Tag: SSapta Sagaradacheyallo

  • ‘ಸಪ್ತ ಸಾಗರದಾಚೆ ಎಲ್ಲೋ’ ಟ್ರೈಲರ್ ರಿಲೀಸ್: ನಾನಾವತಾರದಲ್ಲಿ ಮನು

    ‘ಸಪ್ತ ಸಾಗರದಾಚೆ ಎಲ್ಲೋ’ ಟ್ರೈಲರ್ ರಿಲೀಸ್: ನಾನಾವತಾರದಲ್ಲಿ ಮನು

    ಕ್ಷಿತ್ ಶೆಟ್ಟಿ (Rakshit Shetty) ನಟಿಸಿ, ಹೇಮಂತ್ ರಾವ್ (Hemanth Rao) ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacheyallo) ಸೈಡ್ ಬಿ ಚಿತ್ರದ ಟ್ರೈಲರ್ (Trailer) ಇಂದು ರಿಲೀಸ್ ಆಗಿದೆ. ಕಥಾ ನಾಯಕ ಮನುವಿನ ಸಾಕಷ್ಟು ತಮುಲಗಳನ್ನು ಈ ಟ್ರೈಲರ್ ನಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ‘ಜೈಲಿಂದ ನೀ ಬರೋದನ್ನೆ ಕಾಯ್ತಿದ್ದೀನಿ.. ಮತ್ತೆ ಹಾಡೋಕೆ ಶುರು ಮಾಡ್ತೀನಿ’.. ‘ಮತ್ತೆ ಸಿಗೋದು ಬೇಡ ಆಯ್ತಾ’ ಎಂದು ನಾಯಕಿ ಹೇಳುವ ಮಾತುಗಳು ಸಿನಿಮಾದ ಕಥೆಯನ್ನು ಕುತೂಹಲದಿಂದ ನೋಡುವಂತೆ ಮಾಡುತ್ತವೆ.

    ಇಡೀ ಟ್ರೈಲರ್ ನಲ್ಲಿ ರಕ್ಷಿತ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ರುಕ್ಮಿಣಿ, ಚೈತ್ರಾ ಆಚಾರ್ಯ, ಗೋಪಾಲ ಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್ ಆಗಾಗ್ಗೆ ಝಲಕ್ ನಲ್ಲಿ ಬಂದು ಹೊಸ ರೀತಿಯ ಕೌತುಕಕ್ಕೆ ಕಾರಣವಾಗುತ್ತಾರೆ. ಟ್ರೈಲರ್ ಕಾನ್ಸೆಪ್ಟ್ ಸಖತ್ತಾಗಿದೆ. ಮನು ಏನಾಗುತ್ತಾನೆ ಎನ್ನುವ ಕ್ಯೂರಿಯಾಸಿಟಿ ಮೂಡಿಸುತ್ತದೆ. ರಕ್ಷಿತ್ ಅಭಿಮಾನಿಗಳಿಗಂತೂ ಟ್ರೈಲರ್ ಸಖತ್ ಹಿಡಿಸಲಿದೆ.

    ನವೆಂಬರ್ 17ಕ್ಕೆ ರಿಲೀಸ್

    ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಬೆನ್ನಲ್ಲೇ ‘ಬಿ ಪಾರ್ಟ್’ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ 17ಕ್ಕೆ ಗ್ರ್ಯಾಂಡ್ ಆಗಿ ಥಿಯೇಟರ್ ಗೆ ಎಂಟ್ರಿ ಕೊಡಲಿದ್ದಾರೆ ಮನು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನೋಡುಗರನ್ನು ಅಚ್ಚರಿ ಮೂಡಿಸಿದ್ದರಿಂದ,  ಒಳ್ಳೆಯ ಓಪನಿಂಗ್ ಪಡೆಯಲಿದೆ ಎಂದೇ ಹೇಳಬಹುದು.

    ಮೊದಲ ಭಾಗದಲ್ಲಿ ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು. ಪಾರ್ಟ್ ಬಿ ಎನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು. ಅಂದಾಹಾಗೆ ‘ಕವಲುದಾರಿ’ ಖ್ಯಾತಿಯ ಹೇಮಂತ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.