Tag: SriRamsena

  • ಕಾಂಗ್ರೆಸ್ ಸರ್ಕಾರ ಟೆರರಿಸ್ಟ್‌ಗಳನ್ನ ಬಚಾವ್‌ ಮಾಡ್ತಿದೆ – ಮುತಾಲಿಕ್ ಗಂಭೀರ ಆರೋಪ

    ಕಾಂಗ್ರೆಸ್ ಸರ್ಕಾರ ಟೆರರಿಸ್ಟ್‌ಗಳನ್ನ ಬಚಾವ್‌ ಮಾಡ್ತಿದೆ – ಮುತಾಲಿಕ್ ಗಂಭೀರ ಆರೋಪ

    ಬೆಂಗಳೂರು: ಕಾಂಗ್ರೆಸ್ ರಾಜ್ಯ ಸರ್ಕಾರದ (Congress Government) ವಿರುದ್ಧ ಸೋಮವಾರ ಶ್ರೀರಾಮಸೇನೆ ವತಿಯಿಂದ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ರಾಜ್ಯಪಾಲರಿಗೆ ದೂರು ನೀಡಿದರು. ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನ ವಾಪಸ್ ಪಡೆಯದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

    ಅಲ್ಲದೇ ಕಾಂಗ್ರೆಸ್ ಸರ್ಕಾರ ದ್ವೇಷ ಭಾವನೆ ಮೂಡಿಸುತ್ತಿದೆ. ನಿಷೇಧಿತ ಕಾಯ್ದೆಗಳನ್ನ ಮತ್ತೆ ಹಿಂಪಡೆಯುವುದು ಸರಿಯಲ್ಲ. ಹಾಗಾಗಿ ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನ ಹಿಂಪಡೆಯದಂತೆ ಆಗ್ರಹಿಸಿದರು. ಇದನ್ನೂ ಓದಿ: ಇದು ದರದ ಪ್ರಶ್ನೆ ಅಲ್ಲ, ಬೇರೆಯವರಿಗೆ ನಾವು ಮಾರುಕಟ್ಟೆ ಬಿಟ್ಟು ಕೊಟ್ಟಂತೆ: ಸೋಮಶೇಖರ ರೆಡ್ಡಿ

    ರಾಜ್ಯಪಾಲರ ಭೇಟಿ ಬಳಿಕ ಉಡುಪಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ (Udupi College Case) ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನ (Muslims) ಓಲೈಕೆ ಮಾಡುವ ಕೆಲಸ ಮಾಡ್ತಿದೆ. ಟೆರರಿಸ್ಟ್ಗಳನ್ನ ಬಚಾವ್ ಮಾಡೋ ಕೆಲಸ ಆಗ್ತಿದೆ. ಇಂತಹ ಪ್ರಕರಣಗಳಿಂದ ಮಹಿಳೆಯರು ಹೆದರುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಇದಕ್ಕೂ ಮುನ್ನ, ಮತಾಂತರ (Conversion) ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಮಸೂದೆ ಮಂಡನೆಯಾದ ಬಳಿಕ ರಾಜ್ಯಪಾಲರ ಅಂಕಿತ ಪಡೆಯಲು ಬರುತ್ತೆ. ಆಗ ಬಿಲ್ ಅನ್ನು ಮಾನ್ಯ ಮಾಡದಂತೆ ತಿಸ್ಕರಿಸಬೇಕು ಎಂದು ಕೇಳಿಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಮತಾಂತರ, ಗೋಹತ್ಯೆ ವಿಚಾರವಾಗಿ ಮಾತನಾಡಿದಾಗ ನಮಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ. ಮತಾಂತರದಿAದ ಮನೆ ಮನಗಳನ್ನ, ದೇಶವನ್ನ ಒಡೆಯುವ ಕೆಲಸ ಆಗ್ತಿದೆ. ಹಾಗಾಗಿ ಅದಕ್ಕೆ ಅವಕಾಶ ಕೊಡಬಾರದು. ಈ ಕಾನೂನು ವಾಪಾಸ್ ಪಡೆದ್ರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು

    ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು

    ಉಡುಪಿ: ಕಾರ್ಕಳದ ಸಚಿವ ವಿ. ಸುನಿಲ್ ಕುಮಾರ್ (Sunil kumar) ವಿರುದ್ಧ ಶ್ರೀರಾಮಸೇನೆ (SriRamSena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಬೇನಾಮಿ ಆಸ್ತಿ ಆರೋಪ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಚುನಾವಣೆ (Election) ಘೋಷಣೆ ಆಗುವ ಮೊದಲೇ ಕಾರ್ಕಳದಲ್ಲಿ ಮುತಾಲಿಕ್ ಮತ್ತು ಸುನಿಲ್ ಕುಮಾರ್ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಎರಡು ತಿಂಗಳಿನಿಂದ ಮುತಾಲಿಕ್ ನಿರಂತರವಾಗಿ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಕಲಿ ಹಿಂದುತ್ವ, ಭ್ರಷ್ಟಾಚಾರ ಅಂತಾ ಆರೋಪಿಸುತ್ತಿದ್ದವರು ಇದೀಗ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

    ಉಡುಪಿ (Udupi) ಜಿಲ್ಲೆ ಹೆಬ್ರಿ ತಾಲೂಕಿನ ಶಿವಪುರ ಕೆರೆಕಟ್ಟೆ ಗ್ರಾಮದಲ್ಲಿ 67 ಎಕರೆ ಕೃಷಿ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದಾರೆ. ಮುಂದೆ ಅದು ಕೈಗಾರಿಕಾ ಪ್ರದೇಶವಾಗಿ ಭೂ ಪರಿವರ್ತನೆ ಮಾಡಿ 4-5 ಪಟ್ಟು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡುತ್ತದೆ. 4 ಚಿಲ್ಲರೆ ಕೋಟಿಗೆ ಖರೀದಿಸುವ ಮೂಲಕ ಜಮೀನು ಹೊಂದಿರುವ ಬಡ ರೈತರಿಗೂ ಅನ್ಯಾಯ ಆಗಿದೆ. ಇದರಲ್ಲಿ ಶಾಸಕ, ರಾಜ್ಯದ ಪ್ರಭಾವಿ ಮಂತ್ರಿಗಳ ಕೈವಾಡ ಇದೆ ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ.

    ವಿದ್ಯಾ ಸುವರ್ಣ- ಗಜಾನಂದ ದಂಪತಿ ಕಾರ್ಕಳದ ಬಿಜೆಪಿಯ ಕಾರ್ಯಕರ್ತರು. ಹೆಬ್ರಿ ತಾಲೂಕಿನಲ್ಲಿ ಕಡಿಮೆ ಹಣ ಕೊಟ್ಟು ರೈತರ ಕೃಷಿ ಭೂಮಿಯನ್ನು ಈ ಇಬ್ಬರು ಖರೀದಿ ಮಾಡಿದ್ದಾರೆ. ಸ್ಥಳೀಯ ಶಾಸಕ ಪ್ರಭಾವಿ ಮಂತ್ರಿ ಈ ಅವ್ಯವಹಾರದ ಹಿಂದೆ ಇದ್ದಾರೆ ಎಂದು ಸುನಿಲ್ ಕುಮಾರ್ ಹೆಸರು ಹೇಳದೇ ಆರೋಪಿಸಿದ್ದಾರೆ. ಆದರೆ ದೂರಿನಲ್ಲಿ ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಿತ್ಯಾನಂದನಿಗೆ ಭಾರತದಲ್ಲಿರೋ ಹಿಂದೂ ವಿರೋಧಿಗಳಿಂದ ಕಿರುಕುಳ- ಕ್ರಮಕ್ಕೆ ಶಿಷ್ಯೆ ಒತ್ತಾಯ

    ಜಿಲ್ಲಾಧಿಕಾರಿ ಕೂರ್ಮರಾವ್ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ ಮತದಾರರು ಒಂದು ವಾರದ ಒಳಗೆ ಈ ಬಗ್ಗೆ ತನಿಖೆ ನಡೆಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡ್ಬೇಕು- ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡ್ಬೇಕು- ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    ಕಲಬುರಗಿ: ಇನ್ಮುಂದೆ ಪ್ರತಿಯೊಬ್ಬ ಹಿಂದೂ (Hindu) ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ತಲ್ವಾರ್ (Talwar) ಇಡಬೇಕು ಎಂದು ಶ್ರೀರಾಮಸೇನೆ (SriRamsena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಕಾಣೋ ರೀತಿಯಲ್ಲಿ ಇಡಬೇಕು. ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡ್ಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    ಪೊಲೀಸರು (Police) ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡ್ತಾರೆ ಹೊರತು ಎಫ್‌ಐಆರ್‌ಗೆ (FIR) ಪೂಜೆ ಮಾಡಲ್ಲ. ಮನೆಯಲ್ಲಿ ಒಂದು ತಲ್ವಾರ್ ಇಡೋದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತಾ ಹೆದರಿಸಿದ್ರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ಹಾಗೆಂದು ತಲ್ವಾರ್ ಇಡೋದು ಯಾರನ್ನಾದರೂ ಹೊಡೆಯೋಕೆ ಮಾತ್ರವಲ್ಲ, ಧರ್ಮದ ರಕ್ಷಣೆ ಹಾಗೂ ದೇಶ ರಕ್ಷಣೆಗಾಗಿ ತಲ್ವಾರ್ ಇಡಬೇಕು ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದೂ ಕಾರ್ಯಕರ್ತರ ಬಂಧನ – BJP ವಿರುದ್ಧ ಮುತಾಲಿಕ್ ಆಕ್ರೋಶ

    ಹಿಂದೂ ಕಾರ್ಯಕರ್ತರ ಬಂಧನ – BJP ವಿರುದ್ಧ ಮುತಾಲಿಕ್ ಆಕ್ರೋಶ

    ಧಾರವಾಡ: ಶಾಸಕ ಗರುಡಾಚಾರ್ ಅವರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಶ್ರೀರಾಮ ಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ತಡರಾತ್ರಿ ಒಂದು ಗಂಟೆಗೆ ಪುನೀತ್ ಕೆರೆ ಹಳ್ಳಿ, ತೇಜಸ್ ಗೌಡ ಎನ್ನುವ ಭಜರಂಗದಳದ (Bajrang Dal) ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತರನ್ನು ರೌಡಿಗಳ ರೀತಿಯಲ್ಲಿ ಬಂಧನ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಅದೂ ಸಹ ಬಿಜೆಪಿ ಸರ್ಕಾರದಲ್ಲೇ (BJP Government) ಹಿಂದೂ ಕಾರ್ಯಕರ್ತರನ್ನು ಈ ರೀತಿ ಬಂಧಿಸಿದ್ದು ಸರಿಯಲ್ಲ. ಅವರೇನು ರೌಡಿಗಳಾ? ಗೂಂಡಾಗಳಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್

    ಭಜರಂಗದಳದ ಕಾರ್ಯಕರ್ತರನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ನಿಮಗೆ ಅಧಿಕಾರ ಸಿಕ್ಕ ತಕ್ಷಣ ಸೊಕ್ಕಿನಿಂದ ಈ ರೀತಿ ಮಾಡುವುದು ಸರಿಯಲ್ಲ. ನೀವು ಅಧಿಕಾರಕ್ಕೆ ಬಂದಿದ್ದೇ ಹಿಂದೂಗಳಿಂದ. ಬಂಧನವಾದ ಹಿಂದೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು

    ದೇವಸ್ಥಾನದ 200 ಮೀಟರ್ ಒಳಗಡೆ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು. ಮುಸ್ಲಿಮರು ಏಕದೇವೋಪಾಸಕರು. ಯಾರು ಬಹುದೇವೋಪಾಸಕರು ಇದ್ದಾರೋ ಅವರನ್ನು ಕಾಫಿರ್ ಎನ್ನುತ್ತಾರೆ. ಮುಸ್ಲಿಮರು ದೇವರನ್ನು ಪೂಜೆ ಮಾಡುವವರಲ್ಲ. ದೇವಸ್ಥಾನವನ್ನು ಒಡೆಯುವವರು. ಬಿಜೆಪಿ ಈ ರೀತಿ ದುರ್ವರ್ತನೆ ತೋರುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ

    ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ

    ಶಿವಮೊಗ್ಗ: ಮುಸ್ಲಿಮರ ಮತಕ್ಕಾಗಿ (Muslims Vote) ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಎಂದು ಕಿಡಿ ಕಾರಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಹಿಂದೂ ಎಂಬ ಪದ ಜಗತ್ತಿನ ತುಂಬ ಹರಡಿಕೊಂಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೂ, ಹಿಂದೂ ಮುಸ್ಲಿಂ ಎಂದು ಕರೆಯುತ್ತಾರೆ. ಹೀಗಿರುವಾಗ ಜಾರಕಿಹೊಳಿ (SatishJarkiholi) ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶನ ಮಾಡಿದೆ ಎಂದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿಪಡೆ- ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದು ಅಭಿಯಾನ

    ಹಿಂದೂ ಪದ ಅಶ್ಲೀಲ ಅಂತಾ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ಹಾಗೂ ಜಾರಕಿಹೊಳಿ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಇಡೀ ದೇಶದಲ್ಲಿ ಹಿಂದೂಗಳು ಇವರನ್ನು ತುಳಿದಿದ್ದಾರೆ. ಇದೇ ರೀತಿ ಮಾತನಾಡಿದರೆ ಇನ್ನು ಪಕ್ಕಕ್ಕೆ ಹೋಗುತ್ತಾರೆ. ಮುಸ್ಲಿಮರ ಮತಕ್ಕಾಗಿ ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ. ಹಿಂದೂ ಎಂದರೆ ಒಂದು ಜೀವನ ಕಲೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾದರೆ ಸುಪ್ರೀಂ ಕೋರ್ಟ್ (Supreme Court) ಮೂರ್ಖ ಅಂತಾ ಹೇಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಬ್ಬ ಹಿಂದೂವಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾನೂ ಒಪ್ಪಲ್ಲ: ಡಿಕೆಶಿ

    400 ವರ್ಷಗಳ ಹಿಂದೆಯೇ ಹಿಂದೂ ಶಬ್ದದ ಉಲ್ಲೇಖವಿದೆ. ಹಿಂದೂ ಧರ್ಮ ಒಡೆಯುವ, ಹಿಂದು ಧರ್ಮವನ್ನು ಕೆಟ್ಟದಾಗಿ ಬಿಂಬಿಸುವ ಜಾರಕಿಹೊಳಿ ಒಬ್ಬ ನಾಸ್ತಿಕ. ದೇವರು, ಧರ್ಮ ಇವರಿಗೆ ಬೇಕಿಲ್ಲ. ಕೇವಲ ಮತಗಳು ಮಾತ್ರ ಬೇಕಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]