Tag: sriramulu

  • ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ಬೆಂಗಳೂರು: ಶ್ರೀರಾಮುಲು (Sriramulu) ಕಾಂಗ್ರೆಸ್‌ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಟಾಂಗ್‌ ಕೊಟ್ಟರು.

    ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಬಿಹಾರ ಚುನಾವಣೆಗೆ ಸಿಎಂ, ಡಿಸಿಎಂ 300 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ಬಗ್ಗೆ ಕೇಳಿದಾಗ, ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

    ಟನಲ್ ರಸ್ತೆ ಮಾಡಲು ಬಿಡುವುದಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಮಾತನಾಡಿ, ನಾನು ಈ ವಿಚಾರದಲ್ಲಿ ತಾಂತ್ರಿಕ ತಜ್ಞ ಅಲ್ಲ. ಅವರೂ ತಜ್ಞರಲ್ಲ. ಅದಕ್ಕಾಗಿಯೇ ಪ್ರತ್ಯೇಕ ತಾಂತ್ರಿಕ ತಜ್ಞರ ತಂಡವೇ ಇದೆ. ಅವರು ನಗರ ರೈಲು ಯೋಜನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಮಾಡಲಿ, ಅದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ನಮ್ಮದೇ ರಾಜ್ಯದ ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರ ನೆರವು ಪಡೆಯಲಿ, ಏನು ಬೇಕಾದರೂ ಮಾಡಲಿ. ಅವರು ಹೋರಾಟ ಮಾಡುವುದಾದರೆ ಮಾಡಲಿ, ಬೇಡ ಎಂದು ಹೇಳಿದವರು ಯಾರು? ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಹಾಗೂ ಅಶೋಕ್ ಹೊರತಾಗಿ ಉಳಿದ ಯಾವುದೇ ನಾಯಕರು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಸ್ಟೀಲ್ ಬ್ರಿಡ್ಜ್ ಮಾದರಿಯಲ್ಲೇ ಟನಲ್ ರಸ್ತೆ ಯೋಜನೆ ಮುರಿದು ಬೀಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಆಸಕ್ತಿ ನೋಡಿ ಜನರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಕೆಲಸ ಅನುಷ್ಠಾನ ಆಗಲಿದೆ ಎಂಬ ವಿಶ್ವಾಸ ಇದೆ ಎಂದರು.

    ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ, ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಅನಗತ್ಯ ಮಾತನಾಡಿ ದಣಿವಾಗುವುದು ಬೇಡ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ವಾಂಟಮ್‌ ಸಿಟಿ ಅಭಿವೃದ್ಧಿ, ಸಹಭಾಗಿತ್ವಕ್ಕೆ ಸ್ವಿಟ್ಜರ್ಲೆಂಡ್‌ ಕಂಪನಿ, ಸಂಶೋಧನಾ ಸಂಸ್ಥೆಗಳ ಒಲವು: ಸಚಿವ ಬೋಸರಾಜು

    ವರದಿ ಬಳಿಕ ದಿನಾಂಕ ನಿಗದಿ
    ರಾಜ್ಯಕ್ಕೆ ರಾಹುಲ್‌ ಗಾಂಧಿ ಅವರ ಭೇಟಿಗೆ ಸಂಬಂಧಿಸಿದಂತೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ನಾನು ಮನವಿ ಸಲ್ಲಿಸಿದ್ದೇನೆ. ಕಚೇರಿ ನಿರ್ಮಾಣ ಜಾಗದ ಕಾಗದ ಪತ್ರ ಸಿದ್ಧವಾಗುತ್ತಿದೆ. ಈ ಕಚೇರಿ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ‍್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಆವರು ದಿನಾಂಕ ನಿಗದಿ ಮಾಡುತ್ತಾರೆ ಎಂದು ವಿವರಿಸಿದರು.

    ಸಚಿವರು, ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ
    ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. 8-10 ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಮುಂದಿನ ಸಭೆಯಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಪಡೆಯುತ್ತೇವೆ ಎಂದು ತಿಳಿಸಿದರು.

  • ನಮ್ಮಿಬ್ಬರ ಮೈಮನಸ್ಸಿನ ಲಾಭ ಪಡೆಯುವವರು ಮೂರ್ಖರು: ಜನಾರ್ದನ ರೆಡ್ಡಿ

    ನಮ್ಮಿಬ್ಬರ ಮೈಮನಸ್ಸಿನ ಲಾಭ ಪಡೆಯುವವರು ಮೂರ್ಖರು: ಜನಾರ್ದನ ರೆಡ್ಡಿ

    ಕೊಪ್ಪಳ: ನಾನು ಶ್ರೀರಾಮುಲು (Sriramulu) ಬಾಲ್ಯದಿಂದಲೂ ಸ್ನೇಹಿತರು, ನಮ್ಮಿಬ್ಬರ ನಡುವೆ ಯಾವುದೇ ಮುನಿಸು ಬಂದರೂ ಅದು ಕ್ಷಣಿಕ ಮಾತ್ರ. ನಮ್ಮಿಬ್ಬರ ಮುನಿಸು ಲಾಭ ಪಡೆದುಕೊಳ್ಳಲು ಬಯಸುವವರು ಮೂರ್ಖರು, ನಾವು ಯಾವಾಗಲೂ ಒಂದೇ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಹೇಳಿದರು.

    ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡ ಸಂಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದನ್ನೂ ಓದಿ: ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

    ನಾವಿಬ್ಬರು ನಿಜವಾದ ಸ್ನೇಹಿತರು, ನಮ್ಮಿಬ್ಬರ ನಡುವೆ ಜಗಳವಾದರೆ ಕೃಷ್ಣ ಅರ್ಜುನ ನಡುವೆ ಜಗಳವಾದಂತೆ. ಕೆಟ್ಟ ಘಳಿಗೆಗಳು ಪ್ರತಿಯೊಬ್ಬರಿಗೂ ಬರುತ್ತವೆ. ಆದರೆ ಇದರ ಲಾಭ ಪಡೆದು ಕೊಳ್ಳಬೇಕು ಎಂದು ಯೋಚಿಸುವವರು ಮೂರ್ಖರಾಗಿದ್ದಾರೆ. ನಾವುಗಳು ಯಾವತ್ತು ಬೇರಾಗುವುದಿಲ್ಲ. ನಾವಿಬ್ಬರು ಒಂದೇ, ಮುಂದಿನ ದಿನಮಾನಗಳಲ್ಲಿ ಕೂಡ ರಾಜ್ಯಾದ್ಯಂತ ಸಂಚರಿಸಿ, ಪಕ್ಷ ಕಟ್ಟಲಾಗುವುದು. ಕಾಂಗ್ರೆಸ್ ಸರ್ಕಾರ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕೆಟ್ಟ ಸರ್ಕಾರ ಎನ್ನುವಂತೆ ಆಡಳಿತ ನಡೆಸುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ಮರಳು ಮಾಡುತ್ತಿದೆ. ಸಿಎಂ ಅಭಿವೃದ್ಧಿಯನ್ನು ಮರೆತು ಅಧಿಕಾರಕ್ಕಾಗಿ ಜಗಳ ಮಾಡುತ್ತಿದ್ದಾರೆ. ಇದನ್ನು ಜನರು ಅರಿತುಕೊಳ್ಳಬೇಕು ಎಂದರು. ಇದನ್ನೂ ಓದಿ: ಸಿಎಂ ಮೊದಲು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಉತ್ತರ ನೀಡಲಿ: ವಿಜಯೇಂದ್ರ ಸವಾಲು

  • ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

    ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

    ಕೊಪ್ಪಳ: ಗಂಗಾವತಿಯ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhan Reddy), ಮಾಜಿ ಸಚಿವ ಶ್ರೀರಾಮುಲು (Sriramulu) ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ರಾಜಕಾರಣದಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೆಡ್ಡಿ-ರಾಮುಲು ಈ ಜೋಡಿ ಇತ್ತೀಚೆಗಷ್ಟೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕೆಲವು ಆಸ್ತಿ ಜಗಳಗಳಿಂದಾಗಿ ದೂರವಾಗಿದ್ದರು. ಬಿಜೆಪಿ ಹಿರಿಯ ನಾಯಕರು ಇವರನ್ನು ಒಂದು ಮಾಡಲು ನೋಡಿದ್ದರು. ಆದರೆ, ನಾವು ಒಂದಾಗುವ ಮಾತೇ ಇಲ್ಲ. ಪರಸ್ಪರ ಮುಖವನ್ನು ನೋಡುವುದಿಲ್ಲ ಎನ್ನುವ ಶಪಥ ತೊಟ್ಟಿದ್ದರು. ಆದರೆ, ದಿಢೀರ್ ಈಗ ಮನಸು ಬದಲಾಯಿಸಿದ್ದಾರೆ. ನಮ್ಮ ನಡುವೆ ಯಾವುದೇ ಜಗಳಗಳಿಲ್ಲ. ನಾವು ಚೆನ್ನಾಗಿದ್ದೇವೆ ಎಂದು ಒತ್ತಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್

    ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಳ್ಳಾರಿ ವಿಭಾಗದ ಸಂಘಟನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಕುಶಲೋಪರಿ ವಿಚಾರಿಸಿದರು. ಕೆಲ ನಿಮಿಷ ಗಮನಾರ್ಹವಾಗಿ ಚರ್ಚೆ ನಡೆಸಿದರು. ಭಾಷಣದಲ್ಲೂ ನಾವಿಬ್ಬರೂ ಒಂದಾಗಿದ್ದೇವೆ. ಯಾರು ಎಷ್ಟೇ ಹುಳಿ ಹಿಂಡಿದರೂ ಕಿವಿಗೊಡುವುದಿಲ್ಲ. ಹಿಂದೆಯೂ, ಮುಂದೆಯೂ ಜೀವದ ಗೆಳೆಯರಾಗಿದ್ದೇವೆ ಎಂದು ಪ್ರಸ್ತಾಪಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದರು.

    ರೆಡ್ಡಿ-ಶ್ರೀರಾಮುಲು ಆಪ್ತಮಿತ್ರರು. ಅಕ್ರಮ ಗಣಿಗಾರಿಗೆ ಆರೋಪದ ಮೇಲೆ ಜನಾರ್ದನ ರೆಡ್ಡಿ ಜೈಲು ಸೇರಿದರೂ ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪ್ರಚಾರ ಮಾಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಆಗಿದ್ದ ಬಂಗಾರು ಹನುಮಂತು ಅವರ ಸೋಲಾಯಿತು ಎಂದು ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಇದೊಂದು ಘಟನೆಯಿಂದ ರೆಡ್ಡಿ-ರಾಮುಲು ನಡುವಿನ ಬಿರುಕಿಗೆ ಕಿಡಿ ಹೊತ್ತಿಸಿತ್ತು. ಇದರ ಜೊತೆಗೆ ಆಂತರಿಕವಾಗಿ ಇದ್ದ ಕೆಲ ಖಾಸಗಿ ಭಿನ್ನಾಭಿಪ್ರಾಯದಿಂದ ಇಬ್ಬರು ಸಿಡಿದೆದ್ದು, ಏಕವಚನದಲ್ಲೇ ಬೈದಾಡಿಕೊಂಡಿದ್ದರು. ಬಳ್ಳಾರಿಯಲ್ಲಿದ್ದ ತಮ್ಮ ಮನೆಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ದ್ವಾರ(ಗೇಟ್)ಗಳನ್ನು ಬಂದ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

    ಮೇಲ್ನೋಟಕ್ಕೆ ರಾಜಕೀಯ ಕಿತ್ತಾಟವೇ ಆಗಿದ್ದರೂ ರೆಡ್ಡಿ-ರಾಮುಲು ನಡುವೆ ಆಸ್ತಿ ಕಲಹಗಳಿವೆ. ಇದೇ ಕಾರಣಕ್ಕೆ ದೂರವಾಗಿದ್ದಾರೆ ಎಂಬುದು ಅವರ ಬೆಂಬಲಿಗರ ಸ್ಪಷ್ಟೋಕ್ತಿ ಆಗಿತ್ತು. ಆದರೆ ಈಗ ಇಬ್ಬರು ಯಾರ ಮಧ್ಯಸ್ಥಿಕೆ ಇಲ್ಲದೇ ಒಂದಾಗಿ ಬಿಜೆಪಿ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ. ಮರು ಹೊಂದಾಣಿಕೆ ಹಿಂದಿನ ಮರ್ಮವೇನು? ಎನ್ನುವ ಪ್ರಶ್ನೆ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಬಿಜೆಪಿ ರಾಜ್ಯ ಮುಖಂಡರಲ್ಲೂ ಮೂಡಿದೆ.

  • ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಭಾರತ ಭಿಕ್ಷುಕರ ದೇಶ ಆಗಿತ್ತು: ಶ್ರೀರಾಮುಲು ವಿವಾದಾತ್ಮಕ ಹೇಳಿಕೆ

    ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಭಾರತ ಭಿಕ್ಷುಕರ ದೇಶ ಆಗಿತ್ತು: ಶ್ರೀರಾಮುಲು ವಿವಾದಾತ್ಮಕ ಹೇಳಿಕೆ

    ಬಳ್ಳಾರಿ: ನರೇಂದ್ರ ಮೋದಿಯವರು (Narendra Modi) ಪ್ರಧಾನಿಯಾಗುವುದಕ್ಕೂ ಮೊದಲು ಭಾರತ (India) ಭಿಕ್ಷುಕರ ದೇಶ ಆಗಿತ್ತು ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ.

    ಪ್ರಧಾನಿ ಮೋದಿ ಸರ್ಕಾರ 11 ವರ್ಷ ಪೂರೈಸಿದ ಹಿನ್ನೆಲೆ ಹನ್ನೊಂದು ವರ್ಷದ ಸಾಧನೆ ಕುರಿತು ಮಾತನಾಡಿದ ಅವರು, ನರೇಂದ್ರ ಮೋದಿ ಬರೋದಕ್ಕೂ ಮೊದಲು ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಈಗ ಕಾಲ ಬದಲಾಗಿದೆ, ಇದೀಗ ಭಾರತವನ್ನು ವಿಶ್ವವೇ ನೋಡುವಂತೆ ಮಾಡಿದ್ದಾರೆ. ನೆಹರು ಅವರ ಕಾಲದಲ್ಲಿ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡಿದ್ದರು. ದೇಶದ ಅಭಿವೃದ್ಧಿ ಬಗ್ಗೆ ನೆಹರು ಕುಟುಂಬ ಚಿಂತನೆ ಮಾಡಿಲ್ಲ. ವೈಯಕ್ತಿಕ ಅಭಿವೃದ್ಧಿ ಹೊಂದಿದ್ದ ಹೊರತು ದೇಶ ಅಭಿವೃದ್ಧಿ ಮಾಡಲಿಲ್ಲ. ಚೀನಾ-ಭಾರತದ ಯುದ್ಧದಲ್ಲಿ ಭಾರತ ಮಂಡಿಯೂರಿತು. ಇದಕ್ಕೆ ನೆಹರು ನಿಲುವು ಕಾರಣವಾಯಿತು. ನೆಹರು ಅವರ ಕಾಲಘಟ್ಟ ಕೆಟ್ಟದಾಗಿತ್ತು, ಸಾವಿರಾರು ಸೈನಿಕರು ಹುತಾತ್ಮರಾದರು ಎಂದು ನೆಹರು ಮತ್ತು ಇಂದಿರಾ ಗಾಂಧಿ ಕಾಲಘಟ್ಟದ ಭ್ರಷ್ಟಾಚಾರದ ವಿವರಣೆ ನೀಡಿದರು. ಇದನ್ನೂ ಓದಿ:  ಕಲಬುರಗಿ | ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ

    ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ಕಮಿಷನ್ ಮಧ್ಯವರ್ತಿಗಳನ್ನು ಬೆಳೆಸೋದೇ ಗಾಂಧಿ ಕುಟುಂಬದ ಕೆಲಸ. ಭೋಫರ್ಸ್ ಹಗರಣದಲ್ಲಿ ಇನ್ನೂ ಮುಕ್ತರಾಗಿಲ್ಲ. ರಾಹುಲ್ ಸೋನಿಯಾ ಕೂಡ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಜೈಲಿಗೆ ಹೋಗುತ್ತಾರೆ. ನ್ಯಾಷನಲ್ ಹೆರಾಲ್ಡ್ ದೊಡ್ಡ ಗೋಲ್‌ಮಾಲ್, ಪ್ರಕರಣದಲ್ಲಿ ಕರ್ನಾಟಕದ ನಾಯಕರು ಇದ್ದಾರೆ. ವಿಶ್ವದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡಿದ್ದು ಮೋದಿ. 60 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ದುರ್ಬಲ ದೇಶವಾಗಿತ್ತು. ಯುಪಿಎ ಆಳ್ವಿಕೆಯಲ್ಲಿ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು ಎಂದು ಹರಿಹಾಯ್ದರು. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತಾ- ಸತೀಶ್ ಜಾರಕಿಹೊಳಿಗೆ ತುರ್ತು ಬುಲಾವ್ ನೀಡಿದ್ಯಾಕೆ?

    ಕಳೆದ ಹತ್ತು ವರ್ಷದಲ್ಲಿ ಭಾರತ ಆರ್ಥಿಕವಾಗಿ ಪ್ರಬಲ ದೇಶವಾಗಿ ಬದಲಾಗಿದೆ. ವಿರೋಧ ಪಕ್ಷದಲ್ಲಿ ಕೂಡುವಷ್ಟು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಲೋಕಸಭೆಯಲ್ಲಿ ಗಳಿಸಿದೆ. ಕಾಂಗ್ರೆಸ್ ಆಳ್ವಿಕೆಯ ರಾಜ್ಯದಲ್ಲಿ ಕ್ರೈಂ ಪ್ರಕರಣ ಹೆಚ್ಚಾಗಿವೆ. ದೇಶದಲ್ಲಿ ಹೆಚ್ಚು ವಿಮಾನ ನಿಲ್ದಾಣ ಸ್ಥಾಪನೆ, ರೈಲ್ವೆ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹೆಚ್ಚಾಗಿ ನಿರ್ಮಾಣವಾಗಿವೆ. 370 ರದ್ದಾದ ಬಳಿಕ ದೇಶಕ್ಕೆ ಬೆಂಕಿ ಹತ್ತುತ್ತದೆ ಎಂದ್ದಿದ್ದರು, ಆದರೆ ಮೋದಿ ಅದ್ಯಾವುದಕ್ಕೂ ಅವಕಾಶ ಕೊಡಲಿಲ್ಲ. ತ್ರಿವಳಿ ತಲಾಕ್ ರದ್ದು, ವಕ್ಫ್ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಜನಪರ ಕೆಲಸ ಮಾಡಿದ್ದಾರೆ. ಉಗ್ರರನ್ನು ಮಟ್ಟ ಹಾಕುವ ಕೆಲಸ ಮಾಡಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ ಎಂದು ಮೋದಿ ಸರ್ಕಾರದ ಯೋಜನೆ ಮತ್ತು ಅಭಿವೃದ್ಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ – ಬಾಲ್ಕನಿಯಿಂದ ಹಾರಿದ ತಂದೆ, ಇಬ್ಬರು ಮಕ್ಕಳು ಸಾವು

    ಕಳೆದ 70 ವರ್ಷದಲ್ಲಿ ಮಾಡದೇ ಇರೋ ಸಾಧನೆ ಕಳೆದ ಹತ್ತು ವರ್ಷದಲ್ಲಿ ಮೋದಿ ಮಾಡಿದ್ದಾರೆ. ಕಿಸಾನ್ ಸನ್ಮಾನ್ ಯೋಜನೆಯಡಿ ರೈತರಿಗೆ ಆರು ಸಾವಿರ ಹಣ ನೀಡಲಾಗುತ್ತಿದೆ, ಆದರೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಹಣ ನೀಡುತ್ತಿಲ್ಲ. ಪಹಲ್ಗಾಮ್ ದಾಳಿ ಬಳಿಕ ಉಗ್ರರ ತಾಣ ನಾಶ ಮಾಡಲಾಗಿದೆ. ಮೋದಿ ನೇತೃತ್ವದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ನೆಹರು ಪ್ರಧಾನಿ ಇದ್ದಂತ ಸಮಯದಲ್ಲಿ ಭಾರತವನ್ನು ಭಿಕ್ಷುಕರ ದೇಶ ಎಂದು ಹೇಳುತ್ತಿದ್ದರು. ಆದರೆ ಈ ಮಾತು ಹೇಳಿದ್ದು ನಾನಲ್ಲ, ಹಳ್ಳಿಯಲ್ಲಿ ಜನ ಹೇಳುತ್ತಿದ್ದರು. ಇವತ್ತಿನ ಜಿಡಿಪಿಯಲ್ಲಿ (ಆರ್ಥಿಕ ವ್ಯವಸ್ಥೆ) ಭಾರತ ಮೂರನೇ ಸ್ಥಾನದಲ್ಲಿದೆ. ವಾಜಪೇಯಿ ಕಾಲದಲ್ಲಿಯೂ ಭಾರತ ಅಭಿವೃದ್ಧಿ ಹೊಂದಿತ್ತು. ಟ್ರಂಪ್ ಹೇಳಿಕೆಯಿಂದ ಯುದ್ಧ ನಿಲ್ಲಿಸಿಲ್ಲ, ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

  • ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

    ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

    -ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ, ಈ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆ ಎಂದ ಮಾಜಿ ಸಚಿವ

    ಬಳ್ಳಾರಿ: ಯತ್ನಾಳ್ (Basanagouda Patil Yatnal) ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದರೆ ಪಕ್ಷಕ್ಕೆ ಲಾಭ ಆಗುತ್ತದೆ. ಇಡೀ ಲಿಂಗಾಯತ (Lingayat) ಸಮುದಾಯ ಬಿಜೆಪಿ (BJP) ಜೊತೆಗಿದೆ. ಆದ್ರೆ ಈ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಅವರು ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯ 20-24 ರಷ್ಟಿದೆ. ಈ ಸಮುದಾಯದಿಂದ 1970-1980ರ ತನಕ ನಿಜಲಿಂಗಪ್ಪ ಅವರು ಸಿಎಂ ಆಗಿದ್ದರು. ಅದಾದ ಬಳಿಕ ವೀರೇಂದ್ರ ಪಾಟೀಲ್‌ರನ್ನ ಸಿಎಂ ಮಾಡುತ್ತೇವೆ ಎಂದಾಗ 177 ಶಾಸಕರು ಗೆದ್ದಿದ್ದರು. ಆದರೆ ಬೇರೆ ಬೇರೆ ಕಾರಣದಿಂದ ವೀರೇಂದ್ರ ಪಾಟೀಲ್‌ರನ್ನ ಕೆಳಗಿಳಿಸಲು ಕಾಂಗ್ರೆಸ್ (Congress) ನಾಯಕರು ನಿರ್ಧರಿಸಿದ್ದರು. ಆಗ ಆ ಸಂಪೂರ್ಣ ಸಮುದಾಯ ಜನಾತದಳದ ಕಡೆ ವಾಲಿತ್ತು. ಪುನಃ 1994ರಲ್ಲಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ಪರಿಶ್ರಮ ಪಟ್ಟು ಲಿಂಗಾಯತ ಸಮುದಾಯದವರ ಪ್ರೀತಿ, ವಿಶ್ವಾಸದಿಂದ ಬಿಜೆಪಿಗೆ ಬಂದರು. ಆದರೆ ಇದೀಗ ಪಂಚಮಸಾಲಿಯ (Panchamasali) ಪ್ರಬಲ ನಾಯಕ ಬಸನಗೌಡ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

     

    ನಾನು ಸಾಕಷ್ಟು ಸಾರಿ ಯತ್ನಾಳ್ ಅವರಿಗೆ ಹೇಳಿದ್ದೆ. ನೀವು ನೇರ ನಿಷ್ಠುರವಾದಿ, ಹಿಂದುತ್ವವಾದಿ. ನಿಮಗೆ ತೊಂದರೆ ಆಗುತ್ತೆ ಎಂದರೆ ನೀವು ನಿಷ್ಠುರ ಆಗುತ್ತೀರಿ ಎಂದಿದ್ದೆ ಆದರೆ ಇದೀಗ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ಅಮಿತ್ ಶಾ, ನಡ್ಡಾ ಹಾಗೂ ಪ್ರಧಾನಿ ಮೋದಿ ಅವರು ಮರುಪರಿಶೀಲನೆ ಮಾಡಬೇಕು. ಇಡೀ ಪಂಚಮಸಾಲಿ ಸಮುದಾಯ ಬಿಜೆಪಿ ಜೊತೆಗಿದೆ. ಆ ಸಮುದಾಯಕ್ಕೆ ನೋವಾಗಬಾರದು. ಆ ಸಮುದಾಯವನ್ನು ದೂರ ಮಾಡಿಕೊಂಡ್ವಿ ಎಂದು ನೋವು ಪಡಬಾರದು. ಹೀಗಾಗಿ ಮರು ಪರಿಶೀಲನೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

    ಯತ್ನಾಳ್ ಕಟ್ಟಾ ಹಿಂದುತ್ವವಾದಿ, ಹೀಗಾಗಿ ಹಿಂದುತ್ವ ವಾದಿಗಳಿಗೆ ನೋವಾಗಿರುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷದಿಂದ ದೇಶ ದೊಡ್ಡದು. ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ನನಗೂ ಅವಕಾಶ ಸಿಕ್ಕಾಗ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ. ಲಿಂಗಾಯತ ಸಮುದಾಯ ದೊಡ್ಡ ಸಮುದಾಯ, ಏನೇ ಆದರೂ ಇದನ್ನು ಸರಿಪಡಿಸಬೇಕು. ಈ ನಿರ್ಧಾರದಿಂದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಸಮುದಾಯಗಳನ್ನ ಒಗ್ಗೂಡಿಸಿಕೊಂಡು ಹೋಗಬೇಕು. ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಿದರೆ ಪಕ್ಷಕ್ಕೆ ಲಾಭ ಆಗುತ್ತದೆ ಎಂದರು.

    ಯತ್ನಾಳ್ ಉಚ್ಚಾಟನೆಗೆ ಬಿಜೆಪಿಯ ಕೆಲವರು ಸಂಭ್ರಮಿಸಿದ ವಿಚಾರ:
    ಕೆಲವರು ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ಒಬ್ಬ ಮನುಷ್ಯ ಎಲ್ಲರಿಗೂ ಒಳ್ಳೆಯವರಾಗಿರಲು ಸಾಧ್ಯ ಇಲ್ಲ. ಎರಡು ಗುಂಪುಗಳಾಗಿರುವುದರಿಂದ ಪಾರ್ಟಿಗೆ ಸಮಸ್ಯೆ ಆಗುತ್ತದೆ. ಅವರಿಗಾದರೆ ಇವರಿಗೆ, ಇವರಿಗಾದರೆ ಅವರಿಗೆ ನೋವಾಗುತ್ತದೆ. ಹೀಗಾಗಿ ಈ ರೀತಿ ಆಗಬಾರದು ಎಂದಿದ್ದಾರೆ.ಇದನ್ನೂ ಓದಿ:ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

  • ಹನಿಟ್ರ‍್ಯಾಪ್‌ನ ಡೈರೆಕ್ಟರ್, ಪ್ರೊಡ್ಯುಸರ್ ಯಾರು ಅಂತ ಗೊತ್ತಾಗ್ಬೇಕಾದ್ರೆ ಸಿಬಿಐ ತನಿಖೆ ಆಗ್ಬೇಕು – ಶ್ರೀರಾಮುಲು

    ಹನಿಟ್ರ‍್ಯಾಪ್‌ನ ಡೈರೆಕ್ಟರ್, ಪ್ರೊಡ್ಯುಸರ್ ಯಾರು ಅಂತ ಗೊತ್ತಾಗ್ಬೇಕಾದ್ರೆ ಸಿಬಿಐ ತನಿಖೆ ಆಗ್ಬೇಕು – ಶ್ರೀರಾಮುಲು

    ಯಾದಗಿರಿ: ಹನಿಟ್ರ‍್ಯಾಪ್‌ನ (Honey Trap) ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಯಾರು ಅಂತ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಹೇಳಿದರು.

    ಜಿಲ್ಲೆಯ ಮಹಲ್ ರೋಜಾದಲ್ಲಿ ಹನಿಟ್ರ‍್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಕೊಡಬೇಕು. ರಾಜ್ಯದಲ್ಲಿ ಒಂದು ಫ್ಯಾಷನ್, ಒಂದು ಟ್ರೆಂಡ್ ಸ್ಟಾರ್ಟ್ ಆಗಿದೆ. ಹನಿಟ್ರ‍್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಯಾವುದೇ ಪಕ್ಷದವರಿದ್ದರೂ ಈ ರೀತಿ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗುತ್ತದೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ, ದೊಡ್ಡ ಮಟ್ಟಕ್ಕೆ ಮುಟ್ಟಿದ್ದೀವಿ. ಆದರೆ ಈ ರೀತಿಯ ಸಂದರ್ಭದಲ್ಲಿ ಹನಿಟ್ರ‍್ಯಾಪ್‌ನಿಂದ ಮನಸ್ಸಿಗೆ ನೋವು ಮಾಡುವ ಕೆಲಸ ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್‌ ಔಟ್‌- ಸಲ್ಮಾನ್‌ ಖಾನ್‌ ಫೈಟ್‌, ರೊಮ್ಯಾನ್ಸ್‌ ನೋಡಿ ಸೂಪರ್‌ ಎಂದ ಫ್ಯಾನ್ಸ್

    ಯಾವುದೇ ಪಕ್ಷದವರು ಇರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಮೇಲಿನ ವಿಶ್ವಾಸ ಉಳಿಸಬೇಕು. ಅದಕ್ಕಾಗಿ ಈ ಹನಿಟ್ರ‍್ಯಾಪ್‌ಗೆ ಕಡಿವಾಣ ಹಾಕಬೇಕು. ಸಿಬಿಐ ತನಿಖೆಯಾದರೆ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ. ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ‍್ಯಾಪ್ ಆಗಿದೆ. ಹಿಂದುಳಿದ ಜಾತಿಯ ವ್ಯಕ್ತಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಇದೀಗ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ‍್ಯಾಪ್‌ ಯತ್ನ ನಡೆದಿದೆ. ಪಕ್ಷಾತೀತಿವಾಗಿ ರಾಜಕಾರಣಿಗಳಿಗೆ ಈ ರೀತಿ ಆದರೆ ನೋವು ಉಂಟಾಗುತ್ತದೆ. ಇದಕ್ಕೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯುಷರ್? ಈ ಹನಿಟ್ರ‍್ಯಾಪ್ ಫ್ಯಾಕ್ಟರಿಯನ್ನು ಯಾರು ಇಟ್ಟುಕೊಂಡಿದ್ದಾರೆ ಎನ್ನೋದು ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಇನ್ನೂ ಇದೇ ವೇಳೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ರಾಜೀನಾಮೆ ವಿಚಾರವಾಗಿ ಮಾತನಾಡಿ, ಸಭಾಪತಿಗಳಿಗೂ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗಿದೆ. ಇದರಿಂದ ಅವರಿಗೂ ತೊಂದರೆ ಆಗುತ್ತದೆ. 30-40 ವರ್ಷ ರಾಜಕಾರಣದಲ್ಲಿದ್ದು, ಸಭಾಪತಿಗಳಾಗಿರುತ್ತಾರೆ. ಹನಿಟ್ರ‍್ಯಾಪ್ ಬೇರೆ ಬೇರೆ ವಿಚಾರ ಬಂದಾಗ ಮುಜುಗರ ಆಗುತ್ತದೆ. ಹೊರಟ್ಟಿಯವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ನೋವು ಆಗಬಾರದು ಅಂತಿದ್ರೆ ಸಿಬಿಐ ತನಿಖೆಗೆ ಕೊಡಬೇಕು. ರಾಜಕಾರಣಿಗಳ ಮೇಲೆ ಎಲ್ಲಾ ಅಸ್ತ್ರ ಉಪಯೋಗಿಸುತ್ತಾರೆ. ಇವತ್ತು ರಾಜಣ್ಣ, ಈ ಹಿಂದೆ ಎಷ್ಟು ಜನ ರಾಜಕಾರಣಿಗಳ ಮೇಲೆ ಹನಿಟ್ರ‍್ಯಾಪ್ ನಡೆದಿದೆ. ಪ್ರಾಮಾಣಿಕ ರಾಜಕಾರಣಿಗಳಿಗೆ ನೋವಾಗುತ್ತದೆ. ಇದರಿಂದಾಗಿ ಬಸವರಾಜ ಹೊರಟ್ಟಿ ಅವರಿಗೆ ನೋವಾಗಿ ರಾಜೀನಾಮೆ ಬಗ್ಗೆ ಮಾತಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: BCCIನಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಇಶಾನ್‌ ಕಿಶನ್‌ನಿಂದ ಬೌಂಡರಿ, ಸಿಕ್ಸರ್‌ ಸುರಿಮಳೆ – SRH ಪರ 45 ಬಾಲ್‌ಗೆ ಸೆಂಚುರಿ

     

  • ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ: ಶ್ರೀರಾಮುಲು ಬೇಸರ

    ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ: ಶ್ರೀರಾಮುಲು ಬೇಸರ

    ಚಾಮರಾಜನಗರ: ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದರು.

    ನಗರದಲ್ಲಿ ಮಾತನಾಡಿದ ಅವರು, ಸಂಪನ್ಮೂಲದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಎಸ್ಸಿಎಸ್ಪಿ ಟಿಎಸ್ಪಿ ಹಣ 25 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಇದರಿಂದ ಎಸ್‌ಸಿ ಎಸ್‌ಟಿ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಡದೇ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಬಳಸಿದ್ದಾರೆ ಎಂದು ಕಿಡಿಕಾರಿದರು.

    ಎಸ್ಸಿಎಸ್ಟಿ ಸಮುದಾಯಕ್ಕೆ ಮನೆ ಹೇಗೆ ನಿರ್ಮಿಸಿಕೊಡ್ತೀರಿ? ಮಕ್ಕಳಿಗೆ ಸ್ಕಾಲರ್‌ಶಿಪ್ ಹಣ ಎಲ್ಲಿಂದ ನೀಡ್ತೀರಿ. ಎಸ್ಸಿಎಸ್ಟಿ ಮಕ್ಕಳು ಉನ್ನತ ಶಿಕ್ಷಣ ಪಡೆಯೋದು ಹೇಗೆ? ಗಂಗಾ ಕಲ್ಯಾಣ ಯೋಜನೆ ಹೇಗೆ ಅನುಷ್ಠಾನ ಮಾಡ್ತೀರಿ? ಸಮುದಾಯ ಭವನ, ರಸ್ತೆ ಹೇಗೆ ಮಾಡ್ತೀರಿ? ಎಸ್ಸಿಎಸ್ಪಿ ಟಿಎಸ್ಪಿ ಅನುದಾನ ಶಾಸನಬದ್ಧ ಹಕ್ಕು. ಇದಕ್ಕಾಗಿ ನಾವು ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.

    ಮುಂದಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಅನುದಾನ ಮೀಸಲಿಡಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು. ನಮ್ಮ ಪಾಲು ನಮಗೆ ಸಿಗಬೇಕು ಎಂದು ಆಗ್ರಹಿಸಿದರು.

    ಮಹಾರಾಷ್ಟ್ರದ ವಿದ್ಯಾಮಾನ ಕರ್ನಾಟಕದಲ್ಲಿ ಘಟಿಸಬಹುದು. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತೆ. ಯಾವ ರೀತಿ ಮಹಾರಾಷ್ಟ್ರದಲ್ಲಿ ಏಕನಾಥ್ ಸಿಂಧೆ ಫಿನಾಮಿನ ಆಯ್ತೋ ಅದೇ ರೀತಿ ಕರ್ನಾಟಕದಲ್ಲೂ ಆಗಬಹುದು. ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರನ್ನು ಯಾವ ರೀತಿ ಇಳಿಸಲಾಯಿತು ಎಂಬುದನ್ನು ನೋಡಿದ್ದೇವೆ. ಈ ಸರ್ಕಾರ ಇರುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ ಎಂದರು.

  • ರಾಮುಲುಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ: ವಿಜಯೇಂದ್ರ

    ರಾಮುಲುಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ: ವಿಜಯೇಂದ್ರ

    ಚಿತ್ರದುರ್ಗ: ಶ್ರೀರಾಮುಲುಗೆ (Sriramulu) ಪೈಪೋಟಿ ಕೊಡುವಷ್ಟು ದೊಡ್ಡಮನುಷ್ಯ ನಾನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು.

    ಚಿತ್ರದುರ್ಗದ (Chitradurga) ಶಿವಶರಣ ಮಾದಾರಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದ ಬಳಿಕ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ದೆಹಲಿಯಲ್ಲಿ ESIC ಡಿಜಿ ಭೇಟಿಯಾದ ಸಂಸದ ಕ್ಯಾ.ಚೌಟ

    ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಮಾಜಿ ಸಚಿವ ಶ್ರೀರಾಮುಲು ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಮುಲು ನನಗಿಂತ ಹಿರಿಯರಾಗಿದ್ದು, ಬಿಎಸ್ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಕಾರಜೋಳ ಅವರ ಜೊತೆ ರಾಜ್ಯಾದ್ಯಂತ ಪಕ್ಷಸಂಘಟನೆ ಮಾಡಿದ್ದಾರೆ. ಹೀಗಾಗಿ ರಾಜ್ಯಾದ್ಯಕ್ಷರ ಆಯ್ಕೆ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಇದನ್ನೂ ಓದಿ: 3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನಾಡಿ ಸಿಬ್ಬಂದಿ ಅಮಾನತು

    ಇನ್ನು ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಟ್ಟರೆ ಪಕ್ಷಕ್ಕೆ ಒಳಿತಾಗಲಿದೆ ಎಂದು ವರಿಷ್ಠರು ಗಮನಹರಿಸುತ್ತಾರೆ. ಆದರೆ ಕಳೆದ ಒಂದೂವರೆ ವರ್ಷದಿಂದ ಯಶಸ್ವಿಯಾಗಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ-ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ರಾಜ್ಯಾಧ್ಯಕ್ಷನಾಗಿ ಮುಂದುವರೆಯುವಂತೆ ಕಾರ್ಯಕರ್ತರ ಅಪೇಕ್ಷೆ ಸಹ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ | ಹೈವೇಯಲ್ಲಿ ಟೈರ್ ಸ್ಫೋಟ – ವ್ಯಾನ್‌ಗೆ ಬಸ್ ಡಿಕ್ಕಿಯಾಗಿ 8 ಮಂದಿ ದುರ್ಮರಣ

    ಸದ್ಯದಲ್ಲೇ ಕೇಂದ್ರದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಜೊತೆಗೆ ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಜಿಲ್ಲಾಧ್ಯಕ್ಷರ, ಶಾಸಕರ ಅಭಿಪ್ರಾಯಗಳ ಆಧಾರದ ಮೇಲೆ ಆಯ್ಕೆಯಾಗಲಿದ್ದು, ನಮ್ಮ ಪಕ್ಷ ಹಾಗೂ ಹೈಕಮಾಂಡ್ ಏನು ತೀರ್ಮಾನ ಮಾಡಲಿದೆಯೋ ಆ ತೀರ್ಮಾನಕ್ಕೆ ನಾನಾಗಲಿ, ಮತ್ತೊಬ್ಬರಾಗಲಿ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಎಂ.ಬಿ ಪಾಟೀಲ್

    ವಿವಿಧ ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ವಿಜಯೇಂದ್ರ ಬೆಂಬಲಿಗರಿಗೆ ಹೆಚ್ಚು ಅವಕಾಶ ಎಂಬ ಬಿಜೆಪಿ ಮುಖಂಡರ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷನಾಗಿ ನಾನು ಎಲ್ಲೂ ಅಭಿಪ್ರಾಯ ಕೊಡುವ ಕೆಲಸ ಮಾಡಿಲ್ಲ ಎಂದಷ್ಟೇ ಹೇಳಿ ವಿವಾದಕ್ಕೆ ಗೆರೆ ಎಳೆದರು. ಇದನ್ನೂ ಓದಿ: ಟೀಂ ಇಂಡಿಯಾದ ಆಲ್‌ರೌಂಡರ್‌ ಆಟ – ಇಂಗ್ಲೆಂಡ್‌ ವಿರುದ್ಧ 4 ವಿಕೆಟ್‌ಗಳ ಜಯ

    ತರಳುಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿತ್ರದುರ್ಗಕ್ಕೆ ಆಗಮಿಸಿದ್ದೇನೆ. ಹೀಗಾಗಿ ಮಠಗಳ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಮೊನ್ನೆ ತರಳುಬಾಳು ಹುಣ್ಣಿಮೆಗೆ ನಮ್ಮ ತಂದೆಯವರಾದ ಬಿಎಸ್‌ವೈ ಬರಬೇಕಿತ್ತು, ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶ್ರೀಗಳ ಅಪೇಕ್ಷೆ ಮೇರೆಗೆ ಇಂದು ನಾನು ಆಗಮಿಸಿದ್ದೇನೆ ಎಂದರು. ಈ ವೇಳೆ ಸಂಸದ ಗೋವಿಂದ ಕಾರಜೋಳ, ಎಂಎಲ್‌ಸಿ ನವೀನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಕಾಡುಕೋಣ ದಾಳಿಗೆ ವೃದ್ಧ ಬಲಿ

  • ವಿಜಯೇಂದ್ರ ಬದಲಾವಣೆಯಾದ್ರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧ: ಶ್ರೀರಾಮುಲು

    ವಿಜಯೇಂದ್ರ ಬದಲಾವಣೆಯಾದ್ರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧ: ಶ್ರೀರಾಮುಲು

    ಕೋಲಾರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವಂತೆ ನಾನು ಒತ್ತಾಯ ಮಾಡಲ್ಲ. ಒಂದು ವೇಳೆ ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವೆ ಎಂದು ಪರೋಕ್ಷವಾಗಿ ರಾಜ್ಯಾಧ್ಯಕ್ಷನಾಗುವ ಬಯಕೆಯನ್ನು ಮಾಜಿ ಸಚಿವ ಶ್ರೀರಾಮುಲು (Sriramulu) ತೋಡಿಕೊಂಡಿದ್ದಾರೆ.

    ಕೋಲಾರದ (Kolar) ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾಗಿ ಇದ್ದರೆ, ಆಕಸ್ಮಿಕವಾಗಿ ಬದಲಾವಣೆಯಾದರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧ. ಬಸನಗೌಡ ಯತ್ನಾಳ್ ನಮ್ಮ ಹೆಸರು ಪ್ರಸ್ತಾವನೆ ಮಾಡಿದ್ದಾರೆ. ದೊಡ್ಡ ಮನಸ್ಸಿನಿಂದ ಅವರು ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ಸಂತೋಷ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದಕ್ಕೆ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್‌ ಒಪ್ಪಿದ್ಹೇಗೆ?

    ಯಡಿಯೂರಪ್ಪ ಅವರಿಂದ ಬೆಳೆದಿದ್ದೇವೆ. ಅವರು ಮನಸ್ಸು ಮಾಡಿ ನನಗೆ ಅವಕಾಶಕೊಟ್ಟರೆ ರಾಜ್ಯದ 224 ಕ್ಷೇತ್ರದಲ್ಲಿ ಸಂಘಟನೆ ಮಾಡಿ ಭಿನ್ನಾಭಿಪ್ರಾಯ ಶಮನ ಮಾಡುವೆ. ಮುಂಬರುವ 2028ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಅವರ ಆಶೀರ್ವಾದ ಬೇಕಾಗಿದೆ. ಒಂದು ವೇಳೆ ಹೈಕಮಾಂಡ್ ಬದಲಾವಣೆ ಮಾಡಿದರೆ ನಾನು ಸಿದ್ಧ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ಇರುವ ಗೊಂದಲ ನಿವಾರಣೆಯಾಗಬೇಕು. ದೆಹಲಿಗೆ ಹೋಗಿರುವವರನ್ನು ಸಮಾಧಾನ ಮಾಡಬೇಕಾಗಿದೆ. ದಕ್ಷಿಣ ಭಾರತದ ಭೀಷ್ಮರಾಗಿರುವ ಯಡಿಯೂರಪ್ಪ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ವಿಜಯೇಂದ್ರ ಅವರು ಹೊಸದಾಗಿ ಅಧ್ಯಕ್ಷರಾಗಿದ್ದು, ಅನುಭವದ ಕೊರತೆಯಾಗಿದೆ. ಈ ಹಿನ್ನೆಲೆ ಯಡಿಯೂರಪ್ಪ ಮುಂದೆ ಬರಬೇಕು ಎಂದರು. ಇದನ್ನೂ ಓದಿ: ಫೆ.10ಕ್ಕೆ ಬಿಜೆಪಿ ಲಿಂಗಾಯತ ರೆಬೆಲ್ ನಾಯಕರ ಸಭೆ? – ಬೊಮ್ಮಾಯಿ ನೇತೃತ್ವದಲ್ಲಿ ಮೀಟಿಂಗ್

    ಜನಾರ್ದನ ರೆಡ್ದಿ ಬಂದ ಮೇಲೆ ಒಬ್ಬಂಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಬೇರೆ, ವೈಯಕ್ತಿಕ ಜೀವನವೇ ಬೇರೆ. ಈಗಾಗಲೇ ಇದರ ಬಗ್ಗೆ ಮಾತನಾಡಿರುವೆ. ಪದೇ ಪದೇ ಮಾತನಾಡುವುದು ಬೇಡ. ಕೋಲಾರ ಕಾಂಗ್ರೆಸ್ ನವರು ಸಂಪರ್ಕ ಮಾಡಿರುವ ಕುರಿತು ಮಾತನಾಡಿ, ಅಭಿಮಾನದಿಂದ ಮತ್ತು ನಮ್ಮ ಸಂಘಟನೆ ನೋಡಿ ಕರೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರು ವಾಪಸ್

  • ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟರಾ ಶ್ರೀರಾಮುಲು?

    ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟರಾ ಶ್ರೀರಾಮುಲು?

    – ಆಂಧ್ರದಿಂದ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಂತೆ ರಾಜ್ಯ ನಾಯಕರ ಮೂಲಕ ಸಂದೇಶ

    ಬಳ್ಳಾರಿ: ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡರೋ ಶ್ರೀರಾಮುಲು ಅವರನ್ನ ಸಮಾಧಾನ ಮಾಡಲು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಶ್ರೀರಾಮುಲು (Sriramulu) ಇದೀಗ ಹೊಸ ವರಸೆ ಶುರು ಮಾಡಿದ್ದು, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

    ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎಷ್ಟೇ ಕರೆ ಮಾಡಿ ಕರೆದರೂ ಪಕ್ಷದ ನಾಯಕರಿಂದ ಶ್ರೀರಾಮುಲು ದೂರವೇ ಉಳಿಯುತ್ತಿದ್ದಾರೆ. ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೇ ಇಲ್ಲ, ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಸೋತಿರೋ ಶ್ರೀರಾಮುಲು‌, ಜೆ.ಪಿ ನಡ್ಡಾ (JP Nadda), ಅಮಿತ್ ಶಾ (Amit Shah) ದೆಹಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆ ದೆಹಲಿ ಚುನಾವಣೆ ಮುಗಿದ ಬಳಿಕ ಹೈಕಮಾಂಡ್‌ ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್‌ ಥ್ಯಾಂಕ್ಸ್

    ಅಸ್ತಿತ್ವದ ಪ್ರಶ್ನೆ ಹಾಗೂ ಅಸ್ತಿತ್ವದ ಉಳಿವಿನ ಹೊರಾಟದಲ್ಲಿರುವ ರಾಮುಲುರಿಂದ ರಾಜ್ಯ ಸಭಾಸದಸ್ಯರನ್ನಾಗಿ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು, ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಬೇಡಿಕೆ ಇಡಲಿದ್ದಾರೆ. ಮೊನ್ನೆ ಆಂಧ್ರದ ರಾಜ್ಯಸಭೆ ಸದಸ್ಯ ವೈಎಸ್ಆರ್‌ಪಿ ಪಕ್ಷದ ವಿಜಯ ಸಾಯಿರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: Economic Survey 2025| ಜಿಡಿಪಿ 6.3-6.8% ನಿರೀಕ್ಷೆ – ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ? ಯಾವ ವಲಯದ ಸಾಧನೆ ಎಷ್ಟಿದೆ?

    ವಿಜಯ ಸಾಯಿ ರೆಡ್ಡಿಯವರ 4 ವರ್ಷದ ಅವಧಿ ಇನ್ನೂ ಬಾಕಿ ಇರೋ ಹಿನ್ನೆಲೆ ಆಂಧ್ರ ಕೋಟಾದಡಿ ರಾಜ್ಯಸಭೆ ಮಾಡುವಂತೆ ಮನವಿ ಮಾಡಲಿದ್ದಾರಂತೆ. ಈ ಬಗ್ಗೆ ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ನೀಡಿರುವ ರಾಮುಲು, ದೆಹಲಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: Maha Kumbh Mela| ಸನ್ಯಾಸಿನಿಯಾಗಲು ಹೊರಟ ಮಮತಾ ಕುಲಕರ್ಣಿ ಅಖಾಡದಿಂದಲೇ ಔಟ್‌