https://youtu.be/DJHVmeFp6Dw
Tag: sriramulu
-

ಬಳ್ಳಾರಿ ರಾಜಕೀಯಕ್ಕೆ ಗಾಲಿ ಜನಾರ್ದನ ರೆಡ್ಡಿ ರಿಟರ್ನ್?
ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಬರಬೇಕು ಅಂತಾ ಸಂಸದ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಬಂದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ರೆಡ್ಡಿ ಅವರು ಸುಮ್ಮನೆ ಮನೆಯಲ್ಲಿ ಕುಳಿತರೂ ಬಳ್ಳಾರಿಯ 9 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಜನಾರ್ದನರೆಡ್ಡಿ ಸಕ್ರೀಯ ರಾಜಕಾಣರಕ್ಕೆ ಬರೋದರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆದಿದೆ. ಶ್ರೀಘ್ರದಲ್ಲೆ ರೆಡ್ಡಿ ಕಮ್ ಬ್ಯಾಕ್ ಮಾಡೋ ಬಗ್ಗೆ ಅಂತಿಮ ಸೂಚನೆ ಸಿಗಲಿದೆ. ಅಲ್ಲದೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಪಕ್ಷ ತಮಗೆ ಸ್ಪರ್ಧೆ ಮಾಡುವಂತೆ ಸೂಚಿಸಿದ್ರೆ, ತಾವೂ ಕಣಕ್ಕೆ ಇಳಿಯಲು ಸಿದ್ದವಿದ್ದೇನೆ. ಆದರೆ ನನ್ನ ಕುಟುಂಬದಲ್ಲಿ ನನ್ನಿಂದಲೇ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳೋ ಮೂಲಕ ಪತ್ನಿ ಭಾಗ್ಯಲಕ್ಷಿಯವರು ಸ್ಪರ್ಧೆ ಮಾಡೋದನ್ನು ಸಂಸದ ಶ್ರೀರಾಮುಲು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ಭಿಕ್ಷೆ ಕೇಳಿದ್ರೆ ಎಡಗೈಯಲ್ಲೇ ಭಿಕ್ಷೆ ನೀಡ್ತೀನಿ, ಇನ್ಮುಂದೆ ಸಾಯುವವರೆಗೆ ಪಂಚೆಯನ್ನೇ ಧರಿಸ್ತೀನಿ- ಜನಾರ್ದನ ರೆಡ್ಡಿ
ಕೂಡ್ಲಿಗಿ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದಸಿಂಗ್ ಅಸಮಾಧಾನಗೊಂಡಿದ್ದು ಇಬ್ಬರ ಮನವೊಲಿಸುವ ಪ್ರಯತ್ನ ಮುಂದುವರೆದಿದೆ. ನಾಗೇಂದ್ರರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಆದ್ರೆ ಅವರು ಪಕ್ಷದಲ್ಲಿ ಉಳಿಯಲ್ಲ ಅಂದ್ರೆ ಎನೂ ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: 2018ರ ಚುನಾವಣೆಗೆ ನಿಲ್ತೀರಾ: ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಉತ್ತರಿಸಿದ್ದು ಹೀಗೆ

ಇದೇ ವೇಳೆ ಬಿಜೆಪಿ ಆರ್ ಎಸ್‍ಎಸ್ ಬ್ಯಾನ್ ಮಾಡೋ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಭಯೋತ್ಪಾದನೆಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್ ಸುಷ್ಮಾ ಸ್ವರಾಜ್ ಅಭಿಪ್ರಾಯ ಏನು?
-

ಸಂಸದ ಶ್ರೀರಾಮುಲು ಹುಟ್ಟುಹಬ್ಬಕ್ಕೆ ಗಾಲಿ ಜನಾರ್ದನ ರೆಡ್ಡಿ ಶುಭ ಕೋರಿದ್ದು ಹೀಗೆ
ಬಳ್ಳಾರಿ: ಇಂದು ಸಂಸದ ಶ್ರೀರಾಮುಲು ಅವರು ತಮ್ಮ 46ನೇ ಜನ್ಮ ದಿನವನ್ನು ಆಚರಿಸಿಕೊಂಡರು. ಗೆಳೆಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕವನಗಳ ಮುಖಾಂತರ ಫೇಸ್ ಬುಕ್ ನಲ್ಲಿ ಶ್ರೀರಾಮುಲುಗೆ ಶುಭಕೋರಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹತ್ತಿರವಿರುವ ಆತ್ಮೀಯ ಗೆಳೆಯನಿಗೆ ಸುಂದರ ಸಾಲುಗಳ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಫೇಸ್‍ಬುಕ್ ನಲ್ಲಿ ಬರೆದಿದ್ದು ಹೀಗೆ..
ನನ್ನ, ನಿನ್ನ ಸ್ನೇಹ ಆರಂಭವಾದ ದಿನಗಳಲ್ಲಿ ಆಗ ನಮಗೆ ಯಾವುದೇ ಅಧಿಕಾರ, ಅಂತಸ್ತು, ಜಾತಿ, ಮತ ಭೇದ ಇದ್ಯಾವುದರ ಅರಿವು ಇರಲಿಲ್ಲ. ಇಂದಿಗೂ ಇಲ್ಲ. ಅದೇ ಸ್ನೇಹ ನಿಷ್ಕಳಂಕವಾಗಿ ಮುಂದುವರಿಯುತ್ತಿರುವ ಅನೂಹ್ಯ ಸ್ನೇಹ ನಮ್ಮದು. ಹಣ ಅಧಿಕಾರ, ಸಿರಿ ಸಂಪತ್ತು, ಅಂತಸ್ತು ಜೀವನದಲ್ಲಿ ಬರುತ್ತವೆ ಹೋಗುತ್ತವೆ. ಆದರೆ ಎಂದಿಗೂ ನಿನ್ನಲ್ಲಿ ಅಂತಹ ಕೂದಲೆಳೆಯಷ್ಟು ಬದಲಾವಣೆಯನ್ನು ನಾನು ಕಾಣಲೇ ಇಲ್ಲ.

ನನ್ನ ಒಳ್ಳೆಯ ದಿನಗಳಲ್ಲಿ ಹಲವಾರು ಜನರು ನನ್ನಿಂದ ನಾನಾ ರೀತಿಯ ಲಾಭ ಪಡೆದು ಒಳಿತನ್ನು ಪಡೆದಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ಇವರ್ಯಾರು ಸೌಜನ್ಯಕ್ಕಾದರೂ ನನಗೆ ಸಾಥ್ ನೀಡಲಿಲ್ಲ. ಇಂತಹ ಪ್ರಪಂಚದಲ್ಲಿ ಇಂತಹ ಜನರೂ ಇರುತ್ತಾರೆ ಎಂಬುದು ನನಗಾಗ ತಿಳಿಯಿತು. ಅದರೆ ನೀನು ಮಾತ್ರ ಪುನಃ ನನ್ನ ಕಷ್ಟದ ದಿನಗಳಲ್ಲಿ ನನಗೆ ಒಂದು ರೀತಿಯ ವಜ್ರದಂತಹ ರಕ್ಷಾ ಕವಚ ನೀಡಿದೆ. ಆ ಮೂಲಕ ಇಡೀ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಮರು ಜನ್ಮ ನೀಡಿದಂತೆ ನನಗೆ, ನನ್ನ ಕುಟುಂಬದ ಬದುಕಿಗೆ ಹೊಸ ಚೇತನ ನೀಡಿದೆ. ಕಷ್ಟದ ದಿನಗಳಿಂದ ಬೇರ್ಪಡಿಸಿ ಮರು ಹುಟ್ಟು ನೀಡಿದೆ. ಎಂದಿನಂತೆ ಜೀವನ ನಡೆಸುವ ಮಾರ್ಗಕ್ಕೆ ತಂದು ನಿಲ್ಲಿಸಿದ ನಿನ್ನ ಆ ತ್ಯಾಗ, ಸುಗುಣ ಸ್ವಭಾವಕ್ಕೆ, ನಿನ್ನ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಹೃದಯಕ್ಕೆ ಈ ಶುಭ ಸಂದರ್ಭದಲ್ಲಿ ನನ್ನದೊಂದು ನಮ್ರವಾದ ಅಭಿನಂದನೆ.
ಸ್ನೇಹಿತನಿಗೆ ಸ್ನೇಹಜೀವಿಯಾಗಿ, ಬಡವ-ಬಲ್ಲಿದರ ಆದರ್ಶ ನಾಯಕನಾಗಿ ಸದಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ನೀನು ಮಾಡುತ್ತಿರುವ ಸೇವಾ ಯಜ್ಞ, ಹೋರಾಟ ನಿಜಕ್ಕೂ ಅವಿಸ್ಮರಣೀಯ. ಎಂತಹ ಮನುಷ್ಯನಾದರೂ ಕೆಲವೊಂದು ಸಂದರ್ಭದಲ್ಲಿ ಸ್ವಲ್ಪವಾದರೂ ಬದಲಾಗುತ್ತಾನೆ ಅಥವಾ ಬದಲಾದಂತೆ ಭಾಸವಾಗುತ್ತಾನೆ. ನಿನ್ನ ಸ್ನೇಹದ ವಿಷಯದಲ್ಲಿ ಮಾತ್ರ ಹೇಳೋದಾದರೆ ನೀನು ಎಂದಿಗೂ ಬದಲಾಗಲಿಲ್ಲ. ನೀನು ಬದಲಾದಂತೆ ನನಗೆ ಭಾಸವೂ ಆಗಲಿಲ್ಲ.

ನೀನು ಜನಿಸಿದ ನಕ್ಷತ್ರ, ದಿನ, ಮುಹೂರ್ತವೇ ಅಂತಹದ್ದಿದೆ. ನೀನು ಭುವಿಗೆ ಉದಯಿಸಿದ ದಿನ ಖಂಡಿತ ಸುದಿನ ಇರಬೇಕು. ಹೀಗಾಗಿ ನೀನು ಸದಾ ಜನಪರ ಕಾಳಜಿ ಹೊಂದಿರುವೆ. ಜನನಾಯಕನಾಗಿ ಜನಮಾನಸದಲ್ಲಿ ಬೇರೂರಿರುವ ನೀನು ಹೀಗೆ ಸದಾ ನಿನ್ನ ಅತುಲಿತ ಸೇವೆಯನ್ನು ಜನರಿಗಾಗಿ ಮುಂದುವರಿಸುತ್ತಿರು. ಆ ಭಗವಂತ ನಿನಗೆ, ನಿನ್ನ ಕಾರ್ಯಕ್ಷಮತೆಗೆ ಎಲ್ಲವನ್ನೂ ದಯಪಾಲಿಸಲಿ. ಸಹಸ್ರಾರು ತಾರೆಗಳಲ್ಲಿ ದೃವತಾರೆಯಂತೆ ಸದಾ ಕಂಗೊಳಿಸುತ್ತಿರು. ಭಗವಂತನ ಆಶೀರ್ವಾದ, ನೀನು ನಂಬಿದ ಸಿದ್ಧಾಂತದೊಂದಿಗೆ ಜನರ ಪ್ರೀತಿ, ವಿಶ್ವಾಸ, ನಿನ್ನ ಮೇಲೆ ಸದಾ ಹೀಗೆಯೇ ಇರಲಿ. ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೇ ಆಚರಿಸಿಕೊಳ್ಳುವ ಭಾಗ್ಯ ನಮದಾಗಲಿ. ಸ್ನೇಹಕ್ಕೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವೇ?
ವಿಪತ್ಕಾಲದಲ್ಲಿ ಧೈರ್ಯ, ಅಭ್ಯುಧಯ ಉಂಟಾದಾಗ ಕ್ಷಮೆ-ದಯೆ, ಸಭೆ ಸಮಾರಂಭಗಳಲ್ಲಿ ಮಾತಿನ ಚತುರತೆ, ಸೋಲುಗಳು ಉಂಟಾದಾಗ ತೋರಿದ ಪರಾಕ್ರಮ, ಯಶಸ್ಸಿನಲ್ಲಿ ಆಸಕ್ತಿ, ಜನರ ಸೇವೆಯೇ ನಿಜವಾದ ಸಾರ್ಥಕತೆ ಎಂಬ ನಿನ್ನ ಗುಣಕ್ಕೆ ನಾನು ಪರ್ಯಾಯವಾಗಿ ಏನಾದರು ಹೇಳಲುಂಟೆ? ನನ್ನ ಬದುಕಿನ ಬಂಡಿಯಾಗಿ, ಜನಮಾನಸದ ಕೊಂಡಿಯಾಗಿ ದಿನೇ ದಿನೇ ಬಡವರ- ಬಲ್ಲಿದರ ಹಿತ ಚಿಂತನೆ ಮಾಡುತ್ತಲೇ ಕಾಯಕಕ್ಕೆ ಇಳಿಯುವ ನಿನ್ನ ಧರ್ಮ ಗುಣಗಳು ಎಂದಿಗೂ ಅನುಕರಣೀಯ.
ಇದೋ ನನ್ನ ಪ್ರಾಣಸ್ನೇಹಿತ ಬಿ.ಶ್ರೀರಾಮುಲುಗೆ ಇದೇ ನನ್ನ ಅಕ್ಕರೆಯ ಹುಟ್ಟುಹಬ್ಬದ ಹಾರ್ದಿಕ ಶುಭಶಯಗಳು.
ನಿನ್ನ ನಲ್ಮೆಯ ಗೆಳೆಯ,
ಜಿ.ಜನಾರ್ದನ ರೆಡ್ಡಿ.ತಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಎದೆಗುಂದದೇ ಸಹಾಯ ಮಾಡಿ ಮಾನಸಿಕವಾಗಿ ಸದೃಢಗೊಳಿಸಿದ ಗೆಳಯನಿಗೆ ಜರ್ನಾದನ ರೆಡ್ಡಿ ಅವರು ಮನದಾಳದ ಮಾತುಗಳನ್ನು ಹೇಳುವ ಮೂಲಕ ಶುಭಾಶಯ ಕೋರಿದ್ದಾರೆ.



-

ನಾವೇನು ಹಿಂದೂಸ್ತಾನ-ಪಾಕಿಸ್ತಾನ ಆಗಿದ್ದೇವಾ?: ಕೆ.ಎಸ್.ಈಶ್ವರಪ್ಪ
ಬಳ್ಳಾರಿ: ಯಡಿಯೂರಪ್ಪ ಮತ್ತು ನನ್ನ ನಡುವೆ ವೈರತ್ವ ಇಲ್ಲ. ಯಡಿಯೂರಪ್ಪ ಮತ್ತು ನಾನು ಹಿಂದೂಸ್ತಾನ- ಪಾಕಿಸ್ತಾನ ಏನಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದ ಅಂಗವಾಗಿ ಬಳ್ಳಾರಿಗೆ ಆಗಮಿಸಿದ್ದ ಈಶ್ವರಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಮತ್ತು ನಾನು ಭಾಗಿಯಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕೆಂಬ ಗುರಿ ನಮ್ಮದಾಗಿದೆ. ಇದರಲ್ಲಿ ಭಿನ್ನಾಭಿಪ್ರಾವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ರಾಯಣ್ಣ ಬ್ರಿಗೇಡ್ ಬಗ್ಗೆ ಕೇಳಿದ ಪ್ರಶ್ನೆಗೆ, ರಾಯಣ್ಣ ಬ್ರಿಗೇಡ್ ಅದ್ರಷ್ಟಕ್ಕೆ ಅದು ನಡೆಯುತ್ತದೆ ಎಂದು ಹೇಳಿದರು.
ಇನ್ನು ಬಳ್ಳಾರಿ ಪಾಲಿಕೆಯ ಚುನಾವಣೆಯಲ್ಲಿ ಸಂಸದ ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರುವ ಕುರಿತು ಮಾತನಾಡಿದ ಈಶ್ವರಪ್ಪ, ಅವರು ಯಾವ ಕಾರಣಕ್ಕೆ ಕಾಂಗ್ರೆಸ್‍ಗೆ ಮತ ನೀಡಿದರು ಎಂಬುವುದು ಗೊತ್ತಿಲ್ಲ. ಯಾವ ರಾಜಕಾರಣಕ್ಕಾಗಿ ಮತ ನೀಡಿದ್ದಾರೆಂಬುದು ತಿಳಿದಿಲ್ಲ. ಮೈಸೂರಿನ ಕಾರ್ಯಕಾರಿಣಿ ಸಭೆಗೆ ಅವರು ಬಂದಿದ್ದರೆ ಕೇಳುತ್ತಿದ್ದೆ, ಆದರೆ ಕಾರಣಾಂತರಗಳಿಂದ ಬಂದಿರಲಿಲ್ಲ. ಆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಇರಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!
-

ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!
– ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ಶ್ರೀರಾಮುಲು ಮತ
ಬಳ್ಳಾರಿ: ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಮುಂದಿನ ಗುರಿ. ಹೀಗಂತ ಬಿಜೆಪಿ ನಾಯಕರು ಕಂಡ ಕಂಡ ಸಭೆಗಳಲ್ಲಿ ಬೊಬ್ಬೆ ಹಾಕಿ ಭಾಷಣ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸಂಸದರು ಮತ ಹಾಕಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣ ಪರವಾಗಿ ಸಂಸದ ಶ್ರೀರಾಮುಲು ಹಾಗೂ ನಾಲ್ಕು ಬಿಜೆಪಿ ಸದಸ್ಯರು ಮತ ಚಲಾವಣೆ ಮಾಡಿದ್ದಾರೆ.
ಮೇಯರ್, ಉಪಮೇಯರ್ ಸ್ಥಾನಕ್ಕೆ ಬಹುಮತ ಹೊಂದಿರುವ ಕಾಂಗ್ರೆಸ್ಸಿನ ಎರಡು ಗುಂಪುಗಳ ಮಧ್ಯೆ ಪೈಪೋಟಿ ಎರ್ಪಟಿತ್ತು. ಸಚಿವ ಸಂತೋಷ ಲಾಡ್ ಗುಂಪಿನ ಪರವಾಗಿ ಮೇಯರ್ ಸ್ಥಾನಕ್ಕೆ ವೆಂಕಟರಮಣ, ಉಪಮೇಯರ್ ಸ್ಥಾನಕ್ಕೆ ಉಮಾದೇವಿ ಸ್ಪರ್ಧೆ ನಡೆಸಿದ್ದರು.
ಮಾಜಿ ಸಚಿವ ದಿವಾಕರಬಾಬು ಗುಂಪಿನಿಂದ ಗಾಜಲು ಶ್ರೀನಿವಾಸ ಹಾಗೂ ಲಕ್ಷ್ಮಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಪಕ್ಷದಿಂದ ಮೇಯರ್ ಸ್ಥಾನಕ್ಕೆ ವೆಂಕಟರಮಣ ಪರವಾಗಿ, ಉಪಮೇಯರ್‍ಗೆ ಲಕ್ಷ್ಮಿ ಪರವಾಗಿ ಮತ ಹಾಕುವಂತೆ ವಿಪ್ ಜಾರಿ ಮಾಡಲಾಗಿತ್ತು.
ದಿವಾಕರ ಬಾಬು ಗುಂಪಿನ ಸದಸ್ಯರು ವಿಪ್ ಸ್ವೀಕರಿಸಿದ್ರೆ. ಸಚಿವ ಸಂತೋಷ ಲಾಡ್ ಗುಂಪಿನ ಸದಸ್ಯರು ವಿಪ್ ಸ್ವೀಕರಿಸದೆ ಚುನಾವಣೆಗೆ ಹಾಜರಾದರು. ಹೀಗಾಗಿ ದಿವಾಕರ ಬಾಬು ಗುಂಪಿನ 16 ಸದಸ್ಯರು ಚುನಾವಣೆಯಿಂದ ದೂರ ಉಳಿದರು. ಇದರಿಂದ ಕೆಲ ಕಾಲ ಪಾಲಿಕೆ ಆವರಣದಲ್ಲಿ ಹೈಡ್ರಾಮಾ ಸಹ ನಡೆಯಿತು.
ಕೊನೆಗೆ ವೆಂಕಟರಮಣ 24 ಮತ ಪಡೆದು ಮೇಯರ್ ಆದ್ರೆ, ಉಮಾದೇವಿ 20 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. ಚುನಾವಣೆ ನಂತರ ಮಾತನಾಡಿದ ಸಂಸದ ಶ್ರೀರಾಮುಲು, ನಾನು ಬಳ್ಳಾರಿ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿದ್ದೇನೆಂದು ಸಮಜಾಯಿಸಿ ನೀಡಿದರು.
