Tag: SS Mallikarjun

  • ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ: ಮಲ್ಲಿಕಾರ್ಜುನ್

    ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ: ಮಲ್ಲಿಕಾರ್ಜುನ್

    ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರ ಅಪ್ಪ ಇಲ್ಲ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬೊಮ್ಮಾಯಿ ಅಲ್ಲ, ಪಿಎಂ ನರೇಂದ್ರ ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸವಾಲು ಹಾಕಿದರು.

    ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಹರಿಹರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಶಾಸಕ ಎಸ್.ರಾಮಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಿಂದ ನಿಲ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರ ಬಂದ ಬಳಿಕ ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ 

    PM Modi said no need to worry about bitcoin allegations, says Karnataka CM  Bommai after meeting

    ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಬಿಜೆಪಿಯವರು ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. 40% ಕಮಿಷನ್ ಅಂದ್ರೇ ಸಾಕು ಸಿಟ್ಟಾಗುವ ಬಿಜೆಪಿಯವರು, ಕೋಟಿಗಟ್ಟಲೆ ಅನುದಾನ ದಾವಣಗೆರೆಗೆ ತಂದಿದ್ದು ನಾನು. ಅದ್ರೇ ಅದನ್ನು ಈ ಬಿಜೆಪಿಯವರು ಮಜಾ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿ ಅವಧಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ಕೆಲ ಕಾಮಗಾರಿಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ಯಾವುದೇ ಕೆಲಸ ಮಾಡಿದ್ರೇ ಆಸಕ್ತಿಯಿಂದ ಮಾಡ್ಬೇಕಾಗುತ್ತದೆ. ಗ್ಲಾಸ್ ಹೌಸ್‍ನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಗ್ಲಾಸ್ ಹೌಸ್ ಬಳಿ ಒಳ್ಳೆ-ಒಳ್ಳೆ ವಿದೇಶ ಗಿಡಗಳನ್ನು ತಂದು ಅಭಿವೃದ್ಧಿ ಮಾಡಿದ್ದೆವು. ಅದ್ರೇ ಇದೀಗ ಇವರು ಪೇರಲೆ ಗಿಡ, ಜಾಲಿ ಗಿಡಗಳನ್ನು ಹಾಕ್ತಿವಿ ಎಂದು ಹೇಳಿದ್ರೆ ನಾವ್ ಏನ್ ಮಾಡ್ಬೇಕು ಎಂದು ಟೀಕಿಸಿದರು. ಇದನ್ನೂ ಓದಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ 

    ನಾವು ಒಂದು ಫೋನ್‍ನಲ್ಲಿ ಹೇಳಿದ್ರೇ ಕೆಲಸ ಆಗುತ್ತೆ. ಅದ್ರೇ ಬಿಜೆಪಿಯವರು ಎರಡು ಜೊತೆ ಕ್ಯಾರ ಹರಿದ್ರು ಕೆಲಸ ಆಗಲ್ಲ. 40% ಕಮಿಷನ್ ಕೊಟ್ರೇ ಅವರ ಕೆಲಸ ಆಗುತ್ತೇ ಎಂದು ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಶಾಮನೂರು ಶಿವಶಂಕರಪ್ಪ ಮನೆಗೆ ಡಿ ಬಾಸ್ ಭೇಟಿ

    ಶಾಮನೂರು ಶಿವಶಂಕರಪ್ಪ ಮನೆಗೆ ಡಿ ಬಾಸ್ ಭೇಟಿ

    – ದಾವಣೆಗೆರೆಯ ಮಾಜಿ ಸಚಿವರ ಮನೆಗೆ ಭೇಟಿ

    ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪ್ರೀತಿ ಇರುವುದು ತಿಳಿದೇ ಇದೆ. ಅದೇ ರೀತಿ ಇದೀಗ ಗೋವು ಸಾಕಣೆ ಹಾಗೂ ಕುದುರೆ ಸಾಕಣೆ ಕುರಿತು ಮಾಹಿತಿ ಪಡೆಯಲು ಶಾಸಕ, ಮಾಜಿ ಸಚಿವ, ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ ನೀಡಿದ್ದಾರೆ.

    ಇಂದು ಮಧ್ಯಾಹ್ನದಿಂದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿನ ಶಾಮನೂರ ಅವರ ತೋಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಗೋ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆಗಳ ಪಾಲನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ದರ್ಶನ್‍ಗೆ ಶಾಸಕ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಥ್ ನೀಡಿದ್ದಾರೆ.

    ಇಂದು ಸಂಜೆ ವರೆಗೆ ವಿವಿಧ ಫಾರ್ಮ್ ಹೌಸ್‍ಗೆ ದರ್ಶನ್ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ರಾತ್ರಿ ಎಸ್‍ಎಸ್ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ ಮತ್ತೆ ಕೆಲ ಪ್ರಗತಿಪರ ರೈತರನ್ನು ಡಿ ಬಾಸ್ ಭೇಟಿ ಮಾಡಲಿದ್ದು, ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ನಟ ದರ್ಶನ್ ನೋಡಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.

  • ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ದಾವಣಗೆರೆ: ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಕಾಂಗ್ರೆಸ್ ಮಾಜಿ ಸಚಿವರು ಎನ್ನುವಂತಹ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಚಾರಕ್ಕೂ ಸಹ ಬರಲಿಲ್ಲ.

    ಇದೇ ತಿಂಗಳ 12ರಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು, ಮನೆ ಮನೆ ಪ್ರಚಾರ ಮುಗಿಯುತ್ತಾ ಬಂದರು ಸಹ ಮಲ್ಲಿಕಾರ್ಜುನ್ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಒಂದು ದಿನ ಕೂಡ ಪ್ರಚಾರಕ್ಕೆ ಬರಲಿಲ್ಲ. ಇದರಿಂದ ಪಾಲಿಕೆ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲಿಗೆ ಪಾಲಿಕೆ ಸದಸ್ಯರೇ ಕಾರಣ ಎಂದು ಬಹಿರಂಗವಾಗಿ ಎಸ್‍ಎಸ್‍ಎಂ ಅಭಿಮಾನಿಗಳು ಕಿಡಿಕಾರಿದರು. ಅಲ್ಲದೆ ಸ್ವತಃ ಮಲ್ಲಿಕಾರ್ಜುನ್ ಕೂಡ ಜೊತೆಯಲ್ಲಿ ಇದ್ದ ನಮ್ಮ ಮುಖಂಡರೇ ನಮ್ಮನ್ನು ಸೋಲಿಸಿದ್ದು ಎಂದ ಹಲವು ವೇದಿಕೆ ಕಾರ್ಯಕ್ರಮಗಳಲ್ಲಿ ನೋವನ್ನು ಹೊರಹಾಕಿದ್ದರು. ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನನ್ನ ಮುಖಂಡರೇ ನಮ್ಮನ್ನು ಸೋಲಿಸಿದರು ಎನ್ನುವ ನೋವಿನಿಂದ ಎಸ್‍ಎಸ್ ಮಲ್ಲಿಕಾರ್ಜುನ್ ಹೊರ ಬರುತ್ತಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

  • ದಾವಣಗೆರೆಯಲ್ಲಿ ಅಪ್ಪನ ಬದಲು ಪುತ್ರನನ್ನು ಕಣಕ್ಕಿಳಿಸಲು ಯಶಸ್ವಿಯಾದ ಕಾಂಗ್ರೆಸ್!

    ದಾವಣಗೆರೆಯಲ್ಲಿ ಅಪ್ಪನ ಬದಲು ಪುತ್ರನನ್ನು ಕಣಕ್ಕಿಳಿಸಲು ಯಶಸ್ವಿಯಾದ ಕಾಂಗ್ರೆಸ್!

    ಬೆಂಗಳೂರು: ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೊಂದಲಗಳಿಗೆ ತೆರೆ ಬಿದಿದ್ದು, ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಕಾಂಗ್ರೆಸ್ ಕಣಕ್ಕಿಸಲು ಯಶಸ್ವಿಯಾಗಿದೆ.

    ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದರು ಕೂಡ ಅವರು ಲೋಕ ಕಣದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮಾತುಕತೆ ಫಲಪ್ರದವಾಗಿದ್ದು ಮಲ್ಲಿಕಾರ್ಜುನ್ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ.

    ಮೈತ್ರಿ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಶಾಮನೂರು ಶಿವಶಂಕರಪ್ಪ ಅವರು, ಮಂತ್ರಿಸ್ಥಾನ ನೀಡದ್ದಕ್ಕೆ ನನಗೆ ಬೇಸರವಿದೆ. ಅದಕ್ಕಾಗಿ ನನಗೆ ಬಿ ಫಾರಂ ಬೇಡ ಎಂದು ಹೇಳಿದ್ದೇನೆ. ನಾನು ಯಾರ ಹೆಸರನ್ನು ಸೂಚಿಸಿಲ್ಲ ಹಾಗೂ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

    ಇತ್ತ ಶ್ಯಾಮನೂರು ಅವರು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಸಮಿತಿ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ತುರ್ತು ಬುಲಾವ್ ನೀಡಿತ್ತು. ಎಸ್.ಎಸ್.ಮಲ್ಲಿಕಾರ್ಜುನ್ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಹೀಗಾಗಿ ಅವರು ಈ ಬಾರಿ ಬಿಜೆಪಿ ಎದುರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿಯೂ ಲಭಿಸಿತ್ತು. ಅಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಾಟೀಲ್ ರ ಮಗ ತೇಜಸ್ವಿ ಪಾಟೀಲ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪನ ಹೆಸರು ಕೂಡ ಟಿಕೆಟ್ ರೇಸ್ ನಲ್ಲಿ ಕೇಳಿ ಬಂದಿತ್ತು.

  • ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲವೆಂದು ಎಲ್ಲೂ ಹೇಳಿಲ್ಲ: ಎಸ್.ಎಸ್.ಮಲ್ಲಿಕಾರ್ಜುನ್

    ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲವೆಂದು ಎಲ್ಲೂ ಹೇಳಿಲ್ಲ: ಎಸ್.ಎಸ್.ಮಲ್ಲಿಕಾರ್ಜುನ್

    ದಾವಣಗೆರೆ: ಮೂರು ಬಾರಿ ಲೋಕಸಭೆ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಮಾಜಿ ಸಚಿವರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿ ಅವರು, ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂತ ಎಲ್ಲಿಯೂ ಹೇಳಿಲ್ಲ. ಸ್ಕ್ರೀನ್ ಕಮಿಟಿಯಲ್ಲಿ ನಿರ್ಧಾರ ಮಾಡಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಹೈಕಮಾಂಡ್ ಹಾಗೂ ರಾಜ್ಯ ನಾಯಕರು ನಮ್ಮ ಕುಟುಂಬದ ಸದಸ್ಯರೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸ್ಪರ್ಧಿಸಲು ನನಗೆ ಅಭ್ಯಂತರವಿಲ್ಲ. ಎಲ್ಲಾ ಮುಖಂಡರು ಸಂಪರ್ಕದಲ್ಲಿದ್ದಾರೆ. ನೀವೇ ಆದರೂ ನಿಂತು ಗೆಲ್ಲಿ, ಇಲ್ಲ ನಿಮ್ಮ ಅಭ್ಯರ್ಥಿಯನ್ನಾದ್ರೂ ನಿಲ್ಲಿಸಿ ಗೆಲ್ಲಿಸಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಸೋಮವಾರದ ಬಳಿಕ ಸ್ಕ್ರೀನ್ ಕಮಿಟಿ ಸಭೆ ಇದೆ. ಅಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಳ್ಳೆಯ ಕೆಲಸ ಮಾಡಿದ ಉದಾಹರಣೆ ನೀಡಲಿ: ಜಾಮದಾರಗೆ ಶಾಮನೂರು ಟಾಂಗ್

    ಒಳ್ಳೆಯ ಕೆಲಸ ಮಾಡಿದ ಉದಾಹರಣೆ ನೀಡಲಿ: ಜಾಮದಾರಗೆ ಶಾಮನೂರು ಟಾಂಗ್

    ದಾವಣಗೆರೆ: ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಯಾವುದೇ ಅಧಿಕಾರಕ್ಕಾಗಿ ನಾನು ಪ್ರಯತ್ನಿಸಿಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಲಾಬಿ ನಡೆಸಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

    ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಪಕ್ಷದಲ್ಲಿ ನಾನು ಯಾವತ್ತು ನನ್ನ ಮಗನ ಪರವಾಗಿ ನಿಂತಿಲ್ಲ. ಅಲ್ಲದೇ ಸಚಿವ ಸ್ಥಾನಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿ ಮೇಲಷ್ಟೇ ನನ್ನ ಗಮನ ಎಂದು ತಿಳಿಸಿದರು.

    ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಜಾಮದಾರ ಅಧಿಕಾರದಲ್ಲಿದ್ದಾಗ ಯಾರಿಗೆ ತಾನೇ ಒಳ್ಳೆಯ ಕೆಲಸ ಮಾಡಿದ್ದಾರೆ. ಜೆ.ಎಚ್.ಪಟೇಲ್ ಅವರು ಪೂರ್ಣ ಅಧಿಕಾರ ನೀಡಿದ್ದಾಗ ರೈತರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗೊಂದು ವೇಳೆ ಒಳ್ಳೆಯ ಕೆಲಸ ಮಾಡಿದ್ದರೆ ಒಂದೆರೆಡು ಉದಾಹರಣೆ ನೀಡಲಿ ಎಂದು ಟಾಂಗ್ ನೀಡಿದರು.

  • ಸಹಾಯ ಕೇಳಿ ಬಂದ ಅಂಧನನ್ನೇ ಹೊರದಬ್ಬಿದ ಸಚಿವರು- ಶಕ್ತಿ ಕೇಂದ್ರದಲ್ಲಿ ನಡೀತು ಅಮಾನವೀಯ ಘಟನೆ

    ಸಹಾಯ ಕೇಳಿ ಬಂದ ಅಂಧನನ್ನೇ ಹೊರದಬ್ಬಿದ ಸಚಿವರು- ಶಕ್ತಿ ಕೇಂದ್ರದಲ್ಲಿ ನಡೀತು ಅಮಾನವೀಯ ಘಟನೆ

    ಬೆಂಗಳೂರು: ಸಹಾಯ ಕೇಳಿ ಬಂದ ದಿವ್ಯಾಂಗನ ಮೇಲೆ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ದೌರ್ಜನ್ಯವೆಸಗಿದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ವಿಧಾನಸೌಧ ಮೂರನೇ ಮಹಡಿ ಲಿಫ್ಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಬೀದರ್ ಮೂಲದ ದಿವ್ಯಾಂಗ ಮಂಜುನಾಥ ಎಂಬವರೇ ದೌರ್ಜನ್ಯಕ್ಕೊಳಗಾದ ವ್ಯಕ್ತಿ.

    ಸಚಿವ ಸಂಪುಟ ಸಭೆಯ ಬಳಿಕ ಮಂಜುನಾಥ ಅವರು ಸಹಾಯಹಸ್ತ ಕೋರಿ ಸಚಿವರ ಬೆನ್ನತ್ತಿದರು. ಆದ್ರೆ ದಿವ್ಯಾಂಗನ ಅಳಲಿಗೆ ಕಿವಿಗೊಡದ ಸಚಿವರು ಕೈ ತೆಗಿಯೋ ಎಂದು ಗದರಿಸಿದ್ರು. ಅಲ್ಲದೇ ಸಚಿವರ ಅಂಗರಕ್ಷಕರು ಕೂಡ ಕಣ್ಣಿದ್ದವರೇ ಮನೆ ಸೇರೋದು ಕಷ್ಟ. ಇನ್ನು ನೀನೇನೋ ಮನೆ ಸೇರ್ತಿಯಾ ರಾತ್ರಿಯಾಗಿದೆ. ಹಗಲಿನಲ್ಲಿ ಬರಬೇಕು ತಾನೇ ಎಂದು ಗದರಿಸಿ ಲಿಫ್ಟ್ ಒಳಗಿಂದ ಹೊರದೂಡಿದ್ದಾರೆ.

    ಕಣ್ಣಿಲ್ಲದಿದ್ದರೂ ಸಚಿವರನ್ನು ಬೆನ್ನತ್ತಿ ಹೋದ್ರೂ ಕ್ಯಾರೆ ಎನ್ನದ ಕಾರಣ ಮಂಜುನಾಥ್ ಪರದಾಟ ನಡೆಸಿದ್ರು. ಕೊನೆಗೆ ಸಚಿವ ಎಂ.ಬಿ.ಪಾಟೀಲ್ ದಿವ್ಯಾಂಗನಿಗೆ ಸ್ಪಂದಿಸಿ, ಅವರ ಮನವಿ ಸ್ವೀಕರಿಸಿದ್ರು.

    https://www.youtube.com/watch?v=fTDVjsijZ_A

  • ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ- ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷ ಟಾಂಗ್

    ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ- ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷ ಟಾಂಗ್

    ದಾವಣಗೆರೆ: ಹೊರಗಿನಿಂದ ಬಂದವರು ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಮೊದಲು ಅವರನ್ನು ಜಿಲ್ಲೆಯಿಂದ ಹೊರ ಓಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅಭಿವೃದ್ಧಿಯಾಗಬೇಕು ಅಂದ್ರೆ ಅರ್ಜುನನ ರೀತಿ ಕೆಲಸ ಮಾಡಬೇಕು. ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ದಾಖಲೆ ಸಹಿತ ಚರ್ಚೆಗೆ ನಾನು ಸಿದ್ಧ ಎಂದು ಸಂಸದ ಸಿದ್ದೇಶ್ವರ್ ಅವರನ್ನ ಚರ್ಚೆಗೆ ಬರುವಂತೆ ಆಹ್ವಾನಿಸಿದ್ರು.

    ಮುಂದಿನ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ನಾಲ್ಕುವರೆ ವರ್ಷದಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 2,499 ಕೋಟಿ ರೂ. ಅನುದಾನ ತಂದಿದ್ದು, ಇದರಲ್ಲಿ 1036 ಕೋಟಿ ರೂ. ಕೆಲಸವಾಗಿದೆ. 1462 ಕೋಟಿ ರೂ. ಕೆಲಸ ಬಾಕಿ ಇದೆ. ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ಮೂರು ವರ್ಷವಾದರೂ ಕೇಂದ್ರದಿಂದ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರ ಮಾತ್ರ ಅನುದಾನ ಬಿಡುಗಡೆ ಮಾಡಿದೆ ಅಷ್ಟೇ ಅಂದ್ರು.