಿ ಮನೆಯವರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯುವತಿ ಕೂಡ ನೀನು ಡ್ರೈವರ್ ಆಗಿದ್ದು, ಹೀಗಾಗಿ ನಿನ್ನನ್ನು ನಾನು ಮದುವೆ ಆಗಲ್ಲ ಎಂದು ನಿಂದಿಸಿದ್ದಳು. ಇದರಿಂದ ಬೇಸರಗೊಂಡ ಗಗನ್, ಯುವತಿಗೆ ಚಾಕು ಇರಿದಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

    ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.