Tag: Sruthi Hariharan

  • ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಬೆಂಗಳೂರು: ಸ್ಯಾಂಡ್‍ಲ್‍ವುಡ್ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಬಹಳಷ್ಟು ಮಂದಿ ನಟಿಯರಿಗೆ ಅವರದ್ದೇ ಆದ ಮಹಿಳಾ ಅಭಿಮಾನಿಗಳಿದ್ದಾರೆ. ಈಗ ಈ ಮಹಿಳಾ ಅಭಿಮಾನಿಗಳಿಗಾಗಿ ನಟಿಯರು ತಮ್ಮ ಡ್ರೆಸ್ ಮಾರಾಟ ಮಾಡಲು ಮುಂದಾಗಿದ್ದಾರೆ.

    ಹೌದು, ನಟಿಯರು ಅಂದ್ರೆ ಡ್ರೆಸ್ ಗಳಿಗೆ ಕೊರತೆ ಇರುವುದಿಲ್ಲ. ಮನೆಯ ವಾರ್ಡ್ ರೋಬ್ ಫುಲ್ ಡ್ರೆಸ್ ಗಳಿಂದ ತುಂಬಿರುತ್ತದೆ. ತೊಡುವ ಉಡುಗೆಗಳು ಮತ್ತೆ ರಿಪೀಟ್ ಆಗಬಾರದು ಎನ್ನುವ ಕಾರಣಕ್ಕೆ ಹೊಸ ಉಡುಪುಗಳನ್ನು ಖರೀದಿಸುತ್ತಿರುತ್ತಾರೆ. ಇದರಿಂದಾಗಿ ವಾರ್ಡ್ ರೋಬ್ ಗಳು ಡ್ರೆಸ್ ಗಳಿಂದ ತುಂಬಿ ತುಳುಕುತ್ತಿರುತ್ತದೆ. ಈ ಉಡುಪುಗಳು ಬಳಸದೇ ಇದ್ದರೆ ಹಾಳಾಗುತ್ತದೆ. ಹೀಗಾಗಿ ನಟಿ ಮಣಿಯರು ಎಲ್ಲ ಸೇರಿಕೊಂಡು ಈಗ ತಾವು ಧರಿಸಿದ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

    ಶೃತಿಹರಿಹರನ್ ಐಡಿಯಾ:
    ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೇ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ:
    ಶೃತಿಹರಿಹರನ್ ಯೋಚನೆಯಿಂದಾಗಿ ‘ದಿ ವ್ಯಾನಿಟಿ ಟ್ರಂಕ್ ಸೇಲ್’ ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಪಡಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ. ಸಂಗ್ರಹವಾದ ಹಣ ಅನಾಥ ಮಕ್ಕಳ ಕಲ್ಯಾಣ ನಿಧಿಗೆ ಬಳಕೆಯಾಗಲಿದೆ.

    ಯಾರೆಲ್ಲ ಕೈಜೋಡಿಸಿದ್ದಾರೆ?
    ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡು, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವತ್ಸ,ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

    ನೀವು ಏನು ಮಾಡಬೇಕು?
    ಈ ಸೇಲ್ ನಲ್ಲಿ ನಿಮಗೆ ಬಟ್ಟೆ/ ವಸ್ತುಗಳು ಬೇಕು ಎಂದಿದ್ದರೆ ಮೊದಲು ನೀವು https://insider.in/the-vanity-trunk-sale-nov12-2017/event ಹೆಸರು ನೊಂದಾಯಿಸಿಕೊಳ್ಳಬೇಕು. ನವೆಂಬರ್ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‍ನಲ್ಲಿರುವ ಬಿ ಹೈವ್ ವರ್ಕ್‍ಶಾಪ್‍ನಲ್ಲಿ ಈ ಸೇಲ್ ನಡೆಯುತ್ತದೆ.

     

  • ಶಕ್ತಿ, ಯುಕ್ತಿ, ಭಕ್ತಿಯ ‘ಉರ್ವಿ’ ಟ್ರೇಲರ್ ರಿಲೀಸ್ – ಭೇಷ್ ಅಂದ್ರು ಕಿಚ್ಚ ಸುದೀಪ್

    ಬೆಂಗಳೂರು: ಬಹುನಿರೀಕ್ಷಿತ ಮಹಿಳಾ ಪ್ರಧಾನ ಚಿತ್ರ ‘ಉರ್ವಿ’ ಟ್ರೇಲರ್ ಬಿಡುಗಡೆಯಾಗಿದೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಗುರುವಾರ ರಾತ್ರಿ ಟ್ರೇಲರ್ ಬಿಡುಗಡೆಗೊಳಿಸಿದರು.

    ಸ್ಟಾರ್ ನಟಿಯರಾದ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಜಾನ್ವಿ ಜ್ಯೋತಿ, ಮಧುಕರ್, ಪ್ರಭು ಮುಂಡ್ಕೂರು ಹಾಗೂ ವಾಸುಕಿ ವೈಭವ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ಅಚ್ಯುತ ಕುಮಾರ್ ಅವರೂ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರದೀಪ್ ವರ್ಮಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು ಚಿತ್ರದ ಟ್ರೇಲರ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿಸಿದೆ ಎನ್ನುವುದಂತೂ ಸುಳ್ಳಲ್ಲ. ಮನೋಜ್ ಜಾರ್ಜ್ ಚಿತ್ರಕ್ಕೆ ಸಂಗೀತ ನೀಡಿದರೆ ತಿಳಿ ಪ್ರೇಮ ಎಂಬ ಹಾಡನ್ನು ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ವಿಭಿನ್ನವಾದ ಪೋಸ್ಟರ್, ಹಾಡುಗಳಿಂದಲೇ ಉರ್ವಿ ಈಗಾಗಲೇ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಉರ್ವಿ ಚಿತ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಫೇಸ್‍ಬುಕ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಾವು ಮಾಡುವ ಚಿತ್ರದ ಬಗ್ಗೆ ಹೆಮ್ಮೆ ಇರುತ್ತದೆ. ಉರ್ವಿ ಎನ್ನುವುದು ನಮ್ಮ ಮಗು. ಇದು ನಿಮಗಿಷ್ಟವಾದರೆ ನಮಗೆ ತಿಳಿಸಿ ಎಂದು ಅವರು ಫೇಸ್‍ಬುಕ್ ವಾಲ್‍ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ ನೋಡಿದ ಕಿಚ್ಚ ಸುದೀಪ್, ಪವನ್ ಒಡೆಯರ್ ಮೆಚ್ಚುಗೆಯ ಮಾತನ್ನಾಡಿ ಚಿತ್ರ ತಂಡದ ಬೆನ್ನು ತಟ್ಟಿದ್ದಾರೆ.