Tag: Srinivaspur

  • Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    -ರಸ್ತೆಯಲ್ಲಿ ಮಾವು ಸುರಿದು ರೈತರ ಆಕ್ರೋಶ

    ಕೋಲಾರ: ಹಣ್ಣುಗಳ ರಾಜ ಮಾವಿನ ಹಣ್ಣಿಗೆ (Mango) ಬೆಲೆ ಕುಸಿದ ಹಿನ್ನೆಲೆ ಇಂದು ಕೋಲಾರದ (Kolar) ಶ್ರೀನೀವಾಸಪುರ (Srinivaspur) ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

    ಮಾವು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದು, ಮಾವು ಬೆಳೆಗಾರರರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಸಾಥ್ ಕೊಟ್ಟಿವೆ. ಮಾವು ಬೆಳೆಗೆ ಬೆಲೆ ಕುಸಿತ ಹಿನ್ನೆಲೆ ಕಂಗಾಲಾಗಿರುವ ಮಾವು ಬೆಳೆಗಾರರು, ಆಂದ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಬಂದ್‌ಗೆ ಕರೆ ಕೊಡಲಾಗಿದೆ. ಮಾವು ಬೆಳೆಗಾರರ ಬಂದ್‌ಗೆ ಬಿಜೆಪಿ, ಜೆಡಿಎಸ್ ಸೇರಿ ಹಲವು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಒಂದು ಟನ್ ಮಾವು 3 ರಿಂದ 4 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ತಾಂತ್ರಿಕ ದೋಷ – ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ

    ಇನ್ನು ಶ್ರೀನಿವಾಸಪುರದಲ್ಲಿ ಮಾವು ರಸ್ತೆಯಲ್ಲಿ ಸುರಿದು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರದ ಬಸ್ ನಿಲ್ದಾಣದಲ್ಲಿ ಮಾವು ರಸ್ತೆಯಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

  • Kolar| ಕೆಟ್ಟು ನಿಂತಿದ್ದ ಟಿಪ್ಪರ್‌ಗೆ ಟ್ರಕ್ ಡಿಕ್ಕಿ – ಚಾಲಕ ಸ್ಥಳದಲ್ಲೇ ಸಾವು

    Kolar| ಕೆಟ್ಟು ನಿಂತಿದ್ದ ಟಿಪ್ಪರ್‌ಗೆ ಟ್ರಕ್ ಡಿಕ್ಕಿ – ಚಾಲಕ ಸ್ಥಳದಲ್ಲೇ ಸಾವು

    ಕೋಲಾರ: ಕೆಟ್ಟು ನಿಂತಿದ್ದ ಟಿಪ್ಪರ್ ಟ್ರಕ್ (Truck) ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspur) ತಾಲೂಕಿನ ಕೇತಗಾನಹಳ್ಳಿ (Kethaganahalli) ಗ್ರಾಮದ ಬಳಿ ಮುಂಜಾನೆ ಈ ಘಟನೆ ನಡೆದಿದ್ದು, ಶಿವಪುರ ಗ್ರಾಮದ ಟಿಪ್ಪರ್ ಚಾಲಕ ಬಾಬು (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ನದಿಗೆ ವಿಷಕಾರಿ ರಾಸಾಯನಿಕ ಬಿಡುಗಡೆ – ಕಲುಷಿತಗೊಂಡ ಕೃಷ್ಣೆಯ ಒಡಲು

    ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟಿಪ್ಪರ್ ರಿಪೇರಿ ಮಾಡುತ್ತಿದ್ದ ಬಾಬು ಮೇಲೆ ಟ್ರಕ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ – ಮಸ್ಟರಿಂಗ್ ಕಾರ್ಯ ಪೂರ್ಣ

  • ಕೋಲಾರ| ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ತಾಯಿ, ಮಗ ಸಾವು

    ಕೋಲಾರ| ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ತಾಯಿ, ಮಗ ಸಾವು

    ಕೋಲಾರ: ಬೈಕ್‌ಗೆ (Bike) ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ತಾಯಿ-ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ (Srinivaspur) ತಾಲೂಕಿನ ಹೊಗಳಕೆರೆ ಕ್ರಾಸ್‌ನಲ್ಲಿ ನಡೆದಿದೆ.

    ಕೇತಗಾನಹಳ್ಳಿ ಗ್ರಾಮದ ನಿವಾಸಿಗಳಾದ ಪದ್ಮಮ್ಮ (48), ರಘು (26) ಮೃತ ದುರ್ದೈವಿಗಳು. ಶ್ರೀನಿವಾಸಪುರ ಪಟ್ಟಣದಿಂದ ಸ್ವಗ್ರಾಮ ಕೇತಗಾನಹಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಇದನ್ನೂ ಓದಿ: ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

    ಅಪರಿಚಿತ ವಾಹನ ಪತ್ತೆಗಾಗಿ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಳೆಗಟ್ಟಿದ ಚೆಲುವ ಚಾಮರಾಜನಗರ ದಸರಾ ಮಹೋತ್ಸವ – ಗಡಿನಾಡ ಜನತೆಯ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

  • ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು

    ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು

    ಕೋಲಾರ: ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರದ (Srinivaspur) ತಾಡಿಗೋಳ್ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಗ್ರಾಮದ ಪ್ರವೀಣ್ (22) ಎಂದು ಗುರುತಿಸಲಾಗಿದೆ. ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಂಬಂಧಿಕರ ಮದುವೆಗೆಂದು ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದ. ಇಂದು ತನ್ನ ತಾಯಿಯ ಸಮಾಧಿಯ ಬಳಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್‌ ಗೇಲಿಗೆ ಬಿಜೆಪಿ ತಿರುಗೇಟು

    ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ

    ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ

    ಕೋಲಾರ: ಶ್ರೀನಿವಾಸಪುರ (Srinivaspur) ವಿಧಾನಸಭಾ ಕ್ಷೇತ್ರ ಜೆಡಿಎಸ್ (JDS) ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆ ಕೆ.ಎಚ್.ಮುನಿಯಪ್ಪ ಬಣದ ಹಿರಿಯ ಕಾಂಗ್ರೆಸ್ (Congress) ಮುಖಂಡ ಶೇಷಾಪುರ ಗೋಪಾಲ್ ಕಾಣಿಸಿಕೊಂಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ವಿರೋಧಿಯಾಗಿರುವ ಶೇಷಾಪುರ ಗೋಪಾಲ್ ಕಾಂಗ್ರೆಸ್ ಟಿಕೆಟ್‍ನ್ನು ರಮೇಶ್ ಕುಮಾರ್‌ಗೆ (Ramesh Kumar) ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈಗ ಶೇಷಾಪುರ ಗೋಪಾಲ್, ಜೆಡಿಎಸ್ ಅಭ್ಯರ್ಥಿ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಕ್ಷಾಂತರದ ಸೂಚನೆಯ ಅನುಮಾನ ಮೂಡಿಸಿವೆ.

    ಫೋಟೋ ವೈರಲ್ ಆಗುತ್ತಿದ್ದಂತೆ ಶೇಷಾಪುರ ಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಖಾಸಗಿ ಕಾರ್ಯಕ್ರಮದಲ್ಲಿ ವೆಂಕಟಶಿವಾರೆಡ್ಡಿಯವರನ್ನು ಭೇಟಿಯಾಗಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಪೂರ್ವ ನಿಯೋಜಿತವಾದ ಭೇಟಿಯಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ನಾನು ಯಾವುದೇ ಆಮಿಷಗಳಿಗೆ ಒಳಗಾಗುವವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

     

    ಕೆ.ಹೆಚ್.ಮುನಿಯಪ್ಪ ನನ್ನ ಆಪ್ತ ಎನ್ನುವ ವಿಚಾರ ದೂರವಾದದ್ದು ನಾನು ರಮೇಶ್ ಕುಮಾರ್ ಆಪ್ತ, ಆದರೆ ರಮೇಶ್ ಅವರಿಂದ ದೂರವಾಗಲು ಕಾರಣ ಅವರನ್ನೇ ಕೇಳಬೇಕು. ಅವರು ಕಾಂಗ್ರೆಸ್ ಎಂಬ ವೇದಿಕೆಯನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡು, ಪಕ್ಷದ ಸಿದ್ಧಾಂತಗಳನ್ನು ಹಾಗೂ ಸಂಸ್ಕೃತಿಯನ್ನು ನಿಜವಾದ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋಲಿಗೆ ರಮೇಶ್ ಕುಮಾರ್ ಪಾತ್ರ ಏನಿದೆ ಎಂಬುದು ಜಗತ್ ಜಾಹಿರಾಗಿದೆ. ಅವರ ನಿಜವಾದ ಮುಖವಾಡ ಕಾಂಗ್ರೆಸ್ ನಾ ಟೋಪಿ ಆರ್‍ಎಸ್‍ಎಸ್‍ನ (RSS) ಚೆಡ್ಡಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

  • ಜನರನ್ನ ಕಟ್ಟಿಕೊಂಡು ಕೆರೆ ಪೂಜೆ- ಲಾಕ್‍ಡೌನ್ ಉಲ್ಲಂಘಿಸಿದ ರಮೇಶ್ ಕುಮಾರ್

    ಜನರನ್ನ ಕಟ್ಟಿಕೊಂಡು ಕೆರೆ ಪೂಜೆ- ಲಾಕ್‍ಡೌನ್ ಉಲ್ಲಂಘಿಸಿದ ರಮೇಶ್ ಕುಮಾರ್

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನೂರಾರು ಜನರನ್ನ ಕಟ್ಟಿಕೊಂಡು ಕೆರೆಯಲ್ಲಿ ಪೂಜೆ ಸಲ್ಲಿಸಿ ಲಾಕ್‍ಡೌನ್ ಉಲ್ಲಂಘಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ರಮೇಶ್ ಕುಮಾರ್ ಅವರು ತಮ್ಮದೆ ಮುಖಂಡರು, ಸ್ಥಳೀಯರನ್ನ ಸೇರಿಸಿಕೊಂಡು ಪೂಜೆಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಪೂಜೆ ವೇಳೆ ನೂರಾರು ಜನರ ಸೇರಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಮಾಜಿ ಸ್ಪೀಕರ್ ವಿರುದ್ಧ ಅನೇಕರು ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯಾನ ಎಂದು ನೆಟ್ಟಿಗರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬಡವರ ಮದುವೆಯಲ್ಲಿ 10 ಜನರಿಗೆ ಮಾತ್ರ ಅವಕಾಶ ನೀಡುವ ಸರ್ಕಾರ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಈ ರೀತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೆರೆ ಪೂಜೆಗೆ ನೂರಾರು ಜನರನ್ನ ಸೇರಿಸಿಕೊಂಡ ರಮೇಶ್ ಕುಮಾರ್ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

  • ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಕೋಲಾರ: ಲಾಕ್‍ಡೌನ್‍ನಿಂದಾಗಿ ಎಣ್ಣೆ ಸಿಗದೆ ಕಂಗೆಟ್ಟಿರುವ ಮದ್ಯಪ್ರಿಯರು ಬಾರ್ ಅಂಡ್ ರೆಸ್ಟೋರೆಂಟ್‍ನ ಶೆಟರ್ ಮುರಿದು ಸುಮಾರು 4 ಲಕ್ಷ ರೂ. ಮೌಲ್ಯದ ಮದ್ಯ ದೋಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

    ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿಯ ವೀರಭದ್ರೇಗೌಡ ಎಂಬವರಿಗೆ ಸೇರಿದ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಶನಿವಾರ ರಾತ್ರಿ ಕನ್ನ ಹಾಕಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳರು ಬಾರ್‍ನಲ್ಲಿದ್ದ ಹಣವನ್ನ ಬಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ದೋಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಸಿಗದೆ ಕಂಗೆಟ್ಟ ಮದ್ಯಪ್ರಿಯರು ಕನ್ನ ಹಾಕಿದ್ದಾರಾ ಅಥವಾ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇಂತಹ ಹೀನ ಕೃತ್ಯವೆಸಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದ್ಯ ಸಿಗದೆ ಇರುವುದಕ್ಕೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ ಮದ್ಯದ ಅಂಗಡಿಗೆ ಕನ್ನ ಹಾಕಿದ ಪ್ರಕರಣಗಳು ವರದಿಯಾಗಿವೆ.

  • ಜೋಡೆತ್ತು ಕಳುವಿನಿಂದ ಶುರುವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ

    ಜೋಡೆತ್ತು ಕಳುವಿನಿಂದ ಶುರುವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ

    – ಗ್ರಾಮದಲ್ಲಿ ಆತಂಕದ ವಾತಾವರಣ

    ಕೋಲಾರ: ಜೋಡೆತ್ತು ಕಳುವಿನಿಂದ ಎರಡು ಕುಟುಂಬದ ನಡುವೆ ಆರಂಭವಾಗಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ನಡೆದಿದೆ.

    ಯದರೂರು ಗ್ರಾಮದ ವೆಂಕಟೇಶಪ್ಪ ಆತ್ಮಹತ್ಯೆ ಶರಣಾದ ವ್ಯಕ್ತಿ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ವೆಂಕಟೇಶಪ್ಪ ಅವರ ಜೋಡೆತ್ತುಗಳು ಒಂದೂವರೆ ವರ್ಷದ ಹಿಂದೆ ಕಳ್ಳತನವಾಗಿದ್ದವು. ಹೀಗಾಗಿ ಅವರು ಸಾಕಷ್ಟು ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಅದೇ ಗ್ರಾಮದ ಕೆಂಚಪ್ಪ ಹಾಗೂ ಆಂಜಪ್ಪ ಅವರ ಮನೆಯಲ್ಲಿ ಹನ್ನೆರಡು ದಿನಗಳ ಹಿಂದೆಯಷ್ಟೇ ಎತ್ತುಗಳು ಪ್ರತ್ಯಕ್ಷವಾಗಿದ್ದವು. ಹೀಗಾಗಿ ವೆಂಕಟೇಶಪ್ಪ ಅವರು ಕೆಂಚಪ್ಪನ ಮನೆಗೆ ಹೋಗಿ, ಇವು ನಮ್ಮ ಎತ್ತುಗಳು ಎಂದು ಕೇಳಿದ್ದರು.

    ವೆಂಕಟೇಶಪ್ಪ ಮಗೆ ಬಂದು ಎತ್ತು ನಮ್ಮವು ಎಂದಿದ್ದಕ್ಕೆ ಕೋಪಗೊಂಡ ಕೆಂಚಪ್ಪ ಹಾಗೂ ಮನೆಯವರು ಮನಬಂದಂತೆ ಥಳಿಸಿ ಕಳಿಸಿದ್ದರು. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ವೆಂಕಟೇಶಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಕೆಂಚಪ್ಪ ಕುಟುಂಬದವರು, ನಾವು ಹಣಕೊಟ್ಟು ಜೋಡೆತ್ತುಗಳನ್ನು ಖರೀದಿ ಮಾಡಿದ್ದೇವೆ. ವೆಂಕಟೇಶಪ್ಪ ಅವರ ಕಳೆದು ಹೋದ ಜೋಡೆತ್ತುಗಳು ಇವಲ್ಲ. ಇದನ್ನು ಸಾಕಷ್ಟು ಬಾರಿ ಅವರಿಗೆ ಹೇಳಿದರೂ ಕೇಳದೆ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಪೊಲೀಸರು ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧರಿದ್ದೇವೆ. ಹೀಗಾಗಿ ಎರಡೂ ಕುಟುಂಬಗಳಿಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವೆ ಜೋಡೆತ್ತು ವಿವಾದದಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.