Tag: Sruthi Hariharan

  • ನಾನು ಸಕ್ಕರೆ ಇದ್ದಂತೆ-ತಮ್ಮನ್ನ ತಾವೇ ಹೊಗಳಿಕೊಂಡ ಮೀಟೂ ಬೆಡಗಿ ಶೃತಿ ಹರಿಹರನ್

    ನಾನು ಸಕ್ಕರೆ ಇದ್ದಂತೆ-ತಮ್ಮನ್ನ ತಾವೇ ಹೊಗಳಿಕೊಂಡ ಮೀಟೂ ಬೆಡಗಿ ಶೃತಿ ಹರಿಹರನ್

    ಬೆಂಗಳೂರು: ನಟಿ ಶೃತಿ ಹರಿಹರನ್ ಮಾಧ್ಯಮಗಳನ್ನು ಕಂಡು ಗರಂ ಆಗಿ, ನಾನೊಂಥರಾ ಸಕ್ಕರೆ ಇದ್ದಂತೆ, ಅದಕ್ಕೆ ಮಾಧ್ಯಮಗಳು ಇರುವೆಗಳ ರೀತಿಯಲ್ಲಿ ನನ್ನ ಹಿಂದೆ ಬರುತ್ತವೆ ಎಂದು ಹೇಳಿ ತಮ್ಮನ್ನು ತಾವೇ ಹೊಗಳಿಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

    ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಇತ್ತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ ಸಹಜವಾಗಿ ಶೃತಿ ಮೇಲೆ ಅಸಮಾಧಾನಗೊಂಡಿತಂತೆ.

    ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.

    ಶೃತಿ ಹರಿಹರನ್ ಕಚೇರಿಗೆ ಬರುವ ಮುನ್ನ ಮಾತನಾಡಿದ ನಾಗಲಕ್ಷ್ಮಿ, ಹೋದ ವಾರ ಬರುತ್ತೀನಿ ಅಂತ ಶೃತಿ ಹರಿಹರನ್ ಹೇಳಿದ್ದರು. ಆದರೆ ಸಾಲು ಸಾಲುಗಳು ಹಬ್ಬ ಬಂದಿದ್ದರಿಂದ ಬರಲಿಲ್ಲ. ಇಂದು ಬರುತ್ತೀನಿ ಅಂದ್ರು. ನನ್ನ ಬಳಿ ತಮ್ಮ ನೋವನ್ನು ಹೇಳಿಕೊಳ್ಳುತ್ತೇನೆ ಅಂತಾ ಅಂದ್ರು. ಮಹಿಳೆಯರು ತಮಗಾದ ನೋವನ್ನು ನಮ್ಮ ಮುಂದೆ ಬಂದು ಹೇಳಲಿ ಅಥವಾ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಬಹುದು. ಅದನ್ನು ಬಿಟ್ಟು ಫೇಸ್‍ಬುಕ್, ಟ್ವಿಟ್ಟರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಉಚಿತವಲ್ಲ. ಶೃತಿ ಹರಿಹರನ್ ಪ್ರಕರಣ ಈಗಾಗಲೇ ನ್ಯಾಯಲಯದಲ್ಲಿದ್ದರಿಂದ ನಾನು ಯಾರ ಪರವಾಗಿಯೂ ಇಲ್ಲ. ಬಂದ ಮೇಲೆ ಶೃತಿ ಏನು ಹೇಳ್ತಾರೆ ಎಂದು ಕೇಳಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಸಹನೆಗೆ ಕಾರಣವೇನು?

    ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಸಹನೆಗೆ ಕಾರಣವೇನು?

    ಬೆಂಗಳೂರು: ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಮೀ ಟೂ ಆರೋಪ ದಿನಕ್ಕೊಂದು ರೂಪ ಪಡೆಯುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗ ಇತ್ತೀಚೆಗೆ ಸ್ವಯಂಪ್ರೇರಿತ ದೂರು ದಾಖಲಿಸಿತ್ತಲ್ಲಾ? ಇದೀಗ ಖುದ್ದು ಮಹಿಳಾ ಆಯೋಗವೇ ಶ್ರುತಿ ಹರಿಹರನ್ ವಿರುದ್ಧ ಅಸಹನೆಗೊಂಡಿರೋ ಸುದ್ದಿಯೊಂದು ಹೊರಬಿದ್ದಿದೆ.

    ಹೀಗೊಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ಈ ಬಗ್ಗೆ ಹೇಳಿಕೆ ಕೊಡುವಂತೆ ಶ್ರುತಿ ಹರಿಹರನ್ ಗೆ ಸೂಚಿಸಿತ್ತು. ಆದರೆ ಶ್ರುತಿ ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಇದಲ್ಲದೇ ಆಯೋಗದ ಫೋನ್ ಕರೆ, ಸಂದೇಶಗಳಿಗೂ ಶ್ರುತಿ ಪ್ರತಿಕ್ರಿಯಿಸುತ್ತಿಲ್ಲವಂತೆ. ಇದುವೇ ಮಹಿಳಾ ಆಯೋಗದ ಅಸಹನೆಗೆ ಕಾರಣವಾಗಿದೆ.

    ಇದೆಲ್ಲದರಿಂದಾಗಿ ಮಹಿಳಾ ಆಯೋಗ ಶ್ರುತಿಗೊಂದು ಖಡಕ್ಕು ಸಂದೇಶ ರವಾನಿಸಿದೆಯಂತೆ. ಇದನ್ನು ಕಂಡು ಕಸಿವಿಸಿಗೊಂಡ ಶ್ರುತಿ ಕ್ಷಮೆ ಯಾಚಿಸಿ ಸೋಮವಾರ ಹಾಜರಾಗಿ ಹೇಳಿಕೆ ಕೊಡೋದಾಗಿ ಹೇಳಿದ್ದಾರಂತೆ. ಶ್ರುತಿ ಮಹಿಳಾ ಆಯೋಗದ ಮುಂದೆ ಹೋಗಿ ಹೇಳಿಕೆ ಕೊಡಲು ಯಾಕೆ ಮೀನ-ಮೇಷ ಎಣಿಸುತ್ತಿದ್ದಾರೆಂಬ ಪ್ರಶ್ನೆಯೂ ಸಹಜವಾಗಿಯೇ ಕಾಡುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಟ ಅರ್ಜುನ್ ಸರ್ಜಾಗೆ ನೋಟಿಸ್

    ನಟ ಅರ್ಜುನ್ ಸರ್ಜಾಗೆ ನೋಟಿಸ್

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾಗೆ ನೋಟಿಸ್ ಜಾರಿ ಮಾಡಲಾಗಿದೆ.

    ಹೌದು. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಈ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ನಾಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿಚಾರಣೆ ನಡೆಯಲಿದೆ.

    ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನಟ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ದೂರು ಕೂಡ ದಾಖಲಿಸಿದ್ದರು. ಶೃತಿ ದೂರಿನಂತೆ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಈಗಾಗಲೇ ದೂರು ಸಂಬಂಧ ಪೊಲೀಸರು ಕೃತ್ಯ ನಡೆದ ಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಅಲ್ಲದೇ ಶೃತಿ ಹರಿಹರನ್ ದೂರಿನಲ್ಲಿ ತಿಳಿಸಿದ್ದ ಐವರು ಸಾಕ್ಷಿಗಳ ಹೇಳಿಕೆಯನ್ನು ಕೂಡ ಪಡೆದುಕೊಂಡಿದ್ದಾರೆ. ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್, ನಿರ್ಮಾಪಕ ಉಮೇಶ್, ಮೇಕಪ್ ಮ್ಯಾನ್ ಕಿರಣ್, ಸಹ ನಿರ್ದೇಶಕಿ ಮೋನಿಕಾ ಹಾಗೂ ಶೃತಿ ಸಹಾಯಕ ಬೋರೆಗೌಡ ಹೇಳಿಕೆಯನ್ನು ಕೂಡ ದಾಖಲಿಸಿಕೊಳ್ಳಲಾಗಿದೆ.

     

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾ ವಿಚಾರಣೆಗೆ ಅಗಮಿಸೋ ನಿರೀಕ್ಷೆಯಲ್ಲಿದ್ದು, ನಾಳೆಯ ಬೆಳವಣಿಗೆ ತೀವ್ರ ಕುತೂಹಲ ಹುಟ್ಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ocJXRWTsd60

    https://www.youtube.com/watch?v=pqnp-LBxMcc

  • ಮೀಟೂ ಕೇಸಲ್ಲಿ ಸರ್ಜಾಗಿಂದು ನಿರ್ಣಾಯಕ ದಿನ – ಹೈಕೋರ್ಟ್, ಮೆಯೋಹಾಲ್ ಕೋರ್ಟ್ ನಿಂದ ತೀರ್ಪು

    ಮೀಟೂ ಕೇಸಲ್ಲಿ ಸರ್ಜಾಗಿಂದು ನಿರ್ಣಾಯಕ ದಿನ – ಹೈಕೋರ್ಟ್, ಮೆಯೋಹಾಲ್ ಕೋರ್ಟ್ ನಿಂದ ತೀರ್ಪು

    ಬೆಂಗಳೂರು: ಇಂದು ಅರ್ಜುನ್ ಸರ್ಜಾಗೆ ನಿರ್ಣಾಯಕ ದಿನ. ತನ್ನ ಮೇಲೆ ಶೃತಿ ಹರಿಹರನ್ ದಾಖಲಿಸಿರೋ ಎಫ್‍ಐಆರ್ ರದ್ದು ಕೋರಿ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಮುಂದೆ ಬರಲಿದೆ.

    ಅರ್ಜಿ ವಿಚಾರಣೆ ಮುಗಿಯುವವರೆಗೂ ಎಫ್‍ಐಆರ್ ಮೇಲಿನ ತನಿಖೆಗೆ ತಾತ್ಕಾಲಿಕ ತಡೆ ಕೋರಲು ಅರ್ಜುನ್ ಸರ್ಜಾ ಪರ ವಕೀಲರು ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ದ ಮಾತನಾಡದಂತೆ ತಡೆ ಕೋರಿ ಸಲ್ಲಿಸಿರೋ ಅರ್ಜಿಯ ವಿಚಾರಣೆಯು ಸಹ ಇಂದೇ ಬರಲಿದ್ದು ತಕ್ಕ ಉತ್ತರ ನೀಡಲು ಶೃತಿ ಪರ ವಕೀಲರು ಸಹ ಸಜ್ಜಾಗಿದ್ದಾರೆ. ಇಂದು ಅರ್ಜುನ್ ಸರ್ಜಾ ಸಲ್ಲಿಸಿರೋ ಎರಡು ಅರ್ಜಿಗಳು ಸರ್ಜಾ ಪಾಲಿಗೆ ತುಂಬಾನೆ ಮಹತ್ವವಾಗಿದೆ.

    ಆರೋಪ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಈಅಗಾಲೇ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್ ಮತ್ತು ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆಯನ್ನು ರಹಸ್ಯ ಸ್ಥಳದಲ್ಲಿ ಪೊಲೀಸರು ವಿಡಿಯೋ ಮಾಡಿಕೊಂಡಿದ್ದರು. ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಹಾಗೂ ಪಿಎಸ್‍ಐ ರೇಣುಕಾ ಸಮ್ಮುಖದಲ್ಲಿ ಸಾಕ್ಷಿಗಳ ಈ ಹೇಳಿಕೆ ದಾಖಲು ಮಾಡಿದ್ದರು.

    ಕಿರಣ್ ಹೇಳಿದ್ದು ಏನು?
    ಶೃತಿ ಹರಿಹರನ್ ಗೆ ಅರ್ಜುನ್ ಸರ್ಜಾ ಅವರಿಂದ ಕಿರುಕುಳ ಆಗಿದ್ದು ನಿಜ. ರಿಹರ್ಸಲ್ ವೇಳೆಯೂ ಶೃತಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ನಾವು ದೇವನಹಳ್ಳಿಯಿಂದ ಹೊರಟಾಗ ಸಿಗ್ನಲ್ ಬಳಿ ಅರ್ಜುನ್ ಸರ್ಜಾ ಮತ್ತೊಂದು ಕಾರಿನಲ್ಲಿ ಎದುರಾದರು. ಆಗ ನಾನು ಶೃತಿ ಹರಿಹರನ್ ಪಕ್ಕದಲ್ಲಿಯೇ ಕುಳಿತ್ತಿದ್ದೆ. ಶೃತಿ ಹರಿಹರನ್ ಅವರನ್ನು ಅರ್ಜುನ್ ಸರ್ಜಾರ ಊಟಕ್ಕೆ ಕರೆದರು. ಅಷ್ಟೇ ಅಲ್ಲದೇ ರೆಸಾರ್ಟ್ ಗೆ ಹೋಗೋಣ ಬಾ ಎಂದಿದ್ದರು. ಈ ಸಂದರ್ಭದಲ್ಲಿ ಸರ್ಜಾ ಜೊತೆ ಊಟಕ್ಕೆ ಹೋಗಲು ಶೃತಿ ಹರಿಹರನ್ ನಿರಾಕರಿಸಿ ಕಣ್ಣಿರು ಹಾಕಿದರು. ಇದಕ್ಕೆ ನಾನೇ ಸಾಕ್ಷಿ, ನಾನು ಆಗ ಅವರ ಪಕ್ಕದಲ್ಲೇ ಕುಳಿತಿದ್ದೆ. ನಂತರ ಅರ್ಜುನ್ ಸರ್ಜಾ ಹೊರಟರು ಅಂತ ಹೇಳಿದ್ದರು.

    ಮೋನಿಕಾ ಹೇಳಿದ್ದು ಏನು?
    ನನಗೇನು ಗೊತ್ತಿಲ್ಲ, ನನಗೆ ಏನೂ ನೆನಪಾಗುತ್ತಿಲ್ಲ. ವಿಸ್ಮಯ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಏನಾಯ್ತು ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ. ಲೈಂಗಿಕ ಕಿರುಕುಳ ಬಗ್ಗೆ ನನಗೇನೂ ಗೊತ್ತಿಲ್ಲ, ಶೃತಿಯೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆ ನೀಡಿದ್ದರು.

    ಅರ್ಜುನ್ ಸರ್ಜಾ ಹೂಡಿದ್ದ ಮಾನನಷ್ಟ ಕೇಸ್ ವಿಚಾರಣೆಯನ್ನು ಶುಕ್ರವಾರ ಮೇಯೋ ಹಾಲ್ ಕೋರ್ಟ್ ಮುಂದೂಡಿದೆ. ಕಳೆದ ಸೋಮವಾರವಷ್ಟೇ ಶೃತಿಹರನ್ ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಲು ಸಮಯ ಬೇಕು ಎಂದು ಸರ್ಜಾ ಪರ ವಕೀಲರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಧೀಶರು ವಿಚಾರಣೆಯನ್ನ ಇಂದಿಗೆ ಮುಂದೂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ocJXRWTsd60

    https://www.youtube.com/watch?v=qdCxHFsxpXU

    https://www.youtube.com/watch?v=tfCyk-4a2rg

  • ನಟ ಅರ್ಜುನ್ ಸರ್ಜಾ ಮೇಲೆ ಬಿತ್ತು ಮತ್ತೊಂದು ಕೇಸ್..!

    ನಟ ಅರ್ಜುನ್ ಸರ್ಜಾ ಮೇಲೆ ಬಿತ್ತು ಮತ್ತೊಂದು ಕೇಸ್..!

    ಬೆಂಗಳೂರು: ನಟಿ ಶೃತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.

    ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ತನಿಖೆ ಮಾಡಿ ನಮಗೆ ವರದಿ ಸಲ್ಲಿಸಿ ಅಂತ ಆಯೋಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಶೃತಿ ಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಮಹಿಳಾ ಆಯೋಗ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಇದರ ಜೊತೆಗೆ ಶೃತಿ ಹರಿಹರನ್ ಜೊತೆಯೂ ದೂರವಾಣಿ ಸಂಪರ್ಕ ಮಾಡಿ ಮಾತುಕತೆಯನ್ನು ನಡೆಸಲಾಗಿದೆ. ಇಷ್ಟು ಮಾತ್ರವಲ್ಲದೇ ಅರ್ಜುನ್ ಸರ್ಜಾ ಅವರಿಗೆ 3 ದಿನಗಳ ಕಾಲವಕಾಶ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿದೆ.

    ಪ್ರಕರಣ ಸಂಬಂಧ ಎಫ್‍ಐಆರ್ ಅನ್ನು ಮಹಿಳಾ ಆಯೋಗ ಈಗಾಗಲೇ ಪಡೆದುಕೊಂಡಿದೆ. ಘಟನೆಯ ಬಗ್ಗೆ ಅರ್ಜುನ್ ಸರ್ಜಾ ಹೇಳಿಕೆ ಹಾಗೂ ಶೃತಿ ದೂರು ಎಲ್ಲವನ್ನೂ ಮಹಿಳಾ ಆಯೋಗ ಕ್ರೂಢೀಕರಿಸಿಕೊಂಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೃತಿ ಹರಿಹರನ್ ಹೇಳಿಕೆಗೆ ನಿರ್ಬಂಧ ಕೋರಿ ಸರ್ಜಾ ಅರ್ಜಿ-ಇಂದು ಕೋರ್ಟ್ ನಲ್ಲಿ ವಿಚಾರಣೆ

    ಶೃತಿ ಹರಿಹರನ್ ಹೇಳಿಕೆಗೆ ನಿರ್ಬಂಧ ಕೋರಿ ಸರ್ಜಾ ಅರ್ಜಿ-ಇಂದು ಕೋರ್ಟ್ ನಲ್ಲಿ ವಿಚಾರಣೆ

    ಬೆಂಗಳೂರು: ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಈಗ ತಿಕ್ಕಾಟಕ್ಕೆ ಶುರು ಮಾಡಿಕೊಟ್ಟಿದೆ. ಶೃತಿ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ಇಂದು ವಿಚಾರಣೆ ನಡೆದು ಮಧ್ಯಂತರ ಆದೇಶ ಪ್ರಕಟವಾಗಲಿದೆ. ಇತ್ತ ಸೋಮವಾರ ಗೈರಾಗಿದ್ದ ನಾಲ್ವರು ಇಂದು ಸಾಕ್ಷಿ ನುಡಿಯಲಿದ್ದಾರೆ.

    ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯ ದೂರು ನೀಡಿ ಮೂರು ದಿನಗಳೆ ಕಳೆದು ಹೋಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಕೂಡಾ ಜೋರಾಗಿಯೇ ತನಿಖೆ ಆರಂಭಿಸಿದ್ದು, 2 ವರ್ಷದ ಹಳೆಯ ಪ್ರಕರಣವಾಗಿರೋದ್ರಿಂದ ಸಾಕ್ಷ್ಯ ಕಲೆಹಾಕೋಕೆ ಯತ್ನಿಸುತ್ತಿದ್ದಾರೆ. ಇದೇ ವಿಚಾರವಾಗಿ ಮೆಯೋಹಾಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಶೃತಿ ಶೂಟಿಂಗ್‍ಗಾಗಿ ಚೆನ್ನೈಗೆ ತೆರಳಿದ್ದು, ಹೇಳಿಕೆ ದಾಖಲಿಸಲು ಸಮಯಾವಕಾಶ ಕೋರಿದ್ದಾರೆ. ಹಾಗಾಗಿ ಮತ್ತೆ ವಿಚಾರಣೆ ಇಂದು ನಡೆಯಲಿದೆ. ಶೃತಿ ಹರಿಹರನ್ ಸಲ್ಲಿಸಿರುವ ಲಿಖಿತ ಆಕ್ಷೇಪಣೆ ಮೇಲೆ ಇವತ್ತು ಮೆಯೋಹಾಲ್ ನಂಬರ್ 22ರಲ್ಲಿ ವಿಚಾರಣೆ ನಡೆಯಲಿದೆ.

     

    ಅರ್ಜುನ್ ಸರ್ಜಾ ದೊಡ್ಡ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಗಳೆಲ್ಲ ನಿಜ. ಇಷ್ಟು ದಿನ ಸಹಿಸಿಕೊಂಡಿದ್ದೆ. ಈಗ ಸಿಡಿದೇಳುವ ಕಾಲ ಬಂದಿದೆ, ಹಾಗಾಗಿ ಸಿಡಿದಿದ್ದೇನೆ. ನನ್ನ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕಬೇಡಿ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಹೀಗಾಗಿ ಅರ್ಜುನ್ ಸರ್ಜಾ ಅರ್ಜಿಯನ್ನು ವಜಾಗೊಳಿಸಿ ಅಂತಾ ಶೃತಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

    ಇತ್ತ ನಾಲ್ವರು ಸಾಕ್ಷಿಗಳಿಗೆ ನೋಟಿಸ್ ನೀಡಿದ್ದು, ಯಾರೊಬ್ಬರೂ ಕೂಡ ವಿಚಾರಣೆಗೆ ಬಂದಿಲ್ಲ. ಪ್ರಮುಖ ಸಾಕ್ಷಿ ಬೋರೇಗೌಡ ತನ್ನ ಸಹೋದರನ ಮದುವೆ ಇರೋದ್ರಿಂದ 3 ದಿನ ಸಮಯಾವಕಾಶ ಕೇಳಿದ್ರೆ, ಮೇಕಪ್‍ಮನ್ ಕಿರಣ್ ಚೆನ್ನೈನಲ್ಲಿದ್ದಾರೆ. ಮೋನಿಕಾ ಕೂಡ ತಾಯಿಗೆ ಹುಷಾರಿಲ್ಲ ಅಂತ ಹೇಳಿ ತಪ್ಪಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಈಗ ಹಾವು ಏಣಿ ಆಟ ಶುರುವಾಗಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಅರ್ಜುನ್ ಸರ್ಜಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲಾಗಿ ಎಫ್‍ಐಆರ್ ರದ್ದಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಿ ಶೃತಿ ಹರಿಹರನ್ ನಿಂದಕರಿಗೆ ಕಾದಿದೆ ಕಂಟಕ!

    ನಟಿ ಶೃತಿ ಹರಿಹರನ್ ನಿಂದಕರಿಗೆ ಕಾದಿದೆ ಕಂಟಕ!

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ನಟಿ ಶೃತಿಗೆ ನಿಂದನೆ ಮಾಡುವವರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ.

    ಶೃತಿ ಮತ್ತು ಅರ್ಜುನ್ ಸರ್ಜಾ ಪ್ರಕರಣ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಾಗುತ್ತಿದ್ದು, ಪ್ರಕರಣ ಬಳಿಕ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ನಕಲಿ ಅಕೌಂಟ್ ತೆರೆದು ಶೃತಿಗೆ ನಿಂದನೆ ಮಾಡಲಾಗುತ್ತಿದೆ. ಅಲ್ಲದೇ ಅಶ್ಲೀಲ ಪದಗಳನ್ನು ಬಳಸಿ ತೇಜೋವಧೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಂದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಗೆ ಇಂದು ದೂರು ನೀಡಲಾಗುತ್ತದೆ. ನಟಿ ಶೃತಿ ಹರಿಹರನ್ ಪರವಾಗಿ ದೂರು ನೀಡಲು ಅವರ ಮ್ಯಾನೇಜರ್ ತೀರ್ಮಾನಿಸಿದ್ದಾರೆ.

    ಈ ಸಂಬಂಧ ಶೃತಿ ಆಪ್ತ ಹರೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಬಗ್ಗೆ ನಾವು ಕೇಸ್ ದಾಖಲಿಸಿದ ಬಳಿಕವೂ ಕೆಲವರು ಸಾಮಾಜಿಕ ಜಾಲತಾಣವನ್ನು ತೀರಾ ಅತಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಶೃತಿ ಅವರ ಪರ್ಸನಲ್ ಫೋನ್ ನಂಬರಿಗೂ ಅಸಹ್ಯಕರವಾದ ಮೆಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಯಾರು ಶೃತಿ ಅವರ ವಿರುದ್ಧ ವೈಯಕ್ತಿಕವಾಗಿ ನಿಂದನೆಗಿಳಿದಿದ್ದಾರೆ ಅವರ ವಿರುದ್ಧ ದೂರು ದಾಖಲಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ಹಾಗೆಯೇ ಶೃತಿ ಅವರ ಮ್ಯಾನೇಜರ್ ಮುಖಾಂತರ ಇಂದು ಈ ಕಂಪ್ಲೇಂಟ್ ದಾಖಲಿಸುತ್ತೇವೆ ಅಂದ್ರು.

    ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ನಟರೂ ಕಾನೂನಾತ್ಮಕವಾಗಿಯೇ ಎದುರಿಸುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಒಂದು ಹೆಣ್ಣು ಮಗಳನ್ನು ಹೀನಾಯವಾಗಿ ನಿಂದಿಸುವುದು ಸರಿಯಿಲ್ಲ. ಅವರ ಅಭಿಪ್ರಾಯವನ್ನು ಆರೋಗ್ಯಕರವಾಗಿ ಚರ್ಚೆ ಮಾಡಲಿ. ಅದನ್ನು ನಾವು ಬೇಡ ಅನ್ನಲ್ಲ. ಆದ್ರೆ ಅದು ಆರೋಗ್ಯಕರವಾಗಿರಲಿ. ಸೊಂಟದ ಕೆಳಗಿನ ಭಾಷೆಗಳನ್ನು ಬಳಸುವ ಮೂಲಕ ಓರ್ವ ನಟಿಯಾಗಿರುವ ಶೃತಿಗೆ ಘಾಸಿಯಾಗುತ್ತದೆ. ಯಾಕಂದ್ರೆ ಅವರ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಮೊದಲು ಅವರು ತಿಳಿದುಕೊಳ್ಳಬೇಕು. ಇದನ್ನು ನೋಡಿಕೊಂಡು ಇಂತಹ ಕೆಲಸಗಳನ್ನು ನಿಲ್ಲಿಸಬೇಕು ಅಂತ ಅವರು ಕೇಳಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=EejCJP69I5U

  • ಮತ್ತೆ ಸಿಡಿದ ಶೃತಿ ಹರಿಹರನ್-ಫಿಲ್ಮ್ ಚೇಂಬರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ ನಟಿ

    ಮತ್ತೆ ಸಿಡಿದ ಶೃತಿ ಹರಿಹರನ್-ಫಿಲ್ಮ್ ಚೇಂಬರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ ನಟಿ

    ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್ ದಾಖಲಿಸಿ ಸ್ಯಾಂಡಲ್‍ವುಡ್ ನಲ್ಲಿ ಸಂಚಲ ಸೃಷ್ಟಿಸಿರುವ ನಟಿ ಶೃತಿ ಹರಿಹರನ್ ಟ್ಟಿಟ್ಟರ್ ನಲ್ಲಿ ಮತ್ತೆ ಗರಂ ಆಗಿದ್ದಾರೆ. ಇಂಗ್ಲಿಷ್ ಪತ್ರಿಕೆಯ ಲೇಖನವನ್ನು ರೀಟ್ವೀಟ್ ಮಾಡಿಕೊಂಡಿರುವ ಶೃತಿ ಹರಿಹರನ್ ಪರೋಕ್ಷವಾಗಿ ಫಿಲ್ಮ್ ಚೇಂಬರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ‘ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಮಾನ್ಯ ಬೆಂಗಳೂರಿಗಳ ಪತ್ರ’ ಶೀರ್ಷಿಕೆಯಲ್ಲಿರುವ ಬೆಂಗಳೂರಿನ ಮಹಿಳೆಯೊಬ್ಬರ ಅಭಿಪ್ರಾಯವನ್ನು ಶೃತಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿರುವ ಎಲ್ಲ ಮಾತುಗಳು ಶೃತಿ ಸಮ್ಮತಿ ಸೂಚಿಸಿದ್ದು, ನನ್ನ ಮನದಾಳದ ಮಾತಿದು ಎಂಬರ್ಥದಲ್ಲಿಯೇ ರೀಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಪತ್ರದಲ್ಲಿ ಏನಿದೆ?
    ಸಿನಿಮಾದ ಸೆಟ್ ನಲ್ಲಿ ನೂರಾರು ಜನರು ಇರುತ್ತಾರೆ. ಆದ್ರೆ ಚಿತ್ರದ ಹೀರೋ ಮತ್ತು ವಿಲನ್ ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಚಿತ್ರದಲ್ಲಿಯ ಹೀರೋ ನಿಜ ಜೀವನದಲ್ಲಿಯೂ ಒಳ್ಳೆಯವನು ಆಗಿರುತ್ತಾನಾ? ಹಾಗಾದ್ರೆ ಜೀವನ ಒಂದು ಸ್ಯಾಂಡಲ್‍ವುಡ್ ಅಥವಾ ಬಾಲಿವುಡ್ ಕಥೆ ಆಗಿ ಹೋಯ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ.

    ನಮ್ಮದು ಎರಡು ಮುಖಗಳಿರುವ ಮಾನವ ಕುಲ. ಪ್ರತಿಯೊಬ್ಬರ ಪ್ರತಿಯೊಂದು ಅನುಭವ ವಿಭಿನ್ನ ಮತ್ತು ವಿಶಿಷ್ಠವಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಾಡುವ ಆರೋಪವನ್ನು ಸುಳ್ಳು ಎಂದು ವಾದಿಸುವುದು ಎಷ್ಟು ಸರಿ? ಹಾಗದರೆ ನೊಂದ ಮಹಿಳೆ ತನ್ನ ನೋವನ್ನು ಹೇಳಿಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಲಾಗಿದೆ.

    ಈ ಹಿಂದೆ ಕಥುವಾ ರೇಪ್ ಪ್ರಕರಣದಲ್ಲಿ ಟಿವಿ ಮುಂದೆ ಮಹಿಳೆಯರ ಪರ ವಾದಿಸಿದ್ದ ವ್ಯಕ್ತಿಯೇ ಕೇಸ್ ನಲ್ಲಿ ಸಿಲುಕಿಕೊಂಡಿದ್ದನು. ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕರೊಬ್ಬರು ತನ್ನನ್ನು ಗುರು ಎಂದು ನಂಬಿದ್ದ ನಟಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದನು. ಈ ಮೂಲಕ ಎಲ್ಲ ಪುರುಷರು ಅಥವಾ ಮಹಿಳೆಯರು ಒಳ್ಳೆಯವರಾಗಿರುವುದಿಲ್ಲ.

     

    ಕನ್ನಡ ಚಿತ್ರರಂಗದ ದಿಗ್ಗಜರು ಎಂದು ಕರೆಸಿಕೊಳ್ಳುವ ಜಗ್ಗೇಶ್, ಅಂಬರೀಶ್ ಮತ್ತು ತಾರಾ ಸೇರಿದಂತೆ ಹಲವು ಕಲಾವಿದರು ನೊಂದ ಮಹಿಳೆಯ ನೋವನ್ನು ಕೇಳಬೇಕಿತ್ತು. ಈ ಪ್ರಕರಣದಲ್ಲಿ ನೀವು ನೊಂದ ಮಹಿಳೆಯ ನೋವನ್ನು ಕೇಳುತ್ತೇವೆ ಎಂಬುದನ್ನು ಜಗತ್ತಿಗೆ ತೋರಿಸಿ. ನ್ಯಾಯವೇ ದೇವರು ಎನ್ನುವುದು ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲಿಯೂ ಇರಬೇಕು ಎಂದು ಫಿಲ್ಮ್ ಚೇಂಬರ್ ಬಗ್ಗೆ ಲೇಖನದಲ್ಲಿ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಂಗಿಕ ದೌರ್ಜನ್ಯ ಆರೋಪ- ನಟ ಅರ್ಜುನ್ ಸರ್ಜಾ ಬಂಧನ?

    ಲೈಂಗಿಕ ದೌರ್ಜನ್ಯ ಆರೋಪ- ನಟ ಅರ್ಜುನ್ ಸರ್ಜಾ ಬಂಧನ?

    ಬೆಂಗಳೂರು: ನಟ ಅರ್ಜುನ್ ಸರ್ಜಾ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಕಾವು ಜೋರಾಗಿದ್ದು ಇಂದು ಅರ್ಜುನ್ ಗೆ ನಿರ್ಣಾಯಕ ದಿನ ಆಗಲಿದೆ.

    ಇಡೀ ಘಟನಾವಳಿಗಳ ಪ್ರಮುಖ ಸಾಕ್ಷ್ಯಗಳಾಗಿರುವ ಬೋರೇಗೌಡ ಮತ್ತು ಕಿರಣ್ ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅರ್ಜುನ್ ಸರ್ಜಾ ಕಾರಿನಲ್ಲಿ ಹೋಗುತ್ತಿದ್ದ ಶೃತಿಯನ್ನು ರೆಸಾರ್ಟ್ ಗೆ ಕರೆದಿದ್ದು, ರಿಹರ್ಸಲ್ ಸಮಯದಲ್ಲಿ ಶೃತಿ ಜೊತೆ ಅನುಚಿತ ವರ್ತನೆ ಆರೋಪಕ್ಕೆಲ್ಲಾ ಇಂದು ಹೇಳಿಕೆ ನೀಡಲಿದ್ದಾರೆ.

    ಎರಡು ವರ್ಷದ ಹಿಂದೆ ಬೋರೇಗೌಡ ಅವರು ಶೃತಿ ಮ್ಯಾನೇಜರ್ ಆಗಿದ್ದು, ಕಿರಣ್ ಮೇಕಪ್ ಮನ್ ಆಗಿದ್ದರು. ಇಬ್ಬರು ವಿಚಾರಣೆಗೆ ಹಾಜರಾಗ್ತಾ ಇರೋದ್ರಿಂದ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಬ್ಬರು ಕೂಡ ಶೃತಿಯ ಆಪ್ತರೇ ಆಗಿರುವುದರಿಂದ ನಟಿ ಪರವಾಗಿಯೇ ಹೇಳಿಕೆಗಳು ಬರಬಹುದು ಎಂಬ ನಿರೀಕ್ಷೆ ಇದೆ.

    ಈ ಹೇಳಿಕೆಗಳನ್ನೇ ಆಧರಿಸಿ ಅರ್ಜುನ್ ಬಂಧನ ಸನಿಹ ಮಾಡ್ತಾರಾ ಗೊತ್ತಿಲ್ಲ. ಆದರೆ ಎರಡು ವರ್ಷದ ಹಿಂದಿನ ಪ್ರಕರಣ ಆಗಿರೋದ್ರಿಂದ ಸಾಕ್ಷ್ಯಗಳನ್ನು ಕಲೆ ಹಾಕಿದ ಬಳಿಕ ಅರ್ಜುನ್ ಬಂಧನ ಮಾಡುವ ಸಾಧ್ಯತೆ ಇದೆ. ಇನ್ನುಳಿದ 4 ಸಾಕ್ಷ್ಯಗಳನ್ನು ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    https://www.youtube.com/watch?v=-_bcG8WBNR8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 6 ಮಂದಿ ಮೇಲೆ ನಿಂತಿದೆ ನಟ ಅರ್ಜುನ್ ಹಣೆಬರಹ!

    6 ಮಂದಿ ಮೇಲೆ ನಿಂತಿದೆ ನಟ ಅರ್ಜುನ್ ಹಣೆಬರಹ!

    ಬೆಂಗಳೂರು: ವಿಸ್ಮಯ ಚಿತ್ರದ ಶೂಟಿಂಗ್ ಸೆಟ್‍ನಲ್ಲಿದ್ದ 5 ಮಂದಿ ಮತ್ತು ಶೃತಿ ಹರಿಹರನ್ ಗೆಳತಿ ನೀಡುವ ಹೇಳಿಕೆಯ ಮೇಲೆ ನಟ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ.

    ಹೌದು. ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಗೆ 6 ಮಂದಿಯನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಆ ಸಾಕ್ಷಿ ಬೇರೆ ಯಾರೂ ಅಲ್ಲ, ವಿಸ್ಮಯ ಸಿನಿಮಾದ ನಿರ್ದೇಶಕ ಅರುಣ್ ವೈದ್ಯನಾಥನ್, ಸಹಾಯಕ ನಿರ್ದೇಶಕ ಭರತ್ ನೀಲಕಂಠ, ಮೋನಿಕಾ, ಶೃತಿ ಹರಿಹರನ್ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಹಾಗೂ ಗೆಳತಿ ಯಶಸ್ವಿನಿ.

    ವಿಸ್ಮಯ ಸಿನಿಮಾದಲ್ಲಿ ಏನಾಯಿತು?:
    ಬೆಂಗಳೂರಿನ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೆಳಗ್ಗೆ 7.30ರಿಂದ ಸಂಜೆ 6 ಗಂಟೆವರೆಗೆ ವಿಸ್ಮಯ ಶೂಟಿಂಗ್ ಸೆಟ್ ಹಾಕಲಾಗಿತ್ತು. ಈ ವೇಳೆ ಅರ್ಜುನ್ ಸರ್ಜಾ ವರ್ತನೆಯಿಂದ ನನಗೆ ಶಾಕ್ ಆಗಿತ್ತು. ಸ್ಕ್ರಿಪ್ಟ್ ಪ್ರಕಾರ ಸಣ್ಣದೊಂದು ಡೈಲಾಗ್‍ಗೆ ನನ್ನನ್ನು ಅರ್ಜುನ್ ಸರ್ಜಾ ಅಪ್ಪಿಕೊಳ್ಳಬೇಕಿತ್ತು. ಆದರೆ ಸೀನ್ ಬಳಿಕ ರಿಹರ್ಸಲ್ ಮಾಡುವಂತೆ ನಿರ್ದೇಶಕ ಅರುಣ್ ವೈದ್ಯನಾಥನ್ ತಿಳಿಸಿದ್ದರು. ಆ ರಿಹರ್ಸಲ್ ವೇಳೆ ಕಾಮದಾಹ ಏರಿ ಅರ್ಜುನ್ ಸರ್ಜಾ ವರ್ತಿಸಲು ಶುರು ಮಾಡಿದ್ದರು. ನನ್ನ ಪೃಷ್ಠ ಕೈ ಹಾಕಿ, ನಿಧಾನವಾಗಿ ಬ್ರಾ ಬಳಿಗೆ ಕೈ ತಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ಅವರು ಕೆಳಭಾಗದಲ್ಲಿ ನನ್ನನ್ನು ಸವರಿದರು, ಬಳಿಕ ನನ್ನ ತೊಡೆವರೆಗೂ ಕೈ ತಂದರು. ಆ ಕ್ಷಣ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಎಂದು ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

    ಆ ಶಾಕ್‍ನಿಂದ ಸುಧಾರಿಸಿಕೊಳ್ಳುವುದಕ್ಕೂ ಮೊದಲೇ ನನ್ನನ್ನ ಮತ್ತೆ ಬರಸೆಳೆದು ಅರ್ಜುನ್ ಅಪ್ಪಿದರು. ನನ್ನ ಹಿಂಭಾಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಡೈರೆಕ್ಟರ್ ಕಡೆಗೆ ತಿರುಗಿ ಮಾತಾಡಿದ ಅರ್ಜುನ್ ಸರ್ಜಾ, “ಈ ರೀತಿ ಸೀನ್ ಇಂಪ್ರೂ ಮಾಡಬಹುದಲ್ಲಾ” ಅಂತ ಡೈಲಾಗ್ ಹೊಡೆದರು. ಇದರಿಂದ ಕಸಿವಿಸಿಗೊಂಡ ನಾನು ತಕ್ಷಣವೇ ಡೈರೆಕ್ಟರ್‍ಗೆ ಹೇಳಿದೆ, “ಈ ರೀತಿಯಾದರೆ ನಾನು ಅಭಿನಯ ಮಾಡುವುದಕ್ಕೆ ಆಗಲ್ಲ” ಅಂತಾ ಹೇಳಿ ಅಲ್ಲಿಂದ ಕಾರವಾನ್(ಶೂಟಿಂಗ್ ಸಮಯದಲ್ಲಿ ಡ್ರೆಸ್/ ಮೇಕಪ್ ಮಾಡಲು ಇರುವ ವಾಹನ) ಬಳಿ ಹೋದೆ. ಅಲ್ಲಿ ಅರ್ಜುನ್ ಸರ್ಜಾರ ಕಿರುಕುಳ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟೆ. ಆಗ ನನ್ನ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಸಮಾಧಾನ ಮಾಡಿದರು.

    ಇತ್ತ ನಟ ಅರ್ಜುನ್ ಸರ್ಜಾ ನನ್ನ ಮಾನಭಂಗ ಮಾಡಲೇಬೇಕು ಅಂತ ಫಿಕ್ಸ್ ಆಗಿದ್ದರು. ಒಂದು ಸೀನ್‍ನಲ್ಲಿ ಅರ್ಜುನ್ ಸರ್ಜಾ- ನಾನು ಬೆಡ್‍ನಲ್ಲಿ ಒಟ್ಟಿಗೆ ಮಲಗಬೇಕಿತ್ತು. ಇದನ್ನೇ ಲಾಭ ಮಾಡಿಕೊಂಡ ಅರ್ಜುನ್ ನನ್ನ ಹಿಡಿದು ಎಳೆದು ಬಲವಂತವಾಗಿ ಅಪ್ಪಿಕೊಂಡರು. ಆದರೆ ನಾನು ಅವರನ್ನು ತಳ್ಳಿದೆ. ಸೀನ್ ಮುಗಿದ ತಕ್ಷಣ ಸೆಟ್‍ನಿಂದ ಹೊರಬಂದೆ. ಪದೇ ಪದೇ ಅರ್ಜುನ್ ಸರ್ಜಾ ಅವರಿಂದ ಆಗುತ್ತಿದ್ದ ಮಾನಭಂಗ ಯತ್ನದಿಂದ ನನಗೆ ಶಾಕ್ ಆಗಿತ್ತು. ಇದೆಲ್ಲವನ್ನು ಸಹಾಯಕ ನಿರ್ದೇಶಕ ಭರತ್ ನೀಲಕಂಠ ಮತ್ತು ಮೋನಿಕಾ ಬಳಿಕ ಹೇಳಿ ಕಣ್ಣೀರಿಟ್ಟಿದ್ದೆ. ಹೀಗಾಗಿ ರಿಹರ್ಸಲ್ ಬೇಡ, ಓನ್ಲಿ ಟೇಕ್ ಎನ್ನುವ ನಿರ್ಧಾರವಾಯಿತು. ಇದನ್ನು ಓದಿ: ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

    ಅಷ್ಟಕ್ಕೆ ಸುಮ್ಮನಾಗದ ಅರ್ಜುನ್ ಸರ್ಜಾ ದೇವನಹಳ್ಳಿ ಸಿಗ್ನಲ್‍ನಲ್ಲಿ ನನ್ನ ಕಾರು ಬಳಿ ತಮ್ಮ ಕಾರ್ ನಿಲ್ಲಿಸಿ, ಗ್ಲಾಸ್ ಇಳಿಸಿ, ಇವತ್ತು ನನ್ನ ರೂಂನಲ್ಲಿ ಯಾರೂ ಇಲ್ಲ. ರೆಸಾರ್ಟ್‍ಗೆ ಬಾ. ನಾವಿಬ್ಬರೂ ಖುಷಿಪಡೋಣ. ನಾನು ಪದೇ ಪದೇ ಕೇಳುತ್ತಿದ್ದರೂ ನೀನು ಆಗಲ್ಲ ಅಂತ ಹೇಳುತ್ತಿರುವೆ ಎಂದು ಸೆಕ್ಸಿ ಡೈಲಾಗ್ ಅನ್ನು ಹೊಡೆದಿದ್ದರು. ದೇವನಹಳ್ಳಿ ಸಿಗ್ನಲ್‍ನಲ್ಲಿ ಆ ಘಟನೆ ನಡೆದಾಗ ನನ್ನ ಕಾರಲ್ಲಿ ಜೊತೆಗೆ ಬೋರೇಗೌಡ, ಕಿರಣ್ ಇದ್ದರು.

    `ವಿಸ್ಮಯ’ ಶೂಟಿಂಗ್ ದಿನಗಳಲ್ಲಿ ನನಗಾದ ನೋವಿನ ಬಗ್ಗೆ ಗೆಳತಿ ಯಶಸ್ವಿನಿ ಜೊತೆಗೆ ಹೇಳಿಕೊಂಡಿದ್ದೆ. ಅರ್ಜುನ್ ಸರ್ಜಾರಂತಹ ವ್ಯಕ್ತಿ ಜೊತೆಗೆ ಕೆಲಸ ಮಾಡುವುದಕ್ಕೆ ಆಗಲ್ಲ ಎಂದಿದ್ದೆ. ರಿಹರ್ಸಲ್ ಹೆಸರಲ್ಲಿ ನನ್ನ ಮಾನಭಂಗಕ್ಕೆ ಯತ್ನಿಸಿದ್ದರಿಂದ ನನಗೆ ಶಾಕ್ ಆಗಿತ್ತು. ಆದರೆ ಅರ್ಜುನ್ ಸರ್ಜಾ ದೊಡ್ಡ ನಟ, ಇಡೀ ಸಿನಿಮಾ ಇಂಡಸ್ಟ್ರಿಯವರು ಅವರೊಂದಿಗಿದ್ದಾರೆ. ನೀನು ದೂರು ಕೊಟ್ಟರೂ ಏನೂ ಆಗಲ್ಲ ಅಂತಾ ಗೆಳತಿ ಯಶಸ್ವಿನಿ ತಿಳಿಸಿದ್ದಳು ಎಂದು ಶೃತಿ ಹರಿಹರನ್ ಹೇಳಿದ್ದಾರೆ. ಇದನ್ನು ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/BDCc_WfjHeI