Tag: SS rajamouli

  • ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ

    ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ

    ಬೆಂಗಳೂರು: ಬಾಹುಬಲಿ 1 ಸಿನಿಮಾ ನೋಡಿದಾಗಿನಿಂದ ಜನ ಕೇಳುತ್ತಿದ್ದದ್ದು ಒಂದೇ ಪ್ರಶ್ನೆ. ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ಯಾಕೆ ಅಂತ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

    ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಕುಂತಲಾ ಸಾಮ್ರಾಜ್ಯದ ಯುವರಾಣಿ ದೇವಸೇನಳ ಪ್ರೀತಿಯ ಪಾಶದಲ್ಲಿ ಬಾಹುಬಲಿ ಸಿಕ್ಕಿಬಿದ್ದರೆ ಬಲ್ಲಾಳ ವ್ಯಾಮೋಹಿಯಾಗುತ್ತಾನೆ. ಈ ವಿಚಾರ ಅರಿತ ಶಿವಗಾಮಿ ತನ್ನ ಮಗ ಬಾಹುಬಲಿ ತನ್ನ ಮಾತು ಮೀರಲ್ಲ ಅಂತ ತಿಳಿದು ದೇವಸೇನಳ ಪ್ರೀತಿಯಿಂದ ಹೊರಬರುವಂತೆ ಹೇಳುತ್ತಾಳೆ. ಇದಕ್ಕೆ ತನಗೆ ಪಟ್ಟಾಭಿಷೇಕ ಇಲ್ಲದಿದ್ದರೂ ಸರಿಯೇ ದೇವಸೇನಳನ್ನ ಬಿಡೋದಿಲ್ಲ ಎಂಬ ಬಾಹುಬಲಿ ಮಾತಿನಿಂದ ಶಿವಗಾಮಿ ವ್ಯಾಘ್ರಳಾಗುತ್ತಾಳೆ. ಇದ್ರಿಂದ ಕುಪಿತವಾಗಿ ಬಾಹುಬಲಿಗೆ ಬದಲಾಗಿ ಬಲ್ಲಾಳನನ್ನು ಮಾಹಿಷ್ಮತಿಯ ಚಕ್ರಾಧಿಪತಿಯನ್ನಾಗಿ ಮಾಡುತ್ತಾಳೆ.

    ಆದ್ರೆ, ತಾನು ಅಪಾರ ನಂಬಿಕೆಯಿಟ್ಟಿದ್ದ ಮಗ ಬಾಹುಬಲಿ ನನ್ನ ಮಾತು ಮೀರಿದನಲ್ಲ ಎಂದು ಸೇಡಿಗೆ ಬೀಳುತ್ತಾಳೆ. ಕೊನೆಗೆ ಬಾಹುಬಲಿ-ಬಲ್ಲಾಳನ ಮಧ್ಯೆ ಆಂತರಿಕ ಯುದ್ಧ ಶುರುವಾದಾಗ ಕಟ್ಟಪ್ಪನ ಮೂಲಕ ಬಾಹುಬಲಿಯನ್ನ ಕೊಲ್ಲಿಸುತ್ತಾಳೆ. ಬಾಹುಬಲಿಯನ್ನ ಬೆನ್ನಿನಿಂದ ಕೊಂದ ಕಟ್ಟಪ್ಪ ಕೊನೆಗೆ ತಾನು ರಾಜಾಜ್ಞೆಯನ್ನ ಶಿರಸಾ ಪಾಲಿಸಿದ್ದಾಗಿ ಕಣ್ಣೀರಿಡುತ್ತಾನೆ.

    ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

  • ರಾಜ್ಯಾದ್ಯಂತ ಬಾಹುಬಲಿಯದ್ದೇ ಹವಾ -ರಾಜಮೌಳಿ ಮೇಕಿಂಗ್ ಗೆ ಫುಲ್ ಮಾರ್ಕ್ಸ್

    ರಾಜ್ಯಾದ್ಯಂತ ಬಾಹುಬಲಿಯದ್ದೇ ಹವಾ -ರಾಜಮೌಳಿ ಮೇಕಿಂಗ್ ಗೆ ಫುಲ್ ಮಾರ್ಕ್ಸ್

    ಬೆಂಗಳೂರು: ದೇಶದಾದ್ಯಂತ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಧ್ಯರಾತ್ರಿಯೇ ಬಾಹುಬಲಿ ದರ್ಶನವಾಗಿದೆ.

    ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿಗಳಲ್ಲಿ ಮಧ್ಯರಾತ್ರಿಯೇ ಪ್ರದರ್ಶನ ಕಂಡಿದ್ದು, ಜನ ಪ್ರತಿ ಸೀನ್‍ಗೂ ಶಿಳ್ಳೆ, ಚಪ್ಪಾಳೆ ಹೊಡೆದು ಹುಚ್ಚೆದ್ದು ಕುಣಿದಿದ್ದಾರೆ. ಬೆಂಗಳೂರಿನ ಜಾಲಹಳ್ಳಿ ಕ್ರಾಸ್‍ನಲ್ಲಿರೋ ರಾಕ್‍ಲೈನ್ ಮಾಲ್, ನಂದಿನಿ ಥಿಯೇಟರ್, ಮೈಸೂರಿನ ಡಿಆರ್‍ಸಿ ಮಲ್ಟಿಪ್ಲೆಕ್ಸ್, ಮಂಗಳೂರಿನ ಮಲ್ಟಿಪ್ಲೆಕ್ಸ್ ಗಳು, ಕಲಬುರಗಿ ಮತ್ತು ಬಳ್ಳಾರಿಯ ರಾಧಿಕಾ ಚಿತ್ರ ಮಂದಿರ ಹೌಸ್‍ಫುಲ್ ಪ್ರದರ್ಶನ ಕಂಡಿದೆ.

    ಬಾಹುಬಲಿ 1ಕ್ಕಿಂತ ಬಾಹುಬಲಿ 2ರಲ್ಲಿ ನಯನ ಮನೋಹರ ಗ್ರಾಫಿಕ್ಸ್, ವಿಷ್ಯುವಲ್ ಎಫೆಕ್ಟ್, ತಂತ್ರಜ್ಞಾನ, ಸಂಗೀತ ಮನ ಕಾಡ್ತಿದೆ ಅಂತ ಜನ ಹೇಳ್ತಿದ್ದಾರೆ.

    ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

  • ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಬೆಂಗಳೂರು: ಬಾಹುಬಲಿ-2 ಚಿತ್ರದ ಬಿಡುಗಡೆಗೆ ಶುಕ್ರವಾರದಂದು ದಿನಾಂಕ ನಿಗದಿಯಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಇಂದಿನಿಂದಲೇ ಬಾಹುಬಲಿ-2 ಪ್ರದರ್ಶನ ಕಾಣಲಿದೆ.

    ಇಂದು ರಾತ್ರಿ 9.45ರಿಂದಲೇ ಬಾಹುಬಲಿ-2 ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಇಂದು ಕಾಣುವ ಪ್ರದರ್ಶನದ ಟಿಕೆಟ್ ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರ. ಇಂದಿನ ಬಾಹುಬಲಿ ಸಿನಿಮಾಗೆ 1200 ರಿಂದ 1600 ತನಕ ಟಿಕೆಟ್ ದರ ನಿಗದಿ ಮಾಡಲಾಗಿದೆ.

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!

    ಇಂದಿನ 10 ಗಂಟೆಯ ವಿಶೇಷ ಪ್ರದರ್ಶನಕ್ಕೆ ಬೆಂಗಳೂರಿನ ಪಿವಿಆರ್ ಫೋರಂ ಗೋಲ್ಡ್ ಹಾಗೂ ಪಿವಿಆರ್ ವಿಆರ್ ಗೋಲ್ಡ್ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್‍ಗಳನ್ನು 1400 ರೂ. ಗೆ ಮಾರಾಟ ಮಾಡಲಾಗ್ತಿದೆ. ಈ ಎರಡೂ ಥಿಯೇಟರ್‍ಗಳಲ್ಲಿ ಪ್ಲಾಟಿನಂ ಸೂಪರ್‍ಗೆ 1400 ರೂ. ಹಾಗೂ ಪ್ಲಾಟಿನಂ ಕ್ಯಾಟಗರಿಗೆ 1200 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

    ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂ. ಮೀರುವಂತಿಲ್ಲ ಸರ್ಕಾರ ಬಜೆಟ್‍ನಲ್ಲಿ ಹೇಳಿದ್ದು, ಸಿಎಂ ಸಹಿ ಹಾಕಿರುವ ಆದೇಶ ಪತ್ರ ಬಂದರೆ ಇಂದಿನಿಂದಲೇ ಈ ದರ ಜಾರಿಯಾಗಲಿದೆ ಎಂದು ಬುಧವಾರ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದರು. ಆದರೆ ಈ ಆದೇಶ ಪತ್ರ ಇನ್ನು ವಾಣಿಜ್ಯ ಮಂಡಳಿಗೆ ಬಾರದೇ ಇದ್ದ ಕಾರಣ ಚಿತ್ರದ ಟೆಕೆಟ್ ಬೆಲೆ ಭಾರೀ ಏರಿಕೆಯಾಗಿದೆ.

    ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ

    ಕರ್ನಾಟಕದಲ್ಲಿ ಒಂದೊಂದು ಥಿಯೇಟರ್‍ಗಳಲ್ಲಿ ಬಾಹುಬಲಿ ಚಿತ್ರ ಬೇರೆ ಬೇರೆ ರೀತಿಯ ದರ ವಿಧಿಸಿದ್ದಕ್ಕೆ ಸಿನಿ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಮತ್ತು ಹೈದ್ರಾಬಾದ್‍ನಲ್ಲಿ ಮಾತ್ರ ಬಾಹುಬಲಿ-2 ಇಂದಿನ ಪ್ರದರ್ಶನ ಕಾಣುತ್ತಿದೆ. ಬೇರೆ ಯಾವುದೇ ರಾಜ್ಯದಲ್ಲಿಯೂ ಬಾಹುಬಲಿ-2 ಪ್ರದರ್ಶನ ಇವತ್ತು ಆಗುತ್ತಿಲ್ಲ. ಬೆಂಗಳೂರು ಹಾಗೂ ಮೈಸೂರಿನ ಸೂಮಾರು 20 ಮಾಲ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಬಾಹುಬಲಿ-2 ಆರ್ಭಟಿಸಲಿದೆ. ಇನ್ನು ಬೆಂಗಳೂರಿನ ಊರ್ವಶಿ ಥಿಯೇಟರ್‍ನಲ್ಲಿ ನಾಳೆ ಬೆಳಗ್ಗೆ 4 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಇನ್ನುಳಿದಂತೆ 7 ಗಂಟೆಗೆ ರಾಜ್ಯದೆಲ್ಲೆಡೆ ಚಿತ್ರ ಪ್ರದರ್ಶನವಾಗಲಿದೆ.

    https://twitter.com/am_vachanshetty/status/857492501988376576

    ಇದನ್ನೂ ಓದಿ: ಆನ್‍ಲೈನ್ ಬಾಹುಬಲಿ ಟಿಕೆಟ್ ಬುಕ್ಕಿಂಗ್ ಸ್ಕ್ಯಾಮ್: ವೆಬ್‍ಸೈಟ್‍ನಿಂದ ಅಭಿಮಾನಿಗಳ ಹಣ ಲೂಟಿ

                  

     

  • ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಚಿತ್ರದ ಮೇಲೆ ತೋರಿಸಬೇಡಿ: ಕನ್ನಡಿಗರಲ್ಲಿ ರಾಜಮೌಳಿ ಮನವಿ

    ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಚಿತ್ರದ ಮೇಲೆ ತೋರಿಸಬೇಡಿ: ಕನ್ನಡಿಗರಲ್ಲಿ ರಾಜಮೌಳಿ ಮನವಿ

    ಹೈದರಾಬಾದ್: ಸತ್ಯರಾಜ್ ಅವರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ಮೇಲಿನ ಸಿಟ್ಟನ್ನು ಬಾಹುಬಲಿ ಸಿನಿಮಾದ ಮೇಲೆ ತೋರಿಸುವುದು ಸರಿಯಲ್ಲ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಕರ್ನಾಟಕದ ಜನತೆಯಲ್ಲಿ ಕನ್ನಡದಲ್ಲಿ ಕೇಳಿಕೊಂಡಿದ್ದಾರೆ.

    ಬಾಹುಬಲಿ- ಬಿಡುಗಡೆಗೆ ಕನ್ನಡ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಸತ್ಯರಾಜ್ ಅವರು ಬಾಹುಬಲಿಯ ನಿರ್ದೇಶಕರು, ನಿರ್ಮಾಪಕರು ಅಲ್ಲ, ಅವರು ಒಬ್ಬರು ಕಲಾವಿದರು. ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ಈ ಹಿಂದೆ ಅವರು ಅಭಿನಯಿಸಿದ ಚಿತ್ರಗಳು ಬಿಡುಗಡೆಯಾಗಿದೆ. ಹೀಗಾಗಿ ಅವರ ಹೇಳಿಕೆಗೂ ಬಾಹುಬಲಿಗೂ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ ಎಂದು ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಬಾಹುಬಲಿ ಒಂದು ಬಿಡುಗಡೆಯಾದಾಗ ಹೇಗೆ ನಮ್ಮನ್ನು ಪ್ರೋತ್ಸಾಹಿಸಿದ್ದೀರೋ ಅದೇ ರೀತಿಯಾಗಿ ಈ ಬಾರಿಯೂ ನಮ್ಮನ್ನು ಪ್ರೋತ್ಸಾಹಿಸಿ. ಈ ವಿಚಾರದ ಬಗ್ಗೆ ನಾವು ಸತ್ಯರಾಜ್ ಅವರ ಬಳಿ ತಿಳಿಸಿದ್ದೇವೆ. ನಮಗೆ ಸಂಬಂಧ ಇಲ್ಲದ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ ಎಂದು ಅವರು ಕನ್ನಡಿಗರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    https://www.youtube.com/watch?v=6J4v5wDplP8

  • ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ -2 ಚಿತ್ರ ಟ್ರೇಲರ್ ಮೂಲಕವೇ ಈಗಾಗಲೇ ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರ ಮತ್ತೊಂದು ದಾಖಲೆ ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    250 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಬಾಹುಬಲಿ- 1 ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡು 600 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ವಿಶೇಷ ಅಂದ್ರೆ ಇದರಲ್ಲಿ ಚಿತ್ರದ ನಿರ್ಮಾಪಕರಿಗಿಂತ ವಿತರಕರೇ ಹೆಚ್ಚಿನ ದುಡ್ಡು ಮಾಡಿದ್ರು. ನಾರ್ತ್ ಅಮೆರಿಕದಲ್ಲಿ ಬಾಹುಬಲಿ-1 ಚಿತ್ರದ ವಿತರಕರು 4 ಮಿಲಿಯನ್ ಡಾಲರ್( ಅಂದಾಜು 26 ಕೋಟಿ ರೂ.)ಗೆ ಚಿತ್ರದ ರೈಟ್ಸ್ ಖರೀದಿಸಿದ್ದರು. ಆದ್ರೆ ಇದರಿಂದ ಅವರು ಗಳಿಸಿದ್ದು ಬರೋಬ್ಬರಿ 9 ಮಿಲಿಯನ್ ಡಾಲರ್(ಅಂದಾಜು 58 ಕೋಟಿ ರೂ.)

    ಇದೀಗ ಬಾಹುಬಲಿ-2 ಚಿತ್ರದ ನಾರ್ತ್ ಅಮೆರಿಕದ ರೈಟ್ಸ್ ಬೇರೊಬ್ಬ ವಿತರಕರ ಪಾಲಾಗಿದೆ. ಗ್ರೇಟ್ ಇಂಡಿಯನ್ ಫಿಲ್ಮ್ಸ್‍ನವರು 7 ಮಿಲಿಯನ್ ಡಾಲರ್(45 ಕೋಟಿ ರೂ.) ಕೊಟ್ಟು ಬಾಹುಬಲಿ-2 ಸಿನಿಮಾದ ರೈಟ್ಸ್ ಖರೀದಿಸಿದ್ದಾರೆ. ಇದರಿಂದ ಬರೋಬ್ಬರಿ 15 ಮಿಲಿಯನ್‍ಡಾಲರ್ (98 ಕೋಟಿ ರೂ.) ಗಳಿಸೋ ನಿರೀಕ್ಷೆಯಲ್ಲಿದ್ದು, ಹಿಂದಿನ ದಾಖಲೆಗಳನ್ನ ಮುರಿಯುವ ಎಲ್ಲಾ ಲಕ್ಷಣಗಳಿವೆ.

    ಈ ಹಿಂದೆ ಅಮೆರಿಕದಲ್ಲಿ ದಾಖಲೆಯ ಹಣ ಗಳಿಸಿದ ಭಾರತೀಯ ಚಿತ್ರವೆಂದರೆ ಆಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ. ದಂದಲ್ ಚಿತ್ರ ಬರೋಬ್ಬರಿ 80.4 ಕೋಟಿ ರೂ. (12.3 ಮಿಲಿಯನ್ ಡಾಲರ್) ಗಳಿಸಿತ್ತು.

    ಅರ್ಕಾ ಮೀಡಿಯಾ ವಕ್ರ್ಸ್‍ನ ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಬೇರೆ ಬೇರೆ ಪ್ರದೇಶಗಳಿಗೆ ಹೊಸ ವಿತರಕರ ವ್ಯವಸ್ಥೆ ಮಾಡಿದ್ದಾರೆ. ಬಾಹುಬಲಿ-2ರ ಹಿಂದಿ ಆವೃತ್ತಿಯನ್ನ ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ಸ್ ಹಾಗೂ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ವಿರತಣೆ ಮಾಡಲಿದೆ. ರಾಜಮೌಳಿ ಹಾಗೂ ಬಾಹುಬಲಿ ಚಿತ್ರತಂಡ ಕಟ್ಟಪ್ಪನ ಖಡ್ಗವನ್ನ ಕರಣ್ ಜೋಹಾರ್‍ಗೆ ಗಿಫ್ಟ್ ಕೂಡ ಮಾಡಿದ್ದಾರೆ.

    ಇನ್ನು ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವಿತರಕರು ಈಗಾಗಲೇ ದಾಖಲೆ ಮೊತ್ತದ ಹಣ ನೀಡಿ ರೈಟ್ಸ್ ಪಡೆದಿದ್ದಾರೆ. ಕೇರಳ ವಿತರಕರಾದ ಗ್ಲೋಬಲ್ ಯುನೈಟೆಡ್ ಮೀಡಿಯಾ ಬಾಹುಬಲಿ- 1 ಚಿತ್ರಕ್ಕೆ ನೀಡಿದ ಹಣಕ್ಕಿಂತ ಡಬಲ್ ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ಬಾಹುಬಲಿ -2 ಚಿತ್ರದ ಮೇಲೆ ನಮಗೆ ಬಹಳ ನಂಬಿಕೆಯಿದೆ. ಚಿತ್ರತಂಡದೊಂದಿಗೂ ನಮಗೆ ಒಳ್ಳೇ ಬಾಂಧವ್ಯವಿದೆ. ಹೌದು, ನಾವು ದಾಖಲೆ ಮೊತ್ತದ ಹಣ ಕೊಟ್ಟಿದ್ದೇವೆ. ಆದ್ರೆ ಭಾಗ-1 ರಂತೆ ಬಾಹುಬಲಿ-2 ಚಿತ್ರ ಕೂಡ ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಅನ್ನೋ ನಂಬಿಕೆಯಿದೆ ಅಂತ ಗ್ಲೋಬಲ್ ಯುನೈಟೆಡ್ ಮೀಡಿಯಾದ ಪ್ರೇಮ್ ಮೆನನ್ ಹೇಳಿದ್ದಾರೆ.

    ಇನ್ನು ಬಾಹುಬಲಿ-2 ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 78 ಕೋಟಿ ರೂ.ಗೆ ಮಾರಾಟವಾಗಿದೆ. ಹಿಂದಿ ಆವೃತ್ತಿ ಸೋನಿ ವಾಹಿನಿಗೆ(50 ಕೋಟಿ ರೂ.) ಹಾಗೂ ತೆಲುಗು, ತಮಿಳು, ಮಲಯಾಳಂ ಆವೃತ್ತಿ ಸನ್ ನೆಟವರ್ಕ್ ವಾಹಿನಿಗೆ (28 ಕೋಟಿ ರೂ.) ಮಾರಾಟವಾಗಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ನಿರ್ಮಾಪಕರ ಬಳಿ ಇದ್ದು ಅಮೇಜಾನ್ ಹಾಗೂ ನೆಟ್‍ಫ್ಲಿಕ್ಸ್ ಜೊತೆಗೆ ಮಾತುಕತೆ ನಡೆಯುತ್ತಿದೆ.

    ಬಾಹುಬಲಿ 1 ಹಾಗೂ ಭಾಗ-2 ಚಿತ್ರಗಳಿಗೂ 450 ಕೋಟಿ ರೂ. ಬಜೆಟ್. ಬಾಹುಬಲಿ-2 ಚಿತ್ರಕ್ಕೆ ನಿರ್ಮಾಪಕರಿಗೆ 400 ರಿಂದ 500 ಕೋಟಿ ರೂ. ಬರೋ ನಿರೀಕ್ಷೆಯಿದೆ. ಬಾಹುಬಲಿ-2 ಚಿತ್ರದ ಬಿಡುಗಡೆಗೂ ಮೊದಲೇ ನಾವು ಲಾಭ ಗಳಿಸಿದ್ದೇವೆ. ಈ ಚಿತ್ರ ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತದೆ ಹಾಗೂ ರೈಟ್ಸ್ ಪಡೆದವರೂ ಕೂಡ ಲಾಭ ಮಾಡಲಿದ್ದಾರೆ ಅನ್ನೋ ಎಲ್ಲಾ ನಂಬಿಕೆಯಿದೆ ಅಂತಾರೆ ಚಿತ್ರದ ನಿರ್ಮಾಪಕ ಯರ್ಲಗಡ್ಡ.

    ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ಭಾರತದಲ್ಲಿ 6500 ಸ್ಕ್ರೀನ್‍ಗಳಲ್ಲಿ ಹಾಗೂ ನಾರ್ತ್ ಅಮೆರಿಕದಲ್ಲಿ 750 ಸ್ಕ್ರೀನ್‍ಗಳಲ್ಲಿ, ಜೊತೆಗೆ ಇನ್ನುಳಿದ 1000 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

    ತೆಲುಗು ಟ್ರೇಲರ್

    ಹಿಂದಿ ಟ್ರೇಲರ್

    ಮಲೆಯಾಳಂ ಟ್ರೇಲರ್

    ತಮಿಳು ಟ್ರೇಲರ್

    ಪ್ರೋಮೋ ಟ್ರೇಲರ್ ವಿಡಿಯೋ

     

     

  • ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗ್ತಿದ್ದಾರಾ?

    ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗ್ತಿದ್ದಾರಾ?

    ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಬಾಹುಬಲಿ-2 ಚಿತ್ರದ ಟ್ರೇಲರನ್ನ ಈಗಾಗಲೇ ಕೋಟ್ಯಾಂತರ ಮಂದಿ ವೀಕ್ಷಿಸಿದ್ದು ವಿಶ್ವದಾದ್ಯಂತ ಟ್ರೆಂಡಿಂಗ್ ಆಗಿದೆ.

    ಇದನ್ನೂ ಓದಿ: ಪ್ರಭಾಸ್, ರಾಣಾ ಫೈಟಿಂಗ್, ಅನುಷ್ಕಾ ರೋಮ್ಯಾಂಟಿಕ್ ಸೀನ್: ಬಾಹುಬಲಿ ಟ್ರೇಲರ್ ರಿಲೀಸ್

    ಟ್ರೇಲರ್‍ನಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ರೊಮ್ಯಾಂಟಿಕ್ ದೃಶ್ಯವನ್ನೂ ನೋಡಬಹುದು. ಬಾಹುಬಲಿ ಭಾಗ-1ರಲ್ಲಿ ಅನುಷ್ಕಾ ಮಧ್ಯವಯಸ್ಕ ಮಹಿಳೆಯಾಗಿ ಕಾಣಿಸಿಕೊಂಡಿದ್ದರು. ಭಾಗ-1ರಲ್ಲಿ ಪ್ರಭಾಸ್ ಮತ್ತು ತಮನ್ನಾ ನಡುವಿನ ರೊಮ್ಯಾನ್ಸ್ ದೃಶ್ಯಗಳಿದ್ದವು. ಆದ್ರೆ ಭಾಗ -2ರಲ್ಲಿ ಅನುಷ್ಕಾ ಮತ್ತು ಪ್ರಭಾಸ್ ನಡುವೆ ರೊಮ್ಯಾನ್ಸ್ ಇರಲಿದೆ ಅನ್ನೋ ಸ್ಪಷ್ಟ ಸೂಚನೆ ಟ್ರೇಲರ್‍ನಲ್ಲಿ ಸಿಕ್ಕಿದೆ.

    ಬಾಹುಬಲಿ-2 ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಪ್ರಭಾಸ್ ವಿಶಾಖಪಟ್ಟಣಂನಲ್ಲಿ ವಾಸವಿರೋ 22 ವರ್ಷದ ಎಂಜಿನಿಯರಿಂಗ್ ಪದವೀಧರೆಯಾಗಿರೋ ಸಂಬಂಧಿಯೋರ್ವರನ್ನು ಮದುವೆಯಾಗ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೆ ಈ ಸುದ್ದಿಯ ನಡುವೆ ಪ್ರಭಾಸ್ ಅನುಷ್ಕಾ ಮದುವೆಯಾಗ್ತಾರೆ ಅನ್ನೋ ಗುಲ್ಲೆದ್ದಿತ್ತು. ಇದಕ್ಕೆ ಕಾರಣ ಬಾಹುಬಲಿ ಚಿತ್ರದಲ್ಲಿ ಅವರಿಬ್ಬರ ನಡುವೆ ಇರೋ ಕೆಮಿಸ್ಟ್ರಿ. ಚಿತ್ರದ ಪ್ರಮುಖ ಪಾತ್ರಗಳಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿಯ ನಿಶ್ಚಿತಾರ್ಥ ಸಮಾರಂಭವನ್ನ ತೋರಿಸಲು ನಿರ್ದೇಶಕ ಎಸ್‍ಎಸ್ ರಾಜಮೌಳಿ ಅದ್ಧೂರಿ ಸೆಟ್ ವಿನ್ಯಾಸಗೊಳಿಸಿದ್ರು. ಈ ಸೆಟ್ ಎಷ್ಟು ನೈಜವಾಗಿತ್ತೆಂದರೆ ಇದನ್ನು ನೋಡಿದ ಜನ ಇದು ರಿಯಲ್ ನಿಶ್ಚಿತಾರ್ಥ ಸಮಾರಂಭ ಎಂದುಕೊಂಡಿದ್ದು ಈ ವದಂತಿಗೆ ಪುಷ್ಟಿ ನೀಡಿತ್ತು.

    ಇದನ್ನೂ ಓದಿ: ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ ಟ್ರೇಲರ್

    ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿರೋ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾದ 24 ಗಂಟೆಯಲ್ಲೇ 5 ಕೋಟಿಗೂ ಅಧಿಕ ವ್ಯೂ ಗಳಿಸಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ 2 ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಾಕೃಷ್ಣ ಅಭಿನಯಿಸಿದ್ದು ವಿಶ್ವದಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

    ಇದನ್ನೂ ಓದಿ: ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!