ಮಂಡ್ಯ: ಟಿಪ್ಪರ್ ಹಾಗೂ ಇನ್ನೋವಾ ಕಾರಿನ (Innova) ನಡುವೆ ಡಿಕ್ಕಿಯಾಗಿ (Accident), ಕಾರು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ.
ಹುಣಸೂರು ಮೂಲದ ಚಂದ್ರಶೇಖರ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬುಧವಾರ (ಅ.29) ತಡರಾತ್ರಿ ಈ ಘಟನೆ ನಡೆದಿದೆ. ಹುಣಸೂರು ಕಡೆಗೆ ಹೋಗುತ್ತಿದ್ದ ಕಾರು, ಶ್ರೀರಂಗಪಟ್ಟಣ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿತ್ತು. ತಕ್ಷಣ ಕಾರು ಹೊತ್ತಿ ಉರಿದಿತ್ತು. ಕಾರಿನಿಂದ ಹೊರಬರಲಾರದೆ ಚಾಲಕ ಸಾವನ್ನಪ್ಪಿದೆ. ಇದನ್ನೂ ಓದಿ: ನೆಲಮಂಗಲ | ರಸ್ತೆ ದುರಸ್ತಿ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ – ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ: ಕನ್ನಡ ನಾಡಿ ಜೀವ ನದಿ ಕಾವೇರಿ ಮಾತೆಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಸಂಕೇತಿಕವಾಗಿ ಐದು ದಿನಗಳ ಕಾಲ ಜರುಗಿದ ಕಾವೇರಿ ಆರತಿಗೆ (Cauvery Aarti) ಇಂದು ರಾತ್ರಿ ಯಶಸ್ವಿಯಾಗಿ ತೆರೆಬಿದ್ದಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಐದು ದಿನಗಳಲ್ಲಿ ಸಾವಿರಾರು ಜನರು ಸಾಕ್ಷಿ ಆದರು.
ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ (KRS) ಡ್ಯಾಂನ ಬೃಂದಾವನ ಐದು ದಿನಗಳ ಕಾವೇರಿ ಆರತಿಯಿಂದ ಮೇಳೈಸಿತು. ಹಳೆ ಮೈಸೂರು ಭಾಗದ ಜನರಿಗೆ ನೀರುಣಿಸುವ ಕಾವೇರಿ ಮಾತೆಗೆ ನಮನ ಸಲ್ಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ಆರತಿ ನೇರವೇರಿಸಬೇಕೆಂಬ ಕನಸು ಕಂಡಿದ್ದರು. ಅದರಂತೆ ಕೆಆರ್‌ಎಸ್ ಡ್ಯಾಂನ ಬೃಂದಾವನವನ್ನು ಸಾಂಕೇತಿಕವಾಗಿ ಕಳೆದ ಐದು ದಿನಗಳ ಕಾಲ ಕಾವೇರಿ ಆರತಿ ಕಾಲ ಜರುಗಿತು. ಈ ಆರತಿಗೆ ಕಳೆದ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಗೋಧೂಳಿ ಸಮಯದಲ್ಲಿ ಚಾಲನೆ ನೀಡುವ ಮೂಲಕ ಹೊಸ ಮುನ್ನುಡಿ ಬರೆದರು. ಇದನ್ನೂ ಓದಿ: ನಾಲ್ಕು ದಿನ ಕಳೆದರೂ ಪತ್ತೆಯಾಗದ 4ರ ಮಗು – ಕುಟುಂಬಸ್ಥರ ಭೇಟಿಯಾದ ಸಚಿವ ಶಿವರಾಜ ತಂಗಡಗಿ
ಬಳಿಕ ಐದು ದಿನಗಳ ಕಾಲ ಬೃಂದಾವನದಲ್ಲಿ ನಡೆದಿದ್ದು ಕಾವೇರಿ ಮಾತೆಗೆ ನಮನ ಸಲ್ಲಿಸುವ ಕಾವೇರಿ ಆರತಿ. ಐದು ದಿನಗಳಲ್ಲೂ ಮೊದಲಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರ ತಂಡ ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಕಾವೇರಿ ಆರತಿಯನ್ನು ಪ್ರಾರಂಭಿಸಿದರು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಮಾಡಿ ಬಳಿಕ ಸಂಕಲ್ಪ ಮಾಡಲಾಯಿತು. ನಂತರ ಕಾವೇರಿ ಆರತಿಯೊಂದಿಗೆ ಸಂಪನ್ನ ಮಾಡಲಾಯಿತು. ಇದಾದ ನಂತರ ವಾರಣಾಸಿಯ ವೈದಿಕ ತಂಡದಿಂದ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನೆರವೇರಿಸಲಾಯಿತು. ಇದನ್ನೂ ಓದಿ: ಚೆನ್ನೈನಲ್ಲಿ ಕಮಾನು ಕುಸಿದು 9 ಮಂದಿ ಸಾವು – 10ಕ್ಕೂ ಹೆಚ್ಚು ಮಂದಿಗೆ ಗಾಯ
ಕೆಆರ್‌ಎಸ್‌ನ ಬೃಂದಾವನದಲ್ಲಿ ನಡೆದ ಕಾವೇರಿ ಆರತಿಗೆ ಹಲವು ಮಠಗಳ ಸ್ವಾಮೀಜಿಗಳು, ಸಚಿವರು, ಶಾಸಕರು, ಅಧಿಕಾರಿಗಳು, ಸಾವಿರಾರು ಸಂಖ್ಯೆಯ ಜನರು ಸಾಕ್ಷಿಯಾದರು. ಕಾವೇರಿ ಆರತಿಯ ಅಂತಿಮ ದಿನದಂದು ವಿನಯ್ ಗುರೂಜಿ ಸಹ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಅವರು, ಆಸ್ತಿಕರು ಹಾಗೂ ನಾಸ್ತಿಕರು ಎಲ್ಲರೂ ಸಹ ಕಾವೇರಿಗೆ ನಮನ ಸಲ್ಲಿಸುವುದು ಅವರ ಕರ್ತ್ಯವಾಗಿದೆ. ಕಾವೇರಿಯಿಂದ ಜನರು ಸುಭಿಕ್ಷವಾಗಿದೆ. ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡುತ್ತಿರುವುದು ತುಂಬ ಒಳ್ಳೆಯ ಕೆಲಸ ಎಂದರು. ಇದನ್ನೂ ಓದಿ: ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ
ಮಂಡ್ಯ: ಕಾವೇರಿ ನದಿಯಲ್ಲಿ (Cauvery River) ಈಜಲು ಹೋದ ಇಬ್ಬರು ಬಿಬಿಎಂ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದ (Srirangapatna) ಬಲಮುರಿಯಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಗಳಾದ ವಿಲಿಯಂ ಸ್ಯಾಮ್ (21), ವೆಂಕಟೇಶ್ (21) ಮೃತ ದುರ್ದೈವಿಗಳು. ಇಬ್ಬರು ಅಂತಿಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಬೆಂಗಳೂರಿನಿಂದ (Bengaluru) 7 ಮಂದಿ ಪ್ರವಾಸಕ್ಕೆಂದು ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಇದನ್ನೂ ಓದಿ: ಕಳಸ | ಪ್ರಿಯತಮೆಗೆ ನಡು ರಸ್ತೆಯಲ್ಲಿ ಚಾಕು ಇರಿದ ಪಾಗಲ್ ಪ್ರೇಮಿ
ಎಡಮುರಿ ಬಳಿ ಈಜಲು ಹೋಗಿದ್ದಾಗ ಆಯತಪ್ಪಿ ಬಿದ್ದ ಪರಿಣಾಮ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತರು ಕೂಡಲೇ ಕೆ.ಆರ್.ಎಸ್. ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಶ್ರೀರಂಗಪಟ್ಟಣ ಅಗ್ನಿಶಾಮಕ ಸಿಬ್ಬಂದಿಗಳು ಮೃತ ಇಬ್ಬರು ವಿದ್ಯಾರ್ಥಿಗಳ ಶವ ಹೊರ ತೆಗೆದಿದ್ದಾರೆ.
ಮಂಡ್ಯ: ಜೂನ್ ತಿಂಗಳಲ್ಲಿ ಹಳೆ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ (KRS Dam) ಭರ್ತಿಯಾಗುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಕನ್ನಂಬಾಡಿ ಕಟ್ಟೆಗೆ 44,238 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೆಆರ್‌ಎಸ್ ಡ್ಯಾಂಗೆ 44,238 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ ಡ್ಯಾನಿಂದ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮಂಡ್ಯ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವುದರ ಜೊತೆಗೆ ಆಸ್ತಿ- ಪಾಸ್ತಿ, ಜಾನುವಾರುಗಳ ರಕ್ಷಣೆ ಸಂಬಂಧ ಅಲರ್ಟ್ ಘೋಷಣೆ ಮಾಡಿದೆ. ಇದಲ್ಲದೇ ಕಾವೇರಿ ನದಿ ಪಾತ್ರದಲ್ಲಿ ಇರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿರ್ಬಂಧ ಹೇರಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದ ಹಿನ್ನೆಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಿರುತ್ತಾರೆ. ಆದರೆ ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹಾಗೂ ಹೊರಹರಿವು ಹೆಚ್ಚಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇದರಿಂದಾಗಿ ಬೋಟಿಂಗ್ ರದ್ದು ಮಾಡಲಾಗಿದೆ.
ಕಾವೇರಿ ನದಿ ರಭಸವಾಗಿ ಹರಿಯುತ್ತಿದ್ದು, ಬೋಟ್ ಮೂಲಕ ನಡುಗಡ್ಡೆ ಬಳಿ ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ದೂರದಲ್ಲೇ ನಿಂತು ಪಕ್ಷಿ ನೋಡಿ ಪ್ರವಾಸಿಗರು ವಾಪಸ್ ಹೋಗುತ್ತಿದ್ದಾರೆ. ಒಳಹರಿವು 10 ಸಾವಿರ ಕ್ಯೂಸೆಕ್‌ಗೆ ಇಳಿಯುವ ತನಕ ಬೋಟಿಂಗ್‌ಗೆ ಬ್ರೇಕ್ ಹಾಕಲಾಗಿದೆ. ಹೊರಹರಿವು ಮತ್ತಷ್ಟು ಹೆಚ್ಚಾದ್ರೆ ಪಕ್ಷಿ ಸಂಕುಲಕ್ಕೂ ಎಫೆಕ್ಟ್ ಆಗುವ ಸಾಧ್ಯತೆಯಿದೆ.
ಈಗಾಗಲೇ ನದಿ ಮಧ್ಯೆ ಇರುವ ನಡುಗಡ್ಡೆಗಳು ಅರ್ಧದಷ್ಟು ಮುಳುಗಡೆಯಾಗಿವೆ. ಒಂದು ಲಕ್ಷ ಕ್ಯೂಸೆಕ್‌ಗೆ ಹೊರಹರಿವು ಏರಿಕೆಯಾದರೆ ಭಾಗಶಃ ನಡುಗಡ್ಡೆಗಳು ಮುಳುಗುವ ಭೀತಿ ಶುರುವಾಗಿದೆ. ಆ ಸಮಯದಲ್ಲಿ ಪಕ್ಷಿಗಳ ಗೂಡು, ಮೊಟ್ಟೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಅಬ್ಬರ ಜೋರಾಗಿರುವ ಹಿನ್ನೆಲೆ ಕೆಆರ್‌ಎಸ್ (KRS) ಆಣೆಕಟ್ಟೆಯಲ್ಲಿ ಒಳಹರಿವು ಹೆಚ್ಚಾಗಿದೆ.
ಹೌದು, ಮಂಡ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹೆಚ್ಚಳವಾಗಿದೆ.ಇದನ್ನೂ ಓದಿ: ಇರಾನ್ ಜನ ತಕ್ಷಣವೇ ಟೆಹ್ರಾನ್ ಖಾಲಿ ಮಾಡಿ: ಟ್ರಂಪ್ ಸೂಚನೆ
ಕಳೆದ ಹತ್ತು ದಿನಗಳಿಂದ ಕೆಆರ್‌ಎಸ್ ಡ್ಯಾಂಗೆ 2 ಸಾವಿರ ಕ್ಯೂಸೆಕ್ ನೀರು ಬರುತ್ತಿತ್ತು. ಸೋಮವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂಗೆ ಇಂದು 16,936 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಈ ಮೂಲಕ 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ 110.95 ಅಡಿಯಷ್ಟು ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕನ್ನಂಬಾಡಿ ಕಟ್ಟೆಯಲ್ಲಿ 32.686 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಇನ್ನೂ ಡ್ಯಾಂನಿAದ 915 ಕ್ಯೂಸೆಕ್ ಹೊರಹರಿವು ಇದೆ.ಇದನ್ನೂ ಓದಿ: KRS ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮಾಜಿ ಸಂಸದೆ ಸುಮಲತಾ ವಿರೋಧ
ಮಂಡ್ಯ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಲ್ಕೇ ದಿನದಲ್ಲಿ ಕೆಆರ್‌ಎಸ್ (KRS) ಜಲಾಶಯದಲ್ಲಿ 11 ಅಡಿ ನೀರು ಹೆಚ್ಚಳವಾಗಿದೆ. ಈ ಮೂಲಕ ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿಯಾದಂತಾಗಿದೆ.
ಜೂನ್ 2ನೇ ವಾರದಲ್ಲೇ ಡ್ಯಾಂ ಭರ್ತಿ ಸಾಧ್ಯತೆ:
ಹಳೆ ಮೈಸೂರು (Mysuru) ಭಾಗದ ಜೀವನಾಡಿಯಾದ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಉತ್ತಮ ಒಳಹರಿವು ಇದ್ದು, ನಾಲ್ಕೇ ದಿನದಲ್ಲಿ 11 ಅಡಿ ಭರ್ತಿಯಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಜೂನ್ ಎರಡನೇ ವಾರದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಮಲೆನಾಡಲ್ಲಿ ಮಳೆ ನಿಂತ್ರೂ ನಿಲ್ಲದ ಅವಾಂತರ – 80 ವರ್ಷದ ಹಳೇ ಶಾಲಾ ಕಟ್ಟಡ ಕುಸಿತ
ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳಹರಿವು ಇದೆ. ಕಳೆದ ನಾಲ್ಕು ದಿನದ ಹಿಂದೆ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತೆ ಎಂದು ಅಲ್ಲಿನ ಜನರು ಆತಂಕಕ್ಕೊಳಗಾಗಿದ್ದರು.
124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 100.10 ಅಡಿ ನೀರಿದೆ. 49.452 ಟಿಎಂಸಿ (TMC) ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 22.222 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಒಳಹರಿವಿನ ಪ್ರಮಾಣ 19,448 ಕ್ಯುಸೆಕ್ ಇದ್ದು, 670 ಕ್ಯುಸೆಕ್ ಹೊರಹರಿವಿದೆ.ಇದನ್ನೂ ಓದಿ: ಕಲಬುರಗಿಯಲ್ಲಿ ಉತ್ತಮ ಮಳೆ – ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆ 24 ಗಂಟೆಯಲ್ಲಿ ಕೆಆರ್‌ಎಸ್ ಡ್ಯಾಂನಲ್ಲಿ (KRS Reservoir) 3 ಅಡಿ ನೀರು ಹೆಚ್ಚಳವಾಗಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಉತ್ತಮ ಒಳಹರಿವು ಬರುತ್ತಿದ್ದು, ಒಂದೇ ದಿನ ಡ್ಯಾಂಗೆ ಮೂರು ಅಡಿ ಭರ್ತಿಯಾಗಿದೆ.ಇದನ್ನೂ ಓದಿ: ನಿರಂತರ ಮಳೆಯಿಂದಾಗಿ ಜೀವಕಳೆ ಪಡೆದ ಕೊಡಗಿನ ಮಲ್ಲಳ್ಳಿ ಜಲಪಾತ
ಕಳೆದ ಎರಡು ದಿನಗಳ ಹಿಂದೆ ಕೆಆರ್‌ಎಸ್ ಜಲಾಶಯಕ್ಕೆ 350 ಕ್ಯುಸೆಕ್ ಒಳಹರಿವು ಇತ್ತು. ಎರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಇಂದು 19,129 ಕ್ಯುಸೆಕ್ ನೀರು ಬಂದಿದೆ. ಈ ಮೂಲಕ 24 ಗಂಟೆಯಲ್ಲಿ 2 ಟಿಎಂಸಿ ನೀರು ಬಂದಿದ್ದು, 3 ಅಡಿಯಷ್ಟು ಡ್ಯಾಂ ಬರ್ತಿಯಾಗಿದೆ.
ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳಹರಿವು ಇದ್ದು, ಹೀಗೆ ಮಳೆಯಾದರೆ ಈ ಬಾರಿ ಆದಷ್ಟು ಬೇಗ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ.
124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 92.00 ಅಡಿ ನೀರಿದೆ. ಕನ್ನಂಬಾಡಿ ಕಟ್ಟೆ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 17.163 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 19,129 ಕ್ಯುಸೆಕ್ ಇದ್ದು, 354 ಕ್ಯುಸೆಕ್ ಹೊರಹರಿವಿದೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಕಾರಿನ ಮೇಲೆ ಬಿತ್ತು ಬೃಹತ್ ಮರ, ನಾಲ್ವರು ಪಾರು
ಮಂಡ್ಯ: ಕಾಶ್ಮೀರದಲ್ಲಿನ (Jammu Kashmir) ನರಮೇಧಕ್ಕೆ ಆರ್ಟಿಕಲ್ 370 ತೆಗೆದಿದ್ದೇ ಕಾರಣ ಎಂದು ಹೇಳಿಕೆ ನೀಡಿದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisidde gowda) ಇದೀಗ ಕ್ಷಮೆಯಾಚಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಯ (Pahalgam Terrorist Attack) ಬಳಿಕ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ರಮೇಶ್ ಬಂಡಿಸಿದ್ದೇಗೌಡ ಜನರಿಂದ ಛೀಮಾರಿಗೊಳಗಾಗಿದ್ದರು.
ದೇಶದಲ್ಲಿ ಆಯಾ ಸರ್ಕಾರಗಳು ಭದ್ರತೆಯನ್ನು ಹೆಚ್ಚಿಸಬೇಕು. ಸದ್ಯ ಕಾಶ್ಮೀರದಲ್ಲಿ ನರಮೇಧ ಮಾಡಿರುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಘಟನೆಯಲ್ಲಿ ಸಾವನ್ನಪ್ಪಿರುವವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯ ಕುರಿತು ಏ.23 ರಂದು ಮಾತನಾಡಿದ್ದ ಅವರು, ಆರ್ಟಿಕಲ್ 370 ತೆಗೆದಿರುವುದೇ ಪಹಲ್ಗಾಮ್ ಘಟನೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅತಿಯಾದ ಆತ್ಮವಿಶ್ವಾಸದಿಂದ ಈ ಘಟನೆ ನಡೆದಿದೆ ಎನ್ನುವ ಮೂಲಕ ಘಟನೆಗೆ ಪರೋಕ್ಷವಾಗಿ ಬಿಜೆಪಿ ಕಾರಣ ಎಂದಿದ್ದರು.
ಆರ್ಟಿಕಲ್ 370 ತೆಗೆಯುವ ಮುನ್ನ ಕಾಶ್ಮೀರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು. ಅವರ ದುಡುಕಿನ ನಿರ್ಧಾರದಿಂದ ಈ ಘಟನೆ ನಡೆದಿದೆ. ಜನರ ಭಾವನೆ ಅರ್ಥ ಮಾಡಿಕೊಂಡು ಆರ್ಟಿಕಲ್ 370 ತೆಗೆಯಬೇಕಿತ್ತು ಎಂದು ಕಿಡಿಕಾರಿದ್ದರು.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್
ಮಂಡ್ಯ: ಮತಾಂತರಕ್ಕೆ (Conversion) ಒಪ್ಪದ ಅತ್ತೆ ಹಾಗೂ ಪತ್ನಿಯ ಮೇಲೆ ಪತಿ ಮತ್ತು ಆತನ ಕುಟುಂಬದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಶ್ರೀರಂಗಪಟ್ಟಣದ (Srirangapatna) ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯರನ್ನು ಲಕ್ಷ್ಮಿ ಹಾಗೂ ಆಕೆಯ ತಾಯಿ ಶೃತಿ ಎಂದು ಗುರುತಿಸಲಾಗಿದೆ. ಲಕ್ಷ್ಮಿಯ ಪತಿ ಶ್ರೀಕಾಂತ್ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಹಿಳೆಯ ಸಹೋದರ ರವಿಕಿರಣ್ ನೀಡಿದ ದೂರಿನ ಮೇಲೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ದೂರಿನಲ್ಲಿ, ಮತಾಂತರಕ್ಕೆ ಪೀಡಿಸಿ ಲಕ್ಷ್ಮಿಗೆ ನಿರಂತರ ಕಿರುಕುಳ ನೀಡಲಾಗಿದೆ. ಮತಾಂತರಕ್ಕೆ ಸಮ್ಮತಿಸದಿದ್ದಕ್ಕೆ ಕಿರುಕುಳ ನೀಡಿ, ತವರು ಮನೆಯಿಂದ ಹಣ ತರುವಂತೆ ಹಿಂಸೆ ಕೊಡುತ್ತಿದ್ದರು. ಅಕ್ಕನ ಸಂಸಾರ ಚೆನ್ನಾಗಿರಲಿ ಎಂದು 25 ಲಕ್ಷ ರೂ. ಹಣ ನೀಡಿದ್ದೇನೆ. ಅದೇ ಹಣದಲ್ಲಿ ಚರ್ಚ್ ಕಟ್ಟಿಸಿಕೊಂಡು ಆಮಿಷವೊಡ್ಡಿ ಜನರನ್ನ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೃತಿ, ಪಾಲಹಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳಿಗಿಂದಲೂ ನಿರಂತರವಾಗಿ ಮತಾಂತರ ನಡೆಯುತ್ತಿದೆ. ಒಕ್ಕಲಿಗರು, ವಿಶ್ವಕರ್ಮ ಜನಾಂಗ, ಮರಾಠಿಗಳು ಸೇರಿ ಸಿಕ್ಕವರನ್ನೆಲ್ಲ ಮತಾಂತರ ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿ ಇರುವವರನ್ನು ಟಾರ್ಗೆಟ್ ಮಾಡಿ ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಾರೆ. ಎಲ್ಲಿಂದಲೋ ಅವರಿಗೆ ಫಂಡ್ ಬರುತ್ತೆ, ಮತಾಂತರ ಆದವರಿಗೆ ಲಕ್ಷ ಲಕ್ಷ ಹಣ ಕೊಡುತ್ತಾರೆ. ರಾಜಿ ಪಂಚಾಯತಿಗೆ ಅಂತ ಕರೆದು ನನ್ನ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ಷ್ಮಿ ಹಾಗೂ ಶ್ರೀಕಾಂತ್‌ಗೆ 15 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ವರ್ಷ ಕಳೆದಂತೆ ಪತಿಯ ಕುಟುಂಬಸ್ಥರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಪತಿ ಮತಾಂತರವಾದರೂ ಲಕ್ಷ್ಮಿ ಮತಾಂತರಕ್ಕೆ ಒಪ್ಪಲಿಲ್ಲ. ನಾನು ಚಾಮುಂಡೇಶ್ವರಿ ಭಕ್ತೆ ನಾನು ಮತಾಂತರ ಆಗಲ್ಲ ಎಂದು ಹೇಳಿದ್ದಳಂತೆ. ಯಾವಾಗ ಮತಾಂತರಕ್ಕೆ ಒಪ್ಪಲಿಲ್ಲ ಅಂದಿನಿಂದ ಮನೆಯವರು ಕಿರುಕುಳ ಶುರುಮಾಡಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಹೆಂಡತಿಯನ್ನ ಮನೆಯಿಂದ ತವರು ಮನೆಗೆ ಕಳಿಸಲಾಗಿತ್ತು. ಈಗ ರಾಜಿ ಪಂಚಾಯಿತಿಗೆ ಕರೆಸಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.