Tag: Srujan Lokesh

  • ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

    ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

    ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ‘ಮಜಾ ಟಾಕೀಸ್’ ಶೋ ಮತ್ತೆ ಶುರುವಾಗುತ್ತಿದೆ ಎಂದು ಸ್ವತಃ ಸೃಜನ್ ಲೋಕೇಶ್ (Srujan Lokesh) ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ ಎಂದು ಮೆಸೇಜ್ ಹೇಳುತ್ತಾ ‘ಮಜಾ ಟಾಕೀಸ್’ (Maja Talkies) ಬರುವ ಬಗ್ಗೆ ಸೃಜನ್ ಅಧಿಕೃತವಾಗಿ ತಿಳಿಸಿದ್ದಾರೆ. 2015ರಲ್ಲಿ ಆರಂಭವಾದ ಈ ಶೋ ಇನ್ನೂ ಕೆಲವೇ ದಿನಗಳಲ್ಲಿ 10 ವರ್ಷಗಳು ಪೂರೈಸಲಿದೆ. ಸೃಜನ್ ನಿರೂಪಣೆಯಲ್ಲಿ ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ರೆಮೋ, ಇಂದ್ರಜಿತ್ ಲಂಕೇಶ್ ಸೇರಿದಂತೆ ಅನೇಕರು ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈ ಬಾರಿ ಅಪರ್ಣಾ ಅಗಲಿಕೆ ಎಲ್ಲರನ್ನೂ ಕಾಡಲಿದೆ. ಅವರು ವರಲಕ್ಷ್ಮಿ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿದ್ದರು.

    ಇನ್ನೂ ‘ಮಜಾ ಟಾಕೀಸ್’ನಿಂದ ಸೃಜನ್ ಬ್ರೇಕ್ ಪಡೆಯುವ ನಿರ್ಧಾರ ಮಾಡಿದರು. ಈಗ ಮತ್ತೆ ಬರುವ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಆದರೆ ಯಾವಾಗ ಎಂಬುದು ರಿವೀಲ್ ಆಗಿಲ್ಲ. ಈ ಕುರಿತು ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಬಿಗ್ ಬಾಸ್ ಮನೆಯಲ್ಲಿ ಈ ಬಾರಿಯ ವೀಕೆಂಡ್ ತುಂಬಾನೇ ವಿಭಿನ್ನವಾಗಿದೆ. ಶನಿವಾರದ (ಅ.26) ಸಂಚಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರು ಬಂದಿದ್ದರು. ಭಾನುವಾರದ (ಅ.27) ಎಪಿಸೋಡ್‌ನಲ್ಲಿ ಸೃಜನ್ ಲೋಕೇಶ್ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಅದಷ್ಟೇ ಅಲ್ಲ, ಕಿಚ್ಚ ಸುದೀಪ್ (Sudeep) ಅವರ ಅನುಪಸ್ಥಿತಿಯಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ. ದೊಡ್ಮನೆ ಆಟದಿಂದ ಮಾನಸಾ ಸಂತೋಷ್ (Manasa Santhosh) ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಇಂದಿನ ಸಂಚಿಕೆಯಲ್ಲಿ ಸೃಜನ್ ಲೋಕೇಶ್ (Srujan Lokesh) ದೊಡ್ಮನೆಗೆ ಗ್ರ‍್ಯಾಂಡ್ ಆಗಿ ಇಂಟ್ರಿ ನೀಡಿದ್ದಾರೆ. ನಟ ಸೃಜನ್ ಲೋಕೇಶ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್ ನೀಡಿದಂತೆ ಇದೆ. ಜೊತೆಗೆ ನಾಮಿನೇಟ್ ಆಗಿರುವ ಕೆಲವು ಸ್ಪರ್ಧಿಗಳನ್ನು ಸೇವ್ ಮಾಡುವ ಕೆಲಸವನ್ನೂ ಸೃಜನ್ ಮಾಡಿದ್ದಾರೆ. ಈ ವೇಳೆ, ಸ್ಪರ್ಧಿ ಮಾನಸ ಕಣ್ಣೀರು ಇಟ್ಟಿದ್ದಾರೆ.

    ಕೊನೆಯಲ್ಲಿ ಬಿಗ್ ಬಾಸ್ ಮನೆಗೆ ಎರಡು ಕಾರುಗಳು ಬಂದು ನಿಂತಿದ್ದು, ಅದರಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಕರೆದುಕೊಂಡು ಹೋಗುವ ತುಣುಕನ್ನು ವಾಹಿನಿಯ ಪ್ರೋಮೋದಲ್ಲಿ ತೋರಿಸಲಾಗಿದೆ. ಹೀಗಾಗಿ ಇವತ್ತಿನ ಎಲಿಮಿನೇಷನ್ ಪ್ರಕ್ರಿಯೆ ತುಂಬಾನೇ ಡಿಫರೆಂಟ್ ನಡೆದಿದ್ದು, ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 15 ಸ್ಪಧಿಗಳಲ್ಲಿ 9 ಮಂದಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ, ಗೌತಮಿ, ಚೈತ್ರಾ, ಹಂಸ, ಮೋಕ್ಷಿತಾ, ಶಿಶಿರ್, ಸುರೇಶ್ ಹಾಗೂ ಕ್ಯಾಪ್ಟನ್ ಅವರಿಂದ ನೇರವಾಗಿ ಮಾನಸ ಹಾಗೂ ಮಂಜು ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಮಾನಸಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಎಲ್ಲದ್ದಕ್ಕೂ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

  • ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ನ್ನಡದ ನಿರೂಪಕಿ ಅಪರ್ಣಾ (Aparna) ನಿಧನದ ಬಗ್ಗೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ. ನಟಿಯ ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ ಎಂದು ಸೃಜನ್ (Srujan Lokesh) ಮಾತನಾಡಿದ್ದಾರೆ.

    ಅಪರ್ಣಾ ನಿಧನ ನಿಜಕ್ಕೂ ಬೇಸರ ಆಗಿದೆ. ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಅಪರ್ಣಾ ನಟಿಸಿದ್ದಾರೆ. ನಾವು ಯಾವಾಗಲೂ ಅವರಿಗೆ ರೇಗಿಸುತ್ತಿದ್ವಿ. ಊರು ಹುಟ್ಟೋಕ್ಕೂ ಮುಂಚೆ ಹುಟ್ಟಿದವರು ನೀವು ಅಂತ. ಅಂದಿನ ಕಾಲದಿಂದಲೂ ಆ್ಯಕ್ಟಿಂಗ್ ಮಾಡ್ತಿದ್ದಾರೆ. ಎಷ್ಟೊಂದು ವರ್ಷಗಳ ಸಾಧನೆ ಅವರದ್ದು. ನಮ್ಮ ಚಿತ್ರರಂಗದಲ್ಲಿ ಲೆಜೆಂಡರಿ ಕಲಾವಿದೆ ಅಪರ್ಣಾ ಎಂದು ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ಮೆಟ್ರೋದಲ್ಲೂ, ಫೋನ್‌ನಲ್ಲೂ ಎಲ್ಲಾ ಕಡೆ ಅಪರ್ಣಾದೇ ವಾಯ್ಸ್ ಕೇಳಿಸುತ್ತೆ. ಅವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ. ಅವರು ಎಂದಿಗೂ ಲೆಜೆಂಡಿರಿ ಅಭಿನೇತ್ರಿ, ನಿರೂಪಕಿ ಎಂದಿದ್ದಾರೆ. ನಮಗೆಲ್ಲಾ ಮಾರ್ಗದರ್ಶನ ಕೊಟ್ಟವರು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಸೃಜನ್‌ ಭಾವುಕರಾಗಿದ್ದಾರೆ.

    ಕಳೆದ ವಾರ ಅಷ್ಟೇ ಅವರ ಜೊತೆ ಮಾತನಾಡಿದ್ದೇ. ನಾನು ಮಜಾ ಟಾಕೀಸ್ ನೋಡಿದಾಗಲೆಲ್ಲಾ ನಾನು ಖುಷಿಯಾಗಿ ಇರುತ್ತೇನೆ ಎಂದು ಅಪರ್ಣಾ ನನ್ನ ಬಳಿ ಹೇಳಿಕೊಂಡಿದ್ದರು. ಅವರು ಇನ್ನಿಲ್ಲ ಅನ್ನೋ ನೋವು ಯಾವಾಗಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

  • ರಾಜ-ರಾಣಿ ಶೋ: ಸೆಲೆಬ್ರಿಟಿ ದಂಪತಿಗಳ ಕಚಗುಳಿ

    ರಾಜ-ರಾಣಿ ಶೋ: ಸೆಲೆಬ್ರಿಟಿ ದಂಪತಿಗಳ ಕಚಗುಳಿ

    ಲರ್ಸ್ ಕನ್ನಡದ ಜನಪ್ರಿಯ ಶೋಗಳಲ್ಲೊಂದಾದ ‘ರಾಜ-ರಾಣಿ’ (Raja Rani) ಯ ಮೂರನೇ ಸೀಸನ್ ಇದೀಗ ವೀಕ್ಷಕರನ್ನು ರಂಜಿಸಲು ತಯಾರಾಗಿದೆ. ‘ರಾಜ ರಾಣಿ ರೀಲೋಡೆಡ್- ಸೀಸನ್ 3’ ಇದೇ ಜೂನ್ 8ರಿಂದ ಆರಂಭಗೊಳ್ಳಲಿದ್ದು, ಸಂಚಿಕೆಗಳು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರಗೊಳ್ಳಲಿವೆ.  ಕಳೆದ ಸೀಸನ್ನುಗಳ ಯಶಸ್ಸು ತಂಡದ ಉತ್ಸಾಹವನ್ನು ಹೆಚ್ಚಿಸಿದ್ದು, ‘ರಾಜ ರಾಣಿ’ಯ ಮೂರನೇ ಸೀಸನ್ನಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹನ್ನೆರೆಡು ಸೆಲೆಬ್ರಿಟಿ ದಂಪತಿಗಳು ಪಾಲ್ಗೊಳ್ಳಲಿರುವ ‘ರಾಜ ರಾಣಿ ರೀಲೋಡೆಡ್’ ನ ಹೊಸ ಸೀಸನ್ ಜೋಡಿಗಳ ಡಾನ್ಸಿನ ಮೇಲೆ ಹೆಚ್ಚು ಒತ್ತು ನೀಡಲಿದೆ. ಎಂದಿನಂತೆ ತಮಾಷೆ, ಹರಟೆ, ಆಟ, ಭಾವನೆಗಳೆಲ್ಲಾ ಇರುತ್ತವಾದರೂ ಈ ಸಲ ಜೋಡಿಗಳ ನರ್ತನ ಸಾಮರ್ಥ್ಯ ಹಿಂದಿನ ಸೀಸನ್ನುಗಳಿಗಿಂತ ಆದ್ಯತೆ ಪಡೆಯಲಿದೆ.

    ಮೂರನೇ ತೀರ್ಪುಗಾರರಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದು ಈ ಹೊಸ ಸೀಸನ್ನಿನ ಮತ್ತೊಂದು ಅಚ್ಚರಿ. ಈಗಾಗಲೇ ತೀರ್ಪುಗಾರರಾಗಿರುವ ಸೃಜನ್ ಲೋಕೇಶ್ (Srujan Lokesh) ಮತ್ತು ತಾರಾ ಅವರನ್ನು ಅದಿತಿ ಕೂಡಿಕೊಳ್ಳಲಿದ್ದಾರೆ. ನಿರೂಪಕಿಯಾಗಿ ಅನುಪಮಾ ಗೌಡ ಮರಳಿದ್ದಾರೆ.  ಈಗಾಗಲೇ ಹನ್ನೆರಡು ಸೆಲೆಬ್ರೆಟಿ ಜೋಡಿಗಳನ್ನು ಶೋಗೆ ಆಯ್ಕೆ ಮಾಡಲಾಗಿದ್ದು, ಟಿವಿ ಮುಖಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ತನಕ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಜೋಡಿಗಳನ್ನು ನೀವೀ ಶೋನಲ್ಲಿ ನೋಡಬಹುದು. ಡಾನ್ಸ್ ಮತ್ತು ಗೇಮುಗಳ ಮೂಲಕ ಈ ಜೋಡಿಗಳು ತಮ್ಮ ನಡುವಿನ ಸಾಮರಸ್ಯವನ್ನು ಪರೀಕ್ಷೆಗೊಳಪಡಿಸಲಿದ್ದಾರೆ.

    ‘ರಾಜ ರಾಣಿ ರೀಲೋಡೆಡ್’ ಶುರುವಾಗುತ್ತಿರುವ ಬಗ್ಗೆ ಮಾತನಾಡಿದ ವಯಾಕಾಮ್ ೧೮ ಪ್ರಾದೇಶಿಕ ಮನರಂಜನೆಯ ಕ್ಲಸ್ಟರ್ ಹೆಡ್ ಸುಷ್ಮಾ ರಾಜೇಶ್, ‘ ರಾಜ ರಾಣಿ ರೀಲೋಡೆಡ್ ಹಲವು ಹೊಸ ಪ್ರಯೋಗಗಳ ಜೊತೆಗೆ ಪ್ರಾದೇಶಿಕತೆಯ ಸೊಗಡನ್ನು ಮೈಗೂಡಿಸಿಕೊಂಡು ರಸಭರಿತವಾಗಿ ಮೂಡಿಬರಲಿದೆ’ ಎಂದು ಹೇಳಿದರು.  ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಕೂಡ ಈ ಹೊಸ ಸೀಸನ್ನಿನ ಬಗ್ಗೆ ಉತ್ಸಾಹದ ಮಾತುಗಳನ್ನಾಡಿ, ‘ಡಾನ್ಸ್ ಕೇಂದ್ರಿತ ಹೊಸ ಫಾರ್ಮ್ಯಾಟ್ ಮತ್ತು ಹೊಸ ತೀರ್ಪುಗಾರರಾಗಿ ಅದಿತಿ ಸೇರ್ಪಡೆಯಾಗಿರುವುದು ಈ ಸಲದ ರಾಜರಾಣಿಗೆ ಹೊಸ ಚೈತನ್ಯ ತಂದುಕೊಟ್ಟಿದೆ’ ಎಂದು ಹೇಳಿದರು.

    ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಾಜ ರಾಣಿ ಶೋ ನಿರ್ಮಾಣಗೊಳ‌್ಳುತ್ತಿದೆ. ವೈಟ್ ಗೋಲ್ಡ್ ಅರ್ಪಿಸುವ ಈ ಶೋನ ಸಹ ಪ್ರಾಯೋಜಕರು ಅಮೃತ್ ನೋನಿ. ಜೊತೆಗೆ ಸ್ಪೆಷಲ್ ಪಾರ್ಟ್ನರ್ ಆಗಿ ಸ್ವಸ್ತಿಕ್ ತುಪ್ಪ, ಭೀಮಾ ಜ್ಯೂಯೆಲ್ಲರ್ಸ್, ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸೋಪು, ಸಂಗೀತ ಮೊಬೈಲ್ಸ್ ಈ ಜನಪ್ರಿಯ ಕಾರ್ಯಕ್ರಮದ ಜೊತೆ ಕೈ ಜೋಡಿಸಿವೆ.  ಜೂನ್ 8ರ ರಾತ್ರಿ ಏಳೂವರೆಗೆ ಮೊದಲ ಸಂಚಿಕೆಯನ್ನು ಆರಂಭಿಸಲಿರುವ ರಾಜರಾಣಿ ರೀಲೋಡೆಡ್ ಅನ್ನು ನೀವು ಕಲರ್ಸ್ ಕನ್ನಡ ಚಾನೆಲ್ ಹಾಗೂ ಜಿಯೊ ಸಿನಿಮಾ ಆಪ್ ನಲ್ಲೂ ವೀಕ್ಷಿಸಬಹುದು.

  • ನಟ ಸೃಜನ್ ನಿರ್ದೇಶನದ ಮೊದಲ ಚಿತ್ರದ ಶೂಟಿಂಗ್ ಮುಕ್ತಾಯ

    ನಟ ಸೃಜನ್ ನಿರ್ದೇಶನದ ಮೊದಲ ಚಿತ್ರದ ಶೂಟಿಂಗ್ ಮುಕ್ತಾಯ

    ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ (Srujan Lokesh) ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡುತ್ತಿರುವ ‘GST’  ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.

    ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರಿನಲ್ಲೇ, ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಡಬ್ಬಿಂಗ್ ಸಹ ಸಂಪೂರ್ಣವಾಗಿದೆ.

    ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಿರ್ಮಾಪಕ ಸಂದೇಶ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದ್ದನ್ನು ನಿರ್ದೇಶಕ ಸೃಜನ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸುತ್ತಿದ್ದಾರೆ.

    ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪರಿಶುದ್ಧ ಮನೋರಂಜನೆಯ ಕಥಾಹಂದರ ಹೊಂದಿರುವ GSTಗೆ, ಘೋಸ್ಟ್ ಇನ್ ಟ್ರಬಲ್ಎಂ ಬ ಅಡಿಬರಹವಿದೆ.

    ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.  ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ  ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ     ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.

  • ನಿರ್ದೇಶನಕ್ಕಿಳಿದ ಸೃಜನ್‌ ಲೋಕೇಶ್- ಅದ್ದೂರಿಯಾಗಿ ನಡೆಯಿತು ಚಿತ್ರದ ಮುಹೂರ್ತ

    ನಿರ್ದೇಶನಕ್ಕಿಳಿದ ಸೃಜನ್‌ ಲೋಕೇಶ್- ಅದ್ದೂರಿಯಾಗಿ ನಡೆಯಿತು ಚಿತ್ರದ ಮುಹೂರ್ತ

    ಟ, ನಿರೂಪಕ ಸೃಜನ್ ಲೋಕೇಶ್ (Srujan Lokesh) ನಿರ್ದೇಶನದತ್ತ ಮುಖ ಮಾಡಿದ್ದಾರೆ. ಸೃಜನ್ ಪುತ್ರ ‘ಜಿಎಸ್‌ಟಿ’ (GST) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡ್ತಿದ್ದಾರೆ. ಸೃಜನ್ ಲೋಕೇಶ್ ನಿರ್ದೇಶನದ ಚೊಚ್ಚಲ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

    ಜಿಎಸ್‌ಟಿ ಚಿತ್ರವನ್ನು ಸೃಜನ್ ಲೋಕೇಶ್ ನಿರ್ದೇಶನ (Director) ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಈ ಚಿತ್ರದ ಮುಹೂರ್ತ ಆಗಸ್ಟ್ 21ರಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿಸಿದರು. ಕ್ಯಾಮೆರಾಗೆ ಗಿರಿಜಾ ಲೋಕೇಶ್ ಚಾಲನೆ ನೀಡಿದರು. ಇನ್ನು, ಪಿ.ಶೇಷಾದ್ರಿ, ಟಿ.ಎಸ್.ನಾಗಾಭರಣ, ತಾರಾ, ಶ್ರುತಿ ಕೃಷ್ಣ, ಸುಂದರರಾಜ್, ನಿರೂಪ್ ಭಂಡಾರಿ ಮೊದಲಾದವರು ಆಗಮಿಸಿ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್‌ನಲ್ಲಿ ನಾಗ ಪಂಚಮಿ- ತಮನ್ನಾ, ಶ್ರೀನಿಧಿ ಶೆಟ್ಟಿ ಭಾಗಿ

    ವಿಶೇಷ ಅಂದರೆ, ಸೃಜನ್ ಲೋಕೇಶ್ ಪುತ್ರ ಸುಕೃತ್ ಬಾಲ ನಟನಾಗಿ ಈ ಚಿತ್ರದದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಜಿಎಸ್‌ಟಿ ಚಿತ್ರಕ್ಕೆ ಘೋಸ್ಟ್ ಇನ್ ಟ್ರಬಲ್ ಎಂಬ ಅಡಿಬರಹ ನೀಡಲಾಗಿದೆ. ದೆವ್ವಗಳೂ ಸಮಸ್ಯೆಯಲ್ಲಿವೆ ಅನ್ನೋದು ಇದರ ಅರ್ಥ. ಈಗಾಗಲೇ ಸಿನಿಮಾಗೆ ಶೂಟಿಂಗ್ ಕೂಡ ಆರಂಭ ಆಗಿದೆ.

    ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ರಜನಿ ಭಾರದ್ವಾಜ್, ನಿವೇದಿತಾ ಗೌಡ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ನಟಿಸಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಬಣ್ಣ ಹಚ್ಚಿದ ಪೂಜಾ ಲೋಕೇಶ್

    ಮತ್ತೆ ಬಣ್ಣ ಹಚ್ಚಿದ ಪೂಜಾ ಲೋಕೇಶ್

    ಸಿನಿಮಾ, ಧಾರಾವಾಹಿ, ಶೋ ಅಂತೆಲ್ಲ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾ ಗಿರಿಜಾ ಲೋಕೇಶ್ (Girija Lokesh) ಪುತ್ರಿ ಪೂಜಾ ಲೋಕೇಶ್ ಹಲವು ವರ್ಷಗಳಿಂದ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರಲಿಲ್ಲ. ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ಹಲವಾರು ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪೂಜಾ, ಹಲವಾರು ವರ್ಷಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ.

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ (Sita Rama) ಧಾರಾವಾಹಿಯಲ್ಲಿ ಪೂಜಾ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಇವರ ಪಾತ್ರದ ಪ್ರೋಮೋ ಕೂಡ ರಿಲೀಸ್ ಆಗಿದೆ. ಖಡಕ್ ಲುಕ್ ನಲ್ಲಿ ಪೂಜಾ (Pooja Lokesh) ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ವಿಲನ್ ಪಾತ್ರದಂತೆಯೇ ಕಾಣಿಸುವ ಪಾತ್ರದ ಹಿನ್ನೆಲೆ ಮಾತ್ರ ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಹಾಗಂತ ಪೂಜಾ ಕಿರುತೆರೆಯಿಂದ ದೂರವಿರಲಿಲ್ಲ. ಸಹೋದರ ಸೃಜನ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ನಲ್ಲಿ ಪೂಜಾ ಕೆಲಸ ಮಾಡುತ್ತಿದ್ದರು. ಸೃಜನ್ ಅವರ ಕಾಸ್ಟ್ಯೂಮ್ ಡಿಸೈನ್ ಇವರೇ ಮಾಡುತ್ತಿದ್ದರು. ಜೊತೆಗೆ ಹಿನ್ನೆಲೆಯಾಗಿ ನಿಂತುಕೊಂಡು ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ, ಲೋಕೇಶ್ ಪ್ರೊಡಕ್ಷನ್ ನ ಉಸ್ತುವಾರಿಯನ್ನು ಇವರೇ ವಹಿಸಿಕೊಂಡಿದ್ದರು.

    ಪೂಜಾ ಮತ್ತು ಸೃಜನ್ (Srujan Lokesh) ಇಬ್ಬರೂ ಪ್ರತಿಭಾವಂತ ಕಲಾವಿದರು. ಸೃಜನ್ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರೆ, ಪೂಜಾ ಕೊಂಚ ಕಾಲ ಬ್ರೇಕ್ ತಗೆದುಕೊಂಡಿದ್ದು. ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಪೂಜಾ ಇದೀಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೆಲಿವಿಷನ್ ಅಸೋಷಿಯೇಷನ್ : ರವಿ ಗರಣಿ ಅಧ್ಯಕ್ಷ, ಸೃಜನ್ ಲೋಕೇಶ್ ಕಾರ್ಯದರ್ಶಿ

    ಟೆಲಿವಿಷನ್ ಅಸೋಷಿಯೇಷನ್ : ರವಿ ಗರಣಿ ಅಧ್ಯಕ್ಷ, ಸೃಜನ್ ಲೋಕೇಶ್ ಕಾರ್ಯದರ್ಶಿ

    ರ್ನಾಟಕ ಕಿರುತೆರೆಯ ಕಲಾವಿದರು ಹಾಗೂ ತಂತ್ರಜ್ಞರ ಮಾತೃಸಂಸ್ಥೆ ಕರ್ನಾಟಕ ಟೆಲಿವಿಷನ್ (Television) ಅಸೋಷಿಯೇಷನ್ (Association) (KTVA) ಮೊನ್ನೆಯಷ್ಟೇ ಚುನಾವಣೆ ನಡೆದಿದ್ದು, ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಆರ್ ಗರಣಿ (Ravi Garani) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ನಟ ಸೃಜನ್ ಲೋಕೇಶ್ (Srujan Lokesh) ಕಾರ್ಯದರ್ಶಿ, ನಿರ್ಮಾಪಕ ಭಾಸ್ಕರ್ ಎಸ್.ಎಸ್. ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    ಕಾರ್ಯಕಾರಿ ಸಮಿತಿಗೆ ಕಲಾವಿದರಾದ ಗಿರಿಜಾ ಲೋಕೇಶ್, ವೀಣಾ ಸುಂದರ್, ಗಣೇಶ್ ರಾವ್ ಕೆಸರ್ಕರ್, ಸುನೇತ್ರಾ ಪಂಡಿತ್, ರಾಮಸ್ವಾಮಿ ಗೌಡ ಎನ್.ಟಿ, ವಸಂತ್ ಕುಮಾರ್ ವಿ, ನಿರ್ಮಾಪಕಿ ಭಾವನಾ ಬೆಳಗೆರೆ, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರ ಕೇಶವಚಂದ್ರ, ಛಾಯಾಗ್ರಾಹಕರಾದ ಬೆಟ್ಟೇ ಗೌಡ ಕೆ.ಟಿ. ನಿರ್ಮಾಣ ನಿರ್ವಾಹಕ ಪರಯ್ಯ ಆರ್ ಮತ್ತು ಹರ್ಷ ವಿಶ್ವನಾಥ್, ಯೂನಿಟ್ ಮಾಲೀಕ ಸೆಲ್ವಂ, ಸಂಕಲನಕಾರ ಕೃಷ್ಣ ಅರಸ್ ಕೆ.ಸಿ, ಪ್ರಸಾಧನ ಕಲಾವಿದ ನಾಗರಾಜು ಪಿ. ಧ್ವನಿಗ್ರಾಹಕ ಕಲಾವಿದ ಸಾಗರ್ ಬಿ.ಕೆ, ಬೆಳಕು ಸಹಾಯಕರಾದ ಶ್ರೀನಿವಾಸ್ ಪಿ.ವಿ, ವಸ್ತ್ರವಿನ್ಯಾಸ ಮತ್ತು ಕಲಾವಿನ್ಯಾಸ ವೀರೇಂದ್ರ ಡಿ.ಸಿ , ವಾಹನ ಚಾಲಕರಾದ ತಿಮ್ಮರಾಜು, ನಿರ್ಮಾಣ ಸಹಾಯಕರಾದ ವೀರೇಂದ್ರ ಪಿಕೆ. ಈ ಬಾರಿ ಆಯ್ಕೆಯಾಗಿರುತ್ತಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿ ಮೂರು ವರ್ಷಗಳದ್ದಾಗಿದ್ದು 2023 ರಿಂದ 2025 ರವರೆಗೂ ಕಾಲಾವಧಿಯದ್ದಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಟ್ಟುವಲ್ಲಿ ರವಿ ಆರ್ ಗರಣಿ ಅವರದ್ದು ಸಾಕಷ್ಟು ಶ್ರಮವಿದೆ. ಹಲವು ವರ್ಷಗಳಿಂದ ಅವರು ಈ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದಾರೆ. ಇದೀಗ ಅಧ್ಯಕ್ಷರಾಗುವ ಮೂಲಕ ಸಂಘದ ಸಾರಥ್ಯವಹಿಸಿದ್ದಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ಈ ಹಿಂದೆ ಬಿ.ಸುರೇಶ್, ಎಸ್.ವಿ.ಶಿವಕುಮಾರ್, ರವಿಕಿರಣ್ ಸೇರಿದಂತೆ ಕಿರುತೆರೆಯ ಖ್ಯಾತನಾಮರು ಅಸೋಷಿಯೇಷನ್ ಅಧ್ಯಕ್ಷರಾಗಿ ಉದ್ಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಉದ್ಯಮದ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸಿದ್ದಾರೆ. ಕಲಾವಿದರ, ತಂತ್ರಜ್ಞರ ಕಷ್ಟಕ್ಕೂ ಸ್ಪಂದಿಸಿದ್ದಾರೆ. ಹೀಗಾಗಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಿರುತೆರೆಯ ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾಗಿದೆ.

  • ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಅನೌನ್ಸ್

    ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಅನೌನ್ಸ್

    ಸ್ಯಾಂಡಲ್ ವುಡ್ ಹೆಸರಾಂತ ನಟ ಶಿವರಾಜ್ ಕುಮಾರ್ (Shivraj Kumar) ಅಭಿನಯದ ‘ವೇದ’ ಚಿತ್ರ ಬಹುತೇಕ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ಹೊಸಚಿತ್ರದ ಬಗ್ಗೆ ಮಾಹಿತಿ ಬಂದಿದೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ (Manjula Shivarjun) ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರದ ನಾಯಕರಾಗಿ  ಶಿವಣ್ಣ ಅಭಿನಯಿಸಲಿದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ ‘ಶಿವಾರ್ಜುನ’ ಚಿತ್ರ ನಿರ್ಮಾಣವಾಗಿತ್ತು.

    ಕನ್ನಡ ಕಿರುತೆರೆ ಲೋಕದ ಯಶಸ್ವಿ ಟಾಕ್ ಶೋ ಮಜಾಟಾಕೀಸ್ (Maja Talkies) ಹಾಗೂ ಸೃಜನ್ ಲೋಕೇಶ್ (Srujan Lokesh) ಅಭಿನಯದ ‘ಎಲ್ಲಿದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿ (Tejaswi) ಕೆ ನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರ ಎರಡನೇ ಸಿನಿಮಾ ಇದಾಗಿದ್ದು, ಕಿರುತೆರೆ ಲೋಕದಲ್ಲಿ ತೇಜಸ್ವಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಇವರು ಭರವಸೆಯನ್ನೂ ಮೂಡಿಸಿದ್ದರು.‌

    ಸಿನಿಮಾ ಕುರಿತು ಮಾತನಾಡಿರುವ ತೇಜಸ್ವಿ ‘ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ.  ಶಿವರಾಜ್ ಕುಮಾರ್  ಅವರು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಕಥೆ ಬರೆದುಕೊಳ್ಳಲಾಗಿದೆ’ ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಶಿವರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ನಿರ್ದೇಶಕ ತೇಜಸ್ವಿ ಶುಭ ಹಾರೈಸಿ ಸೂಚನೆ ನೀಡಿದ್ದರು. ವೇದ ಬಿಡುಗಡೆ ವೇಳೆಯಲ್ಲಿ ಆ ಚಿತ್ರಕ್ಕೂ ಶುಭ ಕೋರಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾ ಮಾಡುವ ಕುರಿತು ಮಾತನಾಡಿದ್ದಾರೆ. ಚಿತ್ರೋದ್ಯಮದಲ್ಲಿ ಇದೊಂದು ಹೊಸ ಬಗೆಯ ಸಿನಿಮಾವಾಗಲಿದೆ ಎಂದು ಅವರು ಭರವಸೆಯನ್ನೂ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರನ ಗಲಾಟೆಗೆ ರಾಜಕೀಯ ಬಣ್ಣ : ಅರುಣ್ ಸೋಮಣ್ಣ ಪ್ರತಿಕ್ರಿಯೆ

    ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರನ ಗಲಾಟೆಗೆ ರಾಜಕೀಯ ಬಣ್ಣ : ಅರುಣ್ ಸೋಮಣ್ಣ ಪ್ರತಿಕ್ರಿಯೆ

    ಟ ಸೃಜನ್ ಲೋಕೇಶ್ (Srujan Lokesh) ಮತ್ತು ಸಚಿವ ಸೋಮಣ್ಣ (V. Somanna) ಪುತ್ರ ಅರುಣ್ ಸೋಮಣ್ಣ ಮಧ್ಯೆ ಗಲಾಟೆ ನಡೆದಿದೆ ಎನ್ನಲಾದ ಸುದ್ದಿಗೆ ಸ್ವತಃ ಅರುಣ್ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಇದೊಂದು ಚುನಾವಣೆಯ ಹುನ್ನಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಸೃಜನ್ ಮತ್ತು ತಮ್ಮ ನಡುವೆ ಯಾವುದೇ ಗಲಾಟೆ ಆಗಿಲ್ಲ. ಅಂದು ಆ ಸ್ಥಳದಲ್ಲಿ ನಾನು ಇರಲೇ ಇಲ್ಲ. ನಮ್ಮ ವಿರೋಧಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

    ಬ್ಯಾಡ್ಮಿಂಟನ್ (Badminton) ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟಿಸ್ ಮಾಡುತ್ತಿದೆ. ಪ್ರಾಕ್ಟಿಸ್ ಮುಗಿಸಿಕೊಂಡು ರಾತ್ರಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಜಮಾವಣೆಗೊಂಡಿದೆ. ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡುವ ಮಟ್ಟಕ್ಕೆ ಬಂದಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ಈ ಕುರಿತು ಟೂರ್ನಮೆಂಟ್ ಆಟಗಾರ ಮತ್ತು ಅಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಕಾಸ್ ಅನ್ನುವವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಾತ್ರಿ ಪ್ರಾಕ್ಟಿಸ್ ಮತ್ತು ಮೀಟಿಂಗ್ ಇತ್ತು. ಆದರೆ, ಗಲಾಟೆ ಆಗುವಂಥದ್ದು ಏನೂ ಆಗಿಲ್ಲ. ಅವತ್ತು ಅರುಣ್ ಸೋಮಣ್ಣ (Arun Somanna) ಅವರು ಅಲ್ಲಿ ಇರಲೇ ಇಲ್ಲ. ಸೃಜನ್ ಲೋಕೇಶ್ ಅವರು ಬೇಗನೆ ಹೊರಟರು. ನಾವೂ ನಂತರ ಹೊರಟೆವು. ಗಲಾಟೆ ಆಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದಿದ್ದರು.

    ಈ ಕುರಿತು ಎರಡು ದಿನಗಳ ಹಿಂದೆಯಷ್ಟೇ ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ. ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆದು ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ’ ಎಂದಿದ್ದರು. ಇದೀಗ ಅವರ ಪುತ್ರ ಕೂಡ ಈ ಘಟನೆಯನ್ನು ತಳ್ಳಿಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]