Tag: Srujan Lokesh

  • ಎಲ್ಲಿದ್ದೆ ಇಲ್ಲಿ ತನಕ: ಸೃಜಾ ಸ್ಪೆಷಲ್ ಲಿರಿಕಲ್ ವೀಡಿಯೋ ಸಾಂಗ್!

    ಎಲ್ಲಿದ್ದೆ ಇಲ್ಲಿ ತನಕ: ಸೃಜಾ ಸ್ಪೆಷಲ್ ಲಿರಿಕಲ್ ವೀಡಿಯೋ ಸಾಂಗ್!

    ಬೆಂಗಳೂರು: ಮಜಾ ಟಾಕೀಸ್ ಮೂಲಕ ಮನೋರಂಜನೆ ನೀಡುತ್ತಲೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡಿರುವವರು ಸೃಜನ್ ಲೋಕೇಶ್. ಈ ಕಿರುತೆರೆ ಶೋ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರೋ ಅವರೀಗ ಒಂದಷ್ಟು ಕಾಲದ ನಂತರ ‘ಎಲ್ಲಿದ್ದೆ ಇಲ್ಲಿತನಕ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರೋ ಈ ಚಿತ್ರದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್‍ಗಳು ಈಗಾಗಲೇ ಹೊರಬಂದು ಹಿಟ್ ಆಗಿವೆ. ಇದೀಗ ಸೃಜಾ ಸ್ಪೆಷಲ್ ಅನ್ನಬಹುದಾದ ಸ್ಪೆಷಲ್ ಲಿರಿಕಲ್ ವೀಡಿಯೋವೊಂದು ಬಿಡುಗಡೆಯಾಗಿದೆ.

    ನೀ ನಗೆ ಹಂಚಿ ಮಿಂಚುವಾ ನಮ್ಮ ಕನ್ನಡದವ ಎಂಬ ಈ ಹಾಡು ನಾಯಕ ಸೃಜನ್ ಲೋಕೇಶ್ ಅವರ ಬಗ್ಗೆ ರಚಿಸಿರೋ ಸಾಹಿತ್ಯದ ಸಾಲುಗಳನ್ನೊಳಗೊಂಡಿದೆ. ಭರ್ಜರಿ ಚೇತನ್ ಕುಮಾರ್ ಬರೆದಿರೋ ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಈ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಸೃಜನ್ ಗೆಟಪ್ಪುಗಳ ಝಲಕ್‍ಗಳೂ ಕೂಡಾ ಅನಾವರಣಗೊಂಡಿವೆ. ಇದು ಮಜಾ ಟಾಕೀಸ್‍ಗಿಂತಲೂ ಮುಂಚೆಯೇ ನಿರ್ದೇಶನ ವಿಭಾಗದಲ್ಲಿ ಸೃಜನ್ ತಂಡದಲ್ಲಿ ಗುರುತಿಸಿಕೊಂಡಿದ್ದ ತೇಜಸ್ವಿ ನಿರ್ದೇಶನದ ಚಿತ್ರ. ಇದುವರೆಗೂ ನೂರಾರು ಎಪಿಸೋಡುಗಳ ಧಾರಾವಾಹಿ, ಕಿರುತೆರೆ ರಿಯಾಲಿಟಿ ಶೋಗಳನ್ನು ನಿರ್ದೇಶನ ಮಾಡಿರೋ ತೇಜಸ್ವಿ ಸೃಜನ್ ಅವರಿಗೆ ಪಕ್ಕಾ ಹೊಂದಿಕೆಯಾಗೋ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಎಲ್ಲಿದ್ದೆ ಇಲ್ಲಿ ತನಕ ಹಲವಾರು ವರ್ಷಗಳ ತಯಾರಿಯೊಂದಿಗೆ ರೂಪುಗೊಂಡಿರೋ ಚಿತ್ರ. ಈ ಮೂಲಕ ಹರಿಪ್ರಿಯಾ ಸೃಜನ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಹರಿಪ್ರಿಯಾ ಕೂಡ ಇಲ್ಲಿ ವಿಶೇಷವಾದ ಗೆಟಪ್ಪಿನಲ್ಲಿ, ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರಂತೆ.  ಆಕ್ಷನ್, ಕಾಮಿಡಿ, ಫ್ಯಾಮಿಲಿ ಸಬ್ಜೆಕ್ಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬರೆಸಿದ ಮಜವಾದ ಕಥೆ ಈ ಚಿತ್ರದಲ್ಲಿದೆಯಂತೆ. ಟಾಕಿಂಗ್ ಸ್ಟಾರ್ ಈ ಸಿನಿಮಾ ಮೂಲಕ ನಾಯಕ ನಟನಾಗಿಯೂ ಭರ್ಜರಿ ಗೆಲುವು ದಕ್ಕಿಸಿಕೊಳ್ಳುವ ಉತ್ಸಾಹದಿಂದಿದ್ದಾರೆ.

     

  • 2ನೇ ಮಗುವಿನ ತಂದೆಯಾದ ಖುಷಿಯಲ್ಲಿ ಸೃಜನ್

    2ನೇ ಮಗುವಿನ ತಂದೆಯಾದ ಖುಷಿಯಲ್ಲಿ ಸೃಜನ್

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಪತ್ನಿ ಎರಡನೇ ಮಗುವಿಗೆ ಇಂದು ಜನ್ಮ ನೀಡಿದ್ದಾರೆ. ಈ ಮೂಲಕ ಸೃಜನ್ ಅವರು ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ.

    ನಟ ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮಾ ಅವರು ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಇತ್ತೀಚೆಗಷ್ಟೆ ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    ಸೃಜನ್ ಮತ್ತು ಗ್ರೀಷ್ಮಾ ಅವರು 2010ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗಾಗಲೇ ಈ ಜೋಡಿಗೆ ಒಬ್ಬ ಮಗನಿದ್ದಾನೆ.

  • ಸೀಮಂತ ಸಂಭ್ರಮದಲ್ಲಿ ಸೃಜನ್ ಪತ್ನಿ ಗ್ರೀಷ್ಮಾ

    ಸೀಮಂತ ಸಂಭ್ರಮದಲ್ಲಿ ಸೃಜನ್ ಪತ್ನಿ ಗ್ರೀಷ್ಮಾ

    ಬೆಂಗಳೂರು: ನಟ, ನಿರೂಪಕ ಸೃಜನ್ ಲೋಕೇಶ್ ಅವರ ಪತ್ನಿ ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದೆ.

    ಗ್ರೀಷ್ಮಾ ಅವರು ಸೀಮಂತ ಕಾರ್ಯಕ್ರಮದ ಸಂತಸದ ಕ್ಷಣಗಳ ಫೋಟೋಗಳನ್ನು ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಸೀರೆಯನ್ನು ಸೃಜನ್ ಲೋಕೇಶ ಪತ್ನಿ ಗ್ರೀಷ್ಮಾ ಧರಿಸಿದ್ದು, ಮುದ್ದಾಗಿ ನಗುತ್ತಿರುವುದನ್ನು ಕಾಣಹುದಾಗಿದೆ.

    ನಟಿ ಶ್ವೇತಾ ಚಂಗಪ್ಪ ಅವರು, “ನಾವೆಲ್ಲರೂ ಸ್ನೇಹಿತರು, ಒಂದೇ ಕುಟಂಬದವರು ಕೂಡ ಆಗಿದ್ದೇವೆ. ಶ್ರೀಘದಲ್ಲೇ ಈ ಕುಟುಂಬಕ್ಕೆ ಪುಟ್ಟ ಕಂದಮ್ಮ ಬರುತ್ತದೆ. ಅದಕ್ಕಾಗಿ ನಾನು ಕಾಯುತ್ತಿದ್ದೇವೆ. ಐ ಲವ್ ಯೂ ಗ್ರೀಷ್ಮಾ” ಎಂದು ಟ್ವೀಟ್ ಮಾಡಿ ಸೀಮಂತ ಕಾರ್ಯಕ್ರಮದಲ್ಲಿ ತೆಗೆದುಕೊಂಡಿದ್ದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ಸೃಜನ್ ಲೋಕೇಶ್ ಅವರು 2010ರಲ್ಲಿ ಕಿರುತೆರೆ ನಟಿ ಗ್ರೀಷ್ಮಾರವನ್ನು ಮದುವೆಯಾಗಿದ್ದರು. ಈಗಾಗಲೇ ಈ ಜೊಡಿಗೆ ಒಂದು ಮುದ್ದಾದ ಮಗು ಇದೆ.

    https://www.instagram.com/p/Bu1RsJngn2c/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸತಿ-ಪತಿಗಳಾದ್ರು ಹರಿಪ್ರಿಯಾ-ಸೃಜನ್ ಲೋಕೇಶ್!

    ಸತಿ-ಪತಿಗಳಾದ್ರು ಹರಿಪ್ರಿಯಾ-ಸೃಜನ್ ಲೋಕೇಶ್!

    ಬೆಂಗಳೂರು: ನಟ ಸೃಜನ್ ಲೋಕೇಶ್ ಸ್ವಲ್ಪ ದಿನದಿಂದ ಸಿನಿಮಾರಂಗದಿಂದ ದೂರವಿದ್ದು, ಈಗ ಮತ್ತೆ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾದ ಮೂಲಕ ನಟರಾಗಿ ವಾಪಸ್ ಬಂದಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ನಟಿ ಹರಿಪ್ರಿಯಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಟ ಸೃಜನ್ ಮತ್ತು ನಟಿ ಹರಿಪ್ರಿಯಾ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಇವರಿಬ್ಬರು ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ದರ್ಶನ್, ನಟಿ ತಾರಾ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಭಾಗಿಯಾಗಿದ್ದರು.

    ಈ ಸಿನಿಮಾವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾಕ್ಕಾಗಿ ಸೃಜನ್ ಮತ್ತು ಹರಿಪ್ರಿಯಾ ಫೋಟೋ ಶೂಟ್ ಮಾಡಿಸಿದ್ದು, ಇವರಿಬ್ಬರು ಸತಿ-ಪತಿಗಳಂತೆ ಪೋಸ್ ಕೊಟ್ಟಿದ್ದಾರೆ.

    ತಮ್ಮ ಸಿನಿಮಾದ ಬಗ್ಗೆ ನಟಿ ಹರಿಪ್ರಿಯಾ ಅವರು ಕೂಡ ಟ್ವೀಟ್ ಮಾಡಿದ್ದು, ಇಂದು ನಾನು ಅಭಿನಯಿಸುತ್ತಿರುವ ‘ಬಿಚ್ಚುಗಾತ್ತಿ’ ಸಿನಿಮಾ ಮುಹೂರ್ತ ನಡೆಯಲಿದ್ದು, ಕಳೆದ ದಿನವಷ್ಟೆ ‘ಎಲ್ಲಿದ್ದ ಇಲ್ಲಿ ತನಕ’ ಸಿನಿಮಾ ಲಾಂಚ್ ಆಗಿದೆ. ಈ ಎರಡು ಸಿನಿಮಾದಲ್ಲಿ ನಾನು ತುಂಬಾ ಪ್ರಮುಖವಾದ ಪಾತ್ರವನ್ನು ಮಾಡುತ್ತಿದ್ದೇನೆ. ಆದ್ದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ಇದೆಲ್ಲಾ ನಿಮ್ಮ ಪ್ರೀತಿ ಮತ್ತು ಶುಭಾಶಯಗಳು” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೃಜಾಗೆ ಹರಿಪ್ರಿಯಾ ನಾಯಕಿ!

    ಸೃಜಾಗೆ ಹರಿಪ್ರಿಯಾ ನಾಯಕಿ!

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಸೃಜನ್ ಲೋಕೇಶ್ ಒಂದಷ್ಟು ಕಾಲದಿಂದ ಚಿತ್ರರಂಗದಿಂದ, ನಟನೆಯಿಂದ ದೂರವಿದ್ದಂತಿದ್ದರು. ಆದರೀಗ ಅವರು ಮತ್ತೆ ನಾಯಕನಾಗಿ ಮರಳಿದ್ದಾರೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಎಂಬುದು ಅವರು ನಟಿಸಲಿರೋ ಹೊಸ ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರಂತೆ. ಈ ಚಿತ್ರಕ್ಕೀಗ ಹರಿಪ್ರಿಯಾ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ.

    ಸೃಜನ್ ತಂದೆ ಲೋಕೇಶ್ ಅವರು ನಟಿಸಿದ್ದ ಪ್ರಸಿದ್ಧ ಚಿತ್ರ ಪರಸಂಗದ ಗೆಂಡೆತಿಮ್ಮ. ಎಲ್ಲಿದ್ದೆ ಇಲ್ಲೀ ತನಕ ಎಂಬುದು ಅದರ ಜನಪ್ರಿಯ ಹಾಡಿನ ಸಾಲು. ತಮ್ಮ ತಂದೆಯ ಹಾಡಿನ ಸಾಲುಗಳನ್ನೇ ಸೃಜನ್ ತಮ್ಮ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಜಾ ಟಾಕೀಸ್ ಕಂತುಗಳಿಗೆ ಸಂಭಾಷಣೆ ಬರೆಯುತ್ತಾ ಬಂದಿರೋ ರಾಕೇಶ್ ಸಂಭಾಷಣೆ ಬರೆಯಲಿದ್ದಾರೆ.

    ಸೃಜನ್ ಲೋಕೇಶ್ ಸ್ವತಃ ನಿರ್ಮಾಣ ಮಾಡಲಿರೋ ಇದು ಪಕ್ಕಾ ಕಮರ್ಶಿಯಲ್ ಕಥನ ಹೊಂದಿರೋ ಚಿತ್ರವಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಹೋಗೋ ಬಾರೋ ಅಂತಿದ್ರು ಅಂಬಿ: ಬಿಕ್ಕಿ ಬಿಕ್ಕಿ ಅತ್ತ ಜಯಂತಿ

    ನನ್ನ ಹೋಗೋ ಬಾರೋ ಅಂತಿದ್ರು ಅಂಬಿ: ಬಿಕ್ಕಿ ಬಿಕ್ಕಿ ಅತ್ತ ಜಯಂತಿ

    ಬೆಂಗಳೂರು: ಅಂಬರೀಶ್ ನನ್ನನ್ನು ಬಾರೋ ಹೋಗೋ ಅಂತಾ ಕರೆಯುತ್ತಿದ್ದರು ಎಂದು ಹಿರಿಯ ನಟಿ ಜಯಂತಿ ಕಣ್ಣೀರಿಟ್ಟಿದ್ದಾರೆ.

    ಅಂಬರೀಶ್ ಅವರನ್ನು ನಾನು ಎಂದು ಅವರು, ಇವರು ಅಂತಾ ಕರೆಯಲಿಲ್ಲ. ನಮ್ಮದು 40 ವರ್ಷಗಳ ಸ್ನೇಹ. ಅವಸರ ಮಾಡಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ಇಷ್ಟು ಬೇಗ ಹೋಗಿದ್ದಕ್ಕೆ ನನಗೆ ನೋವಾಗಿದೆ. ಇಡೀ ಕರುನಾಡಿನ ಜನತೆ ಅಂಬರೀಶ್ ನಿಧನಕ್ಕೆ ಕಣ್ಣೀರು ಹಾಕುತ್ತಿದೆ. ಆರೋಗ್ಯದ ಗಮನ ಕೊಡಬೇಕು ಅಂತಾ ಕುಟುಂಬಸ್ಥರು ಹೇಳುತ್ತಿದ್ದರು. ಆದ್ರೂ ಅಂಬರೀಶ್ ಆರೋಗ್ಯದ ಬಗ್ಗೆ ಕಾಳಜಿ ನೀಡಲಿಲ್ಲ. ಕುಟುಂಬಸ್ಥರಿಗೆ ಚಾಮುಂಡೇಶ್ವರಿ ತಾಯಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಯಂತಿ ಅವರು ಪ್ರಾರ್ಥಿಸಿದರು.

    ಇದೇ ವೇಳೆ ಮಾತನಾಡಿದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಏನೇ ಸಮಸ್ಯೆ ಬಂದರೂ ಅಂಬಿ ಅಣ್ಣ ನಮ್ಮ ಹಿಂದೆ ಇದ್ದಾರೆ ಎಂಬ ಧೈರ್ಯವಿತ್ತು. ಚಿತ್ರರಂಗಕ್ಕೆ ದೊಡ್ಡ ಆಧಾರಸ್ಥಂಭ ಆಗಿದ್ದರು. ಪ್ರೀತಿಯಿಂದು ಬೈದು ಬುದ್ಧಿ ಹೇಳುತ್ತಿದ್ದರು. ಅವರಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಅಣ್ಣನನ್ನು ನಾವು ಇಂದು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಿ ಭಾವುಕರಾದರು.

    https://youtu.be/Bkld1mGV-uQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶದಲ್ಲಿ ಗೆಳೆಯರಾದ ದರ್ಶನ್- ಸೃಜನ್‍ಗೆ ಸನ್ಮಾನ

    ವಿದೇಶದಲ್ಲಿ ಗೆಳೆಯರಾದ ದರ್ಶನ್- ಸೃಜನ್‍ಗೆ ಸನ್ಮಾನ

    ಬೆಂಗಳೂರು: 63ನೇ ಕನ್ನಡ ರಾಜ್ಯೋತ್ಸವದಂದು ಗೆಳೆಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿದೆ.

    ಇತ್ತೀಚೆಗೆ ಕತಾರ್ ದೇಶದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಆ ದೇಶದ ಕನ್ನಡ ಸಂಘವೊಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸೃಜನ್ ಲೋಕೇಶ್ ಅತಿಥಿಯಾಗಿ ಭಾಗವಹಿಸಿದ್ದರು.

    ಅಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಸೃಜನ್ ಅವರನ್ನು ಅಲ್ಲಿನ ಸಂಘ ಗೌರವಿಸಿದೆ. ಕತಾರ್ ನಲ್ಲಿದ್ದ ಕನ್ನಡಿಗರು ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ಸೃಜನ್ ಅವರನ್ನು ನೋಡಿ ಸಂತೋಷಪಟ್ಟಿದ್ದಾರೆ.

    ಸದ್ಯ ದರ್ಶನ್ ಹಾಗೂ ಸೃಜನ್ ಅವರನ್ನು ಸನ್ಮಾನ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಸನ್ಮಾನ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

    ಕಳೆದ ವರ್ಷ ದರ್ಶನ್ ಅವರು ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ಯುಕೆ ಸರ್ಕಾರ ನೀಡಿದ್ದ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಮೂಲಕ ಪ್ರಶಸ್ತಿಗೆ ಭಾಜನಾಗಿರುವ ದಕ್ಷಿಣ ಭಾರತ ಹಾಗೂ ಕನ್ನಡ ಮೊದಲ ಎಂಬ ಹೆಗ್ಗಳಿಕೆಗೆ ದರ್ಶನ್ ಅವರು ಪಾತ್ರರಾಗಿದ್ದರು.

    ಲಂಡನ್ ಸರ್ಕಾರದಿಂದ ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ಭಾರತ ಮೂಲದ ವಿರೇಂದ್ರ ಶರ್ಮಾ ಲಂಡನ್ ಪಾರ್ಲಿಮೆಂಟ್‍ನಲ್ಲಿ ಸಂಸದರಾಗಿದ್ದು, ಈ ಹಿಂದೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

    ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

    ಮೈಸೂರು: ದರ್ಶನ್ ಆರಾಮವಾಗಿದ್ದು, ಅಪಘಾತವಾಗಿದೆ ಅಷ್ಟೇ. ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ ಎಂದು ನಟ ಸೃಜನ್ ಲೋಕೇಶ್ ಅಭಿಮಾನಿಗಳಲ್ಲಿ ಮನವಿಮಾಡಿಕೊಂಡಿದ್ದಾರೆ.

    ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಪಘಾತ ನಮಗೆ ಗೊತ್ತಿಲ್ಲದೆ ಆಗುವಂತದ್ದು. ಆಗಬಾರದಿತ್ತು ಆಗಿ ಹೋಗಿದೆ. ಸದ್ಯಕ್ಕೆ ಪ್ರಜ್ವಲ್ ಮತ್ತು ದೇವರಾಜ್ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ. ದರ್ಶನ್ ನಾಳೆ ರಾತ್ರಿ ಅಥವಾ ನಾಳಿದ್ದು ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ. ಈಗಾಗಲೇ ಎಲ್ಲ ಸರ್ಜರಿ ಮುಗಿದಿದೆ. ಅವರು ಮಲಗಿ ವಿಶಾಂತ್ರಿ ಮಾಡಬೇಕು. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ಡಾಕ್ಟರ್ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುತ್ತಿರುವುದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದೇವರ ದಯೆ ಯಾರಿಗೂ ಏನೂ ಹಾಗಿಲ್ಲ. ಪ್ರತಿಯೊಬ್ಬರು ಸುರಕ್ಷಿತವಾಗಿದ್ದಾರೆ. ಅಭಿಮಾನಿಗಳೆಲ್ಲ ಅವರಿಗಾಗಿ ಪಾರ್ಥನೆ ಮಾಡಿ ಎಂದು ಸೃಜನ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಮೈಸೂರು: ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬಸ್ಥರು ಇಂದು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದು, ನಟ ದೇವರಾಜ್ ಕುಟುಂಬ ಚಿರತೆ, ದರ್ಶನ್ ಮತ್ತು ಸೃಜನ್ ಲೋಕೇಶ್ ರಿಂದ ಜಿರಾಫೆ ಮರಿಯನ್ನು ದತ್ತು ಪಡೆಯಲಾಯಿತು.

    ಈ ವೇಳೆ ಜಿರಾಫೆ ಮರಿಗೆ `ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ರು. ಈ ಹಿಂದೆ ಇಬ್ಬರು ಸೇರಿ ದತ್ತು ಪಡೆದ ಹುಲಿಗಳು ನಮ್ಮಂತೆಯೆ ಜೊತೆಯಾಗಿ ನಡೆಯುತ್ತಿವೆ. ಮೃಗಾಲಯದಲ್ಲಿ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ರು. ಹಾಸ್ಯ ನಟ ಕೀರ್ತಿ ಮೊಸಳೆಯನ್ನು ದತ್ತು ಸ್ವೀಕರಿಸಿದ್ರು.

    ಇತ್ತೀಚೆಗಷ್ಟೇ ದರ್ಶನ್ ಅವರು ಹುಲಿಯೊಂದನ್ನು ದತ್ತು ಪಡೆದಿದ್ದು, ಅದಕ್ಕೆ `ವಿನೀಶ್’ ಅಂತ ಹೆಸರಿಟ್ಟಿದ್ದಾರೆ. ನಾನು ಒಂದು ಹುಲಿನ ದತ್ತು ಪಡೆದುಕೊಂಡಿದ್ದು, ಅದರ ಹೆಸರು `ಅರ್ಜುನ’ ಎಂಬುದಾಗಿ ಇಟ್ಟಿದ್ದೇನೆ. ಒಟ್ಟಿನಲ್ಲಿ ಇಂದು ಎಲ್ಲರೂ ಸೇರಿ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುವುದು ಸಂತಸದ ವಿಚಾರ ಅಂತ ಸೃಜನ್ ಲೋಕೇಶ್ ತಿಳಿಸಿದ್ರು. ಇದನ್ನೂ ಓದಿ: ಕುಚುಕು ಗೆಳೆಯನನ್ನ ಹಿಂಬಾಲಿಸಿದ ಸೃಜನ್‍ಗೆ ದರ್ಶನ್ ಅಭಿನಂದನೆ

    ದರ್ಶನ್ ಕರೆ:
    ಇಂದು ನಾವು 5 ಸಾವಿರ ಅಥವಾ 10 ಸಾವಿರ ರೂ. ಗಳನ್ನು ಎಲ್ಲೋ ಕಳೆದು ಬಿಡ್ತೀವಿ. ಹೀಗಾಗಿ 1 ಸಾವಿರದಿಂದ ಹಿಡಿದು 1 ಲಕ್ಷದ 75 ಸಾವಿರದವರೆಗೆ ಪ್ರಾಣಿಗಳನ್ನು ಇಲ್ಲಿ ದತ್ತು ಪಡೆದುಕೊಳ್ಳಬಹುದು. ಅಷ್ಟು ಬೇಡ 10 ಅಥವಾ 20 ಸಾವಿರ ಖರ್ಚು ಮಾಡಿ ಜನರು ಪ್ರಾಣಿಗಳನ್ನು ದತ್ತು ಪಡೆದ್ರೆ ಅವುಗಳ ಸಂತತಿನೂ ಉಳಿಯುತ್ತದೆ. ಹಾಗೆಯೇ ಪ್ರಾಣಿಗಳನ್ನು ಸಾಕುವ ಖುಷಿಯೂ ನಮ್ಮದಾಗುತ್ತದೆ ಅಂತ ಸಲಹೆ ನೀಡಿದ್ರು.

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೇ ಒಂದು ಪ್ರಾಣಿಯನ್ನು ಸಾಕಬಹುದು. ಹೀಗಾಗಿ ಎಲ್ಲಾ ಜನರು ಇಂತಹ ಒಂದು ಪ್ರಯೋಗಕ್ಕೆ ಕೈ ಜೋಡಿಸಿ ಅಂತ ದರ್ಶನ್ ಇದೇ ವೇಳೆ ಮನವಿ ಮಾಡಿಕೊಂಡರು.

    ಅರಣ್ಯ ಇಲಾಖೆ ರಾಯಾಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ. ಗಿಡ ಮರ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡದಲ್ಲ. ಕ್ರಮವಾಗಿ ಅರಣ್ಯ ಬೆಳೆಸಬೇಕು. ನಾವೂ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿದೆ. ಯುವಕರು ದುಡ್ಡನ್ನು ವಿಕೆಂಡ್ ನೆಪದಲ್ಲಿ ಖರ್ಚು ಮಾಡುತ್ತಾರೆ. ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನ ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನ ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ ಅಂತ ಹೇಳುವ ಮೂಲಕ ಪ್ರಾಣಿಗಳ ದತ್ತು ಸ್ವೀಕಾರ ಮಾಡಲು ಯುವಕರಿಗೆ ನಟ ದರ್ಶನ್ ಇದೇ ವೇಳೆ ಕರೆ ನೀಡಿದ್ರು.

    ದರ್ಶನ್ ಪ್ರೋತ್ಸಾಹ ಅಂದ್ರು ನಟ ದೇವರಾಜ್ ಪತ್ನಿ:
    ಇದೇ ವೇಳೆ ನಟ ಪ್ರಜ್ವಲ್ ತಾಯಿ ಮಾತನಾಡಿ, ತುಂಬಾ ಇಷ್ಟವಾಯಿತು. ನನ್ನ ಮಗ ದರ್ಶನ್ ಸರ್ ಅವರು ನನಗೆ ಮಾರ್ಗದರ್ಶನ ಮಾಡಿದ್ರು. ಹೀಗಾಗಿ ನಾನು ಚಿರತೆಯನ್ನು ದತ್ತು ಪಡೆದುಕೊಂಡಿದ್ದೇನೆ. ನನಗೆ ಪ್ರಾಣಿಗಳೆಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಇದೀಗ ಅದಕ್ಕೆ ಪ್ರೋತ್ಸಾಹ ಕೊಟ್ಟಿದ್ದು ನನ್ನ ಮಗ. ಹೀಗಾಗಿ ತುಂಬಾ ಸಂತೋಷವಾಗ್ತಿದೆ. ಇತ್ತೀಚೆಗಷ್ಟೆ ನಾನು ಪ್ರಾಣಿಗಳನ್ನು ನೋಡಿಕೊಂಡು ಬಂದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೃಜನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಚಾಲೆಂಜಿಂಗ್ ಸ್ಟಾರ್!

    ಸೃಜನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗುರುವಾರ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆತ್ಮೀಯ ಗೆಳೆಯ ಸೃಜನ್ ಅವರಿಗೆ ಸರ್ಪ್ರೈಸ್ ನೀಡಿ ಶುಭಾಶಯ ಕೋರಿದ್ದಾರೆ.

    ಸೃಜನ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ದರ್ಶನ್ ಶುಭಾಶಯ ಕೋರುವ ವಿಡಿಯೋವನ್ನು ಹಿರಿಯ ಹಾಸ್ಯ ನಟ ಮಂಡ್ಯ ರಮೇಶ್ ಸೃಜನ್ ಅವರಿಗೆ ತೋರಿಸಿದ್ದಾರೆ. ನಮಸ್ಕಾರ ಸೃಜನ್‍ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸೃಜನ್‍ಗೆ ಸೃಜ ತೂಗುದೀಪ ಎಂದು ಹೇಳಬೇಕು ಹಾಗೂ ನನಗೆ ದರ್ಶನ್ ಲೋಕೇಶ್ ಎಂದು ಕರೆಯುತ್ತಾರೆ. ನಾನು ಸೃಜನ್‍ಗೆ ಹುಟ್ಟುಹಬ್ಬದ ಶುಭಾಶಯ ಮಾತ್ರ ಕೋರುವುದಿಲ್ಲ. ಆದರೆ ಆತನ ಸಾಧನೆ ಬಗ್ಗೆ ತಿಳಿಸುತ್ತೇನೆ.

    ದರ್ಶನ್ ಹೇಳಿದ್ದೇನು..?
    ಸೃಜ ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಈಗ ಈ ಸ್ಥಾನದಲ್ಲಿ ನಿಂತಿದ್ದಾನೆ. ಸೃಜನ್ ‘ಲೋಕೇಶ್ ಪ್ರೊಡಕ್ಷನ್’ ಶುರು ಮಾಡಿ ತಾನು ಪಟ್ಟ ಕಷ್ಟವನ್ನು ಬೇರೆಯವರು ಪಡಬಾರದೆಂದು ಸುಮಾರು ಜನರನ್ನು ಇರಿಸಿಕೊಂಡು ಅವರನ್ನು ಬೆಳೆಸಿಕೊಂಡು, ತಾನು ಬೆಳೆಯುತ್ತಿದ್ದಾನೆ. ಸೃಜನ್ ಈಗ ತಿರುಗಿ ನೋಡಿದರೆ ಅವನ ಹಿಂದೆ ಸಾಕಷ್ಟು ಜನ ನಿಂತಿರುತ್ತಾರೆ. ಏಕೆಂದರೆ ಸಾಕಷ್ಟು ಜನ ಸೃಜನ್‍ನನ್ನು ನಂಬಿಕೊಂಡಿದ್ದಾರೆ.

    ನಾನು ಕೂಡ ಹಾಗೇ ಬೆಳೆದಿದ್ದು. ನನಗೆ ಲೋಕೇಶ್ ಪ್ರೊಡಕ್ಷನ್ ಬೇರೆ ಅಲ್ಲ ಹಾಗೂ ತೂಗುದೀಪ ಪ್ರೊಡಕ್ಷನ್ ಬೇರೆ ಅಲ್ಲ. ಅದು ಎರಡು ಒಂದೇ ಪ್ರೊಡಕ್ಷನ್ ಆಗಿ ಶುರು ಮಾಡಿದ್ದೇವು. ಏಕೆಂದರೆ ನಾವು ಇದ್ದರು ಇಲ್ಲದಿದ್ದರು ನಮ್ಮ ತಂದೆಯ ಪ್ರೊಡಕ್ಷನ್ ಹೌಸ್ ಅನ್ನು ಬೆಳೆಸಿಕೊಂಡು ಹೋಗಬೇಕು. ಆ ಕಾರ್ಯವನ್ನು ಸೃಜನ್ ಮಾಡುತ್ತಿದ್ದಾನೆ. ಸೃಜನ್‍ಗೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದೇನೆ ಎಂದು ದರ್ಶನ್ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಈಗ ನಾನು ಸೃಜನ್‍ಗೆ ಹೇಳುತ್ತಿರುತ್ತೇನೆ. ನಮಗೆ 60-70 ವರ್ಷವಾದಾಗ ಒಂದು ಕಡೆ ಕುಳಿತುಕೊಂಡು ಆಗ ಏನು ಮಾತಡಬೇಕೋ ಈಗಿನಿಂದಲೇ ತಯಾರಿ ನಡೆಸಿಕೊಳ್ಳುತ್ತಿದ್ದೇವೆ. ಈ ವಿಷಯ ಸೃಜನ್‍ಗೂ ತುಂಬಾ ಚೆನ್ನಾಗಿ ಗೊತ್ತು. ನಾನು ಮತ್ತೊಮ್ಮೆ ಮಗದೊಮ್ಮೆ ನಿನಗೆ ಹುಟ್ಟುಹಬ್ಬ ಹಾರ್ದಿಕ ಶುಭಾಶಯ ಕೋರುತ್ತಿದ್ದೇನೆ. ನೀನು ಹೀಗೆ ಬೆಳೆಯುತ್ತಿರು. ನೀನು ಯಾವತ್ತು ಹಿಂದೆ ತಿರುಗಿ ನೋಡಿದರೂ ಆ ಭಗವಂತ ನಿನಗೆ ಕೊಡದೇ ಇದ್ದರು, ನಾನು ಯಾವಾಗಲೂ ನಿನ್ನ ಹಿಂದೆ ಇರುತ್ತೇನೆ ಎಂದು ದರ್ಶನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.