Tag: Srinivas Prasad

  • ಕರ್ನಾಟಕ ಗೌಡರ ಅಪ್ಪನ ಮನೆ ಆಸ್ತಿನಾ – ಬಿಜೆಪಿ ಶಾಸಕ ಪ್ರೀತಂಗೌಡ ಪ್ರಶ್ನೆ

    ಕರ್ನಾಟಕ ಗೌಡರ ಅಪ್ಪನ ಮನೆ ಆಸ್ತಿನಾ – ಬಿಜೆಪಿ ಶಾಸಕ ಪ್ರೀತಂಗೌಡ ಪ್ರಶ್ನೆ

    ಮೈಸೂರು: ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ರಾಮನಗರ ಗಂಡನಿಗೆ, ಚೆನ್ನಪಟ್ಟಣ ಹೆಂಡ್ತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ.. ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವ್ಯಾರೂ ಸಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ.

    ಮೊದಲು ಮನೆಯ ಕುಟುಂಬಸ್ಥರು ಆಸ್ತಿ ಭಾಗ ಮಾಡುವಾಗ ಮೇಲ್ಗಡೆ ಗದ್ದೆ ನಿನಗೆ, ಕೆಳಗಡೆ ತೋಟ ತಮ್ಮನಿಗೆ ಅಂತಾ ಹಂಚುತ್ತಿದ್ದರು. ಇದೀಗ ದೇವೇಗೌಡರು ಕರ್ನಾಟಕದ ಕ್ಷೇತ್ರಗಳನ್ನು ಮಕ್ಕಳು, ಮೊಮ್ಮಕಳಿಗೆ ಹಂಚುತ್ತಾ ಬರುತ್ತಿದ್ದಾರೆ. ದೇವೇಗೌಡ್ರ ಕುಟುಂಬಕ್ಕೆ ಮತ ಹಾಕಿದ್ರೆ ಅದು ಪ್ರೈವೇಟ್ ಪ್ರಾಪರ್ಟಿ ಇದ್ದ ಹಾಗೆ. ಬಿಜೆಪಿಗೆ ಮತ ಹಾಕಿದ್ರೆ ಅದು ದೇಶದ ಅಭಿವೃದ್ಧಿಗೆ. ಗೌಡರು ಎಂದ್ರೆ, ದೇವೇಗೌಡ್ರ ಕುಟುಂಬ ಮಾತ್ರ ಅಲ್ಲ. ಪ್ರತಾಪ್ ಸಿಂಹ, ನಾಗೇಂದ್ರ ಅವರು ಅಫ ಘಾನಿಸ್ತಾನದಿಂದ ಬಂದಿಲ್ಲ. ಅವರೆಲ್ಲಾನೂ ಕರ್ನಾಟಕದ ಗೌಡರೇ ಎಂದು ಹೇಳಿದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ದೇವೇಗೌಡರಿಗೆ ಈಗ 86 ಆಗಿದೆ, ಮುಂದಿನ ಎಲೆಕ್ಷನ್ ಟೈಮ್ ನಲ್ಲಿ 91 ಆಗಿರುತ್ತದೆ. 100 ವರ್ಷ ಪೂರ್ಣಗೊಂಡ ಬಳಿಕವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು. ಜೆಡಿಎಸ್ ನಿಂದ ಸಂಸದರಾಗಿ ಹೊರಗಿನವರು ಇಬ್ಬರು. ಒಬ್ಬರು ಚಲುವರಾಯಸ್ವಾಮಿ ಮತ್ತೊಬ್ಬರು ಪುಟ್ಟರಾಜು. ಇವರಿಬ್ಬರು ದೇವೇಗೌಡರನ್ನು ಕೈ ಹಿಡಿದುಕೊಂಡು ಸಂಸತ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ಬಾರಿ ಅವರಿಬ್ಬರಿಗೂ ಅವಕಾಶ ನೀಡದೇ ಪ್ರಜ್ವಲ್ ಮತ್ತು ನಿಖಿಲ್‍ರನ್ನು ಊರುಗೋಲು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ವ್ಯಂಗ್ಯ ಮಾಡಿದರು.

    ಮಂಡ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಆದ್ರೆ ಸಂಸತ್ತಿನಲ್ಲಿ ಈ ಬಗ್ಗೆ ಯಾರು ಮಾತನಾಡಲ್ಲ. ಇಷ್ಟು ವರ್ಷ ಕಳೆದರೂ ದೇವೇಗೌಡರಿಗೆ ಓರ್ವ ಸಮರ್ಥ ನಾಯಕನನ್ನು ಕೊಡಲು ಆಗಲಿಲ್ಲ. ಇದೀಗ ಮಂಡ್ಯಕ್ಕೆ ನಿಖಿಲ್ ಅಂತೆ, ಹಾಸನಕ್ಕೆ ಪ್ರಜ್ವಲ್ ಅಂತೆ ನಾಚಿಕೆ ಆಗಲ್ವಾ ನಿಮಗೆ ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರ ಹಾಕಿದರು.

    ದೇವೇಗೌಡರು ಮಾಜಿ ಪ್ರಧಾನಿಗಳು, ನಮಗೂ ಅವರ ಬಗ್ಗೆ ಗೌರವ ಇದೆಯೇ ಹೊರತು ನಂಬಿಕೆ ಇಲ್ಲ. ರಾಜ್ಯದ ಜನರು ಸಹ ದೇವೇಗೌಡರ ಬಗ್ಗೆ ಗೌರವ ಹೊಂದಿದ್ದು, ನಂಬಿಕೆಯನ್ನು ಇಟ್ಟುಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದಾರೆ. 37 ಸ್ಥಾನ ಇರೋ ನಮಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ ಎಂದು ದೇವೇಗೌಡರು ರಾಜಿಯಾಗಿದ್ದಾರೆ. ಮೈತ್ರಿಯಲ್ಲಿ ಸಮನ್ವಯತೆ ಇಲ್ಲ, ಆಡಳಿತಾತ್ಮಕ ಚಟುವಟಿಕೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಾಜಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಷ್ಟೊಂದು ಕೀಳುಮಟ್ಟದ ರಾಜಕಾರಣ ನಾನೆಂದೂ ನೋಡಿಲ್ಲ – ವಿ.ಶ್ರೀನಿವಾಸ ಪ್ರಸಾದ್ ಬೇಸರ

    ಇಷ್ಟೊಂದು ಕೀಳುಮಟ್ಟದ ರಾಜಕಾರಣ ನಾನೆಂದೂ ನೋಡಿಲ್ಲ – ವಿ.ಶ್ರೀನಿವಾಸ ಪ್ರಸಾದ್ ಬೇಸರ

    ಮೈಸೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದ್ದು, ಯಾವುದೇ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇಂದು ನಾನು ಮೂಕ ಪ್ರೇಕ್ಷಕನಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.

    ಚುನಾವಣೆಯಲ್ಲಿ ಕೊಟ್ಟ ಅವಕಾಶವನ್ನು ಸರಿಯಾಗಿ ನಿಭಾಯಿಸಲು ಜೆಡಿಎಸ್ ವಿಫಲವಾಗಿದ್ದರೆ, ಇತ್ತ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಸರ್ಕಾರ ನಡೆಸಲು ಕಾಂಗ್ರೆಸ್ ಕೂಡ ವೈಫಲ್ಯ ಅನುಭವಿಸಿದೆ. ಬಿಜೆಪಿ ಕೂಡ ಜನರ ಆದೇಶದಂತೆ ವಿರೋಧಿ ಪಕ್ಷದಲ್ಲಿ ಕುಳಿತು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಇದರಿಂದ ರಾಜ್ಯದ ಜನರು ಬೇಸರಗೊಂಡಿದ್ದು, ನನಗೂ ಅಸಹ್ಯ ಎನಿಸುತ್ತಿದೆ. ಕಳೆದ 7 ತಿಂಗಳಿನಿಂದ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನನ್ನ 40-45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿಲ್ಲ. ದೋಸ್ತಿ ಪಕ್ಷಗಳು ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ ಎಂದು ಮಾತ್ರ ಹೇಳಿಕೆ ನೀಡುತ್ತಾರೆ. ಆದರೆ ಅವರಲ್ಲಿ ಎಷ್ಟು ಅಸಮಾಧಾನ ಇದೆ ಎನ್ನುವುದು ಅವರಿಗೆ ತಿಳಿದಿದೆ. ಕರ್ನಾಟಕದ ರಾಜಕಾರಣದ ಬಗ್ಗೆ ಇಡೀ ದೇಶದಲ್ಲೇ ಒಳ್ಳೆಯ ಅಭಿಪ್ರಾಯವಿತ್ತು. ಇಂದು ರಾಜ್ಯದಲ್ಲಿ ಪವರ್ ಪಾಲಿಟಿಕ್ಸ್ ಮಾತ್ರ ನಡೆಯುತ್ತಿದೆ ಎಂದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶ್ರೀನಿವಾಸ ಪ್ರಸಾದ್ ಅವರು, ಸಚಿವ ರೇವಣ್ಣ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿ. ಅವರೇ ಹೇಳಿದಂತೆ, ಪಂಚಾಂಗ ನೋಡಿ ಸಮಯ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಸಮ್ಮಿಶ್ರ ಸರ್ಕಾರ 2 ಕಾರಣಗಳಾಗಿ ಮಾತ್ರ ನಡೆಯುತ್ತಿದ್ದು, ಒಂದು ಕಾಂಗ್ರೆಸ್ ಮುಕ್ತ ಸರ್ಕಾರ ಆಗುತ್ತೆ ಎಂಬ ಭಯ ಹಾಗೂ ಜೆಡಿಎಸ್ ಪಕ್ಷದ ಸಿಎಂ ಸ್ಥಾನದ ಆಸೆ ಅಷ್ಟೇ. ಸರ್ಕಾರ ರಚನೆ ಆದ ಮೊದಲ ದಿನದಿಂದಲೂ ಕೂಡ ಹೊಂದಾಣಿಕೆ ಆಗಿಲ್ಲ ಎಂದು ಹೇಳಿದರು.

    ಬಿಜೆಪಿ ಪಕ್ಷದ ಅನುಭವಿ ಮುಖಂಡನಾಗಿ ನಾನು ಪಕ್ಷದ ಹೈಕಮಾಂಡ್‍ಗೆ ಸಲಹೆ ನೀಡಿದ್ದೇನೆ. ಅವುಗಳನ್ನು ಸ್ವೀಕರಿಸುವುದು ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಲೋಕಸಭಾ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲು ಅವಕಾಶ ಇದೆ. ಆದ್ದರಿಂದ ಎದುರಾಳಿಗಳ ಮೈತ್ರಿ ಕೂಟ ಯಶಸ್ವಿಯಾಗುವುದಿಲ್ಲ. ರಾಷ್ಟ್ರ ಮಟ್ಟದಲ್ಲಿಯೂ ಕೂಡ ಮೈತ್ರಿ ನಿರೀಕ್ಷೆ ಮಟ್ಟದಲ್ಲಿ ಇಲ್ಲ. ಚುನಾವಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ತೋರಲಿದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ, ಆತನ ಪೆದ್ದು ಮಗನನ್ನು ಸೋಲಿಸೋದು ಕಷ್ಟ ಆಗಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ, ಆತನ ಪೆದ್ದು ಮಗನನ್ನು ಸೋಲಿಸೋದು ಕಷ್ಟ ಆಗಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ. ಇನ್ನೂ ಆತನ ಪೆದ್ದು ಮಗನನ್ನು ಸೋಲಿಸುವುದು ನಮಗೆ ಕಷ್ಟ ಆಗ್ತಿರಲಿಲ್ಲ. ಆದರೆ ಬಿಜೆಪಿ ಅವರು ನನ್ನ ಮಾತು ಕೇಳಲಿಲ್ಲ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ನಂಜನಗೂಡಿನಲ್ಲಿ ಮಾತನಾಡಿದ ಮಾಜಿ ಸಚಿವರು, ಬಿಜೆಪಿ ಅವರು ನನ್ನ ಮಾತು ಕೇಳಿದ್ದರೆ ಮೈಸೂರು ಭಾಗದಲ್ಲಿ ಇನ್ನೂ ಮೂರು ಕ್ಷೇತ್ರ ಗೆಲ್ಲಬಹುದಿತ್ತು. ಆದರಲ್ಲೂ ವರುಣಾ ಕ್ಷೇತ್ರವನ್ನು ನಿಶ್ಚಿತವಾಗಿ ಗೆಲುತ್ತಿದ್ದೇವು. ಅವರಪ್ಪನನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದೇವೆ. ಇನ್ನೂ ಅವರ ಪೆದ್ದು ಮಗನನ್ನು ಸೋಲಿಸುವುದು ನಮಗೆ ಕಷ್ಟ ಆಗ್ತಿರಲಿಲ್ಲ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ನನ್ನ ಮಾತು ಕೇಳಲಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂತಾ ಹೋಟೆಲ್ ವ್ಯಾಪಾರಿಗೆ ಕೊಟ್ಟು ಕ್ಷೇತ್ರ ಕಳೆದು ಹೋಗುವಂತೆ ಮಾಡಿದರು ಎಂದರು.

    ಸಿದ್ದರಾಮಯ್ಯನವರು ಮಂತ್ರಿ ಮಂಡಲದಲ್ಲಿ ಮಾತನಾಡಿದ ಮಾತನ್ನು ಮರೆತಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿ 16 ಜನ ಮಂತ್ರಿಗಳು ಸೋತರು. 18 ರಿಂದ 78 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾದರು. ತಮ್ಮ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮಂತ್ರಿಗಳು ಹೀನಾಯವಾಗಿ ಸೋತರು. ನಂಜನಗೂಡು ಉಪ ಚುನಾವಣೆ ಫಲಿತಾಂಶದ ಬಳಿಕ ಆ ಮಹಾನ್ ನಾಯಕನನ್ನು ಸೋಲಿಸಿದ್ದೇನೆ ಎಂದು ನನ್ನನ್ನು ಟೀಕಿಸಿದ್ದರು.

    ಲೋಕಸಭಾ ಚುನಾವಣೆಗೆ ನಾನು ಮತ್ತು ನನ್ನ ಸಂಬಂಧಿಕರು ಸ್ಪರ್ಧೆ ಮಾಡಲ್ಲ. ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ನಾಯಕರ ಬಳಿ ಹೇಳಿಕೊಂಡಿದ್ದಾರೆ. ಮುಂದಿನ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವುದಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 16 ಲಕ್ಷಕ್ಕೂ ಅಧಿಕ ಮತಗಳಿವೆ. ಎಲ್ಲ ಕ್ಷೇತ್ರದ ನಾಯಕರು ಸೇರಿ ಅಭ್ಯರ್ಥಿ ಯಾರು ಎಂಬುವುದನ್ನು ಚರ್ಚಿಸಿ ಹೈಕಮಾಂಡ್ ಗೆ ತಿಳಿಸಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು. .

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಸೋಲಿಸಲು ಎಲ್‍ಡಿಎನ್, ಜಿಎಲ್‍ಡಿಎನ್ ತಂತ್ರ ಹೆಣೆದ ಶ್ರೀನಿವಾಸ ಪ್ರಸಾದ್!

    ಸಿಎಂ ಸೋಲಿಸಲು ಎಲ್‍ಡಿಎನ್, ಜಿಎಲ್‍ಡಿಎನ್ ತಂತ್ರ ಹೆಣೆದ ಶ್ರೀನಿವಾಸ ಪ್ರಸಾದ್!

    ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಆಗಿರುವ ಸೋಲಿಗೆ ಸಿಎಂ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಚಾಮುಂಡೇಶ್ವರಿಯಲ್ಲಿ ಎಲ್‍ಡಿಎನ್ ಮತ್ತು ವರುಣಾ ಕ್ಷೇತ್ರದಲ್ಲಿ ಜಿಎಲ್‍ಡಿಎನ್ ತಂತ್ರವನ್ನು ಹೆಣೆದಿದ್ದಾರೆ.

    ಬಿಜೆಪಿಯ ಗೆಲುವಿಗೆ ವರುಣಾದಲ್ಲಿ ಲಿಂಗಾಯತ, ದಲಿತ, ನಾಯಕ(ಎಲ್‍ಡಿಎನ್) ಮತಗಳನ್ನು ಕ್ರೋಢೀಕರಿಸುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ, ದಲಿತ, ನಾಯಕ(ಜಿಎಲ್‍ಡಿಎನ್) ಮತಗಳನ್ನು ಕ್ರೋಢೀಕರಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಇದೇ ವಿಚಾರವಾಗಿ ಲಿಂಗಾಯತ ಮತ್ತು ವೀರಶೈವರ ಮತಗಳನ್ನು ಸೆಳೆಯಲು ಸುತ್ತೂರು ಮಠದ ಸ್ವಾಮಿಗಳ ಜೊತೆ ಶ್ರೀನಿವಾಸ್ ಪ್ರಸಾದ್ ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆಯನ್ನು ನಡೆಸಿದ್ದಾರೆ.

    ವರುಣಾ ಕ್ಷೇತ್ರದಲ್ಲಿ 60,000 ಲಿಂಗಾಯತರು, 42,000 ಪರಿಶಿಷ್ಠ ಜಾತಿ, 24,000 ಪರಿಶಿಷ್ಠ ಪಂಗಡ, 33,000 ಕುರುಬರು ಹಾಗೂ 13,000 ಒಕ್ಕಲಿಗ ಮತಗಳಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚು ಒಕ್ಕಲಿಗರ ಮತಗಳಿದ್ದು ನಂತರದ ಸ್ಥಾನದಲ್ಲಿ ಕುರುಬ, ನಾಯಕ, ಲಿಂಗಾಯತ ಮತ್ತು ದಲಿತ ಮತಗಳಿವೆ.

    2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳ ಅಂತರದಿಂದ ಸೋಲಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ ನ ಜಿಟಿ ದೇವೇಗೌಡ ಅವರು ಕಾಂಗ್ರೆಸ್‍ನ ಎಂ ಸತ್ಯನಾರಾಯಣ ಅವರನ್ನು 7,103 ಮತಗಳಿಂದ ಸೋಲಿಸಿದ್ದರು.

  • ದೇಶ ಸುತ್ತಿದ್ದೇನೆ, ಸಂವಿಧಾನ ಅರಿತಿದ್ದೇನೆ: ಶ್ರೀನಿವಾಸ ಪ್ರಸಾದ್ ಗೆ ಪೇಜಾವರ ಶ್ರೀ ಖಡಕ್ ತಿರುಗೇಟು

    ದೇಶ ಸುತ್ತಿದ್ದೇನೆ, ಸಂವಿಧಾನ ಅರಿತಿದ್ದೇನೆ: ಶ್ರೀನಿವಾಸ ಪ್ರಸಾದ್ ಗೆ ಪೇಜಾವರ ಶ್ರೀ ಖಡಕ್ ತಿರುಗೇಟು

    ಉಡುಪಿ: ನನಗೆ ಸಂವಿಧಾನ ಬಗ್ಗೆ ಅರಿವಿದೆ. ಸಂವಿಧಾನ ರಚನೆಯಾಗುವಾಗ ನನಗೆ 18 ವರ್ಷ ಆಗಿತ್ತು. ಸಂವಿಧಾನ ರಚನಾ ಸಮಿತಿಯಲ್ಲಿ ಯಾರೆಲ್ಲಾ ಸದಸ್ಯರು ಅಂತ ಗೊತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‍ರಿಗೆ ಪೇಜಾವರ ಶ್ರೀಗಳು ಖಡಕ್ ತಿರುಗೇಟು ನೀಡಿದ್ದಾರೆ.

    ಪತ್ರಿಕೆ ಓದಿ, ಲೋಕ ಸಂಚಾರ ಮಾಡಿದ ಅನುಭವ ನನಗಿದೆ. ನನಗೆ ಏನೂ ಗೊತ್ತಿಲ್ಲ ಅಂತ ಹೇಳುವುದು ಬೇಡ, ಸಂವಿಧಾನದಲ್ಲಿ ಹಲವು ತಿದ್ದುಪಡಿಯಾಗಿದೆ. ಈಗಲೂ ತಿದ್ದುಪಡಿಯಾದರೆ ತಪ್ಪೇನು ಎಂದು ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.

    ಮಠಾಧಿಪತಿಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ. ಸಮಾಜದ ಬಗ್ಗೆ ನಾನು ಮಾತನಾಡಿದರೆ ತಪ್ಪೇನು? ಕೆಲ ವಿಚಾರಗಳು ಜಾತ್ಯಾತೀತತೆಗೆ ವಿರುದ್ಧವಾಗಿದೆ. ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತ ಜನರನ್ನು ಸರ್ಕಾರ ಒಂದೇ ರೀತಿಯಲ್ಲಿ ಕಾಣಬೇಕು. ಸರ್ಕಾರದ ಶಾದಿ ಭಾಗ್ಯ ಯೋಜನೆ ಹಿಂದುಳಿದವರಿಗೆ ಮತ್ತು ದಲಿತರಿಗೂ ಸಿಗಬೇಕು. ಒಂದು ವೇಳೆ ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ತಿಳಿಸಿ ಅಂತಾ ಅಂದರು. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

    ಶೃಂಗೇರಿ ಶ್ರೀಗಳ ವಿಚಾರ ಬೇರೆ ಇರಬಹುದು. ಹಲವು ಮಠಾಧಿಪತಿಗಳು ಜಾತ್ಯಾತೀತದ ಬಗ್ಗೆ ಮಾತನಾಡುತ್ತಾರೆ. ಮಠಾಧಿಪತಿಗಳು ಸಾಮಾಜಿಕ ಜವಬ್ದಾರಿಯನ್ನು ಹೊಂದಿದ್ದಾರೆ. ನಾವು ಧರ್ಮ ಮತ್ತು ಸಮಾಜದ ಬಗ್ಗೆಯೂ ಮಾತನಾಡುತ್ತೇವೆ, ನಮಗೇನು ಗೊತ್ತಿಲ್ಲ ಅಂತಾ ಹೇಳುವುದು ತಪ್ಪಾಗುತ್ತದೆ. ಸರ್ಕಾರ ರಾಜ್ಯದಲ್ಲಿನ ಎಲ್ಲ ಜನರನ್ನು ಒಂದೇ ಭಾವನೆಯಿಂದ ನೋಡಬೇಕು ಅಂತಾ ತಿಳಿಸಿದರು.

    https://youtu.be/8fnPGk-CNuQ

  • ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆ

    ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆ

    ಉಡುಪಿ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹಣದ ಹೊಳೆ ಗೆದ್ದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟ ಅವರು ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಹೇಗಾದ್ರು ಮಾಡಿ ಗೆಲ್ಲಲೇ ಬೇಕು ಎಂದು ಅಂತ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದರು. ಅದರಂತೆ ಹಣದ ಹೊಳೆಯನ್ನು ಹರಿಸಿ ಗೆದ್ದಿದ್ದಾರೆ ಎಂದು ಶೆಟ್ಟರ್ ಹೇಳಿದರು.

    2018ರ ಚುನಾವಣೆಗೆ ಈ ರಿಸಲ್ಟ್ ದಿಕ್ಸೂಚಿಯಲ್ಲ. ಸ್ವತಃ ಸಿಎಂ ಚುನಾವಣೆಗೆ ಮುನ್ನ ಇದು ದಿಕ್ಸೂಚಿಯಲ್ಲ ಅಂತ ಹೇಳುತ್ತಿದ್ದರು. ಆದ್ರೆ ಈಗ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಇದೇ ದಿಕ್ಸೂಚಿ ಅನ್ನುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದೆಯೂ ಚುನಾವಣೆ ಎದುರಿಸ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರೋದ್ರಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ತಿಳಿಸಿದರು.

    ಶ್ರೀನಿವಾಸಪ್ರಸಾದ್ ಅವರು ಹಿರಿಯ ನಾಯಕರು, ಅವರಿಗೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ಕೊಡುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೋ ಅದರಂತೆಯೇ ಮುಂದೆಯೂ ಗೌರವದಿಂದ ನೋಡಿಕೊಳ್ಳುತ್ತೇವೆ. ಗೌರವಯುತವಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.