Tag: Srinivasa Sagara Dam

  • ಚಿಕ್ಕಬಳ್ಳಾಪುರ| ಬಾಲಕನ ಜೀವ ಉಳಿಸಲು ಹೋಗಿ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

    ಚಿಕ್ಕಬಳ್ಳಾಪುರ| ಬಾಲಕನ ಜೀವ ಉಳಿಸಲು ಹೋಗಿ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

    ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕನ ಉಳಿಸಲು ಹೋದ ಮೂವರು ಸಂಬಂಧಿಕರು ಜಲಸಮಾಧಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Reservoir) ನಡೆದಿದೆ.

    ಬೆಂಗಳೂರು ಮೂಲದ ಫರ್ಹೀನಾ (35), ಚಿಕ್ಕಬಳ್ಳಾಪುರ ನಿವಾಸಿ ಬಷೀರಾ (35), ಹಾಗೂ ಬೆಂಗಳೂರಿನ ಇಮ್ರಾನ್ (45) ಮೃತರು. ರಂಜಾನ್ ಹಬ್ಬದ ಮುಗಿದ ಕಾರಣ ಸಂಬಂಧಿಕರೆಲ್ಲಾ ಸೇರಿ 10 ಮಂದಿ ಮಕ್ಕಳೊಡನೆ ಎರಡು ಕಾರುಗಳ ಮೂಲಕ ಚಿಕ್ಕಬಳ್ಳಾಪುರದ ಸುತ್ತಮುತ್ತಲ ಪ್ರವಾಸಿತಾಣಗಳಿಗೆ ಪಿಕ್‌ನಿಕ್‌ಗೆಂದು ಹೋಗಿದ್ದರು. ಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿದ್ದು, ರಸ್ತೆ ಬಂದ್ ಹಿನ್ನೆಲೆಯಲ್ಲಿ ಶ್ರೀನಿವಾಸ ಸಾಗರದತ್ತ ಹೋಗಿದ್ದಾರೆ. ಮಧ್ಯಾಹ್ನ ಊಟ ಮಾಡೋಣ ಎಂದು ಜಲಾಶಯದ ಬಂಡೆ ಮೇಲೆ ಕೂತು ಊಟ ಮಾಡೋಕೆ ಮುಂದಾಗಿದ್ದರು. ಅಷ್ಟರಲ್ಲಿ ಫರ್ಹೀನಾರ 6 ವರ್ಷದ ಗಂಡು ಮಗು ಅನಂ ನೀರಿನಲ್ಲಿ ಇಳಿದು ಆಟವಾಡುತ್ತಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಗೆ ಮುಳುಗಿದ್ದಾನೆ. ಇದನ್ನೂ ಓದಿ: ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

    ಕೂಡಲೇ ಫರ್ಹೀನಾ ಮಗನ ರಕ್ಷಣೆಗೆ ನೀರಿಗೆ ಇಳಿದಿದ್ದು, ನಂತರ ಇಮ್ರಾನ್ ಹಾಗೂ ಬಷೀರಾ ಸಹ ಒಬ್ಬೊಬ್ಬರಾಗಿ ನೀರಿಗೆ ಧುಮುಕಿದ್ದಾರೆ. ಆದರೆ ಅನಂನ ರಕ್ಷಣೆ ಮಾಡಿ ಮೂವರು ಸಹ ಮರಳಿ ಮೇಲೆ ಬರಲಾಗದೇ ನೀರಿನಲ್ಲೇ ಮುಳುಗಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಮೂವರನ್ನ ಮೇಲೆ ತಂದು ಸಿಪಿಆರ್ ಮಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್‌ಗೆ ಸೇರಿದ ಅಮ್ಮ ಅಂಬ್ಯುಲೆನ್ಸ್ ಬಂದು ಮೂವರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅರ್ಧಂಬರ್ಧ ಉಸಿರಾಡುತ್ತಿದ್ದ ಮಹಿಳೆ ಸೇರಿ ಮೂವರು ಸಹ ಮೃತಪಟ್ಟಿದ್ದಾರೆ. ಮೃತರನ್ನು ಕಳೆದುಕೊಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

  • ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಯುವಕ ಸಾವು

    ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಯುವಕ ಸಾವು

    ಚಿಕ್ಕಬಳ್ಳಾಪುರ: ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Dam) ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಮೃತ ಯುವಕನನ್ನು ಬೆಂಗಳೂರಿನ (Bengaluru) ಬಾಬೂಸಾಪಾಳ್ಯದ ಅಭಿ (23) ಎಂದು ಗುರುತಿಸಲಾಗಿದೆ. ಪ್ರವಾಸಕ್ಕೆ ಬಂದಿದ್ದ ವೇಳೆ ಜಲಾಶಯದಲ್ಲಿ ಈಜಲು ತೆರಳಿದ್ದಾಗ ಯುವಕ ಮುಳುಗಿ ಸಾವನ್ನಪ್ಪಿದ್ದಾನೆ. ಯುವಕನ ಮೃತದೇಹಕ್ಕಾಗಿ ಆಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ. ಇದನ್ನೂ ಓದಿ: ʻಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿʼ – ಪ್ರಚೋದನಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಕೇಸ್‌

    ಇದೀಗ ಎನ್‍ಡಿಆರ್‍ಎಫ್ ತಂಡದಿಂದ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಗೃಹಿಣಿ ಸಾವು ಕೇಸ್‌ಗೆ ಟ್ವಿಸ್ಟ್ – ಪತಿಯೇ ಮಾಸ್ಟರ್ ಮೈಂಡ್, ಸ್ನೇಹಿತನ ಪತ್ನಿಯ ಕೊಲೆ ರಹಸ್ಯವೂ ಬಯಲು

  • ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮತ್ತೋರ್ವ ಯುವಕ ಬಲಿ

    ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮತ್ತೋರ್ವ ಯುವಕ ಬಲಿ

    ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Dam) ಮುಳುಗಿ ಯುವಕನೊರ್ವ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

    ಬೆಂಗಳೂರಿನ (Bengaluru) ಶ್ಯಾಂಪುರದ ನಿವಾಸಿ ಮಹಮದ್ ಯಾಸಿನ್ (26) ಮೃತ ದುರ್ದೈವಿ. 10 ಮಂದಿ ಸ್ನೇಹಿತರೊಂದಿಗೆ ಎರಡು ಕಾರುಗಳಲ್ಲಿ ಜಲಾಶಯಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 4-5 ಮಂದಿ ಈಜಲು ತೆರಳಿದ್ದರು, ಆದರೆ ಯಾಸಿನ್ ಮುಳುಗಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಮೆಲಕ್ಕೆತ್ತಿದ್ದಾರೆ. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಅವರಿಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಬಗ್ಗೆಯೇ ಆಸಕ್ತಿ ಜಾಸ್ತಿ: ಮಹದೇವಪ್ಪಗೆ ಸುರೇಶ್ ಟಾಂಗ್

    ಕಳೆದ 2 ತಿಂಗಳ ಹಿಂದೆಯಷ್ಟೇ ಇದೆ ಜಾಗದಲ್ಲಿ ಮೂವರು ಬೆಂಗಳೂರಿನ ಯುವಕ ಯುವತಿಯರು ನೀರು ಪಾಲಾಗಿದ್ದರು. ಇನ್ನೂ ಕಳೆದ 1 ವರ್ಷದಲ್ಲಿ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ 10 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಂಪಿ ವಿವಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 85 ಲಕ್ಷ ರೂ. ಕರೆಂಟ್ ಬಿಲ್

  • ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು

    ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ಈಜಲು (Swimming) ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ (Drown) ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Dam) ಈ ಘಟನೆ ನಡೆದಿದ್ದು, ಇಮ್ರಾನ್ ಖಾನ್(20), ರಾಧಿಕಾ(19) ಹಾಗೂ ಪೂಜಾ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ಬಸ್‌ಗೆ ಬೆಂಕಿ ಇಟ್ಟ ನಕ್ಸಲರು – 15 ಮಂದಿ ಸಾವು  

    ವೀಕೆಂಡ್ ಎಂದು ಕರ್ನಾಟಕ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ಇಮ್ರಾನ್ ಖಾನ್, ವಿಕಾಸ್, ಚನ್ನರಾಮ್ ಎಂಬ ಆರು ವಿದ್ಯಾರ್ಥಿಗಳು ಮೂರು ಬೈಕುಗಳಲ್ಲಿ ಶನಿವಾರ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪಿಕ್‌ನಿಕ್ ಬಂದಿದ್ದರು. ಈ ವೇಳೆ ಸುನಿತಾಳನ್ನು ಹೊರತುಪಡಿಸಿ ಉಳಿದ 5 ಮಂದಿ ವಿದ್ಯಾರ್ಥಿಗಳು ಜಲಾಶಯ ಹಿಂಭಾಗದ ಹಿನ್ನೀರಿನಲ್ಲಿ ಈಜಾಡಲು ಹೋಗಿದ್ದು, ರಾಧಿಕಾ, ಪೂಜಾ ಮತ್ತು ಇಮ್ರಾನ್ ಖಾನ್ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಲೋಕಾಯುಕ್ತ ಬಲೆಗೆ

    ನೀರಿನ ಆಳದ ಅರಿವಿರದ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಕೂಗುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಚನ್ನರಾಮ್ ಹಾಗೂ ವಿಕಾಸ್ ಎಂಬ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು, ಪೂಜಾಳನ್ನು ಸಹ ಮೇಲೆ ಎಳೆದುಕೊಂಡು ಬಂದು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೂ ಆಕೆ ಬದುಕುಳಿಯಲಿಲ್ಲ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

    ಇನ್ನೂ ಪೂಜಾ ಹಾಗೂ ಇಮ್ರಾನ್ ಖಾನ್ ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಆಗ್ನಿಶಾಮಕದಳ ಸಿಬ್ಬಂದಿ ಮೇಲೆ ತಂದಿದ್ದಾರೆ. ಓಟ್ಟಿನಲ್ಲಿ ವೀಕೆಂಡ್ ಔಟಿಂಗ್ ಪೋಟೋಶೂಟ್ ಎಂದು ಬಂದ ಆರು ಮಂದಿಯಲ್ಲಿ ಮೂವರು ಜಲಸಮಾಧಿಯಾಗಿದ್ರೆ, ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಸದ್ಯ ಮೃತರ ಸಂಬಂಧಿಕರು, ಪೋಷಕರು ವಿಷಯ ತಿಳಿದು ಬೆಂಗಳೂರಿನಿಂದ (Bengaluru) ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತದೇಹಗಳನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ