Tag: SSLC Result

  • ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

    ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

    ದಾವಣಗೆರೆ: ಬ್ಲಡ್‌ ಕ್ಯಾನ್ಸರ್‌ನಿಂದ ಬಳಲಿದ್ದ ನಗರದ (Davanagere) ನಿಟ್ಟುವಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ಎಸ್ಎಲ್‌ಸಿ (SSLC Result) ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು, ಇಡೀ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದಾಳೆ.

    ವಿದ್ಯಾರ್ಥಿನಿ ಶಾಂತ ನಿಟ್ಟುವಳ್ಳಿಯ ನಿವಾಸಿಯಾಗಿದ್ದು, 9 ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾಗಿತ್ತು. ತಂದೆ ಗಾರೆ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ‌ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಮಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಾರ್ವಜನಿಕರು ಹಾಗೂ ಶಿಕ್ಷಕರ ಸಹಕಾರದಿಂದ 13 ಲಕ್ಷ ರೂ. ಖರ್ಚು ಮಾಡಿ ಗುಣಮಖ ಮಾಡಿದ್ದರು. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

    ಆರೋಗ್ಯ ಸಮಸ್ಯೆ ಇದ್ದರೂ ಓದಿನ ಕಡೆಗೆ ಸಾಕಷ್ಟು ಗಮನಹರಿಸಿದ್ದ ವಿದ್ಯಾರ್ಥಿನಿ, ಓದಿನಲ್ಲಿ ಬಹಳ ಮುಂದಿದ್ದಳು. ಏನಾದರೂ ಗೊಂದಲ ಇದ್ದರೆ ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಳು. ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕು ಎಂಬ ಪಣ ತೊಟ್ಟಿದ್ದ ಶಾಂತ, ಆರೋಗ್ಯದ ಸಮಸ್ಯೆಯನ್ನು ಲೆಕ್ಕಿಸದೇ ಓದಿ 94% ಪಡೆದುಕೊಂಡಿದ್ದಾಳೆ.

    ಒಂದು ವರ್ಷ ಶಾಲೆಗೆ ಗೈರಾಗಿ ಕಾಯಿಲೆಯಿಂದ ಗುಣಮುಖಳಾಗಿ ಈ ಸಾಧನೆ ಮಾಡಿದ್ದು, ಗ್ರಾಮಸ್ಥರು ಹಾಗೂ ಜಿಲ್ಲೆಯ ಜನ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ | ಆಟೋಗೆ KSRTC ಬಸ್ ಡಿಕ್ಕಿ – ಮೂವರು ಸಾವು

  • SSLC Results – ದಕ್ಷಿಣ ಕನ್ನಡ ಫಸ್ಟ್‌, ಕಲಬುರಗಿ ಲಾಸ್ಟ್‌ : ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

    SSLC Results – ದಕ್ಷಿಣ ಕನ್ನಡ ಫಸ್ಟ್‌, ಕಲಬುರಗಿ ಲಾಸ್ಟ್‌ : ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

    ಬೆಂಗಳೂರು: 2024-25ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result) ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ (Udupi) ದ್ವಿತೀಯ ಸ್ಥಾನ ಹಾಗೂ ಕಲಬುರಗಿ (Kalaburagi) ಜಿಲ್ಲೆಯು ಕೊನೆ ಸ್ಥಾನ ಪಡೆದುಕೊಂಡಿದೆ.

    22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 91.12% ಪಡೆದುಕೊಳ್ಳುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಯು 89.96% ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದೆ. ಇದನ್ನೂ ಓದಿ: SSLC ಫಲಿತಾಂಶ ಪ್ರಕಟ; ಶೇ.62.34 ರಿಸಲ್ಟ್‌ – ಈ ಬಾರಿಯೂ ಬಾಲಕಿಯರೇ ಮೇಲುಗೈ

    83.19% ಪಡೆದುಕೊಂಡ ಉತ್ತರ ಕನ್ನಡ ಮೂರನೇ ಸ್ಥಾನ, 82.29% ಪಡೆದುಕೊಂಡ ಶಿವಮೊಗ್ಗ ನಾಲ್ಕನೇ ಸ್ಥಾನ, ಕೊಡಗು 82.21% ಪಡೆದುಕೊಂಡು ಐದನೇ ಸ್ಥಾನದಲ್ಲಿದೆ. ಇನ್ನು ಹಾಸನ 82.12%, ಶಿರಸಿ 80.47%,  ಚಿಕ್ಕಮಗಳೂರು 77.9%, ಬೆಂಗಳೂರು ಗ್ರಾಮಾಂತರ 74.02%, ಬೆಂಗಳೂರು ದಕ್ಷಿಣ 72.3% ಪಡೆದುಕೊಂಡು ಟಾಪ್‌ 10ನಲ್ಲಿದೆ. 42.43% ಪಡೆದುಕೊಂಡ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

  • ಜಾತಿ ಜನಗಣತಿ ವರದಿ ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ: ಪ್ರದೀಪ್ ಈಶ್ವರ್

    ಜಾತಿ ಜನಗಣತಿ ವರದಿ ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ: ಪ್ರದೀಪ್ ಈಶ್ವರ್

    – SSLC ಫಲಿತಾಂಶ ಹೆಚ್ಚಿಸಲು ಟೆಸ್ಟ್ ಸಿರೀಸ್‌ ಸ್ಕೀಂ ಚಾಲನೆಗೆ ಮುಂದಾದ ಶಾಸಕ

    ಚಿಕ್ಕಬಳ್ಳಾಪುರ: ಜಾತಿ ಜನಗಣತಿ ವರದಿ (Caste Census Report) ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಲಿಜ ಸಮುದಾಯದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವನು. ಜಾತಿ ಜನಗಣತಿ ವರದಿಯಿಂದ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ

    ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯನವರ ಬಳಿ ನನ್ನ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಒಳಿತಾಗಲಿದೆ. ನನ್ನ ಸಮುದಾಯದ ಪರವಾಗಿ ಕೇಳೋದು ನನ್ನ ಧರ್ಮ ಕರ್ತವ್ಯ. ಹಾಗಂತ ವರದಿ ಜಾರಿ ಮಾಡಲೇಬೇಕು ಅಂತ ನಾನು ಆದೇಶ ಮಾಡೋಕಾಗುತ್ತಾ? ಮುಂದಿನ ಬಾರಿ ಎಂಎಲ್‍ಎ ಆಗೋವಷ್ಟರಲ್ಲಿ 2ಎ ಮೀಸಲಾತಿ ಜಾರಿ ಆಗುವಂತೆ ಮಾಡ್ತೀನಿ. ಇದು ನನ್ನ ಸಮುದಾಯಕ್ಕೆ ಇದು ನಾನು ಕೊಡುವ ಭರವಸೆ ಎಂದು ಹೇಳಿದ್ದಾರೆ.

    ಟೆಸ್ಟ್ ಸಿರೀಸ್‌ ಸ್ಕೀಂ ಚಾಲನೆಗೆ ಮುಂದಾದ ಶಾಸಕ:
    ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ ಶಿಫ್ ಸ್ಕೀಂ ಘೋಷಣೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC ಫಲಿತಾಂಶ ಹೆಚ್ಚಳ ಮಾಡಲು ಎಂಎಲ್‍ಎ ಪ್ರದೀಪ್ ಈಶ್ವರ್ ಟೆಸ್ಟ್ ಸೀರೀಸ್ ಎಂಬ ಮತ್ತೊಂದು ಹೊಸ ಕಾರ್ಯಕ್ರಮ ಚಾಲನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ

    ಕ್ಷೇತ್ರದ 24 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಎಲ್ಲಾ ಪ್ರೌಢಶಾಲೆಗಳ 3,000ಕ್ಕೂ ಹೆಚ್ಚು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 48 ದಿನವೂ ನಿತ್ಯ ಘಟಕ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ತಿಂಗಳ ನವೆಂಬರ್ 04 ರಿಂದ ಡಿಸೆಂಬರ್ 31ರ ವರೆಗೆ ಈ ಘಟಕ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನವೂ ಆಯಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಆದ್ರೆ ಈ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಪ್ರಶ್ನೆ ಪತ್ರಿಕೆಯ ಜೊತೆಗೆ ಅದರ ಕೆಳಗಡೆಯೇ ಉತ್ತರ ಬರೆಯಲು ಬೇಕಾಗುವಷ್ಟು ಖಾಲಿ ಜಾಗ ಇರುವಂತಹ ಪತ್ರಿಕೆಯನ್ನ ಶಾಸಕ ಪ್ರದೀಪ್ ಈಶ್ವರ್ ತಮ್ಮ ವೈಯುಕ್ತಿಕ ಹಣದಲ್ಲಿ ತಯಾರಿಸಲಿದ್ದಾರೆ.

    ಪ್ರತಿದಿನವೂ ಶಾಲೆಗೆ ಪ್ರಶ್ನೆಪತ್ರಿಕೆಗಳನ್ನ ತಲುಪಸಿ ಪರೀಕ್ಷೆ ನಡೆಸಲಾಗುವುದು, ಆಯಾ ದಿನವೇ ಉತ್ತರ ಪತ್ರಿಕೆಗಳನ್ನ ಡಿಡಿಪಿಐ ಕಚೇರಿಗೆ ತಲುಪಿಸಿ ಬೇರೊಂದು ಶಾಲೆಯ ಶಿಕ್ಷಕರು ಅದರ ಮೌಲ್ಯಮಾಪನ ಮಾಡಲಿದ್ದು ವಾರದ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ರೀತಿ 48 ದಿನ ಇದುವರೆಗೂ ನಡೆದಿರುವ ಪಠ್ಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಈ ಹೊಸ ಕಾರ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ತಯಾರಿಕೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು ನನ್ನ ಸ್ವಂತ ಹಣ ಭರಿಸಲಾಗುತ್ತಿದೆ ಅಂತ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.

    ಹೀಗಾಗಿ ಈ ಕಾರ್ಯಕ್ರಮ ಚಾಲನೆ ಮಾಡುವ ಸಲುವಾಗಿ ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಿಕ್ಷಕರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.

  • ಒಟ್ಟಿಗೆ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ ತಾಯಿ, ಮಗ!

    ಒಟ್ಟಿಗೆ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ ತಾಯಿ, ಮಗ!

    ಹಾಸನ: ಇಲ್ಲಿನ ಸಕಲೇಶಪುರದಲ್ಲಿ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆ ಬರೆದಿದ್ದ ತಾಯಿ ಹಾಗೂ ಮಗ ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

    ಸಕಲೇಶಪುರ (Sakaleshpur) ತಾಲ್ಲೂಕಿನ ಚಿನ್ನಳ್ಳಿ ಗ್ರಾಮದ ಜ್ಯೋತಿ.ಪಿ.ಆರ್ (38) ಎರಡನೇ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಅವರ ಮಗ ನಿತಿನ್.ಸಿ.ಬಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದ. ಇದೀಗ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಾಯಿ ಹಾಗೂ ಮಗ ಇಬ್ಬರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

    ಜ್ಯೋತಿಯವರು 250 ಅಂಕ ಪಡೆದು ತೇರ್ಗಡೆಯಾಗಿದ್ದು, ಅವರ ಪುತ್ರ 582 ಅಂಕ ಪಡೆದಿದ್ದಾನೆ.

  • SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ

    SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ

    – ಕೊನೆ ಸ್ಥಾನದಲ್ಲಿ ಯಾದಗಿರಿ
    – ಗ್ರಾಮೀಣ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

    ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC Result) ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, 73.40 % ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

    ಕರ್ನಾಟಕ (Karnataka) ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ

    ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ಪಾಸ್‌ ಆಗಿದ್ದಾರೆ.

    94% ಫಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನದಲ್ಲಿದೆ. 92.12% ನೊಂದಿಗೆ ದಕ್ಷಿಣ ಕನ್ನಡ ಹಾಗೂ 88.67% ನೊಂದಿಗೆ ಶಿವಮೊಗ್ಗ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಯಾದಗಿರಿ ಯಾದಗಿರಿ – 50.59% ನೊಂದಿಗೆ ಕೊನೆ ಸ್ಥಾನದಲ್ಲಿದೆ. ಇದನ್ನೂ ಓದಿ: ಇಂದು SSLC ಫಲಿತಾಂಶ ಪ್ರಕಟ

    ಫಲಿತಾಂಶದಲ್ಲಿ ಕುಸಿತ
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಹೀಗಾಗಿ ಫಲಿತಾಂಶದಲ್ಲಿ ಕುಸಿತ ಕಂಡಿದೆ. 2022-23ನೇ ಸಾಲಿನಲ್ಲಿ 83.89% ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ ಈ ಬಾರಿ 73.40% ಫಲಿತಾಂಶ ಬಂದಿದೆ.

    100% ಫಲಿತಾಂಶ ವಿವರ
    ಸರ್ಕಾರಿ – 785
    ಅನುದಾನ – 206
    ಖಾಸಗಿ ಶಾಲೆ – 1297
    ಒಟ್ಟು – 2288

    ಶೂನ್ಯ ಸಾಧನೆ ಶಾಲೆಗಳು
    ಸರ್ಕಾರಿ – 3
    ಅನುದಾನ – 13
    ಖಾಸಗಿ – 62
    ಒಟ್ಟು – 78

  • SSLC Result – 4 ವಿದ್ಯಾರ್ಥಿಗಳಿಗೆ 625ಕ್ಕೆ 625

    SSLC Result – 4 ವಿದ್ಯಾರ್ಥಿಗಳಿಗೆ 625ಕ್ಕೆ 625

    ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ಫಲಿತಾಂಶ ಕಡಿಮೆಯಾಗಿದೆ. ಎಂದಿನಂತೆ ಬಾಲಕಿಯರು, ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, 4 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಟಾಪರ್ ಆಗಿದ್ದಾರೆ.

    ಈ ಬಾರಿ 4 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ. ಭೂಮಿಕಾ ಪೈ- ಬೆಂಗಳೂರಿನ ನ್ಯೂ ಮೆಕಾಲ ಇಂಗ್ಲೀಷ್ ಸ್ಕೂಲ್ ಹೊಸೂರು ರಸ್ತೆ, ಯಶಸ್ ಗೌಡ – ಬಾಲಗಂಗಾಧರನಾಥ ಹೈಸ್ಕೂಲ್ ಚಿಕ್ಕಬಳ್ಳಾಪುರ, ಅನುಪನಾ ಶ್ರೀಶೈಲ ಹಿರೇಹೋಳಿ- ಕುಮಾರೇಶ್ವರ ಶಾಲೆ ಸವದತ್ತಿ, ಭೀಮನಗೌಡ ಹನುಮಂತಗೌಡ ಪಾಟೀಲ್ – ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ, ಮುದ್ದೇಬಿಹಾಳ ಪ್ರಥಮ ಸ್ಥಾನ ಪಡೆದಿದ್ದಾರೆ.

    ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ 83.89% ಫಲಿತಾಂಶ ಬಂದಿದ್ದು, ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಕೆ ಮಾಡಿದ್ರೆ 1.24% ಫಲಿತಾಂಶ ಕಡಿಮೆ ಬಂದಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದು, ಗ್ರಾಮೀಣ ಭಾಗದ‌ ಮಕ್ಕಳು ನಗರ ಭಾಗದ ಮಕ್ಕಳಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ.

    ಈ ಬಾರಿ 835102 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 700619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 83.89 ರಷ್ಟು ಫಲಿತಾಂಶ ಬಂದಿದೆ. 4,25,968 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 3,41,108 ಬಾಲಕರು ತೇರ್ಗಡೆಯಾಗಿದ್ದಾರೆ ಶೇ. 80.08 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 4,09,134 ಬಾಲಕಿಯರು ಪರೀಕ್ಷೆ ಬರೆದಿದ್ದು 3,59,511 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇ. 87.87ರಷ್ಟು ಫಲಿತಾಂಶ ಬಂದಿದೆ.

    ನಗರ ಪ್ರದೇಶದಲ್ಲಿ 3,51,392 ವಿದ್ಯಾರ್ಥಿಗಳಲ್ಲಿ 2,79,773 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.79.62 ರ ಫಲಿತಾಂಶ ಪಡೆದರೆ, ಗ್ರಾಮೀಣ ಭಾಗದಲ್ಲಿ 4,83,710 ವಿದ್ಯಾರ್ಥಿಗಳಲ್ಲಿ 4,20,846 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.87 ರಷ್ಟು ಫಲಿತಾಂಶ ಪಡೆದಿದ್ದಾರೆ. ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. 1,517 ಸರ್ಕಾರಿ ಶಾಲೆ ಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ.

    ಅನುದಾನಿತ ಶಾಲೆಗಳಲ್ಲಿ 482 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, 11 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದೆ. ಅನುದಾನರಹಿತ ದಲ್ಲಿ 1824 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, 23 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ. ಒಟ್ಟು 3,823 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, 34 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ. ಕನ್ನಡದಲ್ಲಿ 14,983 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 9,754, ಹಿಂದಿಯಲ್ಲಿ 16,170, ಗಣಿತ 2,132, ವಿಜ್ಞಾನ 983 ಹಾಗು ಸಮಾಜ ವಿಜ್ಞಾನದಲ್ಲಿ 8,311 ವಿದ್ಯಾರ್ಥಿಗಳು ಶೇ.100 ಅಂಕ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: SSLC ಫಲಿತಾಂಶ ಪ್ರಕಟ – ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ

    ಈ ವರ್ಷ 10% ಅಂಕಗಳನ್ನು 3 ವಿಷಯಗಳಿಗೆ ಗ್ರೇಸ್ ರೂಪದಲ್ಲಿ ನೀಡಲಾಗಿದ್ದು, 59,246 ವಿದ್ಯಾರ್ಥಿಗಳು ಗ್ರೇಸ್ ಅಂಕ ಪಡೆದು ಪಾಸ್ ಆಗಿದ್ದಾರೆ. ಪೂರಕ ಪರೀಕ್ಷೆಗೆ ಮುಂದಿನ ವಾರ ವೇಳಾಪಟ್ಟಿ ಪ್ರಕಟ ಮಾಡಲಾಗುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

    ಫೋಟೋ ಕಾಪಿ ಪಡೆಯಲು ಕೊನೆ ದಿನ ಮೇ 14ಕ್ಕೆ ನಿಗದಿ ಮಾಡಲಾಗಿದೆ. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಕೊನೆ ದಿನ ಮೇ 21 ಹಾಗೂ ಪೂರಕ ಪರೀಕ್ಷೆಗೆ ನೋಂದಣಿಗೆ ಕೊನೆ ದಿನ ಮೇ 15ಕ್ಕೆ ನಿಗದಿ ಮಾಡಲಾಗಿದೆ.  ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ

  • SSLC ಫಲಿತಾಂಶ ಪ್ರಕಟ – ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ

    SSLC ಫಲಿತಾಂಶ ಪ್ರಕಟ – ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ

    – ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ
    – 4 ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌
    – ಯಾದಗಿರಿ ಕೊನೆಯ ಸ್ಥಾನ

    ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ (Result) ಪ್ರಕಟಗೊಳಿಸಿದ್ದು ಈ ಬಾರಿ 83.89 % ಫಲಿತಾಂಶ ಸಾಧಿಸಿದೆ.

    2023ರ ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆದಿದ್ದವು. ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಶಾಲೆ- 86.74%, ಅನುದಾನ ಶಾಲೆ- 85.64%, ಖಾಸಗಿ – 90.89% ಫಲಿತಾಂಶ ಸಾಧಿಸಿದೆ. 4 ಜನ ವಿದ್ಯಾರ್ಥಿಗಳು 625 ಅಂಕಗಳಿಸಿದ್ದಾರೆ.

    ಗ್ರಾಮೀಣ ಮತ್ತು ಸರ್ಕಾರ ಶಾಲಾ ಮಕ್ಕಳ ಉತ್ತನ ಸಾಧನೆ ಮಾಡಿದ್ದು, ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98%) ಪಾಸ್ ಆಗಿದ್ದಾರೆ. ಈ ಬಾರಿ ಮೊದಲ ಸ್ಥಾನವನ್ನು ಚಿತ್ರದುರ್ಗ (96.80%) ಹಾಗೂ ದ್ವಿತೀಯ ಸ್ಥಾನವನ್ನು ಮಂಡ್ಯ (96.74%), ತೃತೀಯ ಸ್ಥಾನವನ್ನು ಹಾಸನ (96.68%) ಜಿಲ್ಲೆ ಪಡೆದುಕೊಂಡಿದೆ. ಇನ್ನೂ ಕೊನೆ ಸ್ಥಾ‌ನದಲ್ಲಿ ಯಾದಗಿರಿ (75.49%) ಜಿಲ್ಲೆಯಿದೆ. ಇದನ್ನೂ ಓದಿ: ಬ್ರಿಜ್‌ಭೂಷಣ್‌ ಬಂಧನಕ್ಕೆ ಮೇ 21 ಗಡುವು ನೀಡಿದ ಕುಸ್ತಿಪಟುಗಳು

    ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್‌ನ ಯಶಸ್ ಗೌಡ , ಸವದತ್ತಿಯ ಕುಮಾರೇಶ್ವರ್ ಹೈಸ್ಕೂಲ್‌ನ ಅನುಪಮ ಶ್ರೀಶೈಲ್ ಹಿರೇಹೋಳಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲಿಷ್ ಹೈಸ್ಕೂಲ್‌ನ ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್ ಮೊದಲ ಸ್ಥಾನವನ್ನು ಪಡೆದಿದ್ದಾರೆ.

    ಫೋಟೋ ‌ಕಾಪಿ ಪಡೆಯಲು ಮೇ 14 ಕೊನೆ ದಿನವಾಗಿದ್ದು, ಮರು ಮೌಲ್ಯಮಾಪನ, ಮರು ಎಣಿಕೆಗೆ ಮೇ 21 ಕೊನೆ ದಿನವಾಗಿದೆ. ಇನ್ನೂ ಪೂರಕ ಪರೀಕ್ಷೆಗೆ ನೋಂದಣಿಗೆ ಮೇ 15 ಕೊನೆ ದಿನವಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್‍  karresults.nic.in  ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವೀಕ್ಷಿಸಬಹುದು. ಇದನ್ನೂ ಓದಿ: ಸಾಮಾನ್ಯ ನಾಗರಿಕನಂತೆ BMTC ಬಸ್‍ನಲ್ಲಿ ರಾಹುಲ್ ಗಾಂಧಿ ಸಂಚಾರ

  • ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ

    ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ (SSLC Result) ಇಂದು ಪ್ರಕಟವಾಗಲಿದ್ದು, ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಹತ್ವದ ಸುದ್ದಿಗೋಷ್ಟಿ ಕರೆದಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಫಲಿತಾಂಶ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ರಾಜ್ಯದ 8 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಿಡುಗಡೆ ಆಗಲಿದೆ. ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್‍  karresults.nic.in  ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಕೈಗೊಳ್ಳಲಾಗಿದ್ದು ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಬಂದ ಉತ್ತರ ಪತ್ರಿಕೆಗಳನ್ನು ತಿದ್ದಲು 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

     

  • 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    `ಡ್ರಾಮಾ ಜ್ಯೂನಿಯರ್ಸ್’ ಮತ್ತು ಗಟ್ಟಿಮೇಳ ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿನಲ್ಲಿ ಶೇ.99 ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಕುರಿತಯ ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ `ಗಟ್ಟಿಮೇಳ’ ಸೀರಿಯಲ್ ಜತೆ ಶಿಕ್ಷಣವನ್ನ ಕೂಡ ನಿಭಾಯಿಸುತ್ತಾ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ ಬರೋಬ್ಬರಿ 619 ಮಾರ್ಕ್ಸ್ಗಳನ್ನು ನಟಿ ಮಹತಿ ಗಳಿಸಿದ್ದಾರೆ. ಈ ಮೂಲಕ ಅವರ ಫಲಿತಾಂಶ ಶೇ.99.04 ಆಗಿದೆ. ಇದು ಅವರಿಗೆ ಅವರ ಕುಟುಂಬಕ್ಕೆ ಖುಷಿ ನೀಡಿದೆ.

    ಗಟ್ಟಿಮೇಳ ನಟಿ ಮಹತಿ ಯಾವ ವಿಷಯಕ್ಕೆ ಎಷ್ಟು ಅಂಕ ಬಂದಿದೆ ಎಂಬ ವಿವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕನ್ನಡದಲ್ಲಿ 124, ಇಂಗ್ಲೀಷ್‌ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ರಾಜ್ಯಾದ್ಯಂತ 7ನೇ ಸ್ಥಾನ ಪಡೆದಿದ್ದಾರೆ. ಧಾರಾವಾಹಿ ಶೂಟಿಂಗ್ ಮಧ್ಯೆ ಉತ್ತಮ ಅಂಕ ಪಡೆದಿರೋದಕ್ಕೆ ಮಹತಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಹತಿ, ನೀವು ಇಲ್ಲದೇ ಇದು ಅಸಾಧ್ಯ ಎಂದು ತಮ್ಮ ಕುಟುಂಬ ಮತ್ತು ಶಿಕ್ಷಕರಿಗೆ ಹಾಗೆಯೇ `ಗಟ್ಟಿಮೇಳ’ ತಂಡಕ್ಕೂ ಮಹತಿ ಅಭಿನಂದನೆ ತಿಳಿಸಿದ್ದಾರೆ. ಅಭಿಮಾನಿಗಳ ಹಾರೈಕೆಗೂ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.