Tag: ST Reservation

  • ಅಂಬಿಗರ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿ: ಬೊಮ್ಮಾಯಿ

    ಅಂಬಿಗರ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿ: ಬೊಮ್ಮಾಯಿ

    ಹಾವೇರಿ: ಅಂಬಿಗರ ಸಮಾಜಕ್ಕೆ (Ambiga Community) ಪರಿಶಿಷ್ಟ ವರ್ಗದ ಮೀಸಲಾತಿ (ST Community) ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ತಾಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ ಹಾಗೂ 903ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗದ ಮೀಸಲಾತಿಯಡಿ ಪರಿಗಣಿಸಲು ಈಗಾಗಲೇ ಪ್ರಕ್ರಿಯೆಗಳು ಅಂತಿಮ ಚರಣದಲ್ಲಿದೆ. ಪೂರ್ಣ ಚರಣ ಮಾಡಲು ಪ್ರಯತ್ನಿಸಲಾಗುವುದು. ಇದಕ್ಕೆ ಸಂಬAಧಿಸಿದAತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕೇಂದ್ರದ ಕಾನೂನು ಇಲಾಖೆ ಕೆಲವು ಸ್ಪಷ್ಟೀಕರಣ ಕೇಳಿದೆ. ಇದನ್ನು ರಾಜ್ಯದಿಂದ ಒದಗಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದರು.

    5 ಕೋಟಿ ಅನುದಾನ:
    ಅಂಬಿಗರ ಸಮಾಜದ ಆರ್ಥಿಕ ಶೈಕ್ಷಣಿಕ ಧಾರ್ಮಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಅಂಬಿಗರ ಚೌಡಯ್ಯನವರ ಮಠದ ಬೆಳವಣಿಗೆಗೆ ಬಾಕಿ ಉಳಿದಿರುವ 5 ಕೋಟಿ ರೂ. ಶೀಘ್ರವೇ ಬಿಡುಗಡೆ ಮಾಡಲಾಗುವುದು. ಮಠಕ್ಕೆ 10 ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಕಳೆದ ಬಾರಿ 2 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿತ್ತು. ಎಲ್ಲಾ ಅನುದಾನವನ್ನು ಮಠದ ಬೆಳವಣಿಗೆಗೆ ನೀಡಲಾಗುವುದು. ಗಂಗಾಮತದ ಜಿಲ್ಲಾ ಸಮುದಾಯ ಭವನಕ್ಕೆ ಈ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದರು. ಇದನ್ನೂ ಓದಿ: ವಂದೇ ಭಾರತ್ ರೈಲಿನ ರಚನೆ ವಿಮಾನಕ್ಕಿಂತಲೂ ಚೆನ್ನಾಗಿದೆ: ಅಶ್ವಿನಿ ವೈಷ್ಣವ್

    ಮಕ್ಕಳಿಗೆ ಶಿಕ್ಷಣ ಕೊಡಿಸಿ:
    ಕಾಲ ಬದಲಾಗಿದೆ, ಇಂದು ಜ್ಞಾನದ ಶತಮಾನದಲ್ಲಿದ್ದೇವೆ. ಶಿಕ್ಷಣ ಮತ್ತು ಜ್ಞಾನವಂತರಾದರೆ ಮಾತ್ರ ಸಮಕಾಲೀನ ಸವಾಲನ್ನು ಎದುರಿಸಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ನಂತರ ಹಣ ವ್ಯಾಪಾರ ಮಾಡುತ್ತಿದ್ದವರು ಜಗತ್ತನ್ನು ಆಳಲು ಆರಂಭಿಸಿದರು. ಆದರೆ ಇಂದಿನ 21ನೇ ಶತಮಾನ ಜ್ಞಾನ ಯುಗದಲ್ಲಿದೆ. ಶಿಕ್ಷಣ ಪಡೆದವರು, ಜ್ಞಾನಾರ್ಜನೆ ಮಾಡಿದವರು ಮಾತ್ರ ಜಗತ್ತನ್ನು ಆಳುತ್ತಿದ್ದಾರೆ ಎಂದರು. ಇದನ್ನೂ ಓದಿ: RSS ಸಂವಿಧಾನ ವಿರೋಧಿ ಸಂಸ್ಥೆ, ಯಾವತ್ತೂ ಅವರು ಸಂವಿಧಾನ ಗೌರವಿಸಿಲ್ಲ- ಸಿದ್ದು ಸಿಡಿಮಿಡಿ

    12ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ಸುಡುವ ಪ್ರಯತ್ನವನ್ನು ದುಷ್ಟ ಶಕ್ತಿಗಳು ಮಾಡಿದ್ದವು. ಆಗ ಚೌಡಯ್ಯನವರು ಅವುಗಳನ್ನು ದೋಣಿಯಲ್ಲಿಟ್ಟುಕೊಂಡು ವಚನಗಳನ್ನು ದಡಕ್ಕೆ ಸೇರಿಸಿದರು. ಹೀಗಾಗಿ ವಚನಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರು ಕಾರಣರಾಗಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಗ್ಗೆ ಸರ್ಕಾರಕ್ಕೆ, ಸಿಎಂಗೆ ಬದ್ಧತೆಯಿಲ್ಲ: ಡಿ.ಕೆ.ಶಿವಕುಮಾರ್

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಗ್ಗೆ ಸರ್ಕಾರಕ್ಕೆ, ಸಿಎಂಗೆ ಬದ್ಧತೆಯಿಲ್ಲ: ಡಿ.ಕೆ.ಶಿವಕುಮಾರ್

    ರಾಯಚೂರು: ಜನ ಬಿಜೆಪಿ (BJP) ಸರ್ಕಾರವನ್ನು ಕಿತ್ತುಹಾಕಬೇಕು ಎನ್ನುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ (SC-ST Reservation) ಹೆಚ್ಚಳಕ್ಕೆ ಮುಂದಾಗಿದ್ದಾರೆ. ಈಗಲೂ ಹಾವು ಸಾಯಬಾರದು ಕೋಲು ಮುರಿಬಾರದು ಎಂಬುವಂತಹ ಪ್ರಯತ್ನ ಮಾಡಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

    ರಾಯಚೂರಿನ ಗಿಲ್ಲೆಸುಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ನ್ಯಾ.ನಾಗಮೋಹನ್ ದಾಸ ವರದಿ ಬಂದು ಮೂರು ವರ್ಷ ಬಳಿಕ ಈಗ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದಾರೆ. ಮೊದಲು ಮುಖ್ಯಮಂತ್ರಿಗಳು ಎಲ್ಲಾ ಕೆಲಸ ಬಿಟ್ಟು ದೆಹಲಿಗೆ ಹೋಗಿ 9 ಶೆಡ್ಯೂಲ್ ಕೊಡಬೇಕೋ ಇಲ್ಲ ಅಂದರೆ ಏನು ಮಾಡಬೇಕೋ ಅದನ್ನು ಮಾಡಲು ಮುಂದಾಗಲಿ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಂತ ಹೇಳಿಕೊಳ್ಳುತ್ತದೆ, ಆದರೆ ಎರಡು ಇಂಜಿನ್‍ಗಳು ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬೇಡ; ವಿಶೇಷ ಅಧಿವೇಶನ ಕರೆಯಿರಿ – ಸಿದ್ದರಾಮಯ್ಯ

    ಬಿಜೆಪಿ ಸರ್ಕಾರಕ್ಕೆ ಸಿಎಂಗೆ ಎಸ್‍ಸಿ, ಎಸ್‍ಟಿ ಬಗ್ಗೆ ಬದ್ಧತೆಯಿಲ್ಲ. ಹಿಂದುಳಿದ ವರ್ಗ, ಬಡವರು, ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ಮೊದಲು ನುಡಿದಂತೆ ನೀವು ನಡೆಯಬೇಕು, ಇಲ್ಲದಿದ್ದರೆ ಕಾಂಗ್ರೆಸ್ ತನ್ನ ನಿರ್ಧಾರ ಏನು ಅಂತ ಹೇಳುತ್ತದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಎಸ್‍ಟಿ ಮೀಸಲಾತಿಯನ್ನು ಶೇ.6 ರಿಂದ ಶೇ.10ಕ್ಕೆ ಹೆಚ್ಚಿಸುತ್ತೇವೆ: ಕೆಸಿಆರ್

    ಎಸ್‍ಟಿ ಮೀಸಲಾತಿಯನ್ನು ಶೇ.6 ರಿಂದ ಶೇ.10ಕ್ಕೆ ಹೆಚ್ಚಿಸುತ್ತೇವೆ: ಕೆಸಿಆರ್

    ಹೈದರಾಬಾದ್: ತೆಲಂಗಾಣ (Telangana) ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) (Chief Minister K Chandrashekar Rao) ಅವರು ಪರಿಶಿಷ್ಟ ಪಂಗಡಗಳ(Scheduled Tribes) ಮೀಸಲಾತಿಯನ್ನು (Reservations)  ಶೇ. 4 ರಿಂದ ಶೇ. 10ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಾರದೊಳಗೆ ಈ ನೀತಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

    ಹೈದರಾಬಾದ್‍ನ ಎನ್‍ಟಿಆರ್ (NTR) ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಬುಡಕಟ್ಟು ಆತ್ಮೀಯ ಸಮ್ಮೇಳನ’ದಲ್ಲಿ (Tribal Athmiya Sammelanam) ಮಾತನಾಡಿದ ಅವರು, ನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ಎಲ್ಲಾ ಬುಡಕಟ್ಟು ಮತ್ತು ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಆದಿವಾಸಿಗಳು ಮತ್ತು ಆದಿವಾಸಿಗಳಿಗಾಗಿ ಹೈದರಾಬಾದ್ ನಗರದ ಹೃದಯಭಾಗದಲ್ಲಿರುವ ಬಂಜಾರಾ ಹಿಲ್ಸ್‌ನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕುಮ್ರಂ ಭೀಮ್ ಆದಿವಾಸಿ (Kumram Bheem Adivasi ) ಮತ್ತು ಸೇವಾಲಾಲ್ ಬಂಜಾರ (Sewalal Banjara Bhavans) ಭವನಗಳನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

    ನಂತರ ಎಸ್‍ಟಿ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ತೆಲಂಗಾಣ ವಿಧಾನಸಭೆಯಲ್ಲಿ (Telangana assembly) ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಇದನ್ನು ಪ್ರಧಾನಿ ಮೋದಿಯವರೇ (Prime Minister Modi), ನೀವೇಕೆ ಒಪ್ಪಿಕೊಳ್ಳುತ್ತಿಲ್ಲ? ನಾನು ನಿನ್ನನ್ನು ಕೈಮುಗಿದು ಕೇಳುತ್ತಿದ್ದೇನೆ. ನಮ್ಮ ಬುಡಕಟ್ಟು ಮಸೂದೆಯನ್ನು (Tribal Bill) ಅಂಗೀಕರಿಸಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿ. ರಾಷ್ಟ್ರಪತಿಯೂ ಆದಿವಾಸಿಗಳ ಮಗಳು. ಆದ್ದರಿಂದ ಈ ಮಸೂದೆಯನ್ನು ಅವರು ಕಡೆಗಣಿಸುವುದಿಲ್ಲ ಎಂದರು. ಇದನ್ನೂ ಓದಿ: ಮೈಸೂರು ಜಿಲ್ಲೆ ಶಾಲೆಗಳಿಗೆ ಸೆ.26 ರಿಂದ ಅ.9ರವರೆಗೂ ದಸರಾ ರಜೆ ಘೋಷಣೆ

    ಬುಡಕಟ್ಟು ಜನಾಂಗದ ಸಮಸ್ಯೆಗಳ ಬಗ್ಗೆ ಮಾತನಾಡುವ ಅನೇಕ ಬುಡಕಟ್ಟು ಕಾರ್ಮಿಕರು (Tribal Workers), ಬುದ್ಧಿಜೀವಿಗಳು, ಕವಿಗಳು ಮತ್ತು ಬರಹಗಾರರಾಗಿದ್ದಾರೆ. 58 ವರ್ಷಗಳಿಂದ ತೆಲಂಗಾಣಕ್ಕಾಗಿ ಜಾತಿ, ಧರ್ಮ ರಹಿತ ಹೋರಾಟ ನಡೆಸಿ ಪ್ರತ್ಯೇಕ ರಾಜ್ಯವನ್ನು ಪಡೆದಿದ್ದೇವೆ. ಹಿಂದಿನ ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆಯು ಶೇ. 6 ರಷ್ಟಿತ್ತು ಮತ್ತು ಬುಡಕಟ್ಟು ಜಾತಿಯು ಕೇವಲ ಶೇ. 5 ಮೀಸಲಾತಿಯನ್ನು ಪಡೆದಿದೆ. ಆದರೆ ತೆಲಂಗಾಣದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಅವರ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕಾನೂನಾತ್ಮಕ ಸಹಕಾರ: ಪ್ರಹ್ಲಾದ್ ಜೋಶಿ

    ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕಾನೂನಾತ್ಮಕ ಸಹಕಾರ: ಪ್ರಹ್ಲಾದ್ ಜೋಶಿ

    ಬೆಂಗಳೂರು: ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಸಹಕಾರ ನೀಡುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಕಳೆದ ಆರು ತಿಂಗಳುಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಜೋಶಿ, ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ರಕ್ತದೊತ್ತಡ, ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ – ಸುಧಾಕರ್ ಆತಂಕ

    ಶೇ.7.5 ಕ್ಕೆ ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸೇರಿದಂತೆ ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿಯವರು ಧರಣಿ ನಡೆಸುತ್ತಿದ್ದಾರೆ. ಶೇ.3 ರಷ್ಟು ಇರುವ ಎಸ್‌ಟಿ ಮೀಸಲಾತಿ ಹೆಚ್ಚಳ ಕುರಿತಂತೆ ಕಾನೂನಾತ್ಮಕವಾಗಿ ಸಹಕಾರ ನೀಡಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ವಾಮೀಜಿ ಅವರಿಗೆ ಭರವಸೆ ನೀಡಿದ್ದಾರೆ.

    ಸ್ವಾಮೀಜಿಯವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಜೋಶಿ, ಪ್ರಸನ್ನಾನಂದ ಸ್ವಾಮೀಜಿ ಅವರ ಬೇಡಿಕೆಗಳನ್ನ ಆಲಿಸಿದರು. ನಾಗಮೋಹನ್ ದಾಸ್ ವರದಿ ಜಾರಿ ಕುರಿತ ಸ್ವಾಮೀಜಿ ಅವರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸಚಿವರು, ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಸ್ವಾಮೀಜಿಯವರಿಗೆ ತಿಳಿಸಿದರು. ಇದನ್ನೂ ಓದಿ: ಮೊಟ್ಟೆ ಹೊಡೆದ ಸಂಪತ್ ಕಾಂಗ್ರೆಸ್‌ನವನಲ್ಲ – ಪಕ್ಕಾ RSS ಕಾರ್ಯಕರ್ತ: ಸಿದ್ದರಾಮಯ್ಯ

    ಎಸ್‌ಟಿ ಮೀಸಲಾತಿ ಶೇ.3 ರಿಂದ ಶೇ.7.5 ರಷ್ಟು ಹೆಚ್ಚಿಸಲು ಕೆಲವು ಕಾನೂನಿನ ತೊಡಕಗಳು ಎದುರಾಗಲಿವೆ. ಕಾನೂನಿನ ಅಡ್ಡಿಗಳನ್ನ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಪ್ರಹ್ಲಾದ್ ಜೋಶಿ ಹೇಳಿದರು. ಧರಣಿ ಕೈ ಬಿಡುವಂತೆ ಪ್ರಸನ್ನಾನಂದ ಸ್ವಾಮೀಜಿ ಅವರಲ್ಲಿ ಈ ವೇಳೆ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ

    ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ

    ಬೆಂಗಳೂರು: ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ಸಂಬಂಧ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಶೇ.7.5 ಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂಬುದು ಎಸ್‌ಟಿ ಸಮುದಾಯವರ ಬೇಡಿಕೆಯಾಗಿದೆ. ಅವರ ಜನಸಂಖ್ಯೆಯೂ ಹೆಚ್ಚಾಗಿದೆ. ಹಿಂದಿನ ಸರ್ಕಾರ ಈ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಿತಿ ವರದಿ ಸಲ್ಲಿಸಿದೆ. ವರದಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಶಿಫಾರಸು ಮಾಡಲಾಗಿದೆ. ಅದರಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ: ಸಿಎಂ

    ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ವರದಿ, ಮಹಾರಾಷ್ಟ್ರದ ಜಯಶ್ರೀ ಪಾಟೀಲ್ ಪ್ರಕರಣ, ಇಂದಿರಾ ಸಹಾನಿ ಪ್ರಕರಣಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ನ್ಯಾಯಮೂರ್ತಿ ಸುಭಾಷ್ ಅಡಿ ಅವರಿಂದಲೂ ಮಧ್ಯಂತರ ವರದಿ ಪಡೆದು ಈ ಜನಾಂಗಕ್ಕೆ ಮೀಸಲಾತಿ ಹೆಚ್ಚು ಮಾಡುವ ಮೂಲಕ ನ್ಯಾಯವನ್ನು ಕೊಡಬೇಕೆಂಬ ತೀರ್ಮಾನವಾಗಿದೆ ಎಂದು ಹೇಳಿದರು.

    ಮೀಸಲಾತಿ ಕೊಡುವುದಾದರೆ ಸಂವಿಧಾನಾತ್ಮಕವಾಗಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ನೀಡಬೇಕು. ಆ ನಿಟ್ಟಿನಲ್ಲಿ ಕೂಡಲೇ ಅಡ್ವೊಕೇಟ್ ಜನರಲ್ ಅವರಿಗೆ ಮೂರೂ ವರದಿಗಳ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಅದನ್ನು ಸರ್ವ ಪಕ್ಷಗಳ ಸಭೆಯಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದರು. ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

    2ಎ ವರ್ಗಕ್ಕೆ ಸೇರಿರುವ ಕುರುಬ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂಬ ಬೇಡಿಕೆ ಇದೆ. ಕೆಲವರು 3ಬಿ ನಲ್ಲಿರುವವರು 2ಎ ವರ್ಗಕ್ಕೆ ಸೇರಬೇಕು, 3ಬಿನಲ್ಲಿ ಇಲ್ಲದವರು, 3ಬಿ ವರ್ಗಕ್ಕೆ ಸೇರಬೇಕು ಎಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ನಾವು ಮುಂದುವರಿಯಬೇಕು. ಮೂಲಭೂತವಾಗಿ ಶೇ.50 ದಾಟಬೇಕೋ, ದಾಟಿದರೆ ಕಾನೂನಿನ ರೀತಿ ಹೇಗೆ ಮಾಡಬೇಕು ಎನ್ನುವ ವಿಚಾರವಿದೆ. ಮೊದಲು ನಾಗಮೋಹನ್ ದಾಸ್ ವರದಿ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಆದಷ್ಟು ಶೀಘ್ರವಾಗಿ ನ್ಯಾಯಮೂರ್ತಿ ಸುಭಾಷ್ ಅಡಿಯವರ ವರದಿಯನ್ನು ಪಡೆದು, ನಂತರ ಸರ್ವಪಕ್ಷ ಸಭೆಯ ಮುಂದಿಡಲಾಗುವುದು. ನಂತರ ವಿಧಾನಸಭೆಯಲ್ಲಿ ಮಂಡಿಸಿ ನ್ಯಾಯ ಒದಗಿಸುವ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

    ಇಂದಿನ ಸಭೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ನ್ಯಾಯ ಒದಗಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

  • ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

    ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮೀಸಲಾತಿ ವಿಚಾರವಾಗಿ ಆಡಳಿತ ಪಕ್ಷದ ಶಾಸಕರಿಂದಲೇ ಗಟ್ಟಿ ಧ್ವನಿ ಮೊಳಗಿತು. ಪಂಚಮಸಾಲಿ ಮೀಸಲಾತಿಗಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ, ಎಸ್‍ಟಿ ಮೀಸಲಾತಿ ವಿಚಾರವಾಗಿ ಶಾಸಕ ರಾಜೂಗೌಡ ಆಕ್ರೋಶ ಹೊರಹಾಕಿದ್ರು. ಈ ನಡುವೆ ಯಾದವ-ಕಾಡುಗೊಲ್ಲ ಮೀಸಲಾತಿ ವಿಚಾರವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಧ್ವನಿ ಎತ್ತಿದ್ರು. ಆಡಳಿತ ಪಕ್ಷದ ಶಾಸಕರಿಂದಲೇ ಸರ್ಕಾರಕ್ಕೆ ಸಂಕಟ ಶುರುವಾಗಿದೆ.

    ಶೂನ್ಯವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹಿಂದೆ ಯಡಿಯೂರಪ್ಪ ಅವರು ಸೆಪ್ಟೆಂಬರ್ ಒಳಗೆ ಮೀಸಲಾತಿ ವಿಚಾರ ಬಗೆಹರಿಸುವುದಾಗಿ ಹೇಳಿದರು. ಈಗಾಗಲೇ ಸೆಪ್ಟೆಂಬರ್ ಡೆಡ್ ಲೈನ್ ಮುಗಿದಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರ ಕೊಡಬೇಕು. ಎಸ್ ಟಿ ಮೀಸಲಾತಿಯೂ ಇದೆ, ಪಂಚಮಸಾಲಿ ಮೀಸಲಾತಿಯೂ ಇದೆ. ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು.

    ಅಲ್ಲದೆ ಸಿಎಂ ಉತ್ತರ ಕೊಡಬೇಕು ಅಂತಾ ಸದನದ ಬಾವಿಗಿಳಿದು ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಧರಣಿ ನಡೆಸಿದರು. ಇದೇ ವೇಳೆ ಎಸ್. ಟಿ.ಮೀಸಲಾತಿ ಬಗ್ಗೆ ಸ್ಪಷ್ಟನೆ ಕೊಡಿ ಅಂತಾ ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ಧರಣಿ ನಡೆಸಿದರು. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ, ಸಿಎಂ ಉತ್ತರ ಕೊಡಬೇಕು ಅಂತಿದ್ದಾರೆ. ಸಿ.ಸಿ.ಪಾಟೀಲ್ ಉತ್ತರ ಕೊಡಲು ಸಿದ್ಧರಿದ್ದಾರೆ. ಸಿಎಂ ಉತ್ತರ ಕೊಡಬೇಕು ಅಂದ್ರೆ ಅವರು ಬರುವ ತನಕ ಕಾಯಬೇಕು. ಹೀಗೆ ಧರಣಿ ಮಾಡಿ ಸದನದ ಸಮಯ ವ್ಯರ್ಥ ಮಾಡಬೇಡಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು. ಬಳಿಕ ಸ್ಪೀಕರ್ ಸೂಚನೆ ಮೇರೆಗೆ ಮೂವರು ಶಾಸಕರು ಧರಣಿ ವಾಪಸ್ ಪಡೆದರು.

    ಇದೇ ವೇಳೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಬಿಜೆಪಿ ಶಾಸಕ ರಾಜೂ ಗೌಡ ಸದನದಲ್ಲಿ ಅಸಮಾಧಾನ ಹೊರಹಾಕಿದರು. ರಮೇಶ್ ಕುಮಾರ್ ಅವರಿಗೆ ಅವಕಾಶ ಕೊಡ್ತೀರಿ, ನಮಗೆ ಮಾತಾಡಲು ಕೊಡಲ್ಲ ಎಂದ ರಾಜೂಗೌಡ ಬೆಂಬಲಕ್ಕೆ ಶಾಸಕ ಅರವಿಂದ ಲಿಂಬಾವಳಿ ನಿಂತರು. ಈ ವೇಳೆ ಸಿಟ್ಟಾದ ಸ್ಪೀಕರ್, ಇದೇನು ಹೀಗೆ ಮಾತಾಡ್ತೀರಿ, ಇದು ಸದನ, ಲಾಂಜ್ ನಲ್ಲಿ ಮಾತಾಡುವ ರೀತಿ ಮಾತನಾಡಬೇಡಿ ಅಂತ ಗರಂ ಆದರು. ಬಳಿಕ ರಾಜೂಗೌಡ ಕ್ಷಮೆ ಕೇಳಿ ನಮ್ಮ ರಕ್ಷಣೆಗೆ ನೀವು ನಿಲ್ಲಬೇಕು ಅಂತಾ ಮನವಿ ಮಾಡಿದರು. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬರೋದು ಗೊತ್ತಿದೆ. ರಾಮನನ್ನ ಬೆಳಕಿಗೆ ತಂದ ವಾಲ್ಮೀಕಿ ಜನಾಂಗದ ಬಗ್ಗೆ ಏಕೆ ಇಷ್ಟು ನಿರ್ಲಕ್ಷ್ಯ. 7.5%ರಷ್ಟು ಮೀಸಲಾತಿ ಕೊಡಬೇಕು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಶಿಫಾರಸಿನಂತೆ ಅನುಷ್ಠಾನ ಮಾಡಬೇಕು ಅಂತಾ ಆಗ್ರಹಿಸಿದ್ರು. ಆಗ ಎಲ್ಲ ಮೀಸಲಾತಿ ವಿಚಾರದ ಬಗ್ಗೆ ನಾಳೆ ಮುಖ್ಯಮಂತ್ರಿ ಉತ್ತರ ಕೊಡ್ತಾರೆ ಎಂದು ಸ್ಪೀಕರ್ ಸಮಾಧಾನಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    ಇದೆಲ್ಲದೆ ನಡುವೆ ಆಡಳಿತ ಪಕ್ಷದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲ ಮೀಸಲಾತಿ ಸಂಬಂಧ ಚರ್ಚೆಗೆ ನಮಗೂ ಅವಕಾಶ ಕೊಡಿ ಅಂತಾ ಆಗ್ರಹಿಸಿದರು. ನಿಯಮ 69ರಡಿ ಚರ್ಚೆಗೆ ಹಾಕಿದ್ದೀರಿ, ಆಗ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ರು. ಒಟ್ಟಾರೆ ಮೀಸಲಾತಿ ಸಂಬಂಧ ಆಡಳಿತ ಪಕ್ಷದ ಶಾಸಕರೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಕೊಡುವ ಉತ್ತರ ಕುತೂಹಲ ಮೂಡಿಸಿದೆ.

  • ಕಾಡುಗೊಲ್ಲರಿಗೆ ಎಸ್‍ಟಿ ಮೀಸಲಾತಿ ಆಗ್ರಹಿಸಿ ಉರುಳುಸೇವೆ

    ಕಾಡುಗೊಲ್ಲರಿಗೆ ಎಸ್‍ಟಿ ಮೀಸಲಾತಿ ಆಗ್ರಹಿಸಿ ಉರುಳುಸೇವೆ

    ಚಿತ್ರದುರ್ಗ: ಕಾಡುಗೊಲ್ಲ ಜನಾಂಗವನ್ನು ಎಸ್‍ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದಿಂದ ಸೋಮವಾರ ನಗರದಲ್ಲಿ ಉರುಳು ಸೇವೆ ಮಾಡಿ ಅಪರ ಜಿಲ್ಲಾಧಿಕಾರಿ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿಗೆ ಮನವಿ ಸಲ್ಲಿಸಲಾಯಿತು.

    ಬೆಂಕಿಯಂತ ಬಿಸಿಲನ್ನು ಲೆಕ್ಕಿಸದೇ ಚಿತ್ರದುರ್ಗದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ಮೂಲಕ ಆಗಮಿಸಿದ ಕಾಡುಗೊಲ್ಲರು ಬಡುಕಟ್ಟು ಸಂಸ್ಕೃತಿಯುಳ್ಳ ನಮ್ಮನ್ನು ಎಸ್.ಟಿ.ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿದರು. ಅಲ್ಲದೇ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

    ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವದ ಗೊಲ್ಲರ ಸಾಂಪ್ರದಾಯಿಕ ಉಡುಪಾದ ಶಳ್ಳಾಣ ಹಾಕಿಕೊಂಡು ಉರಳುಸೇವೆ ಮಾಡಿದರೆ, ಇನ್ನು ಕೆಲವರು ಬಿಳಿ ಬಣ್ಣದ ಪ್ಯಾಂಟು, ಶರ್ಟುಗಳನ್ನು ಹಾಕಿಕೊಂಡು ಸಿಮೆಂಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಿದರು. ಜೊತೆಗೆ ಕೆಲವರು ಪ್ಯಾಂಟ್ ಬನಿಯನ್, ಲುಂಗಿ ಬನಿಯನ್‍ಗಳನ್ನು ತೊಟ್ಟು, ತಲೆಗೆ ಟವಲ್ ಸುತ್ತಿ ಉರುಳು ಸೇವೆ ಮಾಡುತ್ತಿದ್ದರು. ಅವರೊಂದಿಗೆ ನಿಂತು ನೋಡುತ್ತಿದ್ದವರು ಜೈಜುಂಜಪ್ಪ ಎನ್ನುವ ಘೋಷಣೆಗಳನ್ನು ಕೂಗುತ್ತ ಉರುಳು ಸೇವೆಯಲ್ಲಿ ತೊಡಗಿದ್ದವರನ್ನು ಹುರಿದುಂಬಿಸುತ್ತಿದ್ದರು.

    ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾಡುಗೊಲ್ಲರು ಡಿ.ಸಿ.ಕಚೇರಿ ಆವರಣದೊಳಗೆ ಹೋಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಡ್ಡವಿಟ್ಟು ತಡೆದರು. ಆಗ ಕೆಲ ಕಾಲ ಪೊಲೀಸರೊಂದಿಗೆ ಮಾತಿನ ವಾಗ್ವಾದ ನಡೆಸಿ ಬ್ಯಾರಿಕೇಡ್‍ಗಳನ್ನು ತಳ್ಳುವಷ್ಟರಲ್ಲಿ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಾಗ ಯಾವುದೇ ಕಾರಣಕ್ಕೂ ನಿಮಗೆ ಮನವಿ ಕೊಡುವುದಿಲ್ಲ. ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಲಿ ಎಂದು ಪಟ್ಟುಹಿಡಿದಾಗ ಅಪರ ಜಿಲ್ಲಾಧಿಕಾರಿ ಹಿಂದಕ್ಕೆ ತೆರಳಿದರು. ನಂತರ ಸುಡುವ ಬಿಸಿಲಿಗೆ ಹೈರಾಣಾದ ಪ್ರತಿಭಟನಾಕಾರರು ಪುನಃ ಅಪರ ಜಿಲ್ಲಾಧಿಕಾರಿಯವರನ್ನೇ ಕರೆಸಿಕೊಂಡು ಮನವಿ ಸಲ್ಲಿಸಿದರು.

    ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಮಾತನಾಡಿ ಆಚಾರ, ವಿಚಾರ, ನಡೆ, ನುಡಿ ಎಲ್ಲವು ಬುಡಕಟ್ಟು ಸಂಸ್ಕೃತಿಯುಳ್ಳವರಾಗಿರುವ ನಾವುಗಳು ಸಮಾಜದ ಮುಖ್ಯ ವಾಹಿನಿಯಿಂದ ತುಂಬಾ ದೂರವಿದ್ದೇವೆ. ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಇನ್ನೂ ಕೇಂದ್ರ ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮೀನಾಮೇಷ ಎಣಿಸುತ್ತಿದೆ. ಇದು ನಮ್ಮ ಆರಂಭಿಕ ಹೋರಾಟ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಮೂಲಕ ವಿಧಾನಸೌದಕ್ಕೆ ಮುತ್ತಿಗೆ ಹಾಕಲಾಗುವುದರ ಜೊತೆಗೆ ಸಿಎಂ ಯಡಿಯೂರಪ್ಪ ಬದಲಾವಣೆಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿ ಆರೇಳು ವರ್ಷಗಳಾಗಿದ್ದರೂ ಕೇಂದ್ರ ನಮ್ಮ ಕಡತವನ್ನು ಇನ್ನು ಕೈಗೆತ್ತಿಕೊಂಡಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸದಿದ್ದರೆ ಸಂಸತ್ ಭವನದ ಮುಂದೆ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಕೊಟ್ಟ ಮಾತಿಗೆ ತಪ್ಪುವವರಲ್ಲ ಕಾಡುಗೊಲ್ಲರು ಎಂದು ಕೇಂದ್ರಕ್ಕೆ ಬೆದರಿಕೆ ಹಾಕಿದರು.

    ಮುಂದಿನ ದಿನಗಳಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಅಗತ್ಯ ಬಿದ್ದರೆ ಸಂಸತ್ ಭವನದ ಮುಂದೆಯೂ ಹೋರಾಡಲು ಸಿದ್ದರಿರಬೇಕೆಂದು ಕಾಡುಗೊಲ್ಲರನ್ನು ಜಾಗೃತಿಗೊಳಿಸಿದರು. ಉರುಳು ಸೇವೆಯಲ್ಲಿ ಸಮುದಾಯದ ಮುಖಂಡರಾದ ಭರಮಸಾಗರದ ರಾಜಪ್ಪ ,ಕೂನಿಕೆರೆ ರಾಮಣ್ಣ, ಸಂಪತ್, ನಾಗಣ್ಣ, ಪ್ರೇಮ, ಹರ್ಷವರ್ಧನ್, ಚಿತ್ತಯ್ಯ, ರಾಜ್‍ಕುಮಾರ್, ಮಹೇಶ್, ವೆಂಕಟೇಶ್‍ಯಾದವ್, ಜಗದೀಶ್, ರಮೇಶ್, ಶಿವಣ್ಣ, ರಾಜಣ್ಣ, ತಿಮ್ಮಯ್ಯ, ನ್ಯಾಯವಾದಿಗಳಾದ ಪಿ.ಆರ್.ವೀರೇಶ್, ಸಿ.ತಿಮ್ಮಣ್ಣ, ಎಸ್.ಪ್ರಕಾಶ್, ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.

  • ಬೆಂಗಳೂರಲ್ಲಿಂದು ಕುರುಬ ಸಮುದಾಯ ಬಲ ಪ್ರದರ್ಶನ – ಎಸ್‍ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ

    ಬೆಂಗಳೂರಲ್ಲಿಂದು ಕುರುಬ ಸಮುದಾಯ ಬಲ ಪ್ರದರ್ಶನ – ಎಸ್‍ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ

    ಬೆಂಗಳೂರು: ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಕುರುಬ ಸಮುದಾಯದ ಎಸ್‍ಟಿ ಮೀಸಲು ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಕಳೆದ 20 ದಿನಗಳಿಂದ ನಡೆದ ಪಾದಯಾತ್ರೆಯ ಅಂತಿಮ ಹಂತವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಮೂಲಕ ರಾಜಕೀಯ ಸಂದೇಶ ರವಾನೆಗೂ ವೇದಿಕೆ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶ ಕುರುಬ ಸಮುದಾಯದ ಹಕ್ಕೊತ್ತಾಯಕ್ಕೆ ಸಾಕ್ಷಿ ಆಗಲಿದೆ.

    ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ವೀರಶೈವ ಲಿಂಗಾಯತರ ಮೀಸಲಾತಿ ಹೋರಾಟದ ಜೊತೆ ಜೊತೆಗೆ ಎಸ್‍ಟಿ ಮೀಸಲಾತಿ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕುರುಬ ಸಮುದಾಯ ಬೃಹತ್ ಸಮಾವೇಶ ನಡೆಸ್ತಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದು, ಕುರುಬ ಸಮುದಾಯದ ಸಚಿವರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಮೀಸಲಾತಿ ಹಕ್ಕೋತ್ತಾಯದ ಜೊತೆಗೆ ಕುರುಬ ಸಮುದಾಯದ ಬಲಪ್ರದರ್ಶನ ನಡೆಯಲಿದೆ.

    ಬೆಂಗಳೂರಿನಲ್ಲಿ ನಡೆಯುವ ಕುರುಬರ ಸಮಾವೇಶ ಇತಿಹಾಸ ಪುಟದಲ್ಲಿ ಸೇರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

    ಕುರುಬ ಸಮಾವೇಶ ಸಮುದಾಯದ ಹಕ್ಕೊತ್ತಾಯವಾಗಿದ್ದರೂ, ತೆರೆಮರೆಯಲ್ಲಿ ಕುರುಬ ಸಮುದಾಯದ ನಾಯಕತ್ವಕ್ಕಾಗಿ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಫೈಟ್ ಅಂತಲೆ ಬಿಂಬಿತವಾಗಿದೆ. ಎಸ್‍ಟಿ ಮೀಸಲಾತಿಗೆ ಸಹಮತ ಇದ್ದರು ಇದುವರೆಗೆ ಸಿದ್ದರಾಮಯ್ಯ ಎಲ್ಲೂ ಸಹ ಬಹಿರಂಗವಾಗಿ ಹೋರಾಟದಲ್ಲಿ ಭಾಗವಹಿಸಿಲ್ಲ. ಈಶ್ವರಪ್ಪರನ್ನ ಆರ್‍ಎಸ್‍ಎಸ್ ಮುಂದೆ ಬಿಟ್ಟು ತಮ್ಮ ಬಲ ತಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ತಮ್ಮ ಅಸಮಧಾನವನ್ನು ಹೊರ ಹಾಕಿದ್ರು. ಅಲ್ಲದೆ ಹೋರಾಟದ ನೇತೃತ್ವ ವಹಿಸಿದ್ದ ಈಶ್ವರಪ್ಪಗೆ ತಮ್ಮದೇ ಸರ್ಕಾರದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಬೇಕಾದ ಸವಾಲು ಎದುರಾಗಿದೆ.

    ಇಬ್ಬರು ನಾಯಕರ ಜಿದ್ದಾಜಿದ್ದಿನ ಹೊರತಾಗಿಯು ಕುರುಬ ಸಮುದಾಯದ ಎಸ್‍ಟಿ ಹೋರಾಟ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವದ ಬೆಳವಣಿಗೆಗೆ ವೇದಿಕೆಯಾಗುವ ಸಾಧ್ಯತೆ ಇದೆ.

  • ಮುಖ್ಯಮಂತ್ರಿಗಳು ಥಟ್ ಅಂತ ಮೀಸಲಾತಿ ಘೋಷಣೆ ಮಾಡಲು ಆಗಲ್ಲ: ಈಶ್ವರಪ್ಪ

    ಮುಖ್ಯಮಂತ್ರಿಗಳು ಥಟ್ ಅಂತ ಮೀಸಲಾತಿ ಘೋಷಣೆ ಮಾಡಲು ಆಗಲ್ಲ: ಈಶ್ವರಪ್ಪ

    – ಕುರುಬರಿಗೆ ಎಸ್‍ಟಿ ಮೀಸಲಾತಿ ಸಿಕ್ಕ ನಂತರವೇ ಹೋರಾಟ ಅಂತ್ಯ

    ನೆಲಮಂಗಲ: ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಥಟ್ ಅಂತ ಎಸ್‍ಟಿ ಘೋಷಣೆ ಮಾಡಲು ಬರುವುದಿಲ್ಲ ಎಂದು ಹೇಳುವ ಮೂಲಕ ಸದನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

    ಫೆಬ್ರವರಿ 7 ರಂದು ಕುರುಬರ ಸಮಾವೇಶ ಹಿನ್ನಲೆ ಸಿದ್ಧತೆ ಬಗ್ಗೆ ಸಚಿವ ಈಶ್ವರಪ್ಪ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಥಟ್ ಅಂತ ಎಸ್‍ಟಿ ಘೋಷಣೆ ಮಾಡಲು ಬರುವುದಿಲ್ಲ. ಎಸ್‍ಟಿ, ಎಸ್‍ಸಿ ಮಾಡುವೆ ಎಂದು ಯಾವ ಮುಖ್ಯಮಂತ್ರಿಯೂ, ಯಾವ ಸಮಾಜಕ್ಕೂ ಹೇಳಲು ಬರುವುದಿಲ್ಲ. ಕುಲಶಾಸ್ತ್ರ ಹಾಗೂ ಜನಜಾಗೃತಿಯ ಜೊತೆ ದಾಖಲೆಗಳು ನೀಡುವ ಮೂಲಕ ಎಸ್‍ಟಿ ಅವಕಾಶ ಸಾಧ್ಯ ಎಂದರು.

    ಹಿಂದೂ ಸಮಾಜದಲ್ಲಿ ಕುರುಬರಿಗೆ ಎಸ್‍ಟಿ ಸಿಕ್ಕರೆ ನ್ಯಾಯ ಸಿಕ್ಕಹಾಗೆ. ಈ ಹೋರಾಟ ಸ್ವಾಮೀಜಿಗಳಿಂದ ಆರಂಭವಾಗಿದೆ, ಎಸ್‍ಟಿ ಸಿಕ್ಕ ನಂತರವೇ ಅಂತ್ಯವಾಗಲಿದೆ. ಈ ಹೋರಾಟದಲ್ಲಿ 60 ಲಕ್ಷ ಕುರುಬರು ಒಟ್ಟಾಗಿ ಇರಲಿದ್ದೇವೆ. ವ್ಯವಸ್ಥಿತವಾಗಿ ಸಂವಿಧಾನ ಬದ್ಧವಾಗಿ ಎಸ್‍ಟಿ ಪಡೆಯುವ ವಿಶ್ವಾಸವಿದೆ. ಕುರುಬರ ಶಕ್ತಿ ಪ್ರದರ್ಶನ ಅಥವಾ ಒಗ್ಗಟ್ಟು ಎಂದುಕೊಳ್ಳಬಹುದು. ಒಟ್ಟಾಗಿ ಸೇರಿಸುವ ಪ್ರಯತ್ನ ಯಾರೂ ಮಾಡಿರಲಿಲ್ಲ. ಈಗ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಮೂರು ಪಟ್ಟು ಶಕ್ತಿ ಪ್ರದರ್ಶನವಾಗಲಿದೆ ಎಂದರು.

    ಫೆಬ್ರವರಿ 7 ರಂದು ಕುರುಬರ ಸಮಾವೇಶ ಹಿನ್ನಲೆ, ಸಿದ್ದತೆ ಬಗ್ಗೆ ಸಚಿವ ಈಶ್ವರಪ್ಪ ಸಮಾವೇಶದ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರದ ಬಿಐಇಸಿ ಮೈದಾನದಲ್ಲಿ ಸಿದ್ಧತೆ ಬಗ್ಗೆ ವೀಕ್ಷಣೆ ನಡೆಸಿದರು. ಸುಮಾರು ಲಕ್ಷಕ್ಕೂ ಮಂದಿ ಸಮುದಾಯದ ಜನರು ಸೇರುವ ಹಿನ್ನಲೆಯಲ್ಲಿ, ಇಂದೇ ತಯಾರಿಯ ಸಿದ್ಧತೆ ವೀಕ್ಷಣೆ ಮಾಡಿದರು.

    ಸಮಾವೇಶಕ್ಕೆ 1.50 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕು ಲಕ್ಷ ಜನರಿಗೆ ಊಟದ ವ್ಯವಸ್ಥೆ ಜೊತೆಗೆ, ರಾಜ್ಯ ಹಾಗೂ ಹೊರ ರಾಜ್ಯದ ಮುಖಂಡರು ಸಮುದಾಯದ ಜನರು ಭಾಗಿ ಯಾಗಲಿದ್ದಾರೆ. ಬರುವ ಜನರಿಗೆ ಬಿಐಇಸಿ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.