Tag: Srirangaptna

  • ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ – ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

    ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ – ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

    ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ (KRS) ಅಣೆಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾಗಿದೆ. ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಾವೇರಿ ಬಾಗಿನ (Cauvery Bagina) ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ.

    ಜೂನ್ ಆರಂಭದಿಂದ ಅಬ್ಬರಿಸುತ್ತಿರುವ ಮುಂಗಾರು ಮಳೆಯಿಂದಾಗಿ ಜೂನ್ ತಿಂಗಳಲ್ಲೇ ಕೆಆರ್‌ಎಸ್ ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನೆಲೆ ಇಂದು ಕಾವೇರಿ ಬಾಗಿನ ಅರ್ಪಿಸುವ ಮೂಲಕ ಜೂನ್‌ನಲ್ಲಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಸುರ್ಜೇವಾಲಾ ರಾಜ್ಯ ಭೇಟಿಗೂ ಮುನ್ನವೇ ಕುತೂಹಲ ಕೆರಳಿಸಿದ ಮಲ್ಲಿಕಾರ್ಜುನ ಖರ್ಗೆ – ಡಿಕೆಶಿ ಭೇಟಿ

    ಜೂನ್ 28ರ ಶನಿವಾರವೇ ಡ್ಯಾಂ ಭರ್ತಿಯಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಲಿದ್ದಾರೆ. ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಗ್ಗೆ 11:30ರ ಅಭಿಜಿನ್ ಮೂಹೂರ್ತದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ:  Maharashtra | ʻತ್ರಿಭಾಷಾ ಸೂತ್ರʼ ಆದೇಶ ಹಿಂಪಡೆದ ʻಮಹಾʼ ಸರ್ಕಾರ

    ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆ ಕೆಆರ್‌ಎಸ್ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಅಣೆಕಟ್ಟಿನ ಗೋಡೆಗಳಿಗೆ ಸುಣ್ಣಬಣ್ಣ ಬಳಿದಿದ್ದು, ಎಲ್ಲಡೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಬಾಗಿನ ಅರ್ಪಿಸುವ ಜಾಗದಲ್ಲಿ ರೆಡ್ ಕಾರ್ಪೆಟ್ ಹಾಕಿ ವೇದಿಕೆ ಸಜ್ಜುಗೊಳಿಸಲಾಗಿದೆ. ಬಾಗಿನ ಅರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಸಚಿವರು ಹಾಗೂ ಶಾಸಕರು ಉಪಸ್ಥಿತರಿರಲಿದ್ದಾರೆ.  ಇದನ್ನೂ ಓದಿ: ಬೆಂಗಳೂರು | ಮಹಿಳೆಯ ಭಯಾನಕ ಹತ್ಯೆ ಕೇಸ್‌ – ಅಸ್ಸಾಂ ಮೂಲದ ಲಿವ್‌ ಇನ್‌ ಗೆಳೆಯ ತಮ್ಸುದ್ದಿನ್ ಅರೆಸ್ಟ್‌

  • ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

    ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್‌ನ (KRS) ಬೃಂದಾವನ ಸಹ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಮ್ಮ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಪ್ರವಾಸಿಗರ ದಂಡು ಹರಿದು ಬರುತ್ತದೆ. ಮೈಸೂರಿಗೆ ವಿಸಿಟ್ ಕೊಡುವ ಬಹುತೇಕ ಪ್ರವಾಸಿಗರು ಬೃಂದಾವನವನ್ನು ನೋಡಲೇಬೇಕೆಂದು ತಪ್ಪದೇ ಇಲ್ಲಿಗೆ ಅಟೆಂಡೆನ್ಸ್ ಹಾಕುತ್ತಾರೆ. ಹೀಗಿರುವಾಗ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿನ ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆದರೆ ಅದರ ಬದಲಿಗೆ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ.

    ಕೆಆರ್‌ಎಸ್ ಡ್ಯಾಂ ಎದುರು ಬೃಂದಾವನಕ್ಕೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾವೇರಿ ನದಿಗೆ ಅಡ್ಡಲಾಗಿ 7 ಕೋಟಿ ವೆಚ್ಚದಲ್ಲಿ 2003-04ರಲ್ಲಿ 500 ಮೀಟರ್ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ 7 ಕೋಟಿಯನ್ನು ಪಡೆಯುವ ಉದ್ದೇಶದಿಂದ ನಾಲ್ಕು ಚಕ್ರದ ವಾಹನಗಳಿಗೆ 50 ರೂ. ಹಾಗೂ 6 ಚಕ್ರದ ವಾಹನಗಳಿಗೆ 100 ರೂ.ಗಳನ್ನು ಟೋಲ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಸದ್ಯ ಈ ಟೋಲ್ ಮೂಲಕ ಸಂಗ್ರಹ ಮಾಡಿದ ಹಣ ಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತ ದುಪ್ಪಟ್ಟು ಹಣ ಸಂಗ್ರವಾಗಿದೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

    ಟೋಲ್ ಮೂಲಕ ಈಗಾಗಲೇ ದುಪ್ಪಟ್ಟು ಹಣ ಸಂಗ್ರಹವಾದರೂ ಸಹ ಇದೀಗ ಕಳೆದ ಒಂದು ವಾರದಿಂದ ಇಲ್ಲಿನ ಟೋಲ್ ದರವನ್ನು ಒನ್ ಟು ಡಬಲ್ ಹೆಚ್ಚಿಸಲಾಗಿದೆ. 50 ರೂ. ಇದ್ದ ಟೋಲ್ ದರ 100, 50 ರೂ. ಇದ್ದ ಪಾರ್ಕಿಂಗ್ 100 ರೂ. ಎರಡು ಸೇರಿ 200 ರೂ. ಟೋಲ್‌ನಲ್ಲಿಯೇ ವಸೂಲಿ ಮಾಡಲಾಗುತ್ತದೆ. ಒಂದು ವೇಳೆ ಬೃಂದಾವನಕ್ಕೆ ಹೋಗಲಿಲ್ಲ ಅಂದರೆ ಅಕ್ಕ-ಪಕ್ಕದ ಹಳ್ಳಿಯವರು ಸೇರಿದಂತೆ ಎಲ್ಲರೂ 100 ರೂ. ನೀಡಬೇಕಿದೆ. ಇದಲ್ಲದೇ ಬೃಂದಾವನ ಪ್ರವೇಶಕ್ಕೆ 50 ರೂ. ಇದ್ದ ಟಿಕೆಟ್ ದರವನ್ನು ಇದೀಗ 100 ರೂ. ಮಾಡಲಿದೆ. ಈ ದರ ಏರಿಕೆ ಪ್ರವಾಸಿಗರ ಆಕ್ರೋಶಕ್ಕೆ ಸಹ ಕಾರಣವಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ

  • Mandya | ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

    Mandya | ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

    ಮಂಡ್ಯ: ಕಾವೇರಿ ನದಿಯಲ್ಲಿ (Cauvery River) ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೈಸೂರಿನ ವಿಕ್ರಾಂತ್ ಕಾರ್ಖಾನೆ ನೌಕರ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ನಡೆದಿದೆ.

    ಮೈಸೂರು (Mysuru) ಜಿಲ್ಲೆಯ ಹುಣಸೂರು ಮೂಲದ ಮಹೇಶ್ (35) ಮೃತ ದುರ್ದೈವಿ. ಶ್ರೀರಂಗಪಟ್ಟಣದ ತರೀಪುರ ಗ್ರಾಮದಲ್ಲಿ ಸ್ನೇಹಿತನ ಮನೆಯ ಗೃಹ ಪ್ರವೇಶಕ್ಕೆಂದು ಮಹೇಶ್ ಸ್ನೇಹಿತರ ಜೊತೆ ಬಂದಿದ್ದರು. ಇದನ್ನೂ ಓದಿ: ಕಲಬುರಗಿ| ತಡರಾತ್ರಿ ಭೀಕರ ರಸ್ತೆ ಅಪಘಾತಕ್ಕೆ ಐವರು ದುರ್ಮರಣ

    ಬೆಳಗ್ಗೆ ನದಿಯಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕೆಂದು ಈಜಲು ಹೋಗಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿ ಮಹೇಶ್ ಸಾವನ್ನಪ್ಪಿದ್ದಾರೆ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ – ನಡು ರಸ್ತೆಯಲ್ಲಿ ಕೊಲೆಗೈದು ಪರಾರಿ