Tag: SSP

  • ದರ್ಶನ್ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ದರ್ಶನ್ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಬೆಂಗಳೂರು: ನಟ ದರ್ಶನ್ (Actor Darshan) ಕೊಲೆ ಕೇಸ್‌ನಲ್ಲಿ ಎಸ್‌ಪಿಪಿ (SPP) ಬದಲಾವಣೆ ಪ್ರಸ್ತಾಪ ನನ್ನ ಮುಂದೆ ಬಂದಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೂ ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

    ದರ್ಶನ್ ಕೊಲೆ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಪಿಪಿ ಬದಲಾವಣೆ ಆಗೋ ವಿಷಯ ನನಗೆ ಗೊತ್ತಿಲ್ಲ. ಆದರೆ ಮಾಧ್ಯಮಗಳಲ್ಲಿ ಸಿಎಂ ಮೇಲೆ ಒತ್ತಡ ಹಾಕಿದ್ದಾರೆ ಎಂದು ಬರುತ್ತಿದೆ. ನನ್ನ ಮೇಲೆ ಒತ್ತಡ ಹಾಕಿದ್ದಾರೆ ಎಂಬುದು ಸುಳ್ಳು. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಯಾವ ಮಂತ್ರಿಯೂ ಒತ್ತಡ ಹಾಕಿಲ್ಲ. ಯಾವ ಶಾಸಕರೂ ಒತ್ತಡ ಹಾಕಿಲ್ಲ. ಇವೆಲ್ಲಾ ಸತ್ಯಕ್ಕೆ ದೂರವಾದದ್ದು. ಎಸ್‌ಪಿಪಿ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಹೋಟೆಲ್‌ನಲ್ಲಿ ನಡೆದಿತ್ತಾ ಸ್ಕೆಚ್‌? – ಇಡೀ ಪ್ಲಾನ್ ಮಾಸ್ಟರ್ ಮೈಂಡ್‌ ಯಾರು?

    ಸಿದ್ದರಾಮಯ್ಯ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಎಸ್‌ಪಿಪಿ ಬದಲಾವಣೆ ಮಾಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಅನ್ನೋದು ಸುಳ್ಳು. ವಿಪಕ್ಷಗಳು ಹೇಳೋದೆಲ್ಲಾ ಸತ್ಯನಾ? ಯಾವ ಮಿನಿಸ್ಟರ್‌ಗಳು ಕೂಡಾ ದರ್ಶನ್ ವಿಷಯಕ್ಕೆ ನನ್ನನ್ನು ಭೇಟಿಯಾಗಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೂ ನಾನು ಕೇಳಲ್ಲ. ಕಾನೂನು ಏನು ಇರುತ್ತದೆಯೋ ಅದೇ ನಾನು ಮಾಡೋದು ಹೇಳಿದರು. ಇದನ್ನೂ ಓದಿ: ಹತ್ಯೆಯಾದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾ ಸಂಸತ್ತು ಮೌನಾಚರಿಸಿ ಗೌರವ – ಭಾರತ ಕೆಂಡಾಮಂಡಲ!

    ದರ್ಶನ್ ಕೇಸ್‌ನಲ್ಲಿ ಪೊಲೀಸರಿಗೆ ಎಲ್ಲಾ ಸ್ವಾತಂತ್ರ‍್ಯ ಕೊಟ್ಟಿದ್ದೇವೆ. ಅವರಿಗೆ ಕಾನೂನು ಪ್ರಕಾರ ಮಾಡಿ ಅಂತ ಹೇಳಿದ್ದೇವೆ. ಎಸ್‌ಪಿಪಿ ಬದಲಾವಣೆ ಮಾಡೋ ಪ್ರಸ್ತಾವನೆ ನನ್ನ ಮುಂದೆ ಇಲ್ಲ ಎಂದರು. ಇದನ್ನೂ ಓದಿ: ಐ ವಾಂಟ್ ಟು ಡೆವೆಲಪ್ ಚನ್ನಪಟ್ಟಣ: ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಡಿಕೆಶಿ ಪರೋಕ್ಷ ಸುಳಿವು

  • ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ

    ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ

    ನವದೆಹಲಿ: ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಉಂಟಾದ ಭದ್ರತಾ ವೈಫಲ್ಯಕ್ಕೆ ಫಿರೋಜ್‍ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ನೇರ ಕಾರಣ. ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‍ಗೆ ಸಮಿತಿ ವರದಿ ಸಲ್ಲಿಸಿದೆ.

    ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ವಿಶೇಷ ಸಮಿತಿಯೂ ತನ್ನ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠಕ್ಕೆ ಸಲ್ಲಿಸಿದೆ. ವರದಿಯಲ್ಲಿ ಪೊಲೀಸ್ ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

    ವರದಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಫಿರೋಜ್‍ಪುರ ಎಸ್‍ಎಸ್‍ಪಿ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಾಕಷ್ಟು ಬಲ ಲಭ್ಯವಿದ್ದರೂ ಅವರು ಭದ್ರತೆ ನೀಡುವಲ್ಲಿ, ಪ್ರತಿಭಟನೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮಾರ್ಗದ ಬಗ್ಗೆ 2 ಗಂಟೆಗಳ ಮೊದಲು ಅವರಿಗೆ ತಿಳಿಸಲಾಗಿದ್ದರೂ ಅವರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಉಲ್ಲೇಖಿಸಿದೆ.

    ವರದಿಯನ್ನು ಗಣನೆಗೆ ತೆಗೆದುಕೊಂಡಿದ್ದು, ಸಮಿತಿಯು ಪ್ರಧಾನಿಯ ಭದ್ರತೆಯನ್ನು ಬಲಪಡಿಸಲು ಕೆಲವು ಪರಿಹಾರ ಕ್ರಮಗಳನ್ನು ಸೂಚಿಸಿದ್ದು, ನಾವು ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಸಿಜೆಐ ರಮಣ ವಿಚಾರಣೆ ವೇಳೆ ಹೇಳಿದರು. ಸಮಿತಿಯ ವರದಿಯ ಪರಿಷ್ಕೃತ ಪ್ರತಿಯನ್ನು ನೀಡುವಂತೆ ಕೇಳಿದ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಲು ಪೀಠ ನಿರಾಕರಿಸಿತು. ಇದನ್ನೂ ಓದಿ: 5 ಫೋನ್‌ಗಳಲ್ಲಿ ಮಾಲ್‍ವೇರ್‌ಗಳು ಕಂಡು ಬಂದಿದೆ, ನಿರ್ದಿಷ್ಟವಾಗಿ ಪೆಗಾಸಸ್ ಎನ್ನಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್‍ಗೆ ತಜ್ಞರ ವರದಿ

    ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ಉಂಟಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ನ್ಯಾಯಾಲಯ ಮೇಲುಸ್ತುವಾರಿಯಲ್ಲಿ ವಿಶೇಷ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್‍ಗೆ ಸಹಕರಿಸಲು ಮತ್ತು ಪಂಜಾಬ್ ಪೊಲೀಸ್ ಮತ್ತು ವಿಶೇಷ ರಕ್ಷಣೆ (SPG) ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ಅಧಿಕಾರಿಗಳಿಗೆ ಅಗತ್ಯ ನೆರವು ನೀಡುವಂತೆ ಪೀಠವು ನಿರ್ದೇಶನ ನೀಡಿತು.

    Live Tv
    [brid partner=56869869 player=32851 video=960834 autoplay=true]