Tag: ST

  • ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದರಾಮಯ್ಯ

    ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದ ಬೆಟ್ಟಕುರುಬ(Betta Kuruba) ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಿಶಿಷ್ಟ ಪಂಗಡಗಳ(ST) ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸಂತಸ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಸಮುದಾಯದ ಬಹುಕಾಲದ ಬೇಡಿಕೆಯಂತೆ ನಮ್ಮ ಸರ್ಕಾರ ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಅದರ ಶಿಫಾರಸಿನ ಆಧಾರದಲ್ಲಿ ಕಾಡು ಕುರುಬ ಜಾತಿ ಸೂಚಕಕ್ಕೆ ಸಮನಾರ್ಥ ಹೊಂದಿರುವ ಬೆಟ್ಟಕುರುಬರನ್ನು ಕೂಡಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ

    SIDDARAMAIAH

    ಸುಮಾರು ಎರಡೂವರೆ ವರ್ಷಗಳ ನಂತರ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಬೆಟ್ಟಕುರುಬ ಸಮುದಾಯದ ಜನರು ಇನ್ನು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ ಲಾಭ ಪಡೆದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶ-ಪ್ರಾತಿನಿಧ್ಯ ಪಡೆದು ಬೆಳೆಯಲಿ ಎಂದು ಸಿದ್ದರಾಮಯ್ಯ ಆಶಿಸಿದರು. ಇದನ್ನೂ ಓದಿ: ಕೆಪಿಸಿಸಿ ಚುನಾವಣೆ- ಪಕ್ಷದ ತೀರ್ಮಾನಕ್ಕೆ ಬದ್ಧ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ಬೆಂಗಳೂರು: ಇನ್ಮುಂದೆ ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿಗೆ ಸೇರಿದ ಕುಟುಂಬ ಸದಸ್ಯರಿಗೂ ಸರ್ಕಾರಿ ನೌಕರಿ ನೀಡುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ.

    PRSS RELEASE

    ಇತ್ತೀಚೆಗಷ್ಟೇ ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದಿದ್ದ ನಿಯಮವನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

  • ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    ದಾವಣಗೆರೆ: ನಕಲಿ ಎಸ್‍ಟಿ ಸರ್ಟಿಫಿಕೇಟ್ ಪಡೆದ ಆರೋಪದಿಂದ ಹೊರಬರಲು ದಲಿತರ ಓಲೈಕೆಗಾಗಿ ಎಂ.ಪಿ.ರೇಣುಕಾಚಾರ್ಯ ಅವರು ಬೃಹತ್ ಎಸ್‍ಸಿ, ಎಸ್‍ಟಿ ಸಮಾವೇಶ ಮಾಡಲಾಯಿತು. ಇದೇ ವೇಳೆ ಸಾಕಷ್ಟು ಮಹಿಳೆಯರೊಂದಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್ ಹಾಕಿದರು.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರೇಣುಕಾಚಾರ್ಯ ತಮ್ಮ ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ಸಮಾವೇಶವನ್ನು ಆಯೋಜನೆ ಮಾಡಿದ್ದರು. ಈ ವೇಳೆ ದಲಿತರಲ್ಲಿ ಸಂದೇಶ ರವಾನಿಸಿದರು. ಇದಲ್ಲದೆ ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮುನ್ನವೇ ಮಹಿಳೆಯ ಜೊತೆ ಸಖತ್ ಸ್ಟೆಪ್ ಹಾಕಿದರು. ಇದನ್ನೂ ಓದಿ:  ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್ 

    ರೇಣುಕಾಚಾರ್ಯ ಪುತ್ರಿ ಎಸ್‍ಸಿ ಜಾತಿ ಪ್ರಮಾಣ ಪತ್ರ ಪಡೆದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಕೆಲ ದಿನಗಳ ಹಿಂದೆ ರೇಣುಕಾ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಇದು ಹೊನ್ನಾಳಿಯಲ್ಲಿ ಎಸ್‍ಸಿ, ಎಸ್‍ಟಿ ಸಮಾವೇಶವನ್ನು ರೇಣುಕಾಚಾರ್ಯ ಮಾಡಿದ್ದಾರೆ. ಈ ವೇಳೆ ಸಾಕಷ್ಟು ಜನ ಹಿಂದುಳಿದ ಸಮುದಾಯದವರನ್ನು ಸೇರಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದರು.

    ಈ ವೇಳೆ ಸಮಾವೇಶಕ್ಕೆ ಆಗಮಿಸುವ ಮೊದಲು ಬೃಹತ್ ಮೆರವಣೆಗೆ ಮಾಡಿ ಮೆರವಣಿಗೆಯಲ್ಲಿ ಮಹಿಳೆಯರನ್ನು ಎಳೆದುಕೊಂಡು ಸ್ಟೇಪ್ ಹಾಕಿದ್ದು, ಎಲ್ಲರನ್ನೂ ಉಬ್ಬೇರಿಸುವಂತಿತ್ತು. ಇದನ್ನೂ ಓದಿ: ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ

  • ಜಾತಿಗಳನ್ನು ಬಿಟ್ಟು ಒಗ್ಗಟ್ಟಾಗಿ ಹೋಗೋಣ ಅಂತಾರೆ ಇನ್ನೊಂದೆಡೆ ಎತ್ತಿಕಟ್ಟಿ ಬೆಂಕಿ ಹಚ್ಚುತ್ತಾರೆ: ನಾರಾಯಣ ಸ್ವಾಮಿ

    ಜಾತಿಗಳನ್ನು ಬಿಟ್ಟು ಒಗ್ಗಟ್ಟಾಗಿ ಹೋಗೋಣ ಅಂತಾರೆ ಇನ್ನೊಂದೆಡೆ ಎತ್ತಿಕಟ್ಟಿ ಬೆಂಕಿ ಹಚ್ಚುತ್ತಾರೆ: ನಾರಾಯಣ ಸ್ವಾಮಿ

    ಬೆಂಗಳೂರು: ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸಿದ್ರು ಆದರೆ ಅದನ್ನು ಪ್ರಕಟ ಮಾಡಲಿಲ್ಲ. ಜಾತಿಗಳನ್ನು ಬಿಟ್ಟು ಒಗ್ಗಟ್ಟಾಗಿ ಹೋಗೋಣ ಅನ್ನೋದು ಒಂದು ಕಡೆ. ಇನ್ನೊಂದು ಕಡೆ ಜಾತಿಗಳನ್ನು ಎತ್ತಿಕಟ್ಟಿ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ ಎರಡು ಕೆಲಸ ಅವರೇ ಮಾಡುತ್ತಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ವರ್ಷದ ಬಜೆಟ್ ಮುಂದಿನ ತಿಂಗಳು ಮಂಡನೆಯಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಡುವ ಹಣದಲ್ಲಿ ಉತ್ತಮ ಕಾರ್ಯ ಮಾಡುವ ಬಗ್ಗೆ ಚರ್ಚೆ ಮಾಡಿದ್ದೆವು. ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಕಳೆದ ಬಾರಿ ಬಿಎಸ್ ವೈ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಸಭೆ ಮಾಡಿ ಮನವಿ ಮಾಡಿದ್ದೇವು. ಅದರಂತೆ ಕೆಲವು ಬೇಡಿಕೆ ಈಡೇರಿಸಿದ್ದಾರೆ. ಅದರಂತೆ ಈ ಬಾರಿಯೂ ಹಲವು ಬೇಡಿಕೆಗಳ ಬಗ್ಗೆ ಸಿಎಂ ಗಮನಕ್ಕೆ ತರುತ್ತೇವೆ. ಸಮುದಾಯದ ಯುವಕರಿಗೆ ಉದ್ಯೋಗದ ಬಗ್ಗೆಯೂ ಮನವಿ ಮಾಡುತ್ತೇವೆ. ಸಿ.ಟಿ.ರವಿಯವರನ್ನು ಭೇಟಿ ಮಾಡಿ ಅವರ ಗಮನಕ್ಕೂ ತಂದು ಅವರೊಂದಿಗೆ ಸಿಎಂಗೆ ಮನವಿ ನೀಡುತ್ತೇವೆ ಎಂದರು. ಇದನ್ನೂ ಓದಿ: ಕೆಲವರು ವಯಸ್ಸಾಗಿ ನಿಶಕ್ತರಾದರೆ, ಇನ್ನೂ ಕೆಲವರು ರಾಜಕೀಯ ನಿಶಕ್ತರಾಗುತ್ತಿದ್ದಾರೆ : ಸಿದ್ದರಾಮಯ್ಯಗೆ ಇಬ್ರಾಹಿಂ ಟಾಂಗ್‌

    ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ವಿಚಾರವಾಗಿ ಮಾತನಾಡಿ, ಸರ್ವರನ್ನೂ ಸಮನಾಗಿ ನೋಡಬೇಕಾಗಿದೆ. ಜನಗಣತಿ ಮಾಡುವುದರಲ್ಲೇ ಎಲ್ಲವೂ ಸಿಗುತ್ತೆ. ಮತ್ಯಾಕೆ ಜಾತಿ ಗಣತಿ ಬೇಕು?. ಸರ್ಕಾರಕ್ಕೆ ಒತ್ತಾಯ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಇದ್ದಾಗ ಯಾಕೆ ರಿಲೀಸ್ ಮಾಡಲಿಲ್ಲ. ಸಿದ್ದರಾಮಯ್ಯ ಜಾತಿಗಣತಿ ಮಾಡಿದ್ದೇ ತಪ್ಪು ಅನ್ನೋ ಹಂಗಾಯ್ತಲ. ಸಿದ್ದರಾಮಯ್ಯ ಮಾಡಿಸಿದ್ದ ಜಾತಿ ಗಣತಿ ಸರಿ ಇದೆ ಅಂತ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಈ ವರ್ಷದ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ವರ್ಗಗಳಿಗೆ ಮೀಸಲಿಟ್ಟ ಹಣದಲ್ಲಿ ಉತ್ತಮ ಕಾರ್ಯಗಳಿಗೆ ಬಳಸಬೇಕು. ಹೀಗಾಗಿ ನಮ್ಮ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಬೊಮ್ಮಾಯಿ ಅವರ ಮುಂದೆ ಹಲವು ಮನವಿ ಸಲ್ಲಿಸಿದ್ದೇವೆ. ಹರಿಯಾಣ ಮಾದರಿಯಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಬೆಳವಣಿಗೆಗೆ ಸಹಕರಿಸಬೇಕಾಗಿದೆ. ಭೂಮಿ, ವಸತಿ ಕೊಡಬೇಕು ಎಂಬ ಸಲಹೆ ಬಂದಿದೆ ಈ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

  • ST ಮೀಸಲಾತಿ ವಿಳಂಬ ಆದ್ರೆ ಉಗ್ರ ಹೋರಾಟ: ಪ್ರಸನ್ನಾನಂದಪುರಿ ಸ್ವಾಮೀಜಿ

    ST ಮೀಸಲಾತಿ ವಿಳಂಬ ಆದ್ರೆ ಉಗ್ರ ಹೋರಾಟ: ಪ್ರಸನ್ನಾನಂದಪುರಿ ಸ್ವಾಮೀಜಿ

    -ಯಡಿಯೂರಪ್ಪ ಮಾತಿಗೆ ತಪ್ಪಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ

    ಬೆಳಗಾವಿ: ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮುದಾಯ ಬೆಳೆಯಬೇಕಾದರೆ SC/ST ಸಮುದಾಯದಕ್ಕೆ ಮೀಸಲಾತಿ ನೀಡಬೇಕು. ಆದರೆ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಇನ್ನೂ ಕೂಡ ವಿಳಂಬ ಆದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


    ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆದ ವಾಲ್ಮೀಕಿ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯಗಳ ಆಶೋತ್ತರಗಳನ್ನು ಮರೆಯುತ್ತಿದೆ. ಮೀಸಲಾತಿ ಸಾಂವಿಧಾನಿಕ ಹಕ್ಕು ಕೊಡದೇ ಇದ್ದರೆ ಹೋರಾಟ ಮಾಡಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆ ನೀಡಿದ್ದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿ ಬಂದ ಮೇಲೆ ಕೂಡಲೇ ಮೀಸಲಾತಿ ನೀಡಲಾಗುವುದು ಎಂದಿದ್ದರು ಎಂದರು. ಇದನ್ನೂ ಓದಿ: ಮೀಸಲಾತಿ ಕೊಟ್ಟರೆ ಮಠದಲ್ಲಿ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ: ಬಸವ ಜಯ ಮೃತ್ಯುಂಜಯ ಶ್ರೀ

    Karnataka administered 29.5 Lakh covid vaccine doses in a single day CM Bommai Thanks Modi

    ಯಡಿಯೂರಪ್ಪ ಆಶ್ವಾಸನೆ ಕೊಟ್ಟು, ಮಾತು ಕೊಟ್ಟಿದ್ದರು ಇದೀಗ ಮಾತಿಗೆ ತಪ್ಪಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ನಮ್ಮ ಸಮುದಾಯದಕ್ಕೆ ಅನ್ಯಾಯ ಆಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಎಲ್ಲಾ ಶಾಸಕರು ಹೇಳಬೇಕು. ಎಸ್‍ಸಿ, ಎಸ್‍ಟಿ, ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನ್ಯಾಯಾಂಗದಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು: ಸಿಜೆಐ ರಮಣ

  • ಎಸ್‍ಸಿ, ಎಸ್‍ಟಿಗಳ ಮೇಲೆ ಹೆಚ್ಚಿದ ದೌರ್ಜನ್ಯ ಪ್ರಕರಣಗಳು- NCRB ವರದಿ

    ಎಸ್‍ಸಿ, ಎಸ್‍ಟಿಗಳ ಮೇಲೆ ಹೆಚ್ಚಿದ ದೌರ್ಜನ್ಯ ಪ್ರಕರಣಗಳು- NCRB ವರದಿ

    ನವದೆಹಲಿ: ದೇಶದಲ್ಲಿ ಪರಿಶಿಷ್ಟ ಜಾತಿ (ಎಸ್‍ಸಿ), ಪರಿಶಿಷ್ಟ ಪಗಂಡದ (ಎಸ್‍ಟಿ) ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳು 2019ಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ ಶೇ.9.4ರಷ್ಟು ಮತ್ತು ಶೇ.9.3ರಷ್ಟು ಹೆಚ್ಚಾಗಿವೆ ಎಂದು ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

    2020ರಲ್ಲಿ ಎಸ್‍ಸಿ ಗಳ ವಿರುದ್ಧ 50,291 ಅಪರಾಧಗಳು ದಾಖಲಾಗಿವೆ. 2019ರಲ್ಲಿ 45,961 ಪ್ರಕರಣ ದಾಖಲಾಗಿದ್ದವು. 2020ರಲ್ಲಿ ಎಸ್‍ಟಿ ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ 7,570 ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ಆಪ್ತ ಸ್ನೇಹಿತನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಸಿಎಂ

    2020ರಲ್ಲಿ ಎಸ್‍ಸಿ ಗಳ ವಿರುದ್ಧದ ಅಪರಾಧಗಳಲ್ಲಿ ಸಿಂಪಲ್ ಹರ್ಟ್ ಎಂದು ಒಟ್ಟು 16,543 (ಶೇ.32.9) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿದೆ. ಜೊತೆಗೆ ಎಸ್‍ಸಿ, ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 4,273 (ಶೇ.8.5) ಅಪರಾಧಗಳು ಮತ್ತು 3,788 ಕ್ರಿಮಿನಲ್ ಬೆದರಿಕೆಗಳು ಎಸ್‍ಸಿ ಗಳ ವಿರುದ್ಧ ನಡೆದಿವೆ.

    ಎಸ್‍ಟಿಗಳ ವಿಷಯದಲ್ಲಿ ನಡೆದ ಒಟ್ಟು ಅಪರಾಧಗಳಲ್ಲಿ, ಸಿಂಪಲ್ ಹರ್ಟ್ ಎಂದು ಒಟ್ಟು 2,247(ಶೇ.27.2) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿವೆ. ಅತ್ಯಾಚಾರ ಅಪರಾಧಗಳು 1,137(ಶೇ.13.7), ಮಹಿಳೆಯರ ಮೇಲೆ ಹಲ್ಲೆ ನಡೆದಿರುವ 885 (ಶೇ.10.7) ಪ್ರಕರಣಗಳು ದಾಖಲಾಗಿವೆ.

    ಎಸ್‍ಸಿಗಳ ವಿರುದ್ಧ ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಧಿಕ ಅಪರಾಧಗಳು ನಡೆದಿವೆ. ಎಸ್‍ಟಿ ಗಳ ವಿರುದ್ಧ ಅತ್ಯಧಿಕ ಅಪರಾಧಗಳು ಕೇರಳ, ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳಿದೆ.

  • ಜೂನ್‌ನಲ್ಲಿ 92,849 ಕೋಟಿ ಜಿಎಸ್‌ಟಿ ಸಂಗ್ರಹ – ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ

    ಜೂನ್‌ನಲ್ಲಿ 92,849 ಕೋಟಿ ಜಿಎಸ್‌ಟಿ ಸಂಗ್ರಹ – ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ

    ನವದೆಹಲಿ: ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ ಆದಾಯ ಸಂಗ್ರಹಗೊಂಡಿದ್ದು,  ಜೂನ್‌ ತಿಂಗಳಿನಲ್ಲಿ  92,849 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.

     ಜೂನ್ 5 ರಿಂದ ಜುಲೈ 5 ರವರೆಗಿನ ದೇಶೀಯ ವಹಿವಾಟಿನಿಂದಾದ ಜಿಎಸ್ ಟಿ ಸಂಗ್ರಹ ಇದಾಗಿದೆ. ಸಿಜಿಎಸ್ ಟಿ  16,424 ಕೋಟಿ ರೂ.,  ಎಸ್ ಜಿ ಎಸ್ ಟಿ 20,397 ಕೋಟಿ ರೂ.,   ಐಜಿಎ ಎಸ್ ಟಿ  49,079 ಕೋಟಿ ರೂ.  ಮತ್ತು ಸೆಸ್  6,949 ಕೋಟಿ ರೂ. ಸಂಗ್ರಹವಾಗಿದೆ.

    ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಟ್ಟು 5 ಕೋಟಿವರೆಗೆ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ 2021 ಜೂನ್ ತಿಂಗಳಿಗೆ ರಿಟರ್ನ್ ಫೈಲಿಂಗ್ 15 ದಿನಗಳ ಕಾಲ ವಿಳಂಬವಾದ ರಿಟರ್ನ್ ಫೈಲಿಂಗ್ ಮೇಲಿನ ಮನ್ನಾ / ಬಡ್ಡಿ ಕಡಿತದ ರೂಪದಲ್ಲಿ ತೆರಿಗೆದಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು.

    ಜೂನ್ 2021 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಪ್ರತಿಶತ 2 ರಷ್ಟು ಹೆಚ್ಚಾಗಿದೆ.

    ಸತತ ಎಂಟು ತಿಂಗಳವರೆಗೆ 1 ಲಕ್ಷ ಕೋಟಿ ಗುರುತನ್ನು ದಾಟಿ, ಜೂನ್ 2021 ರಲ್ಲಿ ಸಂಗ್ರಹವು 1 ಲಕ್ಷ ಕೋಟಿ ರೂ. ಗಿಂತ ಕಡಿಮೆಯಾಗಿದೆ. ಮೇ 2021 ರಲ್ಲಿ, ಕೋವಿಡ್ ಕಾರಣದಿಂದಾಗಿ ಹೆಚ್ಚಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ಆಗಿದ್ದವು.

    ಜೂನ್ 2021 ರಲ್ಲಿ ಉತ್ಪತ್ತಿಯಾಗುವ ಇ-ವೇ ಬಿಲ್ ಗಳು  5.5 ಕೋಟಿ ಆಗಿದ್ದು, ಇದು ವ್ಯಾಪಾರ ಮತ್ತು ವ್ಯವಹಾರದ ಚೇತರಿಕೆಯನ್ನು ಸೂಚಿಸುತ್ತದೆ. ಏಪ್ರಿಲ್ 2021 ರ ಮೊದಲ ಎರಡು ವಾರಗಳಲ್ಲಿ ದೈನಂದಿನ ಸರಾಸರಿ ಇ-ವೇ ಬಿಲ್ 20 ಲಕ್ಷವಾಗಿದ್ದು, ಇದು 2021 ರ ಏಪ್ರಿಲ್ ಕೊನೆಯ ವಾರದಲ್ಲಿ 16 ಲಕ್ಷಕ್ಕೆ ಇಳಿದಿದೆ ಮತ್ತು ಮೇ 9 ರಿಂದ 22 ರವರೆಗೆ ಎರಡು ವಾರಗಳಲ್ಲಿ 12 ಲಕ್ಷಕ್ಕೆ ಇಳಿದಿದೆ. ಅದರ ನಂತರ, ಇ-ವೇ ಬಿಲ್ ಗಳ  ಸರಾಸರಿ ಉತ್ಪಾದನೆಯು ಹೆಚ್ಚುತ್ತಿದೆ ಮತ್ತು ಜೂನ್ 20 ರಿಂದ ವಾರದಿಂದ ಮತ್ತೆ 20 ಲಕ್ಷ ಮಟ್ಟಕ್ಕೆ ತಲುಪಿದೆ. ಆದ್ದರಿಂದ, ಜೂನ್ ತಿಂಗಳಲ್ಲಿ ಜಿಎಸ್ ಟಿ ಆದಾಯವು ಕುಸಿದಿದ್ದರೆ, ಜುಲೈ 2021 ರಿಂದ ಆದಾಯವು ಮತ್ತೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

  • ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ: ಸತೀಶ್ ಜಾರಕಿಹೊಳಿ

    ಚಾಮರಾಜನಗರ: ಮಹಾರಾಷ್ಟ್ರದವರು ಹೇಳೋದು ಹೊಸದೇನಲ್ಲ. ಸುಮಾರು ವರ್ಷದಿಂದ ಇದನ್ನೇ ಹೇಳ್ತಿದ್ದಾರೆ. ಹೊಸ ಸರ್ಕಾರ ಬಂದ ವೇಳೆ ಇಂತಹ ಹೇಳಿಕೆ ಕೊಡ್ತಾರೆ. ಅದು ಮುಗಿದು ಹೋಗಿರುವ ಅಧ್ಯಾಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕ್ಯಾತೆ ಕುರಿತು ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕ್ಷ್ಯಚಿತ್ರ ರಿಲೀಸ್ ಮಾಡಿದ್ರೆ ಏನಾಯ್ತು. ನಾವೂ ಬೆಳಗಾವಿಯನ್ನು ಬಿಡೊಕ್ಕಾಗುತ್ತಾ. ಬೆಳಗಾವಿ ಕರ್ನಾಟಕದಲ್ಲಿದೆ, ಇಲ್ಲೆ ಇರುತ್ತೆ. ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಾನು ಕೂಡ ಹಲವು ಬಾರಿ ಈ ವಿಚಾರ ಮಾತನಾಡಿದ್ದೀವಿ. ಈಗ ಬಿಜೆಪಿ ಸರ್ಕಾರವಿರೋದ್ರಿಂದ ಅವರೇ ಈ ಕುರಿತು ಮಾತನಾಡಬೇಕು. ಮೂರು ರಾಜ್ಯದಲ್ಲೂ ಕೂಡ ಅವರದ್ದೇ ಸರ್ಕಾರವಿದೆ. ಆದರೆ ಯಾಕೆ ಮಹಾದಾಯಿ ವಿಚಾರ ಬಗೆಹರಿಸಿಲ್ಲ. ಇದು ರಾಜ್ಯ ಇಶ್ಯಾ ಇದೆ ಎಂದು ಕಿಡಿಕಾರಿದರು.

    ಮಹಾರಾಷ್ಟ್ರ ಸರ್ಕಾರಕ್ಕೆ ಕೇಳುವ ಹಕ್ಕಿದೆ. ಅದೇ ರೀತಿ ನಮಗೂ ಕೂಡ ಹಕ್ಕಿದೆ. ಕಾಂಗ್ರೆಸ್ಸಿನವರೂ ಬೆಳಗಾವಿ ಬಿಟ್ಟುಕೊಡಕ್ಕಾಗುತ್ತಾ? ನಾವೆಲ್ಲಾ ಬಿಡ್ತೀವಾ? ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿದ ಅವರು, ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡಲೇಬೇಕು, ಬೇರೆ ದಾರಿಯಿಲ್ಲ. ಪಕ್ಷ ಜವಾಬ್ದಾರಿ ವಹಿಸಿದ್ರೆ ಅದಕ್ಕೆ ಬದ್ಧನಾಗಿರುತ್ತೀನಿ ಎಂದರು.

    ಎಸ್‍ಟಿ ಸಮುದಾಯಕ್ಕೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕುರ್ಚಿಯ ಮೇಲೆ ಕುಳಿತ 24 ತಾಸಿನೊಳಗೆ ಏನೋ ಕೊಡ್ತೀನಿ ಅಂದ್ರು. ಡಿಸಿಎಂ ಕೊಡ್ತೀನಿ ಅಂತ ನಾಯಕರನ್ನು ಬುಟ್ಟಿಗೆ ಹಾಕಿಕೊಂಡ್ರು. ಇದೀಗ ಡಿಸಿಎಂ ಕೊಟ್ಟಿದ್ದಾರಾ? ಇಲ್ಲ. ಅಲ್ಲದೇ ಏಳೂವರೆ ಪರ್ಸೆಂಟ್ ಮೀಸಲಾತಿ ಕೊಡ್ತೀನಿ ಸಿಎಂ ಭಾಷಣ ಕೂಡ ಮಾಡಿದ್ದರು. ಭಾಷಣ ಮಾಡಿ ವೋಟ್ ಕೂಡ ಹಾಕಿಸಿಕೊಂಡಿದ್ದಾರೆ. ಯಾವಾಗ ಮೀಸಲಾತಿ ಕೊಡ್ತಾರೆ ಅಂತಾ ಅವರನ್ನೇ ಕೇಳಿ ಎಂದು ಹೇಳಿದರು.

  • ಅರ್ಹತೆ ಇರೋ ಎಲ್ಲಾ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಈಶ್ವರಪ್ಪ

    ಅರ್ಹತೆ ಇರೋ ಎಲ್ಲಾ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಈಶ್ವರಪ್ಪ

    ಶಿವಮೊಗ್ಗ: ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳನ್ನು ಎಸ್‍ಟಿ ವರ್ಗಕ್ಕೆ ಸೇರಿಸಬೇಕು ಎಂದು ಅನೇಕ ಸಮಾಜದವರು ಬೇಡಿಕೆ ಇಟ್ಟಿದ್ದಾರೆ. ಅನೇಕ ಸಮಾಜಗಳಿಗೆ ಎಸ್‍ಟಿಗೆ ಸೇರುವ ಅರ್ಹತೆ ಸಹ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ಎಲ್ಲಾ ಹಿಂದುಳಿದ ವರ್ಗ ಯಾರು, ಯಾರಿಗೆ ಎಸ್‍ಟಿಗೆ ಸೇರಲು ಅರ್ಹತೆ ಇದೆಯೋ, ಆ ಎಲ್ಲಾ ಅರ್ಹತೆ ಇರುವ ಸಮಾಜವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲವಿದೆ ಎಂದರು.

    ಈಗಾಗಲೇ ಕುರುಬ ಸಮುದಾಯದ ಜೊತೆ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲರ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚಿಸಲು ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರ ಜೊತೆ ಸಭೆ ನಡೆದಿದೆ. ಅಲ್ಲದೇ ಈ ಬಗ್ಗೆ ಮತ್ತೆ ಚರ್ಚಿಸಲು ನಮ್ಮ ಮನೆಯಲ್ಲಿ ಇದೇ ಭಾನುವಾರ ಎಲ್ಲಾ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರು ಸಭೆ ನಡೆಯಲಿದೆ. ಅಲ್ಲದೇ ಕುರುಬ ಸಮಾಜದ ಸ್ವಾಮೀಜಿಯವರು ನನ್ನ ಮನೆಗೆ ಭೇಟಿ ನೀಡಿ ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸುವ ಹೋರಾಟದ ನೇತೃತ್ವವನ್ನು ನೀವೆ ವಹಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದರು.

    ಎಸ್‍ಟಿಗೆ ಕುರುಬ ಸಮಾಜ ಸೇರಿಸಬೇಕು ಎಂಬ ಹೋರಾಟ ಮುಂದುವರಿಯುತ್ತದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಸಹ ಇದೆ. ಸದ್ಯದ ಮೀಸಲಾತಿ ಪ್ರಕಾರ ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ಮಾಡಲು ಬರುವುದಿಲ್ಲ. ಸದ್ಯ ವಾಲ್ಮೀಕಿ ಸಮಾಜಕ್ಕೆ 3% ಮೀಸಲಾತಿ ಇದೆ. ಈ 3% ಮೀಸಲಾತಿಯನ್ನು 7% ಗೆ ಹೆಚ್ಚಿಸಬೇಕು ಎಂಬ ಅವರ ನ್ಯಾಯಬದ್ಧವಾದ ಬೇಡಿಕೆ ಇದೆ. ಈಗಾಗಿಯೇ ಸರ್ಕಾರ ನಾಗಮೋಹನ್ ದಾಸ್ ವರದಿಯ ನಿರೀಕ್ಷೆಯಲ್ಲಿದೆ. ಆ ವರದಿ ಬಂದ ನಂತರ ಅದರ ಪ್ರಕಾರ ಎಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೋ ಅಷ್ಟನ್ನು ಖಂಡಿತಾ ಮಾಡುತ್ತೇವೆ ಎಂದರು.

    ಕುರುಬ ಸಮಾಜ, ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲ ಸಮಾಜ ಯಾವುದೇ ಸಮಾಜ ಆಗಲಿ ಎಸ್‍ಟಿ ಗೆ ಸೇರಿಸಲು ಅವರು ಒಬಿಸಿಯಲ್ಲಿ ಎಷ್ಟು ಮೀಸಲಾತಿ ಪಡೆದಿದ್ದಾರೋ ಅದರ ಸಮೇತ ಅವರು ಎಸ್‍ಟಿಗೆ ಬರಬೇಕು. ಈಗ ಇರುವಂತಹ ಎಸ್‍ಟಿ ಸಮಾಜಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ. ಜೊತೆಗೆ ಈ ಎಲ್ಲಾ ಸಮಾಜಗಳು ಎಸ್‍ಟಿ ಸೇರ್ಪಡೆಯಿಂದ ಯಾವುದೇ ರೀತಿ ತೊಂದರೆಯೂ ಆಗುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವೇ…?

    ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವೇ…?

    -ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣದ ಭವಿಷ್ಯ ಇಂದು ನಿರ್ಧಾರ!

    ನವದೆಹಲಿ: ನಿವೃತ್ತಿಗೆ ಉಳಿದಿರುವ ಕೊನೆ ಆರು ದಿನಗಳಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಏಳು ಮಹತ್ವದ ತೀರ್ಪು ನೀಡಲಿದ್ದಾರೆ. ಮಂಗಳವಾರ ಎರಡು ಮಹತ್ವದ ತೀರ್ಪು ನೀಡಿರುವ ನ್ಯಾ.ದೀಪಕ್ ಮಿಶ್ರಾ ಇಂದು ಮೂರು ಮಹತ್ವದ ಪ್ರಕರಣಗಳ ಬಗ್ಗೆ ತೀರ್ಪು ಪ್ರಕಟಿಸಲಿದ್ದಾರೆ.

    ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಆಧಾರ್ ಯೋಜನೆಗೆ ಈಗ ಸಿಂಧುತ್ವದ ಪ್ರಶ್ನೆ ಎದುರಾಗಿದೆ. ಆಧಾರ್ ಯೋಜನೆ ಲಾಭವನ್ನು ಆಡಳಿತಾರೂಢ ಮೋದಿ ಸರ್ಕಾರ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದು, ಸರ್ಕಾರಿ ಯೋಜನೆಗಳ ಫಲಾನುಭವಿಗಳ ಪತ್ತೆ, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಯೋಜನೆಗಳಿಗೆ ಆಧಾರ್ ನಂಬರ್ ಲಿಂಕ್ ಮಾಡುತ್ತಿದೆ.

    ಹೀಗೆ ಆಧಾರ್ ಲಿಂಕ್ ಮಾಡೋದು ವ್ಯಕ್ತಿಯ ಖಾಸಗಿತನದ ಧಕ್ಕೆ ತರಲಿದೆ ಅಂತಾ ಆಧಾರ್ ಜೋಡಣೆ ವಿರೋಧಿಸಿ ಸುಪ್ರೀಂಕೋರ್ಟ್ ಗೆ 27 ಅರ್ಜಿ ದಾಖಲಾಗಿವೆ. 27 ಅರ್ಜಿಗಳ ಒಟ್ಟುಗೂಡಿಸಿ ದಾಖಲೆಯ 38 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಇಂದು ತೀರ್ಪು ನೀಡಲಿದೆ. ಆಧಾರ್ ಜೋಡಣೆ ಖಾಸಗಿತನದ ಧಕ್ಕೆಯೋ..? ಇಲ್ಲವೋ..? ಆಧಾರ್ ಸರ್ಕಾರಿ ಯೋಜನೆಗಳಿಗೆ ಕಡ್ಡಾಯ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇಂದು ತೀರ್ಪು ಹೊರ ಬರಲಿದೆ. ಈ ಮಹತ್ವದ ತೀರ್ಪು ಆಧಾರ್ ಭವಿಷ್ಯ ನಿರ್ಧರಿಸಿಲಿದ್ದು, ಇಡೀ ದೇಶವೇ ಸುಪ್ರೀಂ ತೀರ್ಪು ನತ್ತ ಎದುರು ನೋಡ್ತಿದೆ.

    ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ:
    ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪಾಗಿ ಉಳಿದಿರುವ ಎಂ.ನಾಗರಾಜು ಪ್ರಕರಣ ತೀರ್ಪು ಬದಲಾಗುತ್ತಾ ಅನ್ನೂ ಕುತೂಹಲ ಮೂಡಿದೆ. ಬಡ್ತಿ ಮೀಸಲಾತಿ ವಿಚಾರವಾಗಿ ಎಂ.ನಾಗರಾಜು ಪ್ರಕರಣದ ಬಗ್ಗೆ 2006 ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಲ್ಯಾಂಡ್ ಮಾರ್ಕ್ ಆಗಿದ್ದು ಇಡೀ ದೇಶವೇ ಈ ತೀರ್ಪು ನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ತೀರ್ಪು ಎಲ್ಲ ರಾಜ್ಯಗಳಿಗೆ ಅನ್ವಯ ಮಾಡಲು ಸಾಧ್ಯವಿಲ್ಲ ಎಂದಿದ್ದ ಬಿಹಾರ ಮತ್ತು ಈಶಾನ್ಯ ಭಾಗದ ರಾಜ್ಯಗಳು ತೀರ್ಪು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು.

    ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ 2006 ರಲ್ಲಿ ನೀಡಿದ್ದ ತೀರ್ಪು ಮುಂದುವರಿಬೇಕಾ ಅಥಾವ ಏಳು ಜನರ ಸಾಂವಿಧಾನಿಕ ಪೀಠದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಬೇಕಾ ಎಂಬುದರ ಬಗ್ಗೆ ಮಹತ್ವದ ಇಂದು ತೀರ್ಪು ನೀಡಲಿದೆ. ಈ ತೀರ್ಪು ರಾಜ್ಯ ಸರ್ಕಾರಕ್ಕೆ ನಿರ್ಣಾಯಕವಾಗಿದ್ದು ಹಿಂದಿನ ತೀರ್ಪು ಪಾಲಿಸುವ ಸೂಚನೆ ಸುಪ್ರೀಂ ಕೋರ್ಟ್ ನೀಡಿದ್ರೆ ರಾಜ್ಯ ಸರ್ಕಾರ ಬಿ.ಕೆ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಲಿದೆ. ಒಂದು ವೇಳೆ ಏಳು ಜನರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾದಲ್ಲಿ ಹೆಚ್.ಡಿ.ಕೆ ಸರ್ಕಾರ ಬೀಸೊ ದೊಣ್ಣೆಯಿಂದ ಪಾರಾಗಲಿದೆ.

    ಕಲಾಪಗಳ ನೇರ ಪ್ರಸಾರ:
    ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವ ಕುರಿತು ಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ತನ್ನ ನಿಲುವು ಪ್ರಕಟಿಸಲಿದೆ. ಮಹತ್ವದ ಕೇಸುಗಳ ತೀರ್ಪನ್ನು ನೀಡುವಾಗ ಅವುಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೋ ಒತ್ತಾಯವಿದೆ. ಜತೆಗೆ ಕೋರ್ಟ್ ನಲ್ಲಿ ನಡೆಯುವ ಪ್ರಮುಖ ವಿಚಾರಣೆಗಳು ದೇಶದ ಜನತೆಗೆ ಗೊತ್ತಾಗಬೇಕು. ಗೊತ್ತಾವುದರಲ್ಲಿ ತಪ್ಪೇನಿದೆ ಅನ್ನುವ ವಾದಗಳು ಮಾಡಲಾಗಿದೆ. ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೊ ವಾದಕ್ಕೆ ಮನ್ನಣೆ ಕೊಡಬೇಕೋ ಬೇಡವೋ ಎಂಬ ಬಗ್ಗೆ ಇಂದು ನ್ಯಾ.ದೀಪಕ್ ಮಿಶ್ರ ನೇತೃತ್ವದ ಪೀಠ ನಿರ್ಧರಿಸಲಿದೆ. ಇಂದು ಕೂಡಾ ಸುಪ್ರೀಂಕೋರ್ಟ್ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಮೂರು ಮಹತ್ವದ ತೀರ್ಪುಗಳು ಸುಪ್ರೀಂಕೋರ್ಟ್ ನಿಂದ ಹೊರಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv