Tag: Srirangapatna

  • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಆರ್‌ಎಸ್ ಡ್ಯಾಂನಿಂದ ನೀರು ಪೋಲು

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಆರ್‌ಎಸ್ ಡ್ಯಾಂನಿಂದ ನೀರು ಪೋಲು

    ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವಿರಾರು ಕ್ಯೂಸೆಕ್ ನೀರು ಪೋಲಾಗಿರುವ ಘಟನೆ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಜರುಗಿದೆ.

    ಭಾನುವಾರ ರಾತ್ರಿ ಏಕಾಏಕಿ ಕೆಆರ್‌ಎಸ್ ಡ್ಯಾಂನ +80 ಗೇಟ್ ಓಪನ್ ಆಗಿ ನದಿಗೆ ನೀರು ಹರಿದು ವ್ಯರ್ಥವಾಗಿದೆ. ಭಾನುವಾರ ರಾತ್ರಿ ಓಪನ್ ಆಗಿರುವ ಗೇಟ್‌ನಿಂದ ಸೋಮವಾರ ರಾತ್ರಿಯವರೆಗೂ ಡ್ಯಾಂ ನೀರು ಹರಿದು ನದಿ ಸೇರಿದೆ. ಗೇಟ್ ಓಪನ್ ಆಗಿದ್ದರೂ ಸಹ ಅಧಿಕಾರಿಗಳು ಗೇಟ್ ಮುಚ್ಚದೇ ನಿರ್ಲಕ್ಷ್ಯ ತೋರುವುದು ಮೇಲ್ನೋಟಕ್ಕೆ ತಿಳಿದಿದೆ. ಇದನ್ನೂ ಓದಿ: 57.64 ಲಕ್ಷದ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ – ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಅಮಾನತು

    ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ 2 ಸಾವಿರ ಕ್ಯೂಸೆಕ್ ನೀರು ನದಿ ಪಾಲು ಆಗಿದೆ. ಗೇಟ್ ಇದ್ದಕ್ಕಿದ್ದಂತೆ ಯಾಕೆ? ಹೇಗೆ? ಓಪನ್ ಆಯಿತು ಎಂಬುದು ಇನ್ನೂ ನಿಗೂಢವಾಗಿದೆ. ಸಿಬ್ಬಂದಿಗಳ ಯಡವಟ್ಟಿನಿಂದ ಗೇಟ್ ಓಪನ್ ಆಯ್ತಾ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಅಥವಾ ಸಮಸ್ಯೆ ಉಂಟಾಗಿ ಓಪನ್ ಆಯ್ತಾ ಎಂಬುದು ಅಸ್ಪಷ್ಟವಾಗಿದೆ. ಸದ್ಯ ಅಧಿಕಾರಿಗಳು ಸಿಬ್ಬಂದಿಗಳು ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೇಟ್ ಬಂದ್ ಮಾಡಿದ್ದಾರೆ. ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದಿದ್ದರಿಂದ ಹರಸಾಹಸಪಟ್ಟು ಗೇಟ್ ಬಂದ್ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌, ರಜತ್‌ ಬಂಧನ ಕೇಸ್‌ಗೆ ಟ್ವಿಸ್ಟ್‌ – ಮಧ್ಯರಾತ್ರಿಯೇ ಇಬ್ಬರೂ ರಿಲೀಸ್‌

  • ಮಂಡ್ಯದಲ್ಲಿಂದು ವಿಜಯೇಂದ್ರರಿಂದ ಭತ್ತದ ನಾಟಿ

    ಮಂಡ್ಯದಲ್ಲಿಂದು ವಿಜಯೇಂದ್ರರಿಂದ ಭತ್ತದ ನಾಟಿ

    ಮಂಡ್ಯ: ಇಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಗದ್ದೆಗಿಳಿದು ಭತ್ತದ ನಾಟಿ ಮಾಡಲಿದ್ದಾರೆ. ಯುವ ಸಮೂಹ ಕೃಷಿಯ ಕಡೆ ಒಲವು ತೋರಿಸಿ, ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಶ್ರೀರಂಗಪಟ್ಟಣ ವಿಧಾನಸಭಾ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ (Induvalu Sacchidanand) ನಾಟಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದ ಸುಖೇಂದ್ರ ಹಾಗೂ ಶಿವಬಸಪ್ಪ ಎಂಬುವವರ 2 ಎಕ್ರೆ ಗದ್ದೆಯಲ್ಲಿ ನಾಟಿ ಕಾರ್ಯಕ್ರಮ ನಡೆಯಲಿದೆ. ವಿಜಯೇಂದ್ರ ಅವರು ಗದ್ದೆಗಿಳಿದು ನಾಟಿ ಮಾಡಲಿದ್ದಾರೆ. ಬಳಿಕ ರೈತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಏರ್‌ಪೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿ ಸಂಬಂಧಿ ವಶಕ್ಕೆ

    ಊರಲ್ಲಿ ನಾಲ್ಕೈದು ಎಕ್ರೆ ಜಮೀನು ಇದ್ದರೂ ಸಹ ಯುವಕರು ಕಡಿಮೆ ಸಂಬಳಕ್ಕೆ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಆಗುವುದರ ಜೊತೆಗೆ, ಯುವಸಮೂಹದ ಆರ್ಥಿಕ ಪರಿಸ್ಥಿತಿಯೂ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಯುವಕರನ್ನು ಕೃಷಿ ಕಡೆ ತರಬೇಕು. ಕೃಷಿಯನ್ನು ಉದ್ಯಮವಾಗಿ ಬೆಳೆಯಬೇಕೆಂಬ ಆಶಯದಿಂದ ಶ್ರೀರಂಗಪಟ್ಟಣ ವಿಧಾನಸಭಾ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ನಾಟಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸರಣಿ ಕಳ್ಳತನ ಮಾಡಿ ಮಹಾ ಕುಂಭಮೇಳಕ್ಕೆ ಹೋಗಿದ್ದ ಇಬ್ಬರು ಅರೆಸ್ಟ್‌

  • ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಮಂಡ್ಯ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ವಿಸಿ ನಾಲೆಗೆ (VC Canal) ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಶ್ರೀರಂಗಪಟ್ಟಣದಲ್ಲಿ (Srirangapatna) ನಡೆದಿದೆ.

    ಮೃತರನ್ನು ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಮಾಸ್ತಪ್ಪ (65), ರತ್ನಮ್ಮ (45) ಮತ್ತು ಲಕ್ಷ್ಮಿ (18) ಎಂದು ಗುರುತಿಸಲಾಗಿದೆ. ಮೂವರು ವಿಸಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ಮಾಸ್ತಪ್ಪ ಅವರು ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಾಲಭಾದೆ ತಾಳದೆ ಪತ್ನಿ ಹಾಗೂ ಪುತ್ರಿಯೊಂದಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ

    ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ (Srirangapatna Cauvery River) ಪಾತ್ರದಲ್ಲಿ ಸಾರ್ವಜನಿಕರು ಅವೈಜ್ಞಾನಿಕವಾಗಿ ಅಸ್ತಿ ವಿಸರ್ಜನೆ ಮಾಡುತ್ತಿರುವುದರಿಂದ ನದಿ ಕಲುಷಿತವಾಗುತ್ತಿದ್ದು, ಇದನ್ನು ಸರಿಪಡಿಸಲು ಯೋಜನೆ ರೂಪಿಸಿ ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನವಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ.

    ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಡಿಸಿ ಡಾ.ಕುಮಾರ್, ಕಾವೇರಿ ನದಿಯಲ್ಲಿ ಕೋರ್ಟ್ ನಿರ್ದೇಶನದ ಬಗ್ಗೆ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಅವೈಜ್ಞಾನಿಕವಾಗಿ ಅಸ್ತಿ ಬಿಡುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ ವೈಜ್ಞಾನಿಕವಾಗಿ ವಿಸರ್ಜನೆ ಮಾಡುವ ಕುರಿತು ಅಧಿಕಾರಿಗಳ ಸಮಿತಿ ರಚಿಸಿದ್ದು, ನೈಸರ್ಗಿಕವಾಗಿ ವಿಘಟವಾಗುವ ರೀತಿ ಅಸ್ತಿ ವಿಸರ್ಜನೆಗೆ ಬೇಕಿರುವ ಯಂತ್ರಗಳ ಕುರಿತಂತೆ ತಾಂತ್ರಿಕ ತಜ್ಙರಿಂದ ವರದಿ ಪಡೆದು ಡಿ.ಪಿ.ಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

  • ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

    ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

    ಮಂಡ್ಯ: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ವಕ್ಫ್ ಭೂತ (Waqf Board) ಸಕ್ಕರೆ ನಾಡು ಜನರನ್ನು ಬಿಟ್ಟುಬಿಡದೇ ಕಾಡುತ್ತಿದೆ. ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ (RTC) ವಕ್ಫ್ ಬೋರ್ಡ್ ಹೆಸರು ಎಂದು ನಮೂದಾಗಿದ್ದು, ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನ್ಯಾಯನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಇಂದು ಶ್ರೀರಂಗಪಟ್ಟಣ (Srirangapatna) ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.

    ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಕ್ಫ್‌ ಬೋರ್ಡ್‌ ಆತಂಕವನ್ನೇ ಸೃಷ್ಟಿ ಮಾಡಿದೆ. ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ.

    ಆರ್‌ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂ ನಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮನ್ಯವಾಗಿ ಜಮೀನನ‌ ಮೇಲೆ ಸಾಲ ತೆಗೆದುಕೊಂಡರೆ, ಕ್ರಯ ಮಾಡಿಸಿದರೆ ಮಾತ್ರ ಋಣ ಕಲಂ ನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ‌ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್‌ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಭೂತ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್‌ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ

    ಕೇವಲ ರೈತರ ಜಮೀನು ಮಾತ್ರವಲ್ಲದೇ ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್‌ ವಕ್ರ ಕಣ್ಣು ಬಿದ್ದಿದೆ. ಶ್ರೀರಂಗಪಟ್ಟಣ ಸುತ್ತ ಇರುವ ಮದ್ದಿನ ಮನೆ ಸೇರಿದಂತೆ ಪುರಾತತ್ವ ಇಲಾಖೆ ಹತ್ತಾರು ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್‌ ಬೋರ್ಡ್ ಹೆಸರು ನಮೂದಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಕ್ಫ್ ಬೋರ್ಡ್ ಗೋಲ್ ಮಾಲ್ ಖಂಡಿಸಿ ಇಂದು ಶ್ರೀರಂಗಪಟ್ಟಣ ಟೌನ್ ಸ್ವಯಂ ಪ್ರೇರಿತ ಬಂದ್‌ಗೆ ಕರೆ‌ ನೀಡಲಾಗಿದೆ. ಇದನ್ನೂ ಓದಿ: ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು

    ಬೆಳಗ್ಗೆ 6 ಗಂಟೆಯಿಂದ ‌ಸಂಜೆ 5 ಗಂಟೆಯವರೆಗೆ ಬಂದ್ ಮಾಡಿ‌ ಹೋರಾಟ ಯಶಸ್ವಿಗೆ ಮನವಿ ಮಾಡಲಾಗಿದ್ದು, ಬಂದ್ ಜೊತೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ರೈತರು ಹಾಗೂ ಜಾನುವಾರುಗಳೊಂದಿಗೆ ರಸ್ತೆಗೆ‌ ಇಳಿದು ಬೃಹತ್ ಪ್ರತಿಭಟನೆಗೆ ಸಿದ್ದತೆ ಮಾಡಿಕೊಂಡಿವೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

  • ಮಂಡ್ಯ| ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ಸಾವು

    ಮಂಡ್ಯ| ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ಸಾವು

    ಮಂಡ್ಯ: ಕಾವೇರಿ ನದಿಯಲ್ಲಿ (Cauvery Water) ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬಲಮುರಿಯಲ್ಲಿ ನಡೆದಿದೆ.

    ಮೈಸೂರು ನಾಗನಹಳ್ಳಿ ಗ್ರಾಮದ ಎಸ್ ಶ್ರೇಯಸ್ ಮೃತ ವಿದ್ಯಾರ್ಥಿ. ಈತ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ ಓದುತ್ತಿದ್ದ. ಮೂವರು ಸ್ನೇಹಿತರ ಜೊತೆಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

    ಈಜಲು ಬಾರದ ಹಿನ್ನೆಲೆ ಸ್ನೇಹಿತರು ನದಿ ದಡದಲ್ಲಿಯೇ ಕುಳಿತಿದ್ದರು. ಈಜು ಬರುತ್ತಿದ್ದರಿಂದ ಶ್ರೇಯಸ್ ಏಕಾಂಗಿಯಾಗಿ ನದಿಗಿಳಿದಿದ್ದ. ಈ ವೇಳೆ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್‌

  • ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಮಂಡ್ಯ: ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿಯ (Jamiya Masjid) ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಪ್ರತಿ ವರ್ಷದಂತೆ ಇಂದು ಜಾಮಿಯಾ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣ ಮಾಡುವ ಪ್ರತಿಜ್ಞೆ ಮಾಡಿ ಹನುಮ ಮಾಲಧಾರಿಗಳು (Hanuma Maladharis) ಬೃಹತ್ ಸಂಕೀರ್ತನಾ ಯಾತ್ರೆಯನ್ನು ಮಾಡುತ್ತಿದ್ದಾರೆ.

    ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೋಟೆ ನಗರಿ ಎಂದು ಕರೆಯಲ್ಪಡುವ ಶ್ರೀರಂಗಪಟ್ಟಣದಲ್ಲಿ ಎಲ್ಲಿ ನೋಡಿದರು ಕೇಸರಿ ಮಯವಾಗಿದೆ. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟ, ಮೂಡಲ ಬಾಗಿಲು ಆಂಜನೇಯಸ್ವಾಮಿಯ ದೇವಸ್ಥಾನದ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿದೆ. ಈ ಮೂಲಕ ಇಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಸಂಘಟನೆಗಳಿಂದ ನಡೆಯುತ್ತಿರುವ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆಗೆ ಶ್ರೀರಂಗಪಟ್ಟಣ ಸಂಪೂರ್ಣ ಸಜ್ಜಾಗಿದೆ. ಇದನ್ನೂ ಓದಿ: ಫಿಲ್ಮ್‌ ಚೇಂಬರ್‌ ಎಲೆಕ್ಷನ್;‌ ಸಾರಾ ಗೋವಿಂದು ಬಣಕ್ಕೆ ಜಯ – ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ

    ಸದ್ಯ ಶ್ರೀರಂಗಪಟ್ಟಣದಲ್ಲಿ ಇರುವ ಜಾಮಿಯಾ ಮಸೀದಿ ಜಾಗದಲ್ಲಿ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಇತ್ತು. ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇದಕ್ಕೆ ಈಗಲೂ ಇಲ್ಲಿರುವ ಕಲ್ಯಾಣಿ, ನಾಗರ ಕಲ್ಲುಗಳು ಸೇರಿದಂತೆ ಇತರ ಕುರುಹುಗಳೇ ಸಾಕ್ಷಿಯಾಗಿವೆ. ಹೀಗಾಗಿ ಜಾಮಿಯಾ ಮಸೀದಿಯನ್ನು ಕೆಡವಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಮರು ಸ್ಥಾಪನೆ ಮಾಡಲೇಬೇಕೆಂದು ಸಂಕಲ್ಪ ಮಾಡಿ ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳು ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಮಾಡಿಕೊಂಡು ಬಂದಿವೆ. ಅದೇ ರೀತಿ ಇಂದು ಸಹ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ಇಂದು ನಿಮಿಷಾಂಬ ದೇವಸ್ಥಾನದಿಂದ ಆರಂಭಗೊಳ್ಳುವ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಮುಂಭಾಗದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಜರುಗಲಿದೆ. ಈ ಯಾತ್ರೆಯಲ್ಲಿ ಮಂಡ್ಯ, ಮೈಸೂರು, ಕೊಡಗು, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಹನುಮ ಮಾಲೆಯನ್ನು ಹಾಕಿಕೊಂಡಿರುವ ಸಾವಿರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಭಾಗಿಯಾಗಲಿದ್ದಾರೆ. ಅಲ್ಲದೇ ರಾಜ್ಯದ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಜೆಡಿಎಸ್ ನಾಯಕರು ಸಹ ಭಾಗಿಯಾಗಲಿದ್ದಾರೆ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮಂಡ್ಯ ಪೊಲೀಸ್ ಇಲಾಖೆ ಶ್ರೀರಂಗಪಟ್ಟಣದ್ಯಾಂತ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದು, ಯಾತ್ರೆ ಸಾಗುವ ದಾರಿಯುದ್ಧಕ್ಕೂ ಸಿಸಿಟಿವಿಗಳನ್ನು ಹಾಕಲಾಗಿದೆ. ಇದನ್ನೂ ಓದಿ: ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ನಿಧನ

  • ಟೋಲ್‌ ಕಟ್ಟದೇ ಕೈ ಮುಖಂಡನಿಂದ ದರ್ಪ – ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

    ಟೋಲ್‌ ಕಟ್ಟದೇ ಕೈ ಮುಖಂಡನಿಂದ ದರ್ಪ – ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

    ಮಂಡ್ಯ: ಬೆಂಗಳೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ರಾಜಕೀಯ ಪುಡಾರಿಗಳು ಪುಂಡಾಟ ನಡೆಸಿ ಟೋಲ್ (Toll) ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ತೋರಿದ್ದಾರೆ. ಟೋಲ್ ಕಟ್ಟಿ ಎಂದಿದ್ದಕ್ಕೆ ಕಾಂಗ್ರೆಸ್‌ (Congress) ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿದ್ದು ಅಲ್ಲದೇ ಹಲ್ಲೆ ನಡೆಸಿದ್ದಾರೆ.

    ಗುರುವಾರ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್‌ ಹಾಕಿದ ಕಾರು ಶ್ರೀರಂಗಪಟ್ಟಣ (Srirangapatna) ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿದೆ. ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಪ್ರಯಾಣಿಕರು ಟೋಲ್‌ ಕಟ್ಟಲು ನಿರಾಕರಿಸಿದ್ದಾರೆ. ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ.

    ನಾನು ಕಾಂಗ್ರೆಸ್‌ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್‌ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ – ಮೂವರಿಗೆ ಚಾಕುವಿನಿಂದ ಹಲ್ಲೆ

    ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರನ್ನು ದಾಖಲಿಸಿಕೊಳ್ಳದೇ ಅವರನ್ನ ಸ್ಥಳದಿಂದ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

     

  • ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    – ಶ್ರೀರಂಗಪಟ್ಟಣದ ಟಿಪ್ಪು ಸಮಾಧಿಗೆ ಶಾಸಕ ತನ್ವೀರ್ ಸೇಠ್ ನಮನ

    ಮಂಡ್ಯ: ಇಂದು ಟಿಪ್ಪು ಜಯಂತಿ (Tippu Jayanti) ಆಚರಣೆಗೆ ಸಿದ್ಧತೆ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ನಡುವೆಯೂ ವಿವಿಧ ಸಂಘಟನೆಗಳಿಂದ ಟಿಪ್ಪು ಜಯಂತಿ ನಡೆಸಲು ನಿರ್ಧಾರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗಾಗಿ 144 ಸೆಕ್ಷನ್ ಜಾರಿ ಮಾಡಿದ್ದು, ಶ್ರೀರಂಗಪಟ್ಟಣ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ನೀಡಿದ್ದಾರೆ.

    ಮೈಸೂರು (Mysuru) ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆ ಇದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೂಡಲಾಗಿದೆ. ಜಾಮಿಯಾ ಮಸೀದಿ, ಟಿಪ್ಪು ಮಡಿದ ಸ್ಥಳ, ಟಿಪ್ಪು ಸಮಾಧಿ ಸ್ಥಳ ಸೇರಿ ಪಟ್ಟಣಾದ್ಯಂದ ಪೊಲೀಸ್ ಸರ್ಪಗಾವಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮೆರವಣಿಗೆ, ಪ್ರತಿಭಟನೆ, ರ‍್ಯಾಲಿಗಳಿಗೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

    ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧಿಸಲಾಗಿದೆ. ಘೋಷಣೆ ಕೂಗದಂತೆ, ಪ್ರಜೋಧನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಆದೇಶ ಮಾಡಲಾಗಿದೆ. ಟಿಪ್ಪು ಸಮಾಧಿ ಸ್ಥಳ ಗುಂಬಜ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಿ ಗೇಟ್ ಬಳಿ ಬ್ಯಾರಿಕೇಟ್ ಹಾಕಿ ನಿಗಾ ವಹಿಸಲಾಗಿದೆ. ಮಂಡ್ಯ, ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದ್ದು, ಟಿಪ್ಪು ಸಮಾಧಿಗೆ ನಮನ ಸಲ್ಲಿಸಲು ಮುಸ್ಲಿಂ ಸಮುದಾಯದ ಜನರು ಬರುವ ಸಾಧ್ಯತೆ ಇದೆ. ಯಾವುದೇ ಗಲಾಟೆ, ಅಹಿತಕರ ಘಟನೆ ನಡೆಯದಂತೆ ಹಾಗೂ ಪ್ರವಾಸಿಗರ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಪಾಪಿ ಪತಿ

    ಟಿಪ್ಪು ಜಯಂತಿ ಹಿನ್ನೆಲೆ ಕಾಂಗ್ರೆಸ್ (Congress) ಶಾಸಕ ತನ್ವೀರ್ ಸೇಠ್ ಶ್ರೀರಂಗಪಟ್ಟಣದ ಗುಂಬಜ್‌ನಲ್ಲಿರುವ ಟಿಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದರು. ಟಿಪ್ಪು, ಹೈದರಾಲಿ, ಹೈದರಾಲಿ ಪತ್ನಿ ಫಾತಿಮಾ ಅವರ ಸಮಾಧಿಗೆ ಹೂವಿನ ಚಾದರ್ ಹೊದಿಸಿ, ಸುಗಂಧ ದ್ರವ್ಯ ಹಾಕಿ ಪ್ರಾರ್ಥನೆ ಮಾಡಿದರು. ಶಾಸಕರಿಗೆ ಮುಸ್ಲಿಂ ಸಮುದಾಯದ ಮುಖಂಡರು ಸಾಥ್ ಕೊಟ್ಟರು. ಇದನ್ನೂ ಓದಿ: ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ `ಗಡ್ಡ’ ಗಲಾಟೆ – ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸುವಂತೆ ತಾಕೀತು ಆರೋಪ

  • PUBLiC TV Impact | ಮಂಡ್ಯದ ಚಿಕ್ಕಮ್ಮ ದೇವಸ್ಥಾನದ ಪಹಣಿಯಲ್ಲಿ ಉಲ್ಲೇಖವಾಗಿದ್ದ ವಕ್ಫ್ ರದ್ದು

    PUBLiC TV Impact | ಮಂಡ್ಯದ ಚಿಕ್ಕಮ್ಮ ದೇವಸ್ಥಾನದ ಪಹಣಿಯಲ್ಲಿ ಉಲ್ಲೇಖವಾಗಿದ್ದ ವಕ್ಫ್ ರದ್ದು

    ಮಂಡ್ಯ: ಮಂಡ್ಯದ (Mandya) ಚಿಕ್ಕಮ್ಮ ದೇವಸ್ಥಾನದ (Chikkamma Temple) ಪಹಣಿಯಲ್ಲಿ ಉಲ್ಲೇಖವಾಗಿದ್ದ ವಕ್ಫ್ ಆಸ್ತಿ ರದ್ದಾಗಿದೆ. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಡಳಿತ ರದ್ದುಗೊಳಿಸಿದೆ.ಇದನ್ನೂ ಓದಿ: ಲಾರಿ ಚಾಲಕನ ಅವಾಂತರ ಹೆದ್ದಾರಿಯಲ್ಲಿ ಸರಣಿ ಅಪಘಾತ – ಓರ್ವ ಸಾವು

    ರಾಜ್ಯದಲ್ಲಿ ವಕ್ಫ್ ಕಾವು ಹೆಚ್ಚಾಗುತ್ತಿರುವ ಸಮಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ದೇವಸ್ಥಾನವನ್ನು ವಕ್ಫ್ ಆಸ್ತಿ ಎಂದು ಮಾಡಲಾಗಿತ್ತು.

    ಗ್ರಾಮದ ಸರ್ವೇ ನಂ 74ರಲ್ಲಿದ್ದ ದೇವಸ್ಥಾನದ 6 ಗುಂಟೆ ಜಾಗವನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ನ.1 ರಂದು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಪ್ರಸಾರದ ಬೆನ್ನಲ್ಲೇ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ರದ್ದಾಗಿದೆ. ಮಂಡ್ಯ ಜಿಲ್ಲಾಡಳಿತ ರದ್ದುಗೊಳಿಸಿದ್ದು, ಇದೀಗ ಆರ್‌ಟಿಸಿಯಲ್ಲಿ ಬಂಜರು ಎಂದು ಉಲ್ಲೇಖಿಸಲಾಗಿದೆ.ಇದನ್ನೂ ಓದಿ: