Tag: Srirangapatna

  • ಕಾವೇರಿ ನದಿಯಲ್ಲಿ ತಾಯಿ ಅಸ್ತಿ ವಿಸರ್ಜಿಸಿದ ಕಿಚ್ಚ ಸುದೀಪ್

    ಕಾವೇರಿ ನದಿಯಲ್ಲಿ ತಾಯಿ ಅಸ್ತಿ ವಿಸರ್ಜಿಸಿದ ಕಿಚ್ಚ ಸುದೀಪ್

    ಮಂಡ್ಯ: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ತಾಯಿ ವಿಧಿವಶರಾಗಿ ಇಂದಿಗೆ ಮೂರು ದಿನಗಳಾಗಿದೆ. ಈ ಹಿನ್ನೆಲೆ ಕಾವೇರಿ ನದಿಯಲ್ಲಿ (Cauvery River) ತಾಯಿ ಸರೋಜಾ ಅಸ್ತಿಯನ್ನು ಸುದೀಪ್ ವಿಸರ್ಜನೆ ಮಾಡಿದ್ದಾರೆ.

    ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapatna) ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಸುದೀಪ್ ಪ್ರಾರ್ಥಿಸಿದ್ದಾರೆ. ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ. ಅಸ್ತಿ ವಿಸರ್ಜನೆ ಕಾರ್ಯ ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. ಅಸ್ತಿ ವಿಸರ್ಜನೆ ವೇಳೆ ಸುದೀಪ್‌ ಕಣ್ಣೀರಿಟ್ಟಿದ್ದಾರೆ. ವಿಧಿ ವಿಧಾನ ಕಾರ್ಯದ ಬಳಿಕ ಬೆಂಗಳೂರಿನತ್ತ ಸುದೀಪ್‌ ತೆರಳಿದ್ದಾರೆ. ಇದನ್ನೂ ಓದಿ: ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

    ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ಮುಂಜಾನೆ 07:04ಕ್ಕೆ ಸರೋಜಾ ಇಹಲೋಕ ತ್ಯಜಿಸಿದ್ದರು. ಸರೋಜಾ ಅವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆದಿದೆ.  ಇದನ್ನೂ ಓದಿ: ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಬಂದಿದ್ದೆ, ಕೊನೆಯ ಬಾರಿಗೆ ಪ್ರಜ್ಞೆಯಲ್ಲಿದ್ದಾಗ ನೋಡಲಾಗಲಿಲ್ಲ: ತಾಯಿಯ ಅಗಲಿಕೆಗೆ ಕಿಚ್ಚ ಭಾವುಕ

  • ಇಂದಿನಿಂದ ಶ್ರೀರಂಗಪಟ್ಟಣದಲ್ಲಿ 5 ದಿನಗಳ ಕಾಲ ಕಾವೇರಿ ಆರತಿ

    ಇಂದಿನಿಂದ ಶ್ರೀರಂಗಪಟ್ಟಣದಲ್ಲಿ 5 ದಿನಗಳ ಕಾಲ ಕಾವೇರಿ ಆರತಿ

    ಮಂಡ್ಯ: ಇಂದಿನಿಂದ 5 ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ (Kaveri Aarathi) ನಡೆಯಲಿದ್ದು, ಸಕಲ ಸಿದ್ಧತೆಗಳು ಆರಂಭವಾಗಿವೆ.

    ವಿಶ್ವವಿಖ್ಯಾತ ಮೈಸೂರು ದಸರಾಗೂ (Mysuru Dasara) ಮುನ್ನವೇ ಕಾವೇರಿ ಆರತಿಯಾಗಲಿದ್ದು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ (Srirangapatna Shri Ranganathaswami Temple) ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿ ಆರತಿ ಪೂಜೆ ನಡೆಯಲಿದೆ.ಇದನ್ನೂ ಓದಿ: Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು

    ಶ್ರೀರಂಗಪಟ್ಟಣದ ಪ್ರಸಿದ್ದ ಅರ್ಚಕ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾವೇರಿ ಆರತಿ ಪೂಜಾ ಕೈಂಕರ್ಯ ನಡೆಯಲಿದ್ದು, ಇಂದಿನಿಂದ ಅ.7 ರವರೆಗೆ ಪ್ರಾಯೋಗಿಕವಾಗಿ 5 ದಿನ ಕಾವೇರಿ ಆರತಿ ಪೂಜೆ ನಡೆಯಲಿದೆ. ಆರತಿ ಇಂದು ಸಂಜೆ 6:15 ರಿಂದ ರಾತ್ರಿ 7 ಗಂಟೆವರೆಗೂ ನಡೆಯಲಿದೆ.

    ಕಾವೇರಿ ಆರತಿಗಾಗಿ ಪಟ್ಟಣದ ಸ್ನಾನಘಟ್ಟದ ಬಳಿ ಭರದ ಸಿದ್ದತೆ ಕಾರ್ಯ ಪ್ರಾರಂಭವಾಗಿದೆ. ರಾತ್ರಿ ವೇಳೆ ಆರತಿ ಪೂಜಾ ಸಂದರ್ಭದಲ್ಲಿ ಬೆಳಕಿಗಾಗಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಲಾಗಿದೆ.ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

  • ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಮಂಡ್ಯ: ಕೊಲೆ ಆರೋಪಿಯಾಗಿದ್ದ ಕುಮಾರ್ ಎಂಬ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಸಾಪ ಅಧ್ಯಕ್ಷನನ್ನಾಗಿ ಮಾಡಿದ್ದ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಇದೀಗ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿ ಆದೇಶ ಹೊರಡಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ (Mahesh Joshi) ಆದೇಶ ಹೊರಡಿಸಿದ್ದಾರೆ.

    ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ಸಿದ್ಧತೆಗೆ ಜಿಲ್ಲೆಯ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಎಂ.ಬಿ ಕುಮಾರ್‌ ಅವರನ್ನು ಆಯ್ಕೆ ಮಾಡುವಂತೆ ಶಿಪಾರಸ್ಸು ಮಾಡಿದ್ದರು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಅದರಂತೆ ಕುಮಾರ್‌ನನ್ನು ಶ್ರೀರಂಗಪಟ್ಟಣದ ಅಧ್ಯಕ್ಷನನ್ನಾಗಿಯೂ‌ ಕಸಾಪ ನೇಮಕ ಮಾಡಿತ್ತು. ಕುಮಾರ್ 2015ರಲ್ಲಿ ನಡೆದ ಕೊಲೆ‌ ಪ್ರಕರಣವೊಂದರಲ್ಲಿ 30ನೇ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಸೆ.19ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಯಾವುದೇ ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿಗೆ ಕಸಾಪದಲ್ಲಿ ಯಾವ ಹುದ್ದೆಗಳನ್ನು ನೀಡಬಾರದು ಎಂದು ಬೈಲಾದಲ್ಲಿ ಇದೆ. ಹೀಗಿದ್ದರೂ ಕೊಲೆ ಆರೋಪಿಯಾಗಿರುವ ಕುಮಾರ್‌ಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಶಿಫಾರಸ್ಸಿಗೆ ಮಣಿದು ಅಧ್ಯಕ್ಷ ಸ್ಥಾನ ಕೊಡಲಾಗಿದೆ ಎಂದು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

    ವರದಿಯ ಬೆನ್ನಲ್ಲೇ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಪೂರ್ವಪರ ವಿಚಾರ ಮಾಡಿ ಎಂ.ಬಿ ಕುಮಾರ್‌ನನ್ನು ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಕಸಾಪ ತಾಲೂಕು ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಎಂಬುವವರನ್ನು ಆಯ್ಕೆ ಮಾಡಲಾಗಿದೆ.

  • ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯದಲ್ಲಿ‌ ಅತೀ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಸಕ್ಕರೆ ನಾಡು ಮಂಡ್ಯದಲ್ಲಿ ನಿಗದಿ ಮಾಡಲಾಗಿದೆ. ಹೀಗಿರುವಾಗ ಶಾಸಕರೊಬ್ಬರು ತನ್ನ ಆಪ್ತರೂ ಆದ ಕೊಲೆ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷರನ್ನಾಗಿ ಮಾಡಲು ಶಿಫಾರಸು ಹೊರಡಿಸಿದ್ದಾರೆ.

    ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತನ್ನ ಆಪ್ತ, ಕೊಲೆ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗೆ ಇರುವ ಒಬ್ಬ ವ್ಯಕ್ತಿಗೆ ತನ್ನ ಶಿಫಾರಸಿನಿಂದ ತಾಲೂಕಿನ ಕನ್ನಡ ಸಾಹಿತ್ಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ.

    ಡಿಸೆಂಬರ್ ತಿಂಗಳಿನಲ್ಲಿ‌ ಜರುಗುವ ಈ ಕನ್ನಡ ಹಬ್ಬಕ್ಕೆ ಮಂಡ್ಯ ಒಂದು ಕಡೆ ಪೂರ್ವಭಾವಿ ಸಿದ್ಧತೆಯಲ್ಲಿ ಇದೆ. ಮಂಡ್ಯದಲ್ಲಿ ಈ‌ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರೋದು ಸಮ್ಮೇಳನಕ್ಕೆ ಮತ್ತಷ್ಟು ಮೆರಗು ತಂದಿದೆ. ಇನ್ನೊಂದೆಡೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಕೊಲೆ ಆರೋಪಿ ಜೊತೆ ಜಾಮೀನು ಮೇಲೆ‌ ಹೊರಗೆ ಇರುವ ಎಂ.ಬಿ.ಕುಮಾರ್ ಎಂಬ ವ್ಯಕ್ತಿಗೆ ತಮ್ಮ ಶಿಫಾರಸಿನ ಮೂಲಕ ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಮೂಲಕ ಜಾಮೀನಿನ ಮೇಲೆ ಹೊರಗೆ ಇರುವ ಕೋಲೆ‌ ಆರೋಪಿಯನ್ನು ಕನ್ನಡದ ತೇರನ್ನು‌ ಎಳೆಯಲು ಮುಂಬದಿಗೆ ನಿಲ್ಲಿಸಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

    ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿರುವ ಎಂ.ಬಿ.ಕುಮಾರ್, ಶಾಸಕ‌ ರಮೇಶ್ ಬಾಬು ಬಂಡಿಸಿದ್ದೇಗೌಡ ಆಪ್ತ. ಈತ 2015 ಜನವರಿ 3 ರಂದು ನಡೆದ ರೌಡಿಶೀಟರ್ ಕೊಲೆ ಕೇಸ್‌ನಲ್ಲಿ 30ನೇ ಆರೋಪಿಯಾಗಿದ್ದಾನೆ.‌ ಸದ್ಯ ಈ ಕುಮಾರ್ ಬೇಲ್ ಮೇಲೆ ಹೊರಗೆ ಇದ್ದಾನೆ. ಕಸಾಪ ಬೈಲಾ ಪ್ರಕಾರ ಕ್ರಿಮಿನಲ್ ಕೇಸ್ ಹಿನ್ನೆಲೆ ಉಳ್ಳ ಯಾವ ವ್ಯಕ್ತಿಗೂ ಕಸಾಪ ಜವಾಬ್ದಾರಿಯನ್ನು ನೀಡಬಾರದು ಎಂದಿದೆ. ಹೀಗಿದ್ದರೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡನ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್‌ನನ್ನು‌ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ, ಈ ಬಗ್ಗೆ ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿ ಒಂದು ವೇಳೆ ತಪ್ಪಿದ್ಧರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ನಿಮಿಷಾಂಭ ಮುಂಭಾಗ ಜಲಾವೃತ – ಗೋಸಾಯ್ ಘಾಟ್ ಮುಳುಗಡೆ

    ನಿಮಿಷಾಂಭ ಮುಂಭಾಗ ಜಲಾವೃತ – ಗೋಸಾಯ್ ಘಾಟ್ ಮುಳುಗಡೆ

    ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ (KRS Dam) 1,30,000 ಕ್ಯುಸೆಕ್‌ ನೀರನ್ನು ಹರಿ ಬಿಟ್ಟಿದ್ದರಿಂದ ಕಾವೇರಿ ನದಿ (Cauvery River) ರೌದ್ರ ನರ್ತನದೊಂದಿಗೆ ಹರಿಯುತ್ತಿದೆ. ಈ ಪರಿಣಾಮ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಸ್ಥಾನದ ಮುಂಭಾಗ ಸಂಪೂರ್ಣ ಜಲಾವೃತಗೊಂಡಿದೆ.

    ಶುಕ್ರವಾರ ನಿಮಿಷಾಂಭ ದೇವಸ್ಥಾನದ (Nimishamba Temple) ಸ್ನಾನಘಟ್ಟ ಮುಳುಗಡೆಯಾಗಿತ್ತು. ಇಂದು ದೇವಸ್ಥಾನದ ಮುಂಭಾಗ, ಪಾರ್ಕಿಂಗ್ ಸ್ಥಳ, ನವಗ್ರಹ, ಅರಳಿಕಟ್ಟೆ, ಶಿವನ ದೇಗುಲಗಳು ಮುಳುಗಡೆಯಾಗಿವೆ. ಭಕ್ತರಿಗೆ ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.30 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

    ಶ್ರೀರಂಗಪಟ್ಟಣದ (Srirangapatna) ಗೋಸಾಯ್ ಘಾಟ್ (Ghosai Ghat) ಸಂಪೂರ್ಣ ಮುಳುಗಡೆಯಾಗಿದೆ. ಪಿಂಡಪ್ರಧಾನ, ಹೋಮ ಹವನ‌ ಇತರೆ ಪೂಜಾ ಕೈಂಕರ್ಯಗಳಿಗೆ ಗೋಸಾಯ್ ಘಾಟ್ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲದೇ ಸಿನಿಮಾ ಚಿತ್ರೀಕರಣಗಳು ಇಲ್ಲಿ ನಡೆಯುತ್ತಿದ್ದವು. ಇದೀಗ ಕಾವೇರಿ ಭೋರ್ಗರೆತಕ್ಕೆ ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆಯಾಗಿದೆ.‌ ಇಲ್ಲಿನ ಕಾಶಿ ವಿಶ್ವನಾಥ, ಶ್ರೀಕೃಷ್ಣ, ಶಿವ, ಆಂಜನೇಯ, ಗಣಪತಿ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ. ಇದನ್ನೂ ಓದಿ: ಕಾಫಿನಾಡಲ್ಲಿ ಮಳೆಯ ಅಬ್ಬರ – ಕೋಡಿ ಬಿದ್ದ ಇತಿಹಾಸ ಪ್ರಸಿದ್ಧ ಮದಗದ ಕೆರೆ

    ಗೋಸಾಯ್ ಘಾಟ್‌ಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದ್ದು ನಡೆಯುತ್ತಿದ್ದ ಪಿಂಡಪ್ರಧಾನ ಹಾಗೂ ಇತರ ಕೈಂಕರ್ಯಗಳಿಗೆ ನಿಷೇಧ ಹೇರಲಾಗಿದೆ.

     

  • ಭಾನುವಾರ ಸಂಜೆಯೊಳಗೆ KRS ಸಂಪೂರ್ಣ ಭರ್ತಿ ಸಾಧ್ಯತೆ

    ಭಾನುವಾರ ಸಂಜೆಯೊಳಗೆ KRS ಸಂಪೂರ್ಣ ಭರ್ತಿ ಸಾಧ್ಯತೆ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ (Rain) ಹಿನ್ನೆಲೆ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) 5 ದಿನಕ್ಕೆ 15 ಟಿಎಂಸಿ ನೀರು ಸಂಗ್ರಹವಾಗಿದ್ದು, ನಾಳೆ (ಭಾನುವಾರ) ಸಂಜೆಯ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ.

    ಸದ್ಯ 124.80 ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ 120 ಅಡಿ ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ ಇದ್ದು, ನಾಳೆ ಸಂಜೆಯೇ ಸಂಪೂರ್ಣವಾಗಿ ಡ್ಯಾಂ ಭರ್ತಿಯಾಗಲಿದೆ. ಸದ್ಯ ಡ್ಯಾಂಗೆ 51,374 ಕ್ಯುಸೆಕ್ ಒಳಹರಿವು ಬರುತ್ತಿದೆ. ಇದನ್ನೂ ಓದಿ: KRS ಡ್ಯಾಂನಿಂದ ಕಾವೇರಿ ನದಿಗೆ 10,000 ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ

    ಮುಂಜಾಗ್ರತಾ ಕ್ರಮವಾಗಿ ನದಿಗೆ 4,714 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಹೊರಹರಿವಿನ ಪ್ರಮಾಣ ಯಾವ ಕ್ಷಣದಲ್ಲಾದರೂ ಹೆಚ್ಚಬಹುದು. ಹೀಗಾಗಿ ನದಿ ಪಾತ್ರದ ಜನರಿಗೆ ಮಂಡ್ಯ ಜಿಲ್ಲಾಡಳಿತ ಅಲರ್ಟ್ ಘೋಷಣೆ ಮಾಡಿದೆ. ಇನ್ನೂ ಕೆಆರ್‌ಎಸ್ ಡ್ಯಾಂ ಭರ್ತಿಯ ಅಂಚಿನಲ್ಲಿರುವ ಹಿನ್ನೆಲೆ ರೈತರಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಳೆ ಅಬ್ಬರ – 3 ಮನೆಗಳು ಧರೆಗೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ಕೆಆರ್‌ಎಸ್ ನೀರಿನ ಮಟ್ಟ:
    ಗರಿಷ್ಠ ಮಟ್ಟ – 124.80 ಅಡಿ
    ಇಂದಿನ ಮಟ್ಟ – 120.00 ಅಡಿ
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇAದಿನ ಸಾಂದ್ರತೆ – 42.916 ಟಿಎಂಸಿ
    ಒಳ ಹರಿವು – 51,374 ಕ್ಯುಸೆಕ್
    ಹೊರ ಹರಿವು – 4,714 ಕ್ಯುಸೆಕ್

  • KRS ಡ್ಯಾಂನಿಂದ ಕಾವೇರಿ ನದಿಗೆ 10,000 ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ

    KRS ಡ್ಯಾಂನಿಂದ ಕಾವೇರಿ ನದಿಗೆ 10,000 ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂ (KRS Dam) ಭರ್ತಿಯ ಅಂಚಿನಲ್ಲಿರುವ ಹಿನ್ನೆಲೆ ಡ್ಯಾಂನಿಂದ ಕಾವೇರಿ ನದಿಗೆ (Cauvery River) 10,000 ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.

    ಕೆಆರ್‌ಎಸ್ ಡ್ಯಾಂನ 10 ಗೇಟ್‌ಗಳ ಮೂಲಕ 10,000 ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗಿದೆ. ಡ್ಯಾಂನಿಂದ ನೀರು ಹಾಲ್ನೊರೆಯಂತೆ ರಭಸವಾಗಿ ಬಂಡೆಗಳಿಗೆ ಅಪ್ಪಳಿಸಿ ಭೋರ್ಗರೆದು ಕಾವೇರಿ ನದಿಗೆ ಹರಿಯುತ್ತಿದೆ. ಇದನ್ನೂ ಓದಿ: ಬೋಟ್‌ಗೆ ಬೆಂಕಿ ಹೊತ್ತಿಕೊಂಡು 40 ಹೈಟಿಯನ್ ವಲಸಿಗರು ಸಾವು

     

    ಒಂದೆಡೆ ಪ್ರವಾಹ ಭೀತಿ ಇದ್ದರೆ, ಮತ್ತೊಂದೆಡೆ ಕಾವೇರಿಗೆ ಜೀವ ಕಳೆ ಬಂದಿದೆ. ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುಗಡೆ ಮಾಡಿದ್ದು, ಸಂಜೆ ವೇಳೆಗೆ ಡ್ಯಾಂ ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಇದನ್ನೂ ಓದಿ: ರೇಣುಕಾನನ್ನು ಹೊಡೆಯೋ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ – ದರ್ಶನ್ ಥಳಿಸ್ತಿರೋ 3 ಸೆಕೆಂಡ್ ದೃಶ್ಯ ಡಿಲೀಟ್

    ಹೀಗಾಗಿ ಕಾವೇರಿ ನದಿ ಪಾತ್ರದ 92 ಗ್ರಾಮಗಳಲ್ಲಿ ನೆರೆ ಭೀತಿ ಇದ್ದು, ಪ್ರವಾಸಿ ತಾಣಗಳಲ್ಲೂ ಪ್ರವಾಹದ ಆತಂಕ ಶುರುವಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಕಂಟ್ರೋಲ್ ರೂಂ ಸ್ಥಾಪಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಭಯೋತ್ಪಾದಕರನ್ನು ಬೇಟೆಯಾಡಲು ಜಮ್ಮು ಪ್ರದೇಶಕ್ಕೆ 500 ಪ್ಯಾರಾ ಕಮಾಂಡೋಗಳ ಎಂಟ್ರಿ

  • ಕೆಆರ್‌ಎಸ್ ಡ್ಯಾಂ ಭರ್ತಿಗೆ 8 ಅಡಿ ಮಾತ್ರ ಬಾಕಿ

    ಕೆಆರ್‌ಎಸ್ ಡ್ಯಾಂ ಭರ್ತಿಗೆ 8 ಅಡಿ ಮಾತ್ರ ಬಾಕಿ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ (KRS) ಡ್ಯಾಂ ಭರ್ತಿಗೆ ಇನ್ನು ಕೇವಲ 8 ಅಡಿ ಮಾತ್ರ ಬಾಕಿ ಇದೆ.

    ಒಂದು ವಾರದಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಇದರಿಂದ ದಿನೇ ದಿನೇ ಕೆಆರ್‌ಎಸ್ ಅಣೆಕಟ್ಟಿಗೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂದು ಕೆಆರ್‌ಎಸ್ ಡ್ಯಾಂಗೆ 44,617 ಕ್ಯುಸೆಕ್ ನೀರು ಬರುತ್ತಿದೆ. ಇದರಿಂದ 124.80 ಅಡಿ ಗರಿಷ್ಠ ಅಡಿಯ ಕೆಆರ್‌ಎಸ್ ಡ್ಯಾಂ 116.60 ಅಡಿ ಭರ್ತಿಯಾಗಿದೆ. ಇದನ್ನೂ ಓದಿ: ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅನ್ನೋ ಸಿದ್ದರಾಮಯ್ಯ ಮಾತನ್ನ ಯಾರೂ ನಂಬಲ್ಲ: ಸಿ.ಟಿ ರವಿ

    ಇನ್ನೂ ಡ್ಯಾಂನಲ್ಲಿ 38.900 ಟಿಎಂಸಿ ನೀರು ಶೇಖರಣೆ ಆಗಿದ್ದು, ಇನ್ನೂ 11 ಟಿಎಂಸಿ ನೀರು ಬಂದರೆ 49.452 ಟಿಎಂಸಿ ಶೇಖರಣೆ ಆಗಿ ಸಂಪೂರ್ಣ ಭರ್ತಿಯಾಗಲಿದೆ. ಇಂದು ಕೆಆರ್‌ಎಸ್ ಡ್ಯಾಂನಿಂದ 2,566 ಕ್ಯುಸೆಕ್ ನೀರನ್ನು ನಾಲೆ ಹಾಗೂ ಕುಡಿಯಲು ಬಿಡಲಾಗುತ್ತಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ – ರಾಜ್ಯದ 30 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ

    ಇಂದಿನ ಕೆಆರ್‌ಎಸ್ ನೀರಿನ ಮಟ್ಟ
    ಗರಿಷ್ಠ ಮಟ್ಟ – 124.80 ಅಡಿ
    ಇಂದಿನ ಮಟ್ಟ – 116.60 ಅಡಿ
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇAದಿನ ಸಾಂದ್ರತೆ – 38.900 ಟಿಎಂಸಿ
    ಒಳ ಹರಿವು – 44,617 ಕ್ಯುಸೆಕ್
    ಹೊರ ಹರಿವು – 2,566 ಕ್ಯುಸೆಕ್

  • ದ್ವಾರಕೀಶ್ ಪುತ್ರರಿಂದ ಇಂದು ಅಸ್ಥಿ ವಿಸರ್ಜನೆ

    ದ್ವಾರಕೀಶ್ ಪುತ್ರರಿಂದ ಇಂದು ಅಸ್ಥಿ ವಿಸರ್ಜನೆ

    ಗಲಿದ ಹಿರಿಯ ಚೇತನ, ನಟ ದ್ವಾರಕೀಶ್ (Dwarakish) ಅವರ ಅಸ್ಥಿ ವಿಸರ್ಜನೆ ಕಾರ್ಯ ಇಂದು ಶ್ರೀರಂಗಪಟ್ಟಣದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಸ್ಥಿ ವಿಸರ್ಜನೆಗೂ ಮುನ್ನ ಬೆಂಗಳೂರಿನ ಟಿ.ಆರ್ ಮಿಲ್ ರುದ್ರಭೂಮಿಯಲ್ಲಿ ಪೂಜೆ ಸಲ್ಲಿಸಲಾಗಿದೆ.

    ಪೂಜೆ ಸಲ್ಲಿಕೆ ಬಳಿಕ ಅಸ್ಥಿ ತೆಗೆದುಕೊಂಡು ಹೋಗಿರುವ ಕುಟುಂಬಸ್ಥರು ಇಂದು ಬೆಳಗ್ಗೆ 9 ಗಂಟೆ ಬಳಿಕ ಶ್ರೀರಂಗಪಟ್ಟಣ (Srirangapatna) ದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ದ್ವಾರಕೀಶ್ ನಿಧನರಾಗಿದ್ದಾರೆ.

     

    ಕರ್ನಾಟಕದ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್, ಅಪಾರ ಅಭಿಮಾನಿಗಳನ್ನು ಮತ್ತು ತುಂಬಿದ ಕುಟುಂಬವನ್ನು ಅಗಲಿದ್ದಾರೆ. ಅಗಲಿದ ಚೇತನಕ್ಕೆ ನಾಡಿನ ಅನೇಕರು ಕಂಬನಿ ಮಿಡಿದಿದ್ದಾರೆ.

  • ಶ್ರೀರಂಗಪಟ್ಟಣದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

    ಶ್ರೀರಂಗಪಟ್ಟಣದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

    ಮಂಡ್ಯ: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು. ನಿನ್ನೆ ಮಧ್ಯಾಹ್ನ ಮಕ್ಕಳಿಗೆ ತಾಯಿ ಐಸ್‌ಕ್ರೀಂ ತಿನ್ನಿಸಿದ್ದರು. ತಳ್ಳುವ ಗಾಡಿಯಾತನಿಂದ ಐಸ್‌ಕ್ರೀಂ ಕೊಡಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್‌ಕ್ರೀಂ ‌ತಿಂದಿದ್ದರು. ಐಸ್‌ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.

    ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ