Tag: Sruthi Hariharan

  • ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

    ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

    ಬೆಂಗಳೂರು: ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಇಂದು ಶೃತಿ ಹರಿಹರನ್ ಅವರು 5 ಪುಟಗಳ ದೂರು ದಾಖಲಿಸಿದ್ದಾರೆ. ಈ ಸಂಬಂಧ ಶೃತಿ ಹರಿಹರನ್ ಅವರಿಗೆ ಅರ್ಜುನ್ ಮಗಳು ಐಶ್ವರ್ಯಾ ಅರ್ಜುನ್ ಅವರು ಶೃತಿಗೆ ಸವಾಲೆಸೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಐಶ್ವರ್ಯಾ, ಶೃತಿ  ಒಂದು ತಿಂಗಳ ಹಿಂದೆಯಷ್ಟೇ ನನ್ನ ಅಪ್ಪನನ್ನು ಅವರು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಯಾಕೆ?. ಹಾಗೆಯೇ ಅವರು ಈ ಹಿಂದೆ ತಮಿಳು ನಿರ್ಮಾಪಕರ ವಿರುದ್ಧವೂ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಹಾಗಾದ್ರೆ ಅದರ ಬಗ್ಗೆ ಅವರು ಈಗ ಯಾಕೆ ಮಾತನಾಡುತ್ತಿಲ್ಲ. ಇದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ

    ನಮ್ಮಪ್ಪನ ಜೊತೆ ಕೆಲಸ ಮಾಡಲು ಖುಷಿಯಾಗಿದೆ ಅಂತ ಹೇಳುವ ಮೂಲಕ ನಗು ನಗುತ್ತಾ ನನ್ನ ಜೊತೆ ಮಾತನಾಡಿದ್ದು ಯಾಕೆ? ಇದರ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ. ನಾನು ಈಗ ಅವುಗಳನ್ನು ಬಯಲು ಮಾಡುತ್ತೇನೆ. ಇದರ ಹಿಂದಿನ ಉದ್ದೇಶವೇನು? ಇವೆಲ್ಲದಕ್ಕೂ ಶೃತಿ ಅವರ ಕಡೆಯಿಂದಲೇ ನನಗೆ ಉತ್ತರ ಬೇಕು ಅಂತ ಐಶ್ವರ್ಯಾ ಖಡಕ್ ಆಗಿ ನುಡಿದಿದ್ದಾರೆ. ಇದನ್ನೂ ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಮುಗ್ಧ ಜನಗಳ ಮೇಲೆ ಆರೋಪ ಮಾಡೋದಿಕೆ ಮೀಟೂ ಧೈರ್ಯ ಕೊಡ್ತು ಅಂತಾ ಹೇಳಿದ್ರೆ ನನಗೆ ನಾಚಿಕೆಯಾಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=p-XbtCRr48o

  • ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಬೆಂಗಳೂರು: ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿರುವ ನಟಿ ಶೃತಿ ಹರಿಹರನ್ ಅವರಿಗೆ ಮದುವೆ ಆಗಿದೆ ಎಂಬ ಅಂಶ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯಲ್ಲಿ ಬಹಿರಂಗವಾಗಿದೆ.

    ಹೌದು, ಇಂದು ನಟಿ ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಇದರೊಂದಿಗೆ ಹರಿಹರನ್ ಅವರಿಗೆ ಮದುವೆ ಆಗಿದೆ ಅಂಶ ಬಹಿರಂಗವಾಗಿದೆ. ಇದಕ್ಕೂ ಮುನ್ನ ನಟಿ ಶೃತಿ ಹರಿಹರನ್ ಅವರಿಗೆ ಮದುವೆ ಆಗಿದೆಯೇ ಇಲ್ಲವೇ ಎಂಬ ಸಂಗತಿ ಇಷ್ಟು ದಿನಗಳ ಕಾಲ ಗುಟ್ಟಾಗಿಯೇ ಇತ್ತು. ಆದರೆ ಮೀಟೂ ಅಭಿಯಾನದ ಭಾಗವಾಗಿ ನೀಡಿದ ದೂರಿನಿಂದ ಶೃತಿ ಅವರಿಗೆ ಮದುವೆ ಆಗಿದೆ ಎಂಬ ಅಂಶ ತಿಳಿದು ಬಂದಿದೆ.  ಇದನ್ನು ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ

    ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ರಾಮ್ ಕುಮಾರ್ ಕೇರಳದ ಪ್ರಸಿದ್ಧ ಕಲರಿ ಪಟ್ಟು ಎಂದು ತಿಳಿದು ಬಂದಿದೆ. ಈ ಹಿಂದೆ ಶೃತಿ ಸಹ ರಾಮ್ ಕುಮಾರ್ ಜತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಶೃತಿ ಹೇಳಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ ‘ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಅಭಿನಯ ಮಾಡಿದ್ದರು.

    ಶೃತಿ ಅವರು ತಮ್ಮ ದೂರಿನಲ್ಲಿ ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅನ್ಯಾಯದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ನನ್ನ ದೇಹದ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದರು. ಲೈಂಗಿಕ ತೃಷೆಗಾಗಿ ರೆಸಾರ್ಟ್ ಗೆ ಕರೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಂದಹಾಗೇ 2015 ರಲ್ಲಿ ಚಿತ್ರೀಕರಣಗೊಂಡ `ವಿಸ್ಮಯ’ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಪತ್ನಿಯಾಗಿ ಶೃತಿ ಅಭಿನಯಿಸಿದ್ದರು. ಈ ವೇಳೆ ನಡೆದ ಘಟನೆ ಬಗ್ಗೆ ಶೃತಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಅರ್ಜುನ್ ಸರ್ಜಾ ಆಪ್ತನ ವಿರುದ್ಧ ಎಫ್‍ಐಆರ್ ದಾಖಲು- ಶೃತಿ ಆರೋಪ ಏನು?

    ಅರ್ಜುನ್ ಸರ್ಜಾ ಆಪ್ತನ ವಿರುದ್ಧ ಎಫ್‍ಐಆರ್ ದಾಖಲು- ಶೃತಿ ಆರೋಪ ಏನು?

    ಬೆಂಗಳೂರು: ನಟಿ ಶೃತಿ ಹರಿಹರನ್ ದೂರು ನೀಡಿದ 15 ಗಂಟೆಯ ನಂತರ ಪೊಲೀಸರು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಕಳೆದ ರಾತ್ರಿ ಪ್ರಶಾಂತ್ ಸಂಬರ್ಗಿ ವಿರುದ್ಧ ಶೃತಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಎಫ್‍ಐಆರ್ ದಾಖಲಾಗಿರಲಿಲ್ಲ. ಶೃತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದ ಪೊಲೀಸರು ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸದ್ದಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಫ್‍ಐಆರ್ ದಾಖಲಿಸದ್ದು ಎಷ್ಟು ಸರಿ ಎಂದು ಶುಕ್ರವಾರ ಬೆಳಗ್ಗೆಯಿಂದ ಸುದ್ದಿ ಪ್ರಸಾರಿಸಿತ್ತು. ಕೊನೆಗೆ ಈಗ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ), 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) ಅಡಿ ಎಫ್‍ಐಆರ್ ದಾಖಲಾಗಿದೆ.

    ಶೃತಿ ಹರಿಹರನ್ ದೂರಿನಲ್ಲಿ ಏನಿತ್ತು?
    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾರೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ.

    ಅಷ್ಟೇ ಅಲ್ಲದೇ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸುವ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್ ಅವಳನ್ನು ಬಿಡುವುದಿಲ್ಲ ಎಂದಿದ್ದಾರೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಜುನ್ ವಿರುದ್ಧ ದೂರುಗಳ ಮೇಲೆ ದೂರು ನೀಡಲು ಮುಂದಾದ ಶೃತಿ

    ಅರ್ಜುನ್ ವಿರುದ್ಧ ದೂರುಗಳ ಮೇಲೆ ದೂರು ನೀಡಲು ಮುಂದಾದ ಶೃತಿ

    ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ದೂರುಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದಾರೆ.

    ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಅರ್ಜುನ್ ವಿರುದ್ಧ ದೂರು ನೀಡಲಿಲ್ಲ. ಫಿಲಂ ಚೇಂಬರ್ ಗೆ ಗೌರವ ನೀಡಿ ಶೃತಿ ಅರ್ಜುನ್ ವಿರುದ್ಧ ಯಾವುದೇ ದೂರು ನೀಡಿರಲಿಲ್ಲ.

    ಇಂದು ಡೆಡ್‍ಲೈನ್ ಮುಗಿದ ಕಾರಣ ಹಾಗೂ ಅರ್ಜುನ್ ಸರ್ಜಾ ವಾಣಿಜ್ಯ ಮಂಡಳಿಗೂ ಬರುವ ಮೊದಲೇ ದೂರು ನೀಡಿದ್ದ ಕಾರಣ ಶ್ರುತಿ ನಾಳೆ ನಟನ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಸದ್ಯ ಶೃತಿ ಅವರಿಗೆ ಶೂಟಿಂಗ್ ಇರುವ ಕಾರಣ ಅವರು ತಮಿಳುನಾಡಿಗೆ ಹೋಗಿದ್ದಾರೆ. ಇಂದು ತಡರಾತ್ರಿ ಅಥವಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಬೆಂಗಳೂರಿಗೆ ಆಗಮಿಸಿದ ನಂತರ ಶೃತಿ ಕಮೀಷನರ್‍ಗೆ ಹಾಗೂ ಮಹಿಳಾ ಆಯೋಗಕ್ಕೆ ಅರ್ಜುನ್ ಸರ್ಜಾ ಅವರ ಕಿರುಕುಳದ ಕುರಿತು ದೂರು ನೀಡಲು ನಿರ್ಧರಿಸಿದ್ದಾರೆ. ಸದ್ಯ ಇಂದು ಮಧ್ಯಾಹ್ನ ಸುದ್ದಿ ಗೋಷ್ಠಿ ನಡೆಸಿ ಈ ಬಗ್ಗೆ ಖುದ್ದು ಶ್ರುತಿ ಆಪ್ತರಿಂದ ಅರ್ಜುನ್ ಸರ್ಜಾ ವಿರುದ್ಧ ದೂರಿನ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಸದ್ಯ ಶೃತಿ, ಅರ್ಜುನ್ ವಿರುದ್ಧ ದೂರುಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದಾರೆ. ಸೇರಿಗೆ ಸವ್ವಾಸೇರು ಅನ್ನುವಂತೆ ಅರ್ಜುನ್ ಮಾನನಷ್ಟ ಮೊಕದ್ದಮ್ಮೆಗೆ ಶ್ರುತಿ ಪ್ರತಿ ದೂರು ನೀಡಲಿದ್ದಾರೆ. ಅಲ್ಲದೇ ಅರ್ಜುನ್ ವಿರುದ್ಧ ಲೈಂಗಿಕ ಕಿರುಕುಳ ದೂರು ಹಾಗೂ ಮಹಿಳಾ ಆಯೋಗಕ್ಕೆ ಪ್ರತ್ಯೇಕ ದೂರು ನೀಡಲು ಶ್ರುತಿ ಅಂಡ್ ಟೀಂ ಸಜ್ಜಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #MeToo ಬ್ಯಾಟಲ್‍ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಪ್ರಶಾಂತ್ ವಿರುದ್ಧ ಶೃತಿ ಮತ್ತೊಂದು ದೂರು

    #MeToo ಬ್ಯಾಟಲ್‍ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಪ್ರಶಾಂತ್ ವಿರುದ್ಧ ಶೃತಿ ಮತ್ತೊಂದು ದೂರು

    -ಸಂಬರ್ಗಿ ವಿರುದ್ಧ ಚೇತನ್ ಕೂಡ ದೂರು

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಅವರ ಮೀಟೂ ಬ್ಯಾಟಲ್ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ನಟಿ ಶೃತಿ ಹರಿಹರನ್ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ಮತ್ತೊಂದು ಕೇಸ್ ದಾಖಲಿಸಿದ್ದಾರೆ.

    ಪ್ರಶಾಂತ್ ವೈಯಕ್ತಿಕ ಮೆಸೇಜ್‍ಗಳನ್ನು ಸೈಬರ್ ಎಕ್ಸ್ ಪರ್ಟ್‍ಗಳಿಂದ ತೆಗೆಸಿದ್ದಾರೆ. ನನ್ನ ಪರ್ಸನಲ್ ನಂಬರ್ ಕಾಲ್ ಡಿಟೇಲ್ಸ್ ತೆಗೆಯಲು ಇವರ್ಯಾರು?. ಕಾನೂನಿನ ಪ್ರಕಾರವಷ್ಟೇ ಕಾಲ್ ಡಿಟೇಲ್ಸ್ ತೆಗೆಯಲು ಅವಕಾಶವಿದೆ. ಎಥಿಕಲ್ ಹ್ಯಾಕರ್ಸ್ ಮೂಲಕ ನನ್ನ ಮಾಹಿತಿ ಕಲೆ ಹಾಕಿದ್ದಾರೆ. ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲಸಲ್ಲದ ಪೋಸ್ಟ್ ಮಾಡಿದ್ದಾರೆ. ನನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳನ್ನು ಮಾಡಿ ಟ್ರೋಲ್ ಮಾಡಲಾಗ್ತಿದೆ. ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿಲಾಗ್ತಿದೆ. ಕೂಡಲೇ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ನಟಿ ಶೃತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

    ನಟ ಹಾಗೂ ಫೈರ್ ಸಂಸ್ಥೆ ಮುಖ್ಯಸ್ಥ ಚೇತನ್ ಅವರು ಕೂಡ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನ್ ಅವರು ಪ್ರಶಾಂತ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ನಾನು ಹುಟ್ಟು ಹಾಕಿದ ಫೈರ್ ಸಂಸ್ಥೆ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಫೇಸ್‍ಬುಕ್ ಮೂಲಕ ಅನಾಮಧೇಯ ಕರೆ ಮಾಡಿದ್ದಾರೆ. ಅನಾಮಧೇಯ ಕರೆಯನ್ನು ಪ್ರಶಾಂತ್ ಸಂಬರ್ಗಿ ಸಾಬೀತು ಪಡಿಸಲಿ, ಇಲ್ಲದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ನಟ ಚೇತನ್ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಕಲ್ ಪರ ಕ್ಯಾಂಪೇನ್ ಶುರು ಮಾಡಿದ್ರು ಚಿರಂಜೀವಿ ಸರ್ಜಾ

    ಅಂಕಲ್ ಪರ ಕ್ಯಾಂಪೇನ್ ಶುರು ಮಾಡಿದ್ರು ಚಿರಂಜೀವಿ ಸರ್ಜಾ

    ಬೆಂಗಳೂರು: ಭಾರತೀಯ ಸಿನಿಮಾರಂಗದಲ್ಲಿ ನಟಿ ಶೃತಿ ಹರಿಹರನ್ ಮತ್ತು ಬುಹುಭಾಷಾ ನಟ ಅರ್ಜುನ್ ಸರ್ಜಾ ಅವರು ಮೀಟೂ ಆರೋಪದ ಸುದ್ದಿಯೇ ಹರಿದಾಡುತ್ತಿದೆ. ಈಗ ತಮ್ಮ ಅಂಕಲ್ ಅರ್ಜುನ್ ಸರ್ಜಾ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಚಿರಂಜೀವಿ ಸರ್ಜಾ ಅವರು ಕ್ಯಾಂಪೇನ್ ಶುರು ಮಾಡಿದ್ದಾರೆ.

    ಶೃತಿ ಹರಿಹರನ್ ಮೀಟೂ ಆರೋಪ ವಿಚಾರವಾಗಿ ನಟ ಚಿರಂಜೀವಿ ಸರ್ಜಾ ಟ್ವೀಟ್ ಅಭಿಯಾನವನ್ನು ಆರಂಭಿಸಿದ್ದಾರೆ. ಚಿರಂಜೀವಿ ಸರ್ಜಾ ಅವರು ತಮ್ಮ ಟ್ಟಿಟ್ಟರ್ ನಲ್ಲಿ “ಸ್ನೇಹಿತರೆ ನಾನು ಜೆಂಟಲ್‍ಮ್ಯಾನ್ ಅರ್ಜುನ್ ಸರ್ಜಾ ಅವರಿಗೆ ಬೆಂಬಲ ನೀಡುತ್ತೇನೆ, ನೀವು ಏನು ಹೇಳುತ್ತೀರಾ” ಎಂದು ಅರ್ಜುನ್ ಸರ್ಜಾ ಅವರ ಫೋಟೋ ಪೋಸ್ಟ್ ಮಾಡಿ, ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಂಕಲ್ ಪರವಾಗಿ ಅಭಿಯಾನ ಶುರು ಮಾಡಿದ್ದಾರೆ.

    ಚಿರಂಜೀವಿ ಸರ್ಜಾ ಅವರು ”#istandwithgentlemen” ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಈ ರೀತಿ ಬರೆದು ಅವರು ಧೃವ, ಮೇಘನಾ, ಐಶ್ವರ್ಯ ಮತ್ತು ಅಂಜನಾ ಅರ್ಜುನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರು ಶುರುಮಾಡಿದ ಕ್ಯಾಂಪೇನ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಗುರುವಾರಷ್ಟೆ ಫಿಲಂ ಚೇಂಬರ್ ನಲ್ಲಿ ಹಿರಿಯ ನಟ ಅಂಬರೀಶ್ ಸೇರಿದಂತೆ ಹಲವರ ಸಹಭಾಗಿತ್ವದಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ನಡುವೆ ಸಂಧಾನ ನಡೆಸಲಾಗಿತ್ತು. ಈ ವೇಳೆ ಅರ್ಜುನ್ ಸರ್ಜಾ ಅವರು, ನಾನು ಕಳೆದ 35ರಿಂದ 38 ವರ್ಷಗಳಿಂದ ಅಪಾರ ಗೌರವವನ್ನು ಹೊಂದಿದ್ದೇನೆ. ಇಂದು ನನಗೆ ಕರೆದರು ಹಾಗಾಗಿ ಬಂದಿದ್ದೇನೆ. ನನಗೆ ನೋವು ಆಗಿದ್ದರೆ, ಸುಮ್ಮನಿರುತ್ತಿದ್ದೆ. ನನ್ನನ್ನು ನಂಬಿದವರು, ಕುಟುಂಬ ಸದಸ್ಯರು ಕೇರಳ, ತಮಿಳುನಾಡು, ಆಂಧ್ರ ಕರ್ನಾಟಕದ ಅಭಿಮಾನಿಗಳು ನೊಂದಿದ್ದಾರೆ. ಹಾಗಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಅಂತ ತಿಳಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Mud4GP9t0ik

    https://www.youtube.com/watch?v=RKPY3g4jWRM

  • ಶೃತಿ ರಾತ್ರೋರಾತ್ರಿ ದೂರು ನೀಡಿದ್ದರೂ ದಾಖಲಾಗಿಲ್ಲ ಎಫ್‍ಐಆರ್

    ಶೃತಿ ರಾತ್ರೋರಾತ್ರಿ ದೂರು ನೀಡಿದ್ದರೂ ದಾಖಲಾಗಿಲ್ಲ ಎಫ್‍ಐಆರ್

    ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದರು. ಆದರೆ ಶೃತಿ ದೂರು ನೀಡಿದರೂ, ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.

    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು ಎಂದು ಶೃತಿ ದೂರು ನೀಡಿದ್ದರೂ, ಆದರೆ ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.

    ಗುರುವಾರ ಸಂಜೆ ಫಿಲಂ ಚೇಂಬರ್ ನಮಗೆ ಕರೆ ಮಾಡಿ ಸಭೆಗೆ ಕರೆಸಿದ್ದರು. ನಾವು ಫಿಲಂ ಚೇಂಬರ್ ಮಾತಿಗೆ ಗೌರವಿಸಿ ಯಾವುದೇ ದೂರು ನೀಡಿಲ್ಲ. ಆದರೆ ಅರ್ಜುನ್ ಅವರು ಶೃತಿ ವಿರುದ್ಧ ಎರಡು ದೂರು ದಾಖಲಿಸಿದ್ದಾರೆ. ನಾವು ರಾತ್ರಿ ದೂರು ನೀಡಿದ್ದೆವು. ಆದರೆ ರಾತ್ರಿ ಆಗಿದ್ದರಿಂದ ನಾವು ಪೊಲೀಸರಿಗೆ ಹೆಚ್ಚಿನ ಒತ್ತಡ ಹೇರಲಿಲ್ಲ ಎಂದು ಶೃತಿ ಪರ ವಕೀಲರಾದ ಅನಂತ್‍ನಾಯಕ್ ತಿಳಿಸಿದ್ದಾರೆ.

    ದೂರು ನೀಡಿದ್ದರೆ ಅದರಲ್ಲಿರುವ ಸಾರಾಂಶ ಮುಖ್ಯವಾಗುತ್ತದೆ. ಎರಡು ರೀತಿಯ ದೂರು ಇರುತ್ತದೆ. ಒಂದು ಕಾಗ್ನಿಸಬಲ್ ಹಾಗೂ ನಾನ್ ಕಾಗ್ನಿಸಬಲ್ ಎಂಬುದು ನೋಡಬೇಕು. ದೂರು ಕಾಗ್ನಿಸಬಲ್ ಆಗಿದ್ದರೆ ನಾವು ಎಫ್‍ಐಆರ್ ದಾಖಲಿಸುತ್ತೇವೆ. ಆದರೆ ದೂರು ನಾನ್ ಕಾಗ್ನಿಸಬಲ್ ಆದರೆ ಕೋರ್ಟ್ ಮೊರೆ ಹೋಗುತ್ತೇವೆ. ಕೋರ್ಟ್ ಒಪ್ಪಿಕೊಂಡರೆ ಆಗ ನಾವು ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಸೆಂಟ್ರಲ್ ಡಿಸಿಪಿ ದೇವರಾಜ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

    ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾನೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾನೆ.

    ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ. ಮುಂದುವರಿದು ಮಾತನಾಡಿದ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸೋ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾನೆ.

    ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್‍ಳನ್ನು ಬಿಡುವುದಿಲ್ಲ ಎಂದಿದ್ದಾನೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾನೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ ಎಂಬುದಾಗಿ ಶೃತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಸದ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik

  • ಶೃತಿ, ಅರ್ಜುನ್ ಸರ್ಜಾ ಸಂಧಾನ ವಿಫಲ- ಕಾನೂನು ಹೋರಾಟಕ್ಕೆ ಇಬ್ಬರಿಂದಲೂ ಸಿದ್ಧತೆ

    ಶೃತಿ, ಅರ್ಜುನ್ ಸರ್ಜಾ ಸಂಧಾನ ವಿಫಲ- ಕಾನೂನು ಹೋರಾಟಕ್ಕೆ ಇಬ್ಬರಿಂದಲೂ ಸಿದ್ಧತೆ

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಡುವಿನ ಹೋರಾಟ ಈಗ ಕಾನೂನಾತ್ಮಕ ರೂಪ ಪಡೆದುಕೊಂಡಿದೆ. ಗುರುವಾರ ಫಿಲಂ ಚೇಂಬರ್‍ನಲ್ಲಿ ಸಂಧಾನ ಸಭೆ ಮುರಿದು ಬಿದ್ದಿದ್ದರಿಂದ ಇಬ್ಬರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.

    ನಿನ್ನೆ ಅರ್ಜುನ್ ಸರ್ಜಾ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಕೇಸ್ ದಾಖಲಿಸಿದ್ದಾರೆ. ಅಲ್ಲದೇ, ಇಂದು ಚೆನ್ನೈ, ಹೈದ್ರಾಬಾದ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಫೈಲ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಚೆನ್ನೈ, ಹೈದ್ರಾಬಾದ್ ನಲ್ಲೂ ಜಾಲತಾಣಗಳಲ್ಲಿ ಅರ್ಜುನ್  ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಅಂತ ಸೈಬರ್ ಕ್ರೈಂಗೆ ದೂರು ಕೊಡಲು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಾಬ್ಲಂ ಆಗಿದ್ದು ನನ್ಗೆ, ನಾನ್ಯಾಕೆ ಕ್ಷಮೆ ಕೇಳಲಿ: ಶೃತಿ ಹರಿಹರನ್

    ಇದೆಲ್ಲದರ ನಡುವೆ ಶೃತಿ ಹರಿಹರನ್ ಸಹ ಇಂದು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಇಂದು ಮೆಯೋಹಾಲ್ ಕೋರ್ಟ್ ನಲ್ಲಿ ಅರ್ಜುನ್ ಸರ್ಜಾ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಲಿದೆ. ಕೋರ್ಟ್ ಬೆಳವಣಿಗೆ ನೋಡಿಕೊಂಡು ಶೃತಿ ಹರಿಹರನ್ ಸಹ ದೂರು ಕೊಡಲು ನಿರ್ಧರಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಕ್ರಿಮಿನಲ್ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸಂಧಾನ ಇಲ್ಲವೇ ಇಲ್ಲ, ಕೋರ್ಟ್ ಗೆ ಹೋಗ್ತಿನಿ: ಅರ್ಜುನ್ ಸರ್ಜಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik

  • ಶೃತಿ ಪರ ಬ್ಯಾಟ್ ಬೀಸಿ ಈಗ ಉಲ್ಟಾ ಹೊಡೆದ ನಟ ಪ್ರಕಾಶ್ ರೈ

    ಶೃತಿ ಪರ ಬ್ಯಾಟ್ ಬೀಸಿ ಈಗ ಉಲ್ಟಾ ಹೊಡೆದ ನಟ ಪ್ರಕಾಶ್ ರೈ

    ಬೆಂಗಳೂರು: ಮೀಟೂ ಅಭಿಯಾನದ ಅಡಿಯಲ್ಲಿ ನಟಿ ಶೃತಿ ಹರಿಹರನ್ ಪರ ಬ್ಯಾಟ್ ಮಾಡಿದ್ದ ಬಹುಭಾಷಾ ನಟ ಪ್ರಕಾಶ್ ರೈ ಈಗ ಅರ್ಜುನ್ ಸರ್ಜಾ ಅವರನ್ನು ಹೊಗಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿ ಅರ್ಜುನ್ ನನ್ನ ಬಹುಕಾಲದ ಗೆಳೆಯ ಹಾಗೂ ಸಹಪ್ರಯಾಣಿಕ. ಆತನನ್ನು ನಾನು ತುಂಬಾ ಚೆನ್ನಾಗಿ ತಿಳಿದಿದ್ದೇನೆ. ಶೃತಿ ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ. ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೇ ಪ್ರಕರಣವನ್ನು ಇತ್ಯರ್ಥ ಪಡಿಸಿ ಎಂದು ಹೇಳಿಕೊಂಡಿದ್ದಾರೆ.

    ಪ್ರಕಾಶ್ ರೈ ಹೇಳಿದ್ದೇನು?
    ಅರ್ಜುನ್ ನನ್ನ ಬಹುಕಾಲದ ಗೆಳೆಯ ಹಾಗೂ ಸಹಪ್ರಯಾಣಿಕ. ಆತನನ್ನು ನಾನು ತುಂಬಾ ಚೆನ್ನಾಗಿ, ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ. ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ. ಯಾರ ಬಗ್ಗೆಯೂ ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ. ಶೃತಿ ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ. ಅಪ್ಪಟ ಪ್ರತಿಭಾವಂತೆ. ದಿಟ್ಟ ಹೆಣ್ಣು. ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ. ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರೂ ಮಾಡಲು ಸಾಧ್ಯವಿರುವವರು. ಈ ಸತ್ಯದ ಹಿನ್ನೆಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು. ಪಕ್ಷಪಾತವಿಲ್ಲದೇ ಪೂರ್ವಾಗ್ರಹಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೇ ಇತ್ಯರ್ಥಿಸಿ.

    ಪ್ರಕಾಶ್ ಈ ಹಿಂದೆ ಶೃತಿ ಆರೋಪದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, “ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ಅವರು ಕನ್ನಡದ ಹೆಮ್ಮೆ. ಹಿರಿಯ ನಟರೂ ಎಂಬುದನ್ನೂ ಮರೆಯದಿರೋಣ. ಆದರೆ ಶೃತಿಯವರ ಆರೋಪದ ಹಿನ್ನೆಲೆಯಲ್ಲಿ ಆ ಹೆಣ್ಣು ಅನುಭವಿಸಿದ ಅಸಹಾಯಕತೆ, ಅವಮಾನ, ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರ್ಜುನ್ ಅವರು ಈ ಆರೋಪವನ್ನು ಅಲ್ಲಗಳೆದರೂ ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟು ಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ” ಎಂದು ಹೇಳಿದ್ದರು.

    ಅಲ್ಲದೇ ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು, ಬೇಡಗಳ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಅರಿಯದೇ ಇರುವುದೂ ಅಷ್ಟೇ ನಿಜ. ಪ್ರಸ್ತುತ ಹೆಣ್ಣುಮಕ್ಕಳ ಈ ಮೀಟೂ ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯ, ಅವಮಾನ ಹಾಗೂ ಅಸಹಾಯಕತೆಗೆ ಕೊನೆಯನ್ನು ಕಾಣಲಿ. ನಾನು ಶೃತಿ ಹರಿಹರನ್ ಅವರ ಪರವಾಗಿ ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv