ಬೆಂಗಳೂರು: ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ (SS Mallikarjun) ತಿಳಿಸಿದರು.ಇದನ್ನೂ ಓದಿ: ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪ್ರಶ್ನಿಸಿ, ರಾಜ್ಯದ ಕರಾವಳಿ ಭಾಗಗಳಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ, ಹಳದಿ ರೋಗ ಬಂದಿದೆ. ಸರ್ಕಾರ ರೈತರಿಗೆ ಪರಿಹಾರ ಸರಿಯಾಗಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ 60% ಅನುದಾನ ಕೊಟ್ಟಿದ್ದರು. ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಉತ್ತರ ನೀಡಿ, ಕೇಂದ್ರದಿಂದ ಹಣ ಬಂದಿದೆ. ರಾಜ್ಯದ ಹಣ ಸೇರಿಸಿ ಶೀಘ್ರವೇ ಪರಿಹಾರದ ಹಣ ಬಿಡುಗಡೆ ಮಾಡ್ತೀವಿ. ಪ್ರತಿ ಹೆಕ್ಟೇರ್‌ಗೆ ಈಗ 1,200 ರೂ. ಪರಿಹಾರ ಕೊಡುತ್ತಿದ್ದೇವೆ. ಪರಿಹಾರ ಜಾಸ್ತಿ ಮಾಡುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿAದ ಉತ್ತರ ಬಂದ ಕೂಡಲೇ ಪರಿಹಾರ ಹೆಚ್ಚು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಇದನ್ನೂ ಓದಿ: ಸ್ಲಿಮ್ ಆಗಿರೊರೇ ಬೇಕಿದ್ರೆ ಮಾಡೆಲ್ ಆಯ್ಕೆ ಮಾಡಿಕೊಳ್ಳಿ – ರೋಹಿತ್ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್ ಆಕ್ಷೇಪ
ದಾವಣಗೆರೆ: ಆಡಳಿತರೂಢ ಕಾಂಗ್ರೆಸ್‌ನಲ್ಲಿ (Congress) ಶಾಸಕರ ಅಸಮಾಧಾನ ಭುಗಿಲೆದ್ದಿದೆ. ದಾವಣಗೆರೆ (Davanagere) ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (SS Mallikarjun) ಅವರನ್ನು ಬದಲಾಯಿಸುವಂತೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಜೊತೆ ನಿರಂತರವಾಗಿ ಹೊಂದಾಣಿಕೆ ರಾಜಕಾರಣ (Adjustment Politics) ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಮುಜುಗರವಾಗುತ್ತಿದೆ. ವರ್ಗಾವಣೆ ವಿಚಾರವಾಗಿ ಸಿಎಂ ಸಹಿ ಮಾಡಿ ಅನಮೋದಿಸಿ ಆದೇಶ ಹೊರಡಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಬ್ರೇಕ್ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ದೂರಿನಲ್ಲಿ ಏನಿದೆ?
ಲೋಕೋಪಯೋಗಿ ಇಲಾಖೆ ಎಫ್‌ಡಿಎಯನ್ನು ವರ್ಗಾವಣೆ ಮಾಡುವಂತೆ ಸಿಎಂ ಕಡೆಯಿಂದ ಆದೇಶ ಮಾಡಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಆದೇಶವನ್ನು ತಡೆಹಿಡಿದಿದ್ದಾರೆ.
ಬಿಜೆಪಿ ಬೆಂಬಲಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಾಂಗ್ರೆಸ್ ಶಾಸಕರುಗಳ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ . ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸದೇ ಬಿಜೆಪಿ ಮಾಜಿ ಶಾಸಕರ ಬೆಂಬಲಿಗನಿಗೆ ಗೆಲುವಿಗೆ ಪರೋಕ್ಷವಾಗಿ ಸಹಕರಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ
ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ ಜಿಲ್ಲೆಯಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಲು ಕಾಂಗ್ರೆಸ್ ಶಾಸಕರ ಮಗನಿಗೆ ಅವಕಾಶವಿದ್ದರೂ ಉಸ್ತುವಾರಿ ಸಚಿವರು ಬಿಜೆಪಿಯವರನ್ನು ಬೆಂಬಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಎಸ್ ಎಸ್ ಮಲ್ಲಿಕಾರ್ಜುನ ಗೆದ್ದು ಶಾಸಕರಾಗಿರುವ ಕ್ಷೇತ್ರದಲ್ಲೇ ಬಿಜೆಪಿ ಲೋಕಸಭಾ ಅಭ್ಯರ್ಥಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಪಕ್ಷಕ್ಕೆ ಹಿನ್ನಡೆಯಾಗಿದೆ.
ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಮುಜುಗರವಾಗಬಹುದು. ಈ ಎಲ್ಲಾ ಕಾರಣಗಳಿಂದ ದಾವಣಗೆರೆ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಬೇಕು.
ದಾವಣಗೆರೆ: ಬಿಜೆಪಿಯ (BJP) ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (Renukacharya) ಅವರು ಮೂರು ನಾಲ್ಕು ಬಾರಿ ಭೇಟಿ ಮಾಡಿ ಕಾಂಗ್ರೆಸ್ (Congress) ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದರು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ (SS Mallikarjun) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೇಟಿ ವೇಳೆ ನಿನ್ನನ್ನು ಯಾರು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿ ನಾನೇ ಕಳುಹಿಸಿದ್ದೆ. ವಿಜಯೇಂದ್ರ (Vijayendra) ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ರೇಣುಕಾಚಾರ್ಯ ಇತ್ತ ಸುಳಿಯಲಿಲ್ಲ ಎಂದರು. ಇದನ್ನೂ ಓದಿ: 8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?
ಮಾಜಿ ಸಂಸದ ಜಿಎಂ ಸಿದ್ದೇಶ್ವರ್ (Siddeshwara) ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮೇಲೆ ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದಾರೆ. ಎಸ್ ಎ ರವೀಂದ್ರನಾಥ್ ಮೇಲೆ ಅಪಾರವಾದ ಗೌರವ ಇದೆ. ಅವರು ನಮ್ಮ ಅಣ್ಣ. ಬಿಜೆಪಿ ಪಕ್ಷ ಕಟ್ಟಲು ಹಗಲುರಾತ್ರಿ ಶ್ರಮಿಸಿವಹಿಸಿ ಇಷ್ಟರ ಮಟ್ಟಿಗೆ ತೆಗೆದುಕೊಂಡು ಬಂದಿದ್ದಾರೆ. ಐದಾರು ಜನರು ಸೇರಿ ರಾತ್ರಿಯಿಡಿ ಪ್ಲಾನ್ ಮಾಡಿ ಬೆಳಗ್ಗೆ ಎದ್ದು ಪಕ್ಷ ಸಂಘಟನೆ ಮಾಡಲು ಓಡಾಡಿದವರು. ಅವರ ಬಗ್ಗೆ ಸಿದ್ದೇಶ್ವರ್ ಲಘುವಾಗಿ ಮಾತನಾಡುತ್ತಾರೆ. ಜಿಲ್ಲೆಯಲ್ಲಿ ಅವರ ಅಭಿವೃದ್ದಿ ಕೆಲಸ ಏನ್ ಇದೆ ಎಂದು ಹೇಳಲಿ ಎಂದು ಸಿದ್ದೇಶ್ವರ್ ವಿರುದ್ದ ಮಲ್ಲಿಕಾರ್ಜುನ್ ಅಕ್ರೋಶ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹೊಂದಾಣಿಕೆ ರಾಜಕೀಯ ನಡೆದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ್ ಅವಧಿಯಲ್ಲಿ ಯಾವ ಕೆಲಸ ನಡೆದಿಲ್ಲ. ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು ಅಷ್ಟೇ. ಅವರ ಕಾಮಗಾರಿಗಳಿಂದ ಜನ ರೋಸಿ ಹೋಗಿದ್ದಾರೆ. ಅದಕ್ಕೆ ಅಶೋಕ ರಸ್ತೆಗೆ ಅವರ ಪ್ರತಿಮೆ ಹಾಕಿಸಬೇಕು. ಬೇಕಾದರೆ ಅದಕ್ಕೆ ಹಣ ನಾನು ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್
ಅಶೋಕ ರಸ್ತೆ ಅಂಡರ್ ಪಾಸ್ ಸರಿಪಡಿಸಲು ಎಂಪಿ ಜೊತೆಗೆ ಮಾತನಾಡಿ ಪ್ಯಾರಲಲ್ ರಸ್ತೆ ಮಾಡುತ್ತೇವೆ. ಇದರ ಬಗ್ಗೆ ಚರ್ಚೆ ಮಾಡಲಾಗುವುದು. ಮಾಜಿ ಸಂಸದರು ಊರು ಉದ್ದಾರ ಮಾಡುವುದನ್ನು ಬಿಟ್ಟು ವೈಯಕ್ತಿಕ ಅಭಿವೃದ್ಧಿಯಾಗಿದ್ದಾರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವೀಂದ್ರನಾಥ ನನಗೆ ಸಹೋದರರು ಮೊದಲಿನಿಂದಲೂ ಆತ್ಮೀಯರು. ಅವರನ್ನು ಮಾತನಾಡಿಸುವುದು ಬಿಜೆಪಿಯವರಿಗೆ ತಪ್ಪಾಗಿ ಕಂಡರೆ ಏನೂ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ದಾವಣಗೆರೆ: ಒಂದೊಂದೆ ಮೆಟ್ಟಿಲು ಹತ್ತೋದು ಒಳ್ಳೆಯದು ಎಂದು ಹೇಳುವ ಮೂಲಕ ಚನ್ನಗಿರಿ ಕಾಂಗ್ರೆಸ್ ನೂತನ ಶಾಸಕ ಶಿವಗಂಗಾ ಬಸವರಾಜ್ ಗೆ (Shivaganga Basavaraj) ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S S Mallikarjun) ಕ್ಲಾಸ್ ತೆಗೆದುಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಹಿರೇಗಂಗೂರ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಒಂದೇ ಜಿಲ್ಲೆಯ ಶಾಸಕ, ಸಚಿವರಾಗಿದ್ರೂ ಇದೇ ಮೊದಲ ಬಾರಿ ಮುಖಾಮುಖಿಯಾದರು. ಈ ತುಂಬಿದ ಸಭೆಯಲ್ಲೇ ಸಚಿವರು ತೀಕ್ಷ್ಣವಾಗಿ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಹೆಚ್‌ಡಿ ಕುಮಾರಸ್ವಾಮಿ ತಡರಾತ್ರಿ ಆಸ್ಪತ್ರೆಗೆ ದಾಖಲು
ಬಸವರಾಜ್ ಬಹಳ ಬೇಗ ಶಾಸಕ ಆಗಿದ್ದಾನೆ. ಯುವಕ, ಬಹಳ ಆಕ್ಟೀವ್ ಇದ್ದಾನೆ. ದಿಢೀರ್ ಮೆಟ್ಟಿಲು ಹತ್ತೋಕೆ ಹೋಗುತ್ತಿದ್ದಾನೆ. ಒಂದೊಂದೇ ಮೆಟ್ಟಿಲು ಹತ್ತೋದು ಒಳ್ಳೆಯದು. ಸಚಿವರು ಕಾಲ್ ರಿಸೀವ್ ಮಾಡಲ್ಲ, ಕೈಗೆ ಸಿಗಲ್ಲ ಅಂತಾನೆ. ಯಾವ ಸಚಿವರು ಅಂತ ಕೇಳಿದ್ರೆ, ನೀವು ಅಲ್ಲ ಅಂತಾನೆ. ಏನ್ ನನಗೆ ಹೇಳಿದ್ನೋ, ಡಿಕೆಶಿಗೋ, ಸಿಎಂಗೋ?. ಜನರ ಜೊತೆ ಒಳ್ಳೆಯ ಕೆಲಸ ಮಾಡು, ಒಳ್ಳೆಯ ಶಾಸಕ ಆಗು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್
ಸಚಿವರು ಕಾಲ್ ರಿಸೀವ್ ಮಾಡಿಲ್ಲ, ಕೈಗೆ ಸಿಗಲ್ಲ ಎಂದು ಶಾಸಕ ಬಸವರಾಜ್ ಹೇಳಿಕೆ ನೀಡಿದ್ದರು.
ದಾವಣಗೆರೆ: ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಾಗೂ ಮಾಧ್ಯಮದಲ್ಲಿ ಹೆಸರು ಮಾಡಲು ಬಾಬಾ ಸಾಹೇಬ್ ಅಂಬೇಡ್ಕರ್ (Bhimrao Ramji Ambedkar) ನೀಡಿರುವ ಅಟ್ರಾಸಿಟಿ ಕಾಯ್ದೆ (Atrocities Act) ದುರ್ಬಳಕೆ ಮಾಡುತ್ತಾ ಸುಳ್ಳು ಪ್ರಕರಣ ದಾಖಲಿಸಿ ಸಮಾಜದಲ್ಲಿ ದಲಿತ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಾವಣಗೆರೆಯಲ್ಲಿ (Davanagere) ದಲಿತ ಯುವಶಕ್ತಿ ವೇದಿಕೆಯ ಕಾರ್ಯಕರ್ತ ಚೇತನ್ ಕನ್ನಡಿಗ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಮಾಧ್ಯಮದಲ್ಲಿ ನಟ ಉಪೇಂದ್ರ (Upendra) ಹಾಗೂ ಸಚಿವರಾದ ಎಸ್‌ಎಸ್ ಮಲ್ಲಿಕಾರ್ಜುನ್ (SS Mallikarjun) ಅವರು ತಮ್ಮ ಹಿಂದಿನ ಸಂದರ್ಶನಗಳಲ್ಲಿ ಗಾದೆ ರೂಪದಲ್ಲಿ ಹೇಳಿದ ವಾಕ್ಯವನ್ನು ನೆಪವಾಗಿ ಹಿಡಿದು ಇದಕ್ಕೆ ಅಟ್ರಾಸಿಟಿಯ ಮತ್ತೊಂದು ರೂಪ ನೀಡಿ ಇವರು ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ರಾಜ್ಯದಲ್ಲಿ ಹಲವೆಡೆ ಕೇಸ್ ದಾಖಲು ಮಾಡಲಾಗಿದೆ. ಮತ್ತು ಇದು ದಿನದಿಂದ ದಿನಕ್ಕೆ ರಾಜಕೀಯ ತಿರುವು ಪಡೆಯುತ್ತಿದೆ. ನಟ ಉಪೇಂದ್ರ ಪರವಾಗಿ ಅಥವಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನರವರ ಪರವಾಗಿಯೂ ನಾವಿಲ್ಲ. ಒಗ್ಗಟ್ಟಿನಲ್ಲಿ ಮುನ್ನಡೆಯುತ್ತಿರುವ ಸಮಾಜದಲ್ಲಿ, ಭಯ ಹಾಗೂ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೆಲ ನಕಲಿ ಹಾಗೂ ಮುಖವಾಡಧಾರಿ ಹೋರಾಟಗಾರರ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಆಗ್ರಹಿಸಿದರು.
ಕೆಲವರು ನಮ್ಮ ದಲಿತ ಸಮುದಾಯದವರೇ ತಮ್ಮ ವೈಯಕ್ತಿಕ ಕಾರಣ ಹಾಗೂ ರಾಜಕೀಯ ಲಾಭಕ್ಕಾಗಿ, ಮಾಧ್ಯಮದಲ್ಲಿ ಹೆಸರು ಮಾಡಲು ಕ್ಷುಲ್ಲಕ ಕಾರಣಗಳಿಗೆ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಾ ಸುಳ್ಳು ಕೇಸ್ ದಾಖಲಿಸಿ ಸಮಾಜದಲ್ಲಿ ದಲಿತ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ. ಇದರಿಂದ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ. ನಮ್ಮ ಸಹವಾಸವೇ ಬೇಡ ಎಂದು ದೂರ ಉಳಿಯುವ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು. ಇದನ್ನೂ ಓದಿ: ದೇವಸ್ಥಾನಗಳ ಕಾಮಗಾರಿಗೆ ಬ್ರೇಕ್ – ವಿರೋಧ ವ್ಯಕ್ತವಾಗುತ್ತಿದ್ದಂತೆ ಸುತ್ತೋಲೆ ವಾಪಸ್
ಬಾಬಾ ಸಾಹೇಬರು ನಮಗೆ ನೀಡಿರುವ ಅಟ್ರಾಸಿಟಿ ತಡೆ ಕಾಯ್ದೆ ಎಂಬ ಆಯುಧವಿದೆ. ಇದನ್ನು ಅಗತ್ಯವಿದ್ದಾಗ ನಿಜವಾಗಿಯೂ ದೌರ್ಜನ್ಯ ಪ್ರಕರಣಗಳಲ್ಲಿ ಬಳಸಬೇಕು. ಆದರೆ ಕೆಲವರು ಸಮಾಜದಲ್ಲಿ ಕ್ಷುಲ್ಲಕ ಕಾರಣಗಳಿಗೆ ಇದನ್ನು ಪ್ರದರ್ಶಿಸುತ್ತಾ, ಅದನ್ನು ದುರ್ಬಳಕೆ ಮಾಡುತ್ತಾ ಸಂಪೂರ್ಣ ದಲಿತ ಸಮುದಾಯದ ಮಾನ ಹರಾಜು ಹಾಕುತ್ತಿದ್ದಾರೆ. ಆದ್ದರಿಂದ ಇಂತವರ ವಿರುದ್ಧ ಪ್ರಕರಣ ದಾಖಲಾಗಬೇಕು. ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್
ಬೆಂಗಳೂರು: ನಟ ಉಪೇಂದ್ರ (Upendra) ಹಾಗೂ ಸಚಿವ ಮಲ್ಲಿಕಾರ್ಜುನ (SS Mallikarjun) ಅವರ ಹೇಳಿಕೆಗಳ ಬಗೆಗಿನ ದೂರಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಇಬ್ಬರ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ.
ಪರಿಶಿಷ್ಟ ಜಾತಿಯವರ ವಿರುದ್ಧ ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಕೂಡಾ ಇಂತಹ ಹೇಳಿಕೆಗಳನ್ನು ಸಹಿಸಲ್ಲ. ಹೀಗೆ ಮಾತನಾಡೋರು ಅರ್ಥ ಮಾಡಿಕೊಳ್ಳಬೇಕು. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡೋದು ಯಾರೇ ಆದರು ನಿಲ್ಲಿಸಬೇಕು. ಗಾದೆ ಇದೆ ಅಂತ ಹೇಳಿ ಕೀಳಾಗಿ ಮಾತಾಡೋದು ಸರಿಯಲ್ಲ. ಇದೊಂದು ನಾನ್ಸೆನ್ಸ್ ಹೇಳಿಕೆ ಎಂದು ಕಿಡಿಕಾರಿದರು.
ಇದನ್ನು ನಿಲ್ಲಿಸಿದರೆ ಒಳ್ಳೆಯದು. ಇದನ್ನು ನಾನು ಕೂಡಾ ಸಹಿಸಲ್ಲ. ಹೀಗೆ ಮಾತನಾಡೋದು ಒಂದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವಾ? ಸಚಿವರೇ ಆಗಲಿ ಯಾರೇ ಆಗಲಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಆಧಿಕ ಅರ್ಜಿ ಸಲ್ಲಿಕೆ
ಸಚಿವ ಮಲ್ಲಿಕಾರ್ಜುನ ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅದರ ಬಗ್ಗೆ ಪೇಪರ್‌ನಲ್ಲಿ ಓದಿದ್ದೇನೆ. ರಾಜಾಜಿನಗರ ಕೇಸ್ ವಿಧಾನಸೌಧಕ್ಕೆ ವರ್ಗಾವಣೆ ಆಗಿದೆ. ಸಾರ್ವಜನಿಕ ಜೀವನದಲ್ಲಿ ಇದ್ದು ಬೇರೆ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡೋದು ಸರಿಯಲ್ಲ. ಹೀಗೆ ಮಾತನಾಡಿದ್ರೆ ಅ ಸಮುದಾಯಕ್ಕೆ ನೋವಾಗಲ್ಲವಾ? ಎರಡೂ ದೂರಿನ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇವೆ. ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿಕೆ ನೀಡಿದರು. ಇದನ್ನೂ ಓದಿ: ಸಚಿವ ಸಂಪುಟದ ದೋಸ್ತಿಗಳ ನಡುವೆ ಮಹಾ ಬಿರುಕಿದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಶಾಸಕ
ಬೆಂಗಳೂರು: ದಲಿತರಿಗೆ ಅಪಮಾನ ಮಾಡಿದ ಆರೋಪವನ್ನು ನಟ ಉಪೇಂದ್ರ ಎದುರಿಸ್ತಿದ್ದಾರೆ. ಭಾರೀ ಟೀಕೆಗಳು ಕೇಳಿಬರುತ್ತಿವೆ. ಇದೇ ಹೊತ್ತಲ್ಲಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (SS Mallikarjun) ಕೂಡ ಉಪೇಂದ್ರರಂತೆಯೇ ಹೇಳಿಕೆ ಕೊಟ್ಟಿರುವ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೋದಿಂದ ಯಾರ ಭಾವನೆಗಳಿಗೂ ಧಕ್ಕೆ ಆಗಿಲ್ವಾ. ತಾಕತ್ ಇದ್ರೆ ಕ್ರಮ ತಗೊಳಿ ಎಂದು ಪ್ರಜಾಕೀಯ ಕಾರ್ಯಕರ್ತರು ಸವಾಲ್ ಹಾಕ್ತಿದ್ದಾರೆ. ಆದ್ರೆ, ಇದು ತಿರುಚಿದ ವಿಡಿಯೋ ನಾನು ಅಂಥಾ ಹೇಳಿಕೆ ನೀಡಿಲ್ಲ ಎಂದು ತೋಟಗಾರಿಕಾ ಸಚಿವರು ಜಾರಿಕೊಂಡಿದ್ದಾರೆ.
ಆದರೆ ದಿವಾಕರ್ ಎಂಬವರು ಎಸ್‍ಎಸ್ ಮಲ್ಲಿಕಾರ್ಜುನ್ ಹೇಳಿಕೆ ಖಂಡಿಸಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಎನ್‍ಸಿಆರ್ ಹಾಕಿರುವ ಪೊಲೀಸರು ಈ ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದಾರೆ. ಅತ್ತ ನಟ ಉಪೇಂದ್ರ (Upendra) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾದ ಎರಡನೇ ಎಫ್‍ಐಆರ್ ಅನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ವರ್ಗಾಯಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‍ನಿಂದ (Congress) ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಮೊದಲ ಪಟ್ಟಿಯಲ್ಲಿ ತಂದೆ – ಮಕ್ಕಳಿಗಿಬ್ಬರಿಗೂ ಟಿಕೆಟ್ ನೀಡಲಾಗಿದೆ.
ಪ್ರಮುಖ ನಾಯಕರು ಹಾಗೂ ಅವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅದರಲ್ಲಿ ಕೆ.ಹೆಚ್. ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಕೆ. ಹೆಚ್. ಮುನಿಯಪ್ಪ ಅವರ ಮಗಳು ಹಾಗೂ ಹಾಲಿ ಶಾಸಕಿ ರೂಪಾಕಲಾ ಎಂ. ಅವರಿಗೂ ಟಿಕೆಟ್ ಘೋಷಣೆಯಾಗಿದ್ದು, ಕೆಜಿಎಫ್‍ನಿಂದ ಟಿಕೆಟ್ ಅಂತಿಮವಾಗಿದೆ. ಇದನ್ನೂ ಓದಿ: ಮಾಜಿ ಸಂಸದ ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್
ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಅವರ ಮಗ ಎಸ್.ಎಸ್ ಮಲ್ಲಿಕಾರ್ಜುನ್ (SS Mallikarjun) ಅವರಿಗೆ ದಾವಣಗೆರೆ ಉತ್ತರದಿಂದ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಸ್ಪರ್ಧಿಸಿದರೆ, ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಕೃಷ್ಣ ಸ್ಪರ್ಧಿಸಲಿದ್ದಾರೆ. ಬಿಟಿಎಂ ಲೇಔಟ್‌ನಿಂದ ರಾಮಲಿಂಗ ರೆಡ್ಡಿ ಹಾಗೂ ಜಯನಗರದಿಂದ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದನ್ನೂ ಓದಿ:ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ
ದಾವಣಗೆರೆ: ಡಿಸೆಂಬರ್ 21 ರಂದು ನಗರದ ಕಾಂಗ್ರೆಸ್‌ನ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗವಿರುವ ಫಾರ್ಮ್ ಹೌಸ್ (Farm House) ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ ಅನೇಕ ವನ್ಯಜೀವಿಗಳು (Wildlife) ಪತ್ತೆಯಾಗಿವೆ. ಅವುಗಳನ್ನು ಪರವಾನಿಗೆ ಪಡೆಯದೇ ಸಾಕಣೆ ಮಾಡುತ್ತಿರುವುದು ಕಂಡು ಬಂದಿದ್ದು, ಫಾರ್ಮ್ ಹೌಸ್‌ನಲ್ಲಿರುವ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಫಾರ್ಮ್ ಹೌಸ್‌ನ ಮ್ಯಾನೇಜರ್, ಜಾಗದ ಮಾಲೀಕರು ಸೇರಿದಂತೆ 4 ಜನರ ಮೇಲೆ ಈಗಾಗಲೇ ಅರಣ್ಯ ಇಲಾಖೆ ಕೇಸ್ ದಾಖಲಿಸಿಕೊಂಡಿದೆ. ಆರೋಪಿಗಳೆಲ್ಲರೂ ಈಗ ತಲೆಮರೆಸಿಕೊಂಡಿದ್ದಾರೆ.
ಜಾಗದ ಮಾಲೀಕರು ಎನ್ನಲಾದ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಕೂಡಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವರ ಪರ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡುವಂತೆ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಅದೇಶ ಮಾಡಿದೆ. ಈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯಿಂದ ನಂದಿಬೆಟ್ಟಕ್ಕೆ ನಿರ್ಬಂಧ- ನ್ಯೂ ಇಯರ್ ಮೋಜು-ಮಸ್ತಿಗೆ ಬ್ರೇಕ್
ಆದರೆ ಇಲ್ಲಿ ಸಾಕಷ್ಟು ಪ್ರಶ್ನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ದಾಖಲಿಸಿಕೊಂಡ ದೂರಿನಲ್ಲಿ ಫಾರ್ಮ್ ಹೌಸ್ ಸಿಬ್ಬಂದಿ ಮ್ಯಾನೇಜರ್ ಹೆಸರುಗಳನ್ನು ತೋರಿಸಿದೆ. ಆದರೆ ಇದರಲ್ಲಿ ಕೇವಲ ಜಾಗದ ಮಾಲೀಕರು ಎಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಹೆಸರು ತೋರಿಸದೇ ಪ್ರಕರಣ ದಾಖಲಾಗಿದೆ. ಅದರೂ ಕೂಡಾ ಮಲ್ಲಿಕಾರ್ಜುನ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಮಾಜಿ ಸಚಿವರಿಗೆ ಬಂಧನದ ಭೀತಿ ಎದುರಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಕಾಂಗ್ರೆಸ್‍ನ (Congress) ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S.S Mallikarjun) ಅವರ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್‍ಹೌಸ್ (Farmhouse) ಮೇಲೆ ಸಿಸಿಬಿ (CCB) ಪೊಲೀಸರು ಹಾಗೂ ಅರಣ್ಯ ಇಲಾಖೆ (Forest Department) ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಫಾರ್ಮ್‍ಹೌಸ್‍ನಲ್ಲಿ ಸಾಕುತ್ತಿದ್ದ ವನ್ಯಜೀವಿಗಳು ಪತ್ತೆಯಾಗಿವೆ. ಬೆಂಗಳೂರಿನ ಹೆಬ್ಬಾಳದಲ್ಲಿ ಕಳೆದ ಡಿ.18 ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ನಿಷೇಧಿತ ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್
ಫಾರ್ಮ್ ಹೌಸ್‍ನಲ್ಲಿ ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮಲ್ಲಿಕಾರ್ಜುನ್ ಫಾರ್ಮ್ ಹೌಸ್‍ನಲ್ಲಿ ಜಿಂಕೆ ಸಾಕಲಾಗಿತ್ತು. ಆದರೆ ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ
ದಾಳಿ ವೇಳೆ ಬಳಿಕ ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ. ಕಾನೂನು ಪ್ರಕಾರವೇ ನಾವು ಸಾಕಲಾಗಿದೆ ಎಂದು ಎಸ್.ಎಸ್ ಮಲ್ಲಿಕಾರ್ಜುನ್ ಆಪ್ತರು ಮಾಹಿತಿ ನೀಡಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದು, ಶೀಘ್ರವೇ ವಿಶೇಷ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭಿಸುವುದಾಗಿ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
Live Tv
[brid partner=56869869 player=32851 video=960834 autoplay=true]