Tag: Srirama

  • Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

    Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

    ಅಯೋಧ್ಯೆ: ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಇನ್ನು 18 ದಿನ ಮಾತ್ರ ಉಳಿದಿದೆ. ಇಡೀ ಅಯೋಧ್ಯಾ ನಗರಿ ಸರ್ವಾಂಗ ಸುಂದರವಾಗಿ ರೆಡಿಯಾಗ್ತಿದೆ. ಮಂದಿರದ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಗ್ರೌಂಡ್ ಫ್ಲೋರ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಈಗಾಗಲೇ ಮಂದಿರ ರೂಪ ಸಿಕ್ಕಿದೆ. ಈ ಸಂಬಂಧ ಶ್ರೀರಾಮಮಂದಿರ ತೀರ್ಥ ಟ್ರಸ್ಟ್ ಮಂದಿರದ ಪ್ರಮುಖ ವಿಶೇಷಗಳನ್ನು ಹಂಚಿಕೊಂಡಿದೆ.

    ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಎಕ್ಸ್ ಮಾಡಲಾಗಿದೆ. ಈ ಮೂಲಕ ಪ್ರವೇಶ ದ್ವಾರದಲ್ಲಿ ಆನೆ (Elephant), ಸಿಂಹ (Lion), ಹನುಮಾನ್ (hanuman) ಮತ್ತು ಗರುಡ ಮೂರ್ತಿಗಳ (Garuda)  ಫೋಟೋ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‍ಪುರ ಗ್ರಾಮದ ತಿಳಿ ಗುಲಾಬಿ ಬಣ್ಣದ ಮರಳುಗಲ್ಲಿನಿಂದ ಮಾಡಲಾಗಿದೆ ಎಂದು ಎಕ್ಸ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನದವರೆಗೆ ಯುಪಿ ಸರ್ಕಾರಿ ಬಸ್‌ಗಳಲ್ಲಿ ರಾಮ ಭಜನೆ ಪ್ರಸಾರ

    ಪೂರ್ವ ದಿಕ್ಕಿನಲ್ಲಿರುವ ಮಂದಿರದ ಪ್ರಧಾನ ಪ್ರವೇಶದ್ವಾರವಾದ ಸಿಂಹದ್ವಾರವನ್ನು ಅನಾವರಣ ಮಾಡಿದೆ. ಯಾರೇ ಆಗಲಿ ಈ ಸಿಂಹದ್ವಾರದ ಮೂಲಕ ಮಂದಿರ ಪ್ರವೇಶಿಸಬೇಕು. ಇದಕ್ಕೆ 32 ಮೆಟ್ಟಿಲುಗಳಿವೆ. ಮಂದಿರದ ಸನಿಹದಲ್ಲೇ ಇರುವ ಪುರಾತನ ಸೀತಾಬಾವಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಇದ್ದ ಬಾಲರಾಮನ ದರ್ಶನದ ಅವಧಿಯನ್ನು ವಿಸ್ತರಿಸಲು ಟ್ರಸ್ಟ್ ಮುಂದಾಗಿದೆ. ಹೀಗಾಗಿ ತಂಪಾದ ಬೆಳದಿಂಗಳಲ್ಲೂ ರಾಮ್‍ಲಲ್ಲಾ ದರ್ಶನ ಪಡೆಯುವ ಸೌಭಾಗ್ಯ ಭಕ್ತರಿಗೆ ಸಿಗಲಿದೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!

    ಜೊತೆಗೆ ಬಾಲರಾಮನಿಗೆ ಮಂಗಳ, ಶಯನ ಆರತಿಗಳನ್ನು ಆರಂಭಿಸಲಾಗುತ್ತದೆ. ಇದೇ ವೇಳೆ ರಾಮಮಂದಿರದ ಭದ್ರತೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ. ಮಂದಿರ ಲೋಕಾರ್ಪಣೆ ದಿನ ಉತ್ತರಪ್ರದೇಶ ಪೊಲೀಸರು, ಪ್ಯಾರಾಮಿಲಿಟರಿ ಸೇರಿ 11ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಜೊತೆಗೆ ಹೆಚ್ಚಿನ ನಿಗಾವಹಿಸಲು, ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡಲು ಎಐ ಟೆಕ್ನಾಲಜಿ ಬಳಸಿಕೊಳ್ಳಲಾಗುತ್ತದೆ.

    ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನ ಮಂದಿರಕ್ಕೆ ಬರುವ ಭಕ್ತರಿಗೆ ಏಲಕ್ಕಿ ಮತ್ತು ಸಕ್ಕರೆಯಿಂದ ತಯಾರಿಸಿದ ಪ್ರಸಾದ ವಿತರಿಸಲು ದೇಗುಲದ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದಕ್ಕಾಗಿ 5 ಲಕ್ಷ ಪ್ರಸಾದ ಪಾಕೆಟ್‍ಗಳನ್ನು ಸಿದ್ದ ಮಾಡಲಾಗುತ್ತಿದೆ.

  • ನಾನೂ ರಾಮಭಕ್ತ, ನನ್ನನ್ನು ಬಂಧಿಸಿ..- ಬಿಜೆಪಿ ನಾಯಕರ ಪ್ರೊಫೈಲ್ ಪಿಕ್ ಚೇಂಜ್

    ನಾನೂ ರಾಮಭಕ್ತ, ನನ್ನನ್ನು ಬಂಧಿಸಿ..- ಬಿಜೆಪಿ ನಾಯಕರ ಪ್ರೊಫೈಲ್ ಪಿಕ್ ಚೇಂಜ್

    ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ನಾಯಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

    ಸದ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕರು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್ ಪಿಕ್ (Profile Pic) ಬದಲಾಯಿಸಿಕೊಂಡಿದ್ದಾರೆ. ನಾನೂ ರಾಮಭಕ್ತ ನನ್ನನ್ನು ಬಂಧಿಸಿ ಸಿದ್ದರಾಮಯ್ಯನವರೇ (Siddaramaiah) ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ‌

    ಹುಬ್ಬಳ್ಳಿ ಕರಸೇವಕನ (Hubballi Karasevaka) ಬಂಧನ ಬೆನ್ನಲ್ಲೇ ಈಗ ಸಾಮಾಜಿಕ ಜಾಲತಾಣದಲ್ಲಿ ರಾಮ ಹನುಮ ಪೋಸ್ಟರ್ ಜೊತೆಗೆ ನಾನು ರಾಮಭಕ್ತ ನನ್ನನ್ನು ಬಂಧಿಸಿ ಸಿದ್ದರಾಮಯ್ಯನವರೇ ಅಂತಾ ಪೋಸ್ಟರ್ ವೈರಲ್ ಆಗುತ್ತಿದೆ. ಬಿಜೆಪಿ ಮುಖಂಡರು ಸೇರಿದಂತೆ ಹಿಂದೂ ಸಂಘಟನೆಗಳಿಂದ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಈ ಮೂಲಕ ಕರಸೇವಕನ ಬಂಧನದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    ತಮ್ಮ ಪ್ರೊಫೈಲ್ ಪಿಕ್ ಬದಲಾವಣೆ ಮಾಡಿರುವ ಬಿಜೆಪಿ ನಾಯಕರು ಶ್ರೀರಾಮಚಂದ್ರನ ಫೋಟೋವಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!

  • ಮೋದಿ ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ: ಯೋಗಿ ಆದಿತ್ಯನಾಥ್‌

    ಮೋದಿ ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ: ಯೋಗಿ ಆದಿತ್ಯನಾಥ್‌

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದರು.

    ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯನ್ನು ಹಾಡಿ ಹೊಗಳಿದರು. ಜನವರಿ 22 ರಂದು ಭಗವಾನ್ ಶ್ರೀರಾಮನು ತನ್ನ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಸೀನನಾಗಲಿದ್ದಾನೆ. ಈ ಮೂಲಕ ಸುಮಾರು 500 ವರ್ಷಗಳ ಕಾಯುವಿಕೆ ಕೊನೆಗೊಳ್ಳಲಿದೆ ಎಂದರು.

    ಭಗವಂತನ ಆಗಮನದ ಮೊದಲು ಅಯೋಧ್ಯೆಯನ್ನು (Ayodhya Ram Mandir) ವಿಶ್ವದ ಅತ್ಯಂತ ಸುಂದರವಾದ ನಗರವನ್ನಾಗಿ ಸ್ಥಾಪಿಸಲು ಪ್ರಧಾನಿ ಸಂಕಲ್ಪ ಮಾಡಿದ್ದರು. ಅದರಂತೆ ಇಂದು ವಿವಿಧ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಇಂದು ಅಯೋಧ್ಯೆಯ ಜನರು ಪ್ರಧಾನಿಯನ್ನು ಸ್ವಾಗತಿಸಿರುವ ರೀತಿ ನಾವೆಲ್ಲರೂ ನವ ಭಾರತದ ಹೊಸ ಅಯೋಧ್ಯೆಯನ್ನು ನೋಡುವಂತೆ ಮಾಡುತ್ತದೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮೋದಿಯವರು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಅಯೋಧ್ಯೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳುತ್ತಾ ಯೋಗಿ ಆದಿತ್ಯನಾಥ್‌ ಅವರು ಪ್ರಧಾನಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಇದನ್ನೂ ಓದಿ: Modi In Ayodhya: ಪ್ರಧಾನಿ ಮೋದಿಯಿಂದ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ

    ಇಂದು ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿರುವ ಪ್ರಧಾನಿ ಮೋದಿಯವರು ಮೊದಲು ರೋಡ್‌ ಶೋ ನಡೆಸಿದರು. ಬಳಿಕ ರೈಲ್ವೆ ನಿಲ್ದಾಣ ಉದ್ಘಾಟನೆ ಮಾಡಿದರು. ಇದೇ ವೇಳೆ ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿದರು. ಅದಾದ ಬಳಿಕ ವಿಮಾನ ನಿಲ್ದಾಣ ಉದ್ಘಾಟಿಸಿದರು.  ಇದನ್ನೂ ಓದಿ:  ಅಯೋಧ್ಯೆಯಲ್ಲಿ ಮಕ್ಕಳಿಬ್ಬರ ಭೇಟಿಯಾಗಿ ಸೆಲ್ಫಿ, ಆಟೋಗ್ರಾಫ್‌ ನೀಡಿದ ಪ್ರಧಾನಿ

  • ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್‌ ರಾವತ್

    ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್‌ ರಾವತ್

    ಮುಂಬೈ: ಬಿಜೆಪಿಯು (BJP) ಚುನಾವಣೆಗೆ ಭಗವಾನ್ ರಾಮನೇ (Lord Rama) ನಮ್ಮ ಅಭ್ಯರ್ಥಿ ಎಂದು ಘೋಷಿಸುವುದು ಮಾತ್ರ ಉಳಿದಿದೆ ಎಂದು ಹೇಳುವ ಮೂಲಕ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ (Sanjay Raut) ಟೀಕಿಸಿದ್ದಾರೆ.

    ಅಯೋಧ್ಯೆಯ ರಾಮಜನ್ಮಭೂಮಿ (Ayodhya Ram Mandir) ದೇಗುಲದ ಉದ್ಘಾಟನಾ ಸಮಾರಂಭದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸದ್ಯ ಬಿಜೆಪಿಯವರು ರಾಮನೇ ನಮ್ಮ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದು ಒಂದೇ ಬಾಕಿಯಿರುವುದು ಎಂದು ಅವರು ವಾಗ್ದಾಳಿಗಳನ್ನು ನಡೆಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ (Congress) ಝೀರೋದಿಂದ ಆರಂಭವಾಗಬೇಕು ಎಂಬ ತಮ್ಮ ಮೇಲಿನ ಆರೋಪದ ಕುರಿತು ಮಾತನಾಡಿ, ಕಾಂಗ್ರೆಸ್ ಶೂನ್ಯ ಎಂದು ನಾನು ಹೇಳಿಲ್ಲ. ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಒಬ್ಬನೇ ಒಬ್ಬ ಸಂಸದ ಇಲ್ಲ. ನಮ್ಮಲ್ಲಿ 18 ಸಂಸದರಿದ್ದು, ಅದರಲ್ಲಿ ಕೆಲವರು ಹೋಗಿದ್ದಾರೆ. ಈಗ ನಮ್ಮಲ್ಲಿ 6 ಸಂಸದರಿದ್ದಾರೆ ಎಂದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ನಮ್ಮ ಮೈತ್ರಿ ಕಾಂಗ್ರೆಸ್‌ನೊಂದಿಗೆ ಇದೆ ಮತ್ತು ಮಹಾ ವಿಕಾಸ್ ಅಘಾಡಿ ಸುಮಾರು 40 ಸ್ಥಾನಗಳನ್ನು ಗೆಲ್ಲುತ್ತಾರೆ. ಇನ್ನು ಬಿಜೆಪಿಗೆ ಗೆಲ್ಲಲು ಇವಿಎಂ (EVM) ಬೇಕು, ಅವರಿಗೆ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಇವಿಎಂ ಜೊತೆ ಅವರ ಮೈತ್ರಿ ಇದೆ ಎಂದು ಸಂಜಯ್‌ ರಾವತ್‌ ಟಾಂಗ್‌ ಕೊಟ್ಟರು.

  • ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ಜಮ್ಮು-ಕಾಶ್ಮೀರ: ಅಯೋಧ್ಯೆ ರಾಮ ಮಂದಿರವು (Ayodhya Ram Mandir) ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುತ್ತಿದೆ. ಈ ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಅಯೋಧ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಕಠಿಣ ಪರಿಶ್ರಮದಿಂದ ಇಂದು ರಾಮಮಂದಿರವು (Ayodhya Ram Temple) ತಲೆ ಎತ್ತಿ ನಿಂತಿದೆ. ಭಗವಾನ್ ರಾಮನು ಹಿಂದೂಗಳಿಗೆ ಮಾತ್ರ ಸೇರಿದವರಲ್ಲ, ಅವರು ಪ್ರಪಂಚದ ಎಲ್ಲರಿಗೂ ಸೇರಿದವರು ಎಂದು ಹೇಳಲು ಇಚ್ಛಿಸುತ್ತೇನೆ. ಪುಸ್ತಕಗಳಲ್ಲಿಯೂ ಇದನ್ನೇ ಬರೆಯಲಾಗಿದೆ ಎಂದು ಹೇಳಿದರು.

    ಭಗವಾನ್‌ ರಾಮ ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ಮಾತನಾಡಿದ್ದಾರೆ. ಅವರು ಯಾವತ್ತೂ ಭಾಷೆ ಹಾಗೂ ಧರ್ಮದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಪ್ರೀತಿ ಹಾಗೂ ಒಗ್ಗಟ್ಟಿನಿಂದ ಬಾಳಬೇಕು ಎಂದು ಇಡೀ ಜಗತ್ತಿಗೆ ಸಾರಿದವರಾಗಿದ್ದಾರೆ ಎಂದು ಫಾರೂಕ್‌ ಅಬ್ದುಲ್ಲಾ ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಹೀಗಾಗಿ ಅವರು ಜಗತ್ತಿಗೆ ಸಾರಿದ್ದ ಆ ಸಹೋದರತ್ವದ ಸಂದೇಶವನ್ನು ಕಾಪಾಡಿಕೊಂಡು ಅದರಂತೆ ಬದುಕುವಂತೆ ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದರು.

  • ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

    ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

    ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ (Ayodhya Ram Mandir) ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹಲವು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

    2024ರ ಜನವರಿ 22 ರಂದು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸುಮಾರು 11,100 ಕೋಟಿಯ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಮೋದಿ (Narendra Modi) ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.

    ನಾಳೆಯ ಕಾರ್ಯಕ್ರಮಗಳೇನು..?: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ 10:45 ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದು, ಮಧ್ಯಾಹ್ನ 2:15 ದೆಹಲಿಗೆ ನಿರ್ಗಮಿಸಲಿದ್ದಾರೆ. ಈ ನಡುವೆ ಅಯೋಧ್ಯೆಯಲ್ಲಿ ಪ್ರಧಾನಿಯವರು ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: Ayodhya Ram Mandir: ನೂತನ ವಿಮಾನ ನಿಲ್ದಾಣಕ್ಕೆ ʼಮಹರ್ಷಿ ವಾಲ್ಮೀಕಿʼ ಹೆಸರಿಡಲು ನಿರ್ಧಾರ

    ಅಯೋಧೆಗೆ ಆಗಮಿಸಲಿರುವ ಮೋದಿಯವರು ಮೊದಲು ಅಂದರೆ ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ (Railway Station) ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ 2 ಹೊಸ ಅಮೃತ್ ಭಾರತ್ ರೈಲುಗಳು ಮತ್ತು 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಅಯೋಧ್ಯೆ (Ayodhya) ನಗರದಲ್ಲಿ 4 ಹೊಸ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಅಯೋಧ್ಯೆಯಲ್ಲಿ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು ಹಾಕಲಿದ್ದಾರೆ. ಇನ್ನು 12:15 ಕ್ಕೆ ವಿಮಾನ ನಿಲ್ದಾಣದ (Ayodhya Airport) ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ಬಳಿಕ ರೋಡ್ ಶೋ ನಡೆಸಲಿದ್ದಾರೆ. ವಿಮಾನ ನಿಲ್ದಾಣದಿಂದ ಅಯೋಧ್ಯೆ ನಗರದೊಳಗೆ ಒಟ್ಟು 15 ಕಿಮೀ ರೋಡ್ ಶೋ (Road Show) ನಡೆಯಲಿದೆ. ಬಳಿ ಅವರು ದೆಹಲಿಗೆ ವಾಪಸ್ಸಾಗಲಿದ್ದಾರೆ.

    ಬಿಗಿ ಭದ್ರತೆ: ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಖಾಕಿ ಕಣ್ಗಾವಲು ಇರಿಸಿದೆ. 5000 ಕ್ಕಿಂತ‌ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಎನ್‌ಎಸ್‌ಜಿ, ಸಿಆರ್‌ಪಿಎಫ್, ರ‍್ಯಾಪಿಡ್ ಆಕ್ಷನ್ ಫೋರ್ಸ್ ಸೇರಿ ಉತ್ತರ ಪ್ರದೇಶ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

    17 ಪೊಲೀಸ್ ವರಿಷ್ಠಾಧಿಕಾರಿಗಳು, 40 ಹೆಚ್ಚುವರಿ ಎಸ್‌ಪಿಗಳು ಮತ್ತು 82 ವೃತ್ತ ಅಧಿಕಾರಿಗಳು 90 ಇನ್ಸ್‌ಪೆಕ್ಟರ್‌ಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇನ್ನು ಟ್ರಾಫಿಕ್ ನಿಯಂತ್ರಣಕ್ಕೆ 75 ಸಿಬ್ಬಂದಿಯನ್ನು ಒಳಗೊಂಡ ಟ್ರಾಫಿಕ್ ಪೊಲೀಸರ ಪ್ರತ್ಯೇಕ ತಂಡವನ್ನು ನಿಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

  • ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

    ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

    ಅಯೋಧ್ಯೆ: ನೂತನವಾಗಿ ನಿರ್ಮಾಣವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು, ಇಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆಯಲಿದೆ. ಇದರಲ್ಲಿ ಬಹುಮತ ಸಿಗುವ ಮೂರ್ತಿ ಮಂದಿರದ ಗರ್ಭಗುಡಿ ಸೇರಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಲಿದ್ದಾರೆ.

    ಕರ್ನಾಟಕದ ಇಬ್ಬರು, ರಾಜಸ್ಥಾನದ ಒಬ್ಬರು!: ಶ್ರೀರಾಮನ ಮೂರ್ತಿಯ ಕೆತ್ತನೆಯ ಜವಾಬ್ದಾರಿಯನ್ನು ಮೂವರಿಗೆ ವಹಿಸಲಾಗಿತ್ತು. ಇವರಲ್ಲಿ ಇಬ್ಬರು ಶಿಲ್ಪಿಗಳು ಕರ್ನಾಟಕದವರು, ಇನ್ನೊಬ್ಬರು ರಾಜಸ್ಥಾನದವರು. ಮೈಸೂರಿನ ಅರುಣ್‌ ಯೋಗಿರಾಜ್‌, ಬೆಂಗಳೂರಿನ ಜಿ.ಎಲ್‌ ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಈಗಾಗಲೇ ಮೂರ್ತಿ ಕೆತ್ತನೆ ಕಾರ್ಯ ಮುಗಿಸಿದ್ದಾರೆ. ಈ ಮೂರು ಮೂರ್ತಿಗಳಲ್ಲಿ ಅತ್ಯುತ್ತಮ ವಿನ್ಯಾಸ ಎಂದು ಟ್ರಸ್ಟ್‌ ಸದಸ್ಯರು ಪರಿಗಣಿಸುವ ಒಂದು ಮೂರ್ತಿ ರಾಮಮಂದಿರದ ಗರ್ಭಗುಡಿಯಲ್ಲಿ ಜನವರಿ 22ರಂದು ಪ್ರತಿಷ್ಠಾಪನೆಯಾಗಲಿದೆ. ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ. ಬಿಲ್ಲು ಬಾಣ ಹಿಡಿದಿರುವ ರಾಮನ ಮೂರ್ತಿ ಕೆತ್ತನೆಗೆ 6 ತಿಂಗಳು ಬೇಕಾಯಿತು ಎಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

    5 ವರ್ಷದ ಬಾಲ ರಾಮನ ವಿಗ್ರಹ: 5 ವರ್ಷದ ಬಾಲರಾಮನ ಮುಗ್ಧತೆಯನ್ನು ಬಿಂಬಿಸುವ ವಿಗ್ರಹವನ್ನು ನಿರ್ಮಾಣ ಮಾಡಲು ಹೇಳಿದ್ದೆವು. 51 ಇಂಚು ಎತ್ತರದ ವಿಗ್ರಹದಲ್ಲಿ ದೈವಿಕತೆ ಹಾಗೂ ಮಗುವಿನಂತಹ ಮುಗ್ಧತೆ ಇರುವ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದರು. ಇದನ್ನೂ ಓದಿ: ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ

    ದೇವಾಲಯದ ನಿರ್ಮಾಣ, ಸಿದ್ಧತೆ ಪರಿಶೀಲನೆ : ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮಜನ್ಮಭೂಮಿ ಪಥ ಹಾಗೂ ದೇಗುಲ ಸಂಕೀರ್ಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಪರಿಶೀಲನೆ ನಡೆಸಿದರು.

  • ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ಅದ್ಧೂರಿಯಾಗಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇಶದ ಇತಿಹಾಸದಲ್ಲಿ ಸುವರ್ಣಕ್ಷಾರಗಳಿಂದ ಬರೆದಿಡುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಕಲ ತಯಾರಿಗಳು ಆರಂಭಗೊಂಡಿದೆ. ಶ್ರೀರಾಮ (Srirama) ಮಂದಿರ ಅಂತಿಮ ಹಂತದಲ್ಲಿ ಸಿದ್ದವಾಗುತ್ತಿದ್ದರೇ ಇತ್ತ ಅಯೋಧ್ಯೆಗೆ ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

    ಹೌದು ರಾಮಲಲ್ಲಾ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲು ಲಕ್ಷಾಂತರ ಜನರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಈ ಜನರಿಗೆ ಸಾರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಯೋಧ್ಯೆಗೆ ಒಂದು ಸಾವಿರ ರೈಲುಗಳು ಸಂಪರ್ಕ ಕಲ್ಪಿಸಲಾಗುತ್ತಿದೆ. ಜನವರಿ 19 ರಿಂದಲೇ ರೈಲು ಸಂಚಾರ ಶುರುವಾಗಲಿದ್ದು ನೂರು ದಿನಗಳ ಕಾಲ ಈ ವಿಶೇಷ ವ್ಯವಸ್ಥೆ ಇರಲಿದೆ.

    ರೈಲಿನ (Train) ಜೊತೆಗೆ ವಿಮಾನಯಾನಕ್ಕೂ (Flight) ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಪರೀಕ್ಷೆ ಪೂರ್ಣಗೊಳ್ಳಲಿದೆ. ಜನವರಿ 6 ರಿಂದ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ನಿರೀಕ್ಷೆಗಳಿದೆ. ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ದಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು ಹೆಚ್ಚಿನ ವಿಮಾನಗಳ ಸಂರ್ಪಕಿಸುವ ಮೂಲಕ ಜನರಿಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ

    ಭದ್ರತೆಗೆ ಆದ್ಯತೆ: ಲಕ್ಷಾಂತರ ಜನರು ಸೇರುವ ಕಾರ್ಯಕ್ರಮಕ್ಕೆ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಕೇವಲ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಮಾತ್ತವಲ್ಲದೇ ತಂತ್ರಜ್ಞಾನ ಬಳಸಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಎಲ್ಲ ಪ್ರಮುಖ ಸ್ಥಳಗಳಲ್ಲಿ ಹೆಚ್.ಡಿ ಕ್ವಾಲಿಟಿ ಸಿಸಿಟಿವಿ ಕ್ಯಾಮೇರಾಗಳನ್ನು ಅಳವಡಿಸಲಾಗುತ್ತಿದೆ. ಇಲ್ಲದಲ್ಲದೇ ಎಐ ತಂತ್ರಜ್ಞಾನ ಹೊಂದಿರುವ ತಂತ್ರಜ್ಞಾನ ಬಳಸಲಾಗುತ್ತದೆ. ಇದಲ್ಲದೇ ಆಂಟಿ ಡ್ರೋನ್ ಸಿಸ್ಟಮ್ ಕೂಡಾ ಅಳವಡಿಸಲಾಗುತ್ತಿದೆ.

    ರಾಜ್ಯದಿಂದ ಘಂಟೆ ಮತ್ತು ಪೂಜಾ ಸಾಮಗ್ರಿ ಸಮರ್ಪಣೆ; ಅಯೋಧ್ಯೆಯ ಶ್ರೀರಾಮ ಮಂದಿರಕ್ಕೂ ಕರ್ನಾಟಕಕ್ಕೂ ವಿಶೇಷವಾದ ಸಂಬಂಧಗಳಿದೆ. ಕರ್ನಾಟಕದಿಂದ ಕಳುಹಿಸಿರುವ ಕಲ್ಲಿನಿಂದ ಶ್ರೀರಾಮಲಲ್ಲಾ ಮೂರ್ತಿಗಳ ಪೈಕಿ ಒಂದನ್ನು ಕೆತ್ತಲಾಗುತ್ತಿದೆ. ಅದು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಸಾಧ್ಯತೆ ಇದೆ. ಈ ನಡುವೆ ರಾಜ್ಯದಿಂದ ಹಲವು ರೀತಿಯಲ್ಲಿ ಸಹಕಾರ ನೀಡಲಾಗುತ್ತಿದೆ. ಈಗ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದಾರೆ. ದೇವಸ್ಥಾನಕ್ಕೆ ಘಂಟೆ ಮತ್ತು ಪೂಜಾ ಸಾಮಾಗ್ರಿಗಳನ್ನ ಸಮರ್ಪಣೆ ಮಾಡಿದ್ದಾರೆ. 2.5 ಟನ್ ತೂಕದ ಘಂಟೆಗಳನ್ನ ಸಮರ್ಪಣೆ ಮಾಡಿದ್ದು. 30 ಸಣ್ಣ ಗಂಟೆಗಳನ್ನು ಸಮರ್ಪಣೆ ಮಾಡಲಾಗಿದೆ. 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ. ಒಟ್ಟಿನಲ್ಲಿ ಐಸಿಹಾಸಿಕ ಕಾರ್ಯಕ್ರಮಕ್ಕೆ ಭರದ ಸಿದ್ದತೆ ಸಾಗಿದ್ದು ದೇಶದ ಜನರು ಜನವರಿ 22 ಅನ್ನು ಎದುರು ನೋಡುತ್ತಿದ್ದಾರೆ.

  • ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ

    ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ

    ಚೆನ್ನೈ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ ಎಂದು ಕಾಂಗ್ರೆಸ್ ಸಂಸದೆ ಹೇಳಿ ಕೊಟ್ಟಿದ್ದರು. ಈ ಹಿನ್ನೆಲೆ ಸೋಶಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕರು ಸಂಸದೆ ಹೇಳಿಕೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

    ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಅವರು ತಮ್ಮ ರಾಜ್ಯದಲ್ಲಿ ರಾಮನ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಕುರಿತು ಅವರು, ನಾನು ತಮಿಳುನಾಡಿನವಳು. ನನಗೆ ರಾಮನ ಪರಿಚಯವಿಲ್ಲ. ನೀವು ತಮಿಳುನಾಡಿನಲ್ಲಿ ಯಾರನ್ನಾದರೂ ಕೇಳಿ. ನಾವು ಯಾವುದೇ ರಾಮಮಂದಿರವನ್ನು ನೋಡಿಲ್ಲ ಎಂದು ಮಾಧ್ಯಮಗಳ ಮುಂದೆ ನೇರವಾಗಿ ಕೇಳಿಕೆ ಕೊಟ್ಟಿದ್ದಾರೆ.

    ಈ ವೀಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಂಸದರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಕೆ.ಎಂ.ನಂದಗೋಪಾಲ್ ಸೋಶಿಯಲ್ ಮೀಡಿಯಾದಲ್ಲಿ ಟಿಎನ್‍ನಲ್ಲಿ ರಾಮನಿಗೆ ಅರ್ಪಿತವಾದ ದೇವಾಲಯಗಳನ್ನು ಜ್ಯೋತಿಮಣಿ ಅವರಿಗೆ ನೆನಪಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು, ತಿರುಚ್ಚಿ ಬಳಿಯ ಶ್ರೀ ರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ, ತಿರುವಣ್ಣಾಮಲೈ ಬಳಿಯ ಆದಿ ಶ್ರೀ ರಂಗಂ ದೇವಾಲಯ, ಪಲ್ಲಿಕೊಂಡದ ಶ್ರೀ ರಂಗನಾಥರ್ ದೇವಾಲಯ, ಮಧುರಾಂತಗಂನಲ್ಲಿ ಏರಿ ಕಥಾ ರಾಮರ್ ದೇವಾಲಯ, ರಾಮೇಶ್ವರಂನಲ್ಲಿ ರಾಮನಾಥ ಸ್ವಾಮಿ ದೇವಾಲಯ ಮತ್ತು ಹಳ್ಳಿಗಳಲ್ಲಿ 1000 ರಾಮ ದೇವಾಲಯಗಳಿವೆ ಎಂದು ಟ್ವೀಟ್ ಮಾಡಿದ್ದಾರೆ.

    ವೀಡಿಯೋ ನೋಡಿದ ಇನ್ನೊಬ್ಬ ನೆಟ್ಟಿಗ, ಜ್ಯೋತಿಮಣಿ ಅವರು ಬೇರೆ ಉದ್ದೇಶ ಇಟ್ಟುಕೊಂಡು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಅವರು ಡಿಎಂಕೆಯ ಒಂದು ಒಳ್ಳೆಯ ಪುಸ್ತಕದಲ್ಲಿ ಇರಲು ಈ ರೀತಿ ಮಾತನಾಡುತ್ತಿದ್ದಾರೆ. ತಮ್ಮ ಕ್ಷೇತ್ರ ಕರೂರ್‍ನಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತದೆ. ಅದಕ್ಕೆ ಅವರು ತಮ್ಮ ಕ್ಷೇತ್ರದಲ್ಲಿ ಮುಂದುವರೆಯಲು ಡಿಎಂಕೆ ಅಗತ್ಯವಿದೆ. ಡಿಎಂಕೆ ಕಾರೈಕುಡಿ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಅದು ಸತ್ಯವಾದರೆ ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ 

  • ರಾಮ ಬಿಟ್ಟ ಬಾಣಕ್ಕೆ ನಿರ್ಮಾಣವಾದ ಹೊಂಡವಿದೆ ಬೆಳಗಾವಿಯಲ್ಲಿ!

    ರಾಮ ಬಿಟ್ಟ ಬಾಣಕ್ಕೆ ನಿರ್ಮಾಣವಾದ ಹೊಂಡವಿದೆ ಬೆಳಗಾವಿಯಲ್ಲಿ!

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿರುವ ರಾಮಲಿಂಗೇಶ್ವರ ದೇವಸ್ಥಾನ.

    ಶ್ರೀ ರಾಮ ವನವಾಸದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಶಿಪ್ಪೂರ ಗ್ರಾಮಕ್ಕೆ ವಿಶ್ರಾಂತಿ ಪಡೆದು ಹೋಗಿದ್ದರು ಎನ್ನುವದಕ್ಕೆ ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ. ಇಲ್ಲಿ ಸ್ವತಃ ಶ್ರೀ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ಕಾರಣ ಈ ಕ್ಷೇತ್ರಕ್ಕೆ ಪೌರಾಣಿಕ ಕಥೆಯಿದೆ.

    ಗುಡ್ಡಗಾಡಿನಲ್ಲಿ ಇದ್ದ ಈ ಪ್ರದೇಶದಲ್ಲಿ ಶ್ರೀ ರಾಮನಿಗೆ ಕುಡಿಯಲು ನೀರು ಸಿಗದ ಕಾರಣ ಬಾಣ ಬಿಟ್ಟು ಇಲ್ಲೊಂದು ಹೊಂಡ ನಿರ್ಮಿಸಿದ್ದಾರೆ. ಈ ಹೊಂಡದಲ್ಲಿ ವರ್ಷವಿಡೀ ಬರಗಾಲವಿದ್ದರೂ ನೀರು ಇರುತ್ತದೆ. ಈ ಹೊಂಡದ ನೀರನ್ನ ಪವಿತ್ರ ನೀರು ಎಂದು ಪೂಜಿಸುವ ಪ್ರತೀತಿ ಇದೆ. ಇದನ್ನೂ ಓದಿ:  ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಶ್ರೀ ರಾಮನ ಭೇಟಿಯಿಂದ ಈ ಕ್ಷೇತ್ರ ಪುಣ್ಯ ಸ್ಥಳವಾಗಿ ಪರಿಣಮಿಸಿದೆ. ಗುಡ್ಡಗಾಡಿನಲ್ಲಿರುವ ಈ ಪವಿತ್ರ ಸ್ಥಳಕ್ಕೆ ಸಾವಿರಾರು ಭಕ್ತರು ಬಂದು ರಾಮಲಿಂಗೇಶ್ವರನ ದರ್ಶನ ಪಡೆದು ಪಾವನರಾಗುತ್ತಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ