Tag: SRS

  • Bengaluru | ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ KSRTC ಬಸ್ ಡಿಕ್ಕಿ

    Bengaluru | ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ KSRTC ಬಸ್ ಡಿಕ್ಕಿ

    – ಓರ್ವ ಮಹಿಳೆಗೆ ಗಾಯ, ಪ್ರಯಾಣಿಕರು ಸೇಫ್

    ಬೆಂಗಳೂರು: ಸಿಗ್ನಲ್ ಅಲ್ಲಿ ಟೆಂಪೋ ಅಡ್ಡ ಬಂದ ಹಿನ್ನೆಲೆ ಬ್ರೇಕ್ ಫೇಲ್ (Brake Failure) ಆಗಿ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ (Bengaluru) ಎಸ್‌ಆರ್‌ಎಸ್ ಸಿಗ್ನಲ್ ಅಲ್ಲಿ ನಡೆದಿದೆ.

    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು ಡಿವೈಡರ್‌ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದೆ. ಬಸ್ಸಿನಲ್ಲಿ ಸುಮಾರು 42 ಪ್ರಯಾಣಿಕರಿದ್ರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಒಬ್ಬ ಮಹಿಳೆಗೆ ಮಾತ್ರ ಕಾಲಿಗೆ ಗಾಯವಾಗಿದೆ. ಉಳಿದಂತೆ ಎಲ್ಲಾ ಪ್ರಯಾಣಿಕರು ಸೇಫ್ ಆಗಿದ್ದಾರೆ. ಇದನ್ನೂ ಓದಿ: ಪುನೀತ್ ನಟನೆಯ ‘ನಾ ಬೋರ್ಡು ಇರದ ಬಸ್ಸನು’ ಹಾಡಿನ ನಟಿ ಹೃದಯಾಘಾತದಿಂದ ಸಾವು

    ಶನಿವಾರ ಮುಂಜಾನೆ 3:30ರ ವೇಳೆಗೆ ಅಪಘಾತ ನಡೆದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಆರ್ಥಿಕತೆಯಲ್ಲಿ ಮುನ್ನುಗ್ಗುತ್ತಿದೆ ಭಾರತ- ಮಧ್ಯಮ ವರ್ಗದ ಜನರು ಹಣಕ್ಕಾಗಿ ಇನ್ನೂ ಸಾಲದಾತರನ್ನೇ ಅವಲಂಬಿಸಿದ್ದಾರೆ ಯಾಕೆ?

  • ಎರಡು ಹೆಣ್ಣುಮಕ್ಕಳ ಜೊತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಎರಡು ಹೆಣ್ಣುಮಕ್ಕಳ ಜೊತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಬೆಂಗಳೂರು: ಚೆನ್ನಾಗಿ ಬದುಕಿ ಬಾಳುತ್ತೇವೆ ಅಂತಾ ಮನೆಯವರ ವಿರೋಧ ಕಟ್ಟಿಕೊಂಡು ಅಂತರ್ಜಾತಿ ಮದುವೆ ಆದ್ರು. ಸುಂದರ ಸಂಸಾರದಲ್ಲಿ ಬಿರುಗಾಳಿ ಎಂಬಂತೆ ಪತಿಯ ಕೊಲೆಯಾಗಿದ್ದರಿಂದ ಪತ್ನಿ ಈಗ ಎರಡು ಹೆಣ್ಣುಮಕ್ಕಳನ್ನ ಕಟ್ಟಿಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

    ರೇಖಾ ಹಾಗು ನಿಂಗರಾಜು ಒಬ್ಬರನ್ನೊಬ್ಬರು ಪ್ರೀತಿಸಿ 2011ರಲ್ಲಿ ಅಂತರ್ಜಾತಿ ವಿವಾಹವಾಗಿದ್ದರು. ನಿಂಗರಾಜು ಬೆಂಗಳೂರಿನ ಎಸ್‍ಆರ್ ಎಸ್‍ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಆಫೀಸ್‍ನಲ್ಲಿ ಚಿಕ್ಕಯ್ಯ ಅನ್ನೋರು ಕೆಲಸ ಸರಿಯಾಗಿ ಮಾಡ್ತಿಲ್ಲ ಅಂತಾ ಸೇವೆಯಿಂದ ವಜಾಗೊಳಿಸಿ ನಿಂಗರಾಜುವನ್ನ ಆ ಜಾಗದಲ್ಲಿ ಕೂರಿಸಿದ್ರು. ನನ್ನ ಕೈ ಕೆಳಗಿದ್ದವನು ನನ್ನ ಮೇಲಿನ ಹುದ್ದೆಗೆ ಬಂದನಲ್ಲ ಅಂತಾ ಕುದಿಯುತ್ತಿದ್ದ ಚಿಕ್ಕಯ್ಯ, 2016ರ ಅಕ್ಟೋಬರ್ ನಲ್ಲಿ ನಿಂಗರಾಜುವನ್ನ ಕೊಲೆ ಮಾಡಿದ್ದಾನೆ.

    ನಿಂಗರಾಜು ಕೊಲೆಯ ಬಳಿಕ ಎಸ್‍ಆರ್ ಎಸ್ ರೇಖಾ ಅವರಿಗೆ ಪರಿಹಾರದ ಹಣ ನೀಡುವುದಾಗಿ ಭರವಸೆಯನ್ನು ಸಹ ನೀಡಿತ್ತು. ಆದ್ರೆ ಇದೂವರೆಗೂ ಮಾತ್ರ ಎಸ್‍ಆರ್ ಎಸ್ ಸಂಸ್ಥೆ ಪರಿಹಾರದ ಹಣ ನೀಡಿಲ್ಲ. ರೇಖಾರನ್ನು ಅಂತರ್ಜಾತಿ ವಿವಾಹ ಅಂತಾ ಇತ್ತ ಹೆತ್ತವರೂ ಸೇರಿಸ್ತಿಲ್ಲ, ಅತ್ತ ಗಂಡನ ಮನೆಯವರೂ ಹತ್ತಿರ ಬಿಟ್ಕೊಳ್ತಿಲ್ಲ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ರೇಖಾ, ತನ್ನಿಬ್ಬರು ಹೆಣ್ಣು ಮಕ್ಕಳನ್ನ ನೋಡಿಕೊಂಡು ಕೆಲಸ ಮಾಡೋಕೆ ಆಗ್ತಿಲ್ಲ. ಎಸ್‍ಆರ್ ಎಸ್‍ನಿಂದ ಪರಿಹಾರ ಮತ್ತು ಮಕ್ಕಳಿಗೆ ಯಾರಾದ್ರು ವಿದ್ಯಾಭ್ಯಾಸ ಕೊಡಿಸಿದ್ರೆ ಸಾಕು ಅಂತಾ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=Ha9UiOHYpPI