Tag: Srinivasa Swamiji

  • ಬಿಎಸ್‍ವೈಗೆ ಮತ್ತೆ ಸಿಎಂ ಪಟ್ಟ – ಶ್ರೀನಿವಾಸ ಸ್ವಾಮೀಜಿ ಭವಿಷ್ಯ

    ಬಿಎಸ್‍ವೈಗೆ ಮತ್ತೆ ಸಿಎಂ ಪಟ್ಟ – ಶ್ರೀನಿವಾಸ ಸ್ವಾಮೀಜಿ ಭವಿಷ್ಯ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಳ್ಳಿಯ ಶ್ರೀನಿವಾಸ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ಅರ್ಜುನಬೆಟ್ಟಳ್ಳಿಯ ಶ್ರೀ ಪರಿಪೂರ್ಣ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀನಿವಾಸ ಸ್ವಾಮೀಜಿ ಬಳಿ ಮುಂದಿನ ರಾಜಕೀಯದ ಕುರಿತು ಭವಿಷ್ಯ ಕೇಳಿದರು.

    ದೇಶದ ಜನರು ಬಿಜೆಪಿಗೆ 5 ವರ್ಷ ಕಾಲ ಅಧಿಕಾರ ನೀಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಕೂಡ ಜನಪರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇವೆ. ಎಲ್ಲವೂ ಒಳ್ಳೆಯದಾಗುತ್ತದೆ. ನೀವು ಮತ್ತೇ ಮುಖ್ಯಮಂತ್ರಿ ಆಗಲಿದ್ದೀರಿ ಎಂದು ಶ್ರೀನಿವಾಸ ಸ್ವಾಮೀಜಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಯ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv