Tag: srinivas

  • ಅನುಭವ ಸಿನಿಮಾದ ಖ್ಯಾತನಟಿ ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ

    ಅನುಭವ ಸಿನಿಮಾದ ಖ್ಯಾತನಟಿ ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ

    ನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಅಭಿನಯಗೆ ಹೈಕೋರ್ಟ್ ಏಕಸದಸ್ಯ ಪೀಠವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದರು ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು‌ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

    ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ  2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು. 1998 ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆ ವೇಳೆ ಶ್ರೀನಿವಾಸ್ ಅವರು 80 ಸಾವಿರ ನಗದು, 250 ಗ್ರಾಂ ಚಿನ್ನಭರಣ ಪಡೆದಿದ್ದರು ಎಂದು ಹೇಳಲಾಗಿತ್ತು. ನಂತರ ಮತ್ತೆ ಒಂದು ಲಕ್ಷ ಹಣ ತರುವಂತೆ ಅಭಿನಯ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿತ್ತು ಎಂದು ದೂರು ದಾಖಲಾಗಿತ್ತು. ಇದನ್ನೂ ಓದಿ: ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು  ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಲಕ್ಷ್ಮೀದೇವಿ. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ ಅದೇಶ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ – ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

    ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ – ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ JDS ಇಬ್ಬರು ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನೋಟಿಸ್ ಜಾರಿ ಮಾಡಿದ್ದಾರೆ.

    ಕೋಲಾರ ಶಾಸಕ ಶ್ರೀನಿವಾಸಗೌಡ (Srinivas Gowda) ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ (Gubbi Srinivas) ನೋಟಿಸ್ ಜಾರಿ ಮಾಡಿದ್ದು, ಲಿಖಿತ ರೂಪದಲ್ಲಿ ‌ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ JDS ಇಬ್ಬರು ಶಾಸಕರು ಉಚ್ಚಾಟನೆ

    ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನ ಅನರ್ಹ ಮಾಡುವಂತೆ ವಿಧಾನಸಭೆ ಕಾರ್ಯದರ್ಶಿಗಳಿಗೆ ಜೆಡಿಎಸ್ ಪಕ್ಷದಿಂದ ದೂರು ನೀಡಲಾಗಿತ್ತು. ಜೆಡಿಎಸ್ ದೂರು ಹಿನ್ನೆಲೆಯಲ್ಲಿ ವಿವರಣೆ ಕೇಳಿ ಮಾಡಿದ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.

    ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಲೇಹರ್‌ಸಿಂಗ್ ಪರ ಮತದಾನ ಮಾಡಿದ್ದಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಆರೋಪಿಸಲಾಗಿತ್ತು. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಕೋಲಾರ ಶ್ರೀನಿವಾಸಗೌಡ ಹೇಳಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್ ದೂರು ನೀಡಿತ್ತು. ಜೆಡಿಎಸ್ ದೂರು ವಿಚಾರ ನಡೆಸಿದ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ವಿವರಣೆ ನೀಡುವಂತೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    ಬೆಂಗಳೂರು: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ಗೆ (All Indian Institute of Medical Sciences ) ಮುಂದಿನ ನಿರ್ದೇಶಕರಾಗಿ ಡಾ.ಎಂ.ಶ್ರೀನಿವಾಸ್ (Dr M Srinivas) ಹೆಸರನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ.

     

    ಡಾ. ಎಂ.ಶ್ರೀನಿವಾಸ್ ಕನ್ನಡಿಗರಾಗಿದ್ದು ಯಾದಗಿರಿ ಮೂಲದವರಾಗಿದ್ದಾರೆ. ಬಳ್ಳಾರಿಯ ಏಮ್ಸ್‌ನಲ್ಲಿ 1984ರ ಬ್ಯಾಚ್‍ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಸದ್ಯ ಹೈದರಾಬಾದ್‍ನ ಸನತ್‍ನಗರದ (Hydrabad Sanatnagar) ಇಎಸ್‍ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದು, ಇದಕ್ಕೂ ಮೊದಲು ಅವರು ದೆಹಲಿಯ ಏಮ್ಸ್‌ನಲ್ಲಿಯೇ (AIIMS) ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರ್ಯನಿರ್ವಹಿಸಿದ್ದರು. ಇದೀಗ ಹುದ್ದೆಯನ್ನು ವಹಿಸಿಕೊಳ್ಳುವ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಈ ಹಿಂದೆ ನಿರ್ದೇಶಕರಾಗಿದ್ದ ಡಾ. ರಣದೀಪ್ ಗುಲೇರಿಯಾ (Dr Randeep Guleria) ಅವರನ್ನು 2017 ಮಾರ್ಚ್ 28ರಂದು ಏಮ್ಸ್ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಅಧಿಕಾರ ಅವಧಿ ಮುಗಿದ ನಂತರ ಎರಡು ಬಾರಿ ತಲಾ ಮೂರು ತಿಂಗಳಂತೆ ಅವಧಿ ವಿಸ್ತರಿಸಲಾಗಿತ್ತು. ಇವರ ಅಧಿಕಾರಿ ಶುಕ್ರವಾರ ಅಂತ್ಯವಾಗಲಿದ್ದು, ಡಾ.ಶ್ರೀನಿವಾಸ್ ಮುಂದಿನ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಮಂಗಳೂರು ದಸರಾ-2022: ತಾಲೂಕಿನಾದ್ಯಂತ 4 ದಿನ ಹೆಚ್ಚುವರಿ ರಜೆ

    Live Tv
    [brid partner=56869869 player=32851 video=960834 autoplay=true]

  • ನಾವು ಹೋಟೆಲ್‍ಗೆ ಹೋದ್ರೆ ಮೋದಿ, ಶಾ ಒಟ್ಟಿಗೆ ಬರುತ್ತಾರೆ ಅವರ ಬಿಲ್ ನಾವೇ ಕಟ್ಟಬೇಕು: ಶ್ರೀನಿವಾಸ್

    ನಾವು ಹೋಟೆಲ್‍ಗೆ ಹೋದ್ರೆ ಮೋದಿ, ಶಾ ಒಟ್ಟಿಗೆ ಬರುತ್ತಾರೆ ಅವರ ಬಿಲ್ ನಾವೇ ಕಟ್ಟಬೇಕು: ಶ್ರೀನಿವಾಸ್

    ಗದಗ: ಸಾಮಾನ್ಯ ಜನರು ಹೋಟೆಲ್‍ನಲ್ಲಿ ಊಟಮಾಡುವಂತಿಲ್ಲ. ನಾವು ಊಟ ತಿಂದ್ರೆ ನಮ್ಮ ಜೊತೆಗೆ ನರೇಂದ್ರ ಮೋದಿ, ಅಮಿತ್ ಶಾ ಕೂಡ ತಿಂತಾರೆ. ಅವರಿಬ್ಬರದ್ದೂ ಬಿಲ್ ನಾವೇ ಕಟ್ಟಬೇಕು. ಹೋಟೆಲ್‍ನಲ್ಲಿ ಜಿಎಸ್‍ಟಿ ರೂಪದಲ್ಲಿ ಕಟ್ಟುವ ತೆರಿಗೆ ಅವರಿಗೆ ಹೋಗುತ್ತೆ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್‍ಗಳಂತಹ ಹೋರಾಟ ನಡೆಸುವವರಿಗೆ ನೇರವಾಗಿ ಬಿಜೆಪಿ ಸಪೋರ್ಟ್‌ ಮಾಡ್ತಿದೆ. ಕೇವಲ ಜೈಕಾರ ಹಾಕುವುದರಿಂದ ಹೊಟ್ಟೆ ತುಂಬಲ್ಲ. ಜೈಕಾರದಿಂದ ಕೆಲಸ ಸಿಗುತ್ತಾ? ಬೆಲೆ ಏರಿಕೆ ಇಳಿಯುತ್ತಾ? ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದೆ. ಈಶ್ವರಪ್ಪ, ಸಿ.ಟಿ.ರವಿ, ಆರಗ ಜ್ಞಾನೇಂದ್ರ ಇವರಿಗೆಲ್ಲ ತಲೆ ಸರಿ ಇಲ್ಲ ಅನ್ಸುತ್ತೆ. ಆರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ಕಿಲ್ಲ. ಬಿಜೆಪಿ ರಕ್ತದಲ್ಲೇ ಸುಳ್ಳು ಹೇಳುವುದು, ಕ್ಷಮೆ ಕೇಳುವುದು ಬಂದಿದೆ. 25 ಜನ ದಂಡ ಪಿಂಡಗಳನ್ನು ಲೋಕಸಭಾ ಸದಸ್ಯರಾಗಿ ಇಲ್ಲಿಂದ ಗೆಲ್ಲಿಸಿ ಕಳುಹಿಸಿದ್ದಾರೆ. ಅವರನ್ನು ಕಳುಹಿಸಿದ್ದು, ಕರ್ನಾಟಕದ ಪರ ಧ್ವನಿ ಎತ್ತಲಿ ಅಂತ. ಆದರೆ ಅವರು ಇಲ್ಲಿ ಕೋಮುಗಲಭೆ, ಗಲಾಟೆಗಳಿಗೆ ಕುಮ್ಮುಕ್ಕು ಕೊಡೋದನ್ನು ಬಿಡಬೇಕು. ಬಿಜೆಪಿ ಅಂದ್ರೆ ಬೆಲೆ ಏರಿಕೆ, ನರೇಂದ್ರ ಮೋದಿ ಅಂದ್ರೆ ಬೆಲೆ ಏರಿಕೆ. ಬೇರೆ ರಾಜ್ಯಗಳಲ್ಲಿ ನಾವು ಹೋದಾಗ ಕರ್ನಾಟಕ ಕೈಸಾ ಹೈ ಅಂತಾರೆ. ಕರ್ನಾಟಕ ಅಂದ್ರೆ ನಾಟಕ ಮಾಡೋರು ಎನ್ನುವ ಟೈಟಲ್ ಬಿಜೆಪಿ ಕೊಟ್ಟಿದೆ ಎಂದು  ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವ್ರೇ ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗೋದು ಬೇಡ: ದಿನೇಶ್ ಗುಂಡೂರಾವ್

    ಪ್ರದೇಶ  ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿ, ಬೆಂಗಳೂರ ಚಂದ್ರು ಕೊಲೆ ಸ್ಟೇಟ್‍ಮೆಂಟ್ ಕರೆಕ್ಟ್ ಮಾಡೋದಕ್ಕೆ ಯಾರೋ ಒಬ್ಬನ್ನ ರೆಡಿ ಮಾಡಿ ಟಿವಿಯಲ್ಲಿ ಬಿಟ್ಟಿದ್ದಾರೆ. ಆರಗ ಜ್ಞಾನೇಂದ್ರ ಒಳ್ಳೆ ಫಸ್ಟ್ ಸ್ಟ್ಯಾಂಡರ್ಡ್ ಹುಡುಗರಂತೆ ಆಡ್ತಾರೆ. ಗೃಹ ಸಚಿವರು ಬೆಳಗ್ಗೆ ಒಂದು ಮಧ್ಯಾಹ್ನ, ಸಂಜೆ ಒಂದೊಂದು ಹೇಳಿಕೆ ಕೊಡ್ತಾರೆ. ಯಾವುದೇ ಕೊಲೆ, ಹಲ್ಲೆ ಪ್ರಕರಣಗಳಾಗಲಿ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದರೆ ಅದಕ್ಕೆ ಒಂದು ಕಮ್ಯೂನಲ್ ಕಲರ್ ಕೊಡೋದು ಸರಿಯಲ್ಲ. ಬೆಲೆ ಏರಿಕೆ ಮುಚ್ಚಿ ಹಾಕಲು ಬಿಜೆಪಿ ಕೋಮು ಗಲಭೆ ಸೃಷ್ಟಿಸಲು ಟ್ರೈ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: BJP, RSS ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದೆ: ಬಿ.ಕೆ ಹರಿಪ್ರಸಾದ್

    ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಯುವಮೋರ್ಚ ಘಟಕ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

     

  • ವಿಧಾನಸಭೆ ಚುನಾವಣೆ – ವರ್ಷಕ್ಕೂ ಮುನ್ನ ಬಳ್ಳಾರಿ ಟಿಕೆಟ್‍ಗಾಗಿ ಲಾಬಿ ಶುರು

    ವಿಧಾನಸಭೆ ಚುನಾವಣೆ – ವರ್ಷಕ್ಕೂ ಮುನ್ನ ಬಳ್ಳಾರಿ ಟಿಕೆಟ್‍ಗಾಗಿ ಲಾಬಿ ಶುರು

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ‌ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‍ಗಾಗಿ ಲಾಬಿ ಶುರುವಾಗಿದ್ದು, ಬಳ್ಳಾರಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಪಡೆಯಲು ಕಸರತ್ತು ಆರಂಭವಾಗಿದೆ.

    ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ತಮಗೆ ಟಿಕೆಟ್ ನೀಡುವಂತೆ ಕುಡುಚಿ ಶ್ರೀನಿವಾಸ್, ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭೇಟಿಯಾಗಿ ಟಿಕೆಟ್ ನೀಡುವಂತೆ ಶ್ರೀನಿವಾಸ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಬಳ್ಳಾರಿಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಅನಿಲ್ ಲಾಡ್ ಕೂಡಾ ಪ್ರಯತ್ನ ನಡೆಸುತ್ತಿದ್ದು ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅನಿಲ್ ಲಾಡ್ ಬದಲು ತಮಗೆ ಟಿಕೆಟ್ ನೀಡಿದರೇ ತಾವು ಈಗಿನಿಂದಲೇ ಕೆಲಸ ಆರಂಭಿಸಲಿದ್ದು ಗೆಲವು ಖಚಿತ ಎಂದು ಶ್ರೀನಿವಾಸ್ ಹೈಕಮಾಂಡ್ ನಾಯಕರ ಮುಂದೆ ಹೇಳಿಕೊಂಡಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಕುಡುಚಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಟಿಕೆಟ್‍ಗಾಗಿ ದೆಹಲಿಯಲ್ಲಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭೇಟಿಗೂ ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಜೇಮ್ಸ್ ಚಿತ್ರವನ್ನೂ ಯಾವುದೇ ಕಾರಣಕ್ಕೂ ತೆಗೆಯಬಾರದು: ಡಿಕೆಶಿ

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತವರು ಹಿಮಾಚಲ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿಲ್ಲ, ಇದು ಜನ ಸಾಮಾನ್ಯರು ನೀಡಿದ ಬೆಲೆ ಏರಿಕೆಯ ಉಡುಗೊರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಹೇಳಿದ್ದಾರೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೀಪಾವಳಿಗೆ ದೇಶಾದ್ಯಂತ ಜನರು ಸೋಲಿನ ಉಡುಗೊರೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಿದರು.

    ಹಿಮಾಚಲ ಪ್ರದೇಶದಲ್ಲಿ ಮೂರು ವಿಧಾನಸಭೆ, ಒಂದು ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ ಇಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. ಕಾಂಗ್ರೆಸ್ ಹಿಮಾಚಲ ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ತಮ ಸಾಧನೆ ಮಾಡಿದೆ. ರಾಜಸ್ಥಾನದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು.

    ಕೋಮುವಾದ ದೇಶದ ಜನರಲ್ಲಿ ಒಡಕು ಉಂಟು ಮಾಡಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಯ ಕೋಮುವಾದದ ಸ್ಟಾಟರ್ಜಿ ವರ್ಕೌಟ್ ಆಗಿಲ್ಲ. ಹೀಗಾಗಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದೆ 2023 ರ ಚುನಾವಣೆಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದ್ದು ಸರ್ಕಾರ ರಚನೆ ಮಾಡಲಿದೆ ಎಂದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್‍ಡಿಡಿ ಆರೋಪ

    ಸಿಂದಗಿಯಲ್ಲಿ ಬಿಜೆಪಿ ಹಣ ಖರ್ಚು ಮಾಡಿ ಗೆದ್ದಿದೆ, ಕ್ಷೇತ್ರದಲ್ಲಿ ಹಣ ಹಂಚಿರುವುದು ಬಹಿರಂಗ ಸತ್ಯ ಮುಂದಿನ ದಿನಗಳಲ್ಲಿ ಇದು ನಡೆಯಲ್ಲ. ಒಂದೇ ತಿಂಗಳಲ್ಲಿ 36 ಬಾರಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ. ಜನರು ಪರ್ಯಾಯ ಬಯಸಿದ್ದು ಮುಂದೆ ಕಾಂಗ್ರೆಸ್ ಗೆ ಉತ್ತಮ ದಿನಗಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕುಮಾರಸ್ವಾಮಿ ಅವರದ್ದು ಮಾಟ ಮಂತ್ರ ಮಾಡೋ ಕುಟುಂಬ: ಎಸ್.ಆರ್ ಶ್ರೀನಿವಾಸ್

    ಕುಮಾರಸ್ವಾಮಿ ಅವರದ್ದು ಮಾಟ ಮಂತ್ರ ಮಾಡೋ ಕುಟುಂಬ: ಎಸ್.ಆರ್ ಶ್ರೀನಿವಾಸ್

    ತುಮಕೂರು: ಹೊಟ್ಟೆಗೆ ಏನ್ ತಿಂತಿಯಾ, ಮಾಟ ಮಂತ್ರ ಮಾಡೋ ಕುಟುಂಬ ನಿನ್ನದು. ನಾಚಿಕೆ ಆಗಲ್ವಾ ನಿನಗೆ ಎಂದು ಏಕ ವಚನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ.

    ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮದು ನಾಲಿಗೆನಾ. ಬಾಯಿ ಬಿಟ್ಟರೆ ಅಸತ್ಯ. ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತಿಯಾ. ಎಂಥಾ ಆಸಾಮಿಗಳು ಇವರು. 20 ವರ್ಷ ಪಕ್ಷ ಕಟ್ಟಿದ್ದ ನನ್ನ ಆಚೆಗೆ ಹಾಕ್ತಿಯಾ. ಗಣಿ ದುಡ್ಡು ಬಂತು ಅಂತೇಳಿ. ನಿನಗೆ ಮಾನಮರ್ಯಾದೆ ಇಲ್ಲ. ಮೊಸಳೆ ಕಣ್ಣೀರಿನ ಮೂಲಕ ಜನರನ್ನು ತಲುಪಲು ಇನ್ನೂ ಆಗಲ್ಲ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

    ನನಗೆ ಯಾರೂ ದಿಕ್ಕಿಲ್ಲ. ಕಾಂಗ್ರೆಸ್‍ನವರೇ ಈಗ ನನಗೆ ದಿಕ್ಕು. ಸಿದ್ದರಾಮಣ್ಣ ಜೊತೆಗೆ ಕರೆದುಕೊಂಡು ಹೋದರೆ ಅವರ ಜೊತೆ ಹೋಗುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

    ಜೆಡಿಎಸ್‍ನಿಂದ ಹೊರಬಿದ್ದಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರುವುದು ಫಿಕ್ಸ್ ಆಗಿದೆ. ಖಾಸಗಿ ಆಸ್ಪತ್ರೆ ಉದ್ಘಾಟನೆಗೆಂದು ಗುಬ್ಬಿಗೆ ಬಂದಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸಮಾವೇಶ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಜೊತೆ ಎಸ್‍ಆರ್ ಶ್ರೀನಿವಾಸ್ ಮತ್ತು ಬೆಮೆಲ್ ಕಾಂತರಾಜು ಕಾಣಿಸಿಕೊಂಡರು. ಎಸ್‍ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ರೆ ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಎಂದು ಸಿದ್ರಾಮಯ್ಯ ಘೋಷಿಸಿದರು. ನೀವಿಬ್ರು ಪಕ್ಷಕ್ಕೆ ಬಂದ್ರೆ ಗೌರವಯುತವಾಗಿ ನಡೆಸಿಕೊಳ್ತೀವಿ ಎಂದು ಆಫರ್ ನೀಡಿದರು.

  • ಸ್ಟಾರ್ ನಟರಿಗೆ ಬಣ್ಣ ಹಚ್ಚಿದ ಮೇಕಪ್ ಮ್ಯಾನ್ ಸೀನಣ್ಣ ಇನ್ನಿಲ್ಲ

    ಸ್ಟಾರ್ ನಟರಿಗೆ ಬಣ್ಣ ಹಚ್ಚಿದ ಮೇಕಪ್ ಮ್ಯಾನ್ ಸೀನಣ್ಣ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಿಗೆ ಮೇಕಪ್ ಮಾಡಿದ್ದ ಮೇಕಪ್ ಸೀನಣ್ಣ ನಿಧನರಾಗಿದ್ದಾರೆ. ಹಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮೇಕಪ್ ಸೀನಣ್ಣ ಇಂದು ಬೆಳಗ್ಗೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಹಲವಾರು ವರ್ಷಗಳಿಂದ ಚಂದನವನದಲ್ಲಿ ಶ್ರೀನಿವಾಸ್‍ರವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದು, ಮೇಕಪ್ ಸೀನಣ್ಣ ಎಂದೇ ಖ್ಯಾತಿ ಪಡೆದಿದ್ದರು. ಅಲ್ಲದೇ ಶ್ರೀನಿವಾಸ್ ವರ್ಣಾಲಂಕಾರ ಮತ್ತು ಕೇಶಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷರಾಗಿದ್ದರು.

    ಮೇಕಪ್ ಶ್ರೀನಿವಾಸ್‍ರವರು ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಬಹದ್ದೂರ್, ಭರ್ಜರಿ, ಭರಾಟೆ ಇನ್ನಿತರ ಅನೇಕ ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‍ರವರ ಮುಂಬರುವ ಜೇಮ್ಸ್ ಸಿನಿಮಾಕ್ಕೆ ಕೂಡ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದುರದೃಷ್ಟವಶತ್ ಮೇಕಪ್ ಸೀನಣ್ಣ ಇಂದು ಎಲ್ಲರನ್ನು ಅಗಲಿದ್ದಾರೆ.

    ಸದ್ಯ ಮೇಕಪ್ ಮ್ಯಾನ್ ಸೀನಣ್ಣ ಸಾವಿಗೆ ನಿರ್ದೇಶಕ ಚೇತನ್ ಕುಮಾರ್ ಸಂತಾಪ ಸೂಚಿಸಿದ್ದು, ‘ನನ್ನ ಎಲ್ಲ ಸಿನಿಮಾಗಳಿಗೂ ಮೇಕಪ್ ಕಲಾವಿದರಾಗಿ ಕೆಲಸ ನಿರ್ವಹಿಸಿದ್ದ ಸೀನಣ್ಣ ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ. ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲ ಎಂದರೆ ನಿಜವಾಗಿಯೂ ನಂಬಲಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೀನಣ್ಣ. ವೀ ಮಿಸ್ ಯೂ’ ಎಂದು ಟ್ವೀಟ್ ಮಾಡಿದ್ದಾರೆ.

  • ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ

    ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ

    ಚಿತ್ರದುರ್ಗ: ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

    ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಆದೇಶ ಹೊರಡಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಡಿ.ಟಿ. ಶ್ರೀನಿವಾಸ್ ಅವರು ಬಿಜೆಪಿ ಹಿಂದುಳಿದ ಮೋರ್ಚಾ ಉಪಾದ್ಯಕ್ಷರಾಗಿದ್ದರು. ಎಂಎಲ್‍ಸಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶ್ರೀನಿವಾಸ್ ಕಣದಲ್ಲಿದ್ದರು.

  • ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಬೆಂಗಳೂರು: ಕನ್ನಡದ ಎದೆಗಾರಿಕೆಯ ನಿರ್ದೇಶಕಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದ ಸುಮನಾ ಕಿತ್ತೂರ್ ಕೊರೊನಾ ಕಾಲದಲ್ಲಿ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.

    ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸುಮನಾ ಅವರು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳವಾಗಿ ನಮ್ಮ ವಿವಾಹ ನಡೆದಿದೆ. ಏಪ್ರಿಲ್ ನಲ್ಲಿ ಲಾಕ್‍ಡೌನ್ ತೆರವಾದ ಬಳಿಕ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯ ಪದ್ದತಿಯ ಪ್ರಕಾರ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಈ ಆಸೆ ಈ ಸಮಯದಲ್ಲಿ ಕಷ್ಟ ಸಾಧ್ಯವಾಗಿದ್ದರಿಂದ ಪಾಂಡಿಚೇರಿಯಲ್ಲಿ ಸರಳವಾಗಿ ನಮ್ಮ ವಿವಾಹ ನಡೆಯಿತು ಎಂದು ತಿಳಿಸಿದ್ದಾರೆ.

    ಸುಮನಾ ಅವರ ಗೆಳೆಯ ಶ್ರೀನಿವಾಸ್ ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.