Tag: srinivasa poojary

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನ ಲಾಕ್‍ಡೌನ್?

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನ ಲಾಕ್‍ಡೌನ್?

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ.

    ಕಳೆದ ಜುಲೈ 16 ರಿಂದ ಜಿಲ್ಲಾದ್ಯಂತ ಲಾಕ್‍ಡೌನ್ ಆರಂಭವಾಗಿದ್ದು ನಾಳೆಗೆ ಅಂತ್ಯವಾಗಲಿದೆ. ಆದರೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ.

    ಜಿಲ್ಲೆಯಲ್ಲಿ ಪ್ರತಿದಿನ 10-200 ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳು ಮತ್ತೆ ಲಾಕ್ ಡೌನ್ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿ ನಾಳೆ ಅಂತಿಮವಾಗಿ ನಿರ್ಧರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

  • ಸುಮಲತಾ ಎನ್‍ಡಿಎಗೆ ಬೆಂಬಲಿಸಿದ್ರೆ ಎಲ್ಲರಿಗೂ ಗೌರವ- ಕೋಟ ಶ್ರೀನಿವಾಸ ಪೂಜಾರಿ

    ಸುಮಲತಾ ಎನ್‍ಡಿಎಗೆ ಬೆಂಬಲಿಸಿದ್ರೆ ಎಲ್ಲರಿಗೂ ಗೌರವ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯ ಎಂದು ಭಾವಿಸಿಲ್ಲ. ಬಿಜೆಪಿ ಸುಮಲತಾರಿಗೆ ಬೇಷರತ್ ಬೆಂಬಲ ನೀಡಿತ್ತು. ಅವರಾಗಿಯೇ ಎನ್‍ಡಿಎ ಗೆ ಬೆಂಬಲ ನೀಡಿದರೆ ಎಲ್ಲರಿಗೂ ಒಂದು ಗೌರವ ಬರುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕ ಸರ್ಕಾರವನ್ನು ಎದುರಿಸಿ ಸುಮಲತಾ ಗೆದ್ದಿದ್ದಾರೆ. ಮಂಡ್ಯ ಸಾಭಿಮಾನದ ಜಿಲ್ಲೆ ಎಂದು ಸಾಬೀತಾಗಿದೆ. ಮೈತ್ರಿ ಸರ್ಕಾರಕ್ಕೆ ಕಪಾಳ ಮೋಕ್ಷವಾಗಿದೆ ಎಂದು ಹೇಳಿದರು.

    ಸುಮಲತಾಗೆ ಬೆಂಬಲ ಕೊಡುವಾಗ ಯಾವುದೇ ಷರತ್ತು ಹಾಕಿಲ್ಲ. ನಮ್ಮ ಅಪೇಕ್ಷೆಯಿಲ್ಲ, ಯಾವ ಕರಾರು ಮಾಡಿಕೊಂಡಿಲ್ಲ. ಈಗಲೂ ಈ ನಿಲುವಿಗೆ ಬದ್ಧವಾಗಿದ್ದೇವೆ. ಅವರಾಗಿಯೇ ಎನ್ ಡಿ ಎಗೆ ಬೆಂಬಲ ಕೊಟ್ಟರೆ ಎಲ್ಲರಿಗೂ ಗೌರವ ಬರುತ್ತದೆ ಎಂದರು.

    ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕೋಟ, ಜಂಟಿ ಸರ್ಕಾರವನ್ನು ಬೀಳಿಸುವುದು ಬೇಡ. ಅದೇ ಬೀಳುತ್ತದೆ. ಕುಮಾರಸ್ವಾಮಿಯವರು ಮತ್ತು ಸಿದ್ದರಾಮಯ್ಯನವರು ಪ್ರಮಾದವಾಗಿದೆ ಎಂದು ಈಗ ಹೇಳುತ್ತಾರೆ. ಇವರ ಹೊಂದಾಣಿಕೆ ಅಧಿಕಾರ ದಾಹಕ್ಕಾಗಿ ಕುರ್ಚಿಗಾಗಿ ಎಂದು ಜನ ಅರಿತುಕೊಂಡು ಇವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ. ಘಟನಾನುಘಟಿಗಳು ಸೋಲಲು ಇದೂ ಒಂದು ಕಾರಣ ಎಂದು ಹೇಳಿದರು.