Tag: srirangpatna

  • ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್

    ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್

    ಮಂಡ್ಯ: ಮೈಸೂರು-ಬೆಂಗಳೂರು (Mysuru_ Bengaluru) ದಶಪಥ ಹೆದ್ದಾರಿ ಯೋಜನೆಯ ಮದ್ದೂರು ಫ್ಲೈಓವರ್ ಜೊತೆಗೆ ಶ್ರೀರಂಗಪಟ್ಟಣ (Srirangapatna) ಬೈಪಾಸ್ ಕೂಡ ನವೆಂಬರ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಾಯವಾಗಲಿದೆ ಎನ್ನುವ ಮೂಲಕ ವಾಹನ ಸವಾರರಿಗೆ ಸಂಸದ ಪ್ರತಾಪ್ ಸಿಂಹ (Pratap simha) ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಖುದ್ದು ಶ್ರೀರಂಗಪಟ್ಟಣ ಬೈಪಾಸ್ ನಲ್ಲಿ ಸಂಚರಿಸಿ ಸಂಸದರು ತಮ್ಮ ಫೇಸ್ ಬುಕ್ ಲೈವ್ ಮೂಲಕ ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಮದ್ದೂರು ಬೈಪಾಸ್ ಕೆಲಸ ಕಂಪ್ಲೀಟ್ ಆಗಿದೆ. ಶ್ರೀರಂಗಪಟ್ಟಣ ಬೈಪಾಸ್ ಎಕ್ಸೆಪೆಷ್ಸನ್ ಜಾಯಿಂಟ್ಸ್ ಕಾರ್ಯವು ಸದ್ಯ ಮುಕ್ತಾಯದ ಹಂತದಲ್ಲಿದೆ. ನವೆಂಬರ್ ಅಂತ್ಯದ ಒಳಗೆ ಮದ್ದೂರು ಮತ್ತು ಶ್ರೀರಂಗಪಟ್ಟಣ ಬೈಪಾಸ್ ಅನ್ನು ಸಂಚಾರಕ್ಕೆ ಮುಕ್ತ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್‌ ಸಿಂಹ

    ಮಂಡ್ಯ ಬೈಪಾಸ್ ಒಂದು ಮಾತ್ರ ಡಿಸೆಂಬರ್ ಅಂತ್ಯದ ಒಳಗೆ ಓಪನ್ ಮಾಡಲಾಗುತ್ತದೆ. ಯಾಕಂದ್ರೆ ದಶಪಥ ಹೆದ್ದಾರಿ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯ ನಾಲ್ಕು ಕಡೆ ಸ್ವಲ್ಪ ಕೆಲಸ ಆಗಬೇಕಿದೆ. ಅಲ್ಲಲ್ಲಿ ನೂರು ಮೀಟರ್‍ನಷ್ಟು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕಿದೆ. ಉಳಿದಂತೆ ಡಿಸೆಂಬರ್ ಅಂತ್ಯದ ಒಳಗೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಸಿಟಿಗೆ ಬಾರದೇ ಮೈ-ಬೆಂಗೆ ಸಂಚರಿಸಬಹುದಾಗಿದೆ. ಇದರಿಂದ ಬಹಳಷ್ಟು ಸಮಯ ವಾಹನ ಸವಾರರಿಗೆ ಉಳಿಯಲಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]