Tag: Srujan Lokesh

  • ಮಜಾ ಟಾಕೀಸ್ ಮುಗೀತು, ಸೃಜನ್ ಮುಂದಿದೆ ಇನ್ನೊಂದು ಡ್ರೀಮ್

    ಮಜಾ ಟಾಕೀಸ್ ಮುಗೀತು, ಸೃಜನ್ ಮುಂದಿದೆ ಇನ್ನೊಂದು ಡ್ರೀಮ್

    ಬೆಂಗಳೂರು: ಚಂದನವನದ ಮಾತಿನಮಲ್ಲ ಸೃಜನ್ ನಿರೂಪಣೆಯ ಮಜಾಟಾಕೀಸ್ ಗ್ರಾಂಡ್ ಫಿನಾಲೆ ಶೋ ಪ್ರಸಾರಗೊಳ್ಳಲು ರೆಡಿಯಾಗಿದೆ. ಮಜಾಟಾಕೀಸ್ ನಿಂದ ಬ್ರೇಕ್ ತೆಗೆದುಕೊಂಡ ಸೃಜನ್ ಲೋಕೇಶ್ ಮುಂದೆ ಏನು ಮಾಡುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

    ಮಜಾ ಟಾಕೀಸ್ ಈ ಹೆಸರು ಕೇಳುತ್ತಿದ್ದರೆ ಹಲವರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಕಾಮಿಡಿ ಕಚಗುಳಿಯ ಮೂಲಕ ಎಲ್ಲರ ಮನೆ-ಮನ ತಲುಪಿರೋ ಮಜಾಟಾಕೀಸ್ ಗೆ ಸ್ಯಾಂಡಲ್‍ವುಡ್‍ನ ಹಲವು ಸೂಪರ್ ಸ್ಟಾರ್‍ಗಳು ಕೂಡ ಫಿದಾ ಆಗಿದ್ದರು.

    ಮುಂದಿನ ಪ್ಲ್ಯಾನ್: ಫೈನಲ್ ಎಪಿಸೋಡ್ ಕಂಪ್ಲೀಟ್ ಮಾಡಿರೋ ಸೃಜನ್ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ರಿಲ್ಯಾಕ್ಸ್ ಬಳಿಕ ಬೆಳ್ಳಿತೆರೆಗೆ ಹೀರೋ ಕಮ್ ಪ್ರೊಡ್ಯೂಸರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸೃಜನ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳಿಗೆ ಬಂಡವಾಳ ಹಾಕಲಿದ್ದಾರೆ. ಸಿನಿಮಾಗಳಿಗೆ ಹೆಚ್ಚು ಮಹತ್ವ ಕೊಡಲಿದ್ದು, ನಟನೇ ಜೊತೆ ನಿರ್ಮಾಣ ಕೂಡ ಮಾಡಲಿದ್ದಾರೆ.

    280 ಎಪಿಸೋಡ್ ಕಂಪ್ಲೀಟ್ ಮಾಡಿರೋ ಮಜಾಟಾಕೀಸ್ ಈಗ ಗ್ರಾಂಡ್ ಫಿನಾಲೆ ಹಂತವನ್ನು ತಲುಪಿದೆ. ಈ ವಾರ ಮಜಾಟಾಕೀಸ್‍ನ ಫೈನಲ್ ಎಪಿಸೋಡ್ ಪ್ರಸಾರವಾಗಲಿದ್ದು ಇದಾದ ಬಳಿಕ ಯಶಸ್ವಿ ಕಾರ್ಯಕ್ರಮಕ್ಕೆ ಒಂದು ಬ್ರೇಕ್ ಸಿಗಲಿದೆ.

    ಜಡ್ಜ್ ಆಗ್ತಾರ ಸೃಜನ್: ಕಾರ್ಯಕ್ರಮದ ನಿರೂಪಕರಾಗಿ ಕಮಾಲ್ ಮಾಡಿರುವ ಸೃಜನ್ ಈಗ ಜಡ್ಜ್ ಆಗಿ ಪ್ರಮೋಷನ್ ಸಿಗಲಿದೆ. ಹೊಸ ಹಾಸ್ಯ ಕಾರ್ಯಕ್ರಮ `ಕಾಮಿಡಿ ಟಾಕೀಸ್’ನಲ್ಲಿ ತೀರ್ಪುಗಾರನಾಗಿ ಕೆಲಸ ಮಾಡಲಿದ್ದಾರೆ. ಈ ಕಾಮಿಡಿ ಟಾಕೀಸ್ ಕಾರ್ಯಕ್ರಮವನ್ನು ಕಿರುತೆರೆ ನಟ ವಿಜಯ್ ಸೂರ್ಯ ನಿರೂಪಣೆ ಮಾಡಲಿದ್ದಾರೆ. ಗುಳಿಕೆನ್ನೆ ಚೆಲುವೆ ರಚಿತಾ ಕೂಡ ಸೃಜನ್‍ಗೆ ಸಾಥ್ ಕೊಡಲಿದ್ದಾರೆ ಎಂದು ಕೇಳಿಬರುತ್ತಿದೆ. ಇದರ ಜೊತೆ `ಸದಾ ನಿಮ್ಮೊಂದಿಗೆ’ ಅನ್ನೊ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.