Tag: srinivasprasad

  • ಹಳ್ಳಿಹಕ್ಕಿ ಸೋತ್ರೆ ಜಗತ್ತು ಮುಳುಗುತ್ತಾ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

    ಹಳ್ಳಿಹಕ್ಕಿ ಸೋತ್ರೆ ಜಗತ್ತು ಮುಳುಗುತ್ತಾ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

    ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಅನುಮಾನಗಳೇ ಬೇಡ. ಆದರೂ, ಒಂದು ವೇಳೆ ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ? ಸಿದ್ದರಾಮಯ್ಯ ಎಷ್ಟು ಸಲ ತೋಡೆ ತಟ್ಟಿ ಬಿದ್ದೋಗಿಲ್ಲ ಹೇಳಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಮಾಧ್ಯಮದವರ ಉಪ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಈ ರೀತಿ ಮರುಪ್ರಶ್ನೆ ಹಾಕಿದ್ದಾರೆ. ಈ ಪ್ರಶ್ನೆಗಳನ್ನು ಕೇಳುವ ಮೂಲಕ ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಸೋಲಿನ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಈ ಮೂಲಕ ಎಚ್. ವಿಶ್ವನಾಥ್ ಹುಣಸೂರು ಉಪ ಚುನಾವಣೆಯಲ್ಲಿ ಸೋತರು ಏನೂ ಪರಿಣಾಮ ಬಿರೋಲ್ಲ ಎಂದು ಸಂಸದರು ಸ್ಪಷ್ಟವಾಗಿ ಹೇಳಿದ್ದಾರೆ.

    ವಿಶ್ವನಾಥ್ ಬಿಜೆಪಿಗೆ ಬರಲು ಪ್ರಮುಖ ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್, ಇದೀಗ ಫಲಿತಾಂಶ ಹೊರಬೀಳುವ ಮುನ್ನವೇ ವಿಶ್ವನಾಥ್ ಸೋತರೆ ಏನು ಆಗೋಲ್ಲ ಎಂದ ಹೇಳಿರುವುದು ಕುತೂಹಲ ಹುಟ್ಟಿಸಿದೆ. ಇದೇ ವೇಳೆ ನಾಳೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ ಎಂದ ಅವರು, ಸರ್ಕಾರ ಸ್ಥಿರವಾಗಿದೆ. ನಾಳೆ ಗೆದ್ದು ಮತ್ತಷ್ಟು ಸ್ಥಿರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ವೈಟ್ ವಾಶ್ ಆಗುತ್ತಾರೆ ಎಂದು ಮತ್ತೆ ಪುನರುಚ್ಚರಿಸಿದ ಶ್ರೀನಿವಾಸ್ ಪ್ರಸಾದ್, ಸೋಲುವವರ ಬಗ್ಗೆ ಈಗ ಮಾತನಾಡೋದು ಬೇಡ ಎಂದು ಹೇಳುವ ಮೂಲಕ ಮಾಜಿ ಸಿಎಂಗೆ ಟಾಂಗ್ ನೀಡಿದರು. ಗೆದ್ದವರೆಲ್ಲರಿಗೂ ಮಂತ್ರಿಭಾಗ್ಯ ಅಂತ ಸ್ವತಃ ಸಿಎಂ ಹೇಳಿದ್ದಾರೆ. ಬಿಜೆಪಿ ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸಲಿದೆ ಎಂದು ಸ್ಪಷ್ಟಪಡಿಸಿದರು.

  • ಇದು ದೋಸ್ತಿ ಅಲ್ಲ, ದುಷ್ಮನ್ ಸರ್ಕಾರ- ಶ್ರೀನಿವಾಸ್ ಪ್ರಸಾದ್

    ಇದು ದೋಸ್ತಿ ಅಲ್ಲ, ದುಷ್ಮನ್ ಸರ್ಕಾರ- ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಇದು ದೋಸ್ತಿ ಸರ್ಕಾರ ಅಲ್ಲ, ಇದು ದುಷ್ಮನ್ ಸರ್ಕಾರ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಒಳಗೊಳಗೆ ಅಸಮಾಧಾನವಿದೆ. ಎಚ್ ವಿಶ್ವನಾಥ್ ಅವರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನವಿತ್ತು. ಈ ಹಿಂದೆ ಅವರು `ಹಳ್ಳಿ ಹಕ್ಕಿ’ ಎಂಬ ಪುಸ್ತಕ ಬರೆದಿದ್ದರು. ಈಗ ಜೆಡಿಎಸ್ ಜೊತೆ ಇದ್ದ ಅನುಭವವನ್ನು `ಹಳ್ಳಿ ಹಕ್ಕಿಯ ಗೋಳು’ ಎಂದು ಬರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಮಧ್ಯಂತರ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಬೇಕಿದ್ದರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಅವರು ಹೇಳಿದ್ದಾರೆ. ಸರ್ಕಾರ ಏನ್ ಆಗುತ್ತದೆ ಎಂದು ಮಂಗಳವಾರದವರೆಗೆ ಕಾದು ನೋಡಬೇಕಿದೆ. ಮುಖ್ಯಮಂತ್ರಿ ಅವರು ಕೂಡ ಸ್ಪೀಕರ್ ಬಳಿ ಟೈಮ್ ಕೇಳಿದ್ದಾರೆ. ಏನಾಗುತ್ತೆ ನೋಡಬೇಕು ಎಂದು ಹೇಳಿದರು.

    ಈಗಾಗಲೇ ಎಲ್ಲರೂ ಕೂಡ ರೆಸಾರ್ಟ್ ನಲ್ಲಿ ಇದ್ದಾರೆ. ಈ ರೀತಿಯ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದು ನಮ್ಮ ದೌರ್ಭಾಗ್ಯ. ಇಂತಹ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಪ್ರಿಯಾಂಕ, ರಾಹುಲ್ ಮಕ್ಕಳಿದ್ದಂತೆ – ಸಂಸದ ಶ್ರೀನಿವಾಸ್‍ಪ್ರಸಾದ್

    ಪ್ರಿಯಾಂಕ, ರಾಹುಲ್ ಮಕ್ಕಳಿದ್ದಂತೆ – ಸಂಸದ ಶ್ರೀನಿವಾಸ್‍ಪ್ರಸಾದ್

    ಚಾಮರಾಜನಗರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಗಾಂಧಿ ಮಕ್ಕಳಿದ್ದಂತೆ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಅವರು ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೇ ಪಾಪ ನಾನು ಇದ್ದಾಗ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ ಎಂದು ಪ್ರಿಯಾಂಕಗಾಂಧಿ ಮತ್ತು ರಾಹುಲ್‍ಗಾಂಧಿಯನ್ನು ವ್ಯಂಗ್ಯವಾಡಿದ್ದಾರೆ.

    ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಅವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಕ್ಕೂ ಸ್ಥಾನ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನದಿಂದ ಈ ಬಾರಿ ಚುನಾವಣೆಯಲ್ಲಿ 52 ಸ್ಥಾನಕ್ಕೆ ಬಂದಿದ್ದಾರೆ. ಏಕೆ ಪ್ರಿಯಾಂಕಗಾಂಧಿ ಮತ್ತು ರಾಹುಲ್‍ಗಾಂಧಿ ಬಗ್ಗೆ ಮಾತಾನಾಡುತ್ತೀರಾ? ಅವರು ಮೊದಲು ಪಕ್ಷ ಸಂಘಟನೆ ಮಾಡುವ ಕಡೆ ಗಮನಹರಿಸಲಿ ಬಿಡಿ ಎಂದು ಹೇಳಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತಾನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯ ಬಗ್ಗೆ ಎಷ್ಟು ಸಲ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಅವರ ಮೇಲೆ ಚುನಾವಣೆ ಮುನ್ನವೇ ಅಸಮಾಧಾನ ತೋಡಿಕೊಂಡಿದ್ದಾರೆ. ಕುಮಾರ ಪರ್ವ ಆರಂಭ ಆಗಿದ್ದೆ ಚಾಮುಂಡೇಶ್ವರಿ ಕ್ಷೇತ್ರದಿಂದ. ಇದೆಲ್ಲವೂ ಲೋಕಸಭಾ ಫಲಿತಾಂಶದಲ್ಲಿ ಗೊತ್ತಾಗಿದೆ ಎಂದು ಹೇಳಿದರು.

    ದೇವೇಗೌಡರು ಸೋತು ಮನೆಗೆ ಹೋಗಿದ್ದು, ಮಂಡ್ಯದಲ್ಲಿ ಸೋತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೊಂದು ಒಂದು ಸ್ಥಾನ ಬಂದಿರೋದು ಇಲ್ಲೇ ದೋಸ್ತಿ ಸರ್ಕಾರದ ಸಾಧನೆ ಏನು ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

  • ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    – ಸಿಎಂ ಇಬ್ರಾಹಿಂ ವಿದೂಷಕ

    ಮೈಸೂರು: ಮುಸ್ಲಿಂ ಮತಗಳು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಬಾರದಿತ್ತು. ಅವರ ಮತ ಬೇಡ ಇವರ ಮತ ಬೇಡ ಅನ್ನಬಾರದು ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಈಶ್ವರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದ್ರು.

    ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೋಸ್ತಿ ವರ್ಸಸ್ ಬಿಜೆಪಿ ಆಗಬೇಕಿತ್ತು. ದೋಸ್ತಿ ವರ್ಸಸ್ ದೋಸ್ತಿ ಆಗಿದೆ ಎಂದು ವ್ಯಂಗ್ಯವಾಡಿದ್ರು.

    ರಾಜ್ಯದಲ್ಲಿ ದೋಸ್ತಿಗಳು ಹೇಗಿದ್ದಾರೆ ಎಂದು ಗೊತ್ತಿದೆ. ಮಂಡ್ಯದಲ್ಲಿ ದೋಸ್ತಿ ವರ್ಸಸ್ ಸುಮಲತಾ ಆಗಿದೆಯಾ ಎಂದು ಪ್ರಶ್ನಿಸಿದ್ರು. ಅಲ್ಲದೆ ಎಂಟು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ನೀವು ಹೇಗೆ ಅಧಿಕಾರ ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಎಷ್ಟರ ಮಟ್ಟಿಗೆ ನಿಮ್ಮ ನಡುವೆ ಸಮನ್ವಯ ಇದೆ ಎಂಬುದೂ ಗೊತ್ತಿದೆ ಎಂದು ಹೇಳಿದ್ರು.

    ದಾವೂದ್ ಇಬ್ರಾಹಿಂಗೂ ಸಿ.ಎಂ. ಇಬ್ರಾಹಿಂಗೂ ಏನಾದರೂ ವ್ಯತ್ಯಾಸ ಇದೆಯಾ ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ಇಬ್ರಾಹಿಂ ಒಬ್ಬ ಕ್ರಿಮಿನಲ್ ಪಾಲಿಟಿಷಿಯನ್. ಇಬ್ರಾಹಿಂ ಒಬ್ಬ ವಿದೂಷಕನಾಗಿದ್ದಾರೆ. ದಾವೂದ್ ಇಬ್ರಾಹಿಂ ಅದರೂ ಅಂಡರ್ ವಲ್ರ್ಡ್ ಡಾನ್. ಆದರೆ ಇಬ್ರಾಹಿಂ ಯಾರು ಅಂದ್ರೆ ಸಿದ್ದರಾಮಯ್ಯ ಆಸ್ಥಾನದ ಒಬ್ಬ ವಿದೂಷಕ ಎಂದು ಸಿಎ.ಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದ್ರು.


    ಅನಂತ್‍ಕುಮಾರ್ ಹೆಗ್ಡೆ ಸಂವಿಧಾನದದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತಾಡಿದ್ದರು. ಆ ಮಾತಿಗೆ ಅವರು ಸಂಸತ್ ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.