Tag: sriramulu

  • ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ಬಳ್ಳಾರಿ: ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿದಕ್ಕೆ ಅವರ ಬೆಂಬಲಿಗರು ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮೇಲೆ ಕಲ್ಲು, ಚಪ್ಪಲಿ ತೂರಾಡಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

    ಈ ಗಲಾಟೆಗೆ ಸ್ವತಃ ತಿಪ್ಪೇಸ್ವಾಮಿಯಿಂದಲೇ ಪ್ರಚೋದನೆ ನೀಡಿದ್ದು, ಹೋಗಿ ಗಲಾಟೆ ಮಾಡ್ರೋ.. ಹೋಗಿ ಕಲ್ಲು ತೂರಾಟ ನಡೆಸಿ… ಇಲ್ಲದಿದ್ರೆ ಸುಮ್ಮನಿರಿ… ಬೆಂಬಲಿಗರಿಗೆ ಹೇಳಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ; ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗ ಎಸ್‍ಪಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದು, ತಿಪ್ಪೇಸ್ವಾಮಿಯನ್ನು ಕೂಡಲೇ ಬಂಧಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇತ್ತೀಚೆಗೆ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಮಾಡಲು ಆಗಮಿಸಿದ್ದ ವೇಳೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಕಲ್ಲು, ಚಪ್ಪಲಿ, ಪೊರಕೆಯ ಸ್ವಾಗತ ನಿಡಿದ್ದರು. ಇದನ್ನೂ ಓದಿ: ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    https://www.youtube.com/watch?v=-yKLC0zlBY8

    https://www.youtube.com/watch?v=i_4AzaKDoT8

  • ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣಾ ಪಟ್ಟಿ ಬಿಡುಗಡೆಗೊಂಡ ಬಳಿಕ ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ಬೆಂಬಲಿಗರ ವಿರುದ್ಧ ಭಿನ್ನಮತ ಏರ್ಪಟ್ಟಿದೆ.

    ಬಳ್ಳಾರಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀರಾಮುಲು, ಶುಕ್ರವಾರ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಿನ್ನೆಯ ಘಟನೆಯಲ್ಲಿ ನನ್ನ ಕಾರು ಜಖಂ ಆಗಿದೆ. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ ಅಷ್ಟೆ. ನನ್ನ ಶರ್ಟ್ ಹರಿದು ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು ವದಂತಿಯಾಗಿದೆಂದು ಅವರು ಹೇಳಿದ್ದಾರೆ.

    ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಈ ಹಿಂದೆ ನನ್ನಿಂದ ಗೆದ್ದಿಲ್ಲ ಅಂತಿದ್ದಾರೆ. ಆದರೆ ಇದೀಗ ಅವರಿಗೆ ಸವಾಲು ಹಾಕುವೆ, ತಿಪ್ಪೇಸ್ವಾಮಿಗೆ ಶಕ್ತಿ ಇದ್ದರೇ ಪಕ್ಷೇತರ ಅಭ್ಯರ್ಥಿಯಾಗಲಿ. ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಗೆದ್ದು ತೋರಿಸಲಿ ಅಂತ ಸಂಸದ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಬಹಿರಂಗವಾಗಿ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

    ಅಲ್ಲದೇ ಈ ಘಟನೆಯ ಬಗ್ಗೆ ಪಕ್ಷದ ನಾಯಕರು ನಿನ್ನೆಯೇ ನನ್ನಿಂದ ಮಾಹಿತಿ ಪಡೆದಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿಗೆ 2013ರಲ್ಲಿ ನಾನೇ ಅವರ ಕೈ ಹಿಡಿದು ಗೆಲ್ಲಿಸಿದೆ. ಆದ್ರೆ ಇದೀಗ ಅವರು ತಿರುಗಿ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕಾಂಗ್ರೆಸ್ ನನ್ನನ್ನೂ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ:  ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    ಹಿಂದುಳಿದ ಜನಾಂಗದ ಪರ ನಾನು ಹೋರಾಡುತ್ತಿದ್ದೇನೆ. ಕಾಂಗ್ರೆಸ್ ಎಸ್ಸಿ ಎಸ್‍ಟಿ ಮತಗಳಿಗೋಸ್ಕರ ನನ್ನ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ನವರೂ ಏನೇ ಷಡ್ಯಂತ್ರ ಮಾಡಿದರೂ ನಾನು ಜಗ್ಗುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಹಾಕಿ 2-3 ದಿನ ಮಾತ್ರ ಪ್ರಚಾರ ಮಾಡುವೆ. ಉಳಿದ ದಿನಗಳಲ್ಲಿ ನಾನು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವೆ ಎಂದು ಶ್ರೀರಾಮುಲು ಹೇಳಿದ್ದಾರೆ.

  • ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

    ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

    ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಶಾಸಕ  ತಿಪ್ಪೇಸ್ವಾಮಿ ಬೆಂಬಲಿಗರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾರೆ.

    ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಮಾಡಲು ಆಗಮಿಸಿದ ಶ್ರೀರಾಮಲುಗೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಕಲ್ಲು, ಚಪ್ಪಲಿ, ಪೊರಕೆಯ ಸ್ವಾಗತ ನೀಡಿದ್ದಾರೆ.

    ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶ್ರೀರಾಮುಲು ಅವರನ್ನು ಸುತ್ತುವರಿದ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಿದ್ದಾರೆ. ಕೆಲವು ಗಂಡಸರು ಚಪ್ಪಲಿ ತೋರಿಸಿದರೆ, ಕೆಲವು ಹೆಂಗಸರು ಪೊರಕೆಯನ್ನು ಎತ್ತಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೋಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆಕ್ರೋಶ ತಡೆಯಲು ಸಾಧ್ಯವಗಲಿಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರವನ್ನು ಮಾಡಿದರು.

    ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು. ತಿಪ್ಪೇಸ್ವಾಮಿ ಅವರಿಗೆ ಬಿಟ್ಟುಕೊಡಬೇಕು ಎನ್ನುವುದು ಪ್ರತಿಭಟನಾಕಾರರ ಕೂಗಾಗಿತ್ತು.

    ಪೋಲಿಸರನ್ನು ಲೆಕ್ಕಿಸದೆ ಶ್ರೀರಾಮುಲು ಹೋಗುತ್ತಿದ್ದ ಕಾರಿನ ಮೇಲೆ ಬಿಜೆಪಿ ಭಿನ್ನಮತೀಯರು ಕಲ್ಲು ತೂರಿದರು. ಶ್ರೀರಾಮುಲು ಬೆಂಬಲಿಗರ ಮೇಲೆ ಕಲ್ಲು, ಇಟ್ಟಿಗೆ, ತೆಂಗಿನ ಕಾಯಿ ತೂರಾಟ ಮಾಡಿದರು. ಕಾರು ಜಖಂಗೊಂಡ ಹಿನ್ನೆಲೆಯಲ್ಲಿ ಬೇರೆ ಕಾರಿನಲ್ಲಿ ಗೌರ ಸಮುದ್ರಕ್ಕೆ ರಾಮುಲು ತೆರಳಿದರು.

    https://www.youtube.com/watch?v=i_4AzaKDoT8

  • ಬೆಳಗಾವಿ, ಬಾಗಲಕೋಟೆಯಲ್ಲಿ ಅಮಿತ್ ಶಾ ಪ್ರಚಾರ – ಮೊಳಕಾಲ್ಮೂರಲ್ಲಿ ರಾಮುಲು ಮೊದಲ ಸಂಚಾರ

    ಬೆಳಗಾವಿ, ಬಾಗಲಕೋಟೆಯಲ್ಲಿ ಅಮಿತ್ ಶಾ ಪ್ರಚಾರ – ಮೊಳಕಾಲ್ಮೂರಲ್ಲಿ ರಾಮುಲು ಮೊದಲ ಸಂಚಾರ

    ಬೆಳಗಾವಿ, ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರಚಾರ ಮಾಡಲಿದ್ದಾರೆ.

    ಬೆಳಗ್ಗೆ 9 ಗಂಟೆ ಸುಮಾರಿಗೆ ಹುಬ್ಬಳ್ಳಿ ಖಾಸಗಿ ಹೊಟೇಲ್‍ನಿಂದ ಹೊರಡುವ ಅಮಿತ್ ಶಾ ಅವರು ಬೆಳಗಾವಿಯ ಕಿತ್ತೂರು ನಗರದಲ್ಲಿರುವ ರಾಣಿ ಚೆನ್ನಮ್ಮಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಸಂಗೋಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳ ನಂದಗಡಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ತದನಂತರ ಬಾಗಲಕೋಟೆಯ ಮುಧೋಳ ನಗರಕ್ಕೆ ಪ್ರಯಾಣ ಬೆಳೆಸಿ, ನಗರದ ದಾನಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

    ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಶಕ್ತಿ ಸಮಾವೇಶ ನಡೆಯಲಿದ್ದು, 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 3.25ಕ್ಕೆ ಗೋಕಾಕ್ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಬೆಳಗಾವಿಯ ಕೆಎಲ್‍ಇ ಯ ಜೀರಗೆ ಭವನದಲ್ಲಿ ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9 ಘಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಮುಲು ಪ್ರಚಾರ: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಶ್ರೀರಾಮುಲು ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಭ್ಯರ್ಥಿಯಾದ ನಂತರ ಮೊದಲ ಬಾರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಭೇಟಿ ಕೊಡ್ತಿದ್ದು, ಬೆಳಗ್ಗೆ ಇಲ್ಲಿನ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

    ನಾಯಕನಹಟ್ಟಿ, ನೆಲಗತ್ತನಹಟ್ಟಿ, ಗೌರಿಪುರ, ತಳಕು ಸೇರಿದಂತೆ ಇಂದು 15 ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸ್ಥಳಿಯ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ಈ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ರಾಮುಲು ಆಗಮನದ ವೇಳೆ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.

  • ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ

    ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ

    ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಬಂಡಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಿಪ್ಪೇಸ್ವಾಮಿಗೆ ಮಾತು ಕೊಟ್ಟು ಶ್ರೀರಾಮುಲು ಮೋಸ ಮಾಡಿದ್ರು ಎಂದು ತಿಪ್ಪೇಸ್ವಾಮಿ ಬೆಂಬಲಿಗರು ಆರೊಪಿಸಿದ್ದಾರೆ.

    ಈ ಹಿಂದೆ ಶ್ರೀರಾಮುಲು ಅವರು ಮೊಳಕಾಲ್ಮೂರಿಗೆ ನಾನಾಗಲೀ ಅಥವಾ ನನ್ನ ಕುಟುಂಬದವರಾಗಲಿ ಯಾರೂ ಬರಲ್ಲ. ತಿಪ್ಪೆಸ್ವಾಮಿ ಅವರೇ ಕ್ಯಾಂಡಿಡೇಟ್. ಅವರನ್ನ ಗೆಲ್ಲಿಸುವ ಜವಬ್ದಾರಿ ನಿಮ್ಮದು. ಫಸ್ಟ್ ಲಿಸ್ಟ್ ನಲ್ಲೇ ನಿಮಗೆ ಟಿಕೆಟ್ ಕೊಡಿಸುತ್ತೇನೆ. ಬೇರೆ ಯಾರ ಮಾತು ಕೇಳಬೇಡಿ ಎಂದು ತಿಪ್ಪೇಸ್ವಾಮಿಗೆ ಬೆಂಬಲಿಗರಿಗೆ ಮಾತುಕೊಟ್ಟಿದ್ದರು.

    ಅಂದು ತ್ವಿಪ್ಪೇಸ್ವಾಮಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಆಶ್ವಾನೆ ನೀಡಿದ್ದ ಶ್ರೀರಾಮುಲು ಇಂದು ವಿಧಾನಸಭಾ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ತಾವೇ ನಿಂತಿದ್ದಾರೆ. ಇದರಿಂದ ತಿಪ್ಪೇಸ್ವಾಮಿ ಬೆಂಬಲಿಗರು ಶ್ರೀರಾಮುಲು ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

    ಅಂದು ತಿಪ್ಪೇಸ್ವಾಮಿ ಅವರಿಗೆ ಶ್ರೀರಾಮುಲು ವಾಗ್ದಾನ ನೀಡಿರುವ ವಿಡಿಯೋ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ

    ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ

    ಬಳ್ಳಾರಿ: 2018ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಸಂಸದ ಶ್ರೀರಾಮುಲು ಅವರನ್ನು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತಿದೆ.

    ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ, ಸಂಡೂರು ಕ್ಷೇತ್ರದ ಆಕ್ಷಾಂಕಿಯಾಗಿದ್ದ ಶ್ರೀರಾಮುಲು ಅವರನ್ನು ಬಿಜೆಪಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಸೂಚಿಸಿರುವುದಕ್ಕೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಬೇರೆಯದೇ ಆಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ನೆಲೆಯಿದ್ದು, ಕಳೆದ ಭಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಕೇವಲ ಒಂದೇ ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಪರಿಣಾಮ ಈಗ ಕೋಟೆ ನಾಡಿನಲ್ಲಿ ಬಿಜೆಪಿ ಕಹಳೆ ಊದಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಶ್ರೀರಾಮುಲು ಸ್ಥಾಪನೆ ಮಾಡಿದ್ದ ಬಿಎಸ್ ಆರ್ ಕಾಂಗ್ರೆಸ್ ತೆಕ್ಕೆಯಲ್ಲಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಮುಲು ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿ ಕೋಟೆನಾಡಿನಲ್ಲಿ ಕೇಸರಿ ಪತಾಕೆ ಹಾರಿಸಲು ಮುಂದಾಗಿದೆ.

    ಅಲ್ಲದೇ ಶ್ರೀರಾಮುಲು ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು, ಅವರು ನಾಮಪತ್ರ ಸಲ್ಲಿಸಿದ ನಂತರ ರಾಜ್ಯದೆಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ. ಅವರ ಕ್ಷೇತ್ರದ ಜವಾಬ್ದಾರಿಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಹಿಸಿಕೊಳ್ಳಲಿದ್ದಾರೆ.

    ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಮನೆ ಮಾಡಿರುವ ರೆಡ್ಡಿ, ರಾಮುಲು ಪರ ಪ್ರಚಾರ, ತಂತ್ರ ಪ್ರತಿತಂತ್ರಗಳನ್ನು ಹೂಡಲು ಸಜ್ಜಾಗಿದ್ದಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅನುಮತಿ ಇಲ್ಲದ ಪರಿಣಾಮ ರೆಡ್ಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕುಳಿತುಕೊಂಡು ಗಣಿ ನಾಡು ಹಾಗೂ ಕೋಟೆ ನಾಡಿನಲ್ಲಿ ಕೇಸರಿ ಪತಾಕೆ ಹಾರಿಸಲು ಮುಂದಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಬಳ್ಳಾರಿ ಗ್ರಾಮೀಣ ಅಥವಾ ಕೂಡ್ಲಗಿಯಿಂದ ಕಣಕ್ಕಿಳಿಯಲಿದ್ದಾರೆ ಸಂಸದ ಶ್ರೀರಾಮುಲು!

    ಬಳ್ಳಾರಿ ಗ್ರಾಮೀಣ ಅಥವಾ ಕೂಡ್ಲಗಿಯಿಂದ ಕಣಕ್ಕಿಳಿಯಲಿದ್ದಾರೆ ಸಂಸದ ಶ್ರೀರಾಮುಲು!

    ಬಳ್ಳಾರಿ: ಸಂಸದ ಬಿ.ಶ್ರೀರಾಮುಲು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.

    ಬಳ್ಳಾರಿ ಗ್ರಾಮೀಣ, ಕೂಡ್ಲಗಿ ಇಲ್ಲವೇ ಸಂಡೂರಿನಿಂದ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಹೀಗಾಗಿ ರಾಮುಲು ವಿರುದ್ಧ ಕಾಂಗ್ರೆಸ್‍ನಿಂದ ಎದುರಾಳಿಯಾಗಿ ಕಣಕ್ಕೆ ಯಾರು ಇಳಿಯಲಿದ್ದಾರೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

    ಶ್ರೀರಾಮುಲು ಅವರನ್ನು ಬಳ್ಳಾರಿ ಗ್ರಾಮೀಣ ಇಲ್ಲವೇ ಕೂಡ್ಲಗಿಯಿಂದ ಕಣಕ್ಕೆ ಇಳಿಸಿದ್ರೆ ರಾಮುಲು ವಿರುದ್ಧ ಕಾಂಗ್ರೆಸ್‍ನಿಂದ ಬಿ.ನಾಗೇಂದ್ರ ಸ್ಪರ್ಧೆ ಮಾಡುವುದು ಖಚಿತ ಎನ್ನುವಂತಾಗಿದೆ. ಶ್ರೀರಾಮುಲು ಬಲಗೈ ಬಂಟನಾಗಿ ಬೆಳೆದ ಕೂಡ್ಲಗಿ ಶಾಸಕ ನಾಗೇಂದ್ರ ಇತ್ತೀಚೆಗಷ್ಟೇ ರೆಡ್ಡಿ- ರಾಮುಲು ಸಂಪರ್ಕ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿನ್ನಲೆಯಲ್ಲಿ ಅವರನ್ನೇ ಕಣಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂದು ಪಕ್ಷ ಮೂಲಗಳಿಂದ ತಿಳಿದುಬಂದಿದೆ.

    ಒಂದೇ ಒಂದೂ ಚುನಾವಣೆಯಲ್ಲೂ ಸೋಲು ಕಂಡರಿಯದ ಶ್ರೀರಾಮುಲುಗೆ ಸೆಡ್ಡು ಹೊಡೆಯಲು ನಾಗೇಂದ್ರರೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ಅವರನ್ನೇ ಕಣಕ್ಕೆ ಇಳಿಸಲು ಮುಂದಾಗಿದ್ದು, ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಬಳ್ಳಾರಿಯಲ್ಲಿ ಭಾರೀ ಪೈಪೋಟಿ ನಡೆಯಲಿದೆ ಎಂದು ರಾಜಕೀಯ ವಲಯದಿಂದ ಕೇಳಿಬಂದಿದೆ.

  • ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ವಿರೋಧಿಗಳನ್ನು ಸೋಲಿಸಲು ನಾಯಕರು ರಾಜಕೀಯ ತಂತ್ರ-ರಣತಂತ್ರಗಳನ್ನು ರಚಿಸುತ್ತಿದ್ದಾರೆ. ಬಳ್ಳಾರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನಾರ್ದನ ರೆಡ್ಡಿ, ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದ್ದರು. ಅಮಿತ್ ಶಾ ಹೇಳಿಕೆಯ ನಂತರ ಬಳ್ಳಾರಿ ರಾಜಕಾರಣದಲ್ಲಿ ಭಾರೀ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವಶ್ಯಕತೆ, ಅವರ ಶಕ್ತಿ, ತಂತ್ರ ಪ್ರತಿ-ತಂತ್ರಗಳ ಮಾಸ್ಟರ್ ಪ್ಲಾನ್ ಬಗ್ಗೆ ಚುನಾವಣಾ ಚಾಣಕ್ಯ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಶ್ರೀರಾಮುಲು ಮೂಲಕ ಮನವರಿಕೆ ಮಾಡಿಕೊಡುವಲ್ಲಿ ಯಶ್ವಸಿಯಾಗಿದ್ದಾರೆ ಅಂತ ತಿಳಿದು ಬಂದಿದೆ.

    ಜನಾರ್ದನ ರೆಡ್ಡಿ ಅವರ ತಂತ್ರಗಾರಿಕೆ ಮೂಲಕವೇ ಚುನಾವಣೆಯನ್ನು ಎದುರಿಸುತ್ತೇವೆ. ಅಲ್ಲದೇ ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇರ್ತಾರೆ ಅಂತ ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಸಂಸದರಾಗಿದ್ದರು ಅವರನ್ನು ಕೂಡ್ಲಿಗಿ ಅಥವಾ ಸಂಡೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಬಳ್ಳಾರಿ ನಗರದಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಕಂಪ್ಲಿಯಿಂದ ಸುರೇಶಬಾಬು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಸಹೋದರ ಸಣ್ಣ ಫಕ್ಕೀರಪ್ಪ ಇಲ್ಲವೇ ಸಹೋದರಿ ಜೆ ಶಾಂತಾರನ್ನು ಕಣಕ್ಕೆ ಇಳಿಸಲು ಯೋಚಿಸಿದ್ದಾರೆ. ಇತ್ತ ಹಡಗಲಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೂಚಿಸಿದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಹೇಳಲಾಗಿದೆ.

    ಒಟ್ಟಿನಲ್ಲಿ ನೇರವಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳದಿದ್ದರೂ ಜನಾರ್ದನ ರೆಡ್ಡಿ ಅವರ ಅನತಿಯಂತೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಳ್ಳಾರಿಯಲ್ಲಿ ಸೋಲಿಸಲು ಜರ್ನಾದನ ರೆಡ್ಡಿ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಬೆಂಗಳೂರು: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ ರೆಡ್ಡಿ ಪಾಳೆಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದೆ. ನಾಳೆ ಶ್ರೀರಾಮುಲು ಜತೆ ಜನಾರ್ದನ ರೆಡ್ಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಅಮಿತ್ ಶಾ ಹೇಳಿಕೆಯ ದಿನವೇ ಮುಂಬೈಗೆ ತೆರಳಿದ್ದ ಜನಾರ್ದನ ರೆಡ್ಡಿ ಸದ್ಯ ಮುಂಬೈ ಪ್ರವಾಸದಲ್ಲಿದ್ದಾರೆ. ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾದುನೋಡುವ ತಂತ್ರಕ್ಕೆ ಮೊರೆ ಹೋಗಲು ಜನಾರ್ದನ ರೆಡ್ಡಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

     

    ಆಪ್ತ ಮಿತ್ರ ಶ್ರೀರಾಮುಲು, ಸಹೋದರ ಸೋಮಶೇಖರ ರೆಡ್ಡಿಯನ್ನ ಅಖಾಡಕ್ಕಿಳಿಸಲು ಜನಾರ್ದನ ರೆಡ್ಡಿ ಒಲವು ತೋರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಸ್ಪರ್ಧೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

    ನಾಳೆ ಶ್ರೀರಾಮುಲು ಜೊತೆ ಮಹತ್ವದ ಮಾತುಕತೆ ನಡೆಸಲಿರುವ ಜನಾರ್ದನ ರೆಡ್ಡಿ ಅಮಿತ್ ಶಾ ಹೇಳಿಕೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

  • ಬಿಜೆಪಿ ನಾಯಕ ಶ್ರೀರಾಮುಲು ಗದಗ ಸಂಸದರಂತೆ!

    ಬಿಜೆಪಿ ನಾಯಕ ಶ್ರೀರಾಮುಲು ಗದಗ ಸಂಸದರಂತೆ!

    ಕೊಪ್ಪಳ: ಪ್ರಚಾರದ ಭರದಲ್ಲಿ ಬಿಜೆಪಿ ಕಾರ್ಯಕರ್ತರು ಎಡವಟ್ಟುವೊಂದನ್ನು ಮಾಡಿಕೊಂಡಿದ್ದಾರೆ. ಇಂದು ನಗರದಲ್ಲಿ ಆಯೋಜನೆಗೊಂಡಿರುವ ಉಜ್ವಲ್ ಪ್ಲಸ್ ಸಿಲಿಂಡರ್ ವಿತರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾಗಿರುವ ಬ್ಯಾನರ್ ಗಳಲ್ಲಿ ಎಡವಟ್ಟು ಮಾಡಲಾಗಿದೆ.

    ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರ ಭಾವಚಿತ್ರದೊಂದಿಗೆ ಬ್ಯಾನರ್ ಗಳು ನಗರದ ಪ್ರಮುಖ ರಸ್ತೆಯಲ್ಲಿ ರಾರಾಜಿಸುತ್ತಿವೆ. ಬ್ಯಾನರ್ ಗಳಲ್ಲಿ ಬಿ. ಶ್ರೀರಾಮುಲು ಬಳ್ಳಾರಿ ಸಂಸದರು ಎಂದು ಹೆಸರು ನಮೂದಿಸುವ ಬದಲಾಗಿ ಗದಗ ಜಿಲ್ಲಾ ಸಂಸದರು ಎಂದು ನಮೂದಿಸಲಾಗಿದೆ.

    ಬ್ಯಾನರ್ ಗಳನ್ನು ನೋಡಿದ ಜನರು ಅರೇ, ಯಾವಾಗ ಶ್ರೀರಾಮುಲು ಗದಗ ಸಂಸದರಾದ್ರು ಅಂತಾ ಪ್ರಶ್ನೆ ಮಾಡ್ತಿದ್ದಾರೆ.